Oppanna.com

ಪ್ರೀತಿಯ ಹೂಗು ಸಹನೆಯ ಹಣ್ಣು..!

ಬರದೋರು :   ಒಪ್ಪಣ್ಣ    on   27/11/2015    2 ಒಪ್ಪಂಗೊ

ಪರಮಾಚಾರಿಯ ಕತೆ ಕಳುದ ವಾರ ನಾವು ಕೇಳಿದ್ದು. ಪಳ್ಳತ್ತಡ್ಕ ದೊಡ್ಡಪ್ಪಂಗೆ ಎಡಿಗಾಷ್ಟು ಉಪದ್ರ ಕೊಟ್ಟು ಅಕೇರಿಗೆ ಕೈಕ್ಕಾಲು ಹಿಡುದು ಬೇಡ್ತ ಪರ್ಸ್ತಿತಿಗೆ ಎತ್ತಿದ್ದು.
ಏನೇ ಆದರೂ – ಪಳ್ಳತಡ್ಕ ದೊಡ್ಡಪ್ಪನ ಸಹನೆ ಮೆಚ್ಚೆಕ್ಕಪ್ಪೋ – ಹೇದು ಎಷ್ಟೋ ಜೆನ ಉದ್ಗಾರ ಮಾಡಿದ್ದವು.
ಅಷ್ಟು ಸಹನೆ ಇದ್ದ ಕಾರಣವೇ ಅವಕ್ಕೆ ಸಮದಾನಲ್ಲಿ ಎದುರುಸಿ ಗೆಲ್ಲಲೆ ಎಡಿಗಾತು.
ಉಪ್ಪು ತಿಂದೋರೆಲ್ಲ ನೀರು ಕುಡುದೇ ಕುಡಿತ್ತವು – ಹೇದು ಬೊಳುಂಬು ಮಾವ° ಅಂಬಗಂಬಗ ಹೇಳ್ತವು ಹೀಂಗಿರ್ಸ ಗಟನೆಗಳ ಬಗ್ಗೆ ಮಾತಾಡುವಗಳೇ.
ಅದಿರಳಿ.
~

ಈಗೀಗ ಸಹನೆ, ಅಸಹಿಷ್ಣುತೆ – ಹೇದರೆ ದೇಶದ ರಾಜಕೀಯವೇ ನೆಂಪಾವುತ್ತಾಡ ಗುಣಾಜೆ ಮಾಣಿಗೆ.
ದೇಶಲ್ಲಿ ಅಸಹಿಷ್ಣುತೆ ಹೆಚ್ಚಾಯಿದು, ಹೆಚ್ಚಾಯಿದು – ಹೇದು ಬೊಬ್ಬೆ ಹೊಡವ ಒಂದು ಗುಂಪು, ಹೆಚ್ಚಾಯಿದಿಲ್ಲೆ, ಹೆಚ್ಚಾಯಿದಿಲ್ಲೆ ಹೇದು ತಣ್ಣಂಗೆ ಎಲ್ಲವನ್ನೂ ಸಹಿಸುವ ಇನ್ನೊಂದು ಗುಂಪು – ಇದರೆಡಕ್ಕಿಲಿ ಪಾಪದೋನು ನಿತ್ಯವೂ ಶುದ್ದಿ ಕೇಳಿಂಡು ಕೂರ್ತ ಸಂದರ್ಭ ಬಯಿಂದು.
ಇದೆಂತರ ಈ ಅಸಹಿಷ್ಣುತೆ? ಈ ಗಲಾಟೆ ಎಂತ್ಸರ? ಇದೆಲ್ಲ ಹೇಂಗೆ ಸುರು ಆತು? ಎಲ್ಲಿಗೆತ್ತಿತ್ತು? – ವಿವರವಾಗಿ ಹೇಳೇಕಾರೆ ಗುಣಾಜೆ ಮಾಣಿಯೇ ಆಯೇಕಷ್ಟೆ.

