Oppanna.com

ಗೋಸಂತತಿ ಪುಷ್ಟಿ ಆದರೆ ಅದುವೇ “ಹಬ್ಬ”..!

ಬರದೋರು :   ಒಪ್ಪಣ್ಣ    on   09/11/2012    23 ಒಪ್ಪಂಗೊ

ಒಪ್ಪಣ್ಣ ಹೇಳ್ತ 200ನೇ ಶುದ್ದಿ!
2009-ಜೆನವರಿಂದ ಇಂದಿನ ಒರೆಂಗೆ ಒಟ್ಟು 200 ಶುದ್ದಿ ಆತು.
“ಇನ್ನೂರಾತು, ಇನ್ನೆಂತರ? ಇನ್ನು ಸಾಕೋ? ಇನ್ನೂ ಬೇಕೋ? ” -ಕೇಳ್ತ° ಒಪ್ಪಣ್ಣ
-ನಿಂಗಳೇ ಹೇಳಿಕ್ಕಿ!
~
ಗುರಿಕ್ಕಾರ°

ನಮ್ಮ ದೇಶಲ್ಲಿ ಸಾವಿರಾರು ಜಯಂತಿಗಳೂ, ಲಕ್ಷಾಂತರ ಸುಂದರಿಗಳೂ ಇದ್ದವು – ಹೇದು ಸುಭಗಣ್ಣ ಒಂದೊಂದರಿ ನೆಗೆಮಾಡುದಿದ್ದು!
ವಿಶಯ ಅಪ್ಪದ್ದೇ; ಅಲ್ಲದ್ದಲ್ಲ. ಆರ ಜಯಂತಿ ಹೇಳುದು ಎಷ್ಟು ಮುಖ್ಯವೋ, ಅವರ ಕತೆ ಎಂತರ ಹೇಳ್ತದೂ ಅಷ್ಟೇ ಮುಖ್ಯ ಇದಾ.
ವಾಲ್ಮೀಕಿ ಜಯಂತಿ ಮೊನ್ನೆ ಕಳುದ್ದು. ಆ ಸಂದರ್ಭಲ್ಲಿ ಉಪಾಯಲ್ಲಿ ವಾಲ್ಮೀಕಿಯ ಕತೆ ಬೈಲಿಲಿ ಮಾತಾಡಿಗೊಂಡಿದು, ಅಲ್ಲದೊ?
ನಿನ್ನೆಲ್ಲ ಮೊನ್ನೆ ಸುಭಗಣ್ಣ ಸಿಕ್ಕಿಪ್ಪಗ ವಾಲ್ಮೀಕಿ ಜಯಂತಿ ಶುದ್ದಿಯ ಮಾತಾಡುವಗಳೇ ಸುಭಗಣ್ಣ ಹಾಂಗೆ ಹೇಳಿ ನೆಗೆಮಾಡಿದ್ದು.
ಹ್ಹೆ! ಸುಭಗಣ್ಣ ಎಲ್ಲಿ ಸಿಕ್ಕಿದ್ದು?
~
ನಮ್ಮ ಗುರುಗೊ ಈ ವಾರ – ಕಳುದ ವಾರ ಆಗಿಂಡು ಚಂದ್ರಗಿರಿ ದಾಂಟಿ ಕೇರಳಕ್ಕೆ ಭೇಟಿ ಕೊಟ್ಟಿದವಾಡ; ಅಲ್ಲದೋ?
ಕನ್ನಡಿಪರಂಬು ಹೇಳ್ತ ಜಾಗೆಲಿ ಆದ ಯೇವದೋ ದೊಡ್ಡ ಯಾಗಕ್ಕೆ “ಗೋವಿನ” ಬಗ್ಗೆ ಉಪನ್ಯಾಸ ಕೊಡ್ಳೇದು ನಮ್ಮ ಗುರುಗಳ ಬರುಸಿದ್ದವಾಡ.
(ಅಲ್ಲಿಗೆ ಗುರುಗೊ ಬಪ್ಪಲೆ ಬೈಲಿನ ದೊಡ್ಡಜ್ಜನೇ ಮಾತುಕತೆ ಮಾಡಿದ್ದಾಡ; ಅದಿರಳಿ.)
ಅದಾಗಿ ವಯನಾಡು ಊರಿಲಿಪ್ಪ ಶಿಷ್ಯರೆಲ್ಲ ಸೇರಿ ಗುರುಗಳ ಪಾದಪೂಜೆಯೋ – ಭಿಕ್ಷೆಯೋ ಎಂತೆಲ್ಲ ಸೇವೆ ಕೊಟ್ಟೂ ಕೃತಾರ್ಥರಾವುತ್ತವಾಡ.
ಹಾಂಗೆ, ಗುರುಗೊ ಕೇರಳಕ್ಕೆ ಒಂದು ಕಾರ್ಯಕ್ರಮಕ್ಕೆ ಹೋಪಾಗ, ಅನುಕೂಲಾವಕಾಶ ಇಪ್ಪ ನಾವು ಹಲವು ಜೆನ ಶಿಷ್ಯರು ಆ ಕಾರ್ಯಕ್ರಮಕ್ಕೆ ಹೋಪದು ಕ್ರಮ – ಹೇದು ಎಡಪ್ಪಾಡಿ ಭಾ°ವ ಆಲೋಚನೆ ಮಾಡಿದನಾಡ.
ಆ ಪ್ರಯುಕ್ತ ಮುಳ್ಳೇರಿಯ ಮಂಡಲದ ತುಂಡು ಜವ್ವನಿಗರು ಹೋವುಸ್ಸು – ಹೇದು ನಿಜ ಆತಾಡ. ನಮ್ಮ ಬೈಲಿನ ಪರವಾಗಿ ಸುಭಗಣ್ಣನೂ ಇತ್ತಿದ್ದವಿದಾ.
ಮೊನ್ನೆಯೇ ಹೋಗಿ, ಕಾರ್ಯಕ್ರಮ ಎಲ್ಲವನ್ನೂ ಮುಗುಶಿ, ನಿನ್ನೆ ಉದಿಯಪ್ಪಗ ಅಲ್ಲಿಂದ ಹೆರಟು, ಹೊತ್ತೋಪಗ – ನಾವು ಸೂರಂಬೈಲು ಹಾಲಿನ ಡಿಪೊವಿಂದ ಬಪ್ಪಗ – ಸಿಕ್ಕಿದವು. ಮತ್ತೆ ಬೈಲಿಂಗೆ ಒಟ್ಟಿಂಗೇ ಬಂದದು.
ಅಷ್ಟಪ್ಪಗಳೇ – ಆ ವಾಲ್ಮೀಕಿ ಜಯಂತಿಯ ನೆಗೆಯೂ ಬಂದದು. ಅದಿರಳಿ.
~
ಬರೇ ವಾಲ್ಮೀಕಿ ಜಯಂತಿಯ ಶುದ್ದಿಯೋ? ಅಲ್ಲ – ಬೈಲಿಂಗೆತ್ತುವನ್ನಾರವೂ ಹಲವು ಶುದ್ದಿಗಳ ಮಾತಾಡಿಗೊಂಡು ಬಂದೆಯೊ°.
ಅಭಾವ° ಮೊನ್ನೆ ಅತ್ತೆಮನೆಗೆ ಹೋದ ಶುದ್ದಿ, ಟೀಕೆಮಾವಂಗೆ ಮುದ್ದಣು ಬಿದ್ದ ಶುದ್ದಿ, ಮುಳಿಯಭಾವಂಗೆ ಜೋಡು ಕಚ್ಚಿದ ಶುದ್ದಿ, ಚೆನ್ನೈ ಚಂಡಮಾರುತಕ್ಕೆ ಮಾರ್ಗಲ್ಲಿ ಹೊಂಡಬಿದ್ದ ಕತೆ, ಪುಟ್ಟಕ್ಕನ ಮದುವೆಲಿ ಐಸ್ಕ್ರೀಮು ಒಸ್ತ್ರಕ್ಕೆ ಅರುದ್ದಕ್ಕೆ ಮನೆಲಿ ತೊಳೆಶಿದ ಶುದ್ದಿ, ಶರ್ಮಪ್ಪಚ್ಚಿ ಊರ ಟ್ರಾನ್ಸ್ವರುಪೆಟ್ಟಿಗೆ ಮಾಲಿದ ಶುದ್ದಿ – ಹತ್ತು ಹಲವು ವಿಶಯಂಗೊ.
– ಈ ತೆಂಕ್ಲಾಗಿಯಾಣ ಕಾರ್ಯಕ್ರಮದ ಶುದ್ದಿಯೂ ಬಂತು.
ಎಡಪ್ಪಾಡಿ ಭಾವ°, ಮೀನಗೆದ್ದೆ ಭಾವ°, ಕುಂಟಾಂಗಿಲ ಭಾವ° – ಎಲ್ಲೋರುದೇ ಸೇರಿಂಡು ರೈಲಿಲಿ ತೆಂಕ್ಲಾಗಿ ಹೋದ್ಸಡ. ಕಣ್ಣನೂರಿನ ಕಾರ್ಯಕ್ರಮ ಅಲ್ಲದ್ದೆ, ಅಲ್ಲಿಂದಲೂ ಮುಂದೆ ವಯನಾಡಿಲಿ ಹಲವು ಕಾರ್ಯಕ್ರಮಂಗಳ ಕಳುಶೆಂಡು ಇಂದು ಬತ್ತಾ ಇಪ್ಪದಾಡ. ಕುಂಟಾಂಗಿಲ ಭಾವ° ದೊಡ್ಡಜ್ಜನ ಮನೆಗೆ ಹೋದನಾಡ; ಎಡಪ್ಪಾಡಿ ಭಾವ° ರೈಲಿಲೇ ಬೆಂಗುಳೂರಿಂಗೆ ಹೋದನಾಡ, ಮೀನಗದ್ದೆ ಭಾವಯ್ಯ ಅತ್ಲಾಗಿ, ಸುಭಗಣ್ಣ ಇತ್ಲಾಗಿ ಬಂದವಾಡ.
ಬಾರದ್ದೆ- ಮನೆಲಿಯೂ, ತೋಟಲ್ಲಿಯೂ, ಪೇಟೆಲಿಯೂ – ಕೆಲಸ ಆಗೆಡದೋ – ಹೇಳಿಗೊಂಡವು; ಪಾಪ! ಅದಿರಳಿ.
~

