ಅಜ್ಜ ಸುರಿಯ!
ಜೆಂಬ್ರಂಗಳೇ ಜೆಂಬ್ರಂಗ. ಅಡಿಗೆ ಸತ್ಯಣ್ಣನ ಕೇಲೆಂಡರ್ ನ ಹಾಂಗೇ ಆಯಿದು ನಮ್ಮ ಕೇಲೆಂಡರುದೆ!
ಒಂದೊಂದು ದಿನ ನಾಲ್ಕು ನಾಲ್ಕು ಜೆಂಬರಂಗ! ಹೋಗದ್ದೆ ಕಳಿಯ. ಹೋಗಿ ಪೂರೈಸುತ್ತಿಲ್ಲೆ. 🙁
ಮನ್ನೆ ಮರಕ್ಕೂರಿನ ಸಟ್ಟುಮುಡಿಗೆ ಹೋಪಲಿತ್ತದಾ, ಅಲ್ಲಿ ತಮ್ಮಮಾವ° ಸಿಕ್ಕಿದವು. ನಿಂಗೊಗೆ ಗೊಂತಿದ್ದನ್ನೆ ತಮ್ಮಮಾವನ.
ಯೇವ ಕೆಲಸಕ್ಕೂ ಸೈ ಹೇಳ್ತ ಜೆನ. ತೋಟಂದ ಅಡಕ್ಕೆ ಹೆರ್ಕುದರಂದ ಹಿಡುದು ತೋಟ ಮಾಡ್ಸಿಕೊಡುವಲ್ಲಿವರೆಗೆ ಎಲ್ಲವೂ ಅರಡಿಗು.
ಅಪ್ಪು. ತೋಟ, ಜಾಗೆ ಮಾಡ್ಸಿ ಕೊಡ್ತದೂ ತಮ್ಮಮಾವನ ಕೆಲಸ. ಅವರ ಮನಸ್ಸಿನ ಆಯ್ಕೆ ಅಲ್ಲದ್ದರೂ ಅನಿವಾರ್ಯವಾಗಿ ಬಂದ ಕೆಲಸ. ಅವು ಎರಡನ್ನೂ ಸಮರ್ಪಕವಾಗಿ ನಿರ್ವಹಿಸಿದ್ದವು.
ಒಪ್ಪಣ್ಣನ ಕಂಡಪ್ಪಗ ಯೇವತ್ರಾಣ ಹಾಂಗೆ ಇಪ್ಪ ಬೆಳ್ಳಂಗೆ ನೆಗೆ ಕಂಡಿದಿಲ್ಲೆ. ಆ ದಿನ ಭಾರೀ ತಲೆಬೆಶಿಲಿ ಇಪ್ಪ ಹಾಂಗೆ ಕಂಡತ್ತು. ‘ಎಂತ ವಿಷಯ ತಮ್ಮಮಾವ°’ ಕೇಳಿದೆ. ಜಾಗೆ ಮಾಡ್ಸಿ ಕೊಡ್ತ ಅವರ ವೆವಹಾರಲ್ಲಿ ದಸ್ತಾವೇಜುಗಳ ತೆಗೆಯೆಕ್ಕಾದರೆ ಪೈಶೆ ಕೊಡದ್ದೆ ಆವುತ್ತಿಲ್ಲೆಡ.
ಈಗ ತಮ್ಮಮಾವನ ಕೆಲಸ ಅಭಿವೃದ್ಧಿ ಆವುತ್ತಾ ಇಪ್ಪಲ್ಲಿ ಹಲವು ಜಾಗೆಗ ಮಾಡಿಕೊಡುದು ಇರ್ತಿದಾ. ಪ್ರತಿ ಸರ್ತಿಯೂ ಕೈಂದ ಸುಮಾರು ಹೋವುತ್ತು, ಅವಕ್ಕೆ ಇವಕ್ಕೆ ಹೇದು. ಆ ದಿನ ಅವಕ್ಕೆ ಆಯೆಕ್ಕಾದ ಕೆಲಸ ಆಗದ್ದೆ ತಲೆಬೆಶಿಲಿ ಇದ್ದದು.
