Oppanna.com

ಅಯ್ಯಯ್ಯೋ ಹೇಳುವಗ ಅಯ್ಯಪ್ಪನನ್ನೂ ಮರದವೋ..?!

ಬರದೋರು :   ಒಪ್ಪಣ್ಣ    on   28/01/2011    39 ಒಪ್ಪಂಗೊ

ಕಣಿಯಾರದ ಒರಿಶಾವಧಿ ಜಾತ್ರೆ ಮುಗಾತು; ಇರುವಾರ ಆರದ್ದೋ ಹರಕ್ಕೆ ಜಾತ್ರೆ ಇತ್ತಾಡ, ಅದುದೇ ಮುಗಾತು!
ಮುಗುದರೆಂತಾತು? ಬಪ್ಪೊರಿಶ ಪುನಾ ಬತ್ತು. ಈ ಪದ್ಧತಿಗೊ ಇಪ್ಪನ್ನಾರ ಬಂದುಗೊಂಡೇ ಇರ್ತು!!

ಜಾತ್ರೆಲಿ ಕಂಡ ವಿಧವಿಧದ ಜಾತಿಯ ವಿವಿಧವಿಧ ಪದ್ಧತಿಗಳ ಬಗ್ಗೆಯೇ ನಾವು ಕಳುದವಾರ ಮಾತಾಡಿದ್ದು, ಅಲ್ಲದೋ?
ಗೋಪಾಲಕೃಷ್ಣನ ರೂಪಂದ ತೊಡಗಿ, ಅಲ್ಲಿ ಬೇರೆಬೇರೆ ಜಾತಿಯೋರು ಕೆಲಸ ಹಂಚಿಗೊಂಡು – ಅವರವರ ಪದ್ಧತಿಲಿ ಕೃಷ್ಣಂಗೆ ಸೇವೆ ಎತ್ತುಸುತ್ತದು, ಹಾಂಗಾಗಿ ನಮ್ಮ ಧರ್ಮಲ್ಲಿ ಪ್ರಚಲಿತ ಇರ್ತ ಜಾತಿಪದ್ಧತಿ ಎಂದಿಂಗೂ ಇರಳಿ ಹೇಳ್ತದೇ ಕಳುದ ವಾರ ಬೈಲಿಲಿ ಬೆಶಿ ಶುದ್ದಿ.

ದೇಹಕ್ಕೆ ಕಣ್ಣು-ಕೈಕ್ಕಾಲು ಇದ್ದ ಹಾಂಗೆ ಜಾತಿಗೊ ನಮ್ಮ ಧರ್ಮದ ಅವಿಭಾಜ್ಯ ಅಂಗ.
ಎಲ್ಲಾ ಜೆನಂಗೊ ಸೇರಿಗೊಂಡ್ರೇ ಸಮಾಜ ಸರೀ ನೆಡಗಷ್ಟೆ! ಅಲ್ಲದೋ?
ಅದೇ ನಮುನೆ – ಎಲ್ಲಾ ಜಾತಿಯೋರುದೇ ಸೇರಿಗೊಂಡು ಊರು ಊರುಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಒಟ್ಟಿಂಗೇ ಜಪ – ತಪ – ವ್ರತ- ಪೂಜೆ – ಪಲಾರ- ಮಾಡಿಗೊಂಡು ಜಾತ್ಯತೀತತೆಯ ತೋರುಸಿಗೊಂಡು ದೇವರ ಕಂಡು ವ್ರತ ಸಮಾಪ್ತಿ ಮಾಡ್ತ ಆಚರಣೆ ನಮ್ಮ ಊರಿಲೇ ನೆಡಕ್ಕೊಂಡಿದ್ದು, ನಿಂಗೊಗೆ ಅರಡಿಗಲ್ಲದೋ?

~

ಶೆಬರಿಮಲೆಗೆ ಹೋವುತ್ತ ಬಗ್ಗೆ, ಮಕರ ಜೋತಿಯ ಬಗ್ಗೆ ಎರಡುವಾರ ಹಿಂದೆಯೇ ಮಾತಾಡಿದ್ದು ನಾವು!
ಹೋದ ಮತ್ತೆ ಮಾತಾಡಿದ್ದಿಲ್ಲೆ ಇದಾ! ನಮ್ಮ ಬೈಲಿಂದಲೂ ಹೋಯಿದವು ಕೆಲವು ಜೆನ.ಒಂದು ಮಂಡಲ (ನಲುವತ್ತೆಂಟು ದಿನಂಗಳ) ಕಾಲ ಶುದ್ಧ ಸನಾತನಿಯಾಗಿದ್ದೊಂಡು, ಧಾರ್ಮಿಕ ಜೀವನ ನೆಡಶಿ,

ಹರಿಹರ ಸುತನ ಒಲುಸಿಗೊಂಬಲೆ ಬೇಕಾದ ಕಟ್ಟುನಿಟ್ಟಿನ ವ್ರತವ ಊರಿನ ಎಲ್ಲೋರುದೇ ಮಾಡಿ,
ಬೈಲಕರೆ ಭಜನಾಮಂದಿರಲ್ಲಿ ದಿನಕ್ಕೆ ಮೂರು ಸರ್ತಿ ಶರಣುದಿನಿಗೇಳಿ*, ಧಾರ್ಮಿಕ ಜೀವನ
ನೆಡೆಶುತ್ತದು ಅದರ ಒಂದು ಅಂಗ.
~
ಜೆನವರಿ ಹದಿನಾಕು ಹೇಳಿತ್ತುಕಂಡ್ರೆ ಆಚಕರೆ ಜಿನ್ನಪ್ಪಂಗೆ ಒಂದು ಯುಗ ಇದ್ದ ಹಾಂಗೆ!
ರಂಗಮಾವಂಗೆ ವಿಷು ಸಂಕ್ರಮಣ ಹೇಂಗೋ – ಜಿನ್ನಪ್ಪಂಗೆ ಮಕರ ಸಂಕ್ರಮಣ ಹಾಂಗೆಯೇ! 🙂
ಒಂದಿಪ್ಪತ್ತೊರಿಶ ಮದಲು – ಅದರ ನೆಡುಜವ್ವನಲ್ಲಿ ಮೂರು ಹೊತ್ತು ಕುಡುದಿಗಡ, ಆದರೆ ಈಗ ಹಾಂಗಲ್ಲ! (ಒಂದೇ ಹೊತ್ತು ಕುಡಿಗಷ್ಟೇ! 😉 )
ಅದರ ಜೀವನ ಬೆಳಗಿದ್ದೇ ಅಯ್ಯಪ್ಪನ ವ್ರತಂದಾಗಿ, ಅಯ್ಯಪ್ಪನಿಂದಾಗಿ – ಹೇಳ್ತದು ಅದು ಸ್ವತಃ ಮನಗಂಡ ಸತ್ಯ.
ಈಗ ಅದು ಬೈಲಕರೆಯ ಅಯ್ಯಪ್ಪಭಜನಾಮಂದಿರದ ದೊಡ್ಡ ಭಕ್ತನೂ ಅಪ್ಪು – ಸಣ್ಣ ಮುಗ್ತೇಸರನೂ ಅಪ್ಪು.

ಒರಿಶಂಪ್ರತಿ ಅಯ್ಯಪ್ಪನ ಮಾಲೆ ಹಾಕುಗು, (ಶಬರಿ)ಮಲೆಗೆ ಹೋಗಿ ಹದ್ನೆಂಟು ಮೆಟ್ಳಿನ ಹತ್ತಿ ಗುಂಡದೊಳ ಇಪ್ಪ ಅಯ್ಯಪ್ಪ ಮೂರ್ತಿಯ ಕಂಡು ಕೃತಾರ್ಥ ಅಕ್ಕು.
ಅದು ಹೋಪದು ಹದ್ನೆಂಟೊರಿಶ ಆವುತ್ತಾ ಬಂತು, ಹಾಂಗಾಗಿ ಅದು ಬೈಲಿಲಿ ಸಣ್ಣ ಮಟ್ಟಿನ ಗುರು(ಸ್ವಾ)ಸಾಮಿಯೂ ಆಯಿದು.
ಬಪ್ಪೊರಿಶ ಶೆಬರಿಮಲೆಲಿ ನೆಡ್ಳೆ ತೆಂಗಿನ ಗೆಡು ಇದ್ದೋ – ಹೇಳಿ ಹುಡ್ಕಿಗೊಂಡಿತ್ತು ಬೈಲಿಲಿ.

ಗುರುಸ್ವಾಮಿ ಆಗಿಪ್ಪ ಸ್ಥಾನವ ಅದುದೇ ಕೊಶಿಪಡ್ತು. ಹಾಂಗಾಗಿ, ಪ್ರತಿದಿನ ಉದಿಯಪ್ಪಗ ಮಿಂದಿಕ್ಕಿ ಸೈಕ್ಕಾಲಿಲಿ ಹೋಗಿ, ಭಜನಾಮಂದಿರದ ಒಳದಿಕೆ ಇಪ್ಪ ಅಯ್ಯಪ್ಪಂಗೆ ನೆಣೆ ಮಡಗಿ, ತಲೆಮೇಲ್ಕಟೆ ಕಟ್ಟಿದ ಗಂಟೆಯ ಜೋರು ನಾಕುಸರ್ತಿ ಬಡುದು, ನೀಟಂಪ ಅಡ್ಡಬಿದ್ದು
ಬಕ್ಕದು.
ಅಷ್ಟು ಮಾಂತ್ರ ಅಲ್ಲ, ಹೊತ್ತಪ್ಪಗ ಮೀನುತೆಕ್ಕೊಂಡು ಅದೇ ಸೈಕ್ಕಾಲಿಲಿ ಬಪ್ಪಗ ಆ ಮಾರ್ಗಲ್ಲೆ ಆಗಿ ಬಾರ – ಔಶುದ್ಧ ಅಕ್ಕು ಹೇಳಿಗೊಂಡು! 😉
ಅದೇನೇ ಇರಳಿ, ನಿಷ್ಟೆ ಇದ್ದು ಅದಕ್ಕೆ.

ಶಬರಿಮಲೆಲಿ ಜೆನಂಗೊ ಮಿಜುಳುದು!
ಶಬರಿಮಲೆಲಿ ಜೆನಂಗೊ ಮಿಜುಳುದು!

~
ಮೊನ್ನೆ ಉಪ್ನಾನ-ಜೆಂಬ್ರಂಗಳ ಮುಗುಶಿ ಬೈಲಿಂಗೆ ಬತ್ತಾ ಇಪ್ಪಗ ಜಿನ್ನಪ್ಪು ಸಿಕ್ಕಿತ್ತು.
ಹಗಲೊತ್ತು ಅದಕ್ಕೆ ಕೆಲಸ ಇದ್ದು; ಪಾರ್ಲಮಾವನ ರಬ್ಬರುತೋಟಲ್ಲಿ ರೈಟ.
ಉದಿಯಪ್ಪಗ ಬಪ್ಪಗ ಕಂಡಾಬಟ್ಟೆ ತಡವು ಮಾಡ್ತು ಹೇಳಿಗೊಂಡು ಅವ್ವೇ ಒಂದು ಸೈಕ್ಕಾಲು ತೆಗದು ಕೊಟ್ಟದು.
ಈಗ ಬೇಗ ಹೋಪಲೂ ಅನುಕೂಲ ಆವುತ್ತದು! ಹೇಳಿ ಪಾರ್ಲಮಾವ ಬೇಜಾರು ಮಾಡಿಗೊಳ್ತವು! 😉
– ಮೊನ್ನೆ ಹೊತ್ತೋಪಗ ಬೈಲಿಂಗೆ ಬಪ್ಪಗ ಸೈಕ್ಕಾಲು ನೂಕೆಂಡು ಮುಕಾರಿಚಡವಿಲಿ ಸಿಕ್ಕಿತ್ತು..

