Oppanna.com

ದೇಶಲ್ಲಿಡೀ ಉರಿ ಹೊತ್ತುಸಿದ ಉರಿ!!

ಬರದೋರು :   ಒಪ್ಪಣ್ಣ    on   23/09/2016    2 ಒಪ್ಪಂಗೊ

ಸ್ವಾತಂತ್ರ್ಯ ಪೂರ್ವದ ಭಾರತಲ್ಲಿ ಸುಮಾರು ಐನ್ನೂರರಿಂದ ಹೆಚ್ಚು ಸಂಸ್ಥಾನಂಗೊ ಇದ್ದತ್ತಾಡ.
ಪ್ರತಿಯೊಂದು ರಾಜ್ಯಂಗಳೂ ಅವರವರ ಸ್ವಂತ ಕಾನೂನು ವ್ಯವಸ್ಥೆ, ಸ್ವಂತ ಏರ್ಪಾಡುಗೊ ಮಾಡಿಗೊಂಡು ಆರಾಮಲ್ಲಿ ಇತ್ತಿದ್ದವು.
ಸ್ವಾತಂತ್ರ್ಯ ಕೊಡುವಾಗ ಪ್ರತಿ ರಾಜ್ಯದವರ ಹತ್ರೆಯೂ – “ಎಂಗೊ ಬಿಟ್ಟಿಕ್ಕಿ ಹೋವುತ್ತಾ ಇದ್ದೆಯೊ°, ಇನ್ನು ನಿಂಗಳ ಇಷ್ಟ, ಮನಸ್ಸಿದ್ದರೆ ಭಾರತ ಗಣರಾಜ್ಯದ ಒಟ್ಟಿಂಗೆ ಸೇರ್ಲಕ್ಕು, ಬೇಡದ್ರೆ ನಿಂಗಳಷ್ಟಕ್ಕೇ ಇಪ್ಪಲಕ್ಕು” – ಹೇದು ಕೊಕ್ಕೆ ಮಡಗಿ ಹೆರಟಿತ್ತಿದ್ದವಾಡ.ಸ್ವತಂತ್ರ ಭಾರತದ ಪ್ರಥಮ ಗೃಹಮಂತ್ರಿ ಉಕ್ಕಿನ ಮನುಷ್ಯ – ವಲ್ಲಭಭಾಯಿ ಪಟೇಲ್ – ಈ ವಿಲೀನ ಪ್ರಕ್ರಿಯೆಯ ವಹಿಸಿಗೊಂಡವಾಡ.
ಹೇದರೆ, ಪ್ರತಿ ರಾಜ್ಯದವರ ಹತ್ರೆ ಹೋಗಿ, ಅವರ ಅಹಂಭಾವಕ್ಕೆ ಪೆಟ್ಟಾಗದ್ದ ಹಾಂಗೆ ಮಾತಾಡಿ, ಅವರ ಮನಸ್ಸಿನ ಒಪ್ಪುಸಿ, ಗಣರಾಜ್ಯ ಭಾರತಲ್ಲಿ ಅವರ ಸ್ಥಾನಮಾನವ ವಿವರ್ಸಿಗೊಂಡು – ಅವರ ರಾಜ್ಯವ ವಿಲೀನ ಮಾಡಿಗೊಂಡವು.
ಅದರ್ಲಿ ಹೈದ್ರಾಬಾದಿನ ಮಾಪಳೆ – ಆನು ಬತ್ತಿಲ್ಲೆ ಹೇದು ರಚ್ಚೆ ಹಿಡುದತ್ತು. ಸಾಮ ದಾನ ಭೇದ ಎಲ್ಲ ನೋಡಿ ಅಕೇರಿಗೆ ದೊಣ್ಣೆತೆಕ್ಕೋಂಡೂ ಹೆರಟಿತ್ತಿದ್ದವು ಪಟೇಲಜ್ಜ°.
ಹೈದ್ರಾಬಾದ್ ವಿಲೀನದ್ದು ದೊಡಾ ಕತೆ. ಅದಿರಳಿ.
~
ಈ ಐನ್ನೂರಕ್ಕೆ ಹತ್ತರೆ ವಿಲೀನ ಅಪ್ಪಾಗ, ಒಂದು ರಾಜ್ಯ – ಕಾಷ್ಮೀರ ಮಾಂತ್ರ “ಆನು ಮಾಡ್ತೆ” – ಹೇದು ನೆಹರು ಹೇಳಿದನಾಡ. ಹಾಂಗೆ ಅದೊಂದು ಪಟೇಲಜ್ಜನ ಚೀಲಕ್ಕೆ ಬಯಿಂದಿಲ್ಲೆ.
ಆದರೆ, ಆನು ಮಾಡ್ತೆ ಹೇಳಿದೋನು ತೀರಿಗೊಂಡು, ಅವನ ಮಗಳು ತೀರಿಗೊಂಡು, ಅದರ ಮಗ° ತೀರಿಗೊಂಡು – ಒರಿಶ ಇಷ್ಟು ಕಳಾತು; ಇನ್ನೂ “ಆನು ಮಾಡ್ತೆ” – ಆಯಿದೇ ಇಲ್ಲೆ.
ಏಕೆ ಆಯಿದಿಲ್ಲೆ? ಕಾರಣ ಹಲವಿಕ್ಕು; ಆದರೆ ಮುಖ್ಯವಾದ್ದು – ಆ ಸಮೆಯಲ್ಲಿ ಮಾಡದ್ದು.
ನಲುವತ್ತೇಳರ ಸ್ವಾತಂತ್ರ ಸಿಕ್ಕಿಪ್ಪಾಗ- ಕಾಶ್ಮೀರ ಇನ್ನೂ ನಿಘಂಟಾಗಿತ್ತಿಲ್ಲೇಡ – ಭಾರತಕ್ಕೆ ಬರೆಕ್ಕೋ ಅಥವಾ ಪಾಕಿಸ್ತಾನಕ್ಕೆ ಹೋಯೇಕೋ’ದು.
