ಇದೊಂದು ರಜ್ಜ ಕುಶಾಲಿಂಗೆ ಹೇಳಿಯೇ ಬರದ ಹರಟೆ ಶುದ್ದಿ.
ತರವಾಡು ಮನೆ ಹೇಳಿರೆ ಎಂಗಳ ಬೈಲಿಂದ ಪಂಜ ಸೀಮೆಗೆ ಸಂಬಂದ ಆದ ಸುರೂವಾಣ ಮನೆ. ರಂಗಮಾವನ ತಂಗೆ ಮಾಲ ಚಿಕ್ಕಮ್ಮನ ಪಂಜಕ್ಕೆ ಕೊಟ್ಟದು. ಪಂಜಲ್ಲಿ ಎಲ್ಲಿ ಹೇಳಿ ಅವರ ಮನೆ ಹೆಸರು ಸರೀ ನೆಂಪಾಗ ಒಪ್ಪಣ್ಣಂಗೆ, ಅಂದೇ ಮದುವೆ ಆಗಿ ಹೋಯಿದವು, ಈಗ ತಿತಿಗೋ , ಪೂಜಗೋ ಹೇಳಿಗೊಂಡು ಒರಿಷಕ್ಕೆ ಒಂದರಿಯೋ, ಎರಡು ಸರ್ತಿಯೋ ಮಣ್ಣ ಬಕ್ಕಷ್ಟೆ ಅವು. ಮೊನ್ನೆ ಬಂದಿತ್ತಿದ್ದವು, ಇಬ್ರುದೇ. ಶಂಬಜ್ಜನ ತಿತಿಗೆ ಹೇಳಿ ಬಂದವು ಆ ದಿನ ನಿಂದು, ಮರದಿನ ಒಡೆ ಸುಟ್ಟವು ಕಟ್ಟಿ ತೆಕ್ಕೊಂಡು ಹೋಯಿದವು. ಪಿತೃ ಕಾರ್ಯಕ್ಕಪ್ಪಗ ಬಪ್ಪಲೇ ಬೇಕನ್ನೇ!
ಮಾಲ ಚಿಕ್ಕಮ್ಮನ ಮದುವೆ ಕಳುದ ಮತ್ತೆ ಸುಮಾರು ಸಂಬಂಧ ಆಯಿದು. ಆ ಮದುವೆ ದಿಂಡು ಕಳಿಯೆಕ್ಕಾರೆ ನಮ್ಮ Replique Montres Pas Cher ಶೇಡಿಗುಮ್ಮೆ ಮಾವಂಗೆ ಸಂದಾನ ಆಯಿದು, ಮಜಲುಕೆರೆಂದ – ಇಂದಿರತ್ತೆಯ. ಮತ್ತೆ ಒಂದು ಒರಿಶಲ್ಲಿ ಅಜ್ಜಕಾನ ಮಾವಂದು. ಅದಾದ ಮತ್ತೆ ಒಪ್ಪಣ್ಣನ ಮನೆಂದಲೇ ಅತ್ತೆಯ ಕೊಳ್ಚಿಪ್ಪಿ ಹೇಳ್ತಲ್ಲಿಗೆ ಕೊಟ್ಟದು. (ನಮ್ಮ ಊರಿಲಿಯುದೇ ಅದೇ ಹೆಸರಿನ ಊರು ಇದ್ದು, ಆದರೆ ಕೊಳಚ್ಚಿಪ್ಪು ಹೇಳುಸ್ಸು ಅದರ.) ಸದ್ಯದ್ದು ಹೇಳ್ತರೆ ಆಚಕರೆ ಕೂಸಿನ ಕೊಟ್ಟಿದು. ಹಾಂಗೆ ಬೆಳಕ್ಕೊಂಡು ಈಗ ಸುಮಾರು ಬಾವಂದ್ರು ಆಯಿದವು. ಸಂಪರ್ಕ, ಸಂಬಂಧ ಅತ್ತಿಂದಿತ್ತೆ ಆದ ಮತ್ತೆ ಪರಸ್ಪರ ಭಾಶಾ ಪರಿಚಯವೂ ಆಯಿದು.
ಪಂಜ ಹೊಡೆಲಿ ಮಾತಾಡುವ ಹವ್ಯಕ ಭಾಷೆಗೂ, ಕುಂಬ್ಳೆ ಹೊಡೆಲಿ ಮಾತಾಡುವ ಭಾಷೆಗೂ ರಜ ವೆತ್ಯಾಸ ಇದ್ದು. ರಂಗ ಮಾವ° ಮಾತಾಡ್ತ ಭಾಷೆಗೆ ’ಕುಂಬ್ಳೆ ಭಾಶೆ’ ಹೇಳ್ತವು, ಇದರ್ಲಿ ಸ್ಥಳೀಯ ಮಲೆಯಾಳದ ಪ್ರಭಾವದ ಶಬ್ದಂಗ ಜಾಸ್ತಿ. ಕುಂಬ್ಳೆ ಭಾಶೆಲಿ ರಜ್ಜ ವೆತ್ಯಾಸ, ಮಾರ್ಪಾಡುಗೊ ಆಗಿ ಅತ್ಲಾಗಿತ್ಲಾಗಿಯಾಣ – ಪುತ್ತೂರು, ಕೋಳ್ಯೂರು ಸೀಮೆ ಭಾಶೆ ಇತ್ಯಾದಿಗೊ ಇದ್ದು. ಜಾಸ್ತಿ ಅಲ್ಲದ್ರೂ ವಿಟ್ಳ ಸೀಮೆ (ನಮ್ಮ ಚೆಂಬರ್ಪು ಅಣ್ಣನ ಮನೆಲಿ ಮಾತಾಡ್ತ ನಮುನೆದು, ಗೊಂತಾತಲ್ದೋ?) ಭಾಶೆಯೂ ರಜ್ಜ ವೆತ್ಯಾಸ ಇದ್ದೇ ಇದ್ದು. ಹೊಸದುರ್ಗ ಸೀಮೆಯ ಅತ್ಲಾಗಿ ಕೆಲವು ಮನೆಲಿ ಶುದ್ದ ಮಲೆಯಾಳವೂ ಮಾತಾಡ್ತವು ಹೇಳಿ ಕುಂಬ್ಳೆ ಅಜ್ಜಿ ಹೇಳಿದ ನೆಂಪು, ಸರೀ ಗೊಂತಿಲ್ಲೆ!