ಎಲ್ಲಿ – ಯೇವಗ ಸಿಕ್ಕಿರೂ ಮಾತಾಡೆಕ್ಕದಕ್ಕೆ! ಸಣ್ಣ ಇಪ್ಪಗಂದಲೇ ಹಾಂಗೇ!
ಈಗಳೂ ಅದೇ ಆತ್ಮೀಯತೆಲಿ ಮಾತಾಡುಗು; ಇಂದುದೇ ಮಾತಾಡಿತ್ತು – ಸುಮಾರು ಮಾತಾಡಿಗೊಂಡು ಬಂದೆಯೊ.
~

ಜಿನ್ನಪ್ಪು ತುಂಬ ಬೇಜಾರಲ್ಲಿತ್ತು; ಅಪುರೂಪಲ್ಲಿ!
ಸಾಮಾನ್ಯವಾಗಿ ಅದು ಉದಿಯಾಂದ ಬೇಜಾರಲ್ಲಿದ್ದರೂ, ಹೊತ್ತಪ್ಪಗ ರಜ ಉಲ್ಲಾಸಲ್ಲಿಪ್ಪದು ಪ್ರಾಕಿಂದ ನೆಡಕ್ಕೊಂಡು ಬಂದ ಕ್ರಮ! 😉
ಆದರೆ ಇದು ಒಂದು ಸರ್ತಿ ಕಳ್ಳುಕುಡುದರೆ ಹೋವುತ್ತ ಬೇಜಾರದ ಹಾಂಗೆ ಕಂಡತ್ತಿಲ್ಲೆ.
ತುಂಬಾ ತುಂಬಾ ಬೇಜಾರಾಯಿದು ಅದಕ್ಕೆ. ಎಂತ ಮಾತಾಡಿರೂ – ಎಲ್ಲಿಂದ ಮಾತಾಡಿರೂ, ಮತ್ತೆ ಮತ್ತೆ ಅದೇ ವಿಶಯಕ್ಕೆ
ಬಂದು ಬೇಜಾರು ಮಾಡಿಗೊಂಡಿದ್ದದು ಗೊಂತಾಗಿಂಡಿತ್ತು.
ಆ ಒಂದು ವಿಶಯ ಅದಕ್ಕೆ ಅಷ್ಟುದೇ ಬೇಜಾರಾಯಿದು..
ಅದೆಂತರ?
~
ಈ ಸರ್ತಿ ಜೋತಿ ನೋಡ್ಳೆ ಹೇಳಿಗೊಂಡು ಮಲೆಗೆ ಹೋದೋರ ಪೈಕಿ ನೂರು-ನೂರೈವತ್ತು ಜೆನ ತೀರಿಗೊಂಡಿದವಡ.
ಅದರಿಂದ ದೊಡ್ಡ ಪ್ರಮಾದ ಅಪ್ಪಲೆ ಸಾಧ್ಯವೇ ಇಲ್ಲೆ – ಹೇಳ್ತದು ಅದರ ಅನಿಸಿಕೆ.
ಅವು ಎಂತಾರು ಅನಾಚಾರ ಮಾಡಿಕ್ಕೋ, ಅಲ್ಲ ಔಶುದ್ದ*(ಅಶುದ್ಧ)ಲ್ಲಿ ಹೋಯಿದವೋ, ಅಲ್ಲ ಅವು ವ್ರತಲ್ಲಿಪ್ಪಗ ಸರಿ ಶರಣುದಿನಿಗೆಳಿದ್ದವಿಲ್ಲೆಯೋ, ಅಲ್ಲ ಅಯ್ಯಪ್ಪಂಗೆ ಅವು ಕೊಶಿ ಆಗಿ ಕರಕ್ಕೊಂಡದೋ, ಅಯ್ಯಪ್ಪಂಗೆ ಕೋಪ ಬಂದು ಹಾಂಗಾದ್ದೋ – ಅಲ್ಲ ಅವರ ಆಯಿಸ್ಸು ಮುಗುದಿತ್ತೋ..
ಅಯ್ಯಪ್ಪನೇ ಇಪ್ಪ ಜಾಗೆಲಿ ಹಾಂಗಪ್ಪದಿದ್ದೋ? ಹಾಂಗಾಯೇಕಾರೆ ಕಾರಣ ಎಂತರ ಅಂಬಗ..?
– ಎಂತಾಗಿಕ್ಕಪ್ಪಾ – ಹೇಳಿ ಇದಕ್ಕೆ ಅಂದಾಜಿಯೇ ಆವುತ್ತಿಲ್ಲೆಡ.
ಪಾಪ..!!

ಈ ಬೇಜಾರಲ್ಲೇ ಇಳಿಜಾರಿಲಿಯೂ ಸೈಕ್ಕಾಲು ಹತ್ತಿದ್ದಿಲ್ಲೆ ಅದು! ನೂಕಿಂಡೇ ಬಂತು!!
ಅಯ್ಯಪ್ಪನ ಹೆಸರಿಂಗೇ ಅನಾಚಾರ ಆದ ನಮುನೆ ಕಂಡತ್ತು ಅದರ ಲಕ್ಷಣಲ್ಲಿ.
ಹಾಂಗೇ ನೆಡದು ಬೈಲು ಎತ್ತಿತ್ತು, ಬರ್ಪೆ ಒಪ್ಪಣ್ಣೆರೆ ಹೇಳಿಕ್ಕಿ ಅದು ಮುಂದೆ ಹೋತು – ಆಚಕರೆಂಗೆ,
ಅಲ್ಲೇ ಬಲತ್ತಿಂಗೆ ತಿರುಗಿ ಮಾಷ್ಟ್ರಮಾವನಲ್ಲೆ ಆಗಿ ಇಳುದೆ.
~

ಬೆಶಿನೀರಿಂಗೆ ಕಿಚ್ಚು ಹಾಕಲೆ ಹೆರಟ ಮಾಷ್ಟ್ರಮನೆ ಅತ್ತೆಗೆ ಜಾಲಿಲೆ ಆಗಿ ಹೋಪ ಒಪ್ಪಣ್ಣನ ಕಂಡು ಜೋರು ಕೇಳಿದವು –
ಎಂತ ಒಪ್ಪಣ್ಣಾ, ಒಳ ಬತ್ತಿಲ್ಲೆಯೋ – ಅಲ್ಲೇ ಹೋಪದಾ – ಹೇಳಿಗೊಂಡು!
ಹಾಂಗೆ ಒಳ ಹೊಗ್ಗಿತ್ತು – ಒಂದು ಗಳಿಗ್ಗೆ ಹೇಳಿಗೊಂಡು. ಮತ್ತೆ ಅಲ್ಲಿಂದ ಹೆರಡುವಗ ಗಳಿಗೆ ಸುಮಾರಾಯಿದು! ಅದು ಬೇರೆ! 😉

ಅನಿರೀಕ್ಷಿತ ಚಾಯ ಲಾಭ’ ಹೇಳಿ ಒಪ್ಪಣ್ಣನ ನಿತ್ಯ ಬವಿಷ್ಯಲ್ಲಿ ಇತ್ತೋ ಏನೋ! ಉಮ್ಮಪ್ಪ!! -ಒರುಂಬುಡಿ ಜೋಯಿಷ ಬಾವನತ್ರೇ ಕೇಳೆಕ್ಕಟ್ಟೆ! 😉

ಮಾಷ್ಟ್ರುಮಾವ ಕೆಂಪುಕುರ್ಶಿಲಿ ಕೂದಂಡಿದ್ದೋರು – ಹ್ಮ್, ಹೇಳಿದವು ಒಪ್ಪಣ್ಣ ಎತ್ತಿಅಪ್ಪಗ.
ಎದುರಾಣ ಹಾಸಿಗೆಕುರ್ಶಿಲಿ (Sofa) ಕೂದೊಂಡೆ, ಮಾತಾಡದ್ದೆ! – ನಿತ್ಯ ಕಾಣ್ತರೆ ಮಾತಾಡ್ಳೆ ಎಂತ ಶುದ್ದಿ ಇದ್ದು ಬೇಕೆ!?
ರಜ ಕಳುದು ನಾವೇ ಸುರು ಮಾಡಿತ್ತು ಮಾತಾಡ್ಳೆ!ಇದೂ – ಶಬರಿಮಲೆದು ಎಂತಾತು ಮತ್ತೆ! ಹೇಳಿಗೊಂಡು.
ನೇರ್ಪಕ್ಕೆ ನೋಡಿರೆ, ಅಲ್ಲಿ ಎಂತ ಆದ್ಸು ಹೇಳ್ತದು ನವಗೆ ಅರಡಿಯ; ಅಂತೂ ಗಡದ್ದಿಂಗೆ ಕೇಳಿತ್ತು! 😉
ಮಾಷ್ಟ್ರುಮಾವ ವಿವರುಸುಲೆ ಸುರುಮಾಡಿದವು.
~

ಈಗೀಗ ಈ ಅಯ್ಯಪ್ಪನ ಮಹಿಮೆ ಜಾಸ್ತಿ ಅಪ್ಪಲೆ ಸುರು ಆದ ಕಾರಣ, ಜೆನ ಹೋಪದು ಸುಮಾರು ಜಾಸ್ತಿ ಆತಡ. ಆದರೆ ಅಲ್ಯಾಣ ಆಂತರಿಕ ವೆವಸ್ತೆಗೊ ಅದಕ್ಕೆ ಸರಿಯಾಗಿ ನೆಡದ್ದಿಲ್ಲೆಡ.
ಈ ಒರಿಶ ಅಲ್ಯಾಣ ಅವಘಡಕ್ಕೆ ನೆಪ ಎಂತದೋ ಅಪಘಾತ ಅಡ – ಹೇಳಿಕ್ಕಿ ತೂಷ್ಣಿಲಿ ವಿವರುಸಲೆ ಸುರುಮಾಡಿದವು.
ಪೂರ್ತ ನೆಂಪಿಲ್ಲದ್ದರೂ – ವಿಷಯ ಹೀಂಗೆ:
ಜೆನಂಗೊ ನೆಡಕ್ಕೊಂಡು ಹೋವುತ್ತ ದಾರಿಲೆ ಒಂದು ಬಸ್ಸು ಬಂತಡ, ಆ ಬಸ್ಸಿನ ಹಿಂದಂದ ಒಂದು
ಜೀಪುದೇ ಬಂತಡ. ಅಲ್ಯಾಣ ಆ ಸಪುರದ ಹಾವುತಿರ್ಗಾಸಿಲೆ ಆಗಿ ಬಪ್ಪಗ ಒಂದಕ್ಕೊಂದು ಹೊಯ್ಕಯ್(Competition) ಸುರು ಆತಡ, ಆ ಜೆನಂಗಳ ಎಡಕ್ಕಿಲೆ ಬಪ್ಪಗ ಗಮನಮಡೂಗಿ, ನಾಜೂಕಿಲಿ – ನಿಧಾನಕ್ಕೆ ಬಪ್ಪ ಬದಲು ಅಂಬೆರ್ಪು ಮಾಡ್ಳೆ ಹೆರಟವಡ, ತಿರ್ಗಾಸಿಲಿ ಬಸ್ಸಿನ ಡ್ರೈವರಂಗೆ ಸಮಗಟ್ಟು ತಿರುಗುಸಲೆ ಎಡಿಗಾಯಿದಿಲ್ಲೆ – ಒಂದೋ ಜಾಸ್ತಿ ಆತು, ಅಲ್ಲದ್ದರೆ ಕಮ್ಮಿ ಆತು ತಿರುಗುಸಿದ್ದು!
ಎರಡುದೇ ರಜ ಒರಸಗೊಂಡವು..  ಬರೆ ಜಾರಿ ಉರುಳಿತ್ತು ಕೆಳಂಗೆ – ಬಸ್ಸು ಈಚ ಹೊಡೆಂಗೆ, ಜೀಪು ಆಚ ಹೊಡೆಂಗೆ!