ಮೊನ್ನೆ ಮಾಷ್ಟ್ರುಮಾವನ ಮಗಳ ಬದ್ಧ ಕಳಾತಲ್ಲದೋ – ಅಲ್ಲಿ ಊಟದ ಹಂತಿಲಿ ಹತ್ತರೆ ಕೂದು ಮಾತಾಡಿದ್ದದು ಆನು ಗುಣಾಜೆ ಮಾಣಿಯ ಹತ್ರೆ. ಮಾತಾಡ್ಳೆ ಸುರು ಮಾಡಿ ತುಂಬ ಹೊತ್ತು ಬೇಕಾಯಿದಿಲ್ಲೆ, ರಾಜಕೀಯಕ್ಕೆ ತಿರುಗುಲೆ.
ಕೈನ್ನೀರು ತೆಗದ ಮತ್ತೆ ಮಾತಾಡ್ಲೆ ಸುರು ಮಾಡಿದ್ದು; ತಾಳು ಉಂಬಗ ರಾಜಕೀಯಕ್ಕೆ ಎತ್ತಿದ್ದು; ಮಜ್ಜಿಗೆ ಉಂಬನ್ನಾರ. ಅದಕ್ಕೇ ಪೆರ್ಲದಣ್ಣ ಒಂದೊಂದರಿ ಹೇಳುಸ್ಸು – ಗುಣಾಜೆ ಮಾಣಿ ಹೇದರೆ ರಾಜಕೀಯ, ರಾಜಕೀಯ ಹೇದರೆ ಗುಣಾಜೆ ಮಾಣಿ – ಹೇದು. ಅಷ್ಟು ಮಾಹಿತಿ ಇದ್ದು ಅವನತ್ರೆ.
ಅದಿರಳಿ.
~

ಭಾರತ ದೇಶಲ್ಲಿ ಈಗಾಣ ಹೊಸ ಸರಕಾರ ಅಧಿಕಾರಕ್ಕೆ ಬಂದಪ್ಪದ್ದೇ – ಸಾವಿರಾರು ಕಳ್ಳ ಸಂಘಟನೆಗಳ ಕಪ್ಪು ಪಟ್ಟಿಗೆ ಸೇರ್ಸಿದ್ದವಾಡ. ಎಂತಗೆ? – ಮುಖ್ಯವಾಗಿ ಆ ಸಂಘಟನೆಗೊ ವಿದೇಶಂದ ಪೈಶೆ ತರುಸಿ ಭಾರತವ ತುಂಡುಮಾಡುವ, ಅಥವಾ ಭಾರತೀಯತೆಯ ತುಂಡು ಮಾಡುವ ಕೆಲಸ ಮಾಡಿಗೊಂಡು ಇತ್ತಾಡ. ಉದಾಹರಣೆಗೆ, ಕಲಿವಲೆ ಹೇದು ಪೈಶೆ ತರುಸುದು – ಕಲಿಶುತ್ತದು ಬೈಬುಲ್ಲು; ಪುಸ್ತಕ ಹಂಚಲೆ ಹೇದು ಪೈಶೆ ತರುಸುದು; ಹಂಚುದು ಬೈಬುಲ್ಲು – ಹೀಂಗೆಲ್ಲ ಮಾಡುದಿದಾ.

ಹೀಂಗಿತ್ತ ಕಳ್ಳಂಗಳ್ಳ ಹಿಡುದು ಎಲ್ಲೋರನ್ನೂ ಕಪ್ಪು ಪಟ್ಟಿಗೆ ಸೇರ್ಸಿದವು.
ಇದರಿಂದಾಗಿ ಅವಕ್ಕೆ ವಿದೇಶದ ಬಂಡ್ವಾಳ ತಿಂಬಲೆ ಎಡಿತ್ತಿಲ್ಲೆ; ಬಂಡ್ವಾಳ ಬಾರದ್ರೆ ಅವರ ಬಂಡ್ವಾಳ ಯೇವದೂ ಬಿಚ್ಚಲೆ ಎಡಿತ್ತಿಲ್ಲೆ.
ಹಾಂಗಾಗಿ ಅನಿವಾರ್ಯವಾಗಿ ಭಾರದ ದೇಶದ ಹೊಸ ಸರಕಾರದ ಮೇಗೆ ಹಾನಿ ಮಾಡೇಕು.

