Oppanna.com

ತಾನೂ ಹಿಗ್ಗಿ, ಕೇಳುಗರನ್ನೂ ಹಿಗ್ಗುಸಿದ ಹಿಗ್ಗಿನ್ಸ್ ಭಾಗವತರು..

ಬರದೋರು :   ಒಪ್ಪಣ್ಣ    on   06/12/2013    11 ಒಪ್ಪಂಗೊ

ಸಂಗೀತದ ವಿಷಯಕ್ಕೆ ಬಂದರೆ ಒಪ್ಪಣ್ಣಂಗೆ ಏನೂ ಅರಡಿಯ – ಹೇದು ಇಡೀ ಬೈಲಿಂಗೇ ಅರಡಿಗು.
ಅದಕ್ಕೆ ಕಾರಣ ಇಲ್ಲದ್ದಲ್ಲ.
ಮೂರೂ ಹೊತ್ತು ಸಂಗೀತ ಕೇಳುಸ್ಸು ಮಾಂತ್ರ, ಒಪಾಸು ಹೇಳುಲಿಲ್ಲೆ ಇದಾ. ಬಾಯಿಲಿ ಹೇಳದ್ದೇ ಇದ್ದರೆ ಅದು ಬಪ್ಪದು ಹೇಂಗೆ?
ಅಲ್ಲದೋ?
ಅದಿರಳಿ.

ಒಪ್ಪಕ್ಕಂಗೆ ಹೀಂಗಪ್ಪಲಾಗ ಹೇದು ಸಣ್ಣ ಇಪ್ಪಾಗಳೇ ಸಂಗೀತ ಕಲಿಯಲೆ ಮೀಸೆಬೈಲು ಅತ್ತೆಯ ಹತ್ತರಂಗೆ ಕಳುಸಿದ್ದವು.
ಮನೆಲಿ ಹೇಳದ್ದರೂ, ಸಂಗೀತ ಗುರುಗಳ ಎದುರಾದರೂ ರಜ ಸಂಗೀತ ಹೇಳುಗನ್ನೇದು.
ರೇಡ್ಯಲ್ಲಿ, ಕೇಸೆಟ್ಟಿಲಿ ಮಾಂತ್ರ ಅಲ್ಲದ್ದೆ  – ಒಪ್ಪಕ್ಕ ಮನೆಲಿ ಹೇಳುಸ್ಸುದೇ ಒಪ್ಪಣ್ಣಂಗೆ ಕೇಳ್ತ ಸೌಭಾಗ್ಯ ಇದ್ದತ್ತು – ಹೇಳ್ತದು ಇಡೀ ಬೈಲಿಂಗೇ ಗೊಂತಿಪ್ಪ ಸತ್ಯ ಸಂಗತಿ.

~

ಸಂಗೀತ ಹೇದರೆ ಬೈಲಿಂಗೆ ಮದಲಿಂಗೇ ಹತ್ತರೆ.
ಮುಳಿಯಭಾವಂಗೆ ತರಕ್ಕಾರಿ ಕೊಂಡೋಪಲೆ ಮರದರೆ ಆ ದಿನ ಬಾಯಾರು ರಾಜಣ್ಣ ಕಳುಸಿದ ಬಲಿಪ್ಪಜ್ಜನ ಯಕ್ಷಗಾನ ಪದ – ಜೋರು ಹಾಕಿಂಡು ಕೂರ್ಸಡ, ಮನೆ ಒಳಾಂದ ಬೇರೇವದೂ ಶೆಬ್ದ ಬಾರದ್ದ ಹಾಂಗೆ! 😉
ಹಲ್ಲು ಒಕ್ಕಿ ಎಡಕ್ಕಿಲಿ ಸಿಕ್ಕುತ್ತ ಪುರ್ಸೋತಿಲಿ ಮಾಷ್ಟರ್-ಸಂಗೀತ ಕೇಸೆಟ್ಟು ಕೇಳುಸ್ಸಡ ನಮ್ಮ ಚೆನ್ನೈಭಾವ.
ಸುವರ್ಣಿನಿ ಅಕ್ಕನಲ್ಲಿ ಕುಂಞಿಬಾಬೆ ಬಂದ ಮತ್ತೆ ನಿತ್ಯವೂ ಸಂಗೀತ ಇದ್ದಿದಾ!
ಮುಜುಂಗರೆ ಮಾಲಕ್ಕನ ಶೃತಿಪೆಟ್ಟಿಗೆ ಸರಿ ಆದಕೂಡ್ಳೇ ಅವುದೇ ಬೈಲಿಲಿ ಹೇಳ್ತವು, ಸದ್ಯಲ್ಲೇ.
ಇದರೆಡಕ್ಕಿಲಿ ಹಲವೂ ಸರ್ತಿ ಸಂಗೀತದ ಬಗ್ಗೆ ಮಾತಾಡಿದ್ದುದೇ. ಹಲವೂ ಸಂಗೀತ ಅರಡಿಗಾದೋರುದೇ ಶುದ್ದಿಗಳ ಹೇಳಿದ್ದವು.
ಮಹಾ ಸಾಹಿತಿ ತ್ಯಾಗರಾಜರು, ಮಹಾ ಭಕ್ತ ಪುರಂದರದಾಸರು, ಮಹಾ ಸಂಗೀತಗಾರ ಬಾಲಮುರಳಿ – ಹೀಂಗೇ ಹಲವೂ ಜೆನರ ಬಗ್ಗೆ ಮಾತಾಡುವಾಗ ಅಂಬಗಂಬಗ ರಜ ರಜ ಸಂಗೀತದ ಬಗ್ಗೆ ಬಯಿಂದು.
ಅಂತೂ – ಬೈಲಿಂಗೆ ಸಂಗೀತ ಹೇದರೆ ತುಂಬಾ ಹತ್ತರೆಯೇ.
ಹಾಂಗೆ, ಇಂದೂ ಸಂಗೀತದ್ದೇ ಒಂದು ಶುದ್ದಿ ಹೇಳಿಕ್ಕುವೊ, ಆಗದೋ?