ಬಸ್ಸು ಉದುರುವಗ ಅಲ್ಲೆ ನೆಡಕ್ಕೊಂಡು ಹೋಗಿಂಡಿದ್ದ ಸಾಮಿಗಳುದೇ ಅಡಿಲಿದ್ದವು ಉರುಳಿದವಡ, ಕೆಲವು ಅಲ್ಲಿಯೇ ತೀರಿಗೊಂಡವು. 🙁
ಬಸ್ಸೊಂದು ಹತ್ತರೆ ಇಪ್ಪದು ಬೀಳ್ತದರ ಕಂಡೋರು ಉರುಡಿ ಆ ಗಡಿಬಿಡಿಲಿ ಓಡಿ, ಬಿದ್ದು, ತಟ್ಟಿ -ಮೆಟ್ಟಿ- ಪೆಟ್ಟಾಗಿ ಕೆಲವು ತೀರಿಗೊಂಡವಡ! 🙁 🙁
ಕೆಲವು ಗಾಯ ಆಗಿ ಮತ್ತೆ ಲೋರಿಲಿ ತೆಕ್ಕೊಂಡು ಹೋಪಗ ದಾರಿ ಮಧ್ಯಲ್ಲಿ ತೀರಿಗೊಂಡವಡ! 🙁 🙁 🙁
~

ಹಾಂಗೆ ನೋಡಿರೆ ಹತ್ತೊರಿಶ ಮೊದಲೇ ಒಂದು ಅವಘಡ ಆಯಿದಡ ಅಲ್ಲಿ, ಬರೆ ಜೆರುದ್ದೋ – ಎಂತದೋ..
ಅಂಬಗಳೇ ಒಂದು ಸಮಿತಿ ಮಾಡಿ ಗೋರ್ಮೆಂಟು ವರದಿ ತರುಸಿದ್ದಡ, ಹೀಂಗ್ರುತ್ತದು ಆಗದ್ದೆ ಇರೇಕಾರೆ ಎಂತ ಮಾಡೇಕು – ಹೇಳ್ತದರ ಅಧ್ಯಯನ ಮಾಡ್ಳೆ. ವರದಿ ಕೊಟ್ಟಿದವು, ತಲೆ ಅಡಿಂಗೆ ಮಡಗಿ ಕೂಯಿದವಡ, ಗೋರ್ಮೆಂಟು!
– ಹೇಳಿದವು ಮಾಷ್ಟ್ರುಮಾವ.
ಈ ಸರ್ತಿಯೂ ಒಂದು ಸಮಿತಿ ಮಾಡಿ ಹಾಂಗೇ ಮಾಡುಗು ಅಂಬಗ – ಹೇಳಿದೆ, ಎಲ್ಲ ಅರಡಿವೋರ ಹಾಂಗೆ!
~

ಅಸಹನೆಯ ಉರುಡಾಣ!

ಮಾಷ್ಟ್ರುಮಾವ ಒಂದು ವಿಶೇಷ ಪೋಯಿಂಟು ಹೇಳಿದವು ಅಷ್ಟಪ್ಪಗ.
ಎಂತದೇ ಸಮಿತಿ ಬರಳಿ, ಎಷ್ಟೇ ಸೌಲಭ್ಯ ಮಾಡ್ಳಿ, ನೂಕುನುಗ್ಗಲು ಅಪ್ಪದರ ಎಂತದೂ ಮಾಡ್ಳೆಡಿಯ.
ಅದೊಂದು ಮನಸ್ಥಿತಿ.
ಎಂತಾರು ಗಡಿಬಿಡಿ ಆದರೆ ತಾನು ಬದುಕ್ಕೇಕು – ಹೇಳ್ತದರ ಗಮನುಸುತ್ತವು, ತನ್ನ ಒಟ್ಟಿಂಗಿಪ್ಪವನೂ ಬದುಕ್ಕೇಕು, ಅವನನ್ನೂ ಒಳಿಶೇಕು – ಹೇಳ್ತದರ ಆಲೋಚನೆಯೇ ಮಾಡ್ತವಿಲ್ಲೆ ಜೆನಂಗೊ..
ಆ ಸಂದರ್ಭಂಗಳಲ್ಲಿ ಅಯ್ಯಯ್ಯೋ – ಹೇಳಿ ಬೊಬ್ಬೆ ಮಾಡಿ ಆರಾರ ಅಡಿಯಂಗೆ ಹಾಕಿ ಓಡುದಲ್ಲ, ಬದಲಾಗಿ ಒಟ್ಟಿಂಗಿಪ್ಪವನೂ ಚೆಂದಲ್ಲಿ ಇದ್ದನ್ನೇ – ಹೇಳಿ ರಕ್ಷಣಾ ಮನೋಭಾವ ಬೆಳೆಶೇಕು- ಹೇಳಿದವು.
ಈಗ ನೋಡು ಒಪ್ಪಣ್ಣಾ – ಸೈನಿಕರು, ಅವರ ಕಾಲಬುಡಲ್ಲಿ ಬೋಂಬು ಹೊಟ್ಟಿರೂ ಒಂದು ಮೆಟ್ಟು ಹಿಂದೆ ಹೋವುತ್ತವಿಲ್ಲೆ, ಅವರ ನೆತ್ತರಿಲಿಪ್ಪ ಕರ್ತವ್ಯದ ಅಂಶ ಅದು! ಹಾಂಗೆ ಒಂದು ವೇಳೆ ಅವು ಹೆದರಿ ಹಿಂದೆ ಬಂದರೆ ಮತ್ತೆ ನವಗೆ ಉಳಿಗ್ಗಾಲ ಇಲ್ಲೆ, ಅದು ಬೇರೆ!
ಮೊನ್ನೆ ಈ ಜೆನಂಗಳೂ ಹಾಂಗೇ – ಗಡಿಬಿಡಿಲಿ ಅಯ್ಯಯ್ಯೋ ಹೇಳದ್ದೆ, ಅಯ್ಯಪ್ಪನ ಗ್ರೇಶಿ ಗಟ್ಟಿ ನಿಂದಿದ್ದರೆ ಆ ದಿನ ದೊಡ್ಡ ಮಟ್ಟಿನ ಹಾನಿ ಎಂತದೂ ಆವುತಿತಿಲ್ಲೆ. ಹಾಂಗೆ ಲಕ್ಷಗಟ್ಳೆ ಜೆನ ಸೇರಿಪ್ಪಗ, ಭಕ್ತರೇ ಆತ್ಮರಕ್ಷಣೆ ಮಾಡಿಗೊಳದ್ರೆ ಸರಕಾರಕ್ಕೆ
ಬಿಟ್ಟು ಅಯ್ಯಪ್ಪಂಗೂ ಎಡಿಯ! – ಹೇಳಿದವು.
ಜಾಸ್ತಿ ಅರ್ತ ಆಗದ್ದರೂ, ಚೆಂದಲ್ಲಿ ಅಪ್ಪಪ್ಪು ಹೇಳಿದೆ ಆನು!
~
ಅಲ್ಲದ್ದರೂ, ಹೇಳಿದ ವಿಶಯ ಸರಿಯೇ – ಮತ್ತೆ ಆಲೋಚನೆ ಮಾಡಿಅಪ್ಪಗ ತಲಗೆ ಹೊಕ್ಕತ್ತು.

ಎಂತದೇ ವೆವಸ್ತೆ ಇದ್ದರೂ, ಇಲ್ಲದ್ದರೂ – ಜೆನಂಗೊ ನೂಕಾಟ ಮಾಡಿ, ಉರುಡಿ, ಹತ್ತರೆ ಇಪ್ಪವನ ಅಡಿಯಂಗೆ ಹಾಕಿ ತಾನು ಬದ್ಕಿಗೊಳ್ತೆ – ಹೇಳಿ ಹೆರಟದೇ ಆ ದಿನದ ಅವಘಡ ಅಷ್ಟು ಜೋರಪ್ಪಲೆ ಕಾರಣ.

ಸಾವಿರಗಟ್ಳೆ ಜನ ಒಟ್ಟಿಂಗೇ ‘ಎನ್ನ ಜೀವ ಒಂದು ಒಳುದಿಕ್ಕಲಿ’ ಹೇಳಿ ನೋಡ್ಳೆ ಹೆರಟ್ರೆ  ಹೇಂಗಕ್ಕು?
ಅಲ್ಲದೋ?
ಈ ಗುಣ ನಮ್ಮ ಆಂತರ್ಯಲ್ಲಿ ಇರೆಕಡ, ಆಪತ್ಕಾಲಲ್ಲಿಯೂ ಇನ್ನೊಬ್ಬನ ಮುಳುಗುಸೆ – ಹೇಳ್ತದು. ಹೇಳಿಕ್ಕಿ ಮಾತು ನಿಲ್ಲುಸಿದವು.
~
ಟೀವಿಲಿ ಹೊಸತ್ತೆಂತಾರು ಎಂತಾರು ಇದ್ದೋ – ಹೇಳಿ ವಾರ್ತೆ ನೋಡ್ಳೆ ಸುರುಮಾಡಿದವು.
ಜೆಂಬ್ರಂಗಳ ಶುದ್ದಿ ರಜ ಮಾತಾಡಿದವು. ಎಲ್ಲದಕ್ಕೂ ಹೋಪಲಾಯಿದಿಲ್ಲೆ – ಒಂದೇ ದಿನ ಇದ್ದರೆ ಹೋಪಲಾವುತ್ತಿಲ್ಲೆ ಹೇಳಿಯೂ ಒಪ್ಪಿಗೊಂಡವು!

ಹ್ಮ್, ಇನ್ನೆಂತರ ಕೆಲಸ, ಇರುಳಿರುಳಾತು. ಈಗ ಇರುಳಪ್ಪದೂ ಬೇಗವೇ!
ಸುಮ್ಮನೆ ಅಲ್ಲಿ ಹೊತ್ತು ಕಳದರೆ ಎಂಗಳ ಬೊಬ್ಬೆಲಿ ಅವರ ಮಗಳಿಂಗೆ ಓದಲೆಬರವಲೆ ತಾಪತ್ರೆ ಅಕ್ಕು ಇದಾ!!
ಮೆಲ್ಲಂಗೆ ಹೆರಡ್ಳೆ ಆಲೋಚನೆ ಮಾಡಿದೆ..