ಗುರುಗೊ ತೆಂಕ್ಲಾಗಿ ಇಪ್ಪಗಳೂ ಎಡಪ್ಪಾಡಿ ಭಾವ° ಗಟ್ಟ ಹತ್ತುಸ್ಸು– ಎಂತ ಸಂಗತಿ?
“ಅದೆಂತಗೆ ಹಾಂಗಾರೆ?” ಕೇಟೆ.
“ಗೋಪುಷ್ಟಿದು ಎಂತದೋ ಮೀಟಿಂಗು ಇದ್ದಾಡ” ಹೇಳಿದವು ಸುಭಗಣ್ಣ.
“ಮರದಿನ ಬೆಂಗುಳೂರಿಲಿ ಭಾಷಣ ಮಾಡ್ಳಿದ್ದಾಡ, ಹಾಂಗೆ ಇಂದೇ ಓಡಿದ್ಸು” – ಹೇಳಿದವು.
ಎಂತರ ಭಾಷಣ ಆಡ? ಕೇಟೆ. ಗೋಪುಷ್ಟಿ ಅಭಿಯಾನದ ಬಗ್ಗೆ; ಆ ಕಾರ್ಯಕ್ರಮ, ಅದರ ಹಿನ್ನೆಲೆ, ವಿವರಂಗಳ ಬಗ್ಗೆ – ಹೇಳಿದವು.
ತೆಂಕ್ಲಾಗಿಂದ ರೈಲಿಲಿ ಬಪ್ಪಗ ಎಡಪ್ಪಾಡಿಭಾವ° ಇವರ ಹತ್ತರೆ ಅದರ ಭಾಷಣ ಮಾಡಿಂಡೇ ಬಂದದೋ ತೋರ್ತು; ಎಲ್ಲವೂ ಸುಭಗಣ್ಣನ ನಾಲಗೆ ಕೊಡಿಲಿ ಇದ್ದತ್ತು.
ಎಡಪ್ಪಾಡಿ ಭಾವ° ಹೇಳಿದಾಂಗೇ ಸುಭಗಣ್ಣ ಹೇಳಿದವು; ಅವು ಹೇಳಿದ್ದರಲ್ಲಿ ಒಪ್ಪಣ್ಣಂಗೆ ಈಗ ನೆಂಪಿಪ್ಪಷ್ಟು ಹೇಳಿಕ್ಕುತ್ತೆ. ಆತೋ?
ಹೆಚ್ಚಿನ ವಿವರ ನಿಂಗೊಗೆ ಗೊಂತಿದ್ದರೆ ಹೇಳಿಕ್ಕಿ; ಅಲ್ಲದ್ದರೆ ಎಡಪ್ಪಾಡಿ ಬಾವನೇ ಹೇಳುಗು.
~

ಗೋ ಪುಷ್ಟಿ ಮಹಾಯಜ್ಞ:
ತೆಂಕ್ಲಾಗಿ ದೊಡ್ಡಾ ಯಾಗ ಕಳಿಶಿ ಬಪ್ಪಗ ಇನ್ನೊಂದು ಯಾಗದ ಶುದ್ದಿ ಬಂತು ಹೇದು ಗ್ರೇಶಿಕ್ಕೆಡಿ; ಇದು ಯಾಗ ಅಲ್ಲ – ಬದಲಾಗಿ ಒಂದು ದೊಡಾ ಅಭಿಯಾನ.
ಸಮಾಜದ ‘ತಿಳಿವಳಿಕೆ’ಗೆ, ಎಚ್ಚರುಸಲೆ ಇಪ್ಪ ಅಭಿಯಾನ.
ಮನೆ ಮನೆಗೆ, ಮನಸ್ಸು ಮನಸ್ಸಿಂಗೆ ವಿಷಯ ಮುಟ್ಟುಸಲೆ ಆವುತ್ತ ಗೋಸೇವೆ;
ಗೋಮಾತೆಯ ಒಳಿಶಲೆ, ಮುಂದಂಗೂ ಒಳಿಯಲೆ ಎಲ್ಲೋರಿಂಗೂ ಮನಸ್ಸು ಒಪ್ಪುಸಲೆ ಇರ್ತ ಮಹಾ ಕೈಂಕರ್ಯ.