ಪಂಜ ಚಿಕ್ಕಯ್ಯ ಮಾತಾಡುವ ಭಾಷೆಗೆ ‘ಪಂಜ ಭಾಷೆ’ ಹೇಳುದು. ಈ ಭಾಶೆಲಿ ಕನ್ನಡದ ಪ್ರಭಾವದ ಶಬ್ದಂಗ ಹೆಚ್ಚು. ಅಪ್ಪಚ್ಚಿ ಹೇಳ್ತದಕ್ಕೆ ಅವು ಚಿಕ್ಕಯ್ಯ ಹೇಳುದಲ್ದಾ, ಅದಕ್ಕೆ ಅವರ ’ಪಂಜಚಿಕ್ಕಯ್ಯ’ ಹೇಳಿಯೇ ಹೇಳುದು. {“ಕುಂಬ್ಳೆಲಿ ’ಮಿನಿ(ಲಿ)ಯ’ ಇಪ್ಪದು ಪಂಜಲ್ಲಿ ’ಬಿಲಿಯ’ ಆಯಿದು – ಸಾವಿರ ಪಟ್ಟು ಜಾಸ್ತಿ” ಹೇಳಿ ಈಚಕರೆ ಪುಟ್ಟ ಅಂಬಗಂಬಗ ನೆಗೆ ಮಾಡುಗು, ಹೆ ಹೆ.} ಪಂಜ ಭಾಶೆಂದಲೂ ಹಾಂಗೇ., ಕನ್ನಡದ ಪ್ರಮಾಣ, ಪ್ರತ್ಯಯ ರಜ್ಜ ವೆತ್ಯಾಸ ಆಗಿಪ್ಪ – ’ಚೊಕ್ಕಾಡಿ ಬಾಶೆ’ ಇದ್ದು. ದೀಪಕ್ಕನ (- ಚೂರಿಬೈಲು ಡಾಕ್ಟ್ರ ಹೆಂಡತ್ತಿ) ಅಪ್ಪನ ಮನೆಲಿ, ನಮ್ಮ ಕಾವಿನಮೂಲೆ ರಾಮಜ್ಜನ ಮನೆಲಿ ಎಲ್ಲ ಆ ಬಾಶೆಯೇ ಮಾತಾಡುದು. ಪಂಜ ಸೀಮೆಯ ಕೆಲವು ಬಾವಂದ್ರು ಮಡಿಕೇರಿಲಿ ಇದ್ದವು ಅಡ – ಅವು ಶುದ್ದ ’ಶಾಲೆ ಕನ್ನಡ’ ಮಾತಾಡುದು ಅಡ, ಮನೆಲಿಯುದೆ – ಪುಟ್ಟಕ್ಕ ಹೇಳಿಗೊಂಡಿತ್ತು ಮೊನ್ನೆ.
ಪಂಜ ಊರಿಂಗೆ ಹೋದ ಮತ್ತೆ ಮಾಲ ಚಿಕ್ಕಮ್ಮ ಅವರ ಮನೆಲಿ ಮನೆಭಾಷೆ ಮಾತಾಡುದು -ಪಂಜ ಚಿಕ್ಕಯ್ಯನ ಹಾಂಗೆ; ಹೋಪ್ಲೆ – ಬಪ್ಲೆ ಹೇಳಿ. ಅಪ್ಪನ ಮನಗೆ ಬಂದರೆ ಕುಂಬ್ಳೆ ಭಾಷೆ ಮಾತಾಡುದು; ಹೋಪಲೆ-ಬಪ್ಪಲೆ. ಅವರ ನೆರೆಕರೆ ದೀಪಕ್ಕಂಗೆ ಪೋನೋ ಮತ್ತೊ° ಮಾಡ್ತರೆ ರಜ ರಜ ಚೊಕ್ಕಾಡಿಯ ’ಹೋವುಕೆ -ಬರೂಕೆ’ಯನ್ನೂ ಮಾತಾಡ್ತವು. ಸಣ್ಣಗಿಪ್ಪಗ ಆಳುಗಳೊಟ್ಟಿಂಗೆ ಕಲ್ತ ಮಲೆಯಾಳವೂ, ಈಗ ಅಲ್ಲಿ ಆಳುಗಳತ್ರೆ ಮಾತಾಡ್ಳೆ ತುಳುದೇ ಬತ್ತು. ಮಹಿಳಾ ಸಮಾಜದ ಸಂಪರ್ಕಂದಾಗಿ ನೆರೆಕರೆ ಗೌಡುಗಳ ’ಹೋಕನೆ –ಬಾಕನೆ’ ಭಾಶೆಯೂ ಬತ್ತು. ಶಾಲಗೆ ಹೋವುತ್ತ ಮಗಳಿಂಗೆ ಹೇಳಿಕೊಡ್ಳೆ ಬೇಕಾಗಿ ಹಿಂದಿ- ಇಂಬ್ಳೀಶುದೇ ರಜ ರಜ ಮಾತಾಡ್ತವು! ಹಾಂಗಿಪ್ಪ ಮಾಲ ಚಿಕ್ಕಮ್ಮ. ಪಂಜ ಚಿಕ್ಕಯ್ಯಂಗೆ ಪಂಜ ಬಾಶೆ ಬಿಟ್ರೆ ಬೇರೆ ಏವದೂ ಬಾರ ಹೇಳಿ ನೆಗೆ ಮಾಡುಗು ಕೆಲವು ಸರ್ತಿ. ಇಷ್ಟರ ಒರೆಂಗೆ ಅದೊಂದೆ ಸಾಕಾಯಿದು ಅವಕ್ಕೆ. 😉
ಅದಿರಳಿ,
ಈ ಪಂಜ ಚಿಕ್ಕಯ್ಯ ತುಂಬಾ ಶ್ರಮಜೀವಿ. ಅಡಿಕೆ ತುಂಬಾ ಆಗ್ತು ಅವ್ಕೆ. ಆದ್ರೂ ತುಂಬಾ ಸರಳ. (ಅದಾ..ಒಪ್ಪಣ್ಣಂಗೆ ಅವರ ಶುದ್ದಿ ಹೇಳುವಾಗ ರಜ ರಜ ಆ ಭಾಷೆ ಒತ್ತುತ್ತು- ಹಾಂಗೆ ಅತ್ತಿತ್ತೆ ಆದರೆ ತೊಂದರೆ ಇಲ್ಲೆನ್ನೇ!)
ಮಗ° ದೂರಲ್ಲಿ ಇಂಜಿನಿಯರು ಕಲಿಯೂದು, ಮಗ್ಳು ಬಾಳಿಲ ಶಾಲೆಗೆ ಹೋಪುದು. ಚಿಕ್ಕಯ್ಯನ ಸ್ವಂತ ಆಸಕ್ತಿಯಿಂದ ಕೃಷಿ ಅಭಿವೃದ್ದಿ ಆದ್ದು. ಹಟ್ಟಿ ತುಂಬಾ ದನ. ಬೆಳಿಗ್ಗೆ-ಬೈಸಾರಿ ಡೈರಿಗೆ ಹಾಲು ಹಾಕ್ತವು, ದಿವ್ಸಕ್ಕೊಂದ್ಸರ್ತಿ ನಡ್ಕೊಂಡೇ ಪೇಟೆಗೆ ಹೋಗ್ತವು. ಮನೆ, ಕೃಷಿ, ತರ್ಕಾರಿ, ನಂಟ್ರು, ನೆರೆ ಎಲ್ಲವನ್ನೂ ಸುದಾರ್ಸಿಗೊಂಡು ಹೋಗ್ತವು. ತುಂಬ ಮಾತಾಡ್ತುವು, (ಮಾಲ ಚಿಕ್ಕಮ್ಮನಷ್ಟು ಅಲ್ಲ!). ಸ್ವತಃ ಶ್ರಮಜೀವಿ ಆದ ಕಾರಣ ಮಾತುಕತೆ ಮಧ್ಯ ಜೀವನಾನುಭಾವ ಇರ್ತು.
