Oppanna.com

ಹೂಗಿಂಗೂ ನವಗೂ ಸಾಮ್ಯತೆ; ಒಳುದ್ದೆಲ್ಲವೂ ಸನಾತನತೆ!

ಬರದೋರು :   ಒಪ್ಪಣ್ಣ    on   09/04/2010    8 ಒಪ್ಪಂಗೊ

ನಮ್ಮದು ಸನಾತನ ಧರ್ಮ.
– ಹಾಂಗೆ ಹೇಳುಲೆ ನವಗೆಲ್ಲ ಅಭಿಮಾನ.
ಸನಾತನ ಹೇಳಿರೆ ಹಳತ್ತು (ಪುರಾತನ) ಹೇಳಿ ಅರ್ತ ಅಡ.
ಎಷ್ಟೇ ಹಳತ್ತಾದರೂ, ಸನಾತನ ಧರ್ಮ ನಿತ್ಯನೂತನ, ನವ ವಿನೂತನ.
ಅಡಕ್ಕೆಯ ಹಳತ್ತಿಂಗೆ ಮಡಗಿರೆ ಬೆಲೆ ಜಾಸ್ತಿ ಅಲ್ಲದೋ? ಸಾಗುವಾನಿ, ಚಿರ್ಪು – ಹೀಂಗಿತ್ತ – ಜಾತಿಮರಂಗೊ ಹಳತ್ತಾದಷ್ಟೂ ಗಟ್ಟಿ ಅಲ್ಲದೋ – ಹಾಂಗೆಯೇ!

ಈ ಧರ್ಮ – ಇದು ಯೇವತ್ತು ಹುಟ್ಟಿದ್ದು? ಉಮ್ಮ, ಆರಿಂಗೂ ಗೊಂತಿಲ್ಲೆ! ಯೇವತ್ತು ಮುಗಿಗು? ಉಮ್ಮಪ್ಪ.. ಅದುದೇ ಆರಿಂಗೂ ಗೊಂತಿಲ್ಲೆ!
ಹುಟ್ಟೇ ಇಲ್ಲದ್ದಕ್ಕೆ ಸಾವಿರ್ತೋ? ಖಂಡಿತ ಇಲ್ಲೆ!
~

ನಮ್ಮ ದೇಶಲ್ಲಿಪ್ಪ “ಸನಾತನ ಧರ್ಮ” ಹೇಳಿರೆ ಅದೊಂದು ಜೀವನ ಪದ್ಧತಿ ಅಡ.
ದೇವತಾರಾಧನೆಲಿಯುದೇ ಹಾಂಗೆಯೇ, ಸಾವಿರಾರು ಒಳ-ಆಚರಣೆಗೊ- ಅವರವರ ಜೀವನಶೈಲಿಗೆ ತಕ್ಕಂತೆ.
ಒಬ್ಬೊಂಬ್ಬಂದು ಒಂದೊಂದು ವೈಶಿಷ್ಠ್ಯ! ಪ್ರತಿಯೊಂದುದೇ ಯೇವತ್ತು ಹುಟ್ಟಿದ್ದೋ, ಆರು ಸುರು ಮಾಡಿದ್ದೋ – ನವಗೆ ಅರಡಿಯ.
ಸೂರ್ಯಂಗೆ ನಮಸ್ಕಾರ ಮಾಡ್ಳೆ ಸುರುಮಾಡಿದ್ದು ಆರು? ಸುರೂ ಅರ್ಘ್ಯ ಬಿಟ್ಟದು ಆರು?
ತೊಳಶಿಗೆ ನಮಸ್ಕಾರ ಮಾಡ್ಳೆ ಸುರುಮಾಡಿದ್ದು ಯೇವತ್ತು? ಪಷ್ಟಿಂಗೆ ಆರತಿ ಎತ್ತಿದ್ದು ಆರು?
ಎಳ್ಳಿಂದ ಎಣ್ಣೆ ತೆಗದು ದೀಪ ಹೊತ್ತುಸುಲೆ ಹೇಳಿದ್ದು ಆರು? ಹಟ್ಟಿಂದ ಸಗಣ ಉಡುಗಿ ಶುದ್ಧಿಮಡಿಕ್ಕೊಂಬಲೆ ಹೇಳಿದ್ದು ಆರು?
ಬಟ್ಟಮಾವನ ಮಂತ್ರಂಗಳ ಸೃಷ್ಟಿ ಮಾಡಿದ್ದು ಆರು? ಉಮ್ಮಪ್ಪ!!
ಯೇವದಕ್ಕುದೇ ದಿನಾಂಕ ಇಲ್ಲೆ!
ಎಷ್ಟೋ ಸಾವಿರ ಸಾವಿರ ಒರಿಶದ ಹಿಂದಾಣ ಸಂಗತಿ ಇದೆಲ್ಲ.
ಉದಿಯಪ್ಪಗ ಎದ್ದು ’ಕರಾಗ್ರೇ…’ ಹೇಳಿಕ್ಕಿ, ಇರುಳು ಒರಗುವಗ ‘ನಾರಾಯಣಾ..’ ಹೇಳುವನ್ನಾchaussure nike pas cher ರವೂ ಒಂದಲ್ಲೊಂದು ಕ್ರಮಂಗೊ ವಿಧಾನಂಗೊ.
ಅದರ್ಲಿ ಅವನ ಹಿರಿಯೋರು ಕಲುಶಿದ್ದೆಷ್ಟೋ, ಅವ ಬಿಟ್ಟದೆಷ್ಟೋ, ಅವ ಸೇರುಸಿದ್ದೆಷ್ಟೋ – ಒಟ್ಟಿಲಿ ಎಲ್ಲದಕ್ಕುದೇ ಸ್ವಾತಂತ್ರ್ಯ ಇತ್ತು ನಮ್ಮಲ್ಲಿ.

