ನವರಾತ್ರಿ ಮುಗಾತೋ?
ಪುಸ್ತಕಪೂಜೆಯ ಚೀಪೆವಲಕ್ಕಿ ಮುಗಾತೋ?
ನವರಾತ್ರಿ ಎಡಕ್ಕಿಲಿ ಬೈಲಿಲಿ ರಜ ಜೆನ ಕಮ್ಮಿ, ಅಲ್ಲದ್ದೆ ಅಲ್ಲ!
ಎಲ್ಲೋರುದೇ ಅಂಬೆರ್ಪು- ಅಂಬೆರ್ಪು. ಅದರ ಎಡಕ್ಕಿಲಿ ಬೈಲಿಲಿ ಶುದ್ದಿ ಕೇಳೇಕು! ಹು!
~
ಬೈಲಿಲಿ ಶುದ್ದಿಗೊ ಎಲ್ಲ ತುಂಬ ದೊಡ್ಡ ಇರ್ತು, ಅದರ ಕೇಳುಲೇ ಪುರುಸೊತ್ತಿರ್ತಿಲ್ಲೆ – ಹೇದು ತರವಾಡುಮನೆ ಶಾಂಬಾವನ ಆರೋಪ.
ಶುದ್ದಿ ಹೇಳುಲೆ ನೆರೆಕರೆಯೋರಿಂಗೆ ಪುರುಸೊತ್ತು ಸಿಕ್ಕುತ್ತು, ಅಂಬಗ ಕೇಳುಲೆ ಬೈಲಿನೋರಿಂಗೆ ಇಲ್ಲೆಯೋ – ಕೇಳಿದೆ.
ಅಲ್ಲ, ಆರನ್ನೂ ದೂರ್ತ ಹಾಂಗಿಲ್ಲೆ ಈಗಾಣ ಕಾಲಲ್ಲಿ. ಅವಕ್ಕವಕ್ಕೆ ಅವರವರ ಅಂಬೆರ್ಪು.
ಎಂತ್ಸರ ಮಾಡುತ್ಸು!!
ಅಂಬೆರ್ಪಿನೋರಿಂಗೆ ಹೇಳಿಯೇ ಅಂಬೆರ್ಪಿಲಿ ಓದುತ್ತ ನಮುನೆ ಶುದ್ದಿ ಬರದರೆ ಹೇಂಗಕ್ಕು?
ಒಂದಕ್ಕೊಂದು ಸತ್ವ-ಸಮ್ಮಂದ ಇರೇಕು ಹೇಳಿ ಇಲ್ಲೆ, ಇಪ್ಪಲಾಗ ಹೇಳಿಯೂ ಇಲ್ಲೆ.
ನೆಗೆ ಬರೇಕು ಹೇಳಿ ಏನಿಲ್ಲೆ, ಬಪ್ಪಲಾಗ ಹೇಳಿಯೂ ಇಲ್ಲೆ – ಒಟ್ಟು ಶುದ್ದಿ ಇದ್ದರಾತು; ಇಪ್ಪ ರಜ್ಜವೇ ಸಮೆಯ ಕಳಿಯೇಕು.
ಹಾಂಗೆ, ಈ ವಾರ ಹಾಂಗಿರ್ತ ಶುದ್ದಿಯನ್ನೇ ಮಾತಾಡುವನೋ?
ಎಲ್ಲ ಶುದ್ದಿಗಳೂ ಎರಡೇ ಗೆರೆದು. ಕಣ್ಣಾಡುಸಿರೆ ಓದಿ ಮುಗಿಯೇಕು!
ಇದಾ, ಒಂದರ ಓದಲೆ ಅರ್ದ ನಿಮಿಷ ಹಿಡುದರೂ – ಒಟ್ಟು ಶುದ್ದಿ ಓದಲೆ ಹನ್ನೊಂದು ನಿಮಿಷ ಬೇಕಕ್ಕು, ಮತ್ತೆ ನಾಕು ನಿಮಿಷಲ್ಲಿ ಒಪ್ಪ ಕೊಟ್ರೆ, ಕಾಲುಗಂಟೆಲಿ ಶುದ್ದಿ ಓದುತ್ತ ಕಾರ್ಯ ಮುಗಾತು.
ಅಪ್ಪೋಲ್ಲದೋ?
~
- ಹಳೆಡಕ್ಕೆಗೆ ಇನ್ನೂರಾತು – ಹೇಳಿಗೊಂಡು ಶಾಂಬಾವ ಅಡಕ್ಕೆ ಕೊಟ್ಟನಾಡ.
ಅಲ್ಲಿಂದ ಮುಳಿಯದ ಸರಾಪಣ್ಣನಲ್ಲಿಗೆ ಹೋದರೆ – ಚಿನ್ನಕ್ಕೆ ಕ್ರಯ ಮತ್ತೂ ಏರಿದ್ದು ಭಾವಾ – ಹೇಳಿದವಡ. - ಶಿವಲಿಂಗ, ಸಾಲಿಗ್ರಾಮ ಎಲ್ಲ ಲೊಟ್ಟೆ.
ನಿತ್ಯಪೂಜೆ ಮಾಡ್ತ ಅಗತ್ಯವೇ ಇಲ್ಲೆ ಹೇದು ದೇವರ ನಂಬದ್ದ ಬುದ್ಧಿಜೀವಿ ಗೆಡ್ಡದಪ್ಪಚ್ಚಿ ಕಾಸ್ರೋಡಿನ ಮಾಪುಳೆ ಅಂಗುಡಿಲಿ ಕೂದಂಡು ಲೊಟ್ಟೆಪಂಚಾತಿಗೆ ಬಿಟ್ಟುಗೊಂಡಿದ್ದ ಹಾಂಗೇ – ಅದು ಬಾಗಿಲೆಟ್ಟಿಕ್ಕಿ ಪಳ್ಳಿಗೆ ಹೋತಡ! - ಬರೇ ಹತ್ರುಪಾಯಿ ಸಂಬಳ ಜಾಸ್ತಿ ಕೊಡ್ತದಕ್ಕೆ ಆಳುಗೊ ನಮ್ಮಲ್ಲಿಂದ ಬೇರೆದಿಕ್ಕೆ ಕೆಲಸಕ್ಕೆ ಹೋವುತ್ತವಡ.