~
ತಮ್ಮಮಾವನ ಮಾತು ಕೇಳಿ ಅಪ್ಪಗ ಅವರ ಮಾತು ಸತ್ಯ ಹೇಳಿ ಕಂಡತ್ತು. ಮದಲಿಂಗೆ ಯಾವ ಕೆಲಸ ವಿಶ್ವಾಸಲ್ಲಿ ನೆಡಕ್ಕೊಂಡು ಇತ್ತೋ, ಅದೇ ಕೆಲಸಂಗೊಕ್ಕೆ ಈಗ ಪೈಶೆ ಅನಿವಾರ್ಯ ಆಯಿದು.
ಆದಿ ಅಂತ್ಯ ಇಲ್ಲದ್ದ ಈ ವ್ಯವಸ್ಥೆಲಿ ಪೈಶೆದೇ ಆಟ. ಸುಮ್ಮನೇ ಮದಲಾಣೋರು ಹೇಳಿದ್ದವಿಲ್ಲೆ ಕುರುಡು ಕಾಂಚಾಣ ಹೇದು.
ತಮ್ಮಮಾವ° ಹೇಳಿದ ವಿಚಾರ ತಲೆಲಿ ತಿರುಗಿಯೊಂಡು ಇಪ್ಪಗಳೇ ಟೀವಿಲಿ ಒಂದು ಶುದ್ದಿ ಬಂತದಾ! ಕೇಡಿಗೊಕ್ಕೆ ಹುಲಿಯ ಹಾಂಗೆ ಘರ್ಜನೆ ಮಾಡಿ ಎಲ್ಲೊರ ಸತ್ಯವ ಹೆರ ತಂದ ನಮ್ಮ ರಾಜ್ಯ ಕಂಡ ಅಪ್ರತಿಮ ನಿಷ್ಠಾವಂತ ಐಯೇಎಸ್ಸು ಅಧಿಕಾರಿ ಆತ್ಮಹತ್ಯೆ ಮಾಡಿಗೊಂಡಿದು ಹೇಳಿ. ಒಂದರಿಯಂಗೆ ಶುದ್ದಿಯ ನಂಬುಲೆ ಆಯಿದಿಲ್ಲೆ. ಕಾರಣ. ಹೇಡಿಯ ಹಾಂಗೆ ಬದುಕ್ಕುವವ° ಹೀಂಗೆ ಮಾಡಿದರೆ ನಂಬುಲೆ ಎಡಿಗು. ಹುಲಿಯ ಹಾಂಗೆ ಬದುಕ್ಕಿದವ ಜೀವವ ಅಂತ್ಯ ಮಾಡಿಗೊಂಡ ಹೇದರೆ ಆರು ನಂಬುಗು?
ಕಳುದ ಸರ್ತಿ ಕೊಳಚ್ಚಿಪ್ಪು ಭಾವ° ಊರಿಂಗೆ ಬಂದ ಸಮಯಲ್ಲಿ ಈ ಡೀಕೆ ರವಿಯ ಬಗ್ಗೆ ಮಾತಾಡಿದ್ದು ನೆನಪ್ಪಿಂಗೆ ಬಂತು.
ಎಂತರ?
~
ಡೀಕೆರವಿ ಕರ್ನಾಟಕದ ಒಂದು ಹಳ್ಳಿಲಿ ಕೃಷಿಲಿ ಜೀವನ ಮಾಡಿಗೊಂಡು ಇದ್ದ ದಂಪತಿಗಳ ಮಗ°. ಒಬ್ಬ ಅಣ್ಣನೂ, ಅಕ್ಕನೂ ಇದ್ದ ಸಣ್ಣ ಸಂಸಾರಲ್ಲಿ ಕಷ್ಟಲ್ಲಿಯೇ ಓದಿ ಮೇಲೆ ಬಂದ ಜೆನಡ. ಕಲಿವಲೆ ಉಶಾರಿ ಇದ್ದ ತಮ್ಮಂಗೆ ಬೇಕಾಗಿ ಅಣ್ಣ ಕಲಿವದರ ಅರ್ಧಲ್ಲಿಯೇ ಬಿಟ್ಟು ಕೆಲಸ ಮಾಡ್ಲೆ ಸುರು ಮಾಡಿದಡ.