ಮಾಷ್ಟ್ರುಮಾವ ಎಲೆಮರಿಗೆ ತೆಕ್ಕೊಂಡವು, ಮುಚ್ಚಲು ತೆಗವ ಶಬ್ದ ಕೇಳಿದ ಮಾಷ್ಟ್ರುಮನೆಅತ್ತೆ ಮನೆ ಒಳಂದಲೇ – ಈಗ ಎಲೆ ತಿನ್ನೆಡಿ, ಆಸರಿಂಗೆ ಕುಡಿವಲಾತು – ಹೇಳಿದವು.
ಅದಾ – ಮಾಷ್ಟ್ರುಮಾವ ಎಲೆಮರಿಗೆ ಪುನಾ ಕೆಳ ಮಡಗಿ ಎಲೆ ತಿಂತ ಆಲೋಚನೆಯ ಮುಂದೆ ಹಾಕಿದವು,
ನಾವು ಹೆರಡ್ತ ಆಲೋಚನೆಯನ್ನೂ ಮುಂದೆ ಹಾಕಿತ್ತು 😉
ಅದಿರಳಿ!
~
ಚಾಯವುದೇ – ಕುಳ್ಳಾಜೆಉಪ್ನಯನಂದ ಕೊಟ್ಟು ಕಳುಸಿದ ಹೋಳಿಗೆಯೂ ಸಿಕ್ಕಿತ್ತು.
ತಿಂದೋಂಡಿಪ್ಪಗ ಯೋಚನೆಬಂತು ಒಪ್ಪಣ್ಣಂಗೆ, ನಾವಾದರೂ ಅಷ್ಟೇ, ಜೀವನಲ್ಲಿ ಅಯ್ಯಯ್ಯೋ ಹೇಳಿ ಇನ್ನೊಬ್ಬನ ಅಡಿಯಂಗೆ ಹಾಕಿ ಓಡುದರಿಂದ, ದೇವರು ಮಡಗಿದ ಹಾಂಗೆ ಆವುತ್ತು – ಹೇಳಿಗೊಂಡು, ತಾನೂ, ತನ್ನ ಒಟ್ಟಿಂಗೆ ಇಪ್ಪವನನ್ನೂ ಒಳಿಶಿಗೊಂಬಲೆ ಹೆರಟ್ರೆ ಇಡೀ ಸಮಾಜವೇ ಚೆಂದ ಅಕ್ಕು! ಅಲ್ಲದೋ?
ಎಂತ ಹೇಳ್ತಿ?
~
ಅಷ್ಟಪ್ಪಗಳೇ ಟೀವಿಲಿ ಒಂದು ವಾರ್ತೆ ಕಂಡತ್ತು:
ಕೇರಳ ಸರಕಾರ ಈಗ ಅಯ್ಯಪ್ಪನನ್ನೇ ಅಡಿಯಂಗೆ ಹಾಕಲೆ ಹೆರಟಿದಡ, ಜ್ಯೋತಿಯ ಸತ್ಯಾಸತ್ಯತೆಯ ಕೇಳಿಗೊಂಡು!
ಕೋರ್ಟು ಸರಕಾರದ ಕೈಲಿ ವಿವರ ಕೊಡ್ಳೆ ಕೇಳಿದ್ದಡ – ಹಾಂಗಡ, ಹೀಂಗಡ -ಹೇಳಿ ಹೆರಡ್ಳಪ್ಪಗ ಟೀವಿಲಿ ಬಂದುಗೊಂಡು ಇತ್ತು.

ಚೆಲ, ಈಗಳೇ ಈ ಗೋರ್ಮೆಂಟಿಂಗೆ ಇದೆಂತಕಪ್ಪ ತಲೆಬೇನೆ?!
ಅಗತ್ಯ ವೆವಸ್ತೆಯ ಸರಿ ಮಾಡುದು ಬಿಟ್ಟು, ತಲೆತಲಾಂತರದ ನಂಬಿಕೆಗಳ ಪ್ರಶ್ನೆ ಮಾಡುಲೆ ಹೆರಡ್ಸು ಎಂತಕೇ?
ಹೀಂಗೆಲ್ಲ ಮಾಡಿರೆ ಜಿನ್ನಪ್ಪು ಹೇಳಿದಾಂಗೆ ಅಯ್ಯಪ್ಪಂಗೇ ಪಿಸುರು ಬಪ್ಪಲೂ ಸಾಕು!
ಈ ವಿಷಯದ ಅಡಿಂಗೆ ಆ ವಿಷಯ ಬಿದ್ದು, ಜನಂಗೊ ಅದರ ಮರೆಯಲಿ ಹೇಳಿಯೋ? ಉಮ್ಮಪ್ಪ.
ಅಂತೂ ಗೋರ್ಮೆಂಟುದೇ ಅಯ್ಯಯ್ಯೋ ಹೇಳಿ ಹೇಳ್ತಕಾಲಕ್ಕೆ ಅಯ್ಯಪ್ಪನ ಮರದತ್ತೋ –  ಹೇಳಿ ಕಂಡತ್ತು.

ಒಂದೊಪ್ಪ: ಸ್ವಾರ್ಥಲ್ಲಿ ಅಯ್ಯಯ್ಯೋ ಹೇಳುದರಿಂದ, ನಿಸ್ವಾರ್ಥಲ್ಲಿ ಅಯ್ಯಪ್ಪಾ.. ಹೇಳಿ ಭಗ್ತಿಲಿ ಹೇಳಿಗೊಂಡರೆ ಒಳ್ಳೆದಲ್ಲದೋ? ಎಂತ ಹೇಳ್ತಿ?

ಸೂ:

  • *ಶರಣುದಿನಿಗೆಳುದು: ಸ್ವಾಮಿಯೇ…. – ಶರಣಮಯ್ಯಪ್ಪಾ – ಹೇಳ್ತದಕ್ಕೆ ಸಣ್ಣಕೆ ‘ಶರಣು ದಿನಿಗೆಳುದು’ ಹೇಳ್ತವು ಬೈಲಿಲಿ
  • ಪಟಂಗೊ ತೆಗದ್ದಾರು? ಉಮ್ಮಪ್ಪ! ಇಂಟರುನೆಟ್ಟಿಲಿ ಸಿಕ್ಕಿತ್ತು, ಇಲ್ಲಿ ತಂದು ನೇಲುಸಿದೆ, ಅಷ್ಟೆ 🙂

39 thoughts on “ಅಯ್ಯಯ್ಯೋ ಹೇಳುವಗ ಅಯ್ಯಪ್ಪನನ್ನೂ ಮರದವೋ..?!

    1. ಪುಚ್ಚಪ್ಪಾಡಿ ಅಣ್ಣಾ..
      ಒಳ್ಳೆ ಮಾತು ಹೇಳಿದಿ.

      ಬೈಲಿನೋರ ಗಮನಕ್ಕೆ:
      ಪುಚ್ಚಪ್ಪಾಡಿ ಅಣ್ಣನ ಶುದ್ದಿಗೊ ಬೈಲಿಲಿ ಬತ್ತು. ಕಾದೊಂಡಿರಿ.. 🙂

  1. ಒಪ್ಪಣ್ಣೋ.., ಶುದ್ದಿ ಲಾಯ್ಕಾಯಿದು ಯಾವತ್ರಾಣ ಹಾಂಗೆ!!!
    ನಮ್ಮ ಊರಿನ ಗುರುಸ್ವಾಮಿಗಳ, ಅಯ್ಯಪ್ಪನ ವ್ರತಲ್ಲಿಪ್ಪೋರ ಬಗ್ಗೆ, ಅವರ ದಿನಚರಿಯ ಲಾಯ್ಕಲ್ಲಿ ವಿವರ್ಸಿದ್ದೆ.. 🙂

    ಮಾಷ್ಟ್ರು ಮಾವ° ಹೇಳಿದ್ದು ಸತ್ಯದ ಮಾತು. ತುಂಬಾ ಜೆನಂಗ ಸೇರ್ತಲ್ಲಿ ನಾವು ಮಾನಸಿಕವಾಗಿ ಯಾವ ಅವಗಢಕ್ಕೂ ತಯಾರಾಗಿರೆಕ್ಕು. ಆವುತ್ತು ಹೇಳಿಯೇ ಅಲ್ಲ, ಒಂದು ವೇಳೆ ಆದರೆ ಹೇಳಿ…!!!
    ಮಾಷ್ಟ್ರು ಮಾವ° ಹೇಳಿದವಲ್ಲದಾ? ….
    [ಈಗ ನೋಡು ಒಪ್ಪಣ್ಣಾ – ಸೈನಿಕರು, ಅವರ ಕಾಲಬುಡಲ್ಲಿ ಬೋಂಬು ಹೊಟ್ಟಿರೂ ಒಂದು ಮೆಟ್ಟು ಹಿಂದೆ ಹೋವುತ್ತವಿಲ್ಲೆ, ಅವರ ನೆತ್ತರಿಲಿಪ್ಪ ಕರ್ತವ್ಯದ ಅಂಶ ಅದು! ಹಾಂಗೆ ಒಂದು ವೇಳೆ ಅವು ಹೆದರಿ ಹಿಂದೆ ಬಂದರೆ ಮತ್ತೆ ನವಗೆ ಉಳಿಗ್ಗಾಲ ಇಲ್ಲೆ, ಅದು ಬೇರೆ!
    ಮೊನ್ನೆ ಈ ಜೆನಂಗಳೂ ಹಾಂಗೇ – ಗಡಿಬಿಡಿಲಿ ಅಯ್ಯಯ್ಯೋ ಹೇಳದ್ದೆ, ಅಯ್ಯಪ್ಪನ ಗ್ರೇಶಿ ಗಟ್ಟಿ ನಿಂದಿದ್ದರೆ ಆ ದಿನ ದೊಡ್ಡ ಮಟ್ಟಿನ ಹಾನಿ ಎಂತದೂ ಆವುತಿತಿಲ್ಲೆ. ಹಾಂಗೆ ಲಕ್ಷಗಟ್ಳೆ ಜೆನ ಸೇರಿಪ್ಪಗ, ಭಕ್ತರೇ ಆತ್ಮರಕ್ಷಣೆ ಮಾಡಿಗೊಳದ್ರೆ ಸರಕಾರಕ್ಕೆ
    ಬಿಟ್ಟು ಅಯ್ಯಪ್ಪಂಗೂ ಎಡಿಯ! – ಹೇಳಿದವು.]

    ಇದರ ನೋಡಿ ಅಪ್ಪಗ ಮಾಷ್ಟ್ರುಮಾವ° ಸೈನಿಕರ ಮನಸ್ಥಿತಿಯ ಹೇಳಿದ್ದು ನೋಡುವಾಗ ಅಪ್ಪನ್ನೇ!!! ಆ ಸಂದರ್ಭಂಗಳಲ್ಲಿ ನಾವುದೇ ಆ ಸ್ತಿತಿಲೇ ಇರೆಕ್ಕನ್ನೇ ಹೇಳಿ ಆತು. ಅದು ಆರು ಹೇಳಿ ಕೊಟ್ಟು ಬಪ್ಪದಲ್ಲ ನಮ್ಮಲ್ಲೇ ನಾವು ಮಾಡಿಗೊಳ್ಳೆಕ್ಕು ಆ ಮನಃಸ್ಥಿತಿಯ!! ನಮ್ಮ ಬುದ್ಧಿಯ ಪ್ರಚೋದಿಸಿ ಹಾಂಗಿಪ್ಪ ಸಂದರ್ಭಂಗಳ ಎದುರುಸುಲೆ ನೋಡೆಕ್ಕು.
    ಒಪ್ಪಣ್ಣ ಹೇಳಿದ ಹಾಂಗೆ, ಇನ್ನೊಬ್ಬ ಬೀಳುವಾಗ ನಾವು ಆಧರಿಸಿ, ಅವ° ಅವನ ಹತ್ತರೆ ಇಪ್ಪೋನ ಆಧರಿಸಿ ದೇವರು ಮಡಗಿದ ಹಾಂಗೆ ಆವುತ್ತು ಹೇಳಿ ಭಾರ ದೇವರ ಮೇಲೆ ಹಾಕಿ ನಿಂದರೆ ನಾವೂ ಒಳಿಗು.. ಎಲ್ಲೋರೂ ಒಳಿಗು.. ಸಮಾಜವೇ ಒಳಿಗು!!!!

    ಕೆಟ್ಟ ಘಟನೆಗ ಆದಪ್ಪಗ ಅದರ ತಪ್ಪುಸುಲೆ ನೂರು ಯೋಚನೆಗ ರಾಜಕೀಯದವ್ವು ಮಾಡ್ತವು. ಶಬರಿಮಲೆಲಿ ಈಗ ಜ್ಯೋತಿಯ ಬಗ್ಗೆ ಅಸಲಿ ನಕಲಿ ಹೇಳಿ ಇಪ್ಪದರ ಬಗ್ಗೆ ಚರ್ಚೆ ಮಾಡ್ಸಿ ಎಲ್ಲೋರ ದಾರಿ ತಪ್ಪುಸುಲೆ ನೋಡ್ತವು.

