ಪಳಮ್ಮೆಗಳ ಶುದ್ದಿ ಓ ಮೊನ್ನೆ ಒಂದರಿ ಮಾತಾಡಿದ್ದು. ಓದಿದ್ದಿರನ್ನೇ?
ಪಕ್ಕನೆ ನೋಡಿರೆ ಸತ್ತಿದೋ ಗ್ರೇಶೆಕ್ಕು, ಹಾಂಗೆ ಚೈತನ್ಯವೇ ಇಲ್ಲದ್ದೆ ತೇಲಿಗೊಂಡಿರ್ತು. ಜೀವ ಇದ್ದರೂ ಜೀವ ಇಲ್ಲದ್ದ ಹಾಂಗೆ, ಅಂತೇ ಬಿದ್ದುಗೊಂಡಿರ್ತು. ಬಿಡುಸಿಗೊಂಡು ಹೆರ ಹೋಪ ಕನಿಷ್ಠ ಪ್ರಯತ್ನವನ್ನೂ ಮಾಡದ್ದೇ! ಹುಟ್ಟಿದ ಲಾಗಾಯ್ತು ಮಾಡಿದ ’ರೆಂಕೆ ಆಡುಸುತ್ತ’ ಗುಣ ಮರದೇ ಹೋಯಿದಾ ಹೇಳಿ ಕಾಣ್ತು ಅದರ ನೋಡುವಗ.
ಕೆಲವು ಸರ್ತಿ ನವಗೆ ಯೇವದೋ ಕೆಲಸ ಮಾಡೆಕ್ಕು ಹೇಳಿ ಇರ್ತು. ಆವುತ್ತಿಲ್ಲೆ.
ಹತ್ತರಾಣ ನೆಂಟ್ರಮನೆ ಜೆಂಬ್ರಕ್ಕೆ ಹೋಯೆಕ್ಕು ಹೇಳಿ ಇರ್ತು, ಆದರೆ ಮನೆಲಿ ಬೇರೆ ಜೆನ ಇಲ್ಲೆ, ಆಳುಗೊ Günstige Replica Uhren ಮೊದಲೇ ಇಲ್ಲೆ. ಹಟ್ಟಿಲಿ ಕರೆತ್ತ ದನ ಬೇರೆ. ಎಂತರ ಮಾಡುಸ್ಸು? ಅಲ್ಲಿಗೆ ಹೋಯೆಕ್ಕು-ಇಲ್ಲಿಗೆ ಹೋಯೆಕ್ಕು ಗ್ರೇಶುದು. ಯೇವದೂ ಎಡಿತ್ತಿಲ್ಲೆ.
ನೋಡದಿರಾ?
ಎರಡು ಪಳಮ್ಮೆ. ವ್ಯಕ್ತಿ ಒಂದೇ – ಅದೇ ನೆಳವು.
ಒಂದು ದಿಕ್ಕೆ ಬರೇ ಉದಾಸಿನದ ಬಡ್ಡ. ಇನ್ನೊಂದು ದಿಕ್ಕೆ ಅತ್ಯಂತ ಚುರ್ಕು.
ಒಂದೇ ವ್ಯಕ್ತಿ. ಬೇರೆ ಬೇರೆ ವ್ಯಕ್ತಿತ್ವ.
ಕಾರಣ? ವ್ಯಕ್ತಿ ಇಪ್ಪ ಪರಿಸರ.
ಎಷ್ಟೇ ಚುರ್ಕಿನ ವೆಕ್ತಿ ಆದರೂ ಅವನ ಪರಿಸರ ಇಡೀ ಉದಾಸಿನದವೇ ಆದರೆ ಬಡ್ಡ° ಆವುತ್ತ°.