ಕೆಮಿಲಿ ಒಂದು ಟಿಕ್ಕಿ, ಕೊರಳಿಂಗೆ ಒಂಟಿ ರುದ್ರಾಕ್ಷಿ ಮಾಲೆ. ಮೋರೆಲಿ ಬೆಳಿ ಗೆಡ್ದ, ಅಮವಾಸೆಗೆ ಹುಣ್ಣಮೆಗೆ ತೆಗೆತ್ತದು ಅದರ. ಅರೆ ಬೆಳಿ ತಲೆಕಸವು. ಅರೆ ಬೆಳಿ ಹೇಳಿರೆ?- ತಿಂಗಳಿಂಗೆ ಒಂದರಿ ಕುಚ್ಚಿ ತೆಗೆಶುದು, ಅಷ್ಟಪ್ಪಗ ತಲೆಕಸವಿಂಗೆ ಕಪ್ಪು ಬಣ್ಣ ಹಾಕುದು- ಪಂಜ ಬಷ್ಟೇಂಡಿನ ಕರೆಲಿಪ್ಪ ಕುಶಲಪ್ಪನ ಬಂಡಾರಿ ಕೊಟ್ಟಗೆಲಿ. ಹಾಂಗೆ ತಿಂಗಳಿನ ಸುರುವಾಣ ವಾರ ಮೂವತ್ತೊರಿಶದ ತುಂಡು ಜವ್ವನಿಗ° ;-). ಎರಡ್ನೇ ವಾರ ನಲುವತ್ತು ಒರಿಶದ ಜವ್ವನ. ಮೂರ್ನೇ ವಾರ ಅರೆಕರಂಚಿದ ತಲೆಕಸವು – ನಲುವತ್ತೈದು ಒರಿಶದ ಗೆಂಡು ಮಕ್ಕೊ. ಅಂತೂ ಮತ್ತಾಣ ತಿಂಗಳು ಕುಚ್ಚಿ ತೆಗೆಶುಲೆ ಹೋಪಲಪ್ಪಗ ಮತ್ತೆ ಐವತ್ತು ಒರಿಶದ ಅಪ್ಪಚ್ಚಿ. ಅದೇ ವಾರ ಆಯಿದು ಇದಾ ಶಂಬಜ್ಜನ ತಿತಿ. 😉
ಹಗಲು ಪೂರ ಇಸ್ಪೇಟು ಗೌಜಿಲಿ ಕಂಡಾಬಟ್ಟೆ ಗಡಿಬಿಡಿ. ಹೊತ್ತೊಪ್ಪಗ ತಿತಿ ಊಟ ಉಂಬಲಪ್ಪಗ ರಜ್ಜ ಮಾತಾಡ್ಳೆ ಹೇಳಿ ಪುರುಸೊತ್ತು ಇದಾ! ದೊಡ್ಡವರ ಹಂತಿ ಒಳ್ಳೆ ಗೌಜಿ. ಇವುದೇ ಎಲ್ಲ ಹಳಬ್ಬರ ಹಾಂಗೇ ಬೊಬ್ಬೆ ಹೊಡದು ಮಾತಾಡುದು- ಆದರೆ ಪಂಜ ಭಾಷೆ. ಹಳೆ ಕಾಲದ ಶೈಲಿ ಅಲ್ದೋ! ರಾಜಕೀಯಂದ ಹಿಡುದು ಕೃಷಿಯ ಒರೆಗಾಣ ಜೀವನಾನುಭವ ಅವಕ್ಕಿದ್ದು. ಎಲ್ಲವುದೇ ಬಕ್ಕು.
ಈಚಕರೆ ಪುಟ್ಟ ಅವರ ಕರೆಲಿ ಕೂದ್ದು, ಅಜ್ಜಕಾನ ಬಾವ ಅವರ ಎದುರು. ಒಪ್ಪಣ್ಣ ಆಚಕರೆಮಾಣಿ, ಗುಣಾಜೆ ಕುಂಞಿ, ಎಲ್ಲೊರು ಅವರ ಒಟ್ಟೊಟ್ಟಿಂಗೆ ಕೂದೆಯೊ°. ಪಾಲಾರು ಅಣ್ಣ, ಸಿದ್ದನಕೆರೆ ಅಪ್ಪಚ್ಚಿ, ಕಾವೇರಿಕಾನ ಉದ್ದಣ್ಣ ಎಲ್ಲ ಎರಡ್ಣೇ ಹಂತಿಗೆ ಕೂಪದು, ಹೆಚ್ಚು ಹಶು ಆಗಿ ಜಾಸ್ತಿ ಉಂಬಲೆ ಬೇಕಾಗಿ. 😉
ಕೆಲವು ಹಳಬ್ಬರುದೇ, ಎಂಗೊ ಜವ್ವನಿಗರುದೇ ಹೆರಾಣ ಜೆಗಿಲಿಲಿ ಹಾಕಿದ ಹಂತಿಲಿ ಕೂದ್ದು, ಕೈಸಾಲೆಲಿಯೋ, ಪಡುಜೆಗಿಲಿ ಹಂತಿಲಿ ಎಲ್ಲ ಒಳುದ ರಜ ಹಳಬ್ಬರು ಕೂಯಿದವು. ಕೈಸಾಲೆಲಿ ಕೂದ ಹರಿಮಾವನ ಹಳೆ ಕುಂಬ್ಳೆಭಾಶೆ , ಪಡುಜೆಗಿಲಿಲಿ ಕೂದ ಗೋವಿಂದ ಬಟ್ರ ಕನ್ನಡ (– ಅವು ಮಕ್ಕಳ ಹತ್ರೆ ಹವ್ಯಕ ಮಾತಾಡ್ತರೂ, ದೊಡ್ಡವರತ್ರೆ ಕನ್ನಡವೇ ಮಾತಾಡುಗು), ಇದರ ಒಟ್ಟೊಟ್ಟಿಂಗೆ ಹೆರಾಣ ಜೆಗಿಲಿಲಿ ಕೂದ ಪಂಜ ಚಿಕ್ಕಯ್ಯನ ಪಂಜಬಾಶೆದೇ ಅಲ್ಲಿ ಇದ್ದ ಎಲ್ಲೊರಿಂಗೂ ಕೇಳಿಗೊಂಡಿತ್ತು. ಪಡುಜೆಗಿಲಿಂದ ಕೈಸಾಲೆಗೆ, ಕೈಸಾಲೆಂದ ಹೆರಾಣ, ಎಂಗಳ ಹಂತಿಗೆ ಬೊಬ್ಬೆ ಹೊಡದು ಮಾತಾಡುದು. ಬಳುಸುತ್ತವ° ಎಂತರ ತಂದದು ಹೇಳಿ ಹಾಕಿದ ಮತ್ತೆಯೇ ಗೊಂತಾಯೆಕ್ಕಷ್ಟೆ. ಚೀಪೆ ತಿಂಬಲಾಗದ್ದ ಮಗುಮಾವನ ಬಾಳಗೆ ಕೆಳಾಣ ಸುಬ್ಬಣ್ಣ ಹಸರ ಸೀವು ಬಳುಸಿದ್ದು ಅದೇ ಗಡಿಬಿಡಿಂದ!
ಪಂಜ ಚಿಕ್ಕಯ್ಯ ಮಾತಾಡುವಾಗ ಒಂದು ವಿಶೇಷ ಇದ್ದು- ಎಂತದೇ ಮಾತಾಡ್ಲಿ, ಎಡೆ ಎಡೆಲಿ ‘ನೀನು/ ನಿಂಗ’ ಹೇಳಿ ಸೇರುಸುದು. ಎದುರಾಣವನ ಹತ್ರೆ ಮಾತಾಡುವಗ ಇಪ್ಪ ಆಪ್ತತೆ, Involvement ಜಾಸ್ತಿ ಅಪ್ಪಲೆ ಹೇಳಿ ಲೆಕ್ಕ. ಅವರ ಊರಿನ ನೀರಿನ ತೊಂದರೆಂದ ಸುರು ಆಗಿ, ಕ್ರಿಕೆಟು – ಟಿ-೨೦ ಆಗಿ, ರಾಜಕೀಯ, ಸೊನೆ ಗಾಂದಿ, ರಾಮಜ್ಜ ಆಗಿ, ಮಠದ ಯಾತ್ರೆಯ ಶುದ್ದಿ, ದನಗಳ ಶುದ್ದಿ ಆಗಿ ಅಕೆರಿಗೆ ಅವರ ಮಾವ° ಶಂಬಜ್ಜನ ಕಾಲಬುಡಲ್ಲಿ ನಿಂದತ್ತು. ಮಾತಾಡಿದ ಅಷ್ಟೂ ವಿಷಯಲ್ಲಿ ನಿನಿಗೆ, ನಿಂಗಗೆ – ಹೇಳಿ ಸೇರಿಸಿಗೊಂಡೇ ಇತ್ತಿದ್ದವು.