ಇನ್ನೊಂದು ವಿಶಯ ಎಂತ್ಸರ ಹೇದರೆ, ಅಂತಾರಾಷ್ಟ್ರೀಯ ಸಂಘಟನೆ ವಿಶ್ವಸಂಸ್ಥೆಯ ಭಾರತ ದೇಶಕ್ಕೆ ಭದ್ರತಾ ಸಮಿತಿಲಿ ಖಾಯಂ ಸದಸ್ವತ್ವ ಸಿಕ್ಕೇಕಾರೆ ನಮ್ಮ ದೇಶ ಅತ್ಯಂತ ಶಾಂತಿಯುತ – ಹೇದು ಆಯೇಕು.
ಹಾಂಗೆ ಆಯೇಕಾರೆ, ದೇಶಲ್ಲಿ ಗಲಭೆ, ದೊಂದಿ, ಕೋಮು ಗಲಾಟೆಗೊ – ಆವುತ್ತಿಲ್ಲೆ ಹೇದು ಲೋಕಕ್ಕೆ ಗೊಂತಾಯೇಕು. ಅದು ಸಿಕ್ಕದ್ದೆ ಆಯೇಕಾರೆ ಎಂತ ಆಯೇಕು? ಗಲಾಟೆಗೊ ಆವುತ್ತು, ಕೋಮು ಸೌಹಾರ್ದತೆ ಇಲ್ಲೆ – ಹೇದು ಅಂತಾರಾಷ್ಟ್ರೀಯವಾಗಿ ಅನುಸೇಕು. ಅದಕ್ಕಾಗಿ ಆಗ ಹೇಳಿದ ಕಪ್ಪುಪಟ್ಟಿಯ ಸಂಘಟನೆಗಳ ಮೂಲಕ ಕೆಲವು ವಿದೇಶಂಗೊ ಕೆಲಸ ಮಾಡ್ತಾ ಇಪ್ಪದು – ಹೇದು ಗುಣಾಜೆ ಮಾಣಿಯ ಇನ್ನೊಂದಭಿಪ್ರಾಯ.
ಏನೇ ಇರಳಿ, ನಮ್ಮ ಊರಿನ ಕೆಲವು ಸಂಘಟನೆಗೊ ನಮ್ಮ ದೇಶವನ್ನೇ ಲಗಾಡಿ ತೆಗವಲೆ ಹೆರಡ್ತವು ಹೇಳುಸ್ಸು ನಿಘಂಟೇ. ಅವಕ್ಕೆ ನಮ್ಮ ಸಾಹಿತ್ಯ ಲೋಕದ ಕೆಲವು ಜೆನರ ಸಹಕಾರ ಬೇರೆ.