ನಮ್ಮದರ್ಲಿ ಒಂದಕ್ಕೂ ವಿಧಾನ ನಿರ್ದಿಷ್ಟತೆ ಇಲ್ಲೆ!
ಪೂಜೆ ಮಾಡಿರೂ ಆವುತ್ತು, ಇಲ್ಲದ್ರೂ ಆವುತ್ತು. ಹಗಲು ಮಾಡಿರೂ ಆವುತ್ತು, ಇರುಳು ಮಾಡಿರೂ ಆವುತ್ತು,
ಶಿವನ ಪೂಜೆ ಮಾಡಿರೂ ಆವುತ್ತು, ವಿಷ್ಣುವಿಂಗೆ ನೈವೇದ್ಯ ಮಡಗಿರೂ ಅಕ್ಕು.
ಕೂದಂಡು ಪೂಜೆ ಮಾಡಿರೂ ಅಕ್ಕು, ನಿಂದಂಡು ಮಾಡಿರೂ ಆವುತ್ತು.
ಮಣಿ ಆಡುಸದ್ದೆ ಆರತಿ ಎತ್ತಿರೂ ಆವುತ್ತು, ಮಣಿ ಆಡುಸಿಕ್ಕಿ ಆರತಿಯೇ ಎತ್ತದ್ರೂ ಆವುತ್ತು.
ಒಸ್ತ್ರ ಸುತ್ತಿರೂ ಅಕ್ಕು, ಸುತ್ತದ್ರೂ ಅಕ್ಕು – ಎಲ್ಲವುದೇ ನಮ್ಮ ಸಂಸ್ಕೃತಿಲಿ ಸ್ವೀಕೃತ.
ಇಷ್ಟೊಂದು ಸ್ವಾತಂತ್ರ್ಯ ಇಪ್ಪ ಬೇರೆ ಧರ್ಮ ಸಿಕ್ಕುಗಾ ಈ ಲೋಕಲ್ಲಿ!?
ಡಾಕ್ಟ್ರುಬಾವ ಓಪ್ರೇಶನು ಮಾಡಿದ ನಮುನೆ ‘ಹೀಂಗೇ ಆಯೇಕು’ ಹೇಳಿ ಏನೂ ಇಲ್ಲೆ.
ಶಾಲೆಲಿ ಕೂದಂಡು ಸಮಾಜ ಪಾಟ ಓದಿರೆ ಸಾಲ – ಹೇಳಿ ಮಾಷ್ಟ್ರುಮಾವ° ನೆಗೆಮಾಡುಗು!
~

ಈ ಭೂಮಿಯ ಒಳುದ ಭಾಗಂಗಳಲ್ಲಿ ನಾಗರೀಕತೆಯ ಅಂಶ ಕಾಂಬ ಮೊದಲೇ ನಮ್ಮಲ್ಲಿ ಅಗಾಧ ಬೆಳವಣಿಗೆ ಆಗಿ, ಸಾಮಾಜಿಕ ವೆವಸ್ಥೆ ಬಂದಾಗಿತ್ತು.
ಗಂಡ, ಹೆಂಡತ್ತಿ, ಮನೆ, ಮಠ, ದೇವರು, ದೈವ, ಸಂಸ್ಕೃತ, ವೇದ,ಪುರಾಣ, ರಾಮಾಯಣ, ಮಹಾಭಾರತ – ಇವೆಲ್ಲ ಬಪ್ಪಗ ಲೋಕದ ಒಳುದ ಭಾಗಲ್ಲಿ ಇಪ್ಪೋರಿಂಗೆ ಹಸಿಗೆಂಡೆ ತಿಂಬಲೂ ಅರಡಿಗಾಗಿಯೊಂಡು ಇತ್ತಿಲ್ಲೆ, ಮಂಗಂಗೊ!
ಈಗಾಣ ಮುಂದುವರುದ ದೇಶಂಗಳ ನೋಡಿ, ಅಮೇರಿಕದವಕ್ಕೆ ನೇರ್ಪಕ್ಕೆ ಅಂಗಿಚಡ್ಡಿ ಹಾಕಲೆ ಗೊಂತಿಲ್ಲದ್ದೆ ಮರದ ಎಲೆಕಟ್ಟಿಗೊಂಡು ನಟತಿರುಗಿಯೋಂಡು ಇಪ್ಪ ಕಾಲಲ್ಲಿ, ನಮ್ಮಲ್ಲಿ ಹತ್ತಿ, ನೂಲು, ರೇಷ್ಮೆ, ಇತ್ಯಾದಿ ಒಸ್ತ್ರಂಗ ಬಂದಾಯಿದು!
ಇಂಗ್ಲೇಂಡಿನವಕ್ಕೆ ಸಮಾಜ ಅರ್ತ ಅಪ್ಪ ಮೊದಲೇ ನಮ್ಮಲ್ಲಿ ಸಾಮಾಜಿಕ ವೆವಸ್ಥೆ, ರಾಜನೀತಿ, ಚಂದ್ರಗುಪ್ತ – ಚಾಣಕ್ಯ ಇವೆಲ್ಲ ಬಂದು ದೇಶವ ಉತ್ತುಂಗಕ್ಕೆ ತೆಕ್ಕೊಂಡು ಹೋಯಿದವು.
ಜರ್ಮನಿಲಿ ಕಲ್ಲಿಡ್ಕಿ ಜಗಳಮಾಡಿಗೊಂಡಿದ್ದ ಕಾಲಲ್ಲಿ ನಮ್ಮೋರು ಕಬ್ಬಿಣ, ತಾಮ್ರ, ಕಂಚು -ಇತ್ಯಾದಿ ಲೋಹಂಗಳ ಆಯುಧಮಾಡಿ ಉಪಯೋಗುಸಿಗೊಂಡು ಇತ್ತಿದ್ದವು.
ಜಪಾನಿನವಕ್ಕೆ ಉದಿ ಅಪ್ಪ ಮೊದಲೇ ನಮ್ಮಲ್ಲಿ ಅತ್ಯಂತ ಕ್ಲಿಷ್ಟ ಗಣಿತಂಗಳ ಬಿಡುಸುವ ಸೂತ್ರಂಗಳ ಬರದಾಯಿದು!
ಪುರ್ಬುವಿನ ಆಣಿಬಡುದ ಮೂರ್ತಿ ಬಪ್ಪ ಮೊದಲೇ ಎಷ್ಟೋ ವೈಚಿತ್ರ್ಯಂಗಳ ಏಕಶಿಲಾ ವಿಗ್ರಹಂಗೊ ಬಂದಾಯಿದು..
ಮಾಪಳೆ ಬಾಂಕುಹೊಡವಲೆ ಸುರುಮಾಡುವ ಮೊದಲೇ ನಮ್ಮಲ್ಲಿ ಶಿವಲಿಂಗಕ್ಕೆ ರುದ್ರ ಹೇಳಿ ಅಭಿಶೇಕ ಆಯ್ಕೊಂಡಿತ್ತು.
ನೋಡಿಗೊಂಡು ಹೋದರೆ ಇನ್ನೂ ಏನೇನೋ..!
ಅಂತೂ, ಇಡೀ ಲೋಕ ಕಸ್ತಲೆಲಿ ಇಪ್ಪಗಳೇ ಭಾರತಲ್ಲಿ ಉದಿ ಆಗಿ, ಬೆಳಗಿಯೋಂಡು ಇತ್ತು.
~
ಕಾಲಕ್ರಮೇಣ ಅವಕ್ಕುದೇ ಎಚ್ಚರಿಗೆ ಆತು, ಕಲಿವಲೆ ಸುರುಮಾಡಿದವು.
ಲೋಕಗುರುಭಾರತಕ್ಕೆ ಬಂದು ಸುಮಾರೆಲ್ಲ ಕಲ್ತುಗೊಂಡು ಹೋದವು. ಅವರ ಜ್ಞಾನದಾಹ ಇದ್ದಷ್ಟೂ ನಮ್ಮೋರು ಕಲುಶಿದವು.
ಎಂತರ ಕಲುಶಿದವು?

