Oppanna.com

ಛಾತ್ರರ ಚಿತ್ತ – ಚಾತುರ್ಮಾಸ್ಯದತ್ತ

ಬರದೋರು :   ಒಪ್ಪಣ್ಣ    on   14/08/2015    4 ಒಪ್ಪಂಗೊ

ಹರೇರಾಮ!

ಒರಿಶಕ್ಕೊಂದರಿ ನಮ್ಮ ಗುರುಗೊ ಚಾತುರ್ಮಾಸ್ಯಕ್ಕೆ ಕೂರ್ಸು ಅವಿಚ್ಛಿನ್ನ.
ದಿನಕ್ಕೆರಡು ಸರ್ತಿ ಅವು ಪೂಜಾಕೈಂಕರ್ಯ ನೆಡೆಶುಸ್ಸು ಅವಿಚ್ಛಿನ್ನ.
ಆ ಪೀಠಲ್ಲಿ ಗುರುಗೊ ಇರ್ಸೂ ಅವಿಚ್ಛಿನ್ನ.
ಮಠಲ್ಲಿ ಎಲ್ಲವೂ ಅವಿಚ್ಛಿನ್ನ ಇದ್ದರೆ, ಶಿಷ್ಯಕೋಟಿಯೂ ಅವಿಚ್ಛಿನ್ನವೇ! ಅಲ್ದೋ?
ಅಪ್ಪು.

ನಮ್ಮ ಬೈಲಿಂದ ಒರಿಶಕ್ಕೊಂದರಿ ಒಟ್ಟು ಸೇರುಸ್ಸು, ಪಾದಪೂಜಾ ಕೈಂಕರ್ಯ ಮಾಡುಸ್ಸು – ಎಲ್ಲವುದೇ ಕಳುದ ಹಲವೊರಿಶಂದ ಅನೂಚಾನವಾಗಿ ನೆಡಕ್ಕೊಂಡು ಬಯಿಂದು. ಸುರೂವಿಂಗೆ ಬೆಂಗ್ಳೂರಿಲಿ ಆರಂಭ ಆತು. ಬೈಲಪರವಾಗಿ ಗುರಿಕ್ಕಾರ್ರು ಶ್ರೀಪಾದುಕಾಪೂಜಾ ಕೈಂಕರ್ಯವ ನೆಡೆಶಿದವು. ಅದಾದ ಮತ್ತಾಣ ಒರಿಶ ಮಾಣಿಮಠಲ್ಲಿ – ಪ್ರತಿಷ್ಠಾನದ ಅಧ್ಯಕ್ಷರಾದ ಶರ್ಮಪ್ಪಚ್ಚಿ ಪಾದಪೂಜೆ ನೆಡೆಶಿದವು. ಮತ್ತಾಣ ಒರಿಶ – ಹೇದರೆ ಕಳುದೊರಿಶ ಕೆಕ್ಕಾರಿಲಿ ನೆಡದ ಚಾತುರ್ಮಾಸ್ಯಲ್ಲಿ ಬೈಲಿನ ಹಿರಿ ಸದಸ್ಯರಾದ ಟೀಕೆಮಾವ ಪಾದಪೂಜೆ ನೆರವೇರ್ಸಿದವು. ಈ ಒರಿಶ – ಬೆಂಗ್ಳೂರಿಲಿ.

ನಮ್ಮ ಬೈಲಿನ ಆತ್ಮೀಯ ನೆಂಟ್ರಾದ ಸುಭಗಣ್ಣ – ಅವರ ಮನೆದೇವರಾದ ಉಮೇಟಿ ಅತ್ತಿಗೆ ಒಟ್ಟಿಂಗೆ ಬೆಂಗ್ಳೂರಿಂಗೆ ಬತ್ತವು.
ಶ್ರೀಪಾದುಕಾಪೂಜೆಯ ಭಕ್ತಿಶ್ರದ್ಧೆಲಿ ನೆರವೇರ್ಸಿ – ಬೈಲಿನ ಸಮಗ್ರ ಬೆಳವಣಿಗೆಗೆ ಕೇಳಿಗೊಳ್ತವು.
ಪ್ರತಿ ಒರಿಶದಂತೆ ಹಸ್ತಮುಟ್ಟಿಗೊಂಬಲೆ ನಾವೆಲ್ಲೋರುದೇ ಸೇರುವೊ.
ಬೈಲಿನ ಲೆಕ್ಕಲ್ಲಿ ಮಾಡ್ತ ಈ ಮಹಾಕೈಂಕರ್ಯಲ್ಲಿ ಸೇರಿ ನಾವೆಲ್ಲೋರುದೇ ಆಶೀರ್ವಾದ ಪಡವೊ.