ಒಂದು ಕಂಪೆನಿಂದ ಹೆಚ್ಚು ಸಂಬಳದ ಇನ್ನೊಂದು ಕಂಪೆನಿಗೆ ಸೇರ್ಲೆ – ನೆಡುಗೆ ಒಂದುವಾರದ ರಜೆಲಿ ಊರಿಂಗೆ ಬಂದಿದ್ದ ಇಂಜಿನಿಯರು ಭಾವ ಹೇಳಿದ. - ಹೆರಾಣ ಹರಟೆ ಬೇಡ ಹೇಳಿಗೊಂಡು ತಂಪಾದ ಏಸಿ ಬಸ್ಸಿಲಿ ಬೆಂಗುಳೂರಿಂಗೆ ಹೋದ್ಸಡ ರೂಪತ್ತೆ.
ನಾಕುಸಾಲು ಹಿಂದಾಣ ಸೀಟಿಲಿ ಯೇವದೋ ಗೊರಕ್ಕೆ ಹೊಡದ್ದರ್ಲಿ ಇಡೀ ಇರುಳು ಒರಕ್ಕಿಲ್ಲೇಡ ರೂಪತ್ತೆಗೆ. - ತೋಟಕ್ಕೆ ಬಂದ ದನುವಿನ ’ಕಾಲು ಮುರಿಯೇಕು’ ಹೇಳಿ ಬಡಿಗೆ ಹಿಡ್ಕೊಂಡು ಮೋಹನಬಂಟ ಓಡುಸಿಗೊಂಡು ಹೋಪಗ, ತೋಟಲ್ಲಿ ಅಡಿಮೊಗಚ್ಚಿ ಸೊಂಟ ಕುಸ್ಕಿದ್ದಡ. ಆರುತಿಂಗಳು ’ಮನುಗಿದಲ್ಲೇ’ ಇರೇಕು ಹೇಳಿದ್ದವಡ ಡಾಗುಟ್ರು.
- ನೂರುಪುಟದ ಡಿಕಿಶ್ನರಿ ಮೊನ್ನೆ ಬೆಳ್ಳಕ್ಕೆ ಹೋತು ಹೇಳಿಗೊಂಡು ನೆಗೆಮಾಣಿ ಇಂಗ್ಳೀಶುಕಲಿಯಲೆ ಹೋಯಿದನಿಲ್ಲೇಡ.
ಶುದ್ದಿ ಗೊಂತಾದ್ದಕ್ಕೆ ಮಾಷ್ಟ್ರುಮಾವ ಐನ್ನೂರು ಪುಟದ ಹೊಸ ಡಿಕಿಶ್ನರಿ ತಂದುಕೊಟ್ಟಿದವಡ! - ಈ ಒರಿಶದ ನವರಾತ್ರಿಗೆ ಮಾಂಕು ಕೊರಗ್ಗನ ವೇಶ ಹಾಕಿದ್ದು ಅಕೇರಿ ಅಡ.
ಬಾಯಮ್ಮನ ಮದುವೆ ಆದ ಅದರ ಮಗ ವೇಶ ಮುಂದುವರುಸ ಹೇಳಿ ಪ್ರಾಯ ಆದ ಮಾಂಕುಗೂ ಗೊಂತಿತ್ತು. - ಇಂಜಿನಿಯರು ಕಲ್ತುಗೊಂಡಿಪ್ಪ ಪಾಡಿ ಕೂಸು ಕೆಲಸಕ್ಕೆ ಹೋವುತ್ತ ಯೋಚನೆಲಿ ರೆಸ್ಯೂಮು ಮಾಡ್ತ ಗಡಿಬಿಡಿಲಿ ಇದ್ದತ್ತು.
ಪಾಡಿಮಾವ ಅದರಿಂದಲೂ ಬೇಗ ಜಾತಕಪಟಮಾಡಿ ಮದುವೆ ಗಡಿಬಿಡಿ ಹಬ್ಬುಸಿಬಿಟ್ಟವು! - ಪಾರೆ ಮಗುಮಾವ ಮದಲಿಂಗೆ ಮಗಳ ಶಾಲೆಒರೆಂಗೆ ಬಿಟ್ಟು ಬಂದುಗೊಂಡಿತ್ತವು – ಸ್ಕೂಟರಿಲಿ.
ಈಗ ಮಗುಮಾವ ಎಲ್ಯಾರು ಜೆಂಬ್ರಕ್ಕೋ ಮಣ್ಣ ಹೋಯೇಕಾರೆ ಮಗಳೇ ಬಿಟ್ಟಿಕ್ಕಿ ಬಪ್ಪದಡ, ಸ್ಕೂಟಿಲಿ! - ರೂಪತ್ತೆಯ ಕಾರಿನ ಚಕ್ರಕ್ಕೆ ಗಾಳಿಹಾಕಿದ ಪೆಟ್ರೋಲುಬಂಕಿನ ಹುಡುಗಂಗೆ ಒಂದು ಪೈಶೆಯೂ ಕೊಡ್ತಿಲ್ಲೇಡ.
ರೂಪತ್ತೆಗೇ ಗಾಳಿ ಹಾಕಿದ್ದರೆ ಕೊಡ್ತಿತೋ ಏನೋ! - ಕೊಳೆರೋಗ ಜೋರು ಬಂದದಕ್ಕೆ ಬೈಲಿಲಿ ಎಲ್ಲೋರುದೇ ಮಳೆಯ ಬೈದವು.
ಈಗ ನವರಾತ್ರಿಗೆ ಬಾರದ್ದೇ ಇದ್ದದಕ್ಕೆ ಮಳೆಯ ಪುನಾ ಬೈದವು! - ಬೋಚಬಾವ ಕಾಳಿದಾಸ ಅಪ್ಪಲೆ ಕಾಳಿದೇವಸ್ಥಾನವೇ ಸಿಕ್ಕುತ್ತಿಲ್ಲೇಡ.