ನೆಹರುವಿನ ಪುಳ್ಳಿ ಒಂದು – ಎಲ್ಲಿದ್ದತ್ತೋ ಏನೋ – ಎನಗೆ ಸಿಕ್ಕಿದ ಕೇಂದ್ರ ಸಾಹಿತ್ಯ ಪುರಸ್ಕಾರವ ಒಪಾಸು ಕೊಡ್ತೆ – ಹೇದು ಒಂದು ಪತ್ರಿಕಾ ಗೋಷ್ಠಿ ಮಾಡಿತ್ತು.
ಇಷ್ಟನ್ನಾರ ಅದು ಎಲ್ಲಿತ್ತು ಹೇದು ಆರುದೇ ಗೋಷ್ಠಿ ಮಾಡದ್ದಕ್ಕೆ ಈಗ ಪತ್ರಿಕಾ ಗೋಷ್ಠಿ ಮಾಡಿದ್ದು – ಹೇದು ಗುಣಾಜೆ ಮಾಣಿಯ ಪ್ರಾಸ. ಅದಿರಳಿ.
ಯೇವದೋ ಅಂದೆಕಾಲಲ್ಲಿ ಸಿಕ್ಕಿದ ಪ್ರಶಸ್ತಿಯ ಒಪಾಸು ಕೊಡುಸ್ಸಡ. ಒಪಾಸು ಕೊಡುಸ್ಸೋ?
ಅಂಬಗ ಪ್ರಶಸ್ತಿ ಒಟ್ಟಿಂಗೆ ಸಿಕ್ಕಿದ ಪೈಶೆ? ಹ್ಯೆ ಹ್ಯೆ, ಅದರ ಹೇಂಗೆ ಕೊಡ್ಳಾವುತ್ತು?
ಪ್ರಶಸ್ತಿ ತಗಡು ಮಾಂತ್ರ ಒಪಾಸು, ಪೈಶೆ ಅದಾಗಲೇ ಮುಗುದ್ದಿದಾ…
ಪೈಶೆ ಮಾಂತ್ರ ಅಲ್ಲದ್ದೆ – ಸಿಕ್ಕಿದ ಅನುಕ್ಕೂಲಂಗೊ, ಬಿಟ್ಟಿ ಟಿಗೇಟುಗೊ, ಸೀಟುಗೊ, ಸೌಲಭ್ಯ ಸೌಕರ್ಯಂಗೊ – ಇದೆಲ್ಲವನ್ನೂ ಒಪಾಸು ಮಾಡೆಡದೋ ಹಾಂಗಾರೆ?
ಲೆಕ್ಕಲ್ಲಿ ಮಾಡೇಕು, ಆದರೆ ಅದೆಲ್ಲ ಮಾಡಿರೆ ಖರ್ಚಿಂಗೆ ಎಂತ್ಸ ಮಾಡುಸ್ಸು!
ಹಾಂಗಾಗಿ ಬರೇ ಆ ಪ್ರಶಸ್ತಿಯ ತಗಡಿನ ಒಪಾಸು ಮಾಡಿ ದೊಡ್ಡಜೆನ ಅಪ್ಪದು.
~
ಆ ಜೆನ ಮಾಡಿದ್ದೇ ಮಾಡಿದ್ದು – ಅದೇ ನಮುನೆ ಬೇರೆಯೋರಿಂಗೂ ಐಡಿಯಾ ಬಂತು.
ಆರಿಂಗೆಲ್ಲ ಆ ಪ್ರಶಸ್ತಿ ಬಂದಿತ್ತು ಹೇದು ಜೆನಂಗೊಕ್ಕೆ ಮರದಿತ್ತೋ – ಅವೆಲ್ಲ ಓತಪ್ರೋತ ಒಂದರಿಯೇ ಎದುರು ಬಂದು ’ಎಂಗೊ ಆ ಪ್ರಶಸ್ತಿ ಹಿಂದೆ ಕೊಡ್ತಾ ಇದ್ದೆಯೋ°’ – ಹೇದು ಬೊಬ್ಬೆ ಹೊಡದವು.
’ಇಂತವ°, ಇಂತವ°, ಇಂತವ° – ಎಲ್ಲೋರುದೇ ಅವಕ್ಕೆ ಸಿಕ್ಕಿದ ಪ್ರಶಸ್ತಿಯ ಹಿಂದೆ ಕೊಟ್ಟವು’- ಹೇದು ಪೇಪರಿಲಿ ಬಂತು. ಹೋ, ಅವಕ್ಕೆಲ್ಲ ಆ ಪ್ರಶಸ್ತಿ ಸಿಕ್ಕಿತ್ತಿದ್ದೋ – ಹೇದು ಪೇಪರು ಓದಿಂಡು ಜೆನಂಗೊ ಗ್ರೇಶಿಗೊಂಡವು.
~
ಅವು ಒಪಾಸು ಕೊಟ್ಟದೆಂತಕೆ?
ಸುಮ್ಮನೇ – ಒಂದು ಕಾರಣ.
ದೇಶಲ್ಲಿ ಅಸಹಿಷ್ಣುತೆ ಹೆಚ್ಚಾಯಿದಾಡ.
ಅಪ್ಪೋ? ಆರು ಹೇಯಿದ್ಸು!?

