Oppanna.com

ಗ್ರಾಮವ ನೋಡ್ಳೆ ದೇವರಿದ್ದ, ದೇವರ ನೋಡ್ಳೆ ಆರೂ ಇಲ್ಲೆ!!

ಬರದೋರು :   ಒಪ್ಪಣ್ಣ    on   16/08/2013    10 ಒಪ್ಪಂಗೊ

ಕೊಳಚ್ಚಿಪ್ಪು ಬಾವ ಇದರೆಡಕ್ಕಿಲಿ ಒಂದರಿ ಊರಿಂಗೆ ಬಂದದು ನಿಂಗೊಗೆ ಅರಡಿಗೋ?
“ಊರಿಂದ ಹೆರ ಹೋದ್ಸೇ ನವಗೆ ಅರಡಿಯ, ಈಗ ಬಂದದು ಹೇಂಗೆ ಅರಡಿಸ್ಸು” – ಹೇಳುಗು ಚೆನ್ನೈಭಾವ! ಅದಿರಳಿ.
ಬ್ರಿಟಿಷರು ಭಾರತವ ಆಳಿದ ಸಾಲ ಇದ್ದಲ್ಲದೋ – ಅದರ ತೀರ್ಸಲೆ ಕೊಳಚ್ಚಿಪ್ಪು ಭಾವ ಇಂಗ್ಲೆಂಡಿಂಗೆ ಹೋಯಿದ°.
ಸಮಾದಾನ ಅಪ್ಪಷ್ಟು ಸಮಯ ಅಲ್ಲಿ ಆಳ್ವಿಕೆ, ಗುರಿಕ್ಕಾರ್ತಿಕೆ ಮಾಡಿಕ್ಕಿ, ಮತ್ತೆ ಊರಿಂಗೆ ಬತ್ತ ಏರ್ಪಾಡು ಅವಂದು.
ಆಗಲಿ – ಒಳ್ಳೆದೇ ಆತು, ಬಪ್ಪಗ ರಜ ಚೋಕ್ಲೇಟುದೇ ತಂದು ಒಪ್ಪಣ್ಣಂಗೆ ಕೊಡ್ತ ಒಳ್ಳೆಬುದ್ದಿ ಬಂದರೆ ಭಾಗ್ಯ.

ಮೊನ್ನೆ ಊರಿಂಗೆ ಬಂದದು ಪಲಾವು ಮಸಾಲೆ ಕೊಂಡೋಪಲೋ, ಎಜಮಾಂತಿಯ ಕರಕ್ಕೊಂಡು ಹೋಪಲೋ, ಪರೀಕ್ಷೆ ಬರವಲೋ ಹೇದು ನಾವು ಕೇಳಿದ್ದಿಲ್ಲೆ.
ಬಂದಿಪ್ಪಗ ಕೆಂಪು ಚೋಲಿಯ ಚೋಕ್ಲೇಟು ಸಿಕ್ಕಿದ್ದಂತೂ ನಿಜವೇ ನಿಜ.
ಹಾಂಗೇ ಮಾತಾಡುವಾಗ, ಚೋಕ್ಲೇಟು ಮಾಂತ್ರ ಅಲ್ಲ – ಶುದ್ದಿಗೆ ವಿಷಯವೂ ಸಿಕ್ಕಿತ್ತು. ಅದೆಂತದು?
~
ಕೊಳಚ್ಚಿಪ್ಪು ಭಾವ ಇಪ್ಪದು ಒಂದು ಬಿಡಾರಲ್ಲಿ.
ಆ ಬಿಡಾರದ ಆಚಮನೆಲಿ ಇಪ್ಪದು ನಮ್ಮ ಹತ್ತರಾಣೋರೇ ಆಡ.
ಹತ್ತರಾಣೋರು ಹೇದರೆ ಹೇಂಗೆ?- ಆಚಮನೆಯೋ? ಅಲ್ಲ. ಆಚ ಜಿಲ್ಲೆಯೋರೋ? ಅಲ್ಲ. ಆಚ ರಾಜ್ಯದೋರೋ – ಅಲ್ಲ.
ಆಚ ದೇಶದೋರು. ಆಚ ದೇಶ ಹೇಳಿದ ಕೂಡ್ಳೇ ಗುಣಾಜೆಮಾಣಿಗೆ ಪಾಕಿಸ್ಥಾನವನ್ನೇ ನೆಂಪಪ್ಪದು.
ಆದರೆ ಅವು ಪಾಕಿಸ್ಥಾನದವೂ ಅಲ್ಲ – ಅದರಿಂದ ಅತ್ಲಾಗಿಯಾಣ ಅಪಘಾನ ದೇಶದೋರು ಆಡ.
ಅಲ್ಯಾಣೋರು ಹೇಳಿದ ಕೂಡ್ಳೇ ಅವೆಲ್ಲ ಬ್ಯಾರಿಗೂ ಹೇದು ಗ್ರೇಶಿದಿರೋ?
ಅಲ್ಲ, ಅದುವೇ ಇಂದ್ರಾಣ ಶುದ್ದಿ.
~

