Oppanna.com

ನೆಗೆ ಸೋಬಾನೆ : ’ಎಲ್ಲೋರು ಬನ್ನಿ ಬೈಲಿಂಗೆ’

ಬರದೋರು :   ನೆಗೆಗಾರ°    on   12/03/2012    23 ಒಪ್ಪಂಗೊ

ನೆಗೆಗಾರ°

ಸೋಬಾನೇ ಸೋಬಾನೆ ಸೋಬಾನೇ…

ರಚನೆ: ನೆಗೆಗಾರ°
ಧ್ವನಿ: ಶ್ರೀಶಣ್ಣ ಹೊಸಬೆಟ್ಟು

ಎಲ್ಲೋರೂ ಬನ್ನೀ ಬೈಲಿಂಗೆ

ಸಾರಡಿಯ ತೋಡಿಂಗೆ ನೀರೂಕುಡಿವಲೆ ಬಂದ
ಹೋರಿಗಳ ಕಂಡೂ ನೆಗೆಬಕ್ಕೂ |
ಹೋರಿಗಳ ಕಂಡೂ ನೆಗೆಬಕ್ಕು ಬೋಸಂಗೆ
ಆರಿಂಗೂ ಮೈಲೀ ಅಂಗಿಲ್ಲೇ…|| 🙂 ||

ದಾಸನದ ಹೂಗಿಂದ ವಾಸನೆಯೇ ಬಾರದ್ರೂ
ಆ ಸುಭಗಾಬಾವಂಗೇ ಸಾಕಕ್ಕು |
ಆ ಸುಬಗಾ ಬಾವಂಗೆ ಸಾಕಕ್ಕೂ ಸೂಡುಲೆ
ಕೆಮಿಯಗಲ ಚೆಂದಕೆ ಅರಳಿಕ್ಕು || 🙂 ||

ಅಪ್ಪಚ್ಚೀ ವಾಚಿಂದ ರಪ್ಪನೆಬಂದಾ ಬೆಣ್ಚಿ
ಕೆಪ್ಪಣ್ಣ ಕಂಡೂ ನೆಡುಇರುಳೂ |
ಕೆಪ್ಪಣ್ಣಾ ಕಂಡೂ ನೆಡುಇರುಳೂ ಎದ್ದಿಕ್ಕಿ
ಅಪ್ಪನ್ನೇ ಉದಿಯಾತು ಗ್ರೇಶಿಂಡ || 🙂 ||

ಅಜ್ಜಾಕಾನದ ಮಾಣೀ ಗುಜ್ಜೆ ಕಂಡರೆ ತಂದು
ಹೆಜ್ಜೆ ಉಂಬಗ ತಾಳು ಕೂಡ್ಯೊಂಗು |
ಹೆಜ್ಜೆ ಉಂಬಗ ತಾಳೂ ಕೂಡ್ಯೊಂಗು ಒಟ್ಟಿಂಗೆ
ಮಜ್ಜಿಗೆ ಇದ್ದಾರೆ ಕೊಶಿಯಕ್ಕು || 🙂 ||

ಚೆನ್ನೈಯ ಭಾವಯ್ಯ ಎನ್ನನ್ನೂ ಕೂಡುಸಿಯೆ
ಚೆನ್ನೆಮಣೇ ಆಡಿಂಡು ಕೂದೊಂಗು |
ಚೆನ್ನೆಮಣೇ ಆಡಿಂಡು ಕೂದೊಂಗು – ಹೆರಡುವಗ
ಬೆನ್ನಿಂಗೇ ಹಾಳೆಕಡೆ ಕಟ್ಟಿಂಗು || 🙂 ||

ಏನಂಕೂಡಲು ಅಣ್ಣ ಏನು ಕೇಳಿದ ಮೊನ್ನೆ
ಆನೆಮಜಲಿನ ಮದುವೆಲಿ
ಆನೇಮಜಲಿನ ಮದುವೆಲಿ ಪಟತೆಗದು
ಕಾಣೆಆದನೊ ಅಣ್ಣ ಕಣ್ಣೆದುರೇ || 🙂 ||

ಶೇಪೂಬಾವನ ಶೇಪು ಬಗ್ಗಿದ್ದನ್ನೇ ಈಗ
ಕೂಪಗಳೆ ತಲೆಬಗ್ಗಿ ಮಾಲುತ್ತೂ |
ಕೂಪಗಳೇ ತಲೆಬಗ್ಗಿ ಮಾಲುತ್ತು ಕಂಡತ್ತೋ
ಜೀಪಿನ್ನು ಮಾರ್ಗಲ್ಲೆ ಹೋತಿಕ್ಕಾ || 🙂 ||