ಈಗಾಣ ಶಾಲೆಗಳಲ್ಲಿಯೂ ಕಲುಶುತ್ತವು, ಪುಸ್ತಕಲ್ಲಿ ಬರದ್ದರ – ಇದ್ದದರ ಇದ್ದ ಹಾಂಗೇ – ರಜ್ಜ ಹೆಚ್ಚೂ ಇಲ್ಲೆ, ರಜ್ಜ ಕಮ್ಮಿಯೂ ಇಲ್ಲೆ!
ನಮ್ಮ ಅಜ್ಜಂದ್ರು ಕಲುಶಿದ್ದು ಈ ನಮುನೆ ಅಲ್ಲ – ಬದಲಾಗಿ,
ಒಳ್ಳೆ ಜೀವನದ ವಿಧಾನವ. ಬದುಕ್ಕುದು ಮಾಂತ್ರ ಅಲ್ಲ, ನೆಮ್ಮದಿಲಿ ಸಾವದು ಹೇಂಗೆ ಹೇಳ್ತ ವಿವರವನ್ನುದೇ!
ಒಟ್ಟಿಲಿ ಆತ್ಮದ ನಿರಂತರ ನೆಮ್ಮದಿಯ!
ನಮ್ಮ ಅಜ್ಜಂದ್ರ ಅನುಕರಣೆ ಮಾಡಿ ಮಾಡಿ ನೆಮ್ಮದಿಯ ಕಂಡುಗೊಂಡವು.
ಎಂತದೂ ಮುಚ್ಚಿ ಮಡುಗದ್ದೆ, ಎಲ್ಲವನ್ನುದೇ ಕಲುಶಿದವು ನಮ್ಮ ಹಿರಿಯೋರು.
ಕಲುಶಿದಷ್ಟೂ ಕಲ್ತುಗೊಂಡು ಹೋದವು, ಕಳ್ಳಂಗೊ!
(ಕಲ್ತು ಹೋದ ಮತ್ತೆ ಪೂರ ‘ಎಂಗಳೇ ಮಾಡಿದ್ದು’ ಹೇಳ್ತವಡ, ಕೇಮಹೇಶಣ್ಣಂಗೆ ಪಿಸುರು ಬಪ್ಪದು ಇದಕ್ಕೇ!)
ಅದೇ ಸಮಯಲ್ಲಿ ಅಲ್ಯಾಣ ಅನಾಗರಿಕ ಸಮಾಜವ ಸರಿ ಮಾಡ್ಳೆ ಅಲ್ಲಿಯುದೇ ಕೆಲವೆಲ್ಲ ಪುರುಷರು -ಅಲ್ಲ, ಯೇಸು ಇತ್ಯಾದಿ – ಬಂದು ಹೋದವು. ಅಷ್ಟಪ್ಪಗಳೇ ನಮ್ಮೋರು ಅವಕ್ಕೆ ಸುಮಾರೆಲ್ಲ ಕಲುಶಿ ಆಗಿತ್ತು.
ಮಾಷ್ಟ್ರುಮಾವ° ಈಗಾಣ ಅವಸ್ತೆಗೆ ಹೋಲುಸಿ ಹೇಳುವಗ ನವಗೆ ಮೈ ಇಡೀ ಉರಿತ್ತು ಕೆಲವು ಸರ್ತಿ!
ಅದೆಲ್ಲ ಇರಳಿ, ಇನ್ನೊಂದರಿ ಮಾಷ್ಟ್ರುಮಾವನೇ ಆ ಶುದ್ದಿಗಳ ಹೇಳುಗು.
~

ಮೊನ್ನೆ ಮಾಣಿಮಟಕ್ಕೆ ಗುರುಗೊ ಬಂದಿತ್ತಿದ್ದವು.
ಊರಿಂಗೆ ಗುರುಗೊ ಬಂದರೆ ಶಾಲು ಹಾಯ್ಕೊಂಡು ಹೋಗಿ ಎದೂರು ನಿಂಬದು ನಮ್ಮೋರ ಲಕ್ಷಣ.
ಹಾಂಗೆ ಮಾಂತ್ರ ಅಲ್ಲ, ಗುರುಗೊ ಬಂದ ವಿಶೇಷ – ನಿಜವಾದ ಕಾರ್ಯಕರ್ತರೂ ಹುರುಪಿಲಿ ಹೋಪದು ಇದ್ದೇ ಇದ್ದನ್ನೆ
ನಮ್ಮ ಬೈಲಿಂದ ಹೋಪ ಯೋಚನೆ ಬಂತು.

ಎಡಪ್ಪಾಡಿ ಬಾವನ ಉಸ್ತುವಾರಿಲಿ ಒಂದು ತಂಡ ತೆಯಾರಾತು – ಬೈಲಿನ ಕೆಲವೆಲ್ಲ ಸೇರಿಗೊಂಡು – ಪಟ್ಟಾಜೆ ಬಾವಯ್ಯಂದು ಜೀಪು!
ಹೊತ್ತಪ್ಪಗ ಬೇಗ ಮಿಂದು, ಹೆರಟೆಯೊ – ಇರುಳಿಂಗೆ ಅಲ್ಲಿಗೆ ಎತ್ತುತ್ತ ಏರ್ಪಾಡು.
ಮರದಿನ ವಾರ್ಶಿಕೋತ್ಸವ ಇದಾ, ಹಾಂಗೆ ಬೆಂದಿಗೆ ಕೊರದ ಹಾಂಗುದೇ ಆತು – ಹೇಳ್ತ ಲೆಕ್ಕಲ್ಲಿ.
ಎಡಪ್ಪಾಡಿ ಬಾವಂಗೆ ಪೂಜೆ ನೋಡುವ ಅಂಬೆರ್ಪು. ’ಬೇಗ, ಬೇಗ.. ಪೂಜೆ ಸಿಕ್ಕೆಕ್ಕು..!’ ಹೇಳಿ ಎಂಗೊಗೆ ನಾಕು ಪರಂಚಿಯೇ ಕಳುತ್ತು!