ಲೋಕದ ಎಲ್ಲೇ ಆಗಿರಳಿ, ಮುಸ್ಲಿಂ ಆಳ್ವಿಕೆ ಇದ್ದಲ್ಲಿ ಇತರೆ ಧರ್ಮಕ್ಕೆ ಬೆಲೆ ಇಲ್ಲೆ.
ಬೆಲೆ ಮಾಂತ್ರ ಅಲ್ಲ, ಉಳಿಗಾಲವೇ ಇಲ್ಲೆ – ಹೇಳ್ತದು ಇತಿಹಾಸ ನೋಡಿರೆ ಗೊಂತಾವುತ್ತಾಡ.
ಉದಾಹರಣೆಗೆ, ಉತ್ತರ ಭಾರತಲ್ಲಿ ಮೊಘಲ್ ಆಳ್ವಿಕೆ ಸುಮಾರು ಎಂಟುನೂರು ಒರಿಶ ಇದ್ದತ್ತಲ್ಲದೋ – ಆ ಸಮೆಯಲ್ಲಿ ದೊಡ್ಡ ಧಾರ್ಮಿಕ ಬದಲಾವಣೆ ಆಯಿದಾಡ ಸಮಾಜಲ್ಲಿ.
ಈ ನಮುನೆಲಿ ನೋಡಿರೆ, ಉದಾಹರಣೆಗೆ, ನಮ್ಮ ಭಾರತದ ಉತ್ತರಲ್ಲಿಪ್ಪ ಕಾಶ್ಮೀರಲ್ಲೇ – ಹಿಂದುಗಳ ಸಂಖ್ಯೆ ತುಂಬಾ ತುಂಬಾ ಕಮ್ಮಿ ಆಗಿಂಡು ಇದ್ದು; ನವಗೆ ಗೊಂತಿಪ್ಪದೇ.
ಅದರಿಂದಲೂ ಅತ್ಲಾಗಿ ಇಪ್ಪ ಪಾಕಿಸ್ಥಾನಲ್ಲಿ? – ಇನ್ನೂ ಕಮ್ಮಿ ಆಯಿದು. ಹೆಚ್ಚಿನ ಊರುಗಳಲ್ಲಿ ಹಿಂದುಗಳೇ ಇಲ್ಲೆ.
ಅದರಿಂದಲೂ ಅತ್ಲಾಗಿಪ್ಪ ಅಫ್ಘಾನಿಸ್ಥಾನಲ್ಲಿ? ಇನ್ನೂ ಇನ್ನೂ ಕಮ್ಮಿ!
ಮದಲಿಂಗೆ ಅದೆಲ್ಲವೂ ಭಾರತವೇ ಆದರೂ, ಅದೆಲ್ಲವೂ ಹಿಂದು ರಾಷ್ಟ್ರಂಗಳೇ ಆದರೂ – ಮಹಾಭಾರತ ಧೃತರಾಷ್ಟ್ರನ ಗಳುಗಳ ಮನೆ ಗಾಂಧಾರ ಇಪ್ಪದೇ ಆದರೂ – ಈಗ ಅಲ್ಲಿ ಅದರ ಯೇವ ಕುರುಹೂ ಇಲ್ಲೆ.
ಇತರ ಧರ್ಮಕ್ಕೆ ಬೆಳವಲೆ – ಒಳಿವಲೆ ಅವಕಾಶವೇ ಇಲ್ಲದ್ದ ಊರು ಅದು.
ಆ ಗಾಂಧಾರ (ಕಾಂದಹಾರ್) ನ ಹತ್ತರಾಣ ಒಂದು ಊರು – ಜಲಾಲಾಬಾದ್ ಹೇಳಿ ಆಡ.
ಆ ಊರಿನ ಕತೆಯೇ ಕೊಳಚ್ಚಿಪ್ಪು ಬಾವ ಹೇಳಿದ್ಸು.
~

ಹತ್ತು-ನಲುವತ್ತೊರಿಶ ಮದಲು ಪರಿಸ್ಥಿತಿ ಹೇಂಗಿತ್ತು ಹೇದರೆ – ಅಪ್ಘಾನ್ ಹೇದರೆ ತುಂಬಾ ಆಧುನಿಕ.
ಬ್ಯಾರಿಗೊ ದೊಡ್ಡದೊಡ್ಡ ಇಂಜಿನಿಯರು ಆಗಿದ್ದುಗೊಂಡು, ಬ್ಯಾರ್ತಿಗೊ ಹಾಡುಗಾರ್ತಿಗೊ, ಗಗನಸಖಿಯರಾಗಿದ್ದುಗೊಂಡು,– ತುಂಬಾ ಮುಂದುವರುದ ಮನೋಭೂಮಿಕೆಯೋರಾಗಿತ್ತಿದ್ದವು.
ಹಾಂಗೇ ಇತ್ತು.

