ಪ್ರತಿ ವರ್ಷ ಜೆನವರಿ ೧ ಬಂದಪ್ಪಗ ನಮ್ಮ ಬೈಲಿಂಗೆ ಮತ್ತೊಂದೊರಿಷ ಆತನ್ನೇ ಹೇದು ಒಪ್ಪಣ್ಣಂಗೆ ಕೊಶಿ ಅಪ್ಪದು. ೨೦೦೯ ರ ಜೆನವರಿ ಒಂದನೇ ತಾರೀಕಿಂಗೆ ಈ ಒಪ್ಪಣ್ಣನ ಬೈಲು ಇಂಟರ್ನೆಟ್ಟಿಲಿ ಪ್ರಕಟ ಆದ್ಸು. ಆ ದಿನಂದ, ಇಂದಿಂಗೆ – ಹತ್ತನೇ ಒರಿಷ ಆರಂಭ.
~
೨೦೦೯ ರ ಜೆನವರಿಲಿ ಬೈಲು ಅಂತರ್ಜಾಲಲ್ಲಿ ಪ್ರಕಟ ಅಪ್ಪಗ – ಒಪ್ಪಣ್ಣ ಮಾಂತ್ರ ಶುದ್ದಿ ಹೇಳುಲೆ ಸುರು ಮಾಡಿದ್ಸು. ಕಾಲಕ್ರಮೇಣ ಬೈಲಿನ ಹೆರಿಯೋರು, ಕಿರಿಯರು ಎಲ್ಲ ಸೇರಿಗೊಂಡವು. ಒಪ್ಪಣ್ಣನ ಶುದ್ದಿಗೆ ಒಪ್ಪ ಕೊಟ್ಟದು ಮಾಂತ್ರ ಅಲ್ಲದ್ದೆ, ಸ್ವತಃ ಶುದ್ದಿ ಹೇಳುಲೆ ಸುರು ಮಾಡಿದವು.
ಮೊದ ಮೊದಲು ಕೆಲವೇ ಶುದ್ದಿಗೊ ಬಂದದೇ ಆದರೂ – ಕ್ರಮೇಣ ಬೈಲ ಬೆಳೆಗೆ ಹಲವಾರು ಗೆದ್ದೆಗೊ, ಬೇರೆಬೇರೆ ಗೆದ್ದೆಲಿ ಬೇರೆಬೇರೆ ನಮುನೆ ಬೆಳೆಗೊ ಬಪ್ಪಲೆ ಸುರು ಆತು.
ಬೈಲ ನೆಂಟ್ರುಗಳ ಶುದ್ದಿಗೊ, ಬೈಲ ಕವಿಗಳ ಕವಿತೆಗೊ, ಹೆರಿಯೋರ ಕಥನಂಗೊ, ನೆಗೆಗೊ, ನೆಗೆಚಿತ್ರಂಗೊ, ಅಡಿಗೆಗೊ, ಮದ್ದುಗೊ, ಚಿತ್ರಂಗೊ, ಬರವಣಿಗೆಗೊ, ಕಾದಂಬರಿಗೊ, ಅನುವಾದಂಗೊ, ಅರ್ಥಂಗೊ, ಪಾಟಂಗೊ, ಶಾಕಪಾಕಂಗೊ, ಮಂತ್ರ-ಮಂತ್ರಾರ್ಥಂಗೊ – ಎಲ್ಲವುದೇ ಬೈಲಿಲಿ ಮೂಡಿಬಪ್ಪಲೆ ಮೊದಲಾತು.
ಗೆದ್ದೆಗೊ ಬೆಳದ ಹಾಂಗೇ ಬೈಲುದೇ ಬೆಳದತ್ತು.
ಒಂದೆರಡು ಒರಿಷಲ್ಲೇ ಹಲವಾರು ಸಾವಿರ ಜೆನಂಗಳ ಬಾಯಿಮಾತಿಲಿ ಪ್ರೀತಿಲಿ ಹಬ್ಬಿ ಹರಡಿತ್ತು.
ಅದೇ ಪ್ರೀತಿ ವಿಶ್ವಾಸ ಇಂದಿಂಗೂ – ಎಂದೆಂದಿಂಗೂ ಹಬ್ಬಿ ಬಂತು.
~
ಇಂದು ಬೈಲಿಂಗೆ ಹತ್ತನೇ ಒರಿಶ!
ಒಂದು ದಶಕದ ಈ ಪ್ರಯಾಣ ಹೇಂಗಾತು – ಕೇಳಿರೆ, ಒಪ್ಪಣ್ಣಂಗೆ ಕೊಶಿ ಇದ್ದು.
ಇನ್ನೂ ನೂರೊರಿಶ ಎಲ್ಲೋರ ಒಟ್ಟಿಂಗೆ ಹೋಯೇಕು ಹೇಳ್ತ ಭಾವನೆ ಇದ್ದು.
ಒಪ್ಪಣ್ಣಂಗೆ ನೆಗೆಮೋರೆಲಿ ಸ್ವಾಗತ ಕೋರುವ ಮನಸ್ಸಿದ್ದು, ನಿಂಗೊ ಎಲ್ಲೋರುದೇ ಒಟ್ಟಿಂಗಿದ್ದಿರನ್ನೇ?
ಬನ್ನಿ, ಇನ್ನೂ ನೂರ್ಕಾಲ ಈ ಬೈಲಿನ ಬೆಳೆಶುವೊ.
ಗುರು-ದೇವರ ಅನುಗ್ರಹಲ್ಲಿ ಬೆಳವ ಈ ಬೈಲಿನ ನೆಂಟ್ರಾಗಿ ನಿಂಗಳೂ ಬೆಳವಣಿಗೆಲಿ ಸೇರಿ, ಸಹಕರಿಸಿ.