ಎಲ್ಲಿಗೆ ಹೋದರೂ ಅವಂಗೆ ಕಾಲಿದೇವಸ್ಥಾನವೇ ಕಾಂಬದಾಡ! - ದೊಡ್ಡಳಿಯ ಕೃಷ್ಣನವೇಷ ಹಾಕಿ ’ಚೆಂದ ಆಯಿದೋ’ – ನೋಡ್ಳೆ ಕಣ್ಣಾಟಿ ಎದುರೆ ನಿಂದನಾಡ.
ಕಣ್ಣಟಿಲಿ ಅವ ಎಲ್ಲಿದ್ದ ಹೇಳಿ ಅವಂಗೇ ಗೊಂತಾಯಿದಿಲ್ಲೇಡ! 😉 - ಬೊಳುಂಬುಅಜ್ಜ ಸೈಕ್ಕಾಲು ಕಲ್ತು ಮೈಕೈ ಗಾಯ ಮಾಡಿಗೊಂಡದು ಗೊಂತಿದ್ದಲ್ಲದೋ.
ಬೊಳುಂಬುಮಾವನೂ ನಾಟಕ ಮಾಡಿ ಕೈಕ್ಕಾಲು ಬೇನೆಮಾಡಿಗೊಳ್ತವು ಹೇಳಿ ಬೊಳುಂಬುಮಾವನ “ಅಜ್ಜ” ಮೊನ್ನೆ ಕೊಡೆಯಾಲಲ್ಲಿ ಶರ್ಮಪ್ಪಚ್ಚಿಯ ಹತ್ತರೆ ಬೇಜಾರುಮಾಡಿಗೊಂಡವಡ. - ನೆಗೆನೆಗೆಮೋರೆಯ ನೆಗೆಮಾಣಿಗೆ ನೆಗೆಯೇ ಕಮ್ಮಿ ಆಗಿತ್ತಾಡ;
ಬೈಲಿಲಿ ನೆಗೆಚಿತ್ರಶಾಮಣ್ಣನ ನೆಗೆಚಿತ್ರ ನೋಡಿ ನೆಗೆಮಾಣಿಗೇ ನೆಗೆಬಂತಡ. - ಸರ್ಪಮೆಲೆ ಮಾವಂಗೆ ಕಳುದೊರಿಶ ರಿಟೇರ್ಡು.
ನೆಂಟ್ರಮನೆಗೆ ರಿಟೇರ್ಡು ಆದ ಮತ್ತೆ ಹೋಪೊ ಗ್ರೇಶಿದ್ದದಡ; ಈಗ ನೋಡಿರೆ, ಮದಲೇ ಪುರುಸೊತ್ತು ಜಾಸ್ತಿ ಇದ್ದದು ಹೇಳಿ ಅನುಸುತ್ತಾಡ. - ಸುಬಗಣ್ಣಂಗೆ ಎಕೌಂಟು ಲೆಕ್ಕ ಬರಕ್ಕೊಂಡು ಬೇಲೆನ್ಸು ಮಾಡುವಗ ಈಗ ಒಂದೊಂದರಿ ಹಳೆಮರಪ್ಪು ಬಂದು ಮಾಲ್ತಾಡ.
ಮತ್ತೆ ಮಗನ ಕೈಲಿ ಕೇಳಿ ಸರಿಮಾಡಿಗೊಂಬದಾಡ! - ಪ್ರಾಯ ಆದ ಬಂಡಾಡಿಅಜ್ಜಿಗೆ ಹಲ್ಲಿಲ್ಲೆ.
ಪ್ರಾಯ ಹಿಡಿಯದ್ದ ನೆಗೆಮಾಣಿಗೂ ಹಲ್ಲಿಲ್ಲೆ! - ಬೆಂಗುಳೂರಿಲಿಪ್ಪ ಪುಟ್ಟಬಟ್ರಿಂಗೆ ಅಂದೇ ಮೊಬಾಯಿಲು ಇದ್ದಾಡ.
ಈಗ ಮಂತ್ರ ಹೇಳುವಾಗ “ಕಾಲೇ ವರುಷತು ಪರ್ಜನ್ಯಃ ಮಿಸ್-ಕಾಲೇ ಸಸ್ಯಶಾಲಿನೀ” ಹೇಳಿ ಕವಲು ಹೋವುತ್ತಾಡ! - ಕಾನಾವು ಡಾಗುಟ್ರ ಆಪೀಸಿಲಿ ಯಕ್ಷಗಾನದ ಬೊಂಬೆ ಯೇವತ್ತೂ ಇದ್ದಾಡ.
ಅವರ ಮನೆಲಿ ತಾಳಮದ್ದಳೆ ಯೇವತ್ತೂ ಇದ್ದೋ – ಉಮ್ಮಪ್ಪ!? 😉 - ಮೊನ್ನೆ ಅಜ್ಜಕಾನಬಾವ ಒಂದು ಶುದ್ದಿ ಹೇಳಿದ, ಭಾರೀ ಆಲೋಚನೆ ಮಾಡೇಕಾದ ವಿಚಾರ.
ಊರಿಂದ ಬೆಂಗುಳೂರಿಂಗೆ ಹೋಪಲೆ ಮದಲೇ ಟಿಗೇಟು ಮಾಡೇಕಾವುತ್ತು, ಆದರೆ ಬೆಂಗುಳೂರಿಂದ ಊರಿಂಗೆ ಬರೇಕಾರೆ ಮದಲೇ ಟಿಗೇಟು ಮಾಡೇಕು ಹೇದು ಏನಿಲ್ಲೆಡ! - ನವಗೆ ಹೇಳುಲಿಪ್ಪದರ ಎರಡೇ ಗೆರೆಲಿ ತೂಷ್ಣಿಲಿ ಮುಗುಶೇಕು.