ಪೆಂಗಣ್ಣ ಚುಬ್ಬಣ್ಣ ಕೆಪ್ಪಣ್ಣ ಬೋಸಣ್ಣ
ಎಲ್ಲೋರು ಬನ್ನೀ ಬೈಲಿಂಗೆ |
ಎಲ್ಲೋರೂ ಬನ್ನೀ ಬೈಲಿಂಗೆ ನಿತ್ಯಾವೂ
ಸೋಬಾನೇ ಹಾಡೀ ಕೊಶಿಲಿಪ್ಪ || 🙂 ||

|| 🙂 ಮುಗಾತು 🙂 ||

ಓಯ್:
ನಮ್ಮ ಹೊಸಬೆಟ್ಟು ಶ್ರೀಶಣ್ಣ ಈ ಶೋಬಾನೆ ಹಾಡಿದ್ದರ ರಿಕಾರ್ಡು ಮಾಡಿದ್ದು.
ಕೇಳಿ, ಹೇಂಗಾಯಿದು ಹೇಳಿಕ್ಕಿ, ಆತೋ?

ಶ್ರೀಶಣ್ಣ ಹಾಡಿದ ಶೋಬಾನೆ SoundCloud ಬೈಲಿಲಿದ್ದು

~*~*~

ಸೂ:
ಈ ಶೋಬಾನೆಯ ತುಂಡಿನ ನಿಂಗೊ ಮಡಿಕ್ಕೊಳ್ತರೆ, ಇದಾ ಸಂಕೊಲೆ ಇಲ್ಲಿದ್ದು

23 thoughts on “ನೆಗೆ ಸೋಬಾನೆ : ’ಎಲ್ಲೋರು ಬನ್ನಿ ಬೈಲಿಂಗೆ’

  1. ಲಿರಿಕ್ಸ್ ತು೦ಬಾ ಪ್ರಾಸಬದ್ದವಾಗಿದ್ದು. ಹಾಡಿದ್ದು ಭಾರಿ ಲಾಯ್ಕಿದ್ದು.

  2. ಊರ ಮೇಲೆ ತಿರುಗಾಟಲ್ಲಿ ಬೈಲಿಂಗೆ ಇಳಿವಲೆ ಆಯಿದಿಲ್ಲೆ.
    ಮೊದಲ ಪ್ರಯತ್ನಕ್ಕೆ ನಿಂಗಳ ಎಲ್ಲರ ಪ್ರೋತ್ಸಾಹ ಸಿಕ್ಕಿ ಕೊಶೀ ಆತು.
    ಪ್ರಯತ್ನ ಮುಂದುವರುಸುತ್ತೆ.

  3. ಹೋ – ಸುಪ್ರಭಾತ ಆತು, ಪುಗ್ಗ ಆತು – ಇನ್ನು ಶೋಭಾನೆಯೋ? ಆಗಲಿ, ಅದೂ ಬರಳಿ.

    ಶ್ರೀಶಣ್ಣೋ, ಎಂತಾ ಗಾಂಭೀರ್ಯ ಈ ನೆಗೆ ಶೋಬಾನೆಯ ಹೇಳುವಗ.
    ಎನ್ನಂದೆಡಿಯಪ್ಪ. ಎರಡು ಗೆರೆ ಓದಲೆ ಹೆರಟ್ರೆ ಎಡೆಲಿ ಪುಸ್ಕನೆ ನೆಗೆ ಬತ್ತು. 😉

    ಪಷ್ಟಾಯಿದು. ಇನ್ನು ಮುಂದೆಯೂ ಬರಳಿ ಈ ನಮುನೆದು.

  4. ಒಳ್ಳೆಯದಾಗಿ ಮೂಡಿ ಬಯಿಂದು,ಇನ್ನೂ ಇಂತಹ ಪದ್ಯಂಗೊ ನಗೆಗಾರಣ್ಣಾ/ಶ್ರೀಶಣ್ಣನ combinationಲ್ಲಿ ಬಯಲಿಂಗೆ ಇಳಿದು ಬರಲಿ,ತಾಳವಾದ್ಯ ಆಗಿ ತಬಲಾ/ಮೃದಂಗ ಸೇರಿಸಿದರೆ ಇನ್ನೂ ಚೆಂದಕೆ ಬಕ್ಕೋ ಹೇಳಿ.
    ಈ ಶ್ರೀಶಣ್ಣನ ಪರಿಚಯ ಇಲ್ಲದ್ರೂ ಸ್ವರ ಪರಿಚಯ ಇದ್ದ ಹಾಂಗೆ ಕೇಳಿತ್ತು!