ಅಪ್ಪನೂ, ಅಮ್ಮನೂ ಅದರ ಚಿನ್ನವೋ, ಜಾಗೆಲಿಪ್ಪದರನ್ನೋ ಅಡವು ಮಡಗಿ ಮಗನ ಓದುಸಿದವು. ಮಗ° ಓದಿದ°, ಓದಿದ°.. ಓದಿ ಓದಿ ಐಯೇಎಸ್ಸು ಕೂಡಾ ಬರದ°. ಅಪ್ಪ ಅಮ್ಮಂಗೆ, ಊರಿಂಗೆ ಸಾರ್ಥಕ ಕ್ಷಣ ಒದಗಿಸಿ ಕೊಟ್ಟನಡ. ಒಳ್ಳೆ ಕೂಸಿನ ಮದುವೆಯೂ ಆದ°.
ಸರಕಾರ ತನಗೆ ವಹಿಶಿ ಕೊಟ್ಟ ಕೆಲಸಕ್ಕೆ ತಕ್ಕ ಹಾಂಗೆ ದುಡುದ°. ಕೆಲವು ಸಮೆಯ ಅಪ್ಪಗ ಡೀಕೆರವಿ ಒಳ್ಳೇತ ಕೆಲಸ ಮಾಡುದರ ನೋಡಿ ನೀರಿಲ್ಲದ್ದ ಊರಾದ ಕೋಲಾರಕ್ಕೆ ಹಾಕಿದವಡ.
ನೀರಿಲ್ಲದ್ದ ಊರಿಂಗೆ ಹಾಕಿದ್ದು ಹೇದು ತಳಿಯದ್ದೆ ಕೂದತ್ತೋ? ಯೇಯ್! ಅಲ್ಲಿ ಎಂತರ ಆಯೆಕ್ಕಾದ್ದು ಹೇದು ನೋಡಿ, ಜನಂಗಳ ಸೇರ್ಸಿ ಒಂದೊಂದೇ ಅಭಿವೃದ್ಧಿ ಕಾರ್ಯಂಗಳ ಮಾಡಿ ಜನಂಗಳ ಮನೆ-ಮನಸಿಲಿ ರಾಜ್ಯಭಾರ ಮಾಡಿದಡ.
ಸಾವಿರಗಟ್ಳೆ ಯುವಕರಿಂಗೆ ಕೆಲಸಕ್ಕೆ ದಾರಿ ಮಾಡಿ ಕೊಟ್ಟಡ.
ಅನ್ಯಾಯವಾಗಿ ಭೂಸ್ವಾಧೀನ ಮಾಡಿದವರ ಎಲ್ಲ ಬಯಲು ಮಾಡಿದಡ.
ಪೈಶೆಲಿ ಕಾರ್ಬಾರು ಮಾಡಿಗೊಂಡು, ಇದ್ದ ಭೂಮಿಯ ಒಳ ಹಾಕಿ ಬಂಗಲೆ ಕಟ್ಟಿದವಕ್ಕೆ ಬೆಗರು ಬಿಚ್ಚುಲೆ ಸುರು ಆತಡ. ಸರ್ಕಾರಕ್ಕೆ ಒತ್ತಡ ತಂದವು.ಈ ಜೆನವ ಆ ಊರಿಂದ ಎತ್ತಂಗಡಿ ಮಾಡೆಕ್ಕು ಹೇದು.
ಒಪ್ಪಣ್ಣ, ಡೀಕೆ ರವಿಯ ಹಾಂಗಿರ್ಸ ಒಬ್ಬೊಬ್ಬ ಒಂದೊಂದು ಜಿಲ್ಲೆಗೆ ಇದ್ದರೆ ಸಾಕು ನಮ್ಮ ರಾಜ್ಯ ಎಲ್ಲಾ ವಿಧಲ್ಲಿಯೂ ಶ್ರೀಮಂತ ಅಕ್ಕು ಹೇಳಿತ್ತಿದ್ದ ಕೊಳಚ್ಚಿಪ್ಪು ಭಾವ°.