ಒಂದುಗೆರೆಲಿ ಸುರುಮಾಡೇಕು, ಇನ್ನೊಂದು ಗೆರೆಲಿ ನಿಲ್ಲುಸೇಕು! 😉
~
ಅದಾ, ಒಂದಲ್ಲ – ಎರಡಲ್ಲ ಇಪ್ಪತ್ತೆರಡು ಶುದ್ದಿಗೊ; ಎರಡೇ ಗೆರೆಗೊ ಪ್ರತಿ ಶುದ್ದಿಲಿಯೂ.
ಒಂದರಿಂದ ಒಂದಕ್ಕೆ ಸಮ್ಮಂದ ಇಲ್ಲೆ!
ಶುದ್ದಿ ಸಣ್ಣ ಆದಷ್ಟು ಅದರ ಯೋಚನೆಮಾಡ್ತ ವೈಶಾಲ್ಯತೆ ಜಾಸ್ತಿ ಅಡ, ಮಾಷ್ಟ್ರುಮಾವ ಹೇಳುಗು.
ಅಲೋಚನೆ ಮಾಡಿದ ಹಾಂಗೆ – ಅದರ ಆಳ,ವಿಸ್ತಾರಂಗೊ ದೊಡ್ಡ ಇದ್ದು ಹೇಳ್ತದು ಅರಡಿಗು. ಮಾತು ಕಮ್ಮಿ ಆದಷ್ಟು ತೂಕ ಜಾಸ್ತಿ ಆವುತ್ತು.
‘ಎಷ್ಟುಬೇಕೋ ಅಷ್ಟೇ’ ಹೇಳ್ತಹಾಂಗೆ ಮಾತಾಡಿತ್ತುಕಂಡ್ರೆ ತೂಕ ಹೆಚ್ಚಪ್ಪದಡ.
ಹಾಂಗಾಗಿ ಈ ವಾರದ ಶುದ್ದಿಗಳೂ – ಎರಡು ಗೆರೆ ಮಾತುಗೊ ಮಾಂತ್ರ!
ಒಂದು – ಮಾತು ಸುರುಮಾಡ್ಳೆ, ಇನ್ನೊಂದು – ನಿಲ್ಲುಸಲೆ. ಅಷ್ಟೇ! 🙂
~
ಒಟ್ಟಿಲಿ ಹೇಳ್ತರೆ, ಅಗತ್ಯ ಬಿದ್ದಿಪ್ಪಾಗ ಮಾತಾಡ್ಳೂ ಅರಡಿಯೇಕು, ಸಮಯ ಬಪ್ಪಗ ನಿಲ್ಲುಸಲೂ ಅರಡಿಯೇಕು.
ಎರಡ್ರಲ್ಲಿ ಯೇವದಾರು ಒಂದು ಅರಡಿಯದ್ರೂ – ಜೆನ ಸೋತದೇ.
ಅಗತ್ಯ ಬಿದ್ದಲ್ಲಿ ಮಾತಾಡದ್ರೆ ಸುಮ್ಮನೇ ವಾದ-ಅಪವಾದಂಗೊ ಬಪ್ಪಲೂ ಸಾಕು ಕೆಲವು ಸರ್ತಿ.
ಹಾಂಗೇ, ಅಗತ್ಯ ಇಲ್ಲದ್ದೇ ಮಾತಾಡಿರೆ ಹೇಂಗಕ್ಕು – ರಜ ಅರೆಮರುಳು ಹೇಳವೋ?
ಬೈಲಿನ ಎಲ್ಲ ನೆರೆಕರೆಯೋರುದೇ – ಸಮಯ ಸಂದರ್ಭ ಅರ್ತು ಬೇಕಾದಟ್ಟೇ ಮಾತಾಡುಗು. ಹಾಂಗೇಅದರ ಸೂಚಕವಾಗಿ ಒಪ್ಪಣ್ಣನ ಈ ಶುದ್ದಿ!
ಉದ್ದದ ಶುದ್ದಿ ಕೇಳಲೆ ಉದಾಸ್ನ ಆವುತ್ತೋರಿಂಗೆ ಇದರ ಕೇಳಲೆ ಉದಾಸ್ನ ಬಾರ.
ಉದ್ದದ ಶುದ್ದಿಯೇ ಆಯೇಕು – ಹೇಳ್ತ ನೆರೆಕರೆಯೋರಿಂಗೆ ಇನ್ನು ಒಪ್ಪ ಬರವಲೆ ಪುರುಸೊತ್ತಿದ್ದು!
ಎಂತ ಹೇಳ್ತಿ?
ಒಂದೊಪ್ಪ: ಮಾತು ಸಣ್ಣ ಆಯೇಕು.
ಆದರೆ, ಮನಸ್ಸು ಸಣ್ಣ ಅಪ್ಪಲಾಗ. 🙂
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಸಣ್ಣ ಸಣ್ಣ ಶುದ್ಧಿಗೊಕ್ಕೇ ಈಗ ಡಿಮಾಂಡು..
ಈಗೆಲ್ಲ ಬಫೆಲ್ಲಿ ಉಂಡಿಕ್ಕಿ ಓಡುದೇ ಮಾತಾಡಿಗೊಂಡು ಕೂಪಲೆ ಪುರುಸೊತ್ತು ಇಲ್ಲೇ..
ಪೇಟೆಲಿಯೂ ಹಳ್ಳಿಲಿಯು..
ಲಾಯಿಕಾಯಿದು
ಭಲೆ ಒಪ್ಪಣ್ಣ ಭಲೆ…
ಚಿಕ್ಕ ಗೆರೆಗಳ ಚೊಕ್ಕ ಶುದ್ದಿಗ ಅರ್ಥಗರ್ಭಿತವೂ, ಚಿಂತನಾರ್ಹವೂ ಅಪ್ಪು..
