Oppanna.com

ಬೋಚನ ಪದ್ಯ: ಎ೦ತ ಮಾಡಿದಾ, ಗೊ೦ತಿದ್ದ ಎ೦ತ ಮಾಡಿದಾ..?

ಬರದೋರು :   ಬೋಸ ಬಾವ    on   01/01/2012    17 ಒಪ್ಪಂಗೊ

ಇದಾ,

ನಾವು ರಜ್ಜ ಸಮಯ ತಪ್ಪಸ್ಸು ಮಾಡಿ ಬಚ್ಚಿ 😛 ಈಗ ಭಾಗ ೨ ಡು ಬರದತ್ತು.. 😉

ನಮ್ಮ ಮೊದಲ ಭಾಗ – ನೋಡಿಕ್ಕಿ. 🙂

—————————————————————————————-

ಭಾಗ ೨ :

—————————————————————————————-

ಒಪ್ಪಣ್ಣ೦ಗೆ ಪೋಕ್ರಿ ( poke) ಮಾಡಿ,

ಶ್ರೀಅಕ್ಕ೦ಗೆ ಪೋನು ಮಾಡಿ,

ಚೆನ್ನೈ ಭಾವಂಗೆ ಕೊಶ್ಚನ್ ಹಾಕಿ?

ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉

ಎಲ್ಲರಿ೦ಗು ಪೊದ್ರ ಕೊಟ್ಟು,

ಒತ್ತಿತ್ತಿ ಇ೦ಟರು ನೆಟ್ಟು,

ಹೊಟ್ಟೆ ಚುಯಿ, ಹೇಳ್ತು ನೋಡಿ,

ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉

ನೇಲುಸಿ೦ಡು ಚೀಲ ಹೆಗಲ್ಲಿ,

ಟಿಕೇಟು ಮಾಡಿ, ಹೆರಟು ಬಸ್ಸಿಲ್ಲಿ

ಗೆಬ್ಬಾಸೆ೦ಡು ಪೇಟೆಗೆತ್ತಿ,

ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉

ತ್ರಿಮೂರ್ತಿಗೊ ಬಸ್ಸಿಲ್ಲಿ ಹೋವುಸ್ಸು..!!


ದೊಡ್ಡ ಭಾವ ಪೇಟೆಲಿ ಸಿಕ್ಕಿ,

ಒ೦ದು ಲೋಟ ಚಾಯ ಕುಡುಶಿ,

ಗೋಳಿ ಬಜೆ ನಾಲ್ಕು ತಿ೦ದು,

ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉

ಟೋಕಿಸಿಲ್ಲಿ ಸಿನುಮ ಕ೦ಡು,

ತ್ರಿಮೂರ್ತಿಗೊ ಒಟ್ಟಾಗಿ,

ಬಾಲ್ಕನಿ ಸೀಟು ಹಿಡುದು,

ಮೂರ್ತಿಗೊ ಎ೦ತ ಮಾಡಿದವ್ವು, ತ್ರಿಮೂರ್ತಿಗೊ ಎ೦ತ ಮಾಡಿದವ್ವು..? 😉

ಪದ್ಯ-ಗದ್ಯ ರೈಸಿದ್ದು ನೋಡಿ,

ಪೆಟ್ಟು-ಕುಟ್ಟು ಮಾಡ್ತು ನೋಡಿ,

ಮೇಲೆ-ಕೆಳ ಲಾಗ ಹಾಕಿ,

ಮೂರ್ತಿಗೊ ಎ೦ತ ಮಾಡಿದವ್ವು, ತ್ರಿಮೂರ್ತಿಗೊ ಎ೦ತ ಮಾಡಿದವ್ವು..? 😉

—————————————————————————————–

ಸದ್ಯದಲ್ಲೇ ನಿರೀಕ್ಷಿಸಿ ಮು೦ದುವರೆದ ಭಾಗ …..   🙂
ಸದ್ಯಕ್ಕೆ ತಪಸ್ಸಿಲ್ಲಿ ಲೀನ..  8-)

17 thoughts on “ಬೋಚನ ಪದ್ಯ: ಎ೦ತ ಮಾಡಿದಾ, ಗೊ೦ತಿದ್ದ ಎ೦ತ ಮಾಡಿದಾ..?

  1. ಭೋಚ ಭಾವನ ತಪಸ್ಸಿ೦ಗೆ ಮೂರು ಮೂರ್ತಿಗೊ ಒಲುದಾತನ್ನೆ! ಇನ್ನೂದೆ ಹಾಸ್ಯಮಯ ಹಾಡುಗೊ ಬಪ್ಪ ಹಾ೦ಗೆ ಆ೩ಮುರುತಿಗೊ ವರವ ಅವ೦ಗೆ ಕೊಡಲಿ.ತೆನ್ನಾಲಿಯ ಇವ ಮೀರ್‍ಸಲಿ

  2. ಪದ್ಯವೂ ಅದಕ್ಕೆ ಹಾಕಿದ ಚಿತ್ರವೂ ಒಂದಕ್ಕೊಂದು ಚೇರ್ಚೆ ಆಯಿದು.
    ತ್ರಿಮೂರ್ತಿಗೊ ಒಟ್ಟು ಸೇರಿದ ಮತ್ತೆ, ಬೋಚ ಇನ್ನೆಂತ ಮಾಡ್ತ ನೋಡೆಕ್ಕು.