ಹರಿಸಿಂಘ್ – ಕಾಶ್ಮೀರದ ರಾಜ ಹಲವೂ ಸರ್ತಿ ಬಂದು – ಒಲವು ತೋರ್ಸಿದ್ದನಾಡ. ಕೊನೆಗೆ ಒಂದು ದಿನ ಎಂತತು ಹೇದರೆ, ಪಾಕಿಸ್ತಾನದ ಸೈನ್ಯ ಸೀತ ಕಾಶ್ಮೀರದ ಒಳ ಬಂದು ಇಡೀ ಕಾಶ್ಮೀರವ ನುಂಗಿ ಹಾಕಲೆ ಹೆರಟತ್ತಾಡ.
ಆ ಹೊತ್ತಿಂಗೆ ಅಂತೂ – ಸೀತಾ ದೆಲ್ಲಿಗೆ ಬಂದು – “ಒಂದಾರಿ ಎಂಗಳ ಒಳಿಶಿ” – ಹೇಳಿದನಾಡ ರಾಜ. ನೆಹರು ಆ ಹೊತ್ತಿಂಗೂ ಸರಿಯಾಗಿ ಮಾತಾಡಿದ್ದನಿಲ್ಲೇಡ. ಆದರೆ ಪಟೇಲು – “ಅಕ್ಕಂಬಗ, ಎಂಗಳ ಭಾರತದ ಒಳ ಬಂದರೆ ರಕ್ಷಣೆ ಕೊಡ್ತೆಯೊ” – ಹೇಳಿದವಾಡ.
ಆ ಪ್ರಕಾರ ಒಪ್ಪಿ, ಭಾರತದ ಒಟ್ಟಿಂಗೆ ವಿಲೀನ ಆತು.
ಅಷ್ಟಪ್ಪಗ ತಡವಾಗಿತ್ತು.
ಮೂರನೇ ಎರಡರಷ್ಟು ಕಾಶ್ಮೀರ ಪಾತಕಿಸ್ತಾನದ ಪಾಲಾಗಿತ್ತು.
~
ಜಾಗೆ ನುಂಗಿದ ನೆರೆಕರೆ ಎಷ್ಟಾರೂ ಒಳ್ಳೆ ಸಂಬಂಧಲ್ಲಿರ. ಇದೂ ಹಾಂಗೇ ಆತು.
ಆ ದಿನಂದ ಇಂದಿನವರೆಗೂ ನಿರ್ದಿಷ್ಟ ರೀತಿಲಿ ಉಪದ್ರ ಕೊಡ್ತಾ ಇದ್ದು.
ಪ್ರತಿ ದಿನವೂ ಒಂದಲ್ಲ ಒಂದು ರೀತಿಲಿ ಬೆಡಿ ಹೊಟ್ಟಿಗೊಂಡೇ ಇರ್ತು, ಕಾಶ್ಮೀರಲ್ಲಿ.
ಅದಕ್ಕೆ ಸರಿಯಾಗಿ ಅಲ್ಯಾಣ ಪುಂಡು ಪೋಕ್ರಿಗೊ.
ನಮ್ಮ ಕಾಸ್ರೋಡಿಲಿ ಇರ್ತ ಹೊಡಿ ಜವ್ವನಿಗರ ಹಾಂಗೇ – ಹಲವು ಪೋಕ್ರಿಗೊ ಇದ್ದವು, ಪೋಲೀಸರಿಂಗೆ ಕಲ್ಲಿಡ್ಕಲೆ. ಇವಕ್ಕೆ ಪೈಶೆ ಬಪ್ಪದು ಪುನಾ ಪಾಕಿಸ್ಥಾನಂದಲೇ.
ಅಂತೂ ಒಂದು ನೇರ್ಪದ ನೆಮ್ಮದಿ ಅಲ್ಲಿ ಇಲ್ಲಲೇ ಇಲ್ಲೆ.
~
ನಾಕು ದಿನ ಹಿಂದೆ ಉರಿ ಹೇಳ್ತ ಜಾಗೆಲಿ ಇಪ್ಪ ಸೇನಾ ನೆಲೆಲಿ – ಒಂದು ಉಗ್ರಾಣದ ಒಳ ಹಲವು ಸೈನಿಕರು ಇಪ್ಪಾಗ ಹೆರಾಂದ ಬಾಗಿಲಾಕಿ ಕಿಚ್ಚುಕೊಟ್ಟವಾಡ.
ಇದರಿಂದಾಗಿ ಸುಮಾರು ಸೈನಿಕರು ಸ್ಥಳಲ್ಲೇ ತೀರಿಗೊಂಬ ಹಾಂಗಾತು.
ಅದರಿಂದ ಮತ್ತೆ ಅಂತೂ ಇಡೀ ದೇಶಲ್ಲೇ ಉರಿ ಹೊತ್ತಿಗೊಂಡಿದು.
ಉರಿ – ಹೇದರೆ ಜಮ್ಮುವಿನ ಬರೇ ಊರಲ್ಲ,
ಇಡೀ ಜಮ್ಮು ಕಾಶ್ಮೀರಲ್ಲಿ ಉರಿ ಇದ್ದು ಈಗ,
ಅಷ್ಟೇ ಅಲ್ಲ – ಇಡಿಯ ಭಾರತಲ್ಲಿ ಉರಿ ಇದ್ದು.
ಪ್ರತಿ ಭಾರತೀಯನಲ್ಲಿ ಉರಿ ಇದ್ದು.
ಪಾತಕಿಸ್ಥಾನಕ್ಕೆ ತಕ್ಕ ಉತ್ತರ ಕೊಡುವನ್ನಾರ ಈ ಉರಿ ತಣಿಯ.
ಭಾರತಾಂಬೆಗೆ ಉಪದ್ರ ಕೊಡುವ ಎಲ್ಲಾ ಕ್ಶುದ್ರ ಶೆಗ್ತಿಗೊಕ್ಕೂ ಸರಿಯಾದ ಗೆತಿ ಕಲುಶದ್ದರೆ ನಮ್ಮ ಜೀವನ ವ್ಯರ್ಥ.
ಉರಿ ಲಿ ಉಪದ್ರ ಕೊಟ್ಟ ಕಾಟುಗೊಕ್ಕೆ, ಅವಕ್ಕೆ ಕುಮ್ಮಕ್ಕೊ ಕೊಟ್ಟ ಕಾಟು ದೇಶಕ್ಕೆ ಸರಿಯಾದ ಬುದ್ಧಿ ಕಲಿಶಲಿ ನಮ್ಮ ದೇಶ – ಹೇಳುವ ದೇಶಭಕ್ತಿಯ ಪ್ರಾರ್ಥನೆ ಒಪ್ಪಣ್ಣಂದು.
~