15-ಅಗೋಸ್ತು-2015ಕ್ಕೆ ಬೈಲಿನ ಲೆಕ್ಕದ ಪಾದಪೂಜೆ. ಎಲ್ಲೋರುದೇ ಬನ್ನಿ – ಹೇದು ಗುರಿಕ್ಕಾರ್ರು ಹೇಳಿಕೆ ಹೇಳಿದ್ದವು.
~

ಹೇಳಿದಾಂಗೆ, ಈ ಸರ್ತಿಯಾಣ ಚಾತುರ್ಮಾಸ್ಯ ಇದರಿಂದ ಮೊದಲು ನೆಡದ ಅಷ್ಟೂ ಚಾತುರ್ಮಾಸ್ಯಂದ ವಿಶೇಷವಾಗಿ, ನೆಂಪೊಳಿವ ನಮುನೆಲಿ ಬತ್ತಾ ಇದ್ದಾಡ. ಅದು ಹೇಂಗೆ!? – ಅರಡಿಗೋ?

ಈ ಸರ್ತಿಯಾಣ ಚಾತುರ್ಮಾಸ್ಯವ “ಛಾತ್ರ ಚಾತುರ್ಮಾಸ್ಯ” – ಹೇದು ವಿಶೇಷವಾಗಿ ಪರಿಗಣುಸಿದ್ದವಾಡ ನಮ್ಮ ಗುರುಗೊ.
ಛಾತ್ರರು – ಹೇದರೆ ವಿದ್ಯಾರ್ಥಿಗೊ ಹೇದು ಅರ್ಥ.
ವೇದವಿದ್ಯಾರ್ಥಿಗಳೇ ಮಾಂತ್ರ ಅಲ್ಲದ್ದೆ, ಆಧುನಿಕ ಕಂಪ್ಯೂಟರ್ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳನ್ನೂ – ಸೇರ್ಸಿದ ಸಮಗ್ರ ವಿದ್ಯಾರ್ಥಿ ಸಮೂಹವ “ಛಾತ್ರರು” ಹೇದು ಒಂದೇ ಛತ್ರಿಯ ಅಡಿಲಿ ಗುರುತಿಸಿದ್ದವು.

ಈ ಸರ್ತಿಯಾಣ ಚಾತುರ್ಮಾಸ್ಯ ಮಕ್ಕಳೇ ನೆಡೆಶುವ, ಮಕ್ಕಳಿಂದ, ಮಕ್ಕೊಗೋಸ್ಕರ ನೆಡವ ಚಾತುರ್ಮಾಸ್ಯ ಅಡ.ಚಾತುರ್ಮಾಸ್ಯ ವ್ರತ ಮಾಡುದು ಗುರುಗಳೇ ಆದರೂ, ಅಲ್ಯಾಣ ಎಲ್ಲಾ ವಿಷಯಂಗಳ ನಿರ್ವಹಣೆ, ಕಾರ್ಯಕ್ರಮ ನಿರ್ವಹಣೆ – ಎಲ್ಲವುದೇ ಮಕ್ಕಳ ಉಪಸ್ಥಿತಿಲೇ ಅಪ್ಪದಾಡ.