ಆಚಕರೆ ಮಾಣಿಗೆ ತಾಳು ಕಾರ ಆಗಿ ಅಂಬಗಳೇ ಒಂದು ಗ್ಲಾಸು ನೀರು ಕಾಲಿ. ಚಿಕ್ಕಯ್ಯನ ಗ್ಲಾಸು ತೆಕ್ಕೊಂಡ°, ಅದನ್ನೂ ಕಾಲಿ ಮಾಡಿದ. ನೀರಿಂಗೆ ತತ್ವಾರ ಆದರೂ ನೆಟ್ಟಿ ತರಕಾರಿ ಮಾಡುವ ಪಂಜಚಿಕ್ಕಯ್ಯ ನೀರಿನ ತುಂಬುಸಿ ಮಡಗುತ್ತ ವೆವಸ್ತೆ ಬಗ್ಗೆ ಹರಿ ಮಾವ° ಕೇಳಿದವು. ’ಗುಡ್ಡೆ ತುದಿಲಿ ಮಣ್ಣ ಗುಂಡಿ ತೆಗುದು ಅದ್ರಲ್ಲಿ ನೀರು ಶೇಖರಣೆ ಮಾಡುವ’ ಬಗ್ಗೆ ವಿವರುಸಿದವು ಪಂಜ ಚಿಕ್ಕಯ್ಯ. ’ಕರೆಯ ಡೆಂಜಿ ಕೊರದು ನೀರು ಇಂಗಿ ಸೋರದೋ?’ ಹೇಳಿ ಪ್ರಶ್ನೆ ಬಂತು ಹರಿಮಾವಂದು. ಅದಕ್ಕೆ “ಮಣ್ಣು-ಮಡ್ಡಾಯಿಲು (Mud-Oil) ಸೇರ್ಸಿ ಹೊಳಿಮಣೆಲಿ ಸರೀ ಹೊಳಿಯೆಕ್ಕು ನಿಂಗಗೆ’ ಹೇಳಿದವು. ಎಲ್ಲೊರು ’ಅಪ್ಪನ್ನೇ! ಒಳ್ಳೆ ಉಪಾಯ’ ಹೇಳಿ ಗ್ರೇಶಿಗೊಂಡರೆ, ಆಚಕರೆ ಮಾಣಿಗೆ ಎಡೆಲಿ ಬಂದ ’ನಿಂಗೊಗೆ’ ತುಂಬ ತಮಾಶೆ ಆಗಿ ಕಂಡತ್ತು.ಕೊರಳು ಎತ್ತರ್ಸಿ ನೀರು ಕುಡ್ಕೊಂಡು ಇದ್ದವನ ತಲಗೆ ಈ ವಿಶಯ ಹೋದ್ದೇ ತಡ, ರಪಕ್ಕ ತೆರಂಬು ಹೋಗಿ ನೀರು ಪೂರ ಹೆರ. ಮಡ್ಡೋಯಿಲಿನ ಹೊಳಿಮಣಗೆ ಮೆತ್ತಿ ಪುಟ್ಟಕ್ಕನ ಮೋರೆಗೆ ಹೊಳಿವದು ನೆಂಪಾತೋ ಏನೋ! ಕಣ್ಣು ಕೆಂಪಾಗಿ, ಶಾಲು ಚೆಂಡಿ ಆಗಿ ಕಿತಾಪತಿ– ’ಎಂತಾತು ಮಾರಾಯ°’ ಹೇಳಿ ಅಜ್ಜಕಾನ ಬಾವ ಕೇಳಿದ°, ಶುದ್ದಿ ವಿವರ್ಸಿದ° -ಬಂಙಲ್ಲಿ. ಅಜ್ಜಕಾನ ಬಾವಂಗೂ ನೆಗೆ ಶುರು ಆತು. ಮತ್ತೆ ಅಲ್ಲಿಂದ ಗುಣಾಜೆ ಕುಂಞಿ, ಅಲ್ಲಿಂದ ಈಚಕರೆ ಪುಟ್ಟ° – ಅಂತೂ ಕ್ಷಣಾರ್ಧಲ್ಲಿ ಜವ್ವನಿಗರಿಂಗೆ ಎಲ್ಲೊರಿಂಗೂ ನೆಗೆ ಬಂತು. ಹಳಬ್ಬರಿಂಗೆ ಮಾಂತ್ರ ಇದಕ್ಕೇ ನೆಗೆ ಮಾಡುದು ಹೇಳಿ ಗೊಂತಾಯಿದಿಲ್ಲೆ, ಎಂತಾರು ಬೇರೆ ಇಕ್ಕು ಹೇಳಿ ಗ್ರೇಶಿಗೊಂಡವು. ಮಾತು ಮುಂದುವರುತ್ತು.
ದೋನಿ ಈ ಸರ್ತಿ ಕ್ರಿಕೇಟಿಲಿ ಸರಿಯಾಗಿ ಆಡಿದ್ದಿಲ್ಲೆ ಅಡ. ಹಾಂಗೆ ಸೋತು ಮನಗೆ ಬಯಿಂದಡ ಭಾರತ ತಂಡ. ಸೆವಾಗು ಬೇಗ ಮನಗೆ ಬಂತಡ. ಕೈಬೇನೆಯೋ, ಸೊಂಟ ಬೇನೆಯೋ, ಮಾಲ ಚಿಕ್ಕಮ್ಮನ ಹಾಂಗೆ! ಸೆವಾಗು ಹೇಳಿರೆ ಭಾರೀ ಅಬಿಮಾನ ಹೇಳಿ ಕಾಣ್ತು ಈ ಚಿಕ್ಕಯ್ಯಂಗೆ. ’ಅವ ಹೊಡಿಲೆ ಸುರು ಮಾಡಿದ್ರೆ ನಿನಿಗೆ ನಾಯಿಗೆ ಹೊಡುದ ಹಾಂಗೆ ಹೊಡಿತ್ತ’ ಹೇಳಿ ಮೂರು ಮೂರು ಸರ್ತಿ ಹೇಳುವಗ ಈಚಕರೆ ಪುಟ್ಟಂಗೆ ತಡವಲೆಡಿಯ. ಬಾಯಿಲಿ ತುಂಬುಸಿದ ಕೊದಿಲಿನ ದೀಗುಜ್ಜೆ ಹೋಳುದೇ ರಜ್ಜ ಅಶನವುದೇ ಆಚಕರೆ ಮಾಣಿಯ ಮೇಗಂಗೆ ಚೆಂದಕೆ ಪ್ರೋಕ್ಷಣೆ! ’ಸೋರಿ ಬಾವ’’ ಹೇಳಿದ°. ’ಸೋರಿರೆ ಉದ್ದಿಗೊ’ ಹೇಳಿ ಮೋರೆ ಹಸಿ ಮಾಡಿದ° ಆಚಕರೆ ಮಾಣಿ. ಅವಂಗೂ ಎಂತಕೆ ನೆಗೆ ಬಂದದು ಹೇಳಿ ಗೊಂತಾದ ಕಾರಣ ಜಾಸ್ತಿ ಪಿಸುರು ಬಯಿಂದಿಲ್ಲೆ. ದೂರಲ್ಲಿ ಕೂದೊಂಡೇ ಕೆಮಿ ಕೊಟ್ಟ ಎರಡ್ಣೇ ಹಂತಿ ಮಕ್ಕೊಗೂ ನೆಗೆ ತಡೆಯ.