  3. ಲೈಫು ಇಷ್ಟೇನೆ … ಸಿನಿಮಾ ಪದ್ಯದ ರಾಗಲ್ಲಿ ಹಾಡ್ಳೆ ಅಪ್ಪ ಹಾಂಗಿಪ್ಪ ಬೋಸಬಾವನ ರಚನೆ, ಜೆತಗೆ ಚಿತ್ರವುದೆ ಲಾಯಕಾತದ. ಕವಿರತ್ನ ಕಾಳಿದಾಸದ ಪೋಸ್ಟರ್, ಅಭಿನವ ಕಾಳಿ(ಬೋಸ)ದಾಸನ ಪದ್ಯಕ್ಕೆ ಪೂರಕವಾಗಿದ್ದು. ತ್ರಿಮೂರ್ತಿಗೊ ಸೈಡು ಸೀಟಿಲ್ಲಿ ಕೂದು ಮೂತಿ ಹೆರ ಹಾಕಿದ್ದುದೆ ಚೆಂದ ಆಯಿದು.

  4. ಹ್ಮ್,ಬೋಚನ ಪದ್ಯವೂ,ಚಿತ್ರವೂ ರೈಸಿದ್ದು.
    ಅ೦ಗಡಿ ಕಳುದು ಸಿಕ್ಕುವ ಉಪಹಾರ (!) ಮ೦ದಿರವ ನೋಡಿ ಕನ್ನಡ ಮಾಷ್ಟ್ರ ಕಣ್ಣು ದೊಡ್ಡ ಆತಡಾ..!

  5. ಓಂ ನಮೋ ಬೋಚದಾಸಾಯ ನಮಃ – ಇದರ ದಿನಕ್ಕೆ ಹನ್ನೆರಡು ಸಾವಿರ ಸರ್ತಿ ಹೇಳು ಮಾರಾಯ.
    ಒಳ್ಳೆದಕ್ಕು.

    ಇನ್ನಾಣ ಕಂತು ಬಪ್ಪಂದ ಮದಲೇ ಪೇಟೆ ಕೆಲಸ ಮುಗುಶಿ – ಮೂರೂ ಜೆನವುದೇ – ಮನಗೆ ಎತ್ತಿಗೊಳ್ಳಿ, ಆತೋ? 🙂

  6. ಬೋಚ ಭಾವನ ಪದ್ಯಬರೆವ ಸಾಮರ್ಥ್ಯಕ್ಕೆ ಸಾಟಿ ಇದ್ದಾ !!

  7. ಅಂತೂ ತಿರಿ ಮೂರ್ತಿಗೊ ಒಟ್ಟು ಸೇರಿ ಆತು ಇನ್ನು ಪೇಟೆ, ಬಯಲು ಎಲ್ಲಾ ಹೊಡಿ ಆದಾಂಗೇ………..
    ಓಯಿ…, ಇದೆಂತ ತಿರಿಮೂರ್ತಿಗಳ ವಾಹನಲ್ಲಿ ಹೀಂಗೊಂದು ಹೊಗೆ …!
    ಗೋಳಿಬಜೆ ಯೊಟ್ಟಿಂಗೆ ಬಟಾಟೆ ಅಂಬಡೆಯೂ ಇತ್ತೋ ಹೇಂಗೆ?

    1. { ಇದೆಂತ ತಿರಿಮೂರ್ತಿಗಳ ವಾಹನಲ್ಲಿ ಹೀಂಗೊಂದು ಹೊಗೆ }
      ಬೋಚಬಾವ ಹೀಂಗೊಂದು ರೈಲು ಬಿಟ್ರೆ ಹೊಗೆ ಬಾರದ್ದೆ ಚಿನ್ನದ ಗಟ್ಟಿ ಬತ್ತೋ?
      ಎಂತ ಪುಳ್ಳಿಭಾವ?

      1. (ಬೋಚಬಾವ ಹೀಂಗೊಂದು ರೈಲು ಬಿಟ್ರೆ ಹೊಗೆ ಬಾರದ್ದೆ ಚಿನ್ನದ ಗಟ್ಟಿ ಬತ್ತೋ?)
        – ಹಾಂಗಾರೆ ನೀನು ರೈಲು ಬಿಟ್ರೆ ಚಿನ್ನದಗಟ್ಟಿ ಬಕ್ಕೋ………..?

      2. ಓ ಮಾಣಿ
        ನೀನು ಇಲ್ಲಿ ರೈಲು ಬಿಟ್ಟೊಂಡು ಕೂರು..