ಮಠಲ್ಲಿ ಒಂದು “ಮಹಾನಂದಿ” ಇತ್ತು – ಗೊಂತಿದ್ದಲ್ಲದೋ? (ಸುಭಗಣ್ಣ ಕೇಳುವಗ ಒಪ್ಪಣ್ಣಂಗೆ ಗೊಂತಿತ್ತು – ನಿಂಗೊಗೆ ಗೊಂತಿದ್ದೋ?)
ಅಷ್ಟೆತ್ತರದ ಸುಂದರ-ದೈತ್ಯ ಹೋರಿ ಆದರೂ ಮಹಾ ಸೌಮ್ಯ ಸ್ವಭಾವದ “ಸಾಧು” ಆಗಿತ್ತಾಡ ಅದು.
ಗುರುಗಳ ಬಗ್ಗೆ ನವಗೆಲ್ಲೋರಿಂಗೂ ಇಪ್ಪ ಹಾಂಗೇ ವಿಶೇಷ ಗೌರವ-ಪ್ರೀತಿ ಇದ್ದತ್ತಾಡ ಆ ಮಹಾನಂದಿಗೆ.
ಒರಿಶಕಾಲ ಹಿಂದೆ ತೀರಿ ಕೈಲಾಸಯಾತ್ರೆ ಮಾಡಿದ್ದು ಆ ನಂದಿ ನವಗೆ ಗೊಂತಿದ್ದು.

ಮನುಷ್ಯರಲ್ಲಿ ಅಸಾಮಾನ್ಯರಾಗಿ, ಸಂತರಾಗಿದ್ದೋರು ತೀರಿಗೊಂಡರೆ ಎಂತ ಮಾಡ್ತು? – ವೃಂದಾವನ ಮಾಡ್ತು.
ಅದೇ ರೀತಿ; ಈ ಮಹಾನಂದಿ “ಸಂತನ” ಸ್ಥಾನಮಾನದ ಗೋವು; ಹಾಂಗಾಗಿ, ಅದರ ನಿರ್ಗಮನವ “ಸಂತರ ನಿರ್ಗಮನದ ಹಾಂಗೇ” ಮಾಡೇಕು – ಹೇದು ಗುರುಗಳ ಅಪೇಕ್ಷೆ, ಅಪ್ಪಣೆ ಆಯಿದಾಡ.
ಹಾಂಗಾಗಿ – ಆ ಮಹಾನಂದಿಯ ನೆಂಪಿಂಗಾಗಿ “ಗೋಲೋಕ” ಹೇದು ಒಂದು ಬೃಹತ್-ಗೋ-ವಿಶವಿದ್ಯಾಲಯವನ್ನೇ ಮಾಡ್ತ ಏರ್ಪಾಡು ನಮ್ಮ ಹೊಸನಗರಲ್ಲಿ ಆವುತ್ತಾಡ.
ಗೋವಿಂಗೆ ಸಮ್ಮಂದಪಟ್ಟ ಸಮಗ್ರವೂ ಅಲ್ಲಿ ಸಿಕ್ಕುತ್ತ ನಮುನೆ.
ಗೋವಿಂಗೆ ಬೇಕಾದ ಆಧುನಿಕ ಆಸ್ಪತ್ರೆ, ಗೋವಿಂಗೆ ಬೇಕಾದ ಹಲವು ಬಗೆ ಸಂಶೋಧನೆಗೊ, ಮದ್ದುಗೊ – ಎಲ್ಲವೂ.
ಅದಕ್ಕೆಲ್ಲದಕ್ಕೂ ಮೂಲ ನಂದಿಯೇ.
ಜೆನಂಗೊಕ್ಕೆ ಈ ಬಗ್ಗೆ ತಿಳಿವಳಿಕೆ, ಗೋಪ್ರೇಮ ಹುಟ್ಟುಸುತ್ತ ಕಾರ್ಯಕ್ಕಾಗಿಯೇ ಈ “ಗೋ-ಪುಷ್ಟಿ ಅಭಿಯಾನ” ಇಪ್ಪದಾಡ.
~

ಈ ಅಭಿಯಾನದ ಮುಖ್ಯ ಕಾರ್ಯಕ್ರಮ ಹೇದರೆ – ಮನೆ-ಮನೆ ಸಂಪರ್ಕ ಅಪ್ಪದು.
ಸಂಪರ್ಕ ಅಪ್ಪದು ಆರು? ಹೇಂಗೆ? ಎಂತಗೆ? ಸುಮಾರು ಪ್ರಶ್ನೆಗೊ ಬತ್ತು. ಆರು ಸಂಪರ್ಕ ಅಪ್ಪದು? ನಾವೇ! ಆರ ಆಯೇಕಾದ್ಸು ನಮ್ಮನ್ನೇ!
ಚೆಲ, ಇದೊಳ್ಳೆ ಇರ್ತಲೆಯ ಹಾಂಗಾತಾನೇ – ಹೇದೆ, ಸುಭಗಣ್ಣಂಗೆ ಇರ್ತಲೆಯ ಶುದ್ದಿ ಕೇಟ್ರೆ ಕೆಮಿಕುತ್ತ ಆವುತ್ತಿದಾ!

ಅಪ್ಪು, ನಾವು – ನಮ್ಮನ್ನೇ ಸಂಪರ್ಕ ಆಯೇಕಪ್ಪದು ಈ ಅಭಿಯಾನದ ಮೂಲ ಧ್ಯೇಯೋದ್ದಶ – ಸುಭಗಣ್ಣ ವಿವರ್ಸಿದವು.
ದನಗಳ ಸಾಂಕುಸ್ಸು ಕಷ್ಟದ ಕಾರ್ಯ, ಅದು ಹರಿಯದ್ದ ಜೆಂಬಾರ, ಅದು ಆಗಹೋಗದ್ದ ಒಯಿವಾಟು ಹೇದು ಬೈಲಿನೊಳ ಹಲವು ಜೆನ ತಿಳ್ಕೊಂಡಿದವು ಅಲ್ಲದೋ – ಅವರ ಭೇಟಿ ಆಯೇಕಾದ್ಸು.
ಆಗಿ? ದನ ಸಾಂಕಾಣ ಬಂಙ ಏನಿಲ್ಲೆ, ಎಲ್ಲೋರಿಂಗೂ ಎಡಿಗು, ದನ ಸಾಂಕಿ, ಸಾಂಕೇಕು – ಹೇದು ಅವರ ಓಲೈಸುದು ಸುರುವಾಣ ಹೆಜ್ಜೆ.
ಬಾಕಿದ್ದೋರಿಂಗೆ ಹೇಳ್ತರಿಂದ ಮದಲು – ನವಗೇ ಅರ್ಧಮನಸ್ಸು ಇದ್ದು ಮಡಿಕ್ಕೊಂಬ° – ಸಾಂಕಲೆ ಹಿಂಜರಿವ ನಮ್ಮ ಒಳಮನಸ್ಸಿಂಗೆ ಗೋಪ್ರೇಮಿಯಾದ ಅರ್ಧಮನಸ್ಸಿಂದ ತಿಳುವಳಿಕೆ ಹೇಳ್ತದು.
~