ಹೋಪಗ ಜೀಪಿಲಿ ಅಂತೂ ಗೌಜಿಯೋ ಗೌಜಿ..
ದೊಡ್ಡಬಾವನ ಹಟ್ಟಿಗೆ ಕುಟ್ಟಿಬಡುದ ವಿಶಯಂದ ತೊಡಗಿ, ಗುಣಾಜೆಕುಂಞಿ ಶೇಣಿಮದುವೆಲಿ 15 ಹೋಳಿಗೆ ತಿಂದ ಶುದ್ದಿಯೋ, ಜಾಲ್ಸೂರು ಮಾಣಿಯ ಹೊಸ ಮೊಬೈಲಿಲಿ ವೀಡ್ಯನೋಡ್ಳೆಡಿವ ಶುದ್ದಿಯೋ, ಸಾರಡಿಪುಳ್ಳಿ ಹಾಸನಂದ ರೈಲಿಲಿ ಬಂದ ಶುದ್ದಿ, ಮೆಡಿಮುರಿವಗ ಎಡಪ್ಪಾಡಿಬಾವನ ಕೈಗೆ ಸೊನೆರಟ್ಟಿದ ಶುದ್ದಿಯೋ, ಬೇಂಕಿನ ಪ್ರಸಾದಣ್ಣನ ಮದುವೆಗೆ ಆಚಕರೆಮಾಣಿಯೇ ಸಂದಾನ ಹಾಕಿದ ಶುದ್ದಿಯೋ – ಎಲ್ಲವನ್ನುದೇ ಮಾತಾಡಿಗೊಂಡು ಹೋದ್ದು!
ಮಾಣಿಯಂಗೊ ಸೇರಿರೆ ಮಾಣಿ ಎತ್ತಿದ್ದೂ ಗೊಂತಾಗ – ಹೇಳಿ ರಂಗಮಾವ ಪರಂಚಿಅಪ್ಪಗ ಎಲ್ಲ ಇಳುದೆಯೊ.
ಬೈಲಿಂದ ಮಾಣಿ ಎತ್ತಿದ್ದೇ ಗೊಂತಾಯಿದಿಲ್ಲೆ.
~

ಎತ್ತಿ ಕೈಕ್ಕಾಲು ತೊಳದು ಒಳ ಹೋಪದ್ದೇ – ಪೂಜಗೆ ಸರೀ ಆಗಿತ್ತು.
ಅದು ಗುರುಗಳೇ ಸ್ವತಃ ಮಾಡುವ ಪೂಜೆ.

ಶ್ರೀ ದೇವರ ಮಂಟಪ...
ಶ್ರೀ ದೇವರ ಬೆಳ್ಳಿಮಂಟಪ…

ದಿನಕ್ಕೆರಡು ಸರ್ತಿ ಕೂರ್ಮಾಸನದ ಮೇಗೆ ಶುದ್ಧಪದ್ಮಾಸನಲ್ಲಿ ಕೂದು ಏಕಧ್ಯಾನಲ್ಲಿ ಮಾಡುವ ಪೂಜೆ!
ಬೆಳ್ಳಿಕಟ್ಟುಸಿದ ಆಳೆತ್ತರದ ಮಂಟಪದ ಅಟ್ಟೆಲಿ ಮಡಗಿದ ಶ್ರೀಮಟದ ದೇವರುಗೊ – ಶ್ರೀ ಸೀತಾರಾಮ, ರಾಮಚಂದ್ರ, ಚಂದ್ರಮೌಳೀಶ್ವರ ದೇವರ ಸಾಯುಜ್ಯವ ಎದುರುಗೊಂಡು, ನಿಷ್ಠೆಲಿ ಮಾಡ್ತ ಪೂಜೆ.
ಮೂವತ್ತೈದು ಶಂಕರಾಚಾರ್ಯರು ನಿತ್ಯ, ನಿರಂತರ ಪೂಜೆಮಾಡಿ, ಇದೀಗ ಮೂವತ್ತಾರನೇ ಶಂಕರಾಚಾರ್ಯರು ಅದೇ ಪರಂಪರೆಲಿ ಮಾಡ್ತ ಪೂಜೆ!
ಸೂಕ್ತ, ಶ್ಲೋಕದ ಏಕಶೃತಿಯ ನಾದಕ್ಕೆ ಅನುಷ್ಠಾನಲ್ಲಿ ಮಾಡುವ ಶ್ರೀ ಪೂಜೆ!
ಶುದ್ಧಶಬ್ಧದ ಘಂಟಾಮಣಿಯ ನಾದಕ್ಕೆ ಜಯಗಂಟೆಯ ಶಬ್ದ ಸೇರಿ ಕೋಣೆಯ ಕಣಕಣಲ್ಲಿ ಪ್ರತಿಧ್ವನಿ ಆದ ಪೂಜೆ!
ಎದುರು ಅದಾಗಲೇ ನೂರಾರು ಶಿಷ್ಯರು ಸಾಲಾಗಿ ಕೂದಿತ್ತಿದ್ದವು, ಜಾಗೆ ಇದ್ದಲ್ಲಿ ನೋಡಿಗೊಂಡು ಎಂಗಳೂ ಚೆದುರಿ ಕೂದಂಡೆಯೊ°!
~
ಇರುಳು, ಕರೆಂಟು ಹೋದ್ದೋ – ಲೈಟುತೆಗದ್ದೋ – ಉಮ್ಮ!
ಕರೆಂಟು ಬಪ್ಪದೇ ಬೇಡ ಹೇಳಿ ಗ್ರೇಶಿಗೊಂಡಿತ್ತವು ಸುಮಾರು ಜೆನ! – ಪಾಪ, ಕರ್ನಾಟಕಲ್ಲಿ ಹಾಂಗೆಡ ಅಲ್ದೊ!?
ಕಂದುಗಸ್ತಲೆಲಿ ಮಂಟಪದ ಕಂಬಂಗಳಲ್ಲಿ ಮಿನ್ನಂಪುಳುವಿನ ಹಾಂಗೆ ಹೊಳವ ಬೆಳ್ಳಿಹಣತೆಗೊ, ಹೊಳೆತ್ತ ಬೆಣಚ್ಚಿಲಿ ಕಾಣ್ತ ಬೆಳ್ಳಿ ಮಂಟಪ!