ಮಾಷ್ಟ್ರು ಮಾವ° ಜೆಂಬ್ರ ತೆಗೆತ್ತರೆ ಈ ಮಳೆಗಾಲ ಹೋದ ಕೂಡ್ಳೆ ಜಾಲಿನ ಸರಿ ಮಾಡೆಕ್ಕು, “ಸೆಗ್’ಣಿ ಸಾರ್ಸಿ ಸರೀ ಹೊಳಿಯೆಕ್ಕು ನಿನಿಗೆ” ಹೇಳಿದವು. ತಡವಾದರೆ ಮಣ್ಣು ಗಟ್ಟಿ ಆಗಿ ಅದರ ಹೊಳಿವದು ಕಷ್ಟ ಹೇಳಿ ಅದರ ಅರ್ತ. ಬಪ್ಪ ಮಳೆಗಾಲ ಒರಂಗೆ ಒಳಿಯೆಕ್ಕನ್ನೆ ಆ ಜಾಲು!
ಅಡಿಕೆ ಬೆಳೆಯ ಬಗ್ಗೆ ಮಾತಾಡುವಗ ’ಗೋಬರುಗೇಶಿನ ಸ್ಲರಿಯ ಸರೀ ಕೊಳ್ಸಿ ಹಾಕಿದ್ರೆ ಒಳ್ಳೆ ಸಿಂಗಾರ ಬತ್ತು ನಿನಿಗೆ’ ಹೇಳಿದವೂಳಿ ಎಡೆಲಿ ಒಂದರಿ! ಮೊದಲೇ ಕೆಲವು ಜವ್ವನಿಗರು ಕಂಗಾಲು, ಅವರ ನೆಗೆ ಇನ್ನುದೇ ಜೋರಾದ್ದು ಅಲ್ಲದ್ದೆ, ಮತ್ತುದೇ ಕೆಲವು ಜೆನ ನೆಗೆ ಮಾಡ್ಳೆ ಸೇರಿಗೊಂಡವು.
ಉಂಬಗ ಎಡೆಲಿ ಗುಣಾಜೆ ಕುಂಞಿ ಸೋನಿಯನ ಉದುರುಸುವ ಮಾತಾಡಿಗೊಂಡು ಇತ್ತಿದ್ದ°. ಈಗಾಣ ಗೋರ್ಮೆಂಟು ಗಟ್ಟಿ ಇದ್ದು, ಅದೆಂತ ಹಂದ ಹೇಳಿ ಗೊಂತಿದ್ದರೂ! “ಸೋನಿಯನ ಬೀಳ್ಸೆಕ್ಕಿದ್ರೆ ಮಮತಾ ಬೇನರ್ಜಿಯ ಸಪೋರ್ಟು ಬೇಕಲ್ದಾ ನಿನಿಗೆ?’ ಹೇಳಿದವು. ’ಎನಗೆಂತಕಪ್ಪಾ ಬೇನರ್ಜಿಯ ಸಪೋರ್ಟು ತೆಕ್ಕೊಂಬ ಜೆಂಬಾರ!’ ಹೇಳಿ ಕುಂಞಿ ಪರಂಚಿಗೊಂಡದು ಒಪ್ಪಣ್ಣಂಗೆ ಕೇಳಿತ್ತು.
ದನ ಸಾಂಕಾಣದ ಮಾತುಕತೆಲಿ ಅವರ ಡೈಲಾಗು ಬಂದದು ಆ ದಿನದ ಗಮ್ಮತ್ತಿನ ವಿಶಯ. ಗಡದ್ದು ಆಯಿದು.
ದನವ ಸಾಂಕುವಗ, ಅದರಲ್ಲೂ ಕರವ ದನ ಆದರೆ ಎಡೆಲಿ ಆಹಾರ ಕ್ರಮ ಬದಲು ಮಾಡ್ಳೆ ಆಗ ಹೇಳಿ ಅವು ತಿಳುಕ್ಕೊಂಡಿದವು. ಅದರ ಮಗುಮಾವಂಗೆ ವಿವರುಸಿಗೊಂಡು ಇತ್ತಿದ್ದವು. ಎಡೆಲಿ ಹೇಳಿದವು: “ಎಳ್ಳಿಂಡಿ ಹಾಕಿ ಹಾಕಿ, ಒಂದೇ ಸರ್ತಿ ಹುಡಿ ಹಿಂಡಿ ಹಾಕುಲೆ ಸುರು ಮಾಡಿದ್ರೆ ಮತ್ತೆ ಹಾಲಿದ್ದ ನಿನಿಗೆ?, ಹಾಂಗೆ ಒಂದೇ ಸರ್ತಿಗೆ ಹಿಂಡಿ ಬದಲಿಸಿದ್ರೆ ಹಾಲು ಕಡಿಮೆ ಆಗ್ತಿಲ್ಯ ನಿನಿಗೆ?” ಮಗುಮಾವಂಗೆ ಹಾಲು ಕಮ್ಮಿ ಅಕ್ಕು ಹೇಳಿ ಅಲ್ಲ ಭಾವ, ದನಕ್ಕೆ ಹಾಲು ಕಮ್ಮಿ ಅಕ್ಕು ಹೇಳಿ ಅರ್ತ!
ಮಜ್ಜಿಗೆ ಬಂದ ಮೇಲೆ ಈ ವಿಶಯ ಸುರು ಆದ ಕಾರಣ ಎಲ್ಲೊರಿಂಗೂ ಉಂಡಾಗಿತ್ತು. ದೊಡ್ಡ ಒಂದು ಅನಾಹುತ ತಪ್ಪಿತ್ತು. ಅಲ್ಲದ್ರೆ ಮಾಲ ಚಿಕ್ಕಮ್ಮನೂ, ಪಾತಿ ಅತ್ತೆಯೂ ಸೇರಿ ಉದ್ದುವಗ ಬಯಂಕರ ಕಷ್ಟ ಆವುತಿತು.
ಒಟ್ಟಿಲಿ ಹಳಬ್ಬರಿಂಗೆ ಶಂಬಜ್ಜನ ತಿತಿ ಊಟ ಆದರೂ, ಎಳಕ್ಕದ ಮಕ್ಕೊಗೆ ಇದು ನೆಗೆ ಊಟ ಆಗಿತ್ತು.