ಅತಿಮೀರಿ ಒಬ್ಬಂಗೆ ಮನಸ್ಸಿದ್ದು, ಆದರೆ – ಪೇಟೆ ಮನೆಲಿ, ಒಂಟಿ ಮನೆಲಿ, ಒರಿಂಕಿನ ಮನೆಲಿಪ್ಪದು ಹೇದು – ಸಾಂಕುತ್ತ ಅವಕಾಶ ಇಲ್ಲೆ ಮಡಿಕ್ಕೊಂಬೊ° – ಅವ ಎಂತ ಮಾಡ್ಳಕ್ಕು?
ಅಂತವರಿಂದ ಗೋಸೇವೆ ಮಾಡ್ಸುತ್ತದು ಎರಡ್ಣೇ ಹೆಜ್ಜೆ.
ಗೋಸೇವೆಗೆ ಅನಂತ ಅವಕಾಶಂಗೊ ಇದ್ದು, ಒಂದೆರಡಲ್ಲ. ಯೇವದಾರು ಗೋಶಾಲೆಗೆ ಹೋಗಿ ಭೌತಿಕವಾಗಿ, ಅಲ್ಲದ್ದರೆ ಆರ್ಥಿಕವಾಗಿ ಸೇವೆ ಮಾಡ್ಳಕ್ಕು. ದನಗೊ ತಿಂಬ ಬೆಳುಲೋ, ಹಾಳೆಕಡೆಯೋ, ಹಸಿಹುಲ್ಲೋ – ದಾಸನವೋ – ಮೇವು ತಪ್ಪಲೆ ಸಕಾಯ ಮಾಡ್ಳಕ್ಕು. ಆರಾರು ದನ ಸಾಂಕುತ್ತೋರಿಂಗೆ ಎಡಿಗಾದ್ಸರ ಎತ್ತುಸುಲಕ್ಕು. ಒಟ್ಟಾಗಿ ಗೋವಿನ ಸಂಪರ್ಕಲ್ಲಿ ಇಪ್ಪದು ಮುಖ್ಯ ಹೇಳ್ತದು ಆಶಯ ಆಡ.
ಗೋಶಾಲೆ ಎಲ್ಲಿದ್ದಪ್ಪಾ – ಹೇದು ಹುಡ್ಕುಸ್ಸು ಬೇಡ, ನಮ್ಮ ಮಠದ್ದೇ ಹಲವು ಗೋಶಾಲೆಗೊ ಇದ್ದು. ಸೇವೆ ಮಾಡ್ತರೆ ಧಾರಾಳ ಮಾಡ್ಳಕ್ಕಡ.
~
ದನವ ಸಾಂಕುಲೂ ಅವಕಾಶ ಇಲ್ಲೆ, ಗೋಸೇವೆ ಮಾಡ್ಳೂ ಎಡಿತ್ತಿಲ್ಲೆ ಹೇದರೆ –ಕನಿಷ್ಠ ನೂರು ಜೆನರ ಆದರೂ – “ಗೋಪ್ರೇಮಿಗಳಾಗಿ ಮಾಡೇಕು” ಹೇಳ್ತದು ಮೂರ್ನೇ ಹಂತ.
ನೂರು ಜೆನ ಹೊಸಬ್ಬರ ಕಂಡು ಮಾತಾಡ್ಸಿ ಗೋವಿನ ಬಗ್ಗೆ ಜಾಗೃತಿ ಮೂಡುಸಿ, ಅದರ ಹಿರಿಮೆಯ ತಿಳುಶೇಕಾದ್ಸು ನಮ್ಮ ಕೆಲಸ.
ಆರಿಂಗೆ ತಿಳುಶೇಕಾದ್ಸು? ದನುವಿನ ಸರೀ ಗುರ್ತ ಇಪ್ಪ ಬಟ್ಯಂಗೆ ತಿಳುಶುತ್ತದು ಇದ್ದನ್ನೇ – ದನಂದ ತುಂಬ ದೂ…ರ ಒಳುದ ಶುಭತ್ತೆಯ ಮಕ್ಕಳ ಹಾಂಗಿರ್ತೋರಿಂಗೆ ವಿಶಯ ಎತ್ತುಸೇಕು. ಅವರ “ಗೋವಿಂಗೆ” ಹತ್ತರೆ ಮಾಡ್ಸೇಕು. ಅಂತವರ ಸಂಪರ್ಕ ಮಾಡ್ಸೇಕು. ಅವರ ಕ್ರಮೇಣ ಗೋಶಾಲೆಗೆ ಕರಕ್ಕೊಂಡು ಬರೆಕ್ಕು; ಅವರಿಂದ ಗೋಸೇವೆ ಮಾಡ್ಸೇಕು – ಹೇಳಿಗೊಂಡವು ಸುಭಗಣ್ಣ.
ನಮ್ಮದೇ ಗೋಶಾಲೆ ಆಯೇಕು ಹೇದು ಏನಿಲ್ಲೆ, ನಮ್ಮ ಭಾರತೀಯ ಗೋವುಗೊ ಆಗಿದ್ದರೆ ಆತು; ಅಷ್ಟೇ!

~
ನಮ್ಮ ಬಾಳ ದೀಪ ಬೆಳಗಿದ ಗೋವಿಂಗೆ ದೀಪ ಬೆಳಗುತ್ತು.
ದೀಪಾವಳಿ ಗವುಜಿಲಿ ಗೋಪೂಜೆ ಮಾಡ್ತದು ಮರೆತ್ತಿಲ್ಲೆ ನಾವು; ಅಷ್ಟಪ್ಪಗ ಈ ಒಂದು ಮಹಾನ್ ಅಭಿಯಾನದ ಬಗ್ಗೆಯೂ ನೆಂಪಿರಲಿ.
ಗೋವಿಂಗಾಗಿ ನಮ್ಮ ಗುರುಗೊ ತುಂಬ ಶ್ರಮ ಕೊಡ್ತವು; ಅವರ ಮನಸ್ಸಿಲಿ ಸಂಕಲ್ಪಂಗೊ ಹಲವಿದ್ದು – ಅದರ ಕಾರ್ಯರೂಪಕ್ಕೆ ತಪ್ಪದು ನಮ್ಮ ಕರ್ತವ್ಯ.
ಗೋಭಕ್ತರ ಸಂಪರ್ಕ ಆಗಿ ಗೋವಿನ ಬಗ್ಗೆ ತಿಳಿವಳಿಕೆ ಮೂಡುಸುವೊ°;
ಎಲ್ಲೋರುದೇ ಗೋಸೇವೆ ಮಾಡ್ತ ಹಾಂಗೆ ಮನಸ್ಸು ಬರುಸುವೊ°,
ಗೋವಿಂದಾಗಿ ಬೆಳದ ಜೀವನ ಗೋವಿಂಗಾಗಿ ಬದ್ಕುವಹಾಂಗೆ ಮಾಡುಸುವೊ°,
ಗೋವಿನ ಏಳಿಗೆಗೆ ಯೆತಾಶೆಗ್ತಿ ಸೇವೆ ಮಾಡುವೊ°,
ಗೋಲೋಕವ ಹುಟ್ಟುಸಿ, ಬೆಳೆಶಿ, ಕಾಪಾಡಿಗೊಂಡು ಬಪ್ಪೊ°..
– ಸುಭಗಣ್ಣ ಹೇಳುವಗಳೇ ಸಾರಡಿ ತೋಡು ಎತ್ತಿತ್ತು. ಅವು ತೋಡಕರೆಲೇ ಹೋದವು; ನಾವು ಇತ್ಲಾಗಿ ಬಂತು.