ಅಷ್ಟಪ್ಪಗ ಬಂತಡ – ರಷ್ಯಾ.
ಕೊಳಚ್ಚಿಪ್ಪು ಭಾವ ಪರೀಕ್ಷೆ ಬರವಲೆ ಹೀಂಗಿರ್ಸು ಎಲ್ಲ ಓದಿ ಅರಡಿಗಿದಾ.
ರಷ್ಯಾದೋರು ಬಂದು ಅವರ ಕಮುನಿಷ್ಟು ಗೆಡುವಿನ ಬಿತ್ತು ಹಾಕಲೆ ಹೆರಟವು. ಅಪ್ಘಾನಿನ ಉತ್ತರ ಭಾಗಂದ ಸುರು ಮಾಡಿ ಇಡೀ ಆಕ್ರಮಣಕ್ಕೆ ಹೆರಟವು. ರಷ್ಯಾ ಸೇನೆಯ ತಡವಲೆ ಎಂತ ಮಾಡೇಕು? – ಇವಕ್ಕೆ ಅರಡಿಯ.
ಸಾವಿರಾರು ಜೆನ ಸತ್ತವು.
ಅಷ್ಟಪ್ಪಗ ಬಂತಡ – ಅಮೇರಿಕ.
ಮದಲೇ ರಷ್ಯವ ಕಂಡ್ರೆ ಆಗದ್ದ ದೇಶ, ಎಲ್ಲಿ ಕಾರಣ ಸಿಕ್ಕುತ್ತು ಹೇದು ಕಾದುಗೊಂಡಿತ್ತು.
ರಷ್ಯಾದವು ನಿಂಗಳ ಲಗಾಡಿ ತೆಗವಲೆ ಬತ್ತವಲ್ಲದೋ; ಹೆದರೆಡಿ! ಎಂಗೊ ಇದ್ದೆಯೊ.
ಇದಾ, ಎಂಗಳ ಈ ಹೊಸನಮುನೆ ಬೆಡಿಯ ಮಡಿಕ್ಕೊಳಿ, ಧರ್ಮಕ್ಕೆ – ಹೇದು ಕೊಟ್ಟವು.
ಅವು ಕೊಟ್ಟವು, ಇವು ತೆಕ್ಕೊಂಡವು. ಕಮಿನಿಷ್ಠೆಯ ಕೈಂದ ದೇಶ ಒಳಿಶಲೆ ಎಲ್ಲೋರುದೇ ಸೇರಿ ರಷ್ಯಾ ಸೈನ್ಯವ ಹೊಡದವು, ಬಡುದವು. ರಷ್ಯಾ ಹೆದರಿ ಓಡಿತ್ತು.
ಆದರೆ? ಈ ಸರ್ತಿ ಲಕ್ಷಾಂತರ ಜೆನ ಸತ್ತವು.
~
ಈ ಯುದ್ಧಲ್ಲಿ ರಷ್ಯಾದೋರ ಓಡುಸಿದ್ದರಲ್ಲಿ – ಒಂದೊಂದು ಊರಿಲಿಯೂ ಒಂದೊಂದು ಜೆನ ಮುಕ್ರಿ ಹುಟ್ಟಿಗೊಂಡವು.
ಎಲ್ಲರಿಂಗೂ ಅಧಿಕಾರ ನೆಡೆಶುವ ಆಶೆ.
ಹಾಂಗೆ, ಅಪ್ಘಾನಿನ ಒಳವೇ ಹಲವು ವಿಭಾಗಂಗೊ, ಕುಂಞಿ ಕುಂಞಿ ರಾಜ್ಯಂಗೊ.