~
ಕಾನೂನಿನ ದೇವಿ ಅನ್ಯಾಯ ಅಪ್ಪಲಾಗ ಹೇದು ಕಣ್ಣಿಂಗೆ ಪಟ್ಟಿ ಕಟ್ಟಿದ್ದರೆ, ನಮ್ಮ ಮಂತ್ರಿಗೊ ನ್ಯಾಯಕ್ಕೆ ಪಟ್ಟಿ ಕಟ್ಟಿ ಕೆಲಸ ಮಾಡುದು.
ಕೋಲಾರಂದ ಸೀತಾ ಬೆಂಗ್ಳೂರಿಂಗೆ ವಾಣಿಜ್ಯತೆರಿಗೆ ಅಧಿಕಾರಿ ಆಗಿ ಹಾಕಿದವು.
ನೆತ್ತರಿಲಿಯೇ ಇಪ್ಪ ನಿಷ್ಠೆ ಯಾವ ಹುದ್ದೆ ಆದರೂ ಕಡಮ್ಮೆ ಆಕ್ಕೋ? ಎಷ್ಟು ಹಶು ಆದರೂ ಹುಲಿ ಹುಲ್ಲು ತಿಂಗೋ?
ಹಾಂಗೇ ಈ ವಿಭಾಗ ಆದರೆ ಇದು. ಇಲ್ಲಿಪ್ಪ ಜಮಕಂಡುಗಳ ಪೂರಾ ಹಿಡುದು ತೆರಿಗೆವಂಚನೆ ಮಾಡಿದವರ ಕೈಂದ ಪೈಶೆ ಪೀಂಕುಸಿದಡ.
ಇದರ ನೋಡಿ ಅಪ್ಪಗ ದೊಡ್ಡ ದೊಡ್ಡ ಕುಳವಾರುಗೊಕ್ಕೆ ಇನ್ನು ಇವ° ಜೀವಂತ ಇಪ್ಪಲಾಗ ಹೇದು ಕಂಡು ಬೇರೆ ಬೇರೆ ರೀತಿಲಿ ಒತ್ತಡ ಹಾಕುಲೆ ಸುರು ಮಾಡಿದವಡ.
ಯೇವ ಒತ್ತಡಕ್ಕೂ ಬಗ್ಗದ್ದೆ ಕೆಲಸ ಮಾಡಿಗೊಂಡು ಇದ್ದವ°, ಎಲ್ಲೋರ ಹತ್ರೆ ಈ ವಾರ ಒಂದು ದೊಡ್ಡ ವಿಷಯ ಬಹಿರಂಗ ಮಾಡ್ಲೆ ಇದ್ದು ಹೇಳಿದ ಜನ ಇದ್ದಕ್ಕಿದ್ದ ಹಾಂಗೆ ಆತ್ಮಹತ್ಯೆ ಮಾಡಿಗೊಂಡ ಹೇಳುವ ಸುದ್ದಿಯ ಇಡೀ ರಾಜ್ಯದ ಜನಂಗೊಕ್ಕೆ ಅರಗಿಸಿಗೊಂಬಲೆ ಆಯಿದಿಲ್ಲೆ.
ಪ್ರಾಮಾಣಿಕ ಕೆಲಸಂದಾಗಿ ಲಕ್ಷಗಟ್ಲೆ ಅಭಿಮಾನಿಗಳ ಹೊಂದಿದ್ದ ಡೀಕೆರವಿಯ ಅಭಿಮಾನಿಗ ಈಗ ಮಾರ್ಗಕ್ಕಿಳುದು ನ್ಯಾಯ ಕೇಳ್ತಾ ಇದ್ದವು ರಾಜ್ಯ ಸರ್ಕಾರದ ಹತ್ರೆ.