ಬೈಲಿನ ಎಲ್ಲೋರುದೇ “ಗೋಪುಷ್ಟಿ” ಕಾರ್ಯ ಮಾಡಿ ನಮ್ಮ ಸಮಾಜವನ್ನೇ ಪುಷ್ಟಿ ಮಾಡುವೊ°, ಆ ರೂಪಲ್ಲಿ ಈ ಸರ್ತಿಯಾಣ “ಹಬ್ಬ” ಆಚರಣೆ ಮಾಡುವೊ°, ಹತ್ತು ಜೆನ ಗೋಪ್ರೇಮಿಗೊಕ್ಕೆ ಹೇಳುವೊ° – ಹೇದು ಕಂಡತ್ತು.
ಹಾಂಗಾಗಿ ಅದನ್ನೇ ಈ ವಾರ ಬೈಲಿಂಗೆ ಶುದ್ದಿ ಆಗಿ ಹೇಳಿದ್ಸು.
ನಿಂಗಳ ಪೈಕಿಯೋರಿಂಗೆ ತಿಳುಶುತ್ತಿರಲ್ಲದೋ?

ಒಂದೊಪ್ಪ: ಭೂಲೋಕಲ್ಲೇ ದೇವಲೋಕ ತೋರ್ಸಿದ ಮಹಾನಂದಿಯ ನೆಂಪಿಂಗೆ ಗೋಲೋಕ ಕಟ್ಟುಸುವೊ°!

ಸೂ:

  • ಎಡಪ್ಪಾಡಿಭಾವ ಸುಭಗಣ್ಣನ ಕೈಲಿ ಕೊಟ್ಟ “ಅಭಿಯಾನ”ದ ಕಾಗತಂಗೊ ಇಲ್ಲಿದ್ದು:

23 thoughts on “ಗೋಸಂತತಿ ಪುಷ್ಟಿ ಆದರೆ ಅದುವೇ “ಹಬ್ಬ”..!

  1. ಪ್ರೀತಿಯ ತಮ್ಮ ಒಪ್ಪಣ್ಣ,
    ಈ ವಾರದ ಶುದ್ದಿ ತುಂಬಾ ತುಂಬಾ ಲಾಯ್ಕಾಯಿದು. ಒಳ್ಳೆ ಸಮಯಕ್ಕೆ ಬಂದ ಒಳ್ಳೆಯ ಶುದ್ದಿ!

    ಗೋವುಗಳ ಸಂತತಿ ಪುಷ್ಟಿ ಆಯೆಕ್ಕಾದರೆ ಬೈಲು, ಗೆದ್ದೆ, ತೋಟ ಬೇಕು.
    ಬೈಲು, ಗೆದ್ದೆ, ತೋಟ ಪುಷ್ಟಿ ಆಯೆಕ್ಕಾದರೆ ಎಲ್ಲೊರೂ ಅವರವರ ಮನೆ ಜಾಗೆಯ ಒಳಿಶೆಕ್ಕು.

    ನಮ್ಮ ಬೈಲು ಪುಷ್ಟಿ ಆಯೆಕ್ಕಾದರೆ ಒಪ್ಪಣ್ಣನ ಶುದ್ದಿಗೊ ಬೇಕು.
    ಒಪ್ಪಣ್ಣನ ಶುದ್ದಿಗ ಬೇಕಾದರೆ ಒಪ್ಪಣ್ಣ ವಾರವಾರ ಹಲವು ವಿಷಯಂಗಳ ಬಗ್ಗೆ ಬರೆಯೆಕ್ಕು.
    ಒಪ್ಪಣ್ಣ ಬರದ ಶುದ್ದಿಗಳ ಲಕ್ಷ ಜನ ಓದಿ ಎಲ್ಲೊರ ಲಕ್ಷ್ಯ ಅಬ್ಬೆ ಮಣ್ಣಿನ ಕಡೆಂಗೆ, ಅಬ್ಬೆ ಭಾಶೆಯ ಕಡೆಂಗೆ, ಗೋಮಾತೆಯ ಕಡೆಂಗೆ, ನಮ್ಮ ಸಾಮಾಜಿಕ ಜವಾಬ್ದಾರಿಯ ಕಡೆಂಗೆ ಹರಿಯೆಕ್ಕು.

    ಒಪ್ಪಣ್ಣನ ಒಪ್ಪ ಒಪ್ಪ ಶುದ್ದಿಗೊ ಬೈಲಿನ ಚೇತನ. ಅದಕ್ಕೆ ಯಾವ ಅಡೆತಡೆಯೂ ಇಲ್ಲದ್ದೆ ನಿತ್ಯ ನಿರಂತರ ಹಗಲಿರುಳಿನ ಹಾಂಗೆ ಬತ್ತಾ ಇರೆಕ್ಕು.
    ಒಪ್ಪಣ್ಣನ ಸಾರಸ್ವತ ಹರಿವಿಂಗೆ ಶ್ರೀಗುರುದೇವರ ಹೆರಿಯೋರ ಆಶೀರ್ವಾದದ ರಕ್ಷೆ ಸದಾ ಇದ್ದುಗೊಂಡು, ಒಪ್ಪಣ್ಣ ಆಯುರಾರೋಗ್ಯಭಾಗ್ಯಂಗಳ ಬೆಳಗಿಸಿಗೊಂಡು ಬೈಲಿಲಿ ನಿತ್ಯ ಬೆಳಗೆಕ್ಕು.

    ಬೈಲಿನ ನೆರೆಕರೆಯೋರ ಎಲ್ಲೊರ ಸೇರ್ಸಿಗೊಂಡು ಒಪ್ಪಣ್ಣನ ಪ್ರೀತಿಯ ಕಾಲೆಳೆಯಾಣ, ತಮಾಷೆಯ ಮಾತುಗಳಲ್ಲಿ ಗಂಭೀರ ವಿಷಯಂಗ ಬಂದುಗೊಂಡು, ಎಲ್ಲದರ ಪಾಕಲ್ಲಿ ಬಪ್ಪ ಶುದ್ದಿಗ ಇನ್ನು ಮುಂದೆಯೂ ಹೊತ್ತುವೇಳೆ ಬದಲಾವಣೆ ಆಗದ್ದೆ ಯೇವತ್ರಾಣ ಹಾಂಗೆ ಬೈಲಿಲಿ ಬತ್ತಾ ಇರಲಿ…
    ಗುರುಪೀಠ ಆದೇಶ ಮಾಡಿದ ಈ ಗೋಪುಷ್ಟಿ ಅಭಿಯಾನ ಯಶಸ್ವಿ ಮಾಡಿ ನಮ್ಮ ಜೀವನ ಪಾವನ ಮಾಡುವ ಗೋಮಾತೆಗೆ ನಮ್ಮ ನಮ್ಮ ಮನೆಲಿ, ಮನಲ್ಲಿ ವಿಹರಿಸುವಷ್ಟು ಜಾಗೆ ಎಲ್ಲೊರೂ ಕೊಡುವ ಹಾಂಗೆ ಆಗಲಿ..
    ಗೋವಂಶ ಬೆಳೆಯಲಿ…. ಬೈಲು ಬೆಳಗಲಿ….