ಒಂದು ದಿಕ್ಕಂದ ಇನ್ನೊಂದು ದಿಕ್ಕಂಗೆ ಹೋಯೇಕಾರೆ ಆಧಾರ್ ಕಾರ್ಡು ಬೇಕು, ಪಾಸುಪೋರ್ಟು ಬೇಕು – ಹೇಳಿ ಎಲ್ಲ ನಿಯಮಂಗೊ ಬಂತು. ಅವು ಹೇಳಿದ್ದೇ ಕಾನೂನು, ಅವರದ್ದೇ ಮಾತುಗೊ.
ಅಧಿಕಾರದ ಆಶೆಯೋರು ಹತ್ತರೆ ಹತ್ತರೆ ಇದ್ದರೆ ಎಂತಕ್ಕು? ಅಪ್ಪದೇ ಆತು ಅಲ್ಲಿಯುದೇ.
ಅವಕ್ಕೇ ಜಗಳ, ಅವರ ಒಳಒಳವೇ ಜಗಳ ಸುರು ಆತು.
ಇಲ್ಯಾಣ ಮುಕ್ರಿ ಅಲ್ಯಾಣ ಮುಕ್ರಿಗೆ ಬೆಡಿ ಬಿಡುಸ್ಸು. ಯುದ್ಧಂಗಳಿಂದಾಗಿ ಉಂಬಲೆ ಪೈಶೆ ಇಲ್ಲದ್ದರೂ, ಕೈಲಿ ಲಕ್ಷಗಟ್ಳೆಯ ಬೆಡಿ ಇದ್ದತ್ತು ಅಲ್ಲದೋ ಅವರತ್ರೆ. ಬಡ್ಕೊಂಡವು.
ಇದರಿಂದಾಗಿ ಮತ್ತೆ ಲಕ್ಷಗಟ್ಳೆ ಜೆನ ಸತ್ತವು.
~
ಇಷ್ಟೆಲ್ಲ ಮುಕ್ರಿಗೊ ಜಗಳ ಮಾಡಿರೆ ಎಂತಕ್ಕು? ಅದಾರೋ ಡಾರ್ವಿನು ಹೇಳಿದ್ದಡ ಅಲ್ದೋ – ಗಟ್ಟಿದೊಂದು ಒಳಿಗು – ಹೇದು; ಇಲ್ಲಿಯೂ ಹಾಂಗೇ ಆತು. ಗಟ್ಟಿಯ ಒಂದು ಮುಲ್ಲ ಇಡೀ ಅಫ್ಘಾನಿಸ್ಥಾನವ ಕೈಗೆ ತೆಕ್ಕೊಂಡತ್ತು.
ಅದುವೇ ಮುಲ್ಲಾ ಉಮ್ಮರೆ.
ಕುರಾನ್ ಒಂದೇ ಓದಿದ ಕಾರಣ ಎಲ್ಲವೂ ಕುರಾನಿಲಿ ಹೇಳಿದ ನಮುನೆಯೇ ಆಯೇಕು. ಈಗ ಎಷ್ಟು ಕಾಲ ಮುಂದುವರುದರೂ, ಸಾವಿರ ಒರಿಶ ಮದಲೇ ಬರದ ಕುರಾನ್ ಲಿ ಇಪ್ಪನಮುನೆ ಜೀವನ ಬದಲಿತ್ತು.
ಇಂಜಿನಿಯರು ಓದುಲಾಗ, ಡಾಗುಟ್ರು ಅಪ್ಪಲಾಗ, ಹೆಮ್ಮಕ್ಕೊ ಅಡಿಗೆ ಕೋಣೆಂದ ಹೆರ ಬಪ್ಪಲಾಗ, ಬತ್ತರೂ ಬುರ್ಕ ಹಾಕದ್ದೆ ಹೆರ ಬಪ್ಪಲಾಗ- ಹೀಂಗೆ ಎಂತೆಂತದೋ?
ಮದಲೇ ಬ್ಯಾರಿ ದೇಶ, ಈಗ ಕುರಾನ್ ದೇಶ ಆಗಿ ಹೋತು.
~