ದೇವಲೋಕಕ್ಕೇ ಮೆಟ್ಳುಮೆಟ್ಳಿನ ದಾರಿ ಮಡಗಿದ್ದವೋ – ಕಾಣ್ತ ನಮುನೆದು ಮಂಟಪದ ಮೆಟ್ಳುಗೊ. ಆ ಮೆಟ್ಳಿಲಿ ಮನಸ್ಸು ಪ್ರಯಾಣ ಮಾಡ್ಳೆ ಬೆಣಚ್ಚಿಂಗೆಯೋ ಏನೋ – ಎರಡೂ ಕಡೆಲಿ ಸಣ್ಣ ಸಣ್ಣ ಹಣತೆಗೊ.. ಅದಕ್ಕೆಲ್ಲ ಯೆಜಮಾನನ ಹಾಂಗ ಕೆಳದಿಕೆ ಬೆಳಗುತ್ತಾ ಇಪ್ಪ ಎರಡು ಕಾಲುದೀಪಂಗೊ.
ಆ ಮೆಟ್ಳಿಲಿ ಮಡಗಿದ ಶ್ರೀಕರಾರ್ಚಿತ ದೇವರುಗೊ. ಸಪರಿವಾರ ಶ್ರೀ ರಾಮದೇವರು. ಆದಿ ಶಂಕರಾಚಾರ್ಯರಿಂದ ಇಂದಿನ ಒರೆಂಗೂ ಎಲ್ಲಾ ಶಂಕರರು ಸ್ವಂತ ನಿಷ್ಠೆಲಿ ಸ್ವಂತ ಕೈಲಿ ಪೂಜೆ ಮಾಡಿದ ದೇವರು. ಸೀತೆ, ಲಕ್ಷ್ಮಣರೊಟ್ಟಿಂಗೆ ಕೂದ ರಾಮನ ವಿಗ್ರಹ, ಭಾರತದ ಪ್ರತಿರೂಪವೇ ಇಪ್ಪಂತಾ ಚಂದ್ರಮೌಳೀಶ್ವರ ಲಿಂಗ,
ಸರ್ವಸ್ವವೂ ಬೆಳ್ಳಿ ಬೆಣಚ್ಚಿನ ಪ್ರತಿಫಲನಲ್ಲಿ ಹೊಳಕ್ಕೊಂಡಿತ್ತು.!
~

(ಶ್ರೀ ಗುರುಗೊ ಪೂಜಾನಿರತರಾಗಿಪ್ಪದು – ಸನಾತನತೆಯ ಅವಿಭಾಜ್ಯ ಕಾರ್ಯ)

ಕರೆಲಿ ಶಾಸ್ತ್ರಿಮಾವನ ನೇತೃತ್ವಲ್ಲಿ, ಪರಿವಾರದ ಅಣ್ಣಂದ್ರು ಎಲ್ಲರೂ ಕೂದಂಡು ಮಂತ್ರ ಹೇಳ್ತಾ ಇದ್ದವು –
ಸುರೂವಿಂಗೆ ಗಣೇಶಾಥರ್ವಶೀರ್ಷ – ಅದಾದ ಮತ್ತೆ ಕೆಲವು ಸೂಕ್ತಂಗ – ಒಳ್ಳೆ ಲಯಬದ್ಧವಾದ ಸ್ವರ ಉಚ್ಛಾರ, ಒಳ್ಳೆ ಶೃತಿ!
ಮಂತ್ರ ಅರಡಿವ ನಮ್ಮ ಊರಿನ ಕೆಲವು ಬಟ್ಟಮಾವಂದ್ರುದೇ ಸ್ವರ ಸೇರುಸಿಗೊಂಡಿದ್ದವು
ಹಣತೆ ಹೊತ್ತಿದ ಮಂದ್ರ ಬೆಣಚ್ಚಿಲಿ ಬಟ್ಟಮಾವಂದ್ರ ಮಧ್ಯಮ ಸ್ವರಲ್ಲಿ ಸೇರಿದ ಶಿಷ್ಯರ ತಾರಕ ಮನಸ್ಥಿತಿಲಿ ಸಮಗ್ರ ತಾನ ಮೇಳೈಸಿಗೊಂಡಿತ್ತು.

ಮಂಟಪದ ಬಲತ್ತಿಂಗೆ ಗುರುಗೊ ಕೂದಂಡು ಪೂಜಾಕೈಂಕರ್ಯ ಮಾಡ್ತಾ ಇದ್ದವು..
ಮಂಟಪಲ್ಲಿಪ್ಪ ಆರಾಧ್ಯ ದೇವರಿಂಗೆ, ಸತ್ಯಮಾವ ಎದುರು ತಂದುಮಡಗಿದ ಹೂಗಿನ ಸಮರ್ಪಣೆ ಮಾಡಿಗೊಂಡಿದ್ದವು.
ಸಂಕಲ್ಪ, ಅಭಿಶೇಕ ಇತ್ಯಾದಿಗೊ ನೆರವೇರಿದ್ದು,
ನವಶೆಗ್ತಿಪೂಜೆ, ಧ್ಯಾನ, ಆವಾಹನೆ, ಪಂಚೋಪಚಾರ ಪೂಜೆ, ದ್ವಾದಶನಾಮ ಪೂಜೆ, ಷೋಡಷೋಪಚಾರಪೂಜೆಗೊ ಸಾಗುತ್ತಾ ಇದ್ದು…
ಎಲ್ಲವೂ ಹೂಗುಗಳ ಮುಖಾಂತರ..!