~

ಒಪ್ಪಣ್ಣ ಸಣ್ಣಾದಿಪ್ಪಗ ಮಾಷ್ಟ್ರುಮಾವನ ಮನೆಲಿ ಟ್ರಂಕುಪೆಟ್ಟಿಗೆಯ ತುಂಬ ಕೇಸೆಟ್ಟು ಇದ್ದತ್ತು ಹೇದು ಅಂದೇ ಹೇಳಿದ್ದೆ ಅಲ್ಲದೋ?
ಆರು ಬೇಕಾರೂ – ಎಷ್ಟು ಸರ್ತಿ ಬೇಕಾರು ಅದರ ಮುಟ್ಳಕ್ಕು. ಟೇಪ್ರೆಕಾರ್ಡಿಲಿ ಒಂದೊಂದೇ ಕೇಸೆಟ್ಟಿನ ತಿರುಗುಸಿ, ಪದ ಕೇಳಿ ಪುನಾ ಆ ಟ್ರಂಕುಪೆಟ್ಟಿಗೆಲಿ ಮಡಗಿರೆ ಆತು.
ಕಾಲ ಹೋದ ಹಾಂಗೆ ಟೇಪ್ರೆಕಾರ್ಡಿನ ಕಾಲ ಕಳಾತು, ಬೇರೆಂತೆಂತೋ ಬಂತು.
ಸೀಡಿಯೋ, ಚಪಾತಿಯೋ – ಎಂತೆಲ್ಲ ಆಗಿ ಒಪ್ಪಣ್ಣಂಗೆ ಸಂಗೀತ ಕೇಳುಲೂ ಅರಡಿಯದ್ದ ನಮುನೆ ಆಗಿ ಹೋತು!
ಈಗ ಎಂತದೋ ಐಪೋಡೋ – ಮರುಳು – ಹೊಡಿಬುರುಡೆಯಷ್ಟಕೆ ಇದ್ದು, ಮಾಷ್ಟ್ರುಮಾವನ ಮಗಳ ಕೈಲಿ ಒಂದಿದ್ದು.
ಚುಬ್ಬಣ್ಣನ ಕೈಲಿ ಇಪ್ಪ ಮೊಬೈಲಿಲಿಯೇ ಪದ ಬತ್ತು, ಬೇರೆ ಹೊಡಿಬುರುಡೆ ಯೇವದೂ ಬೇಡ ಇದಾ!
ಇರಳಿ, ಎಂತಿದ್ದರೂ – ಅದರ್ಲಿ ಬಪ್ಪದು ಸಂಗೀತವೇ ಇದಾ!
ಚೇ, ಮಾತಾಡ್ಳೆ ಹೆರಟು ಎಲ್ಲೆಲ್ಲಿಗೋ ಹೋವುತ್ತು ಒಂದೊಂದರಿ..

~

ಹ್ಞಾ.. ಮಾಷ್ಟ್ರುಮಾವನಲ್ಯಾಣ ಕೇಸೆಟ್ಟು ಕಟ್ಟ,
ಅದರ್ಲಿ ಹಲವೂ ಕೇಸೆಟ್ಟುಗೊ ಇದ್ದತ್ತು; ಬಾಲಮುರಳಿ, ಸುಬ್ಬಮ್ಮಜ್ಜಿ, ಚೆಂಬೈ ಅಜ್ಜ – ಇತ್ಯಾದಿಗೊ.
ಅದೆಲ್ಲ ಇದ್ದರೂ – ಒಂದು ಕೇಸೆಟ್ಟಿನ ಮಾಂತ್ರ ಬಹು ವಿಶೇಷ ಸಂಗತಿಯಾಗಿ ಒಪ್ಪಣ್ಣಂಗೆ ನೆಂಪೊಳುದ್ದು.
ಅದುವೇ ಹಿಗ್ಗಿನ್ಸು ಭಾಗವತರದ್ದು!!