ಸರ್ಕಾರಕ್ಕೆ ಹೃದಯ ಹೇಂಗಾದರೂ ಇಲ್ಲೆ, ಕೆಮಿಯೂ ಕೇಳ್ತಿಲ್ಲೆ. ಪೈಶದ ಸ್ವರದ ಒಟ್ಟಿಂಗೆ ಎಂತಾದರೂ ವಿಷಯಂಗ ಬಂದರೆ ಎಲ್ಲವೂ ನ್ಯಾಯವೇ! 🙁
~
ಸರ್ಕಾರದ ಕೆಲಸ ದೇವರ ಕೆಲಸ ಹೇದು ಬೋರ್ಡ್ ಕಾಣುತ್ತು ನಾವು ಎಲ್ಲಾ ಸರ್ಕಾರೀ ಆಪೀಸುಗಳಲ್ಲಿ! ನಿಜವಾಗಿ ದೇವರ ಕೆಲಸ ಹೇಳಿ ಮಾಡಿದವನ ದೇವರ ಹತ್ರಂಗೆ ಕಳ್ಸುದೇ ಸರ್ಕಾರದ ಕೆಲಸವಾ?
ನಿಷ್ಠೆಲಿ ದುಡಿವಲೆ ಬಂದ ಎಲ್ಲ ಅಧಿಕಾರಿಗೊಕ್ಕೆ ಅವರ ವರ್ಗಾವಣೆ ಮಾಡ್ತದರಲ್ಲಿ ಪೂರ್ತಿ ಕಟ್ಟ ಬಿಡ್ಸುಲೂ ಎಡಿಯದ್ದ ಹಾಂಗೆ ಮಾಡುತ್ತ ಸರ್ಕಾರ ನಮ್ಮದಾ?
ನಮ್ಮದು ಪ್ರಜಾಪ್ರಭುತ್ವ. ಪ್ರಜೆಗಳಿಂದ ಆರ್ಸಿ ಬಂದವ° ಅವರ ಸ್ವರವ ಪ್ರತಿಪಾದುಸೆಕ್ಕು. ಆದರೆ ಈಗಾಣ ವೆವಸ್ತೆಲಿ ಜನರ ಸ್ವರ ಎಲ್ಲಿಯೋ ಕೇಳದ್ದ ಹಾಂಗೆ ಆಯಿದು. ಹಿಂದಾಣ ಕಾಲದ ಕೆಲವು ಕ್ರೂರಿರಾಜರ ರಾಜ್ಯಭಾರ ನೆಂಪಾವುತ್ತಿಲ್ಲೆಯಾ? ಅದೇ ಕಾಲಘಟ್ಟಲ್ಲಿದ್ದೊ ನಾವು?
ಇಂದು ಒಬ್ಬ° ದಕ್ಷ ಅಧಿಕಾರಿಯ ಮಾರಣಹೋಮ ಆಯಿದು. ಇದಕ್ಕೆ ಇನ್ನು ಬೇರೆ ಅಧಿಕಾರಿಗೊ ಬಲಿಯಾಗದ್ದೆ ಇರಲಿ.
ಇನ್ನಾದರೂ ಜನಂಗೊ ಎಚ್ಚರಿಗೆ ಮಾಡಿಗೊಂಡು ಸರಿಯಾದ ಜನಂಗಳ ಆಯ್ಕೆ ಮಾಡಲಿ.
ಭ್ರಷ್ಟ ರಾಜಕೀಯ ವೆವಸ್ತೆಲಿ ಮೂವತ್ತಾರು ವರ್ಷದ ಒಂದು ಅದಮ್ಯ ಚೈತನ್ಯ ಬಲಿ ಆತು. ಇನ್ನು ಎಷ್ಟು ಬಲಿಗ ಆಯೆಕ್ಕು?
ಈ ಮೃತ್ಯುವಿನ ಹಿಂದೆ ಇಪ್ಪ ಸತ್ಯ ಹೆರ ಬಪ್ಪಲೆ ಎಲ್ಲೋರೂ ಒಂದೇ ಸ್ವರಲ್ಲಿ ರಾಜ್ಯವ ಆಳುವವರ ಹತ್ತರೆ ಬೇಡಿಕೆ ಮಡುಗಲಿ.