ಅವರ ಹತ್ತರೆ ಸುಮಾರು ವಿಶಯ ಇಪ್ಪದು ಅಂತೂ ನಿಜ. ಲೋಕಾನುಬವ ಇದ್ದ ಕಾರಣ ಎಲ್ಲೊರು ಅವರ ಹತ್ತರೆ ಸಲಹೆ ಸೂಚನೆ ತೆಕ್ಕೊಳ್ತವು. ಮಕ್ಳ ಕಲಿಯುವಿಕೆ, ಆರೋಗ್ಯ, ವಾಹನದ ಬಗೆಗೆ ಅನುಭವ, ಕೃಷಿ ಎಲ್ಲ ಎದುರು ಸಿಕ್ಕಿರೆ ಕೇಳುದಲ್ಲದ್ದೆ, ಅವಕ್ಕೆ ಪೋನು ಮಾಡಿ ಕೇಳುವ ಜೆನಂಗ ಇದ್ದವು. ಬಯಂಕರ ಅನುಬವದ ಜೆನ ಅವು. ಆದರೆ – ಎಂತದೇ ವಿವರುಸಲಿ, ಅದರ ಎಡೆಂಗೆ ನೀನು / ನಿಂಗ ಹೇಳಿ ಸೇರ್ಸಿಯೇ ಸೇರ್ಸುಗು.
ಕೆಲವು ಜೆನ ವಿಶಯ ಮಾತಾಡುವಗ ಹೀಂಗಿಪ್ಪ ಸುಮಾರು ಶುದ್ದಿಗೊ ಸಿಕ್ಕುತ್ತು. ಸುಮ್ಮನೆ ಕೂದು ಕೇಳೆಕ್ಕಷ್ಟೆ ನಾವು.
ಮಾತಾಡುವಗ ಹೀಂಗಿಪ್ಪ ಒಂದೊಂದು ಶಬ್ದ ಸೇರುಸುದಕ್ಕೆMannerisms ಹೇಳ್ತವು. ಹೀಂಗಿಪ್ಪ Mannerisms ಅಬ್ಯಾಸ ಇಪ್ಪವು ಸುಮಾರು ಜೆನ ಇದ್ದವು.
“ಎಂತ ಗೊಂತಿದ್ದಾ?”,
“ಮತ್ತೆ – ಮತ್ತೆ” ,
“ಏ°?”
“ಇದೂ, ಇದೂ”
“ಬೇಕಾರೆ”
“ಎನ್ನತ್ರೆ ಕೇಳಿರೆ”,
“ವಿಶಯ ಎಂತರ ಹೇಳಿರೆ”,
“ಹೇಳುದು ಕೇಳು”,
“ಅದಿರಳಿ”
ಹೇಳಿ ಎಲ್ಲ ಕೆಲವು ಚಾಲ್ತಿಲಿ ಇದ್ದು ಕೆಲವು. ನಿಂಗೊಗೆ ಗೊಂತಿಪ್ಪದು ಏವದಾರು ಇದ್ದರೆ ಹೇಳಿಕ್ಕಿ.
ಭಾಷೆ ಯಾವುದಾದರೆ ಎಂತ, ಉಪಯೋಗಿಸುವ Mannerisms ಎಂತ ಆದರೆಂತ, ಮನಸ್ಸಿನ ಭಾವನೆ ಇದ್ದರೆ ಆತಲ್ದೋ? ಹೇಳುದರ್ಲಿ ಸತ್ವ ಇದ್ದರಾತು,ಆಲ್ದೋ?
ಪಂಜ ಚಿಕ್ಕಯ್ಯನೋ ಮತ್ತೊ° ಪಕ್ಕನೆ ಸಿಕ್ಕಿರೆ ’ಒಪ್ಪಣ್ಣ ಈ ವಿಶಯವ ಕುಶಾಲಿಂಗೆ ಹೇಳಿದ್ದು, ಗಾತಿಗಲ್ಲ’ ಹೇಳಿ ಹೇಳಿಕ್ಕಿ ಆತೋ? ಏ°?
ಪಂಜ ಚಿಕ್ಕಯ್ಯ ಹೇಳಿರೆ ಇಲ್ಲಿ ’ವಸ್ತು’ ಅಲ್ಲ. ವಿಚಾರ ಮಾಂತ್ರ.
ಒಂದೊಪ್ಪ: ಮಾತಿಲಿಪ್ಪ ಶಬ್ದಾರ್ತಂದ ಧ್ವನ್ಯಾರ್ಥ ಮುಕ್ಯ – ಎಂತ ಹೇಳ್ತಿ?
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಯಬ್ಬ ನೆಗೆ ಮಾಡಿ ಸಾಕಾತು…ತು೦ಬಾ ಲಾಯ್ಕಾಯ್ದು ಈ ಶುದ್ದಿ..ಈಗ ಮೇಲೆ ಹಳೆ ಶುದ್ದಿಗಳ ತೋರ್ಸುದು ಒಳ್ಳೆದಾತು.ಇಲ್ಲದ್ರೆ ಎನಗೆ ಈ ಶುದ್ದಿ ಓದುಲೇ ಸಿಕ್ಕುತಿತ್ತಿಲ್ಲೆ..
Spelling thappathada.Balia alla Balila Shaale
Enage illi Arsikereli iddu Havyaka bhashe keladde keladde ee blog odi bhari khushi aathu.Anude 16 varsha balialle iddaddu. Eegalla.Ega enage 61 varsha .Balia shale ella keli bharee khushi aathu
ಆಚಕರೆ ಮಾಣಿ ಹೇಳಿದ ಹಾಂಗೆ ಕನ್ನಡಲ್ಲಿ ಬರವಲೆ ಹೆರಡ್ತೆ. ಆದರೆ ಸ್ಪೆಲ್ಲಿಂಗ್ ತಪ್ಪುಗು, ನೋಡ್ತೆ ಪ್ರಯತ್ನ ಮಾಡ್ತೆ.
ಮತ್ತೆ….
ಎಲ್ಲೋರಿಂಗೂ ಒಂದು ಸಲಹೆ… ಆದಷ್ಟು ಕನ್ನಡ ಅಕ್ಷರಲ್ಲೇ ಒಪ್ಪಂಗಳ ಟೈಪ್ ಮಾಡಿ
just go to ''google indic'' in google and it will translate immediatly into kannada. copy it, paste it and publish
ಏ ಗೋವಿಂದಜ್ಜಾ…. ನಿಂಗೋಗೆ ಮರತ್ತತ್ತಾ…. ಅಂದು ನಿಂಗೋ ಬದಿಯಡ್ಕದ ಹತ್ರೆ ಒಂದು ಮನೆಗೆ ಶೋಢಶಕ್ಕೆ ಹೋಗಿಪ್ಪಗ ಒಪ್ಪಣ್ಣ ಸಿಕ್ಕಿ ಮಾತಾಡಿ ಗುರ್ತ ಆದ್ದಲ್ದೋ…
ಮತ್ತೆ ಎಂತ ಹೇಳಿತ್ತು ಕಂಡ್ರೆ…. ಈ ಪಂಜ ಭಾಷೇಲಿ ಕೆಲವು ಶಬ್ದಂಗೋ ಪಕ್ಕನೆ ಯಾರಿಂಗೂ ಗೊತ್ತಪ್ಲೆ ಕಷ್ಟ ಇದ್ದು. ಗೌಡುಗಳ ಕೊತ್ತಿ, ಅವ್ರದ್ದೇ ಆದ ಮಶ್ಶರ್ವೆ, (ಮಸಿ ಅರುವೆ), ಕೈ ಕೀತಲೇ… ಇತ್ಯಾದಿ.