ಒಂದಿನ, ಹೊತ್ತೋಪಗ – ಚಳಿಗಾಲ ಹಿಡುದ್ದೋ, ಅಲ್ಲ – ಮಳೆಗಾಲವೇ ಇದ್ದತ್ತೋ ಸರೀ ನೆಂಪಿಲ್ಲೆ.
ಹೊತ್ತೋಪಗಾಣ ಚಾಯದ ಹೊತ್ತು.
ಕುಡಿಯಲೆ ಎಂತದೋ ಕಷಾಯವೂ, ತಿಂಬಲೆ ಎಂತದೋ ಮುರ್ಕೂ ಇದ್ದತ್ತು ಮಾಷ್ಟ್ರುಮಾವನಲ್ಲಿ.
ಒಪ್ಪಣ್ಣ ಹೋದ್ಸಕ್ಕೆ ಮಾಡಿದ್ದಲ್ಲ, ಅಲ್ಲದ್ದರೂ ಇರ್ತಿತ್ತು.
ಹಾಂಗೆ, ಹೊತ್ತೋಪಗಾಣ ಕಾಪಿ ಕುಡ್ಕೊಂಡಿಪ್ಪಾಗ – ಮಾಷ್ಟ್ರುಮಾವನ ದೊಡ್ಡಮಗ ಕೇಸೆಟ್ಟು ಹಾಕಲೆ ಸುರುಮಾಡಿದ°.
ಅದರ್ಲಿ ಶೃತಿ ಸರಿ ಮಾಡ್ಳೆ ಹೇದು ಎಂತೂ ಇಲ್ಲೆನ್ನೆ, ಸುಚ್ಚು ಹಾಕಿದ ಕೂಡ್ಳೇ ಸುರುಮಾಡ್ತು ಟೇಪ್ರೆಕಾರ್ಡು ಪದಹೇಳುಲೆ – ಇದುದೇ ಸುರುಮಾಡಿತ್ತು..

ಹ್ಮ್….ಯ್ಯೆಂದ…ವ್ರೋ…ಮಾ –

ತ್ಯಾಗರಾಜರ ಎಂದರೋ ಮಹಾನುಭಾವುಲು ಪದ್ಯ ಮುಂದುವರುದತ್ತು ಚೆಂದಕ್ಕೆ…
ಹಾಡುಗಾರಿಕೆದು ಬಹು ಇಂಪಾದ ಸ್ವರ, ಆದರೆ ರಜಾ ಕೊಂಞೆ!
ಉಚ್ಛಾರ ಹೇಂಗೇ ಇರಳಿ, ಪದಕ್ಕೆ ಏನೂ ತೊಂದರೆ ಇಲ್ಲೆ.

ಪೂರ್ತ ಮುಗುದ ಮತ್ತೆ ಮೆಲ್ಲಂಗೆ ಮಾ.ಮಾ.ದೊ.ಮಗನ ಹತ್ತರೆ ಕೇಳಿದೆ – ಹೆಡ್ಡು ಕ್ಲೀನು ಸರಿ ಆಗದ್ದದೋ, ಅಲ್ಲ ಈ ಪದ್ಯ ಹೇಳ್ತ ಜೆನಕ್ಕೆ ಕೊಂಞೆ ಇದ್ದೋ? – ಹೇದು.

ಅಷ್ಟಪ್ಪಗ ಅವ ಹೇಳಿದ – ಓ, ಇದು ಭಾರತದ್ದು ಅಲ್ಲ, ಅಮೇರಿಕದ್ದು. ಇಲ್ಲಿ ಬಂದು ಇಲ್ಯಾಣ ಸಂಗೀತ ಕಲ್ತು ಹೇಳಿದ್ದು. ಅಮೇರಿಕದ ಅಭ್ಯಾಸ ಉಚ್ಛಾರಲ್ಲಿ ಗೊಂತಾವುತ್ತು ರಜ ರಜ – ಹೇದು!
ಗ್ಲಾಸಿಲಿ ಕುಡಿಸ್ಸು ಮುಗುದು ಕೆಳ ಬಂದದೇ ನೆಂಪಿಲ್ಲೆ ಒಪ್ಪಣ್ಣಂಗೆ!!

~

ಹಿಗ್ಗಿನ್ಸ್ ಭಾಗವತರು - ಜಾನ್.ಬಿ.ಹಿಗ್ಗಿನ್ಸ್
ಹಿಗ್ಗಿನ್ಸ್ ಭಾಗವತರು – ಜಾನ್.ಬಿ.ಹಿಗ್ಗಿನ್ಸ್

ಜಾನ್ ಹಿಗಿನ್ಸ್:

ಹೆಸರು ಕೇಳಿರೇ ನವಗೆ ಅರಡಿತ್ತು, ಇದೊಂದು ಸೋಜ – ಹೇದು.
ಅದೂ, ಇಲ್ಯಾಣ ಸೋಜ ಅಲ್ಲ – ಅಮೇರಿಕದ್ದು. ಸೋಜ ಮಾಂತ್ರ ಅಲ್ಲ, ಸೋಜಿಗವೂ ಅಪ್ಪು!
ಇಲ್ಲಿ ಭಾರತಲ್ಲೇ ಹುಟ್ಟೇಕಾದ ಜೆನ, ಬ್ರಹ್ಮಂಗೆ ತಪ್ಪಿ ಅಲ್ಲಿ ಹುಟ್ಟಿದ್ದು – ಹೇದು ಶಂಕರಿ ಅತ್ತೆ ಯೇವಗಳೂ ಹೇಳುದಿದ್ದು.
ಅಷ್ಟು ದೂರಲ್ಲಿ ಹುಟ್ಟಿ ಭಾರತೀಯ ಸಂಗೀತ ನೃತ್ಯ ಸಾಹಿತ್ಯಂಗಳ ಅಭಿರುಚಿ ಬೆಳೆಶೆಂಡ ಮಹಾ ಪುಣ್ಯಾತ್ಮ ಈ ಜೆನ.