    ಮನುಷ್ಯನ ನಂಬಿಕೆ, ಶ್ರದ್ಧೆಯ ಪರೀಕ್ಷೆ ಮಾಡಿ ಒಂದರಿಯಂಗೆ ಘಟನೆ ನಡದ್ದರ ತೇಪೆ ಹಾಕಿ ಮುಚ್ಚುಲೆ ಎಡಿಗು. ಈಗಾಗಲೇ ಕೆಲವು ಸರ್ತಿ ಈ ರೀತಿ ನಂಬಿಕೆಗೆ ಮಾರಕ ಅಪ್ಪ ಹಾಂಗೆ ಇಪ್ಪ ಪ್ರಚಾರಂಗಳ ಮಾಡಿದವು.
    ಸಾವಿರಾರು ವರ್ಷದ ಇತಿಹಾಸ ಇಪ್ಪ, ಸಮಯ ತಪ್ಪದ್ದೆ ಕ್ರಮಪ್ರಕಾರ ಕಾರ್ಯಕ್ರಮಂಗಳ ಆಯೆಕ್ಕಾದ ಹಾಂಗೆ ನಡೆಶಿಗೊಂಡು ಬತ್ತಾ ಇಪ್ಪ ಒಂದು ಕ್ಷೇತ್ರದ ಬಗ್ಗೆ ಅಪನಂಬಿಕೆ ತಪ್ಪಲಕ್ಕು. ಆದರೆ, ಅದರ ಹಿಂದೆ ಇಪ್ಪ ಜನಂಗಳ ಭಾವನೆಯ, ದೇವರ ಮೇಲಿನ ಭಕ್ತಿಯ, ಹಿಂದಾಣ ಕಾಲಂದಲೇ ಬಂದ ಸಂಪ್ರದಾಯವ ಪ್ರಶ್ಣೆ ಮಾಡಿದರೆ ಯಾವ ದೇವರು ಮೆಚ್ಚುಗು?
    ನಮ್ಮ ಹಿಂದಾಣೋರು ಮಾಡಿ ಕೊಟ್ಟ ಪ್ರತಿಯೊಂದು ಕಟ್ಟಳೆಗಳ ಹಿಂದೆ ನಮ್ಮ ಜೀವನಕ್ಕೆ ಬೇಕಾದ ಒಳ್ಳೆಯ ಮಾರ್ಗಂಗ ಇರ್ತು. ಅದರ ಸಾಧಿಸಿ ಬಪ್ಪಲೆ ಒಂದೊಂದು ವಿಶೇಷ ಅನ್ನುಸುವ ಕ್ರಮಂಗಳ ಮಡುಗುತ್ತವು. ಜೀವನದ ಒಂದೊಂದು ಮೆಟ್ಟಲು ನಾವು ಮುಂದೆ ಹೋದಪ್ಪಗ ನವಗೆ ಇದರ ಅನುಭವ ಆವುತ್ತು.
    ನವಗೆ ಬೇಕಾದ್ದದರ, ಇನ್ನೊಬ್ಬಂಗೆ ಉಪದ್ರ ಮಾಡದ್ದೆ ನಮ್ಮ ಜೀವನ ಚೆಂದ ಮಾಡ್ಲೆ ಅನುಕೂಲ ಅಪ್ಪದರ ನಾವು ಮಾಡುವ°.
    ನಾವೂ ಒಳಿವ°.., ಮತ್ತೊಬ್ಬನನ್ನೂ ಒಳಿಶುವ° ಅಲ್ಲದಾ?

    ಒಂದೊಪ್ಪ ಲಾಯ್ಕಾಯಿದು.

    1. ಶ್ರೀಅಕ್ಕಾ°..
      ಎಷ್ಟು ಒಳ್ಳೆ ಒಪ್ಪ! ಎಂತ ಹೇಳಲಿ ಇದಕ್ಕೆ ಉತ್ತರ!!

      ಮಾಷ್ಟ್ರುಮಾವನ ಮಾತನ್ನೇ ತೆಕ್ಕೊಂಡು ಆರಂಭಮಾಡಿ, ನಮ್ಮ ಸಂಪ್ರದಾಯದ ವಿಚಾರಲ್ಲಿ ಜೀವನವ ಚೆಂದಮಾಡೇಕು ಹೇಳ್ತ ಮಾತಿನ ಹೇಳಿದಿ.
      ಒಪ್ಪಣ್ಣಂಗೆ ತುಂಬ ಕೊಶಿ ಆತು..

      ಹರೇರಾಮ

    1. ಪಕಳಕುಂಜಮಾವಾ°..
      ನಿಂಗಳ ಪ್ರೋತ್ಸಾಹ ಯೇವತ್ತೂ ಇರಳಿ.
      ಬೈಲಿಲಿ ಸುಮಾರು ಜೆನರ ಶುದ್ದಿಗೊಇದ್ದು, ಎಲ್ಲದಕ್ಕೂ ಒಪ್ಪ ಕೊಟ್ಟು ಪ್ರೋತ್ಸಾಹಿಸೇಕು – ಹೇಳ್ತದು ಒಪ್ಪಣ್ಣನ ಕೋರಿಕೆ… 🙂

  2. ವಿವರಣೆ ಲಾಯಿಕಾಯಿದು! ಬೆಶಿನೀರಿಂಗೆ ಕಿಚ್ಚು ಹಾಕಲೆ ಹೆರಟ ಮಾಷ್ಟ್ರಮನೆ ಅತ್ತೆಗೆ ಜಾಲಿಲೆ ಆಗಿ ಹೋಪ ಒಪ್ಪಣ್ಣನ ಕಂಡು ಜೋರು ಕೇಳಿದ್ದು – ಎಂತ ಒಪ್ಪಣ್ಣಾ, ಒಳ ಬತ್ತಿಲ್ಲೆಯೋ – ಅಲ್ಲೇ ಹೋಪದಾ – ಹೇಳಿಗೊಂಡು!
    ಹಾಂಗೆ ಒಳ ಹೊಗ್ಗಿದ್ದು – ಒಂದು ಗಳಿಗ್ಗೆ ಹೇಳಿಗೊಂಡು. ಮತ್ತೆ ಅಲ್ಲಿಂದ ಹೆರಡುವಗ ಗಳಿಗೆ ಸುಮಾರಾದ್ದು, ಮಾಷ್ಟ್ರು ಮಾವ ಎಲೆಮರಿಗೆ ತೆಗವ ಶಬ್ದ ಕೇಳಿ ಅತ್ತೆ ಒಳಂದ ಈಗ ಎಲೆ ತಿನ್ನೆಡಿ, ಆಸರಿಂಗೆ ಕುಡಿವಲಾತು ಹೇಳಿದ್ದು, ಚಾಯವುದೇ – ಉಪ್ನಯನಂದ ಕೊಟ್ಟು ಕಳುಸಿದ ಹೋಳಿಗೆಯೂ ಸಿಕ್ಕಿದ್ದು, – ಇದೆಲ್ಲಾ ಕಣ್ಣೆದುರು ಕಂಡ ಹಾಂಗೇ ಅವುತ್ತನ್ನೆ, ಒಪ್ಪಣ್ಣಾ!!

    1. ಸೂಕ್ಷ್ಮಗ್ರಾಹಿತ್ವ

      1. ಸರ್ಪಮಲೆ ಮಾವಾ°…
        ಒಪ್ಪಣ್ಣನ ಶುದ್ದಿ ನಿಂಗೊಗೆ ಕೊಶಿ ಆದ್ಸರ ಕಂಡು ಒಪ್ಪಣ್ಣಂಗೆ ಬಾರೀ ಕೊಶಿ ಆತು! 🙂
        ನಿಂಗಳಂತ ಹೆರಿಯೋರು ಬೆನ್ನುತಟ್ಟಿರೆ ಶುದ್ದಿ ಹೇಳುಲುದೇ ಒಂದು ಊಕು ಇರ್ತಿದಾ!

        ಅದೆಲ್ಲ ಸರಿ,
        ಶುದ್ದಿ ಹೇಳಿದ್ದು ಚೆಂದ ಆಯಿದು ಹೇಳಿ ನಿಂಗೊ ಹೇಳ್ತಿ, ಆದರೆ – ’ಇದ್ದದರ ಪೂರಾ ಬೈಲಿಂಗೆ ಹೇಳ್ತ°’ ಹೇಳಿ ಮಾಷ್ಟ್ರಮನೆ ಅತ್ತೆ ಪರಂಚುತ್ತಾ ಇದ್ದವು! ಈಗ ಎಂತರ ಮಾಡ್ಳಿ! 😉

        1. ಅದಕ್ಕೆ “ಪೇಪರು” ಹೇಳ್ತದು.

  3. ಶುದ್ದಿಯ ಒಟ್ಟಿ೦ಗೆ ಮಾಡಿದ ವಿಮರ್ಶೆ ಲಾಯಿಕ ಆಯಿದು ಒಪ್ಪಣ್ಣಾ.
    ಜೀವನಲ್ಲಿ ಪ್ರತಿಯೊ೦ದು ವಿಷಯವೂ ಪೈಸೆಯ ವ್ಯವಹಾರ ಆದರೆ ಹೀ೦ಗೇ ಅಲ್ಲದೋ?ಜೆನ ಭಗುತಿ ಶ್ರದ್ಧೆಲಿ ಹೋದರುದೆ,ಅಲ್ಲ್ಯಾಣ ಅವ್ಯವಸ್ಥೆಯ ನೋಡಿರೆ ಆರಿ೦ಗೂ ಬೇಡ ಹೇಳಿ ಜೆನ ಹೇಳೊದು ಕೇಳಿತ್ತಿದ್ದೆ.
    ಒಟ್ಟಾರೆಲಿ,ನಾವು ಬದುಕ್ಕೆಕ್ಕು,ಒಳುದೋರ ಬದುಕ್ಕುಸೆಕ್ಕು ಅಲ್ಲದೋ?

    1. ಅಲ್ಯಾಣ ಅವ್ಯವಸ್ಥೆ ಸರಿಮಾಡ್ಳೆ ಪಿರಿ ಎಂತರ?
      ಜೆನಂಗೊಕ್ಕೆ ಬೇಡ, ಗೋರ್ಮೆಂಟಿಂಗೆ ಮನಸ್ಸಿಲ್ಲೆ!

      ಭಕ್ತರು ಬದುಕ್ಕಿರೆ ಒಪಾಸು ಬತ್ತವು! 🙁

  4. ಶುದ್ದಿ ಲಾಯ್ಕಾಯ್ದು ಒಪ್ಪಣ್ಣೋ…
    ಬೇಜಾರಾತು ಅಲ್ಯಾಣ ಅವಸ್ಥೆ ಗ್ರೇಶಿ…ಎಂತ ಮಾಡುದು ಸಾವು ಎದುರು ಬಪ್ಪಗ ಹೇಂಗಾರು ಎನ್ನ ಜೀವ ಒಳುದರೆ ಸಾಕು ಹೇಳಿ ಗ್ರೇಶುದೇ ಹೆಚ್ಚು 🙁 ..ಒಂದೊಪ್ಪ ಅಂತೂ ಲಾಯ್ಕಾಯ್ದು…

    ಮಾಷ್ಟ್ರು ಮಾವನ ಮಗಳಿಂಗೆ ಪರೀಕ್ಷೆ ಇತ್ತು ಹೇಳಿ ಕಾಣ್ತು..ಅಲ್ಲದ್ರೆ ಒಪ್ಪಣ್ಣನತ್ರೆ ಜಗಳ ಮಾಡುಲಾದರು ಪುರುಸೊತ್ತಿರ್ತಿತು 😀

    1. ಒಪ್ಪಕ್ಕೋ..
      ನೀ ಇದ್ದೆಯೋ ಬೈಲಿಲಿ – ಹೇಳಿ ಎಲ್ಲೋರುದೇ ಕೇಳಿಗೊಂಡಿತ್ತಿದ್ದವು, ಬಂದದು ಬಾರೀ ಕೊಶಿ ಆತು.
      ಇಷ್ಟೂ ಅಪುರೂಪ ಆಗೆಡ ಕೂಸೇ, ಗುರ್ತ ಮರಗು ಎಲ್ಲೋರಿಂಗೂ… 🙂

      ಅದಿರಳಿ, ಮಾಷ್ಟ್ರುಮಾವನ ಮಗಳಿಂಗೆ ಪರೀಕ್ಷೆ ಇದ್ದ ಸಮೆಯಲ್ಲಿ ಅಲ್ಲಿ ಮೌನ ಇರ್ತು ರಜ!
      ಎಂಗೊಗೆ ಅದುವೇ ಕೊಶಿ! 🙂

      1. ಎಂತ ಒಪ್ಪಣ್ಣ , ಅಷ್ಟುದೇ ಹೊದಳು ಹೊರಿತ್ತವೋ? ಸುಮ್ಮನೇ ಹೇಳ್ಳಾಗ. ಅವಕ್ಕೆ ಬೇಜಾರ ಅಕ್ಕು.