ದೇಶದ ವೆವಸ್ಥೆ ಹಾಳಾದ ಹಾಂಗೇ ಸಾಮಾಜಿಕ ಜೀವನವೂ ಹಾಳಾವುತ್ತು.
ಬ್ಯಾರಿಗೊಕ್ಕೇ ಬದ್ಕಲೆ ಎಡಿಯದ್ದ ನಮುನೆ ಆತು; ಇನ್ನು ಒಳುದೋರು ಎಂತ ಮಾಡೇಕು?!
ವಿದ್ಯಾಭ್ಯಾಸ ಇಲ್ಲೆ, ಮನೆತುಂಬ ಬಡತನ, ನೆರೆಕರೆ ಇಡೀ ಧರ್ಮ-ಅಸಹಿಷ್ಣುಗೊ – ಇವೆಲ್ಲದರ ಎಡೆಲಿ ಎಂತ ಮಾಡುಸ್ಸು.
ಊರು ಬಿಟ್ಟು ಬೇರೆ ದೇಶಕ್ಕೆ ಹೋಪೊ – ಹೇದರೆ ಕೈಲಿ ಪೈಶೆಯೂ ಇಲ್ಲೆ.

ಹಾಂಗೆ ಬಿಟ್ಟಿಚಾಕ್ರಿ, ಸಣ್ಣಕುಂಞಿ ಕೆಲಸಂಗೊ ಎಲ್ಲ ಮಾಡಿಂಡು ಹೊಡಿಹೊಡಿ ಪೈಶೆ ಒಳಿಶುದು ಅವರ ದೊಡ್ಡ ಹರಸಾಹಸ.
ಪೈಶೆ ಒಳಿಶಿದ ಮತ್ತೆಯೇ ಪಾಸುಪೋರ್ಟು- ವೀಸ ಮಾಡುಸಲೆಡಿಗಷ್ಟೆ ಇದಾ.
ಹಾಂಗೆ ಎಡಿಗಾದೋರು ಬೇಕಾದ ದಾಖಲೆಗಳ ಎಲ್ಲ ಮಾಡುಸಿಗೊಂಡು ಸೀತ ಹಾರ್ತವು.
ಹಾರುಸ್ಸು ಎಲ್ಲಿಗೆ? ಜಾತ್ಯತೀತ, ಧರ್ಮ ಸಹಿಷ್ಣು, ಶ್ರೀಮಂತ ದೇಶಂಗೊಕ್ಕೆ.
ಒಂದೋ ಇತ್ಲಾಗಿ ಭಾರತಕ್ಕೆ, ಅಲ್ಲದ್ದರೆ ಅತ್ಲಾಗಿ ಆಧುನಿಕ ಯುರೋಪು, ಅಮೇರಿಕ – ದೇಶಂಗೊಕ್ಕೆ.
ಹಾಂಗೆ ಅಫುಘಾನಂದ ಹಾರಿಬಂದೋರೇ ಕೊಳಚ್ಚಿಪ್ಪು ಭಾವನ ನೆರೆಕರೆಲಿ ಇಪ್ಪದಾಡ, ಅವು ಹೇಳಿದ ಕತೆ ಆಡ ಇದು..
ಇಷ್ಟೇ ಆದರೆ ಒಪ್ಪಣ್ಣಂಗೆ ಶುದ್ದಿ ಹೇಳುಲೆ ಎಂತೂ ಪೊದುಂಕುಳು ಸಿಕ್ಕುತಿತಿಲ್ಲೆ.
ಭಾವನಾತ್ಮಕ ವಿಷಯ ಒಂದರ ಅವ ಹೇಳಿದ್ದದೇ ನವಗೆ ಬೈಲಿಂಗೆ ಆಹಾರ ಆದ್ಸು. ಅದೆಂತರ ಹೇದರೆ..
~
ಜಲಾಲಾಬಾದು ಹೇದರೆ ಸಣ್ಣ ಒಂದು ಪೇಟೆ; ಕಾಸ್ರೋಡಿನ ನಮುನೆ.
ಬ್ಯಾರಿಗೊ ಬಹುಸಂಖ್ಯಾತ ಆದರೂ, ಸಾವಿರಾರು ಒರಿಶಂದ ಅಲ್ಲೇ ನೆಲೆಯಾಗಿಪ್ಪ ಹಿಂದುಗಳೂ ಧಾರಾಳ ಇತ್ತಿದ್ದವು. ಹಿಂದುಗಳಲ್ಲೇ ಒಂದು ಉಪ-ಪಂಗಡ ಆದ ಸಿಖ್ಖರೂ ಇತ್ತಿದ್ದವು.
ರಷ್ಯಾ ಯುದ್ಧಲ್ಲಿ ಸುಮಾರು ಜೆನ ಆ ಊರಿಲಿ ಸತ್ತವು. ಅದಾದ ಮತ್ತೆ ದಂಗೆಗಳಿಂದಾಗಿ ಮತ್ತೆ ಹಲವು ಜೆನ ಸತ್ತವು; ಅದೂ ಆದ ಮತ್ತೆ ಕುರಾನ್ ರಾಜ್ಯ ಬಂದ ಮತ್ತೆ ಇನ್ನೂ ಹಲವು ಜೆನ ಸತ್ತವು.
ಈಗ ಒಳುದೋರು ಆರು? ಕೆಲವು ಜೆನಂಗೊ ಮಾಂತ್ರ.
ಅದರ್ಲಿಯೂ – ಸಿಖ್ಖ್, ಹಿಂದೂ ಸಂಸಾರಂಗೊ ಕೆಲವೇ ಕೆಲವು ಜೆನಂಗೊ!
ಅವರ ಜೀವನದ ದಯನೀಯ ಸ್ಥಿತಿ ಎಂತರ ಹೇದು ಹೋಗಿ ನೋಡಿರೇ ಬೇಜಾರಾವುತ್ತಾಡ. ಇಪ್ಪ ಕೆಲವು ಜೆನವೂ ಆ ಊರು ಬಿಟ್ಟು ಹೆರ ಹೋಪ ಮನಸ್ಥಿತಿಯವು.
ಏವಾಗ ಕೈಲಿ ಪೈಶೆ ತುಂಬಿ ಹೆರ ಹೋವುತ್ತಿಲ್ಲೆ ಹೇದು ಕಾಯ್ತ ಕುಟುಂಬಂಗೊ.