ಕೊಶಿ ಆತು…
ಚೆನ್ನೈ ಭಾವನ ಒಪ್ಪ ಅಂತು ಅದ್ಭುತ…:)
ತು೦ಬಾ ಲಯಿಕಾಯ್ದು ಬರದ್ದು..ಸುಮಾರು ಆಲೋಚನೆ ಮಾಡುವ೦ತ ವಿಶಯವ ಎರಡೇ ಗೆರೆಲಿ ಹೇಳಿದ್ದು ಪಷ್ಟಾಯ್ದು!!
ಅದ್ಹುತ ಲೇಖನ. ತುಂಬಾ ಲಾಯ್ಕಾದು.
[ಶಿವಲಿಂಗ, ಸಾಲಿಗ್ರಾಮ ಎಲ್ಲ ಲೊಟ್ಟೆ.
ನಿತ್ಯಪೂಜೆ ಮಾಡ್ತ ಅಗತ್ಯವೇ ಇಲ್ಲೆ ಹೇದು ದೇವರ ನಂಬದ್ದ ಬುದ್ಧಿಜೀವಿ ಗೆಡ್ಡದಪ್ಪಚ್ಚಿ ಕಾಸ್ರೋಡಿನ ಮಾಪುಳೆ ಅಂಗುಡಿಲಿ ಕೂದಂಡು ಲೊಟ್ಟೆಪಂಚಾತಿಗೆ ಬಿಟ್ಟುಗೊಂಡಿದ್ದ ಹಾಂಗೇ – ಅದು ಬಾಗಿಲೆಟ್ಟಿಕ್ಕಿ ಪಳ್ಳಿಗೆ ಹೋತಡ!
ಬರೇ ಹತ್ರುಪಾಯಿ ಸಂಬಳ ಜಾಸ್ತಿ ಕೊಡ್ತದಕ್ಕೆ ಆಳುಗೊ ನಮ್ಮಲ್ಲಿಂದ ಬೇರೆದಿಕ್ಕೆ ಕೆಲಸಕ್ಕೆ ಹೋವುತ್ತವಡ.
ಒಂದು ಕಂಪೆನಿಂದ ಹೆಚ್ಚು ಸಂಬಳದ ಇನ್ನೊಂದು ಕಂಪೆನಿಗೆ ಸೇರ್ಲೆ – ನೆಡುಗೆ ಒಂದುವಾರದ ರಜೆಲಿ ಊರಿಂಗೆ ಬಂದಿದ್ದ ಇಂಜಿನಿಯರು ಭಾವ ಹೇಳಿದ.
ಹೆರಾಣ ಹರಟೆ ಬೇಡ ಹೇಳಿಗೊಂಡು ತಂಪಾದ ಏಸಿ ಬಸ್ಸಿಲಿ ಬೆಂಗುಳೂರಿಂಗೆ ಹೋದ್ಸಡ ರೂಪತ್ತೆ.
ನಾಕುಸಾಲು ಹಿಂದಾಣ ಸೀಟಿಲಿ ಯೇವದೋ ಗೊರಕ್ಕೆ ಹೊಡದ್ದರ್ಲಿ ಇಡೀ ಇರುಳು ಒರಕ್ಕಿಲ್ಲೇಡ ರೂಪತ್ತೆಗೆ]
ಈ ಸಾಲುಗೊ ತುಂಬಾ ಹಿಡಿಶಿತ್ತು. ೨ ಗೆರೆಲಿ ಎಲ್ಲಾ ಸಾರ ಹೊಂದುಸುತ್ತ ಕೆಲಸ ಸಂಸ್ಕ್ರುತ ಕವಿಗೊ ಮಾಡಿಯೊಂಡು ಇತ್ತವು. ಹೀಂಗಿಪ್ಪದು ಇನ್ನಷ್ಟು ಬರಲಿ.
ಒ೦ದೊ೦ದರ ಓದಿ ಹನ್ನೊ೦ದು ನಿಮಿಷ ಯೊಚನೆ ಮಾಡುವ ಹಾ೦ಗಿದ್ದು.
ಅಲ್ಲಾ,
” ಒಪ್ಪಣ್ಣನ ಈ ಶುದ್ದಿ ಓದಿ ನೆಗೆ ತಡವಲೆಡಿಯ
ನಮ್ಮ ಹಾಲಿ(ಜಿ) ಮುಖ್ಯಮ೦ತ್ರಿದೂ ಇವ೦ದೂ ಒ೦ದೇ ಊರೋ?”
ಕ್ರಿಷ್ಣ ಚಾಮಿಯ ಪುಟ್ಟುಬಾಯಿಲಿ ಬ್ರಹ್ಮಾಂಡ ಕಂಡಾಂಗೆ ಸಣ್ಣ ಎರಡು ಗೆರೆಲಿ ವಿಶಾಲ ಅರ್ಥ ಬಪ್ಪಾಂಗೆ ಬರದ್ದು ಭಾರೀ ಪಷ್ಟಾಯಿದು. 🙂
ಮಾತು ಬೆಳ್ಳಿ ,ಮೌನ ಬಂಗಾರ ಹೇಳಿ ೨ ಗೆರೆಯ ೨೨ ಶುದ್ದಿಗೊಕ್ಕೆ ೧ ಗೆರೆಯ ಒಪ್ಪ .
ಅಯಿ ಸಬ್ಬಾಸ್ಸ್….
ಇದಾ.. ಇದಿದಾ ಒಪ್ಪಣ್ಣನ ಧಾಟಿ ಹೇಳಿರೆ..
ಒಂದೊಂದರ ಓದುಲೆ ಅರ್ಧ ನಿಮಿಷ ಸಾಕಾದರೂ, ಯೋಚನೆ ಮಾಡ್ಲೆ ಕೂದರೆ ಅರ್ಧ ಗಂಟೆ ಆದರೂ ಮುಗಿಯನ್ನೆ?