  2. ಬೇಡ ಬೇಡ ಒಪ್ಪಣ್ಣಾ … ಪ್ರತೀ ವಾರ ಬಪ್ಪ ನಿನ್ನ ಅತ್ಯುತ್ತಮ ಶುಧ್ಧಿಗೊ ನಿಂಬ ಯೋಚಯೇ ಬೇಡ ಆತಾ?
    ಒಪ್ಪಣ್ಣನ ಬೈಲು ಲಾಯಿಕಲ್ಲಿ ಬೆಳೆಯಲಿ (ಒಪ್ಪಣ್ಣನ ಶುಧ್ಧಿಗೊ + ನೆರೆಕರೆಯವರ ಲೇಖನಂಗಳೊಟ್ಟಿಂಗೆ)…

    ಗೋ ಪುಷ್ಟಿ ಅಭಿಯಾನದ ಬಗ್ಗೆ ತಿಳಿಶಿ ಬರದ ಶುಧ್ಧಿ ತುಂಬಾ ಲಾಯಿಕಾಯಿದು.
    ನಮ್ಮ ಶ್ರೀ ಗುರುಗಳ ಎಲ್ಲಾ ಕಾರ್ಯಂಗೊ ತುಂಬಾ ಲಾಯಿಕದ್ದು.
    ವಿವರ ಓದಿ ಖುಷಿ ಆತು.
    ~ಸುಮನಕ್ಕಾ…

  3. ಬರಹ ಲಾಯ್ಕ್ ಆಯ್ದು. ನಿ೦ಗಳ ಹವಿಗನ್ನಡ ಭಾಷೆಯ ಆಳ ಎನ್ನ ಕಲ್ಪನೆಗೆ ಮೀರಿದ್ದು, ಓದುಲಕ್ಕೆ ಚೂರು ನಿಧಾನ ಆದ್ರೂ ವಿಷಯ ಅತ್ಯುತ್ತಮ ಇದ್ದು, ಧನ್ಯವಾದ೦ಗೊ.

  4. ಹೀಂಗೆಯೇ ಸಾಗಲಿ, ಸಂಖ್ಯೆ ಬೆಳೆಯಲಿ.
    ಶುಕ್ರವಾರ ಉದಿಯಪ್ಪಗ ಎದ್ದು ಸಿನೆಮಾ ಪುರವಣಿ ನೋಡುವದರ ಬದಲು ಇದರ ನೋಡುವದು ಅಭ್ಯಾಸ ಆಗಿ ನಾಕು ಒರುಶ ಆತು. ಇನ್ನು ಅದರ ಬದಲುಸುದು ಹೇಂಗೇ…?!!!

  5. ಲಾಯಕ ಆಯಿದು ಒಪ್ಪಣ್ಣಾ,ಧನ್ಯವಾದ೦ಗೊ… ಇನ್ನೂರು,ಮುನ್ನೂರು,……ಮುಕ್ತಾಯ ಇಲ್ಲೆ.

  6. ಸರಿಯಾದ್ದನ್ನೆ ಹೇಳಿದವು ವಿಜಯತ್ತೆ. ಇನ್ನೂರು, ಮುನ್ನೂರು, ಸಾವಿರ ಹೇಳಿ ಲೆಕ್ಕಾಚಾರ ಬೇಡ ಆತೋ ಒಪ್ಪಣ್ಣ.

  7. ಒಪ್ಪಣ್ಣ………….. ಲೇಖನ ಸಮಯೋಚಿತ. ಒಳ್ಳೆದಾಯ್ದು. ಒಪ್ಪಣ್ಣ…………
    ಬೆಲ್ಲದ ತುಂಡು ಬೇಕಾಷ್ಟು ಕೈಲಿ ಮಡಗಿಯೊಂಡು ತಿಂಬಲೆ ಆಶೆ ಮಾಡ್ತವರತ್ರೆ ಇನ್ನು ಸಾಲದೋ? ಹೇಳಿ ಕೇಳ್ತಹಾಂಗಾತನ್ನೆ ನಿನ್ನ ವರಸೆ!!! ಬೇಕು ಹೇಳಿ ಆಶೆ ಮಾಡ್ತವರ ನಿರಾಶೆ ಮಾಡೆಡ. ನಿನ್ನ ತನು, ಮನ, ಜ್ನಾನ ಅಕ್ಷಯಪಾತ್ರೆ ಆಗಲಿ ಹೇಳಿ ಬೈಲಿನವರ ಪರವಾಗಿ ಎನ್ನ ಆಶೀರ್ವಾದಪೂರ್ವಕ ಶುಭಹಾರೈಕೆ. ಎಂತ ಹೇಳ್ತಿ ಎಲ್ಲೋರು??

  8. ಒಪ್ಪಣ್ಣನ ಶುದ್ಧಿಗೊ ಸಂಖ್ಯೆಯ ಲೆಕ್ಕಲ್ಲಿ ಬೇಡ..ಅದು ಹೀಂಗೇ ಮುಂದುವರಿಯಲಿ…ಗೋಪುಷ್ಟಿ ಕರ್ಯಕ್ರಮವ ನಾವೆಲ್ಲಾ ಸೇರಿ ಮಾಡುವ..

  9. ಯಾವಾಗಲು ಇಪ್ಪಂಗೆ ಈ ಲೇಖನನೂ ಚೊಲೋ ಇದ್ದು .ನಿಮ್ಮ ಬರಹ ಓದ್ತಾ ಇದ್ರೆ ಜ್ಞಾನಾಭಿವೃದ್ದ್ಧಿಯ ಜೊತೆಗೆ ಸಮಯದ ಸದುಪಯೋಗನು ಆಗ್ತು.ನಿಂಗ ಬರಿತಾನೆ ಇರಿ…ನಂಗ ಓದ್ತಾ ಇರ್ತ…..

  10. ಒಪ್ಪಣ್ಣನ ಲೇಖನಂಗ ಇನ್ನೂರರಿಂದ ಹತ್ತು ಸಾವಿರದೆಡೆಗೆ ಸಾಗಲಿ…

    ಪ್ರೇತಿ ಮನೆ ಮನೇಲಿ, ಮನ ಮನಗಳಲ್ಲಿ ಆಚರಿಸೆಕ್ಕಾದ ಗೋಸಂತತಿ ಪುಷ್ಟಿ ಹಬ್ಬದ ಆಚರಣೆಗೆ ಶುಭ ಹಾರೈಕಗಳೊಂದಿಗೆ ಈ ಪುಷ್ಪ…

    ಹವ್ಯಕಬ್ಬೆಯ ಮಕ್ಕೊಯೆಲ್ಲರು
    ನವ್ಯ ರೀತಿಲಿಯೊಟ್ಟು ಸೇರಿಯೆ
    ಭವ್ಯ ಭಾರತ ಕಟ್ಟಿ ಬೆಳೆಸುವ ನಲಿದು ಹರುಶಲ್ಲಿ|
    ಸವ್ಯಸಾಚಿಗೆ ಕೃಷ್ಣನ ಹಾಂಗೆ
    ದಿವ್ಯ ಹಸ್ತಲಿಯಭಯ ನೀಡುತ
    ಸುವ್ಯವಸ್ಥೆಲಿ ಮುನ್ನಡೆಸುವ ಗುರುವಿನನುಗ್ರಹಲಿ||