ಹಾಂಗೆ ನೋಡಿರೆ ದೊಡ್ಡೋರುದೇ ಒಂದು ಕಾಲಲ್ಲಿ ಮಕ್ಕಳೇ ಆಗಿತ್ತವಿಲ್ಲೇಯೋ?
ಈಗ ಇಷ್ಟೂ ದೊಡ್ಡ ಜೆವಾಬ್ದಾರಿ ನಿರ್ವಹಣೆ ಮಾಡುವ ಹೆರಿಯೋರು ಮೊದಲು ಮಕ್ಕಳೇ ಅಲ್ದೋ?
ಹಾಂಗೆ, ಮುಂದಕ್ಕೆ ಆಸ್ತಿ ಆಗಿ ನಿಂಬ ಹೆರಿಯೋರು ಈಗ ಮಕ್ಕಳ ರೂಪಲ್ಲೇ ಇದ್ದವು.
ಅವರ “ಬರೇ ಮಕ್ಕೊ” ಹೇದು ದೂರ ಮಾಡ್ಳಾಗ, ಅವರನ್ನೇ ಎದುರು ಮಡಗಿ ಕಾರ್ಯಕ್ರಮ ಮಾಡೇಕು – ಹೇಳುಸ್ಸು ಗುರುಗಳ ಆಶಯ ಆಡ.

~

ಹಾಂಗಾರು ದೊಡ್ಡೋರೇ ಒಟ್ಟಿಂಗಿಲ್ಲೆಯೋ? ಮಕ್ಕಳಾಟವೋ – ಹೇದು ಕೆಲವು ಸಮಾನ ಮಾನಸಿಕರು ನೆಗೆಮಾಡ್ಳೂ ಸಾಕು. ಅಲ್ಲ, ಮಕ್ಕೊ ಎಲ್ಲೋರುದೇ ಇಪ್ಪ ಛಾತ್ರ ಸಮಿತಿ ಕೆಲಸ ಮಾಡುವಾಗ, ಅದರ ಹಿಂದಂದ ನೆರಳಾಗಿ ಛಾಯಾಸಮಿತಿಲಿ ಕೆಲಸ ಮಾಡುವದು ದೊಡ್ಡೋರೇ ಅಡ.

ಛಾತ್ರ ಸಮಿತಿ – ಛಾಯಾ ಸಮಿತಿಯ ಕೆಲಸಲ್ಲಿ ಚೆಂದಕೆ ನಮ್ಮ ಈ ಒರಿಶದ ಚಾತುರ್ಮಾಸ್ಯ ರೈಸುತ್ತಾ ಇದ್ದು.

~

ಇನ್ನಾಣ ತಲೆಮಾರಿಂಗೆ ದೈವಭಕ್ತಿಯೇ ಇಲ್ಲೆ, ಒಟ್ಟಾರೆ ಹೆದರಿಕೆ ಆವುತ್ತು – ಹೇದು ಬೇಜಾರು ಮಾಡುದು ಸುಮ್ಮನೆ ಅಡ. ನಾವು ಎಷ್ಟು ಧಾರ್ಮಿಕವಾಗಿದ್ದೋ, ನಮ್ಮಂದ ಒಂದು ತೂಕ ಜಾಸ್ತಿಯೇ ಧಾರ್ಮಿಕವಾಗಿ ನಮ್ಮ ಮತ್ತಾಣೋರು ಇರ್ತವಾಡ. ನಾವು ಅವರ ಮಠಕ್ಕೆ ಕರಕ್ಕೊಂಡು ಹೋಗಿಬಿಟ್ರೆ ಆತಾಡ, ಮತ್ತಾಣ ಕೆಲಸಂಗೊ ಪೂರ್ತ ಅವ್ವೇ ಮಾಡ್ತವಾಡ.

ನಮ್ಮತನವ ಮರದು, ಹಳೆಜೀವನ ಹಳೆಸಂಪ್ರದಾಯಂಗಳ ಸಂಪೂರ್ಣ ಮರದು ಬಿಡುದು ದೊಡ್ಡ ತಪ್ಪು. ಆದರೆ ಆ ತಪ್ಪಿಲಿ – ಇನ್ನಾಣ ತಲೆಮಾರಿನಷ್ಟೇ ತಪ್ಪು ಈಗಾಣ ತಲೆಮಾರಿಂದೂ ಇದ್ದಾಡ. ಏಕೇದರೆ, ಅವಕ್ಕೆ ಕಲುಶಿ ಕೊಡೆಕ್ಕಾದ್ಸು ನಾವಲ್ದೋ? – ಹೇಳುಸ್ಸು ಪ್ರಶ್ನೆ.

