ನಮ್ಮೆಲ್ಲರ ಗೌರವದ, ಇಷ್ಟದ ಭಾಗವತರಾದ ಶ್ರೀ ಬಲಿಪ ನಾರಾಯಣ ಭಾಗವತರು / ಕಿರಿಯ ಬಲಿಪರು / ಬಲಿಪಜ್ಜ° – ಇವು ನಿನ್ನೆ ಅಸ್ತಂಗತರಾದವು.
ಕಂಚಿನ ಕಂಠ ಹೇಳಿಯೇ ಇವು ಪ್ರಸಿದ್ಧ. ಕಪ್ಪು3 ಬೆಳಿ5 ರ ವಿಶಿಷ್ಟ, ಕ್ಲಿಷ್ಟ ಶ್ರುತಿಲಿ ಲೀಲಾಜಾಲವಾಗಿ ಹಾಡುವ ಇವರ ದೈವದತ್ತ ಪ್ರತಿಭೆ ಯಕ್ಷ ಪ್ರಿಯರಿಂಗೆ ಅತ್ಯಾದರ.
ಹತ್ತರತ್ತರೆ ತೊಂಭತ್ತು ಒರಿಷ. ಅದರ್ಲಿ ಸುಮಾರು ಎಪ್ಪತ್ತು ವರ್ಷವೂ ಮೇಳಂಗಳಲ್ಲಿ ಯಕ್ಷಾರಾಧನೆ.
ಪಡ್ರೆ ಶ್ರೀ ಜಠಾಧಾರಿ ಮೇಳಲ್ಲಿ ಇವರ ಯಕ್ಷಸೇವೆಯ ಸುಮಾರು ಏಳು ದಶಕದ ಹಿಂದೆ ಆರಂಭ ಮಾಡಿದವಡ. ಅಲ್ಲಿಂದ ಹಿಂದೆ ನೋಡಿದ್ದವೇ ಇಲ್ಲೆ.
ತನ್ನ ಮಕ್ಕಳನ್ನೂ ಯಶಸ್ವೀ ಭಾಗವತರಾಗಿಸಿ, ‘ಬಲಿಪ ಪರಂಪರೆ’ಯ ಮುಂದುವರುಸುವ ವ್ಯವಸ್ಥೆ ಮಾಡಿದ್ದವು. ಇತ್ತೀಚೆಗೆ ಇವರ ಮಗ ಶ್ರೀ ಪ್ರಸಾದ ಬಲಿಪರು ಅಸ್ತಂಗತರಾಗಿ ಯಕ್ಷ ಕ್ಷೇತ್ರಕ್ಕೆ ಅಪಾರ ನಷ್ಟ ಆಗಿತ್ತು.
ಕಟೀಲು ಮೇಳದ ಪ್ರಧಾನ ಭಾಗವತರಾಗಿ ಹಲವಾರು ದಶಕ ಹಿರಿಮೆ ಹೊತ್ತಿದವು. ಹಾಂಗಾಗಿ, ಕಟೀಲಿನ ಯಾವದೇ ಮೇಳಲ್ಲಿ ಜಾಗಟೆ ಹಿಡಿದು ಭಾಗವತರಾಗಿ ಕೂಪಲಕ್ಕು – ಹೇಳುವ ಅಪೂರ್ವ ಗೌರವ ಇವಕ್ಕೆ ಒಲುದಿತ್ತು.
ಬಲಿಪಜ್ಜನ ನಿಧನಕ್ಕೆ ಮುಖ್ಯಮಂತ್ರಿ, ಪ್ರಧಾನಮಂತ್ರಿಗಳ ಸಹಿತ ಅಪಾರ ಅಭಿಮಾನಿಗೊ ಬೇಜಾರ ತಿಳುಶಿದ್ದವು.
ಒಟ್ಟಿಲಿ, ಯಕ್ಷಪ್ರಿಯರಿಂಗೆ, ಯಕ್ಷಗಾನಕ್ಕೆ ಇದು ಅಪಾರ ನಷ್ಟ.
ಬಲಿಪಜ್ಜ ದೇವಲೋಕದ ದೇವಸಭೆಲಿ ಕಂಚಿನ ಕಂಠ ನುಡಿಸಲಿ. ಯಕ್ಷಪ್ರಿಯರ ಮೇಲೆ ಅವರ ಪ್ರೀತಿ ಸದಾ ಇರಲಿ…
ಪ್ರಧಾನಮಂತ್ರಿ ಮೋದಿ ಅಜ್ಜನ ಸಂದೇಶ:
Shri Balipa Narayana Bhagawatha made a mark in the world of culture. He devoted his life towards Yakshagana playback singing and was admired for his exemplary style. His works will be admired by the coming generations. Pained by his demise. Condolences to his family. Om Shanti.
— Narendra Modi (@narendramodi) February 17, 2023
ಕರ್ನಾಟಕ ಮುಖ್ಯಮಂತ್ರಿಗಳ ಸಂದೇಶ:
ತೆಂಕುತಿಟ್ಟು ಯಕ್ಷರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ಬಲಿಪ ನಾರಾಯಣ ಭಾಗವತರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ತಮ್ಮ ಕಂಚಿನ ಕಂಠದ ಬಲಿಪ ಶೈಲಿಯ ಹಾಡುಗಾರಿಕೆಗೆ ಪ್ರಸಿದ್ಧರಾಗಿದ್ದ ಭಾಗವತರ ನಿಧನದಿಂದ ಯಕ್ಷ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿಃ pic.twitter.com/5fPAWw30DB— Basavaraj S Bommai (@BSBommai) February 16, 2023
ಬಲಿಪಜ್ಜನ ಅಮರ ಗೀತೆ – ಶರಣು ತಿರುವಗ್ರ ಶಾಲಿವಾಹಿನೀ…
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021