ಅದರ ಎಡಕ್ಕಿಲಿ ಕೆಲವು ದೇವಸ್ಥಾನಂಗಳ ಕತೆ..
ಮನುಷ್ಯರಿಂಗೇ ಉಂಬಲೆ ಇಲ್ಲೆ, ಇನ್ನು ದೇವಸ್ಥಾನ ಹೇಂಗಿಕ್ಕು? ಅದೂ ಹಡ್ಳು ಬಿದ್ದಿತ್ತು.
ಎಷ್ಟೇ ಹಡ್ಳು ಬಿದ್ದರೂ ಭಕ್ತಿಗೆ ಏನೂ ಕಮ್ಮಿ ಇತ್ತಿಲ್ಲೆ ಇದಾ.
ಆದರೆ, ಈಗ ಜಲಾಲಾಬಾದಿನ ಕತೆ ಎಂತಾತು ಹೇದರೆ – ಆ ಊರಿನ ಎಲ್ಲಾ ಹಿಂದೂ ಜೆನಂಗಳೂ ಒಂದೊಂದು ದಾರಿ ಹುಡ್ಕಿಂಡು ಆ ದೇಶ ಬಿಟ್ಟು ಹೆರ ಬಯಿಂದವು.
ಆ ಗ್ರಾಮದ ಕೊನೇ ಮಾರ್ಗದ ಕೊನೇ ಕುಟುಂಬದ ಕೊನೇ ಜೆನ ಆ ಊರು ಬಿಟ್ಟಿಕ್ಕಿ ಬಪ್ಪಾಗ, ದೇವಸ್ಥಾನದ ಬೀಗದ ಕೀಯ ಸಿಖ್ಖರ ಗುರುದ್ವಾರಲ್ಲಿ ಮಡಗಿಕ್ಕಿ ಬಯಿಂದವಾಡ!!
ಈಗಳೂ ಅಲ್ಲಿ ದೇವಸ್ಥಾನ ಹಾಂಗೇ ಇದ್ದು.
ವಾರಕ್ಕೊಂದರಿ ಸಿಖ್ಖರು ಹೋಗಿ ದೇವರ ದೀಪ ಹೊತ್ತುಸಿಕ್ಕಿ ಬತ್ತವು.
ಎಷ್ಟು ಸಮಯ ಹೊತ್ತುಸುಗು? ಅವ್ವಿಪ್ಪನ್ನಾರ.
ಅದಾದ ಮತ್ತೆ?
~

ದೇವಸ್ಥಾನ.... ಎಷ್ಟು ಸಮಯ!?
ದೇವಸ್ಥಾನ…. ಎಷ್ಟು ಸಮಯ!?

ಕಾಲ ಹಾಳಾದ ಹಾಂಗೇ ಜೆನಂಗೊ ವಲಸೆ ಹೋಯೇಕಪ್ಪದು ಸಹಜವೇ., ಅದರ್ಲಿ ಬೇಜಾರೇನಿಲ್ಲೆ.
ಆದರೆ, ಒಪ್ಪಣ್ಣಂಗೆ ಗ್ರೇಶಿ ಹೋತು –
ಅಲ್ಲಿಯೂ ಒಂದು ಕಾಲ ಇದ್ದಿಕ್ಕು – ಆ ಗ್ರಾಮದ ಎಲ್ಲಾ ಹಿಂದೂಗಳೂ ಆ ಒಂದು ದೇವಸ್ಥಾನಕ್ಕೆ ಹೋಗಿ ನೆಡಕ್ಕೊಂಡು;
ವಾರಕ್ಕೊಂದರಿಯೋ, ಶೆಂಕ್ರಾಂತಿಗೊಂದರಿಯೋ ಮಣ್ಣ ಇಡೀ ಊರಿಂಗೆ ಊರೇ ಆ ದೇವಸ್ಥಾನದ ಗೋಪುರಲ್ಲಿ ಸೇರಿಗೊಂಡು;
ಒರಿಶಕ್ಕೊಂದರಿ ಜಾತ್ರೆಯ ಗೌಜಿ ಮಾಡಿಗೊಂಡು..

ಆದರೆ ಈಗ?
ಗ್ರಾಮವ ಕಾಪಾಡ್ಳೆ ಕಟ್ಟಿದ ದೇವಸ್ಥಾನ ಹಾಂಗೇ ಇದ್ದು.
ಆದರೆ, ಆ ಗ್ರಾಮಲ್ಲಿ ಆ ದೇವಸ್ಥಾನಕ್ಕೆ ನೆಡಕ್ಕೊಂಬೋರು ಆರೂ ಇಲ್ಲೆ!!
ದೇವರು ಆ ಊರಿನ ನೋಡಿಗೊಂಡೇ ಇದ್ದ, ಆದರೆ ಆ ದೇವಸ್ಥಾನವ ನೋಡ್ಳೆ ಆರೂ ಇಲ್ಲೆ.
ದೇವರು ಆ ಊರಿನ ಕಾಯ್ತಾ ಇದ್ದ; ಆದರೆ ಆ ದೇವಸ್ಥಾನವ ಕಾವಲೆ ಆರೂ ಇಲ್ಲೆ.
ರಜ್ಜ ಸಮಯಲ್ಲಿ ಒಂದೊಂದೇ – ಗಂಟೆ, ದೀಪ, ವಯರುಗೊ – ಎಲ್ಲವೂ ಕಾಣೆ ಅಕ್ಕು!
~