    1. [ಶ್ರೀಶಣ್ಣನ ಪರಿಚಯ ಇಲ್ಲದ್ರೂ ಸ್ವರ ಪರಿಚಯ ಇದ್ದ ಹಾಂಗೆ ಕೇಳಿತ್ತು!] – ರೇಡಿಯೋಲಿ ಮತ್ತೂ ಕೇಳಿಕ್ಕೋ !

        1. ಎನಗೂ ಹಾಂಗೆ ಅನ್ನಿಸಿತ್ತು… ಮತ್ತೆ ನೋಡಿರೆ ಶ್ರೀ ಕೃಷ್ಣ ನೀರಮೂಲೆ ಇವರ ಸ್ವರಕ್ಕೂ ಶ್ರೀಶಣ್ಣನ ಸ್ವರಕ್ಕೂ ಸಾಮ್ಯತೆ ಇದ್ದ ಕಾರಣ ಎನಗೆ ಹಾಂಗೆ ಅನ್ನಿಸಿದ್ದದು…

  5. ನೆಗೆಗಾರಣ್ಣೋ, ಪಷ್ಟಾಯಿದು ಬರದ್ದು..
    ಶ್ರೀಶಣ್ಣೋ ನೀನು ಇಷ್ಟು ಲಾಯಕ ಪದ್ಯ ಹೇಳ್ತೆ ಹೇಳಿ ಗೊಂತೇ ಇತ್ತಿಲ್ಲೆನ್ನೆ..

    ಬಹಳ ಲಾಯಕಾಯಿದು ಹೇಳಿತ್ತು ಎನ್ನ ಅಬ್ಬೆ 🙂
    ಒಳ್ಳೆ ಪ್ರಯತ್ನ. ಇನ್ನೂ ಬರಳಿ…

  6. ಹಾಡಿದ್ದು ಮತ್ತು ಬರದ್ದದು ಎರಡೂ ತು೦ಬಾ ಲಾಯಿಕಾಯಿದು…

  7. ಭಾರೀ ಲಾಯ್ಕ ಆಯಿದು.ಪದ್ಯವೂ ಹಾಡಿದ್ದೂ.
    ಶ್ರೀಶಣ್ಣಂಗೆ ವಿಶೇಷ ಅಭಿನಂದನೆ.

  8. ಆಹಾ!! ಇದು ಭಾರೀ ಲಾಯ್ಕಾಯಿದು.ಬರದ್ದು ಹಾಡಿದ್ದು ಎಲ್ಲವೂ.

  9. ನೆಗೆಗಾರನ ಸೋಬಾನೆ ಬೈಲಿಂಗೆ ಒಳ್ಳೆ ಶೋಭೆ ತಯಿಂದು. ಪದ ಜೋಡಣೆ ತುಂಬ ಚೆಂದ ಆಯಿದು.
    ಶ್ರೀಶಣ್ಣ ನ ಗಾಯನ ನಿಜವಾಗಿಯೂ ಅದ್ಭುತ. ಕೇಳ್ಲೆ ಇಂಪಾಗಿ ಇತ್ತು. ಇದೇ ರೀತಿ ಮುಳಿಯ ಭಾವನ ಭಾಮಿನಿ, ಶೇಡಿಗುಮ್ಮೆ ಪುಳ್ಳಿಯ ಅಣಕುಗೀತೆಗೊ ಬೈಲಿಂಗೆ ಸ್ವರ ರೂಪಲ್ಲಿ ಬರಳಿ. ಸರ್ಪಮಲೆ ಮಾವ ಹೇಳಿದ ಹಾಂಗೆ, ಸೋಬಾನೆ ಹಾಡುಗಳು ಬರಳಿ. ಉತ್ತಮ ಪ್ರಯತ್ನ. ನೆಗೆಗಾರಂಗೂ, ಶ್ರೀಶಂಗೂ ಅಭಿನಂದನೆಗೊ.

  10. ಸೋಬಾನೆ ಹಾಡಿದ್ದು ಭಾರೀ ಲಾಯಿಕ್ಕಾಯಿದು. ಶ್ರೀಶಣ್ಣ ಹಾಡಿದ ಹವ್ಯಕ ಸೋಬಾನೆ ಹಾಡುಗಳ ಸಂಗ್ರಹ ಇದ್ದರೆ ಬೈಲಿಂಗೆ ಕೇಳುಸಲಕ್ಕು!