ನೈವೇದ್ಯದ ಹೊತ್ತಿಂಗೆ ಧೂಪ-ದೀಪಕ್ಕಪ್ಪಗ ಘಂಟಾನಾದ, ಅದೇ ಲಯಲ್ಲಿ ಜಯಗಂಟೆ – ಚೆಂದಕೆ ಕೇಳಿಗೊಂಡು ಇತ್ತು!
ಅಷ್ಟಾಗಿ ಇಪ್ಪದೇ ಅಲಂಕಾರ!
~
ತೊಳಶಿ, ಸೇವಂತಿಗೆ, ಕಾಕಡ ಇತ್ಯಾದಿ ಗಟ್ಟಿ ಹೂಗುಗೊ ಅಡಿಂಗೆ ಇದ್ದೊಂಡು, ಅಲಂಕೃತ ಮಂಟಪಕ್ಕೆ ಬುನಾದಿ ಹಾಕಿದವು..
ಅದರ ಮೇಗಂದ, ಮಂಟಪದ ಮೆಟ್ಳಿಂಗೆ – ನೆಕ್ರಾಜೆ ಅಪ್ಪಚ್ಚಿ ತಂದು ಎತ್ತುಸಿದ್ದಡ – ತಾವರೆಯೋ, ಕೋಮಳೆಯೋ – ಎಲ್ಲ ಅಲಂಕೃತ ಆತು..
ನೆಡು ಮಧ್ಯೆ ಇಪ್ಪ ದೇವರುಗೊಕ್ಕೆ ಪರಿಮ್ಮಳದ ಪಾರಿಜಾತ ಇತ್ಯಾದಿ ಹೂಗುಗೊ ಹಾಸಿಗೆ ಮಾಡಿದವು..
ಎಲ್ಲದಕ್ಕೂ ಸುತ್ತುವರಿತ್ತ ಹಾಂಗೆ – ಮಲ್ಲಿಗೆ – ಪೇಟೆಲಿ ಸಿಕ್ಕುತ್ತ ಬಾಯಮ್ಮ ನಕ್ಕಿದ ಮಾಲೆ ಅಲ್ಲ, ದೀಪಕ್ಕನ ಹಾಂಗಿಪ್ಪವು ಶ್ರದ್ಧೆಲಿ ಮಾಲೆ ಮಾಡಿ ಎತ್ತುಸಿದ ಹೂಗುಗೊ – ಮಾಲೆ..
ಬೆಂಗುಳೂರಿನೋರು ಆರೋ ತಂದು ಎತ್ತುಸಿದ ಪೇಟೆ ನಮುನೆ ಹೂಗುಗೊ – ಎಲ್ಲವುದೇ ಇತ್ತು..
ಆಹ್! ಅಲಂಕೃತ ವೈಭವಲ್ಲಿ ಯೇವದಿಲ್ಲೆ- ಯೇವದಿದ್ದು.. ಹೇಳುದು ಕಷ್ಟ!!
~
ಮಂಗಳಾರತಿ ಅಂತೂ ಅದ್ಭುತ.
ಜಯಗಂಟೆ – ಘಂಟಾನಾದದ ಲಯಬದ್ಧ ನಾದಲ್ಲಿ ಚಂದದ ಬೆಳ್ಳಿಮಂಟಪಲ್ಲಿ ಆರತಿಮಾಡವಗ – ನೋಡುದೋ;ಕೇಳುದೋ – ಹೇಳಿ ನವಗೇ ಕನುಪ್ಯೂಸು ಅಪ್ಪ ಹಾಂಗೆ!!
ಇಡೀ ಜ್ಯೋತಿಯೇ ಮೇಗೆ ಹೋಗಿ ಕೆಳ ಬಪ್ಪಗ ಕೂದುಗೊಂಡಿಪ್ಪ ನಾವೇ ಉಯ್ಯಾಲೆಲಿ ಒಚ್ಚಿದ ಹಾಂಗೆ..
ಒಂದೊಂದು ಆರತಿ ಅಪ್ಪಗಳೂ ಒಂದೊಂದು ಅಧ್ಯಾಯ ಕಳುದ ಹಾಂಗೆ…
ಕೊನೆಯ ಮಂಗಳಾರತಿ ಅಪ್ಪಗ ಮಂಗಳಮಯಿ ಮನಸ್ಸು ತುಂಬಿ ಬಂದ ಹಾಂಗೆ..
ಒಟ್ಟಾರೆಯಾಗಿ ಈ ಮಂಗಳಾರತಿ ನೋಡುದರಿಂದ ಬೇರೆ ಧ್ಯಾನ ಬೇಡ – ಹೇಳ್ತ ಮಟ್ಟಿಂಗೆ ಅನಿಸಿ ಹೋತು!

ಪೂಜೆ ಮುಗುದ ಲೆಕ್ಕಲ್ಲಿ ಗಂಧಪ್ರಸಾದ, ಅನ್ನಪ್ರಸಾದ ಸಿಕ್ಕಿತ್ತು.
ಮರದಿನದ ವಾರ್ಷಿಕೋತ್ಸವಕ್ಕೆ ಬೆಂದಿಗೆ ಕೊರದು, ಬೈಲಿನ ಜೀಪಿಲಿ ಹತ್ತಿ ವಾಪಾಸು ಹೆರಟೆಯೊ°.
~
ಬಪ್ಪಗ, ಎಡಪ್ಪಾಡಿಬಾವ ಒಂದು ಶುದ್ದಿ ತೆಗದ..
ಆರೋ ಎರೆಪ್ಪುಗೊ ಕೆಲವು ಜೆನ ಅದೆಂತದೋ ಕಂಪ್ಯೂಟರಿಲಿ ಸೀಡಿ ಮಡಿಕ್ಕೊಂಡು ಗುರುಗಳ ಹೆಸರು ಹಾಳು ಮಾಡ್ಳೆ ಹೆರಟಿದವು – ಹೇಳಿಗೊಂಡು.
ಅವು ಗೋಕರ್ಣದ ಹೊಡೇಣ ಬಟ್ಟಕ್ಕಳೇ ಅಡ! ಪೋಲೀಸರ ಕೈಗೆ ಸಿಕ್ಕಿಬಿದ್ದು ಸಮಕ್ಕೆ ತಿಂದವಡ. ಬಯಂಕರದ ವಿಶಯಂಗೊ ಹೆರ ಬಂತಡ!
ಜೀಪಿಲಿ ಅಂತೂ ಇದೇ ವಿಶಯಲ್ಲಿ ಒಳ್ಳೆತ ಚರ್ಚೆ ಆತು.

ಚೆ! ಅವುದೇ ಇದೇ ಗುರುಪೀಟದ ಶಿಷ್ಯರೇ. ಎಂತಕೆ ಹಾಂಗೆ ಮಾಡ್ತವು?
ಮಟ ಮೇಲೆ ಹೋದರೆ ಅವಕ್ಕೆಂತ ಹುಳ್ಕು? ಹೇಳಿ ಅಜ್ಜಕಾನ ಬಾವ ಕೇಳಿದ, ಬೇಜಾರಲ್ಲಿ!
ಗೋಕರ್ಣ ದೇವಸ್ತಾನ ಅವರ ಒರತ್ತೆ ಆಗಿತ್ತು, ಆ ಒರತ್ತೆಗೆ ಕಟ್ಟ ಹಾಕಿದ್ದೇ ಅವರ ಈ ಬುದ್ಧಿಗೆ ಕಾರಣ – ಹೇಳಿದ° ಎಡಪ್ಪಾಡಿ ಬಾವ°.
“ಹೋಪ ಕಾಲಕ್ಕೆ ಹದಿನೆಂಟು ಬುದ್ದಿ” – ಹೇಳಿದವು ರಂಗಮಾವ, ಕೋಪಲ್ಲಿ.
~

ನಮ್ಮ ಸನಾತನ ಸಂಸ್ಕೃತಿಲಿ ಮೊದಲಿಂದಲೂ ಹಾಂಗೇ ಆಯಿದು.
ರಾಮಂಗೇ ವಿರೋಧಿಗೊ ಇತ್ತಿದ್ದವಡ, ಆದಿ ಶಂಕರಾಚಾರ್ಯರಿಂಗೇ ವಿರೋಧ ಬಯಿಂದಡ! ಇನ್ನು ನಾವೆಲ್ಲ ಎಂತ ಲೆಕ್ಕ!
ವಿರೋಧಂಗಳ ಎದುರೇ ಬೆಳದು ಬಪ್ಪದೇ ಈ ಸನಾತನತೆಯ ವೈಶಿಷ್ಟ್ಯ – ಹೇಳಿದವು ಮಾಷ್ಟ್ರುಮಾವ°!