ನಮ್ಮ ರಾಜ್ಯಲ್ಲಿ ಡೀಕೆರವಿಯ ಹಾಂಗೆ ಇಪ್ಪ ಸಾವಿರ ಸಾವಿರ ಮಕ್ಕೊ ಬೆಳಗಲಿ.
~
ರಾಜ್ಯಕ್ಕೆ ಅಲ್ಲ, ದೇಶಕ್ಕೆ ಮಾದರಿ ಆಗಿ, ಇದ್ದಷ್ಟು ದಿನ ಹುಲಿಯ ಹಾಂಗೆ ಬದುಕ್ಕಿದ, ಭ್ರಷ್ಟವ್ಯವಸ್ಥೆಗೆ ಸರಿಯಾದ ಜೆನ ಸಿಕ್ಕಿದರೆ ಸರಿ ದಾರಿಗೆ ತಪ್ಪಲೆಡಿಗು ಹೇಳ್ತ ಒಂದು ಆಶಾಕಿರಣ ಸಮಾಜಕ್ಕೆ ಕೊಟ್ಟ ಒಂದು ವಜ್ರ ನಮ್ಮ ಕಣ್ಣಿಂದ ಮರೆ ಆಯಿದು.
ಈ ಸಮೆಯಲ್ಲಿ ಒಪ್ಪಣ್ಣನ ಬೈಲಿಂದ ಅವರ ಮನೆಯವಕ್ಕೆ ದುಕ್ಕವ ತಾಂಗಿಯೊಂಬ ಶೆಗುತಿ ದೇವರು ಕೊಡಲಿ ಹೇದು ಪ್ರಾರ್ಥನೆ.
~
ಒಂದೊಪ್ಪ: ಒಂದು ರವಿ ಅಸ್ತಂಗತ ಆದಲ್ಲಿ ಸಾವಿರ ಸಾವಿರದ ರವಿಗೊ ಹುಟ್ಟಲಿ.
~
ಸೂ:ಪಟ ಇಂಟರ್ನೆಟ್ಟಿಂದ
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
🙁
ರವಿಯ ಸಾವು ಬೇಜಾರದ ಸಂಗತಿ.
ಇದೆ ಎತ್ತರಲ್ಲಿ ಕೂದ ಗೋವಿ೦ದ ಭಟ್ಟರು ಹಾ೦ಗೆ ಎವಾಗಲೂ ಬೇಗೂ ರೆಡಿ ಮಾಡಿ ಕೂರುತ್ತಿದ್ದವಡ ಟ್ರಾನ್ಸುಪರು ಮಧ್ಯರಾತ್ರಿ ಬಾಗುಲು ಬಡಿಗೂ ಹೇಳಿ. . ಅವರ ಕ೦ಡರೆ ಎಲ್ಲರಿ೦ಗೂ ಪಿಟಿಪಿಟಿ.
ಭ್ರಷ್ಟ ನಿರ್ಮೂಲನ ಅಪ್ಪಲೆ ಏವ ಹೊಡೆಂದ್ಲು ಬಾಗಿಲಿಲ್ಲೆ.ಇನ್ನಿನ್ನು ಹೀಂಗಿದ್ದ ಪ್ರಾಮಾಣಿಕ ಅಧಿಕಾರಿಗೊ ಸಿಕ್ಕಲೆ ಕಷ್ದ ಇದ್ದು. ಅವರವರ ಹೊಂದಿಯೊಂಡಿದ್ದ, ಹೆಮ್ಮಕ್ಕಳು[ ಅಬ್ಬೆಯೊ,ಎಜಮಾಂತಿಯೊ] ಖಂಡಿತಾ ಬಿಡವು. ಆರಿಂಗು ಅವರವರ ಜೀವಂದ ದೊಡ್ಡದು ಬೇರೇವದು?.
ಒಳ್ಳೆ ಪ್ರಾಮಾಣಿಕ, ದಕ್ಷ ಅಧಿಕಾರಿಗವಕ್ಕೆ ಈ ಭ್ರಷ್ಟರ ಎದುರು ಅವರವರ ಕರ್ತವ್ಯವ ಮಾಡ್ಳೆ ಭಾರೀ ಕಷ್ಟ ಇದ್ದಪ್ಪ.