ಮೊಘಲರ ಹಾಂಗೆ ವಿಧರ್ಮೀಯರ ಕಡುದು ಕೊಲ್ಲಿ – ಹೇದು ಆರುದೇ ಹೇಳ್ತವಿಲ್ಲೆ.
ಗೋವಾಲ್ಲಿ ಪೋರ್ಚುಗೀಸರ ಹಾಂಗೆ ಹಿಂದೂಗಳ ಹಿಡುದು ಹಿಡುದು ಕಿಚ್ಚಿಂಗೆ ಹಾಕುತ್ತವಿಲ್ಲೆ.
ಟಿಪ್ಪುವಿನ ಕಾಲಲ್ಲಿ ಮಾಡಿದ ಹಾಂಗೆ ನಾಯರುಗಳ, ಕೊಡವರ, ಪುರ್ಬುಗಳ ಹಿಡುದು ಮತಾಂತರ ಮಾಡುಸ್ದೋ, ಅಲ್ಲದ್ದರೆ ಮತಾಂತರಕ್ಕೆ ಒಪ್ಪದ್ದೋರ ಕೋಟೆ ಮೇಗಂದ ಎತ್ತಿ ಇಡ್ಕುದೋ – ಮಾಡ್ತವಿಲ್ಲೆ.

ಎಲ್ಲಿಯೋ ಒಂದೆರಡು ಘಟನೆ ಆತು.
ಆ ಘಟನೆಗೆ ಅಲ್ಯಾಣ ಸ್ಥಳೀಯ ಪೆಟ್ಟುಗುಟ್ಟು, ಪೂರ್ವದ್ವೇಶವೇ ಕಾರಣ ಹೊರತು ಇಡೀ ದೇಶ ಅಸಹಿಷ್ಣು ಹೇದು ಹೇಳುಸ್ಸು ಎಂತ್ಸಕೆ?!
ಉತ್ತರ ಪ್ರದೇಶಲ್ಲಿ ಒಂದು ವ್ಯಾಪಾರಿ ದನವ ಕಡುದು ಕೊಂದತ್ತು, ಮಾಂಸ ಮಾರ್ಲೆ ಸುರು ಮಾಡಿತ್ತು. ಅಲ್ಲಿಗೆ ಕೂಡ್ಳೇ ರಾಜಕೀಯ ಪಕ್ಷದವು ಹೋಗಿ ಮಾತಾಡ್ಸಿಗೊಂಡು ಬಂದವು.
ಒಂದು ವಾರ ಕಳುದು ಮೂಡಬಿದ್ರೆಲಿ ಗೋರಕ್ಷಾ ಪರಿವಾರದ ಒಂದು ಮನಿಶ್ಶನ ಹಿಡುದು ಕೊಂದವು. ಅಷ್ಟಪ್ಪಗ – ಎಲ್ಲಿದ್ದವು ರಾಜಕೀಯದವು?
ಯೇಯ್! ಕಾಂಬಲೇ ಇಲ್ಲೆ.
~