ಅಂತೂ ಒಳ್ಳೆ ತಿತಿ ಊಟ… ಪುಟ್ಟಕ್ಕಂಗೆ ಪಾಪ ಈ ಏವ ಲೋಜಿಕ್ಕೂ ಅರ್ಥ ಆಗದ್ದೆ ತೆಪರನ ಹಾಂಗೆ ನೋಡಿಗೊಂಡಿತ್ತು… ಮತ್ತೆ ಎನ್ನ ಪೀಡ್ಸಿಗೊಂಡಿತ್ತು ಅವು ಎಂತಕೆ ನೆಗೆ ಮಾಡಿದ್ದು-ಎಂತಕೆ ನೆಗೆ ಮಾಡಿದ್ದು ಹೇಳಿ … ಎನಗಂತೂ ಸಾಕೋ ಸಾಕಾತು ಅದಕ್ಕೆ ವಿವರ್ಸುಲೇ…
ಆದರೆ ಎನಗೆ ಈ ಒಪ್ಪಣ್ಣ ಆರು ಹೇಳಿಯೇ ಗೊಂತವುತ್ತಿಲ್ಲೆ. ಎನ್ನ ಪ್ರಾಯದವು ಆರು ನೆನಪಿಲ್ಲೆ ಈ ಹೆಸರಿನವು. ಅದೂ ಎನ್ನದೆ ಕೆಲಸ ಹೇಳಿದರೆ ಪರಿಕರ್ಮಕ್ಕೆ ಹೋಪವು! ಉಳಿಯತ್ತಡ್ಕಲ್ಲಿ ಎನ್ನ ಅಪ್ಪಚ್ಚಿಯ ಕಡೆಯವು ಒಪ್ಪಣ್ಣ ಹೇಳಿ ಇತ್ತವು, ಎಲ್ಲಿ ಜಂಬಾರ ಇದ್ದರೂ ಹೋಕ್ಕು. ಆದರೆ ಅವು ಈಗ ಇಲ್ಲೆ. ಎಲ್ಲಾ ವ್ಯಕ್ತಿತ್ವಂಗ ಕಾಲ್ಪನಿಕ ಹೇಳಿ ಹೇಳ್ತದು ಕೇಳಿದರೆ ಅವರನ್ನೇ ನೆನಪಾವ್ತು. ಬದುಕಿಪ್ಪಗ ಹಾಂಗೆ ಹೇಳ್ತಾ ಇತ್ತಿದ್ದವು ಅವು. ಅಲ್ಲ ಪ್ರೇತ ಏನತಾರೂ ಬರವದೋ ಹೇಳಿ ಹೆದರಿಕೆ.
ಒಪ್ಪಣ್ಣ ತೀರಿ ಹೋದಪ್ಪಗ ಕಾಕೆಗೆ ಮಡುಗಿದ್ದರ ಎಲ್ಲ ನಾಯಿ ತಿಂದಿತ್ತು, ಅಷ್ಟಪ್ಪಗಳೇ ಪ್ರೇತಕ್ಕೆ ತೃಪ್ತಿ ಆಗಿರ ಹೇಳಿ ಸಂಶಯ ಬೈಂದು ಈ ಗೋವಿಂದಜ್ಜಂಗೆ. ಈಗಾಣವು ಹೇಳಿದರೆ ಅದರ ಎಲ್ಲ ನಂಬುತ್ತವಿಲ್ಲೆ.
ಭಾವ ನಿನಗೆ ಆಚೆಕರೆ ಮಾಣಿ ಬಾಯಿಂದ ನೀರು ಹೆರ ಬಂದದ್ದು ಮಾತ್ರ ಗೊಂತಾದ್ದ… ಗುಣಾಜೆ ಕುಂಞಿ ಬಾಯಿಗೆ ಕೈ ಅಡ್ಡ ಹಿಡ್ಕೊಳ್ಳದ್ರೆ ಪಾಯಸ ಪೂರಾ ಈಚಕರೆ ಪುಟ್ಟನ ಮೇಲೆ ಇರ್ತಿತ್ತು. ಎಂತಕೆ ಹೇಳಿರೆ ಅವ ಬಲಕ್ಕೆ ತಿರುಗುದು ಜಾಸ್ತಿ ಅಲ್ಲದೋ… ಪಂಜ ಚಿಕ್ಕಯ್ಯ " ಇದಾ ಮಿನಿಯ ಈ ಒಪ್ಪಣ್ಣಾ ಎಂತದೊ ಬ್ಲೊಗು ಬರೆತ್ತ ಅಲ್ಲದಾ ಹಾಂಗೆ ಹೇಳಿರೆ ಎಂತ ಬಿಲಿಯ " ಹೇಳಿಗೊಂಡು ಇತ್ತಿದ್ದವು.
@ಎಸ್
ಆನು ಒಪ್ಪಣ್ಣಂಗೆ ಹೇಳಿದ್ದಿಲ್ಲೆ ಆತೊ..
Bhari layikaayidu Mahesha, nege maadide manapoorthi. Enaguu bere bere bhashegaLa kalivale mathadle thumba ishta. Enna ajjana mane ajjange entharu heLukki "YAAVUDU?" heLuva mannerism itthiddu. Eeega enna gandana sodaratthe ganda obba ade shabdha use madudara nodidde…
Thumba laykayidu, adappu innobba mathadudu henge iddaruu avara maathina thaathparya naavu grasp madekkaddu mukhya.
InnaaNa lEkhana da nereeksheli.
ಅದ್ಭುತ….ನಿಂಗಳ ಭಾಷಾಪ್ರಾವೀಣ್ಯತೆ ಮೆಚ್ಚೆಕ್ಕಾದ್ದೆ….
ಅಂದೊಂದೆರಡು ಲೀಶ್ಟು ಎಲ್ಲ ಮಾಡಿ ಹಾಕಿತ್ತಿದ್ದವು, ಅಡ್ಡಹೆಸರು, ಬೈಗಳಿನ ಶಬ್ದಂಗೊ…ಹೇಳಿ ಎಲ್ಲ…
ಸುಮಾರು ದಿನದ ಮತ್ತೆ ಈಗ ಇನ್ನೊಂದು ಕುಂಞಿ ಲೀಶ್ಟು ಬಯಿಂದದ ಕೆಲವು Mannerism ಗಳದ್ದು…
ಲಾಯ್ಕಾಯಿದು ಬರದ್ದು…
ಈ ಬ್ಲೋಗಿಂಗೆ ಬಪ್ಪದು ಹೇಳಿರೆ ಒಂದು ಖುಷಿ….ನಮ್ಮ ಮನಗೆ ಬಂದು ಹೋದಾಂಗಾವುತ್ತು…
ಹೀಂಗೇ ಮುಂದ್ವರ್ಸಿ ಆತೊ….
laikaydu bardu………..antu majlakare indiratteya shedigumme mavange kottadduheli ajjakana bhava heli gontataykallada? hum…………antu hatra ettutta idde neenu……..aa indirattege 2 jana magalakka matte obba maga……….
ಅಂತೆ ಹೇಳ್ಳೆ ಆಗ ಬಾವ, ಬರದ್ದು ಲಾಯಿಕ ಆಯಿದು ಮಿನಿಯ. ಆನು ಹೀಂಗೆ ಹೇದರೆ ನಿನಗೆ ಕೇಟಿತ್ತ ಒಪ್ಪಣ್ಣ. ಸೊನೆಯ ಗಾಂಧಿಯ ಉದುರುಸಲೆ ಬನರ್ಜಿ ಹೆರಟರೂ ಮುಲಯಾಂ ಸಿಂಗ್ ಬಿಡ ಇದಾ.. ಅದು ತೋಚಿ ಮಾಡಿದ ಬಿಸ್ಕೆಟಿನ ನಾಯಿ ಕ್ಯಾಚ್ ಹಿಡಿವಾಂಗೆ ಹಿಡಿಗು ನಿನಿಗೆ. ಉತ್ತಮ ಲೇಖನ ಭರಪೂರ್ತಿ ಮನರಂಜನೆ.. ಒಂದರ್ಧ ಗಂಟೆ ಅದೇ ’ನಿನಿಗೆ’ ಗುಗಿಲ್ಲಿ ಎನ್ನ ತೇಲ್ಸಿತ್ತು (ಎಲ್ಲರನ್ನೂ ತೇಲ್ಸಿಕ್ಕು). ಕಳೆದ ಎರಡು ಲೇಖನಗಳನ್ನು ಒದಿತ್ತೆ. ಆದರೆ ಪ್ರತಿಕ್ರಿಯೆ ನೀಡ್ಲೆ ಆತಿಲ್ಲೆ. ಅವು ಕೂಡ ಒಳ್ಳೆಯ ಬರಹ.