ಚೆ ಛೆ… ಸೂಪರ್…!! 🙂
ಅದ್ಬುತ ಬರಹ ! ಪಾಪಿ ಬರೆದ ತಿಂಗಳ ತಿಳಿಗಾಳು ಅಂಕಣವ ನೆನಪಿಸಿತ್ತು.ಅದು ಮಯೂರಲ್ಲಿ ಬಂದುಕೊಂಡಿತ್ತು.ತುಷಾರಲ್ಲಿ ಕಡಲೀಚೆಯ ಕುಡಿನೋಟ ಹೇಳಿ ಬಂದೊಂಡಿತ್ತು.ಜಿ.ಪಿ.ರಾಜರತ್ನಂ ಬರಕ್ಕೊಂಡಿತ್ತಿದ್ದವು ಅದರ.
“ ಸ್ಕೂಟ್ರು ಹಳತ್ತಾಯಿದು. ಸ್ಕೂಟಿ ಹೊಸತ್ತಾಯಿದು! “
ಏ ಭಾವ, 😉
ಆ ಹಳೇ ಸ್ಕೂಟ್ರಿನ ಯಾವ ಸೋಪು ಹಾಕಿ ತಿಕ್ಕಿ ತಿಕ್ಕಿ ತೊಳದು,
ಹೊಸತ್ತು ಮಾಡಿದ್ದು?? 😛
ಒಪ್ಪಣ್ಣ ಒಪ್ಪಕ್ಕೆ ಬರದ ಒಪ್ಪ ಭಾರೀ ಒಪ್ಪ ಆಯಿದು ಆತೋ…………..
ಅವರವರ ಭಾವಕ್ಕೆ ತಕ್ಕ ಹಾಂಗೆ ಅರ್ಥ ಮಾಡ್ತ ಹಾಂಗಿಪ್ಪ ಒಪ್ಪ ಓದಿದ ಎಲ್ಲೋರ ಮಸ್ತಕಕ್ಕೂ ಕೆಲಸ ಕೊಟ್ಟಿಕ್ಕು………..
ಲಾಯಿಕ ಆಯಿದು ಒಪ್ಪಣ್ಣೋ ಬರದ್ದು ಆತೋ…………
ಇದು ಭಾಗವತರು ಪದ ಹೇಳಿದ ಹಾಂಗೆ ಆಯಿದು.
ವಿಶಯ ವಿಸ್ತಾರ ಅವರವರ ಪಾಂಡಿತ್ಯ ಮತ್ತೆ ಅನುಭವಕ್ಕೆ ಬಿಟ್ಟದು
ಲಾಯಿಕ ಆಯಿದು ಒಪ್ಪಣ್ಣ
ಇಂದೆಂತ ಇದ್ದು ಬೈಲಿನ ಶುದ್ದಿ, ಷಡ್ಪದಿ ಯೇನಾರು ಬಯಿಂದೊ, ಹೇಳಿ ಕೇಳಿಗೊಂಡು ಬಂದರೆ
ಇಲ್ಲೆ – ಇಂದು ಒಪ್ಪಣ್ಣನ ದ್ವಿಪದಿಗೊ ಇದ್ದು ಹೇಳುಲಕ್ಕು ಅಲ್ಲದೋ ?
olle lekhana… layikayidu
ಎರಡೆರಡು ಗೆರೆಯ ಆದರೆ ಅತೀ ಪ್ರಾಮುಖ್ಯವಾದ ಹಲವು ಅನುಭವಂಗಳ ಬೈಲಿಲಿ ಹಂಚಿಗೊಲ್ಳೆಕ್ಕು ಹೇಳಿ ಇದ್ದು… ಸಮಯದ ಪ್ರತೀಕ್ಷೆಲ್ಲಿ ಇದ್ದೆ…
ಐಸ್ಸಿರೆ ! ಒಂದರೊಂದೊಂದು ಮೀರ್ಸಿದ್ದು.
ಸಾಂದ್ರೀ ಭವನ್ಮಂದ್ರ ತಂತ್ರೀಸ್ವರೇ…
ವಂಶವೃಕ್ಷ ಬೆಳೇಕಾರೆ ರಾಜಿಮಾಡಿಗೊಳೇಕು..!
ಭಾದ್ರಪದ ಬಹುಳ ಪಿತೃಪಕ್ಷ – ಹೆರಿಯೋರ ನೆಂಪುಮಾಡುವೊ°, ಕಡೇಪಕ್ಷ!
ಧ್ವನ್ಯಾರ್ಥ ಇಲ್ಲದ್ದರೂ, ಭಾವಾರ್ಥ ಇಪ್ಪ ‘ಪರಿಭಾಶೆಯ’ ಪದಾರ್ಥಂಗೊ…
ಕಳುದ ಒಂದು ತಿಂಗಳಿಂದ ಒಪ್ಪಣ್ಣ ಬರದ ಒಳ್ಳೊಳ್ಳೆ ವಿಷಯಂಗೊ;
ಸುಲಭವಾಗಿ ಅರ್ಥ ಅಪ್ಪ ಹಾಂಗೆ ಬರದ, ಆಸಕ್ತಿಂದ ಓದುವಂತ ಬರಹಂಗೊ;
ತುಂಬ ಮಾಹಿತಿ ತುಂಬಿದ ಶುದ್ದಿಗೊ!
“ರಾಜಿಮಾಡಿಗೊಳೇಕು” ಇತ್ತೀಚಗೆ ಒಪ್ಪಣ್ಣ ಬರದ ‘ಗಂಭೀರ’ ವಿಷಯದ ಅತ್ಯುತ್ತಮ ಲೇಖನ!
ಎಲ್ಲೋರಿಂಗೂ ಗೊಂತಿಪ್ಪ ಗಂಭೀರ ವಿಷಯ; ಪರಿಹಾರ ಗೊಂತಿಲ್ಲದ್ದ ಸಮಸ್ಯೆ!
ಆರನ್ನೂ ದೂರುವ ಹಾಂಗಿಲ್ಲೆ; ಆರದ್ದೂ ತಪ್ಪಿಲ್ಲೆ; ಎಲ್ಲೋರೂ ಅವರವರ “ಒಳಿತನ್ನೇ” ನೋಡುವದಲ್ಲದೊ?