ಈಗೀಗ ಅಂತೂ ಆ ಪ್ರಶಸ್ತಿ ವಾಪಾಸು ಕೊಡ್ತ ಏರ್ಪಾಡುಗೊ ಮುಗುದು, ಚಿತ್ರನಟರ ವರೆಂಗೆ ಎತ್ತಿತ್ತಾಡ.
ನಿನ್ನೆಲ್ಲ ಮೊನ್ನೆ ಯೇವದೋ ಖಾನು ಹೇಳಿದ್ದಾಡ, ’ಮಕ್ಕಳ ಬಗ್ಗೆ ಚಿಂತೆ ಆವುತ್ತು; ದೇಶವೇ ಬಿಟ್ಟು ಹೋಯೇಕಕ್ಕೋ ಹೇದು ಎನ್ನ ಹೆಂಡತ್ತಿ ಹೇಳ್ತು’ – ಹೇದು.
ದೇಶಲ್ಲಿ ಅಸಹಿಷ್ಣುಗೊ ಇದ್ದರೆ ದೇಶವನ್ನೇ ಬಿಟ್ಟು ಹೋಪದೋ?
ನುಸಿ ಕಚ್ಚುತ್ತರೆ ಮನೆ ಬಿಟ್ಟು ಹೋಪದೋ?
ನಮ್ಮ ದೇಶಲ್ಲೇ ಹುಟ್ಟಿ, ನಮ್ಮಲ್ಲೇ ಬೆಳದು, ನಮ್ಮಲ್ಲೇ ಆ ಮಟ್ಟದ ಹೆಸರಿನ ನಟ ಆಗಿ ಈಗ ನಮ್ಮನ್ನೇ ಅಸಹಿಷ್ಣುಗೊ ಹೇದರೆ ಹೇಂಗಕ್ಕು?!
ಅಷ್ಟಕ್ಕೂ – ಅದರ ಹೆಂಡತ್ತಿ ಹಿಂದೂ ಹುಡುಗಿ ಆಗಿದ್ದುಗೊಂಡು ಬ್ಯಾರಿಯ ಮದುವೆ ಆದ್ಸಕ್ಕೆ ಆರುದೇ ಎಂತ್ಸೂ ಮಾಡಿದ್ದವಿಲ್ಲೆ. ಅದೇ ಒಂದು ವೇಳೆ ಬ್ಯಾರಿದೇಶಲ್ಲಿ ಒಂದು ಬ್ಯಾರ್ತಿ ಹಿಂದೂ ಹುಡುಗನ ಮದುವೆ ಆಗಿದ್ದರೆ ಎರಡೇ ದಿನಲ್ಲಿ ಸ್ವರ್ಗಕ್ಕೆ ಹೋವುತ್ತಿತು ಪಾಪ. ಅದಿರಳಿ.

~
ಅದೇ ದಿನ ಒಂದು ಸೈನ್ಯಾಧಿಕಾರಿಯ ಪಾತಕಿಸ್ತಾನದವು ಅನ್ಯಾಯವಾಗಿ ಕೊಂದವಡ.
ಅದರ ಅಂತ್ಯಕ್ರಿಯೆ ಲಿ ಮಾಧ್ಯಮದೋರು ಹೆಂಡತ್ತಿಯ ಹತ್ತರೆ ಕೇಳಿದವಾಡ – ಅಷ್ಟಪ್ಪಗ ’ಎನ್ನ ಇಬ್ರು ಮಕ್ಕಳೂ ಸೇನೆ ಸೇರ್ತವು. ದೇಶ ರಕ್ಷಣೆ ಮಾಡ್ತವು’ – ಹೇದು ಧೈರ್ಯಲ್ಲಿ ಹೇಳಿತ್ತಾಡ.

ಈಗ ನೋಡಿ – ನಾಯಕ ಹೇದರೆ ಆರು?
ಸಿನೆಮಲ್ಲಿ ಮರಸುತ್ತಿ ಪದ್ಯ ಹೇಳಿ, ನಿಜಜೀವನಲ್ಲಿ ಹೇಡಿಯ ಹಾಂಗೆ ದೇಶ ಬಿಟ್ಟು ಹೋಪ ಯೋಜನೆ ಮಾಡಿದ ಜೆನವೋ?
ಅಲ್ಲ, ನಿಜಜೀವನಲ್ಲಿ ವೀರಮರಣಲ್ಲಿ ತೀರಿದರೂ ತೊಂದರಿಲ್ಲೆ ಹೇದು ದೇಶ ಕಾವ ಸೈನಿಕರೋ?
ನಮ್ಮ ತಿಳುವಳಿಕೆ ಬದಲುಸೆಕ್ಕು. ನಿಜವಾದ ನಾಯಕರು ಆರು ಹೇದು ನಮ್ಮ ಸಮಾಜಕ್ಕೆ ಗೊಂತುಮಾಡುಸೆಕ್ಕು.
ಅಲ್ದೋ?
ದೇಶಲ್ಲಿ ತೊಂದರೆ ಇದ್ದರೆ – ಅದರ ರಕ್ಷಣೆ ಮಾಡುವವ° ನಿಜವಾದ ನಾಯಕ°.
~