ಅಪ್ಪು, 1939ರಲ್ಲಿ ಹುಟ್ಟಿದ್ಸಡ.
ಹೆಚ್ಚುಕಮ್ಮಿ ಆಚಮನೆ ದೊಡ್ಡಪ್ಪನ ಪ್ರಾಯ.
ಅಮೇರಿಕಲ್ಲೇ ಇದ್ದುಗೊಂಡು ಅಮೇರಿಕದ ಸಂಗೀತ ಕಲ್ತತ್ತು.
ಅಷ್ಟಪ್ಪಗ ಯೇವದೋ ಒಂದು ಶುಭಗಳಿಗೆಲಿ, ಹೇಂಗೋ ಏನೋ, ಭಾರತಲ್ಲಿಪ್ಪ – ಕರ್ನಾಟಕ ಶಾಸ್ತ್ರೀಯ ಸಂಗೀತದ ಬಗ್ಗೆ ಗೊಂತಾತು ಅದಕ್ಕೆ.
ಪೆಟ್ಟಿಗೆ ಕಟ್ಟಿಂಡು ಸೀತಾ ಎತ್ತಿತ್ತು, ಭಾರತಕ್ಕೆ.
ಬಂದು ಇಳುದ್ದೆಲ್ಲಿ, ಚೆನ್ನೈಭಾವನ ಊರಿಲಿ – ಅಂಬಗಾಣ ಮೆಡ್ರಾಸಿಲಿ.
ರಂಗನಾಥನ್ – ಹೇದು ಆರೋ ದೊಡ್ಡ ಸಂಗೀತ ವಿದ್ವಾಂಸರಿತ್ತಿದ್ದವಡ, ಅವರ ಕೈಲಿ ಕಲಿಯಲೆ ಸುರುಮಾಡಿತ್ತು.
ಸಾ-ಪಾ-ಸಾ…

ಮನಸ್ಸಿಲಿ ಆಸಕ್ತಿ, ಮೈಲಿ ಶಕ್ತಿ – ತುಂಬಿದ್ದ ಕಾರಣ ಬೇಗಬೇಗ ಕಲಿಯಲೂ ಎಡಿಗಾತು.
ಶೃತಿಸ್ಥಾನ, ರಾಗವಿದ್ಯೆ, ತಾಳಜ್ಞಾನ – ಎಲ್ಲವೂ ಬೇಗ ಬಂದಪ್ಪದ್ದೇ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೇರೆಬೇರೆ ಗುರುಗಳ ಸಂಪರ್ಕ ಮಾಡಿತ್ತು.
ಅಗಾಧ ಜ್ಞಾನ ಸಂಪಾದನೆ ಮಾಡಿಗೊಂಡತ್ತು.

ಈ ಜ್ಞಾನದ ಪ್ರತಿಫಲನವಾಗಿ ಸಂಗೀತ ಕಛೇರಿಗಳ ಕೊಟ್ಟು ಸಹಸ್ರಾರು ಸಂಗೀತಾಭಿಮಾನಿಗಳ ಹೃದಯ ಗೆದ್ದತ್ತು.
ಅವಕ್ಕೆ ಬರೇ ಲಾಟುಪೋಟು ಸಿನೆಮ ಪದ್ಯಂಗಳ ಅಲ್ಲ, ಅತ್ಯಂತ ಕ್ಲಿಷ್ಟವಾದ ಪರಿಪೂರ್ಣರಾಗಂಗಳ ಕೀರ್ತನೆಗಳನ್ನೂ ಹಾಡ್ಳೆಡಿತ್ತು – ಹೇದು ತಿಳುಶಿ ತೋರ್ಸಿತ್ತು.
ಭಾರತದ ಹಲವು ವಿದ್ವಾಂಸರ ಎದುರು ಯಶಸ್ವಿಯಾಗಿ ಕಛೇರಿ ಕೊಟ್ಟು ಜೈ ಜೈ ಸೈ ಸೈ ಹೇಳುಸಿಗೊಂಡತ್ತು ಈ ಹಿಗ್ಗಿನ್ಸು.