ಒಂದೊಪ್ಪ: ಉರಿಲಿ ಹೊತ್ತಿದ ಉರಿ ದೇಶದ್ರೋಹವನ್ನೇ ಸುಡಲಿ.cheap air max 90 uk

 

2 thoughts on “ದೇಶಲ್ಲಿಡೀ ಉರಿ ಹೊತ್ತುಸಿದ ಉರಿ!!

  1. ಸರಿಯಾಗಿ ಅರ್ಥ ಅಪ್ಪ ಹಾಂಗೆ ವಿಷಯ ವಿವರುಸಿದ್ದ ಒಪ್ಪಣ್ಣ. ಒಳ್ಳೆ ಕಾದೊಂಡಿಪ್ಪಗ ಎರಡ್ಡು ತಟ್ಟಿರೆ ಪೆರಂಟು ಸರಿ ಅಕ್ಕು. ಎಂತ ಹೇಳ್ತಿ ?

  2. ಹರೇರಾಮ. “ಉರಿಲಿ ಹೊತ್ತಿದ ಉರಿ, ದೇಶದ್ರೋಹವ, ದ್ರೋಹಿಗಳ ಸುಡಲಿ” ಸರಿಯಾದ ಮಾತು. ಜೈ ಭಾರತ ಮಾತೆ. ಕೆಲವು ಸಂಗತಿಗಳೂ ಗೊಂತಾತು..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×