  5. ಶಬರಿಮಲೆಲಿ, ಅಪ್ಪಲೆ ಆಗದ್ದ ಹಾಂಗಿಪ್ಪ ಘಟನೆ ಆಗಿ ಹೋತು.
    ಮೂಲ ಕಾರಣ ಸೌಕರ್ಯದ ಕೊರತೆ, ಮತ್ತೆ ಮಾಹಿತಿ ಕೊರತೆ. ಸರಕಾರ ಇದಕ್ಕೆ ಸರಿಯಾದ ವೆವಸ್ಥೆ ಮಾಡದ್ದೆ, ಮಕರ ಜ್ಯೋತಿಯ ನಂಬಿಕೆಯ ಬಗ್ಗೆ ಮಾತಾಡ್ಲೆ ಹೆರಡುವದು ಹೇಳಿರೆ, ವಿಶಯಾಂತರ ಮಾಡುವದಲ್ಲದ್ದೆ ಮತ್ತೆಂತ ಅಲ್ಲ. ಹಿಂದುಗಳ ನಂಬಿಕೆಯ ಪ್ರಶ್ನೆ ಮಾಡ್ತ ಹಾಂಗೆ ಬೇರೆ ಮತದವರ ಪ್ರಶ್ನೆ ಮಾಡ್ತ ತಾಕತ್ತು ಯಾವ “ಬುದ್ಧಿ ಜೀವಿ” ಹೇಳ್ತವಕ್ಕು ಕೂಡಾ ಇಲ್ಲೆ.
    ಸಂಕಟ ಬಂದಾಗ ವೆಂಕಟರಮಣ ಹೇಳ್ತ ಮಾತು ಇದ್ದು. ಅಂದ್ರಾಣ ದಿನ ಎಲ್ಲರೂ ಅಯ್ಯಪ್ಪನನ್ನೇ ನಂಬಿ, ನೂಕು ನುಗ್ಗಲು ಮಾಡದ್ದರೆ ಈ ಘಟನೆ ನಡೆಯದ್ದೆ ಇರ್ತಿತ್ತಾ ಎಂತ. ಮೊದಾಲು ಆನು ಬಚಾವ್ ಆವ್ತೆ ಹೇಳುವ ಒಂದೇ ಭಾವನೆಲಿ ಅವನ ಎಲ್ಲಾ ಅಲೋಚನೆ ಶಕ್ತಿಯ ಕಳಕ್ಕೊಳ್ತ.
    ಅಯ್ಯಪ್ಪ ವ್ರತಧಾರಿಗಳ ಕೆಲವು ಅವಾಂತರಂಗಳ ಅನುಭವ ಆಯಿದು. ವ್ರತ ನಿಯಮಂಗಳ ಅನುಸರಿಸದ್ದೆ, ಬೇಡಂಕಟ್ಟೆ ಮಾಡ್ತವು ಎಷ್ಟೋ ಜೆನಂಗೊ ಇದ್ದವು.
    ಒಂದು ವಾಸ್ತವ ಸಂಗತಿಯ ವಿಚಾರಕ್ಕೆ ಪ್ರಚೋದನೆ ಕೊಡ್ತ ಹಾಂಗೆ ಬರದ್ದು ಲಾಯಿಕ ಆಯಿದು

    1. ಶರ್ಮಪ್ಪಚ್ಚೀ..
      ಎಂತದೇ ಆಗಿರಳಿ, ಸರಕಾರಕ್ಕೂ – ಸಮಾಜಕ್ಕೂ ಒಂದು ಎಚ್ಚರಿಗೆ ಗಂಟೆಯೇ ಅಲ್ಲದೋ ಇದು?
      ಎಂತ ಹೇಳ್ತಿ?

      ಒಪ್ಪ ಒಪ್ಪಕ್ಕೆ ಒಪ್ಪಂಗೊ.

  6. ಶಬರಿಮಲೆ ದುರ್ಘಟನೆಯ ಬಗ್ಗೆ ನೈಜ ವರದಿಯ ಒಪ್ಪಣ್ಣ ಬೈಲಿಂಗೂ ಕೊಟ್ಟಿದ. ಜೆನಂಗಳ ಗಡಿಬಿಡಿಯ ಎಡೆಲಿ ಅದೊಂದು ಅವಘಡ ನೆಡದಪ್ಪಗ ಆದ ಈ ಘಟನೆಯ ಗ್ರೇಸುವಗ ಬೇಜಾರು ಆವುತ್ತು. ಒಪ್ಪಣ್ಣ ಹೇಳಿದ ಹಾಂಗೆ ಅಯ್ಯಯ್ಯೋ ಹೇಳದ್ದೆ, ಅಯ್ಯಪ್ಪನ ಮನಸ್ಸಿಲ್ಲಿ ಗ್ರಹಿಸಿ ಓಡದೆ ಇದ್ದರೆ ಎಂತೂ ಆವುತ್ತಿತಿಲ್ಲೆ. ಇನ್ನೊಬ್ಬನ ಕಾಲು ಎಳದು ತಾನು ಮೇಲೆ ಬರೆಕು, ತಾನು ರೈಸೆಕು ಹೇಳ್ತದು ಬಿಟ್ಟು ಎಲ್ಲೋರು ಒಟ್ಟಿಂಗೆ ಬೆಳವ ಹೇಳ್ತ ಭಾವನೆ ಎಲ್ಲೋರಿಂಗು ಬಂದರೆ ಎಲ್ಲವೂ ಸರಿ ಅಕ್ಕು.
    ರಾಜಕೀಯ ಹೇಳ್ತ ವಿಷಯ ಈಗ ಪ್ರತಿಯೊಂದು ವಿಚಾರಂಗವಕ್ಕೂ ಪ್ರವೇಶ ಆಯಿದು. ಮಕರವಿಳಕ್ಕಿನ ಬಗ್ಗೆ ಸರಿಯಾದ ಮಾಹಿತಿಯನ್ನೇ ಕೊಟ್ಟಿದ ಗಣೇಶ. ಆದರೆ, ವಿಚಾರವಾದಿಗೊ ಜೆನರ ನಂಬಿಕೆಯ ಕೆಣಕೆಕಾದ ಅವಶ್ಯಕತೆ ಇಲ್ಲೆ. ಅವರವರ ನಂಬಿಕೆ ಅವಕ್ಕವಕ್ಕೆ. ಪ್ರಚಲಿತ ವಿಷಯದ ಬಗ್ಗೆ ಎಲ್ಲೋರಿಂಗು ಮಾತಾಡ್ಳೆ ಅನುವು ಮಾಡಿಕೊಟ್ಟ ಒಪ್ಪಣ್ಣಂಗೆ ಧನ್ಯವಾದಂಗೊ.

    1. ಸರಿಯಾದ ಸಂಗತಿ, ಬೊಳುಂಬುಮಾವ.
      ಒಂದು ನಾಗರೀಕತೆಯ ನಂಬಿಕೆಗೆ ವಿರುದ್ಧವಾಗಿಪ್ಪ ಸಂಗತಿಯ ಇವು ಹುಡ್ಕಿರೆಂತ, ಬಿಟ್ರೆಂತ – ಅಲ್ಲದೋ?

  7. ಸತ್ಯ ಏವತ್ತಿದ್ದರೂ ಸತ್ಯವೇ. ಲೊಟ್ಟೆ ಹೇಳಿ ಶ್ರದ್ಧಾ ಭಕ್ತಿಗಳ ದುರುಪಯೋಗ ಅಪ್ಪದು ಬೇಡ. ಸತ್ಯ ಹೆರಬರಳಿ; ಭಕ್ತರಿಂಗೆ ವ್ಯವಸ್ತೆ ಮಾಡಲಿ.

    1. ಜೋಯಿಶಣ್ಣಾ..
      ಸತ್ಯ ಹೆರಬಂದರೆ ಗೋರ್ಮೆಂಟಿಂಗೆ ಕಷ್ಟ ಅಕ್ಕಡ, ಅದಕ್ಕೆ ಅವು ಬೇರೆಂತದೋ ಕಾರಣಲ್ಲಿ ವಿಶಯ ಬದಲುಸುತ್ತದಡ! – ಹೇಳ್ತವು ರಂಗಮಾವ°.
      ಅಪ್ಪೋ?

      1. ಈ ಕೆಂಪಣ್ಣಂಗಳುದೇ ಮಾತಾಡ್ತದು ಕಂಡ್ರೆ ರಂಗಮಾವ° ಹೇಳ್ತದಪ್ಪು.

  8. ನ೦ಬಿಕೆಯ ದುರುಪಯೋಗದ ಪರಮಾವದಿ.ಸರ್ಕಾರಕೂಡಾ ಸೇರಿಯೊ೦ಡು ಮಾಡ್ತ ಒ೦ದು ಮೋಸದಾಟ.ದೇವರಮೇಲೆ ನ೦ಬಿಕೆ ಇರಳಿ ಆದರೆ ಅದು ಅಸಹ್ಯ ಆವುತ್ತ ಮಟ್ಟಕ್ಕೆ ಹೋಪಲಾಗಾಎ.ಇ೦ದು ನಿ೦ಗೊ ಕಪ್ಪು ವಸ್ತ್ರ ಸುತ್ತಿದವರಸ್ತ್ರೆ ಹೋಪಾಗಳೂ ಜಾಗ್ರತೆ ಮಾಡೇಕಾದ ಸ್ತಿತಿ.ಹತ್ತರೆ ಎತ್ತಿಯಪ್ಪಗ ಅವ್ವು ಅಯ್ಯಪ್ಪ ಹೇಳಿಯಪ್ಪಗ ಒ೦ದಾರಿ ಜೀವ ಮೇಗೆ ಕೆಳ ಆವುತ್ತು.ನಿನ್ನೆ ಕಸ್ತಲೆ ವರೆಗೂ ತಲಗೊರೆಗೆ ಹೊಯ್ಕೊ೦ಡು ಮಾರ್ಗದ ಕರೇಲಿ ಬಿದ್ದೊ೦ಡು ಇದ್ದವ ಇ೦ದೊ೦ದು ಕಪ್ಪು ವಸ್ತ್ರ ಸುತ್ತಿ ಸ್ವಾಮಿ ಹೆಳುಸಿಯಪ್ಪಗ ಭಯ ಭಕ್ತಿ ಬಕ್ಕು ಹೇಳಿಯೂ ಅವರ ಸ್ವಾಮಿ ನೀವು ಹೇಳೇಕು ಹೇಳೀರೆ ಬಾರೀ ಕಷ್ಟ.ಅನಾಚಾರ ಮಾಡೀರೆ ಹಿ೦ದೆ ಎಲ್ಲಾ ಹಿ೦ಸ್ರಾ ಪ್ರಾಣಿಗೊ ಅವಕ್ಕೆ ಶಿಕ್ಷೆ ಕೊಡುಗಾಡ ಈಗ ವಾಹನ೦ಗೊ ಅಥವಾ ಹಿ೦ಗಿಪ್ಪ ಪರಿಸ್ಥಿತಿಗೊ ಶಿಕ್ಷೆ ಕೊಡುತ್ತು.ಒಣಕ್ಕೂ ಹಸಿಯೂ ಒಟ್ಟು ಹೊತ್ತುತ್ತದಲ್ಲದೊ ಕೆಲವು ಒಳಯವೂದೆ ಇದರಲ್ಲಿ ಹೋವುತ್ತವು ಅದು ಪ್ರಕ್ರುತಿ ನಿಯಮ.ಇನ್ನು ಸರ್ಕಾರದ್ದ೦ತೂ ಬೇಜವಾಬ್ದಾರಿಯ ಪರಮಾವದಿ.ಎಲ್ಲೆಲ್ಲೂ ಪೈಸೆ ಮಾಡುವ ರಾಜಕೀಯದವು ತು೦ಬಿದ ಈ ಕಾಲಲ್ಲಿ ಇದರಿ೦ದ ಹೆಚ್ಹು ನಿರಿಕ್ಷಿಸಲೇ ಎಡಿಯ.ಒಪ್ಪ೦ಗಳೊಟ್ಟಿ೦ಗೆ

    1. ಮೋಹನಮಾವಾ..
      ಕೆಲವು ಸ್ವಾಮಿವೇಷಧಾರಿ ಸ್ವಾಮಿಗಳ ಬಗ್ಗೆ ಚೆಂದಲ್ಲಿ ಬರದ್ದಿ. 🙂

      ನಿಂಗಳ ಒಪ್ಪ ಪಟ ಕಂಡು ಭಾರೀ ಸಂತೋಷ ಆತಿದಾ!