ಅದೇ ರೀತಿ ಉದಾಸಿನದ ಮಾಣಿ ಒಬ್ಬ ಚುರುಕ್ಕಿನ ಪರಿಸರಲ್ಲಿ ಬೆಳದರೆ ಅವ ಉಳುದವರೊಟ್ಟಿಂಗೆ ಸೇರಿ ಒಳ್ಳೆತ ಚುರುಕ್ಕು ಆವುತ್ತ°. ಅಲ್ಲದೋ? ನಮ್ಮ ಪರಿಸರ ಒಳ್ಳೆದಿರೇಕು ಹೇಳಿ ಅಜ್ಜಿಯಕ್ಕೊ ಹೇಳುಸ್ಸು ಇದಕ್ಕೆ ಬೇಕಾಗಿಯೇ!. ಅಲ್ಲದೋ?
ಏ°?
ಎಂತ ಹೇಳ್ತಿ?
ಶಂಬಜ್ಜನ ಎರಡು ಪಳಮ್ಮೆಗಳ ಸೇರ್ಸಿ ಪುಳ್ಳಿದು ಉಪಾಯಲ್ಲಿ ಒಂದು ಶುದ್ದಿ. 😉
[ಮುಳಿಯಾಲದಪ್ಪಚ್ಚಿ ಓ ಮೊನ್ನೆ ವಿಟ್ಳಲ್ಲಿ ಸಿಕ್ಕಿ ಅಪ್ಪಗ ಪರಂಚಿದವು, ’ನಿನ್ನ ಶುದ್ದಿಗೊ ಬಯಂಕರ ಉದ್ದ ಆತು ಒಪ್ಪಣ್ಣ’ ಹೇಳಿ. ಈ ಸರ್ತಿ ಚಿಕ್ಕ-ಚೊಕ್ಕ ಶುದ್ದಿ. ಈ ಸರ್ತಿ ಎಂತ ಹೇಳ್ತವು ನೋಡೆಕ್ಕು 🙂 ]
ಒಂದೊಪ್ಪ: ಪಳಮ್ಮೆ ಓದಿದ ಲೆಕ್ಕಲ್ಲಿ ಆದರೂ ಇಂದ್ರಾಣ ಹೆಜ್ಜೆಲಿ ನೆಳವು ಇದ್ದೋ ನೋಡಿಗೊಳ್ಳಿ. 😉
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಒಳ್ಳೆ ಪಳಮ್ಮೆಗೊ…
ವ್ಯಕ್ತಿಯ ವ್ಯಕ್ತಿತ್ವ ಅವ ಬೆಳದ ಪರಿಸರದ ಪ್ರತಿಬಿಂಬ ಹೇಳ್ತದು ನೂರಕ್ಕೆ ನೂರು ಸತ್ಯದ ಮಾತು…
sadya deepakkana maneli heli heliddilleanne,mundana oppada nireeksheli………..
ಅದು ಹಾಂಗಲ್ಲ, ಮಕ್ಕ ಜಗಳ ಮಾಡಿಗೊಂಬಗ ಹೇಳುವ ಮಾತದು. ಒಂದು ರಚ್ಚೆಂದ ಬಿಡ ಒಂದು ಗೂಂಜಿಂದ ಬಿಡ ಹೇಳಿ. ಆರೂ ಸೋಲೊಪ್ಪುಲೆ ತಯಾರಿಲ್ಲದ್ದೆ ಇಪ್ಪಗ ಹೇಳುವ ಮಾತದು.
ಒಪ್ಪಣ್ಣ ಲಾಯಿಕ್ಕ ಬರೆತ್ತಾ ಇದ್ದೆ. ಸುಮಾರು ಸಮೆಯಂದ ಗಮನಿಸ್ತಾ ಇದ್ದೆ. ಖುಶೀ ಆವ್ತು ನಮ್ಮೋರ ಮಕ್ಕಳ ಕ್ರಿಯೇಟಿವಿಟಿ ಕಂಡು. ಕೀಪ್ ಇಟ್ ಅಪ್
ರೆಚ್ಚೆ ಬಿಟ್ಟರೂ ಬೂಂಜು ಬಿಡ ಹೇಳಿಯೂ ಹೇಳ್ತವಪ್ಪ ! 🙂
ಒಪ್ಪಣ್ಣಂಗೆ ಸಣ್ಣಕ್ಕೆ ಬರವಲೆ ಗೊಂತಿದ್ದು ಹೇಳಿ ಆತು. ಸತ್ಯ ಹೇಳೆಕ್ಕಾ ಬಾವ ಆ ನವರಾತ್ರಿಯ ಬಗ್ಗೆ ಲೇಖನವ ಆನು ಓದಿದ್ದಿಲ್ಲೆ ಆತಾ.. ಅದರ ಉದ್ದ ನೋಡಿ. ಮುಳಿಯಾಲ ಅಪ್ಪಚ್ಚಿಗೆ ಎಲ್ಲರೂ ಕೃತಜ್ಞರಾಗಿರೆಕ್ಕು ಇದಾ..