ನಮಸ್ತೇ.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ವಿಜಯಕ್ಕ ಈಗ ಭಾರಿ ಅಪರೂಪ.
ಡಾಕ್ಟರೇ, ನಿಂಗಳ ಸಂಸ್ಕೃತ ಲೇಖನ ಈಗ ಬತ್ತಿಲ್ಲೆಯೊ?
ಹೊಸ ಆಯ್ತಲ್ಲಿ ದಶಮಾನೋತ್ಸವಕ್ಕೆ ಬಂದ ಬೈಲಿಂಗೆ
ತಂದ ಒಪ್ಪಣ್ಣಂಗೆ
ಸಹಕರಿಸಿದ ನೆಂಟ್ರಿಂಗೆ ಗುರುಹಿರಿಯರಿಂಗೆ ಕಿರಿಯರಿಂಗೆ
ಅಭಿನಂದನೆಗೊ.
ಸಂಶಯವೇ ಇಲ್ಲೆ ಗುರುಗಳ ಅನುಗ್ರಹ ಅನುಗಾಲವೂ ಇದ್ದು
ಗುರಿಕ್ಕಾರರಲ್ಲಿ ಒಂದು ಸಣ್ಣ ಮನವಿ. ಬೈಲಿನ ಮೋರೆ ಪುಟವ ಹತ್ತನೇ ವರ್ಷದ ಸಂಭ್ರಮ ಹೇಳಿ ಮಾಡ್ಳೆ ಎಡಿಗಕ್ಕೊ. ಅದಕ್ಕೆ ಎಂತಾರೂ ತಾಂತ್ರಿಕ ತೊಂದರೆಗೊ ಇದ್ದೊ ಹೇಳಿ ಎನಗೆ ಗೊಂತಿಲ್ಲೆ.
ಬೊಳುಂಬು ಮಾವ & ಎಲ್ಲರಿಂಗೂ – ಪ್ರೀತಿಯ ನಮಸ್ಕಾರಂಗೊ.
ನಿಂಗಳೆಲ್ಲರ ಪ್ರೀತ್ಯಾದರಕ್ಕೆ, ನಿರಂತರ ಪ್ರೋತ್ಸಾಹಕ್ಕೆ ಬೈಲು ಋಣಿ.
ಬೈಲಿಂಗೆ ಹೊಸ ಅಂಗಿ ಮಾಡ್ತಾ ಇದ್ದು. ಆಮೂಲಾಗ್ರ ಬದಲಾವಣೆ ಆವುತ್ತು.
ಕಂಪ್ಯೂಟರ್ & ಮೊಬೈಲು – ಎರಡಕ್ಕೂ ಅಪ್ಪ ಹಾಂಗೆ ಆಯೆತ ಮಾಡ್ತು.
ನಿಂಗಳೆಲ್ಲರ ಅಭಿಪ್ರಾಯ ಹೇಳಿಕ್ಕಿ.
ನಮಸ್ತೇ.
ದಶಮಾನೋತ್ಸವದ ಸಂಭ್ರಮಲ್ಲಿಪ್ಪ ಒಪ್ಪಣ್ಣ ಬೈಲಿಂಗೆ ಅಭಿನಂದನೆಗೊ. ಈ ಬೈಲಿನ ಸದಸ್ಯರಲ್ಲಿ ಆನುದೆ ಒಬ್ಬ ಹೇಳ್ಲೆ ತುಂಬಾ ಕೊಶಿ ಆವ್ತಾ ಇದ್ದು. ಪುರುಸೊತ್ತು ಮಾಡಿಯೊಂಡು ಒಪ್ಪಣ್ಣ ಬೈಲಿಂಗೆ ಪ್ರತೀ ಶುಕ್ರವಾರ ಆದರೂ ಬರೆಕು. ಬೈಲಿಲ್ಲಿ ಬರೆಕು. ಎಲ್ಲೋರುದೆ ಮೊಬೈಲು ಉದ್ದುತ್ತರ ರಜ್ಜ ಕಡಮ್ಮೆ ಮಾಡಿಕ್ಕಿ ಹೇಳಿ ಹೇಳ್ತಿಲ್ಲೆ. ಅದರಲ್ಲಿ ಹಾಕುವ ಹಾಂಗೇ ಇದರಲ್ಲೂ ಶುದ್ದಿಗಳ ಹಾಕಿ. ಒಪ್ಪಣ್ಣ ಬೈಲು ಬೆಳೆಯಲಿ. ಶುಭ ಹಾರೈಕೆಗೊ.
ಅಪರೂಪಕ್ಕೆ ಹೇಂಗೋ ಸಮಯ ಹೊಂದುಸೆಂಡು ಒಪ್ಪಣ್ಣ ಬಯಲಿಂಗೆ ಇಳುದ್ದಂ. ಹ್ಜ್ಞೂಂ ತೊಂದರೆ ಇಲ್ಲೆ. ಕಾವಲೆ ಗುರುದೇವರಿದ್ದವು. ನೋಡಿ ಒಳುಶಿಗೊಂಬಲೆ ಹಿರಿ-ಕಿರಿಯರಿದ್ದವು.
ಹತ್ತಿ ಹತ್ತಿ ಹತ್ತಾತು.|
ಏರಿ ಏರಿ ನೂರಾಗಲಿ||
ಸಾಧಿಸಿ ಸಾಧಿಸಿ ಸಾವಿರವಾಗಲಿ|
ಗುರುದೇವತಾನುಗ್ರಹ ಚಿರಕಾಲ ಹೀಂಗೆ ಇರಳಿ||
ಒಪ್ಪಣ್ಣ ಎಂತ ಈಗ ಅಪರೂಪ?