    ಗವ್ಯ ವಸ್ತುಗೊ ನಿತ್ಯ ಬಳಸುತ
    ದಿವ್ಯ ಪ್ರೇಮವ ಬೆಳೆಸಿ ಗೋವಿಲಿ
    ಭವ್ಯ ಬದುಕಿನ ಬಾಳಿ ವಿಶ್ವ ಜನನಿಯನುಗ್ರಹಲಿ|
    ದಿವ್ಯ ಜೀವನ ಸಂಪತ್ತು ದನ
    ನವ್ಯ ರೀತಿಯ ತಾಕತ್ತು ಧನ
    ಸುವ್ಯವಸ್ಥೆಲಿ ತಂದು ಕೊಡುವುದು ಕಂಡವರನುಭಲಿ||

    ಅಶ್ವ ಬಲವೇ ನಮ್ಮೊಳಯಿರಲಿ
    ನಶ್ವರವು ಜಗವಿದು ನೆನಪಿರಲಿ
    ವಿಶ್ವ ಜನನಿಯ ಸೇವೆಯೊಂದೆ ಸಕಲಕು ಪರಿಹಾರ|
    ವಿಶ್ವ ಲಯವಾ ತಡದು ನಿಲ್ಲುಸಿ
    ವಿಶ್ವ ಶಾಂತಿಯ ಬೆಳೆಸಿ ಪಸರಿಸಿ
    ವಿಶ್ವ ಜನನಿಯ ಸಂತತಿಯೊಳಿಷಿ ಬೆಳೆಸುದೇ ದಾರಿ||

    ಸೃಷ್ಟಿ ಸಮತೆಯ ನಿತ್ಯ ಕಾಯುವ
    ದೃಷ್ಟಿಯಿಂದಲೆ ಸುಧೆಯ ಹರಿಸುವ
    ವೃಷ್ಟಿ ಸುರಿಸುತ ಭುವಿಯ ಹಸಿರಾಗಿಸುವ ಮಾತೆಗೆ ಜೈ|
    ತುಷ್ಟಿಯಾಗಲಿ ಸಕಲ ದೇವತೆ
    ಮುಷ್ಟಿಯಂತೊಂದಾಗಿಯೆಲ್ಲರು
    ಪುಷ್ಟಿ ನೀಡುವ ಮುದದಿ ಗೋಸಂತತಿ ಮಹಾಯಜ್ಹ್ನಕೆ||

    ನಂದಿ ನೆಂಪಿಲಿ ಮಂದಿ ಸೇರಿರೆ
    ನೊಂದ ಜೀವ೦ಗೊ೦ದು ಗೂಡಿರೆ
    ನಂದನವನಲಿ ನಲಿವಲಕ್ಕು ಹರುಶಲಿ ಬಂಧುಗೋ|
    ಇಂದಿನ ದಿನವ ಸುದಿನವಾಗಿಸಿ
    ಹಿಂದುಮುಂದಿನ ಗೊಂದಲ ತೊರೆದು
    ಸುಂದರೇಶನ ಪಾದ ಸೇರುವ ಮುಕುತಿ ಹೊಂದುವಾ||

    1. ಜಯಶ್ರೀ ಬೈಲಿಂಗೆ ಅಪರೂಪ ಆಗಿತ್ತು. ಇದೊಂದೇ ಭಾಮಿನಿಲಿ, ಇಷ್ಟರವರೆಗೆ ಬಾಕಿ ಇದ್ದ ಒಪ್ಪಂಗೊ ಎಲ್ಲ ಸಂದಾಯ ಆತು. ಒಪ್ಪಣ್ಣನ ಲೇಖನಕ್ಕೆ ಪೂರಕವಾಗಿ ಭಾಮಿನಿ ಸೊಗಸಾಗಿ ಬಯಿಂದು. ಪ್ರಾಸ, ಅರ್ಥ ಎಲ್ಲವೂ ಅದ್ಭುತ. ನಂದಿ ನೆಂಪಿಲಿ ಮಂದಿ ಸೇರಿರೆ, ನೊಂದ ಜೀವಂಗೊ ಒಂದು ಗೂಡಿರೆ ವಾಹ್, ಸೂಪರ್ ಆಯಿದು. ಅಭಿನಂದನೆಗೊ ಜಯಕ್ಕ, ಬೈಲಿಂಗೆ ಬತ್ತಾ ಇರಿ.

  11. ಒಪ್ಪಣ್ಣನ ಶುದ್ದಿಗೊ ಇನ್ನೂರಕ್ಕೆ ಎತ್ತಿದ ಶುಭ ಸಂದರ್ಬಲ್ಲಿ ಅಭಿನಂದನೆಗಳ ತಿಳುಸುತ್ತಾ ಇದ್ದೆ. ಪ್ರತಿ ಶುಕ್ರವಾರ ಬತ್ತಾ ಇಪ್ಪ ಒಪ್ಪಣ್ಣನ ಶುದ್ದಿಗಳ ನಿಲ್ಲುಸತ್ತದೊ ? ಚೆ, ಸಾಧ್ಯವೇ ಇಲ್ಲೆ. ಎಲ್ಲೋರು ಹೇಳಿದ ಹಾಂಗೆ ಒಪ್ಪಣ್ಣನ ಶುದ್ದಿಗೊ ನಿರಂತರ ಬತ್ತಾ ಇರೆಕು, ನಮ್ಮ ಬೈಲಿನವು, ಹಾಂಗೆ ಹೆರಾಣವುದೆ ಓದುತ್ತಾ ಇರೆಕು, ಮೆಚ್ಚುತ್ತಾ ಇರೆಕು. ಪುಸ್ತಕ ರೂಪದ ಒಪ್ಪಣ್ಣನ ಶುದ್ದಿಗೊ ಮರುಮುದ್ರಣ ಕಂಡದಕ್ಕೂ ಈ ಸಮೆಯಲ್ಲಿ ಅಭಿನಂದನೆಗಳ ಹೇಳ್ತಾ ಇದ್ದೆ. ಪುಸ್ತಕ ತೆಕ್ಕೊಂಡವೆಲ್ಲ ಒಳ್ಳೆ ಅಭಿಪ್ರಾಯವನ್ನೇ ಹೇಳಿದವು. ಹೇಳ್ತಾ ಇದ್ದವು.

    ಮೊನ್ನೆ ಹಿರಿಯ ಲೇಖಕಿ, ಗಂಗಾ ಪಾದೇಕಲ್, ಒಪ್ಪಣ್ಣನ ಪುಸ್ತಕವ ಓದಿ, ಮೆಚ್ಚಿ, ತುಂಬಾ ಕೊಶಿಲಿ ಅವನ ಬರವಣಿಗೆಯ ಶೈಲಿ, ಅದರಲ್ಲಿಪ್ಪ ವಿಷಯಂಗಳ ಬಗ್ಗೆ ಹೊಗಳಿ ತುಂಬಾ ಹೊತ್ತು ಎನ್ನ ಹತ್ರೆ ಫೋನಿಲ್ಲಿ ಮಾತಾಡಿದವು. ಈ ರೀತಿಲಿ ಒಪ್ಪಣ್ಣನ ಬಗ್ಗೆ ನಾವೆಲ್ಲ ಇನ್ನೂ ಹೆಮ್ಮೆ ಪಡೆಕು.