ಹಾಂಗಾರೆ ನಮ್ಮ ಬೇಂಕಿನ ಬಾವ ಅಸ್ಸಾಮಿಂಗೆ ಹೋಯಿದನಾ..ನಕ್ಸಲರು ಇದ್ದವು ಬಾವ ಹೇಳಿಕ್ಕು ಮಿನಿಯಾ….
ಹೇಳಿದ ಹಾಂಗೆ ಮೊನ್ನೆ ಆಚಕರೆ ಮಾಣಿ ನೊರಂಜಿಯ ಬಗ್ಗೆ ಲೆಕ್ಚರು ಬಿಡ್ತಾ ಇತ್ತಿಂದಾ ….ಎಂತಾತಪ್ಪ ಅವನತ್ತರೆ ಕೇಳೆಕಷ್ಟೇ…
ಏ ಭಾವ…. ಇದು ಚೆಂದ ಆಯಿದು…. ಮೂರೇ ಪೇರಗ್ರಾಫಿನ ಒಪ್ಪ… ಓದುಲೂ ಸುಲಾಬ. ಬದಿಯಡ್ಕಕ್ಕೆ ಕೆಮ್ಕಕ್ಕೆ ಬಂದಿಪ್ಪಗ ಹೆಚ್ಚು ಪುರುಸೊತ್ತಿರ್ತಿಲ್ಲೆ ಇದಾ…. ಬೇಗ ಓದಿ ಮುಗಿಶುಲೆ ಒಳ್ಳೆದು.
ಅದ್ದಾ…. ಒಂದು ನೆಳವು ಕಾಪಿಗೆ ಬಿದ್ದತ್ತು… ಎನ್ನಂದೆಡಿಯ ಈ ನೆಳವುಗಳ ಕಿತಾಪತಿಲಿ… ಪುಟ್ಟಕ್ಕ ಭಾರೀ ಕಷ್ಟಪಟ್ಟು ಒಂದು ಕಾಪಿ ಹೆಳ್ತ ಸಾಮಾನು ಮಾಡಿ ತಂದದು. ಅದೂ ಹೋತು. ಹಾಳಾದ ನೆಳವು.
ಮತ್ತೆ ನಮ್ಮ ಡೈಮಂಡು ಭಾವ ಮೊನ್ನೆ ಎಂತದೋ ಹೇಳಿತ್ತಿದ್ದ ನೆಳವುಗಳ ಬಗ್ಗೆ, ಎಂತ ಹೇಳಿ ಮರತ್ತೆ. ಅವನತ್ತರೆಯೆ ಕೇಳೆಕ್ಕಷ್ಟೆ.
ಹೇಳ್ತ ಹಾಂಗೆ , ಮೇಲೆ ತೋರ್ಸಿದ ಪಟಲ್ಲಿ ನೆಳವು ಯೇವ ಜಾಗ್ಗೆ ಬೀಳ್ತಾ ಇಪ್ಪದು? ಹೆಜ್ಜಗಾ? ಅಲ್ಲ ರಚ್ಚಗಾ?