ಉದಾಹರಣಗೆ, ಆಗ ಆದ ಪೂಜೆ ನೋಡಿದಿರಲ್ಲದೋ –
ಅದೇ ಮಂಟಪ, ಅದೇ ದೇವರುಗೊ, ಅದೇ ಗುರುಪೀಠ, ಅದೇ ಘಂಟಾನಾದ, ಅದೇ ಮಂತ್ರಂಗೊ, ಅದೇ ಲಯ, ಅದೇ ಶೃತಿ – ಎಲ್ಲವೂ ಅದುವೇ..
ಎಷ್ಟೋ ಒರಿಶಂದ ಅದುವೇ ವಸ್ತುಗೊ ..
ಅದರ್ಲಿ ಬದಲಪ್ಪದು ಎರಡೇ ವಿಶಯಂಗೊ – ದೇವರಿಂಗೆ ಹಾಕಿದ ಹೂವುದೇ, ಎದುರು ಕೂದ ನಾವುದೇ!
ಹೂಗಿಲಿಯೂ ಹಾಂಗೇ, ಕೆಲವು ಹೂಗು ಮೇಲೆ ನಿಂದತ್ತು, ಕೆಲವು ಎದೂರು ನಿಂದತ್ತು, ಕೆಲವು ಹಿಂದೆ ನಿಂದತ್ತು, ಕೆಲವು ಚೆಂದ, ಪರಿಮ್ಮಳ ಇತ್ತು, ಕೆಲವಕ್ಕೆ ಬಣ್ಣವೇ ಇತ್ತಿಲ್ಲೆ..
ಕೆಲವು ಬಿಡಿ ಹೂಗುಗೊ ಇತ್ತು, ಕೆಲವು ಒಗ್ಗಟ್ಟಿನ ಮಾಲೆಗೊ ಇತ್ತು!
ಜೆನಂಗಳೂ ಹಾಂಗೆ, ಕೆಲವು ಜೆನ ಎದೂರು ನಿಂದಿರ್ತವು, ಕೆಲವು ಜೆನ ಹಿಂದಂಲೇ ಕೆಲಸ ಮಾಡಿರ್ತವು, ಕೆಲವು ಜೆನ ಹೊಳೆತ್ತವು, ಕೆಲವು ಜೆನ ಪರದೆಯ ಹಿಂದೆ ಇರ್ತವು.

ಹೂಗಿನೊಟ್ಟಿಂಗೆ ಕೆಲವು ಹುಳುಗಳೂ ಇರ್ತು, ನಮ್ಮ ನೆಡುಕೆಯುದೇ ಕೆಲವು ಹುಳುಗೊ ಇರ್ತು.
ಎರಡು ದಿಕ್ಕೆಯುದೇ ಅನಪೇಕ್ಷಿತ – ಹುಡುಕ್ಕಿ ತೆಗದು ಇಡೆಕ್ಕಾದ್ದು ನಮ್ಮ ಕರ್ತವ್ಯ..
ಹೂಗುದೇ ನಾವುದೇ ಹೆಚ್ಚು ಕಮ್ಮಿ ಒಂದೇ ನಮುನೆ” .. ಹೇಳಿ ಇದೇ ಸಂದರ್ಭವ ಹೋಲುಸಿಗೊಂಡು ಹೇಳಿದವು ಮಾಷ್ಟ್ರುಮಾವ!
~

ಅಪ್ಪಲ್ದಾ..
ಅತ್ಯದ್ಭುತ ಸನಾತನ ಪರಂಪರೆ ಇಪ್ಪ ನಮ್ಮ ಪೀಟದ ಕೆಳವೂ ಹೀಂಗಿರ್ತೋ!
ನಮ್ಮ ಮದ್ಯಲ್ಲಿ ಎಷ್ಟೋ ತಾವರೆ, ಕೋಮಳೆಗೊ ಇದ್ದು. ಅದರ ಪೂಜೆಗೆ ಕಳುಸುವ°..
ಕೆಲವು ಹುಳುಗಳೂ ಇದ್ದು. ಅದರ ಹೆರ್ಕಿ, ಮೆಟ್ಟಿ- ಸಾಯಿಸಿ ಬಿಡುವ°..
ಇನ್ನಾದರೂ ಆ ಹುಳುಗಳ ತೆಗದು ನಿರ್ನಾಮ ಮಾಡಿರೆ, ಹಾಳಾದ ಹೂಗುಗೊ ಹಾಳಾತು, ಇಪ್ಪ ಹೂಗುಗೊ ಆದರೂ ಚಂದಕೆ ಒಳಿಗು.
ಎಂತ ಹೇಳ್ತಿ? – ಎಂಗಳಷ್ಟಕ್ಕೇ ಆತ್ಮವಿಮರ್ಶೆ ಮಾಡಿಗೊಂಡು ಬೈಲಿಂಗೆ ಎತ್ತಿದೆಯೊ°.

ಹುಳುಗೊ ಮಾಡುವ ಕ್ರಿಮಿಕೆಲಸದ ಬದಲು ನಮ್ಮ ಮಟದ ಸನಾನತೆಯ ನೋಡುವ. ಆಗದೋ? ಏ°?

ಒಂದೊಪ್ಪ: ಹುಳು ಹಿಡುದ ಹೂಗುಗಳ ಶುದ್ಧಮಾಡಿರೆ ಸನಾತನತೆಲಿ ಪೂಜೆಗಕ್ಕಡ!

ಸೂ: ಶ್ರೀ ಗುರುಗೊ ಮಾಡ್ತ ಪೂಜೆಗಳ ಕೆಲವು ಪಟಂಗ ಇಲ್ಲಿದ್ದು:
(ನಿಂಗಳತ್ರೂ ಚೆಂದದ ಪಟಂಗ ಇದ್ದರೆ ಕಳುಸಿ, ಪಟದ ಪುಟಲ್ಲಿ ಹಾಕಲಕ್ಕು.)

8 thoughts on “ಹೂಗಿಂಗೂ ನವಗೂ ಸಾಮ್ಯತೆ; ಒಳುದ್ದೆಲ್ಲವೂ ಸನಾತನತೆ!

  1. ” ಹುಟ್ಟೇ ಇಲ್ಲದ್ದಕ್ಕೆ ಸಾವೂ ಇರ್ತಿಲ್ಲೆ..” – ತುಂಬಾ ಇಷ್ಟ ಆತು – ಒಪ್ಪ ಸಾಲುಗೋ!
    ಮತ್ತೆ.. ರಾಮಪೂಜೆಯ ಈ…….ಗ, ಇ….ಲ್ಲೇ, ಕಣ್ಣಮುಂದೆಯೇ.. ಕಂಡ ಹಾಂಗಾತು!!!