ಮುಂದಿನ ಬರಹದ ನಿರೀಕ್ಷೆಯಲ್ಲಿ…
ಅಂತೆ ಹೇಳ್ಳೆ ಆಗ ಬಾವ, ಬರದ್ದು ಲಾಯಿಕ ಆಯಿದು ಮಿನಿಯ. ಆನು ಹೀಂಗೆ ಹೇದರೆ ನಿನಗೆ ಕೇಟಿತ್ತ ಒಪ್ಪಣ್ಣ. ಸೊನೆಯ ಗಾಂಧಿಯ ಉದುರುಸಲೆ ಬನರ್ಜಿ ಹೆರಟರೂ ಮುಲಯಾಂ ಸಿಂಗ್ ಬಿಡ ಇದಾ.. ಅದು ತೋಚಿ ಮಾಡಿದ ಬಿಸ್ಕೆಟಿನ ನಾಯಿ ಕ್ಯಾಚ್ ಹಿಡಿವಾಂಗೆ ಹಿಡಿಗು ನಿನಿಗೆ. ಉತ್ತಮ ಲೇಖನ ಭರಪೂರ್ತಿ ಮನರಂಜನೆ.. ಒಂದರ್ಧ ಗಂಟೆ ಅದೇ ’ನಿನಿಗೆ’ ಗು0ಗಿಲ್ಲಿ ಎನ್ನ ತೇಲ್ಸಿತ್ತು (ಎಲ್ಲರನ್ನೂ ತೇಲ್ಸಿಕ್ಕು). ಕಳೆದ ಎರಡು ಲೇಖನಗಳನ್ನು ಒದಿತ್ತೆ. ಆದರೆ ಪ್ರತಿಕ್ರಿಯೆ ನೀಡ್ಲೆ ಆತಿಲ್ಲೆ. ಅವು ಕೂಡ ಒಳ್ಳೆಯ ಬರಹ.
ಮುಂದಿನ ಬರಹದ ನಿರೀಕ್ಷೆಯಲ್ಲಿ…
ಅದು ಅಪ್ಪು ಮಹೇಶ ಹಳಬ್ಬರಿಂಗೆ Mannerisms ರಜ ಹೆಚ್ಚಿಗೆಯೇ
ಎಂಗಳ ತರವಾಡು ಮನೆಲಿ ಒಬ್ಬ ದೊಡ್ಡಪ್ಪ ನೀನು ಎಂತ ಹೇಳಿದರು "ಇಲ್ಲೆ" ಹೇಳಿಯೇ ಮಾತು ಸುರು ಮಾಡುಗಸ್ಥೆ
ಎನ್ನ ಪಾಲರಿಲಿ ಪೆರಲೇ ಕಯೇ ಅಜ್ಜ "ಎಂತ ಹೇಳಿತ್ತು ಕಂಡ್ರೆ " ಹೇಳಿ ಸುರುಮಾಡುಗು
ನೀನು ಬ್ಲೋಗು ಬ್ಲೋಗು ಹೇಳಿಗೊಂದು ಅಜ್ಜಂದ್ರ ತಮಾಷೆ ಮಾಡು !!!!
waah! suuppar. nijakkuu nege taDeya idara Oduvaaga…
abba…ningoge eshTella bhaashego battaldaa…maala chikkamma illi adakke ondu indirect nidarshana…. 🙂
great aata!
heenge innashTu oppoppoppangaLa nireeksheli…
odi nege tadavale yediya hangittu, baritamashe iddu aata. Innondu oppada nereeksheli………….
laika aidu oppanna…nege maadi saakaathu:)
mahehsaNNa maathaduvaga entha heLi start maadudu??
enage gonthippa haange,,, "ondu vishaya" heLiyO
alladre "entha gonthidda?" heLiyO heLthavu..:)
appu maheshanna..manarism gintha navage vishaya artha ayekkaaddu mukhya..
aadaru entha vishaya illadru,entha gonthiddaaa heLi kELi summane tension kodthavu kelavu jena:)
alladO aNNayyaa??En?:)
ಫಸ್ಟ್ ಕ್ಲಾಸ್.ನೆಗೆ ಮಾಡಿ ಸಾಕಾತು. ಅಂತೂ ಆಚಕರೆ ಮಾಣಿಯ ಗಿರುಗಾಣಿಸುಲೆ ನೀನೆ ಆಯೆಕ್ಕಿದಾ … ಆಚಕರೆ ಮಾಣಿಯ ಗಮನಿಸು..ಅವ ಮಾತಾಡೆಕ್ಕಾರೆ ವಿಷ್ಯ ಎಂತರ ಹೇಳಿರೆ ಹೇಳಿಯೇ ಸ್ಟಾರ್ಟು ಮಾಡುದು.
ಪಂಜ ಭಾಷೇಲಿ ಹಾಂಗೆ..ದೊಡ್ಡಪ್ಪಯ್ಯ, ಅಪ್ಪಯ್ಯ, ಅತ್ತೆಮ್ಮಾ, ಹೆರಿಯಮ್ಮ, ಭಾವಯ್ಯ, ಅಣ್ಣಯ್ಯ ಹೇಳಿ ಸಂಬಂಧಲ್ಲಿ ಅಯ್ಯಂಗೋ, ಅಮ್ಮನ್ಗಲೇ ಜಾಸ್ತಿ. ಅಶನಕ್ಕೆ ಅನ್ನ, ಮೆಲಾರಕ್ಕೆ ಮಜ್ಜಿಗೆ ಹುಳಿ, ಕಾಯಿ ಹುಳಿ.. ಹೀಂಗೆ ಸುಮಾರು ಬದಲಾವಣೆಗೋ ಇದ್ದದಾ..
ಮಡ್ಡಾಯಿಲಿನ ಸಂಗತಿಗೆ ಇನ್ನೊಂದರಿ ಮುಖತಃ ನಿನಗೆ ಉತ್ತರ ಕೊಡುವೆ..ಹಾಂ..
maheshanna… bhareee layka aydu….. 🙂
odi nege thadeya…appange odi helule heli heratadu..ardhanda matte nege thadeyadde bharee kashtalli odide…
oh! deepakkana ( chooribailu) vishaya thegaddu bharee khushi athu.appa gurtha helidavu aru heli. 😉
next articlena nireeksheli…
idu achakare mani achakare putta avakkella mantra alla ade hantili neenu ootakke koodiddare ninna baili iddadu nege maduvaga here battitu allado oppanno? ninage elli training aaddu ninagu nege kadamme allanne monne nodidde neenu aachakare mani puttakka ella nege maduva chendavaaata.panja chikkayange aaratraru odi helule helekku aata avu ele tindu baili full ippaga akku aata ninna ajjakana bavano aachakare manio manno akku