ಓಯಿ, ಕಛೇರಿ ಕೊಟ್ಟತ್ತು ಅಲ್ಲದೋ- ಕಛೇರಿ ಹೇಂಗೆ?
ರೂಪತ್ತೆಯ ಮಗ ಆಪೀಸು ಕಛೇರಿಗೆ ಹೋದ ಹಾಂಗೆ ಪೇಂಟಂಗಿ ಹಾಕಿಂಡು ಅಲ್ಲ;
ಇಲ್ಯಾಣ ಖಾಸಾ ಅಯ್ಯರಿ ಅಯ್ಯಂಗಾರಿಗೊ ಸಂಗೀತಕ್ಕಪ್ಪಗ ಹೇಂಗಿಕ್ಕು, ಅದೇ ನಮುನೆ ಬೆಳಿ ಒಸ್ತ್ರ, ಬೆಳಿ ಉದ್ದಂಗಿ, ಮೋರೆಲಿ ಒಂದು ದೊಡ್ಡ ಬೊಟ್ಟು – ಎಲ್ಲವುದೇ ಇದ್ದುಗೊಂಡ ಪರಿಪೂರ್ಣ ಸನಾತನಿಯಾಗಿ ಕಛೇರಿ ಕೊಟ್ಟುಗೊಂಡಿದ್ದತ್ತಡ.
ಆ ವೇಷ- ಭೂಷಣ ಕಂಡ ಎಲ್ಲೋರುದೇ ಇದರ “ಹಿಗ್ಗಿನ್ಸು ಭಾಗವತರು” ಹೇಳಿಯೇ ಒಪ್ಪಿಗೊಂಡಿತ್ತಿದ್ದವಾಡ.

~

ಸಂಗೀತ ಮಾಂತ್ರ ಅಲ್ಲದ್ದೆ, ಬರತನಾಟ್ಯವನ್ನೂ ಅಧ್ಯಯನ ಮಾಡಿತ್ತು ಈ ಜೆನ.
ಅಪರೂಪದ ಸಾಧಕ – ಹೇದು ಆರಾರು ಪರಿಚಯ ಲೇಖನ ಬರದ್ದವೋ ನವಗರಡಿಯ; ಅಂತೂ ಅದು ಅಧ್ಯಯನ ಮಾಡಿದ ವಿಷಯಂಗಳ ಅದುವೇ ಬರದತ್ತು !
ಪ್ರಬಂಧವ ಅಮೇರಿಕದ ಒಂದು ವಿಶ್ವ ವಿದ್ಯಾಲಯಕ್ಕೆ ಕೊಟ್ಟತ್ತು. ಎರಡು ಪದವಿ, ಒಂದು ಸ್ನಾತಕೋತ್ತರ ಪದವಿಯೂ ಅದರದ್ದಾತು.

~

ಅಮೇರಿಕಕ್ಕೆ ಹೋದ ಮತ್ತೆಯೂ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಶುವ ಕಾರ್ಯಕ್ಕೆ ಕೈ ಹಾಕಿತ್ತು. ಅದರದ್ದೇ ಆದ ಬಳಗ ಒಂದರ ಕಟ್ಟಿಗೊಂಡತ್ತು.
ಅಂಬಗ ಇನ್ನೂ ಟೇಪ್ರಿಕಾರ್ಡು ಬತ್ತಷ್ಟೇ, ಆ ಸಮೆಯಲ್ಲೇ ಅಮೆರಿಕದ ಹಲವು ಪ್ರಕಾಶಕರ ಮೂಲಕ ಕರ್ನಾಟಕ ಶಾಸ್ತ್ರೀಯ ಸಂಗೀತದ ಕೇಸೆಟ್ಟುಗಳ ಮಾರುಕಟ್ಟೆಗೆ ಬಪ್ಪಹಾಂಗೆ ಮಾಡಿತ್ತು.
ಒಟ್ಟಿಲಿ ನೋಡ್ತರೆ, ಪೂರ್ವಲ್ಲಿಪ್ಪ ಭಾರತವ ಅಪೂರ್ವವಾಗಿ ಪಶ್ಚಿಮಕ್ಕೆ ಪರಿಚಯಿಸಲೆ ಆ ಭಗವಂತನೇ ಬಂದ ಹಾಂಗೆ ಆತು!

~
ಇಪ್ಪತ್ತಮೂರು ಒರಿಶಲ್ಲಿ ಅಮೇರಿಕದ ವಿದ್ಯಾಭ್ಯಾಸ ಸಂಪೂರ್ಣ, ಮತ್ತೆ ಭಾರತಕ್ಕೆ, ಭಾರತಲ್ಲಿ ಸಂಗೀತ ಸಾಧನೆ,
ಮೂವತ್ತೊಂಭತ್ತಕ್ಕೆ ಸಂಗೀತ ಕಲ್ತು ಒಪಾಸು ಅಮೇರಿಕಲ್ಲಿ,
ಅಲ್ಲಿಂದ ನಲುವತ್ತೈದರ ಒರೆಂಗೆ ಅಮೇರಿಕಲ್ಲಿ ಭಾರತದ ಸಂಗೀತ ಕುರಿತಾಗಿ ಪ್ರಚಾರ – ಪ್ರಸಾರ.