  2. ತುಂಬಾ ಲಾಯ್ಕ್ಜಾಯಿದು.. ಶುದ್ದಿಯ ಶೀರ್ಷಿಕೆಯೇ ಬಾರೀ ಚೆಂದ ಇದ್ದು. ನಮ್ಮ ಈ ಸನಾತನ ಧರ್ಮದ ಮಹತ್ವ ಹೇಳಿದಷ್ಟೂ ಮುಗಿಯಪ್ಪ…

    ಗುರುಗೊ ಪೂಜೆ ಮಾಡುದರ ಅಲ್ಲೇ ಹತ್ರಲ್ಲೇ ಕೂದೊಂಡು ನೋಡಿದಾಂಗಾತು ಒಪ್ಪಣ್ಣನ ವಿವರಣೆ ಓದುವಾಗ. ನಿಷ್ಕಲ್ಮಶ, ಪರಮಪವಿತ್ರ ಮನಸ್ಸಿನ ಗುರುಗಳ ಮೇಲೆ ಕೀಳುಮಟ್ಟದ ಆರೋಪ ಮಾಡ್ಳೆ ಹೆರಟವನ್ನೆ ಆ ಹುಳುಗೊ.. ಚೆ.. 🙁

  3. ತುಂಬಾ ಚಂದಕ್ಕೆ ಬರದ್ದೆ ಒಪ್ಪಣ್ಣ… ಸನಾತನ ಧರ್ಮದ ಜೀವನ ಶೈಲಿಯ ನವಗೆ ತಿಳಿಶಿ ಕೊಟ್ಟದೇ ಗುರು ಪೀಠ ಅಲ್ಲದಾ? ಹಾಂಗಿಪ್ಪಲ್ಲಿ ಆ ಪೀಠಕ್ಕೆ ಗೌರವ ಕೊಡದ್ದ ಮನುಷ್ಯ° ಮನುಷ್ಯನಾ?
    ಒಂದೇ ಊರಿಲಿ ನೆರೆಕರೆಲಿ ಇದ್ದರೂ ಗುರ್ತ ಇಲ್ಲದ್ದೆ ಇತ್ತು ನಾವೆಲ್ಲಾ.. ಹೆಮ್ಮಕ್ಕಳ ಪರಿಚಯವೇ ಇತ್ತಿಲ್ಲೇ.. ನೆರೆಕೆರೆಲಿ ನೆಡವ ಪೂಜೆಗೆ,ತಿಥಿಗೆ… ಗೆಂಡು ಮಕ್ಕಳೇ ಹೋಪದು…. ಅದೂ ಊಟಕ್ಕಪ್ಪಗ ಹೇಳಿಕೆ ಹೇಳಿದ್ದವನ್ನೇ ಹೇಳಿ…ಸಂಸ್ಥಾನ ಬಂದ ಮೇಲೆ ಎಲ್ಲಾ ಬದಲಿತ್ತು.. ಮುನ್ನಾಣ ದಿನಂದ ಹಿಡುದು ಎಲ್ಲ ಕಾರ್ಯಕ್ರಮ ಅಪ್ಪಲ್ಲಿವರೆಗೆ ನೆರೆಕರೆಯವು ಸೇರುವ ಹಾಂಗೆ ಆತು.. ಅದರಲ್ಲೂ ಹೆಮ್ಮಕ್ಕಳ ಒಟ್ಟು ಸೇರಿಸಿ ಕುಂಕುಮಾರ್ಚನೆ ಸುರು ಮಾಡಿದ ಮೇಲೆ ಸಂಘಟನೆ ಬಲ ಆತು.. ಈಗ ಎಲ್ಲೋರೂ ಸೇರಿ ಅಪ್ಪಗ ಕೊಶಿ ಆವುತ್ತು.. ಮಾಷ್ಟ್ರು ಮಾವ ಹೇಳಿದ್ದು ಅನುಭವದ ಮಾತು.. ವಿರೋಧಂಗಳ ಎದುರು ಬೆಳದು ಬಪ್ಪದು ಸನಾತನ ಧರ್ಮದ ವೈಶಿಷ್ಟ್ಯ ಹೇಳಿ… ನಮ್ಮ ನಡುಕೆ ಇಪ್ಪ ಹುಳುಗಳ ನಾಶ ಮಾಡ್ಲೆ ಗುರು ಕರಾರ್ಚಿತ ದೇವರುಗಳೇ ಯಾವುದಾದರೂ ಮದ್ದಿನ ಗುರು ಮುಖೇನ ಕೊಡೆಕ್ಕಷ್ಟೇ…

  4. ಹೂಗಿಂಗೂ ನವಗೂ ಇಪ್ಪ ಸಾಮ್ಯತೆ ಕೊಟ್ಟದು ತುಂಬಾ ಲಾಯಿಕ್ ಆಯಿದು. ಪಟಂಗಳನ್ನೂ ವೀಡಿಯೋವನ್ನೂ ಮತ್ತೆ ಮತ್ತೆ ನೋಡುವ ಹೇಳಿ ಆವುತ್ತು. ಒಪ್ಪಣ್ಣನ ಕೈಲಿ ಇನ್ನೂ ಹೀಂಗಿಪ್ಪ ಲೇಖನ ಬರಲಿ.

  5. ಧಾರಣಾತ್ ಧರ್ಮಮಿತ್ಯಾಹು:, ಧರ್ಮೋ ಧಾರಯತೇ ಪ್ರಜಾ:”
    ಧರತಿ ಲೋಕಂ ಇತಿ ಧರ್ಮ:,ಸತ್ಯಾನ್ನಾಸ್ತಿ ಪರೋಧರ್ಮಃ

  6. entha oppanno itteechege shedigumme bhavana maratha hange kanthanne….raja busy ada karana visit madittiddille hange heli shuddi ella gonthagyondiddu athoooo…..annana maduve, aachkare maniya maduve sattumudi heli jambrangale jambrango ada………….

  7. ಇಲ್ಲಿಂದಲೇ ಮಂಟಪಕ್ಕೆ ಹೂಗು ಹಾಕಿ ಸಾಷ್ಟಾಂಗ ನಮಸ್ಕಾರ ಮಾಡ್ತೆ!!!
    ಹರೇ ರಾಂ…..

  8. ಬಾವ, ಆ ಪೂಜೆ ಇದ್ದಲ್ಲದ ದೇವರೇ ದೇವರಿಂಗೆ ಮಾಡುವ ಪೂಜೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×