ಇದು ಕೊಳಚ್ಚಿಪ್ಪು ಬಾವ ಹೇಳಿದ ಶುದ್ದಿ.
ಅವ ಇದರ ಹೇಳಿಗೊಂಡಿದ್ದ ಹಾಂಗೇ – ನಮ್ಮದೇ ಊರಿನ ಕಾಸ್ರೋಡಿನ ಏವದೋ ದೇವಸ್ಥಾನವೇ ಹಡ್ಳು ಬಿದ್ದ ಹಾಂಗೆ ಅನುಸಿತ್ತು ಒಪ್ಪಣ್ಣಂಗೆ.
ನಮ್ಮ ಹೆರಿಯೋರು ಭವ್ಯವಾದ ದೇವಸ್ಥಾನಂಗಳ ಕಟ್ಟಿ, ಅದರ್ಲಿ ನಮ್ಮ ದೇವರುಗಳ ಪ್ರತಿಷ್ಠೆ ಮಾಡಿ ಊರ ಕಾಪಾಡ್ಳೆ ಹೇದು ಕೇಳಿಗೊಂಡು ಆರಾಧನೆ ಮಾಡಿಗೊಂಡು ಬಂದಿರ್ತವು. ಕಾಲಕ್ರಮೇಣ ಹಾಂಗೆ ಊರಿಂಗೂರೇ ಬದಲಾವಣೆ ಆದರೆ,
ಆ ದೇವರ ಮನೆ ಒಂದೇ ಅಲ್ಲಿ ಬಾಕಿ ಆಗಿ, ಒಳುದ ಎಲ್ಲ ಮನೆಗಳೂ ಕಾಲಿ ಮಾಡಿರೆ ಹೇಂಗಕ್ಕು!!
ಜಲಾಲಾಬಾದಿಲಿ ಹಾಂಗೇ ಆದ್ಸು.
ಇದರ್ಲಿ ತಪ್ಪು ಆರದ್ದು ಅಂಬಗ?
ಆರದ್ದೂ ಅಲ್ಲ; ದೇವರುಗಳದ್ದೇ ತಪ್ಪು ಹೇಳೇಕಟ್ಟೆ- ಹೇಳಿದ ಕೊಳಚ್ಚಿಪ್ಪು ಬಾವ.
~
ಒಂದೊಪ್ಪ: ನಮ್ಮ ಸೃಷ್ಟಿ ಮಾಡಿದ ದೇವರು, ನಮ್ಮ ಕೈಲಿ ದೇವಸ್ಥಾನಂಗಳ ಸೃಷ್ಟಿ ಮಾಡುಸುತ್ತ.

ಸೂ:

    • ಈ ಶುದ್ದಿಗೆ ಪೂರಕ ವೀಡ್ಯ ಇಲ್ಲಿದ್ದು. ನೋಡಿ:
    • ಈ ವೀಡ್ಯವ ರೆಕಾರ್ಡು ಮಾಡಿದ ಜೆನರ ಮೋರೆಪುಟ: www.facebook.com/TheDutchSikh

10 thoughts on “ಗ್ರಾಮವ ನೋಡ್ಳೆ ದೇವರಿದ್ದ, ದೇವರ ನೋಡ್ಳೆ ಆರೂ ಇಲ್ಲೆ!!

  1. ಎಲ್ಲ ಸರಿ ಒಪ್ಪಣ್ಣ… ವಾರಕ್ಕೆ ಒಂದು ಶುದ್ದಿ ಹೇಳಿಕ್ಕಿ ಮತ್ತೆ ಇಡಿ ವಾರ ಬೈಲಿಲ್ಲಿ ಕಾಂಬಲಿಲ್ಲೆ ಎಂತ? ಒಪ್ಪಣ್ಣ ನ ಬೈಲಿಲಿ ಒಪ್ಪಣ್ಣ ಅವಾಗಾವಗ ಬಂದು ಎಲ್ಲೋರನ್ನೂ ವಿಚಾರಿಸಿದರೆ ಎಲ್ಲವಕ್ಕೂ ಕುಶಿ…

  2. ಮತಾಂಧತೆ ಮಿತಿಮೀರಿದರೆ ಆಪತ್ತು .