ಅಷ್ಟಕ್ಕೂ- ಸಹನೆ ಇಪ್ಪದು ಪ್ರೀತಿ ಇದ್ದರೆ ಮಾಂತ್ರ.
ನವಗೆ ಪ್ರೀತಿಗೆ ಪಾತ್ರರಾದೋರು ಎಂತ ಮಾಡಿರೂ ನಾವು ಸಹಿಸಿಗೊಂಡು ಕೂರ್ತು.
ಅದೇ ಪ್ರೀತಿ ಇಲ್ಲದ್ದೋರು ರಜ್ಜ ಎಂತಾರು ಮಾಡಿರೂ ನವಗೆ ತಡವಲೆ ಎಡಿತ್ತಿಲ್ಲೆ.

ಅದಕ್ಕೇ ಹೇಳಿದ್ದು – ಮರ ಬಿಟ್ಟ ಹೂಗಿನ ಪ್ರೀತಿಲಿ ಕಾಪಾಡಿರೆ, ಸಹನೆಲಿ ಕೂದರೆ ನವಗೆ ಹಣ್ಣು ಸಿಕ್ಕುತ್ತು – ಹೇದು.

ಎಲ್ಲೋರನ್ನೂ ನಾವು ಪ್ರೀತಿಲಿ ಕಂಡ್ರೆ ಎಲ್ಲೋರುದೇ ಸಹಿಷ್ಣುಗಳೇ.
ನಾವೇ ಪೂರ್ವಾಗ್ರಹ ಮಡಿಕ್ಕೊಂಡು ದ್ವೇಷ ಸಾಧನೆ ಸುರುಮಾಡಿರೆ ಆರೂ ನಮ್ಮ ಸಹಿಸಿಗೊಳವು.
ಅಲ್ದೋ?

ಒಂದೊಪ್ಪ: ಪ್ರೀತಿ ಹುಟ್ಟೆಕ್ಕಾರೆ ಸಹನೆ ಬೇಕು; ಸಹನೆ ಹುಟ್ಟೆಕ್ಕಾರೆ ಪ್ರೀತಿ ಬೇಕು.

2 thoughts on “ಪ್ರೀತಿಯ ಹೂಗು ಸಹನೆಯ ಹಣ್ಣು..!

  1. ಅಸಹಿಷ್ಣುತೆಯ ಬಗೆಲಿ ನಮ್ಮ ಭಾಷೆಲಿ ಓದಿಯಪ್ಪಗ ವಿಷಯ ಮತ್ತುದೆ ಮನಸ್ಸಿಂಗೆ ನಾಟಿತ್ತದ. ಕಡೇಣ ಒಪ್ಪವ ಒಪ್ಪೆಕಾದ್ದೇ.

  2. ನಿಜ ಒಪ್ಪಣ್ಣ , ಮಾವು ಹೂಗು ಬಿಟ್ಟಪ್ಪಗ ಕಾರ್ಕೋಟಕದ ಹಾಂಗಿದ್ದ ಮುಗಿಲು ಬಂದರೆ ಅದು ಕರಂಚುಸ್ಸೇ ಉಳ್ಳೊ !. ಮಾವಿನ ಹಣ್ಣಿನ ಆಶೆ , ರಸಾಯನದ ಆಶೆ, ಉಪ್ಪಿನಕಾಯಿ ಆಶೆಯೂ ಇಲ್ಲೇ!!.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×