        ಶಾಂತತ್ತೆ ಇವಾ ಪಾಟಕ್ಕೆ ಬಕ್ಕು ಅಂಬಗ ಕೊಡುಲಕ್ಕು ಹೇದು ತಂಬಿಟ್ಟುಂಡೆ ಮಾಡಿದ್ದು ಇದ್ದೋಯಿ.. ನಾವ್ತ್ಲಾಗಿ ಹೋಪದೇ..

        1. ಬಟಾಟೆ ಅಂಬಡೆ ಮಾಡಿಕೊಡ್ತಾರೆ ಮಾತ್ರಾ ಬಪ್ಪದಡ ನೆಗೆ ಮಾಣಿ ಅಪ್ಪೋ…?

  8. ಬೊಚ ಭಾವನ ಅದ್ಭುತ ತಪಸ್ಸಿಂಗೆ ಮೆಚ್ಚಿ ತ್ರಿಮೂರ್ತಿಗಳೇ ಪ್ರತ್ಯಕ್ಷ ಆದ ಮೇಲೆ ಇನ್ನುದೆ ನೀನು ತಪಸ್ಸಿಂಗೆ ಕೂಬ್ಬ ಕಾರಣವೆಯೋ ಏನೋ ನಿನ್ನ ಎಲ್ಲೋರುದೆ ಬೋಚ ಹೇಳುದು… ಇನ್ನು ಇಷ್ಟಾರ್ಥ ಸಿದ್ದಿ ಆದ ಹಾಂಗೆ… ಎಲ್ಲ ತಲೆಬಿಸಿಗಳ ಬಿಟ್ಟು ಬಿಡು…

  9. ಪದ್ಯ ಲಾಯ್ಕಾಯ್ದು ಬೋಚ ಭಾವ..ಹೆರಟು ಹೋಟ್ಳಿ೦ಗೆ ಹೋಗಿ,ಸಿನೆಮ ನೋಡಿ ಭಾರಿ ಗಮ್ಮತ್ತು ಮಾಡಿದ್ದಿರೋಳಿ..ನಿ೦ಗೊ ಹೋಪ ಫೊಟೊ ಪಷ್ಟ್ಲಾಸಾಯ್ದು ..ಇನ್ನು ತಪ್ಪಸ್ಸು ಮಾಡಿ ಬಚ್ಚುದನ್ನೆ ಕಾಯ್ತಾ ಇರ್ತೆ 😉 , ಮೂರ್ನೆ ಭಾಗವ ಓದುಲೆ.

  10. ಹೀಂಗಿರ್ತ ಪದ್ಯಂಗೋ ಎನಗೂ ಗೊಂತಿದ್ದು… ಒಂದಾರಿ ಆನುದೇ ಬರೆತ್ತೆ ಹೇದಪ್ಪಗ ಒಪ್ಪಣ್ಣ ಎನಗೆ ಬೈದ… ”ಬೋದಾಳ” ಹೇದು…. 🙁

  11. ತ್ರಿಮೂರ್ತಿಗೊ ಸೇರಿದವೋ..ಅಂಬಗ ಇನ್ನಾಣ ಕಂತಿಲಿ ಎಂತಕ್ಕಪ್ಪಾ..!!!

  12. ಈ ಬೋಚ ಬಾವ ಟೋಕಿಸಿಲೇ ತಪಸ್ಸು ಮಾಡ್ಲೆ ಕೂದ್ದೋ ಹೇಂಗೆ…..? ಸಿನೆಮ ನೋಡುದರ ಎಡೆಲಿ ತಪಸ್ಸು ಮಾಡ್ಲೆ ಹೋದ್ದು ಎಂತಗೆ….?ಕಥೆ ಎಲ್ಲ ಬರದಿಕ್ಕಿ ಹೋಗಿದ್ದರೆ ಸಾಕಿತ್ತು….

  13. ಅದೇ..! ಬೋಚ ಎಂತ ಮಾಡಿದಾ…?!!

    ಅದಾ ತ್ರಿಮೂರ್ತಿಗೊ ಸೇರಿಗೊಂಡವಡಾ…. !!

    ಇನ್ನಾಣದ್ದು ಈ ಮೂರು ಸೇರಿ ಬೈಲ ಹುಡಿ ತೆಗೆತ್ತವೋಳಿ!

    ಬೋಚಬಾವ, ಕ್ಷಣಕಾಲ ತಪಸ್ಸಿಂಗೆ ವಿಶ್ರಾಂತಿ ತೆಕ್ಕಂಡು ಇಷ್ಟೆಲ್ಲಾ ಆತಪ್ಪೊ!!

    ಲಾಯ್ಕಾದು ಭಾವ, ಪಟವೂ ಲಾಯಕ ಆಯ್ದಿದು ಹೇಳಿತ್ತು ಚೆನ್ನೈವಾಣಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×