  3. ರಾಜ೦ಗೆ ಗೊ೦ತ್ತಿಲ್ಲದ್ದೂ ಇಕ್ಕೋ?.ಮದಲು ಗದ್ದೆ/ಹುಲ್ಲು ಬೆಳೆವ ಕಾಲಲ್ಲಿ ,ಯಥೇಚ್ಹ ಹಾಲು ಮಜಲ್ ಆಗಿತ್ತಡ. ಈಗ ಸುತ್ತ-ಮುತ್ತ ರಬ್ಬರ್ ಹಾಲಿನಮಜಲ್ ಆಯಿದಡ ? .ಹಾ೦ಗೆ ಇದು ಎನೋ? ನಾವಗರಡಿಯ.

  4. ಯಬೊ ಹಿoಗೂದೆ ಇದ್ದಲ್ಲದೊ ?ಎಲ್ಲೂರು ಜಾಗೆ ಮಾರಿಕ್ಕಿ ಪೇಟಗೆ ಬಂದು ಕೂದರೆ ನಮ್ಮ ಊರುದೆ ಹಿಂಗೆ ಅಕ್ಕೊ ಹೇಳಿ ?

  5. ಹೀಂಗೂ ಆಯಿದ ?ಚಿಂತನೆಗೆ ಹಚ್ಹ್ಚಿದ್ದಿ ,ಮುಂದೆ ನಮ್ಮಲ್ಲೂ ಹೀಂಗೇ ಅಕ್ಕ ?ಗೊಂತಿಲ್ಲೆ ,ಕಾಲಾಯ ತಸ್ಮೆಯ್ ನಮಃ

  6. ಅಯ್ಯೋ ರಾಮ. ಹೀಂಗುದೆ ಇದ್ದಲ್ಲದೊ ?

  7. ಧರ್ಮ ಸಹಿಷ್ಣುತೆಯ ಕೊರತೆಯೇ ಮೂಲ ಕಾರಣ ಅಲ್ಲದೋ ಒಪ್ಪಣ್ಣಾ. ನಾನಾ ಪಾಟೇಕರ್ ನ ಒ೦ದು ಸಿನೆಮಲ್ಲಿ -” ಮತ ಧರ್ಮ ಜಾತಿ ಯೇವದಾದರೆ ಎ೦ತ?ಹರಿವ ನೆತ್ತರು ಒ೦ದೇ ಅಲ್ಲದೋ?” ಹೇಳಿ ಪ್ರಶ್ನೆ ಮಾಡ್ತ ದೃಶ್ಯ ಮತ್ತೆ ಮತ್ತೆ ಮನಸ್ಸಿಲಿ ಮೂಡುತ್ತು.

    ಕೆನಡಾ ದೇಶಲ್ಲಿ ಹಾಳು ಬಿದ್ದ ಚರ್ಚ್ ಗಳಲ್ಲಿ ಸ್ವಾಮಿ ನಾರಾಯಣ ಮ೦ದಿರ ಸ್ಥಾಪನೆ ಆವುತ್ತಾ ಇದ್ದಡ,ಅದರ್ಲಿ ಯೇಸು,ಮರಿಯಮ್ಮನ ಪೂರ್ತಿಗಳ ಹಾ೦ಗೆಯೇ ಒಳುಶಿಗೊ೦ಡು ಎಲ್ಲಾ ಧರ್ಮದವಕ್ಕೂ ಪೂಜೆ ಮಾಡ್ಲೆ ಅವಕಾಶ ಮಾಡುತ್ತಾ ಇದ್ದವಡ.
    ಎಲ್ಲವೂ ಸಹಬಾಳ್ವೆಯ ಅಡಿಪಾಯಲ್ಲಿ ನೆಡೆಯೆಕ್ಕಾದ್ದಲ್ಲದೋ? ಅದರ ಅರಿವು ಮೂಡದ್ದರೆ ಕಸ್ತಲೆಯೇ !

  8. ಯೆಪ! ಕತೆ ಹೀಂಗೆಲ್ಲ ಇದ್ದಲ್ಲದೋ! ಅಡಿಗೆ ಸತ್ಯಣ್ಣನತ್ರೆ ಮಾತಾಡಿಗೊಂಡು ಕೂದರೆ ಹೀಂಗೆರ್ಸೆಲ್ಲ ಸಿಕ್ಕುತ್ತೇ ಇಲ್ಲೆ ಇದಾ.

    ಅಂತೂ ಸಂಗತಿ ಅಪ್ಪಾದ್ದೆ. ಒಪ್ಪಿತ್ತು. ಹರೇ ರಾಮ.

  9. ಅಪ್ಪಾದ ಸಂಗತಿಯ ಒಪ್ಪಕ್ಕೆ ಬರದ್ದಕ್ಕೆ ಶುದ್ದಿಗೆ ಒಂದು ಒಪ್ಪ..ಹೀಂಗೆ ಮುಂದುವರುದರೆ ಕಾಸರಗೋಡಿಲಿ ಕೂಡ ಹೀಂಗೇ ಅಕ್ಕೋ ಹೇಳಿ ಇಪ್ಪ ಸಂಶಯ ಅಪ್ಪದು ಸಹಜವೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×