    ಗೋಪೂಜೆ ಸಮೆಯಕ್ಕೆ ಸರಿಯಾಗಿ ಗೋ ಪುಷ್ಟಿ ಮಹಾಯಜ್ಞದ ಬಗೆಲಿ ಒಪ್ಪಣ್ಣನ ಶುದ್ದಿ ಲಾಯಕಾತು. ಉಂಬೆಯ ಅಭಿಯಾನಕ್ಕೆ ಜೈ ಹೇಳುವೊ.

  12. ಗೋವಿನ ಸಂತತಿಯ ಸಂಪತ್ತು ಹೇಳಿ ಎಲ್ಲರೂ ತಿಳ್ಕೊಂಡರೆ ದೇಶ ಉದ್ಧಾರ ಅಕ್ಕು.
    ನಮ್ಮದು ಕೃಷಿ ಪ್ರಧಾನ ದೇಶ ಹೇಳುವಾಗ ಗೋ ಸಂಪತ್ತಿಂಗೆ ಕೂಡಾ ಆದ್ಯತೆ ಕೊಡೆಕು.
    ಶ್ರೀ ಗುರುಗಳ ಈ “ಗೋ ಪುಷ್ಟಿ ಮಹಾ ಯಜ್ನ” ಲ್ಲಿ ಎಲ್ಲರೂ ಪಾಲ್ಗೊಳ್ಳೆಕ್ಕು.
    ***
    ಒಪ್ಪಣ್ಣಾ.. ಲೇಖನ ಬರವದರ ನಿಲ್ಲುಸುತ್ತ ಅಲೋಚನೆ ಮಾಡುದು ಬೇಡವೇ ಬೇಡ.
    ವಿಶಯ ವೈವಿಧ್ಯಂಗೊ ಬತ್ತಾ ಇರಳಿ.

  13. ಒಪ್ಪಣ್ಣನ ಬತ್ತಳಿಕೆಂದ ಈ ರೀತಿ ಲೇಖನ ವಾರ ವಾರ ಬತ್ತಾ ಇರೆಕು. ಎಂಗೊ ಓದುತ್ತಾ ಇರೆಕು.
    200 ಇಪ್ಪ ಸಂಖ್ಯೆ 2000… 20000… ಹೀಂಗೆ ಏರುತ್ತಾ ಹೋಯೆಕ್ಕು.

    ಮತ್ತೆ ನಮ್ಮ ಗುರುಗೊ ಒಂದೊಳ್ಳೆಯ ಅಭಿಯಾನವ ಹಮ್ಮಿಕೊಂಡಿದವು. ಎಲ್ಲರೂ ಇದರಲ್ಲಿ ಕೈಜೋಡಿಸಲಿ ಹೇಳಿ ಹಾರೈಸುತ್ತೆ.

  14. ಇದೆಂತ, ಒಪ್ಪಣ್ಣಂಗೆ ಬಚ್ಚಿತ್ತೋದು…!!!
    ಗೋಪಾಲ ಭಾವಯ್ಯ ಹೇಳಿ ಆತನ್ನೆ, ಅದೇ ಮಾರ್ಗಲ್ಲಿ ಮುಂದುವರಿಯಲಿ.
    ಗೋ ಪುಷ್ಟಿ ಅಭಿಯಾನಕ್ಕೆ ನಾವೆಲ್ಲೋರು ಸಹಕಾರ ಕೊಡುವೋ.
    ॥ವಂದೇ ಗೋಮಾತರಂ.॥

  15. ಒಪ್ಪಣ್ಣನ ಬರಹ ಸಾವಿರ ಆಗಲಿ;ಇನ್ನೂ ಬೇಕು.
    ಎಮ್.ವಿ.ಕಾಮತ್ ಕಳೆದ ೬೫-೭೦ ವರ್ಷಂದ ಬರೆತ್ತಾ ಇದ್ದವು.ಎಚ್ಚೆಸ್ಕೆ ಸುಮಾರು ಐವತ್ತು ವರ್ಷ ಬರೆದ್ದವು.ಬರೆತ್ತವಕ್ಕೆ ವಿಷಯದ ಕೊರತೆ ಇಲ್ಲೆ.ಅವರ ಬರಹ ಓದುಲೆ ಬೇಜಾರು ಬತ್ತಿಲ್ಲೆ. ಒಪ್ಪಣ್ಣನ ಶೈಲಿಯೂ ಲಾಯಿಕಿದ್ದು.ಹಾಸ್ಯ ಭರಿತವಾಗಿ,ಯಾವುದಾದರೂ ಉತ್ತಮ ವಿಚಾರದ ಸಂದೇಶದೊಟ್ಟಿಂಗೆ ಬತ್ತಾ ಇದ್ದು.ಬರಲಿ.ನಿಲ್ಲಿಸೆಕ್ಕೊ ಹೇಳಿ ವಿಚಾರ ಈಗ ಬೇಡ.

  16. ಶುದ್ದಿ ಹೇಳುಲೆ ಇನ್ನೂರು, ಮುನ್ನೂರು ಹೇಳಿ ಲೆಕ್ಕ ಇಲ್ಲೆ. ಹೊಸ ಹೊಸ ಶುದ್ದಿಗಮನಸ್ಸಿಲಿ ಹೊಳದ ಹಾಂಗೆ ಹೇಳ್ತಾನೆ ಇಪ್ಪದು. ಹಾಂಗಾಗಿ ಶುದ್ದಿಗಳ ಲೆಕ್ಕ ಮಡುಗದ್ದೆ ಒಪ್ಪಣ್ಣ ನಿರಂತರವ್ವಗಿ ಹೇಳ್ತಾನೇ ಇರಕ್ಕು ಹೇಳಿ ನಮ್ಮ ಆಶಯ.

  17. ಚೆನ್ನೈ ಭಾವನ ಅಭಿಪ್ರಾಯಕ್ಕೆ ನಮ್ಮ ಪೂರ್ಣ ಸಪೋರ್ಟು ಆತೋ.. (ಇನ್ನೂರು ಇನ್ನು ಮುನ್ನೂರು ಅಪ್ಪ ಬಗ್ಗೆ…)

  18. [“ಇನ್ನೂರಾತು, ಇನ್ನೆಂತರ? ] – ಇನ್ನು ಮುನ್ನೂರು ಆಗಲಿ ಮತ್ತೆ ಅಲೋಚನೆ ಮಾಡುವೊ°

    ಶ್ರೀ ಸಂಸ್ಥಾನದ ಗೋ-ಪುಷ್ಟಿ ಅಭಿಯಾನಕ್ಕೆ ನಮ್ಮ ಬೈಲಿಲ್ಲಿಯೂ ಗೋ-ಪುಷ್ಟಿ ಶುದ್ಧಿ ಕೊಟ್ಟದು ಪುಷ್ಟಿ ನೀಡಿ ವಿಶೇಷ ಆತು. ಹರೇ ರಾಮ. ಇದರ ನಾವು ನಮ್ಮ ಕರ್ತವ್ಯದೃಷ್ಟಿಂದ ತೆಕ್ಕೊಂಡರೆ ಗುರುಸೇವೆ ಮಾಡಿದಾಂಗೂ ಆವ್ತು, ಗೋ-ಪುಷ್ಟಿ ಸೇವೆ ಮಾಡಿದಾಂಗೂ ಆವ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×