  9. ಸ್ವಾಮಿಯೇ ಶರಣಮಯ್ಯಪ್ಪ.
    ಶಬರಿಮಲೆ ದೇವಸ್ತಾನ ಇಪ್ಪದು ಒ೦ದು ದೊಡ್ಡ ಕಾಡಿನ ನಡುಕೆ ಆದ ಕಾರಣ ಅಲ್ಲಿ ವ್ಯವಸ್ತೆಗ ತು೦ಬಾ ಕಮ್ಮಿ. ಮೊದಲಾದರೆ ಕಮ್ಮಿ ಜನ೦ಗ ಇಪ್ಪ ವ್ಯವಸ್ಥೆಲಿಯೇ ಸುದಾರುಸಿಗೊ೦ಡು ಇತ್ತವು. ಅದೂ ಅಲ್ಲದ್ದೆ ಕಲ್ಲು ಮುಳ್ಳು ಪೊರ್ಲುದ ಸಾದಿ ಹೇಳ್ತಾ೦ಗೆ ಬಪ್ಪ ಭಕ್ತ೦ಗಳೂ ಆಡ೦ಬರ೦ಗಳ ಆಶಿಸಿಗೊ೦ಡಿತ್ತವಿಲ್ಲೆ. ಆನು ಮೂರು ವಷ ಮೊದಲು ಶಬರಿಮಲೆಗೆ ಹೋದಿಪ್ಪಗಳೂ ಅಲ್ಲಿ ಲಕ್ಷ ಲಕ್ಷ ಜೆನ ಒ೦ದರಿಯೇ ಸೇರಿರೆ ಸುದರಿಕೆ ಮಾಡುವಶ್ಟು ಮೂಲ ಸೌಕರ್ಯ೦ಗ ಇತ್ತಿದ್ದಿಲ್ಲೆ. ಕುಡಿವ ನೀರು, ವಸತಿ, ಸ್ನಾನ ಶೌಚ, ಆರೋಗ್ಯ ಇದೆಲ್ಲವೂ ಸಮಸ್ಯೆಯೇ. ಇಶ್ಟು ಆದಾಯ ಬಪ್ಪ ಜಾಗೆಗೆ ಬೇಕಾದ ವ್ಯವಸ್ಥೆ ಮಾಡೆಕ್ಕಾದ್ದು ಸರ್ಕಾರದ ಕೆಲಸ ಆಗಿತ್ತು. ನಮ್ಮ ಪೈಸೆಲೆ ಹಜ್ ಯಾತ್ರೆಯ ಪ್ರಾಯೋಜಿಸುಲೆ ಮಾತ್ರ ಇವಕ್ಕೆ ಎಡಿಗಪ್ಪದು. ಅಮರನಾಥ ಯಾತ್ರೆಲಿ ನಮ್ಮವು ಎಶ್ಟು ಕಶ್ಟ ಬತ್ತವು?

    1. ಡಾಗುಟ್ರಿಂಗೆ ಆರೋಗ್ಯದ ಸಮಸ್ಯೆಯ ಮೇಗೆಯೇ ಕಣ್ಣು!
      ಒಳ್ಳೆದೇ ಅಪ್ಪ.. 🙂

      ಜೆನಂಗೊ ಕಟ್ಟಿದ ತೆರಿಗೆ ಪೈಸೆ ಪೂರ ಹಜ್ ಯಾತ್ರೆಗೆ ಸರೀ ಆವುತ್ತಟ್ಟೆ, ಅಮರನಾತಕ್ಕೆ ಹೋಪಲೆ ಎಲ್ಲಿಂದ ಒಳಿತ್ತು – ಹೇಳಿ ಕೇಳ್ತವು ನಮ್ಮ ನೀರ್ಕಜೆ ಅಪ್ಪಚ್ಚಿ ಒಂದೊಂದರಿ! 🙂

      1. ಮೋದಿಯತ್ರೆ ಕೈಲಾಸ ಯಾತ್ರೆ ಹೋವುತ್ತವಕ್ಕೆ ಕೊಡ್ಲೆ ಪೈಸೆ ಇದ್ದು. ಯಡ್ಯೂರಪ್ಪನತ್ರೂ ರಜ್ಜ ಇದ್ದು. ಅಷ್ಟು ಪೈಸೆ ಬತ್ತರೂ ಶಬರಿಮಲೆಲಿ ಎಂತದೂ ಇಲ್ಲೆ.

  10. ಅಲ್ಲಿ ನೂಕುನುಗ್ಗಲಿಲ್ಲಿ ಜೀವ ಕಳಕ್ಕೊ೦ಡ ಭಕ್ತರೆಲ್ಲರಿ೦ಗುದೆ ದೇವರು ನಿತ್ಯಶಾ೦ತಿ ಕರುಣಿಸಲಿ..
    ಮಕರಜ್ಯೋತಿ/ಮಕರವಿಳಕ್ಕ್ ಹೇಳಿ ಹೇಳ್ತ, ಪೊನ್ನ೦ಬಲಮೇಡು ಹೇಳುವ ಗುಡ್ಡೆ೦ದ ಮಕರ ಸ೦ಕ್ರಮಣದ ದಿನ ಕಾಣ್ತ ಬೆಣಚ್ಚು ಮನುಷ್ಯನಿರ್ಮಿತ ಅಲ್ಲ, ಅದು ಎ೦ತದೋ ಪವಾಡ/ ಅದ್ಭುತ ಹೇಳಿ ನ೦ಬುತ್ತ ಲಕ್ಷಗಟ್ಳೆ ಜನ ಈಗಳೂ ಇದ್ದವು, ಆದರೆ ಕೇರಳದ ಹೆಚ್ಚಿನ ಎಲ್ಲಾ ಜಾಗೆಗಳಲ್ಲಿಯುದೆ ಅದು ಮನುಷ್ಯ ನಿರ್ಮಿತ ಹೇಳಿ ೩೦ ವರುಷ ಮೊದಲೇ ಪೇಪರುಗಳಲ್ಲಿ ಬಯಿ೦ದು. ಈ ಸರ್ತಿ ಅದರ ಅಲ್ಲಿಯಾಣ ತ೦ತ್ರಿಗಳು, ಮೊದಲಾಣ ತ೦ತ್ರಿಗಳ ಪುಳ್ಳಿ, ಅಲ್ಲಿಯಾಣ ರಾಜಕುಟು೦ಬದ ರಾಮವರ್ಮ ಅರಸು ಎಲ್ಲರುದೆ ಒ೦ದರಿ ಕೂಡ ಕನ್ ಫರ್ಮ್ ಮಾಡಿದ್ದವು. ಇಷ್ಟಕ್ಕೂ ಅದು ದೈವೀಕ ಪವಾಡ ಹೇಳಿ ದೇವಸ್ಥಾನದವು ಇಷ್ಟರವರೇ೦ಗುದೆ ಎಲ್ಲಿಯೂ ಹೇಳಿದ್ದವಿಲ್ಲೆ. ೫೦-೬೦ ವರುಶ ಮೊದಲು ಈ ಬೆಣಚ್ಚು ಅಲ್ಲಿ ಪ್ರತಿವರುಶ ಕ೦ಡ೦ಡಿತ್ತಿದ್ದೆಲ್ಲೇಡ, ಹೋಗಿ ಗೊ೦ತಿಪ್ಪವು ಹೇಳಿದ್ದದು. ಆ ಸಮಯಲ್ಲಿ ಎರಡೊ ಮೂರೋ ವರುಶಕ್ಕೊ೦ದರಿ ಕಾ೦ಗಾಡ. ಈ ಬೆಣಚ್ಚು ಕಾಣ್ತ ಪೊನ್ನ೦ಬಲಮೇಡಿನ ಕಾಡಿಲ್ಲಿ, ಮೊದಲಾಣ ಕಾಲಲ್ಲಿ ಆದಿವಾಸಿ ಕುಟು೦ಬ೦ಗೊ ಜೀವಿಸಿ೦ಡಿತ್ತಿದ್ದ ಜಾಗೆ, ಅವು ಅಲ್ಲಿ೦ದ ಆರತಿ ಮಾಡುವದಾಯಿಕ್ಕು ಅದು ಹೇಳಿ ರಾಮವರ್ಮ ತ೦ಬುರಾನ್ ಹೇಳಿದ್ದು. ಸುಮಾರು ೫೦ ವರುಶ೦ದ ಇತ್ಲಾಗಿ ಯಾವಗಳೊ ಈ ವಿಶಯ ನಾಗರಿಕರ/ಗವರ್ಮೆ೦ಟಿನ ಗಮನಕ್ಕೆ ಬ೦ದು ಪ್ರತಿ ವರುಶ ಈ ಸಮಯಲ್ಲಿ ಅಲ್ಲ್ಲಿ ಶಬರಿಮಲೆಯ ಹೊಡೇ೦ಗೆ ಅಭಿಮುಖವಾಗಿ ಆರತಿ ಮಾಡ್ಳೆ ಸುರುಮಾಡಿದವು, ಅ೦ಬಗ ಅವು ಕೂಡ ಜಾನ್ಸಿರವು ಇದು ಇಷ್ತು ಪ್ರಸಿದ್ದಿ ಅಕ್ಕು ಹೇಳಿ. ಅದು ಕಾಣ್ತ ಜನ೦ಗೊ ಅದು ಮನುಷ್ಯರು ಆರಾಧನೆ ಮಾಡುವದು / ಆರತಿ ಎತ್ತುವದು ಹೇಳಿ ಗೊ೦ತಾಗದ್ದೆ ಅದು ದೈವನಿರ್ಮಿತ ಪವಾಡ ಹೇಳಿ ಮನಸ್ಸಿಲ್ಲಿ ಒ೦ದರಿ ಜಾನ್ಸಿದ್ದೇ ಜಾನ್ಸಿದ್ದು, ಭಯ೦ಕರ ಪ್ರಸಿದ್ಧಿ ಸುರುವಾತು. ಈಗಳುದೆ, ಕರ್ಣಾಟಕ / ತಮಿಳುನಾಡು/ ಆ೦ಧ್ರ ಸೇರಿಸಿ ಹಲವು ರಾಜ್ಯ೦ಗಳಿ೦ದ ಬತ್ತ ಭಕ್ರರಿ೦ಗೆ ಅದು ಮನುಷ್ಯರು ಮಕರ ಸ೦ಕ್ರಮಣದ ಆ ಮುಹೂರ್ತಲ್ಲಿ ಅಯ್ಯಪ್ಪ೦ಗೆ ಅಲ್ಲಿ೦ದ ಆರತಿ ಎತ್ತುವದು ಹೇಳಿ ಗೊ೦ತಿಲ್ಲೆ / ಗೊ೦ತಿದ್ದರುದೆ ನ೦ಬಲೆ ತಯಾರಿಲ್ಲೆ. ಯಾವಾಗ ಈ ವಿಶ್ವಾಸ ಜನರ ಮನಸ್ಸಿಲ್ಲಿ ಹೊಕ್ಕು ಪ್ರಸಿಧ್ಧಿಗೆ ಬ೦ತೊ ಅಷ್ಟಪ್ಪಗ ಅಲ್ಲಿಗೆ ಬತ್ತ ಭಕ್ತರ ಸ೦ಖ್ಯೆ ಅಭೂತಪೂರ್ವವಾಗಿ ಹೆಚ್ಚಪ್ಪಲೆ ಸುರು ಆತು, ಅದರಿ೦ದಾಗಿ ಬತ್ತ ಆದಾಯವುದೆ ವರುಶ೦ದ ವರುಶಕ್ಕೆ ದಾಖಲೆಗಳ ಮೀರುಸಲೆ ಸುರುವಾತು. ಅಲ್ಲಿ ಭಕ್ತಿ೦ದಲುದೆ ಜಾಸ್ತಿ ಬಿಸಿನೆಸ್ ಅಪ್ಪಲೆ ಸುರುವಾತು. ಸರಕಾರಕ್ಕೆ ಬತ್ತ ವರಮಾನಲ್ಲಿ ಒ೦ದು ಪ್ರಮುಖ ಭಾಗವಾಗಿ ಶಬರಿಮಲೆಯ ಆದಾಯ ಬದಲಾತು. ಅದರಿ೦ದಾಗಿ ಸರಕಾರಕ್ಕುದೆ ಇದು ಅಲ್ಲಿ ಮನುಷ್ಯರೇ ಆರತಿ ಎತ್ತುವದು ಹೇಳಿ ಜನ೦ಗಳ ಮು೦ದೆ ಹೇಳಿಯೇ ಆಯೆಕು ಹೇಳ್ತ ಅನಿವಾರ್ಯತೆಯೂ ಇದ್ದತ್ತಿಲ್ಲೆ, ಹೇಳಿರೆ ಬಿಸಿನೆಸ್ ಕಮ್ಮಿ ಆದರೆ ಹೇಳ್ತ ಹೆದರಿಕೆಯೂ ಇತ್ತೋ ಗೊ೦ತಿಲ್ಲೆ. ಅದರ ಎಡಕ್ಕಿಲ್ಲಿ ದೇವರ ನ೦ಬದ್ದ ಕೆಲವು ಯುಕ್ತಿವಾದಿಗೊ ಇದ್ದವದಾ (ಅವಕ್ಕೆ ತಮ್ಮತಮ್ಮಷ್ಟಕ್ಕೆ ನ೦ಬದ್ದೆ ಕೂದರೆ ಸಾಲ, ನ೦ಬುತ್ತವರನ್ನುದೆ ಅವರ ದಾರಿಗೆ ತರೆಕು ಹೇಳ್ತ ಆಶೆಯೋ ಎ೦ತ್ಸೊ) ಅವು ಇದು ದೇವಸ್ಠಾನದವುದೆ ಹಿ೦ದೂ ಮೂಲಭೂತವಾದಿಗಳುದೆ (!!!.. ಅವು ಯಾವತ್ತೂ ಕೂಡ ಹೇಳಿದ್ದವಿಲ್ಲೆ ಇದು ದೇವನಿರ್ಮಿತ ಹೇಳಿ) ಸೇರಿಗೊ೦ಡು ಮಾಡ್ತ ನಾಟಕ ಹೇಳಿ ಸಾಧಿಸಿ ತೋರುಸಲೆ ಅಲ್ಲಿಗೆ ಆ ಸಮಯಲ್ಲಿ ಹೋಗಿ ಫೋಟೋ ಎಲ್ಲ ತೆಗದು ತೋರುಸಲೆ ಹೆರಟವು, ಅದರ್ಲಿ ಸುರುಗಾಣ ಸರ್ತಿ ಯಶಸ್ವಿಯುದೆ ಆದವು, ಆದರೆ ಅ೦ಬಗ ಎಚ್ಚೆತ್ತ ಸರ್ಕಾರ ಅದರಿ೦ದ ಮತ್ತೆ ಆ ಸಮಯಲ್ಲಿ ಆ ಜಾಗೆಗೆ ಪೋಲೀಸು ಕಾವಲು ಏರ್ಪಡಿಸಿತ್ತು, ಈಗ ಆ ಸಮಯಲ್ಲಿ ಅಲ್ಲಿಗೆ ಆರನ್ನುದೆ ಹೋಪಲೆ ಬಿಡ್ತವಿಲ್ಲೆ.