ಮಂಗಳೂರಿಲ್ಲಿಯೂ ಇತ್ತೀಚೆಗೆ ಹೀಂಗೆ ಇಪ್ಪ ಒಂದು ಘಟನೆ ಆದ್ದದು ಮರವಲಾವುತ್ತಿಲ್ಲೆ. ಕೇಸಿನ ಹೇಂಗೆ ಬೇಕಾರೂ ಅವಕ್ಕೆ ಬೇಕಾದಹಾಂಗೆ ತಿರುಗಿಸಿ ಬಿಡುತ್ತವು ಈ ಪೈಸೆಕ್ಕಾರಂಗೊ. ಒಬ್ಬಂಗೆ, ಕೆಲವೇ ಕೆಲವು ಜೆನಕ್ಕೆಅವರ ಎದುರುಸಲೆಡಿಗೊ ?
ಎಲ್ಲೋರು ಎದುರಿಸಿದರೆ ಈ ಭ್ರಷ್ಟರ ಸದೆಬಡವಲೆ ಏನೂ ಕಷ್ಟ ಆಗ.
ಇತ್ತೀಚೆಗೆ ಡೈಜಿವರ್ಲ್ಡ್ ಲ್ಲಿ ಒಬ್ಬನ ಅನಿಸಿಕೆ ನೋಡಿ ನಿಜ ಹೇಳಿ ಕಂಡತ್ತು. ತೀರಿಕೊಂಡವನ “ಆತ್ಮ”ವೇ ಭ್ರಷ್ಟರ ದಮನ ಮಾಡೆಕು ಹೇಳಿ. ಅಂಬಗ ಭ್ರಷ್ಟರ ನಿರ್ಮೂಲನ ಅಕ್ಕು ಹೇಳಿ. ಆರಾರು ಎಂತ ಕೆಟ್ಟ ಕೆಲಸ ಮಾಡ್ತವೂ ಹೇಳಿ ಆ ದೇವರಿಂಗೇ ಗೊಂತು. ದೇವರೇ ಅವಕ್ಕೆಲ್ಲ ಒಳ್ಳೆ ಬುದ್ದಿ ಕೊಡ್ಳಿ.
ಹೀಗೂ ಉಂಟೇ..! ಇಂತಾ ನಾಡಿಲಿ ನಾವಿಪ್ಪದೋ..? ಶೇಮ್…ಶೇಮ್..
ಈ ದೇಶಕ್ಕೆ ತನ್ನ ಮಗನನ್ನೇ ಬಲಿದಾನ ಕೊಟ್ಟ ಆ ಮಹಾ ಅಬ್ಬೆಯ ಆರು ಸಮಾದಾನ ಮಾಡೊದು.?
ದುರ್ದೈವ ! ಆತ್ಮೀಯತೆ, ಮಾನವೀಯತೆ, ಗೌರವ, ಪ್ರಾಮಾಣಿಕತೆ, ದಕ್ಷತೆ, ನಂಬಿಕೆ ರಜಾರು ಇತ್ತಿದ್ದದ್ದ ನಮ್ಮೀ ತೆಂಕ್ಲಾಗಿಯೆ. ಆದರೆ ಇತ್ತೀಚೆಗೆ ಕೆಲವೇ ಹಠಮಾರಿಗಳ ಕೈಲಿ ಚುಕ್ಕಾಣಿ ಸಿಕ್ಕಿ ಇವೆಲ್ಲವೂ ನರಕ್ಕುತ್ತ ಇಪ್ಪದು ನೋಡಿರೆ ದೊಡ್ಡ ಒಂದು ಕ್ರಾಂತಿ ನಮ್ಮ ನಾಡಿಲ್ಲಿ ಅನಿವಾರ್ಯ ತೋರುತ್ತು. ಹರೇ ರಾಮ. ಒಳ್ಳೆ ದಿನಂಗೊ ಬರಳಿ, ಒಳ್ಳೆ ನಾಯಕರು ಕಾಯಲಿ.