ಕಲಿತ್ತ ಕಾಲಲ್ಲಿ ಅವಕ್ಕೆ ಕಲಿಶೇಕಾದ್ಸನ್ನೇ ಕಲಿಶಿದ್ದರೆ – ಈಗ ಅವುದೇ ಹೆರಿಯೋರ ಹಾಂಗೇ ಇರ್ತಿತವು. ಕಲಿಶುತ್ತ ಸಮೆಯಕ್ಕೆ ಕಲಿಶದ್ದೆ, ಮುಂದೆ ದೊಡ್ಡಾದ ಮತ್ತೆ ’ಕಲ್ತಿದನಿಲ್ಲೇ’ಹೇದು ಬೆಲಕ್ಕುದರ್ಲಿ ಎಂತ ಸಾರ್ಥಕ್ಯ ಇದ್ದು? ಅಲ್ದೋ?

~

ಹಾಂಗಾಗಿ , ಈ ಸರ್ತಿಯಾಣ ಛಾತ್ರ ಚಾತುರ್ಮಾಸ್ಯಲ್ಲಿ ಮಕ್ಕಳದ್ದೇ ರಾಜ್ಯ ಅಡ. ಕಲಿಯೇಕಾದ ಎಲ್ಲವನ್ನುದೇ ಕಲಿತ್ತಾ ಇದ್ದವಾಡ. ಮುಂದಕ್ಕೆ ಅವೊಂದು ದೊಡ್ಡ ಆಸ್ತಿ ಆಗಿ ಸಮಾಜವ ಮುನ್ನಡೆಶುದರ್ಲಿ ಯೇವದೇ ಸಂಶಯ ಇಲ್ಲೆ.
ಎಷ್ಟೋ ಒಪ್ಪಣ್ಣಂದ್ರ ತಯಾರು ಮಾಡಿ ಮುಂದಕ್ಕೆ ಜೆಬಾದಾರಿ ಮನುಷ್ಯರು ಆಗಿ ಬೆಳೆತ್ತರಲ್ಲಿ ನಿಃಸಂಶಯ.

ಬನ್ನಿ, ಚಾತುರ್ಮಾಸ್ಯಲ್ಲಿ ನಿಂಗಳೂ ಸೇರಿ.
ಮಕ್ಕಳ ರಾಜ್ಯವ ಕಟ್ಟುವೊ.
ನಿಂಗೊಗೆ ಮಕ್ಕೊ ಆಗಿದ್ದರೆ ಅವರ ಕರಕ್ಕೊಂಡು ಬನ್ನಿ, ಅದಲ್ಲದ್ದರೆ ನಿಂಗಳೇ ಮಕ್ಕೊ – ಹೇದು ಬಂದು ಸೇರಿಗೊಳ್ಳಿ.

ಛಾತ್ರಂಗೊ ನೆಡೆಶುವ ಚಾತುರ್ಮಾಸ್ಯವ ಯಶಸ್ವಿಗೊಳುಸುವೊ.

~

ಬೈಲಿನ ಲೆಕ್ಕಲ್ಲಿ ಪಾದಪೂಜೆ ಮಾಡಿ, ಗುರುಗಳಿಂದ ವ್ಯಾಸಮಂತ್ರಾಕ್ಷತೆ ಸ್ವೀಕಾರಮಾಡಿ ಧನ್ಯರಪ್ಪೊ.

ಹರೇರಾಮ

~

ಒಂದೊಪ್ಪ: ಕೇಶವನತ್ತ – ಕಿಶೋರ ಚಿತ್ತ ಹೇದು ಗುರುಗೊ ಹೇಳಿದ್ದವಾಡ. ಈಗ ಛಾತ್ರರ ಚಿತ್ತ ಚಾತುರ್ಮಾಸ್ಯ ಯಶಸ್ವಿಗೊಳಿಸುವತ್ತ!

4 thoughts on “ಛಾತ್ರರ ಚಿತ್ತ – ಚಾತುರ್ಮಾಸ್ಯದತ್ತ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×