1984 ಕ್ಕೆ, ಹೇದರೆ – ಹಿಗ್ಗಿನ್ಸು ಭಾಗವತರ ನಲುವತ್ತೈದರಲ್ಲಿ, ನೆಡು ಪ್ರಾಯಲ್ಲಿ – ಒಂದು ಕಾರು ಹೆಟ್ಟಿದ ಅಪಘಾತಲ್ಲಿ ಅಕಾಲವಾಗಿ ತೀರಿಗೊಂಡತ್ತಾಡ!
ಸಾವ ಪ್ರಾಯ ಅಲ್ಲ. ಇನ್ನೂ ಬದ್ಕಿ ಬಾಳಿ, ಬೆಳಗಿ, ಪ್ರಸಾರಿಸೇಕಾದ ಪ್ರಾಯ.
ಒಂದು ವೇಳೆ ಈಗ ಇದ್ದಿದ್ದರೆ ಬೌಶ್ಷ ಹತ್ತೆಪ್ಪತ್ತೈದು ಒರಿಶ!
ಅದರ ಅಗಲುವಿಕೆ ಹೇದರೆ ಇಡಿಯ ಭಾರತೀಯ ಸಂಗೀತ ಲೋಕಕ್ಕೇ ದೊಡ್ಡ ನಷ್ಟ – ಹೇದು ಮಾಷ್ಟ್ರುಮಾವ ಯೇವತ್ತೂ ಹೇಳುಗು.

~

ಆ ಹಿಗ್ಗಿನ್ಸು ಭಾಗವತರ ಅಸ್ತಂಗತ ಆದ್ಸು ದಶಂಬ್ರ 7ಕ್ಕೆ ಆಡ.  ಹಾಂಗೆ, ಬೈಲಿಲಿ ಒಂದರಿ ನೆಂಪುಮಾಡುವೊ – ಹೇದು.

ಸಂಗೀತವ ಇಷ್ಟ ಪಟ್ಟು ಕೇಳಿತ್ತು.
ಕೇಳಿ ಕೇಳಿ ಕಲ್ತತ್ತು.
ಕಲ್ತು ಕಲ್ತು ಹಾಡಿತ್ತು.
ಹಾಡಿ ಹಾಡಿ ಹಿಗ್ಗಿತ್ತು.
ಹಾಡಿದ್ದರ ಹಿಡುದು ನವಗೆಲ್ಲೋರಿಂಗೂ ಕೇಳುಸಿತ್ತು,
ನಾವುದೇ ಆ ಹಾಡುಗಳ ಕೇಳಿ ಹಿಗ್ಗಿತ್ತು.
ಇದು ಹಿಗ್ಗಿನ್ಸು ಭಾಗವತರ ಬಗ್ಗೆ ನಾಲ್ಕೇ ಮಾತಿಲಿ ಹೇಳೇಕಾದ ಕ್ರಮ. ಅಲ್ಲದೋ?

ಇರಳಿ.
ನಮ್ಮ ಸಂಸ್ಕೃತಿ, ವೇದ, ಪುರಾಣ, ಸಂಗೀತ, ನೃತ್ಯ – ಎಲ್ಲವನ್ನುದೇ ಆಳಕ್ಕಿಳುದು ಅಭ್ಯಾಸ ಮಾಡಿರೆ ಇಡಿಯ ಲೋಕಕ್ಕೇ ಗುರು ಅಪ್ಪಷ್ಟು ಸತ್ವ ಇದ್ದು.
ಹಿಗ್ಗಿನ್ಸು ಕೇವಲ ಸಂಗೀತಕ್ಕೆ ಮಾಂತ್ರ ಸೀಮಿತವಾಗಿದ್ದು, ಅಷ್ಟರ ಅವರ ಊರಿಲಿ ಪರಿಚಯಿಸಿ ಸಂಗೀತ ಸರಸ್ವತಿಯ ಸೇವೆ ಮಾಡಿ ಕೃತಾರ್ಥ ಆಯಿದು.

ಮುಂದೆಯೂ, ಹಲವು ವಿಭಾಗವ ಪರಿಚಯಿಸುವ ಹಲವಾರು ಹಿಗ್ಗಿನ್ಸುಗೊ ಬರಳಿ,
ಭಾರತದ ಭವ್ಯ ಪರಂಪರ ಇಡಿಯ ಲೋಕಲ್ಲೇ ಹಿಗ್ಗುವ ಹಾಂಗೆ ಮಾಡಲಿ, ಅಲ್ಲದೋ?
ಹಿಗ್ಗಿನ್ಸು ಭಾಗವತರ ಮಹತ್ಕಾರ್ಯಕ್ಕೆ ವಂದನೆ, ಪುಣ್ಯತಿಥಿಯ ದಿನ ಪುಣ್ಯ ಸ್ಮರಣೆ.

~

ಒಂದೊಪ್ಪ: ಹಿಗ್ಗಿನ್ಸಿನ ಆಸಕ್ತಿ ಕೇಳಿರೆ ನಮ್ಮ ಮನಸ್ಸೇ ಹಿಗ್ಗುತ್ತು!

~

ಸೂ:

  • ಹಿಗ್ಗಿನ್ಸ್ ನ ಬಗ್ಗೆ ರಜಾ ವಿವರ ಇಪ್ಪ ಜಾತಕಪುಟ: ಸಂಕೊಲೆ 1 , ಸಂಕೊಲೆ 2
  • ಹಿಗ್ಗಿನ್ಸ್ ನ ಕೆಲವು ಪದ್ಯಂಗಳ ಇಲ್ಲಿ ಕೇಳುಲಕ್ಕು: (ಕೃಪೆ: ಅಂತರ್ಜಾಲ)

11 thoughts on “ತಾನೂ ಹಿಗ್ಗಿ, ಕೇಳುಗರನ್ನೂ ಹಿಗ್ಗುಸಿದ ಹಿಗ್ಗಿನ್ಸ್ ಭಾಗವತರು..