ನಮ್ಮ ಮಕ್ಕಳ ಇಂಗ್ಲೀಷ್ ಮೀಡಿಯಮ್ಮಿಂಗೆ ಕಳುಸಿ ಒಳುದವಕ್ಕೆ ಕನ್ನಡ ಮೀಡಿಯಮ್ಮೇ ಒಳ್ಳೆದು ಹೇಳಿದ ಹಾಂಗೆ ನಾವು ಹೇಳಿದರೆ ಅಕ್ಕೊ?
ಒಪ್ಪಣ್ಣ ಆರಿಂಗೂ ಬೇಜಾರ ಆಗದ್ದ ಹಾಂಗೆ, ನಮ್ಮ ಸುತ್ತಮುತ್ತ ಕಾಂಬ ಉದಾಹರಣಗಳ ಎತ್ತಿ ತೋರುಸಿ, ಸರಿಗೆಯ ಮೇಗೆ ನೆಡದ ಹಾಂಗೆ ಜಾಗ್ರತೆಲಿ ಬರದ ಬರವಣಿಗೆಯ ತಂತ್ರ ಮೆಚ್ಚೆಕಾದ್ದೆ!
ಕೂಸುಗಳ ಕಡೆಂದಲೂ, ಮಾಣಿಯಂಗಳ ಕಡೆಂದಲೂ ಕೆಲವು ವಿಷಯಲ್ಲಿ ರಾಜಿ (compromise – ಹೊಂದಾಣಿಕೆ) ಮಾಡೆಕಾದ ಅಗತ್ಯವ ಎತ್ತಿ ಹೇಳಿದ್ದು, ಒತ್ತಿ ಹೇಳಿದ್ದು ಲಾಯಿಕಾಯಿದು!
ಸಂಸಾರ ಸುಖವಾಗಿರೆಕಾದರೆ ಈ ರಾಜಿ ಮನೋಭಾವನೆ ಇಲ್ಲದ್ದರೆ ಸಾಧ್ಯವೇ ಇಲ್ಲೆ! ಇದಿಲ್ಲದ್ದೆ ಇಂದು ಎಷ್ಟೋ ಸಂಸಾರ ಹಾಳಾವುತ್ತಾ ಇದ್ದು; ವಿಚ್ಛೇದನಂಗಳೂ ಹೆಚ್ಚುತ್ತಾ ಇದ್ದು! ಇದರ ಬಗ್ಗೆ ಬರವಲೆ ಒಪ್ಪಣ್ಣನೇ ಆಯೆಕು!!
ಮದಲೊಂದರಿ “ಬಾಲ್ಯ ವಿವಾಹ ಬರಲಿ” ಹೇಳಿ ಒಪ್ಪಣ್ಣ ಹೇಳಿದ್ದು ನೆಂಪಾವುತ್ತು! ಸಣ್ಣ ಪ್ರಾಯಲ್ಲಿ ಹೊಂದಿಗೊಂಡು ಹೋಪಲೆ ಸುಲಭ; ಬೆಳದರೆ ಬಗ್ಗುವದು ಕಷ್ಟ ಅಲ್ಲದೋ?
ಹೀಂಗೆ ‘ಗಂಭೀರ’ ವಿಷಯಂಗಳ ಬಗ್ಗೆ ಬರದು ಒಪ್ಪಣ್ಣಂಗೆ ಬಚ್ಚಿತ್ತು!
ಒಪ್ಪಣ್ಣಂಗೆ ಅಂಕಣಕಾರನ ಒತ್ತಡ! ಗುರುವಾರ ಇರುಳು ಹನ್ನೆರಡು ಹೊಡವಂದ ಮದಲೆ ಶುದ್ದಿ ಬರದು ಪ್ರೆಸ್ಸಿಂಗೆ ಕಳುಸಿ ಪ್ರಿಂಟಾಯೆಕು!! ಬರವಲೆ ಗೊಂತಿದ್ದವಂಗೆ ಶುದ್ದಿ ಇಲ್ಲದ್ದರೂ ಶುದ್ದಿ ಬರವಲೆ ಸಾಧ್ಯ ಇದ್ದು!!! ಒಂದು ಗೆರೆಯ ಶುದ್ದಿಯ ಹಿಡುಕ್ಕೊಂಡು ಹತ್ತು ಪುಟ ಬರವಲೂ ಸಾಧ್ಯ ಇದ್ದು! ಒಪ್ಪಣ್ಣನ ಈ ಸಾಧನೆಗೆ ತುಂಬು ಹೃದಯದ ಮೆಚ್ಚುಗೆಯ ಒಪ್ಪ!
ಎರಡೇ ಗೆರೆಲಿ ಇಡೀ ಬ್ರಹ್ಮಾ೦ಡವನ್ನೇ ವಿವರ್ಸುಲೆ ಎಡಿಗು ಈ ಒಪ್ಪಣ್ಣ೦ಗೆ!!!!!!!!!!!!!!!!!
ಚಿಕ್ಕದಾದರೂ ಚೊಕ್ಕವಾಗಿ ಪಕ್ಕ ಬರದ್ದಕ್ಕೆ ಲೆಕ್ಕ ಇಲ್ಲದ್ದಷ್ಟು ಒಪ್ಪ.
ಶುದ್ದಿ ಎರಡೇ ಗೆರೆಲಿ ಇದ್ದರೂ ಅದರೊಳ ಇಪ್ಪ ವಿಶಯಂಗಳ ಒಟ್ಟು ಸೇರಿಸಿದರೆ 200 ಪುಟದ ಪುಸ್ತಕ ಬರವಲೆ ಅಕ್ಕು. ಎಲ್ಲಾ ಶುದ್ಧಿಗೊ ಕೂಡಾ ಗಾಂಧಾರಿ ಮುಣ್ಚಿಯಷ್ಟು ಖಾರಕ್ಕೆ ಇದ್ದು. 😉
ಒಪ್ಪಂಗೊ 🙂
“ಶಿವಲಿಂಗ, ಸಾಲಿಗ್ರಾಮ ಎಲ್ಲ ಲೊಟ್ಟೆ.