    ನಿಜವಾಗಿ ಅಯ್ಯಪ್ಪ೦ಗೆ ಅಲ್ಲಿ ಜ್ಯೋತಿ ಕ೦ಡರುದೆ ಕಾಣದ್ರುದೆ, ಶಕ್ತಿ ಇದ್ದೇ ಇದ್ದು, ಅದು ಹೆಚ್ಚುದೆ ಆಗ, ಕಮ್ಮಿಯುದೆ ಆಗ. ಈ ಜ್ಯೋತಿ೦ದಾಗಿ ಲಾಭ ಪಡೆಕ್ಕೊ೦ಬ, ಬಿಸಿನೆಸ್ ಮಾಡ್ತ ಜನ೦ಗೊಕ್ಕೆ ಮಾ೦ತ್ರ ಇದರ ತಲೆಬೆಶಿ.

    1. ಒಪ್ಪಣ್ಣನೊಟ್ಟಿಂಗೆ ಗಣೇಶಣ್ಣ ಹೇಳಿದ್ದುದೇ ಲಾಯಕಾಯಿದು.

    2. ಗಣೇಶಣ್ಣಾ..
      ಎಷ್ಟೊಳ್ಳೆ ಮಾಹಿತಿಗೊ! ಚೆಂದಲ್ಲಿ ಬರದುಕೊಟ್ಟಿದಿ.

      ಅಯ್ಯಪ್ಪನ ಜಾಗೆಲಿ ಪೈಶೆಒಯಿವಾಟೇ ಆತಿವಕ್ಕೆ, ಅಲ್ಲದೋ?

      ಹೇಳಿದಾಂಗೆ, ನಿಂಗೊ ಶುದ್ದಿಯೇ ಏಕೆ ಬರವಲಾಗ?

      1. ಬರವಲಾಗ ಹೇಳಿ ಎನಗೆ ಹಠ ಎ೦ತ ಇಲ್ಲೆ ಒಪ್ಪಣ್ಣಾ.. 🙂 ಇಲ್ಲಿ ಬಪ್ಪ ಶುದ್ದಿಗಳ ಗುಣಮಟ್ಟ ನೋಡುವಗ ಎನಗೆ ಶುದ್ದಿ ಬರವಲೆ ಒ೦ಚೂರು ಹೆದರಿಕೆ ಅಷ್ಟೇ.. ರಾಮಾಯಣದ ಒಟ್ಟಿ೦ಗೆ ನಮ್ಮದು ಒ೦ದು ಪಿಟ್ಕಾಯಣ ಅಪ್ಪಲಾಗನ್ನೇ.. 🙂

  11. ಹಿಂದೂಧರ್ಮಸ್ಥಾನವಾದರೆ ಮಾತ್ರ ಇವಕ್ಕೆ ನಂಬಿಕೆಂದ ಜಾಸ್ತಿ ಮೂಢನಂಬಿಕೆ ಕಾಂಬದು.

  12. ಎನಗೆ ಅಲ್ಲಿಗೆ ಹೋಯೆಕು ಹೇಳಿ ತುಂಬಾ ಆಶೆ ಇತ್ತು. ಇನ್ನೂ ಹೋಪಲೆ ಆಯಿದಿಲ್ಲೆ. paper ಲಿ ಘಟನೆಯ ಓದಿ ತುಂಬಾ ಬೇಜಾರಾತು.

    {ಅದೊಂದು ಮನಸ್ಥಿತಿ.
    ಎಂತಾರು ಗಡಿಬಿಡಿ ಆದರೆ ತಾನು ಬದುಕ್ಕೇಕು – ಹೇಳ್ತದರ ಗಮನುಸುತ್ತವು, ತನ್ನ ಒಟ್ಟಿಂಗಿಪ್ಪವನೂ ಬದುಕ್ಕೇಕು, ಅವನನ್ನೂ ಒಳಿಶೇಕು – ಹೇಳ್ತದರ ಆಲೋಚನೆಯೇ ಮಾಡ್ತವಿಲ್ಲೆ ಜೆನಂಗೊ..}
    ಎಂತ ಮಾಡುದು ಒಪ್ಪಣ್ಣೋ? ಸಾವು ಎದುರಿನ್ಗೆ ಬಪ್ಪಗ ೧೦೦ ರಲ್ಲಿ ೯೬% ಜೆನಂಗೊಕ್ಕುದೇ ಇದೇ ಮನಸ್ಠಿತಿ ಬಪ್ಪದು. 🙁

    ಅಣ್ಣೋ ಲಾಯಕಕ್ಕೆ ಬರದ್ದೆ ಆತೋ.

  13. ಶಬರಿಮಲೆಲಿ ವ್ಯವಸ್ಥೆ ಸರಿ ಮಾಡಲಿ-ಹೇಳಿ ಆಗ್ರಹಿಸುತ್ತೆ.ಸರೀ ನೆಡಕ್ಕೊಂಡು ಹೋಪ ಹಾಂಗೆ ಮಾಡಿರೆ ಇಂತಾ ಅನರ್ಥ ಆಗ.ಕಾಡು ರಜಾ ಹಾಳಕ್ಕು.ಅನಿವಾರ್ಯ.ಕೆಲವು ಕಡೆ ಬಸ್ ನಿಷೇಧಿಸೆಕ್ಕು-ಇಷ್ಟು ಜನ ಸೇರುವ ದಿನಂಗಳಲ್ಲಿ.
    ಎಷ್ಟಾದರೂ ಜ್ಯೋತಿ ಸತ್ಯವೊ,ಲೊಟ್ಟೆಯೊ ಈಗ ಚರ್ಚೆ ಎಂತಗೆ ಹೇಳಿ ಎನಗೆ ತೋರ್ತು.ಅದಕ್ಕೆ ಬೇರೆ ಒಂದು ಕಮಿಟಿ ಮಾಡಲಿ.

  14. ಗೋರ್ಮೆಂಟಿನವಕ್ಕೆಲ್ಲ ಎಷ್ಟು ಸಂಪಾದನೆ ಆತು, ಎಲ್ಲಿ ವಿನಿಯೋಗ ಆವುತ್ತು ಹೇಳಿ ಮಾಂತ್ರ ಯೋಚನೆ ಇಪ್ಪ ಹಾಂಗಿದ್ದು.

    1. ಬೊಳುಂಬು ಕೃಷ್ಣಭಾವ° ಸರಿಯಾಗಿ ಹೇಳಿದ° .
      ಅಲ್ಲಿ ಬತ್ತ ಪೈಸೆಲಿಯೇ ಮೂಲಸವುಕರಿಯ ಕೊಟ್ಟಿದ್ದಿದ್ದರೆ ಇನ್ನೂ ಅಬಿವುರ್ದಿ ಆವುತಿತು ಹೇಳ್ತದು ಎಲ್ಲೋರ ಅನಿಸಿಕೆ. ಜಿನ್ನಪ್ಪಂದುದೇ! 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×