  1. ಇ೦ತಹ ಮಹಾನುಭಾವರ ಬಗ್ಗೆ ಬರದ ಶುದ್ದಿ ಓದಿ ಕೊಶಿ ಆತು. ಶುದ್ದಿ ಓದದ್ದೆ ಪದ್ಯ ಕೇಳಿದರೆ ಇವು ವಿದೇಶಿಯರು ಹೇಳಿ ಗೊ೦ತೇ ಆಗ. ಒ೦ದೆರಡು ಕಡೆಲಿ ಎಲೆ ಬಾಯಿಲಿ ತು೦ಬಿಸಿ ಹೇಳಿದಾ೦ಗಿದ್ದಷ್ಟೇ.ಅದು ನಗಣ್ಯ.

  2. ಹಿಗ್ಗಿನ್ಸ್ ಭಾಗವತರು ‘ಮಹಾನು ಭಾವಲು’!

  3. ಲೇಖನ ಒಳ್ಳೆದಿದ್ದು. ಅದರೆ ‘ಅದು ಇದು ಕಲ್ತತ್ತು ಗೊಂತಾತು ಅದಕ್ಕೆ ‘ ಹೇಳುವ ನಪುಂಸಕ ಪದ ಪ್ರಯೋಗ ಓದಲೇ ಕಿರಿಕಿರಿ ಆವುತ್ತು ಅದೂ ‘ಹೆಚ್ಚುಕಮ್ಮಿ ಆಚಮನೆ ದೊಡ್ಡಪ್ಪನ ಪ್ರಾಯದ ಒಬ್ಬರು ಸಾಧಕರ ಬಗ್ಗೆ ಹೇಳುವಾಗ. ನಮ್ಮ ಭಾಷೇಲಿ ಹೆಮ್ಮಕ್ಕಳ ಮತ್ತೆ ಅಬ್ರಾಹ್ಮಣರ ಬಗ್ಗೆ ಹೇಳುವಾಗ ನಪುಂಸಕ ಪದ ಪ್ರಯೋಗ ಹಿಂದಿಂದಲೇ ಇದ್ದು. ಆದರೆ ಅದರ ತಿದ್ದುವ ಪ್ರಯತ್ನ ಪ್ರಯತ್ನ ವಿದ್ಯಾವನ್ತರಿಂದ ಆಯೆಕ್ಕು. ‘ಒಪ್ಪಣ್ಣ’ ಬಳಗಂದಲೇ ಅದು ಸುರುವಾಗಲಿ

  4. ಜಾನ್ ಹಿಗ್ಗಿನ್ಸ್ ಮಾಹಿತಿ ಮಾತು ಕೃಷ್ಣಾ ನೀ ಬೇಗನೆ ಬಾರೋ ..ಕೇಳಿ ಮನಸ್ಸು ಗರಿಗೆದರಿತ್ತು ,ಇಷ್ಟು ಒಳ್ಳೆ ವಿಚಾರ ತಿಳಿಸಿದ್ದಕ್ಕೆ ಒಪ್ಪನ್ನಂಗೆ ಧನ್ಯವಾದಂಗ

  5. ಒಳ್ಳೆ ಶುದ್ದಿ, ಒಳ್ಳೆ ಸಂಗೀತ. ಬೆಳ್ಳೆಕ್ಕಾರ ಆದರೂ ಭಾರತೀಯ ಸಂಸ್ಕೃತಿಯ ಮೈಗೂಡಿಸೆಂಡು ಸಂಗೀತಲ್ಲಿ ಹೆಸರು ಪಡದ್ದದು ಕೇಳಿ ಕೊಶೀ ಆತು. ನಲುವತ್ತೈದರ ಪ್ರಾಯಲ್ಲೇ ಗತಿಸಿಹೋದ್ದದು ಕೇಳಿ ಬೇಜಾರುದೆ ಆತು.
    ಈ ಸಮೆಲಿ ಒಂದು ವಿಶಯ ಒಪ್ಪಣ್ಣಂಗೆ ತಿಳುಸದ್ದೆ ಎನ್ನ ಮನಸ್ಸು ಕೇಳ್ತಿಲ್ಲೆ. ಆನು ಸಣ್ಣದಾಗಿಪ್ಪಗ ಮೂಡಂಬೈಲು ಶಾಸ್ತ್ರಿಗಳ ಭಾಗವತಿಕೆ ಕಂಡು, ಈ ಅಮೇರಿಕದ ಜೆನ ಎಷ್ಟು ಚೆಂದಕೆ ಭಾಗವತಿಕೆ ಮಾಡ್ತವು ಹೇಳಿ ಗ್ರೇಶಿದ್ದದು ನಿಜ.
    ಮುಳಿಯ ಭಾವಯ್ಯ ಮನಗೆ ತರಕಾರಿ ತೆಕ್ಕೊಂಡು ಹೋಪಲೆ ಮರದಪ್ಪಗ ಬಲಿಪ್ಪನ ಯಕ್ಷಗಾನ ಪದ ಕೇಳ್ತದು ಕೇಳಿ ಅಪ್ಪಗ, ಒಳ್ಳೆ ಕೆಣಿಯಾನೆ, ಹೇಳಿ ನೆಗೆ ಬಂತು.
    ನೀ ಹೇಳಿದ ಈಗಾಣ ಹೊಡಿ ಬುರುಡೆ ಒಳ ಎಂತೆಲ್ಲ ಮಡಗಲೆಡಿತ್ತು ಅಲ್ದೊ ಒಪ್ಪಣ್ಣ.