ನಿತ್ಯಪೂಜೆ ಮಾಡ್ತ ಅಗತ್ಯವೇ ಇಲ್ಲೆ ಹೇದು ದೇವರ ನಂಬದ್ದ ಬುದ್ಧಿಜೀವಿ ಗೆಡ್ಡದಪ್ಪಚ್ಚಿ ಕಾಸ್ರೋಡಿನ ಮಾಪುಳೆ ಅಂಗುಡಿಲಿ ಕೂದಂಡು ಲೊಟ್ಟೆಪಂಚಾತಿಗೆ ಬಿಟ್ಟುಗೊಂಡಿದ್ದ ಹಾಂಗೇ – ಅದು ಬಾಗಿಲೆಟ್ಟಿಕ್ಕಿ ಪಳ್ಳಿಗೆ ಹೋತಡ!”
ಅದು ಪಷ್ಟಾತು.
ಕಥಗೊ, ಕವನಂಗೊ, ಡ್ರೆಸ್ಸುಗೊ ಎಲ್ಲವುದೆ “ಮಿನಿ” ಆವ್ತದು ಕೇಳಿದ್ದೆ ಮಿನಿಯ. ಒಪ್ಪಣ್ಣನ ಶುದ್ದಿಯುದೆ ಅದೇ ಜಾತಿಗೆ ಸೇರಿತ್ತಾನೆ !
ಒಪ್ಪಣ್ಣನ ಚಿಕ್ಕ ಮಾತುಗೊ, ಚೊಕ್ಕವಾಗಿತ್ತು. ಪ್ರತಿಯೊಂದು ವಿಚಾರದ ಒಳಾಂಗೆ ಇಳುದರೆ, ಆಲೋಚನೆ ಮಾಡ್ಳೆ ತುಂಬಾ ಇದ್ದು. ಕೆಲವಂತೂ ತುಂಬಾ ಗಂಭೀರವಾದ ವಿಷಯಂಗಳೇ. ಅರುವತ್ತು / ನೂರು ರೂಪಾಯಿಯ ಒಂದೊಂದು ಕ್ಯಾಪ್ಸೂಲು ಮಾತ್ರಗಳ ಹಾಂಗೆ ಅರ್ಥವತ್ತಾದ ಮಾತುಗೊ, ಒಪ್ಪಣ್ಣನ ಲೇಖನದ ರೂಪಲ್ಲಿ ವಿಭಿನ್ನ ಶೈಲಿಲಿ ಬಯಿಂದು. ಹೀಂಗಿಪ್ಪ ಇಪ್ಪತ್ತೆರಡು ಎರಡುಗೆರೆ ಶುದ್ದಿಗೊ ನೂರೆಂಟು, ಸಾವಿರವಾಗಿ ಆಗಿ ಬೆಳದು ವಿಶ್ವೇಶ್ವರ ಭಟ್ಟ್ರ ವಕ್ರತುಂಡೋಕ್ತಿಯ ನಮುನೆಲಿ ಪುಸ್ತಕ ರೂಪಕ್ಕೆ ಬರಳಿ ಹೇಳಿ ಆಶಿಸುವೊ° ಎಂತ ಹೇಳ್ತಿ ?
ಹ ಹ ಹ ಹ
ಭಾರಿ ಲಾಯ್ಕಾಯಿದು. ಅದರಲ್ಲಿಯುದೆ 3ನೆದು ಮತ್ತೆ 21ನೆದು. ಸುದ್ದಿ ಸಣ್ಣ ಆದರುದೆ ವಿಷಯ ದೊಡ್ಡದು.
ಎರಡು ಗೆರೆ ವಾರ್ತೆ ಓದುಲೆ ಸುಲಭ..ತುಂಬಾ ವಿಶಯ ಸಿಕ್ಕುತ್ತು.
ಯಾವ ಎಲ್ಲ ನಮುನೆಲಿ ನೀನು ಶುದ್ಧಿ ಬರೆತ್ತೆ ಒಪ್ಪಣ್ಣ ???
ಒಂದೊಂದು ವಾರದ್ದು ಒಂದೊಂದು ನಮುನೆಲಿ ಇರ್ತಪ್ಪ, ಎಲ್ಲವೂ ಒಂದರಿಂದ ಒಂದು ಲಾಯಿಕದೆ ಇರ್ತು.
~ಸುಮನಕ್ಕ
ನಿಂಗೊ ಏವ ಅಂಗಡಿಂದ ಯಾವ ಅಕ್ಕಿ ತೆಕ್ಕೊಂಬದು ಹೇಳುವಿರೋ ?!!!
ಏ ಭಾವಯ್ಯ, ಎನಗೆ ರಜಾ ಬಿಡುಸಿ ಹೇಳ್ತೆಯೊ ಮಾರಾಯ. ಎನ್ನ ತಲಗೆ ಹತ್ತಿದ್ದಿಲ್ಲೆ ನಿನ್ನ ಒಪ್ಪ. ಒಪ್ಪ, ಎರಡು ಗೆರೆ ಆದರೂ ಬೇಕನ್ನೆ ?
ಇದು ಆಗದ್ದೆ ಇಲ್ಲೆನ್ನೆ ಒಪ್ಪಣ್ಣ.. ಮಾತ್ರೆಯ ಹಾ೦ಗೆ ಕಾ೦ಬಲೆ ಸಣ್ಣ ಆದರೂ ಗುಣ ಅಪಾರ!
ಒ೦ದೊ೦ದು ಶುದ್ದಿಯುದೆ ಅವರವರ ಶಕ್ತ್ಯಾನುಸಾರ ಎಷ್ಟು ಆಳವಾದ ಅರ್ಥ ಬೇಕಾದರೂ ಮಾಡ್ಯೋಳ್ತ ಹಾ೦ಗೆ ಇದ್ದು!
ಅಭಿನ೦ದನೆಗೊ.