'ಮಾಣಿಯ ದೊಡ್ಡ ಭಾವ' ನೀರ್ಚಾಲಿಲಿ ಹುಡ್ಕಿದರೆ ಎಲ್ಲಿ ಸಿಕ್ಕುದು???? ಆನು ಅಸ್ಸಾಮಿಂಗೆ ಟ್ರಾನ್ಸ್ವರು ಆಗಿ ತಿಂಗಳು ಮೂರು ಕಳ್ತು. ಇಲ್ಲಿ ಎನಗೆ ಒಪ್ಪಣ್ಣ ಬಿಟ್ಟರೆ ಬೇರೆ ಆರನ್ನೂ ಗೊಂತಿಲ್ಲೆ(ನೆಟ್ಟಿಲಿ). ಮೊನ್ನೆ ನೆಟ್ಟಿಲಿ ಪ್ರೆಂಡುಗ ಆರಾರು ಸಿಕ್ಕುಗೋ ಹೇಳಿ ಓಂಗಿಗೋಂಡಿಪ್ಪಗ ಈ ಒಪ್ಪಣ್ಣ ಸಿಕ್ಕಿದ ಇದಾ… ಇಲ್ಲಿ ಸುಮ್ಮನೆ ರಚ್ಚೆಲಿ ಅಂಟಿದ ಹಾಂಗೆ ಕೂಪಗ ಈ ಒಂದು ಕೆಲಸ ಸಿಕ್ಕಿದ್ದು ಬಾರೀ ಸಂತೋಷದ ಸಂಗತಿ. ವಾರ ವಾರ ಕಾವದು ಈ ಒಪ್ಪಣ್ಣಂಗೆ ಏವಗ ಪುರುಸೊತ್ತಾವುತ್ತು ಹೇಳಿಗೊಂಡು… ಬರವದು ನಿಲ್ಸಿಕ್ಕೆಡ ಮಿನಿಯಾ? ನೀನು ಹಾಂಗೆಂತಾರು ಮಾಡಿದರೆ ಮತ್ತೆ ಒಬ್ಬ ಒಳ್ಳೆಯ ಮಾಣಿ ಪಬ್ಬಿಂಗೆ ಹೋಗಿ ಹಾಳಪ್ಪಲೆ ನೀನೆ ಕಾರಣ ಆವ್ತೆ…. ಜಾಗ್ರತೆ.
oppannana blog ellinda ellige hovuttu.padlagiyana suddi hakadre bloginge maja illeya.hejjeli bidda nelavu bidu hala patralli nelavu biddare enta madte oppanno.adara tegadu unnuttilleya.happa oppannana chokke.
ಎಂತ ಒಪ್ಪಣ್ಣೋ..ಉದ್ದದ ಸುದ್ಧಿ ಬರದು ಉದಾಸೀನ ಆತೋ ಹೇಂಗೆ? ಅಂದಹಾಂಗೆ ಆಚಕರೆ ಮಾಣಿಯ 'ಹೆಜ್ಜೆಲಿ ಬಿದ್ದ ನೆಣವಿನ ಹಾಂಗೆ' ಹೇಳಿ ಮಡೆಕೇರಿ ಅತ್ತೆ ಹೇಳಿಗೊಂಡಿದ್ದ ನೆಂಪು !ಆದರೆ ಈಗ ಅವಂದು ರಚ್ಚೆಲಿ ಬಿದ್ದ ನೆಣವಿನ ಹಾಂಗೆ ಆಯ್ದು ಮಿನಿಯಾ. ಅದಕ್ಕೆ ಕಾಣ್ತು ಕಳೆದ ಸಲದ ಶುದ್ಧಿಗೆ ಎಂತದೂ ಬರದ್ದನೇ ಇಲ್ಲೆ ! ಒಟ್ಟಿಲಿ ಪರಿಸರ, ಪರಿಸ್ಥಿತಿ, ಸಹವಾಸ ಮನುಷ್ಯರ ಬದಲ್ಸುತ್ತು ಹೇಳುದು ನೂರಕ್ಕೆ ನೂರು ಶತಸಿದ್ಧ. ಅಂದಹಾಂಗೆ ಒಪ್ಪಣ್ಣೋ, ನಿನ್ನದೆಂತ ಸ್ಥಿತಿ?