  6. ಒೞೆ ಮಾಹಿತಿ. ಅ೦ತರಜಾಲ೦ದ ಸುಮಾರು ಪದ ಕೇಳಿದೆ ಹಿಗ್ಗಿನ್ಸ್ ಅವರದ್ದು. ನಿಜಕ್ಕೂ ಮನಸ್ಸು ಹಿಗ್ಗಿತ್ತು. ಅವರ ಅಭಿಮಾನಿ ಆಗಿಬಿಟ್ಟೆ.
    ಧನ್ಯವಾದ ಒಪ್ಪಣ್ಣ ಇಷ್ಟು ಒೞೆ ಸುದ್ದಿ ಕೊಟ್ಟದಕ್ಕೆ.

  7. ಜೋನ್ ಹಿಗ್ಗಿನ್ಸ್- ಹಿಗ್ಗಿನ್ಸ್ ಭಾಗವತರಾದ ಕತೆ ರೋಚಕವಾಗಿದ್ದು.
    {… ಬೆಳಿ ಒಸ್ತ್ರ, ಬೆಳಿ ಉದ್ದಂಗಿ, ಮೋರೆಲಿ ಒಂದು ದೊಡ್ಡ ಬೊಟ್ಟು – ಎಲ್ಲವುದೇ ಇದ್ದುಗೊಂಡ ಪರಿಪೂರ್ಣ ಸನಾತನಿಯಾಗಿ…} -> ಪೇಂಟಂಗಿ ಹಾಕ್ಯೊಂಡಿತ್ತ ಹಿಗ್ಗಿನ್ಸ್ ಭಾರತೀಯ ಪರಂಪರೆಯ ಒಪ್ಪಿಗೊಂಡು ಅನುಸರಿಸಿತ್ತು.ಆದರೆ ನಮ್ಮ ಪರಂಪರೆಲಿ ಹುಟ್ಟಿ ಬೆಳದ ಬುದ್ಧಿ ಜೀವಿಗೊ “ಬೊಟ್ಟು” ಹಾಕುದೆಲ್ಲ ಮೂಢ ನಂಬಿಕೆ ಹೇಳುಗು. ಈ ಬುದ್ಧಿಜೀವಿಗಳ ಅಸಂಬದ್ಧ ಪ್ರಲಾಪದೆಡೆಲಿ ಹಿಗ್ಗಿನ್ಸಿನ ಕತೆ ಒಂದು ಹೊಸ ಆಶಾಕಿರಣವ ತೋರ್ಸುತ್ತು.

  8. ಅದ್ಭುತ ಸ೦ಗೀತವ ಕೇಳಿಸಿದ್ದಕ್ಕೆ, ಉತ್ತಮ ಲೇಖನವ ಬರದ್ದಕ್ಕೆ ಒಪ್ಪಣ್ಣ೦ಗೆ ಧನ್ಯವಾದ.

  9. ಶುದ್ಧಿಯ ಓದಿಕ್ಕಿ ಪದ ಕೇಳಿದ ಮತ್ತೆ ಹೇಳ್ಳೆ ಬಾಕಿ ಇಪ್ಪದು -> ಅದ್ಭುತ! ಅದ್ಭುತ!!

    ಭಗವದ್ಗೀತೆಲಿ ಭಗವಂತ° ಹೇದ್ದು ಒಂದು ನೆಂಪಾತು – ನಾವು ಕಾಂಬ ವ್ಯಕ್ತಿ ಎಂತ ಆಗಿದ್ದನೋ ಅದು ಅವನೇ ಆಗಿರ. ಅವನ ಮೂಲ ಸ್ವರೂಪ ಬೇರೆಯೇ ಆಗಿಕ್ಕು. ವ್ಯಕ್ತಿ ತನ್ನ ಮೂಲಸ್ವರೂಪ ಆಧಾರಲ್ಲಿ ಕೆಲಸ ಮಾಡ್ತದು. ಪ್ರಕೃತಿ ಪರಿಸರ ಅವನ ಸ್ವಭಾವವ ಗುರುತುಸದ್ದೆ ವಿಪರೀತಕ್ಕೆ ತಳ್ಲಲ್ಪಡುತ್ತ. ಮುಂದೊ ಒಂದು ದಿನ ಅವನ ನಿಜಸ್ವರೂಪ ಸ್ಫೋಟ ಆವ್ತು !!

    ಹಿಗ್ಗಿಜ್ಜನ ಚೇತನಕ್ಕೆ ನಮೋ ನಮಃ ಹೇಳ್ಳೇ ಬೇಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×