  11. ಹಂಚಿ ತಿಂದೊಂಡು
    ಕೂಡಿ ಕೆಲಸ ಮಾಡ್ಯೊಂಡು
    ಸೋಬಾನೆ ಹೇಳ್ಯೊಂಡು
    ಇಪ್ಪ ಸೌಭಾಗ್ಯ ಬೈಲಿಂಗೆ ಮಾಂತ್ರ

  12. ನೆಗೆ ಸೋಬಾನೆ ಆದರೂ ಇದರ ಚೆಂದಕ್ಕೆ ಹಾಡಿ,ಮರದು ಹೋದ ಈ ಸೋಬಾನೆ ಹಾಡಿನ ಪ್ರಕಾರವ ಎಂಗೊಗೆ ಪರಿಚಯಿಸಿದ್ದು ಒಳ್ಳೆದಾತು.
    ನೆಗೆಮಾಣಿಗೂ, ಶ್ರೀಶಣ್ಣಂಗೂ ಅಭಿನಂದನೆಗೊ.

  13. ಹಾಡಿದ್ದು ಭಾರೀ ಲಾಯಿಕ್ಕಾಯಿದು. ನಮ್ಮ ಭಾಷೆಯ ಪದ್ಯ ಕೇಳುಲೆ ಖುಷಿ.

  14. ಹು,ನೆಗೆಮಾಡಿ ಸೊ೦ಟ ಸೋಬಾನೆ ಆತು.
    ಪದ್ಯಕ್ಕೆ ತೂಕ ಬಪ್ಪದು ಅದರ ಸರಿಯಾಗಿ ಓದಿಯಪ್ಪಗ.ಈ ಶ್ರೀಶಣ್ಣ ಇಷ್ಟು ಚೆ೦ದಕೆ ಹಾಡುತ್ತ° ಹೇಳಿ ಎನಗೊ೦ತಿತ್ತಿಲ್ಲೆ.
    ಓಯ್..ನೆಗೆಮಾಣಿ,ಇನ್ನು ಯೇವತ್ತೂ ಬರವಲಕ್ಕು,ಹೀ೦ಗೆಯೇ..

    1. ಅಪ್ಪು ರಘು ಭಾವ…
      ಇನ್ನು ಆನು ಬರವ ಪದ್ಯಕ್ಕೂ ಹಿನ್ನೆಲೆ ಗಾಯಕ ಸಿಕ್ಕಿದ..!! – ” ಶ್ರೀಶಣ್ಣ ” 😉

      ಏ ಶ್ರೀಶಣ್ಣ , ಎನ್ನ ಪದ್ಯಕ್ಕೂ ಹಾಡೆಕು.. ಆತೋ??

  15. ಮನೇಲಿ ಎಲ್ಲೋರಿಂಗೂ ನೆಗೆ ಮಾಡಿ ಮಾಡಿ ಸಾಕಾತು 🙂 🙂 🙂

  16. ಭಾವಾ……. ಭಾರೀ ಭಾರೀ ಭಾರೀ ಲಾಯಕ ಆಯ್ದು. ಶ್ರೀಶಣ್ಣ ಪ್ರಥಮ ಬಾರಿ ಬೈಲಿಂಗೆ ಹಾಡಿದ್ದೋ. ಇನ್ನೂ ಲಾಯಕ ಆಯ್ದು. ಪದ್ಯದ ತೂಕವನ್ನೇ ಹೆಚ್ಚಿಸಿತ್ತು. ಬೈಲು – ಸಾರಡಿ – ದಾಸನ ಬೈಲಿಲಿ ಈಗೀಗ ತುಂಬಾ ಹತ್ರೆ ಆಯ್ದಪ್ಪೋ ಬೈಲಿಲ್ಲಿ. ಆದರೆ ಈಗೊಂದು ಕನ್ಪ್ಯೂಶನ್ ಆಯ್ದು. ಪಷ್ಟು ಪ್ರೈಸು ಆರಿಂಗೆ ? ಬರದವನ್ಗೋ ಹಾಡಿದವಂಗೋ ?? ಹಾಡಿದ್ದಂತೂ ಬರದ್ದರಿಂದಲೂ ಲಾಯಕ ಆಯ್ದನ್ನೇ ಹೇದು ನಿಜವಾಗಿ ಒಪ್ಪೇಕ್ಕಾವ್ತು ಹೇಳಿತ್ತು -‘ಚೆನ್ನೈವಾಣಿ’.

    ಇದಕ್ಕೀಗ ಎಷ್ಟು ನೆಗೆ ಮಾಡೇಕ್ಕಾದ್ದು ಗೊಂತಾವ್ತಿಲ್ಲೆ. ಗ್ರೇಶಿ ಗ್ರೇಶಿ ನೆಗೆ ಬತ್ತಾ ಇದ್ದು ನಾಕು ಸರ್ತಿ ಕೇಳಿ ಆದರೂ!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×