Oppanna.com

ಶಸ್ತ್ರ ಮೂಲಕ ಶಾಸ್ತಿ ಮಾಡಿದ ಶಾಸ್ತ್ರೀಜೀ..

ಬರದೋರು :   ಒಪ್ಪಣ್ಣ    on   03/10/2014    3 ಒಪ್ಪಂಗೊ

ದೊಡ್ಡಭಾವ ಮೊನ್ನೆ ಇದರೆಡಕ್ಕಿಲಿ ಉತ್ತರಭಾರತಕ್ಕೆ ಹೆರಟದು ನಿಂಗೊಗೆಲ್ಲ ಅರಡಿಗು ಅಲ್ದೋ? ಅಯೋಧ್ಯಾ, ಮಥುರಾ, ಕಾಶೀ – ಎಲ್ಲಾ ನೋಡಿಗೊಂಡು ಪುಣ್ಯಪಾವನರಾವುತ್ತಾ ಇದ್ದವು. ರಜ್ಜ ಪುಣ್ಯ ನಮ್ಮ ಬೈಲಿಂಗೂ ಸಿಕ್ಕುಗನ್ನೇ – ಹೇಳ್ತದು ಒಪ್ಪಣ್ಣನ ಕೊಶಿಗೆ ಒಂದು ಕಾರಣ.
ಅದಿರಳಿ.
ಮೊನ್ನೆ ಅವು ಹೆರಟಪ್ಪಗ ’ಯೇವದೆಲ್ಲ ಊರುಗೊ ನೋಡ್ಳಿದ್ದು ದೊಡ್ಡಭಾವಾ?’ ಕೇಟೆ. ಅದಕ್ಕೆ ಅವು ಸುಮಾರು ಊರುಗಳ ಪಟ್ಟಿ ಹೇಳಿದರೂ, ಅದರ್ಲಿ ಮುಖ್ಯವಾಗಿ ನೆಂಪೊಳುದ್ದು ವಾರಣಾಸಿ. ಅಪ್ಪು, ವಾರಣಾಸಿ ಹೇದರೆ ನಮ್ಮ ಭಾರತ ದೇಶದ ಸಾಂಸ್ಕೃತಿಕ ರಾಜಧಾನಿ. ದೇಶದ ಜೀವನದಿ ಗಂಗೆ ಅಲ್ಲಿ ಹರಿತ್ತು ಹೇಳ್ತದು ದೊಡ್ಡ ಕೊಶಿಯ ಸಂಗತಿ ಆದರೆ, ಆ ಊರಿನ ಹಿಂದೆ ನಮ್ಮ ಅಜ್ಜಂದ್ರ ಲಾಗಾಯಿತು ಶ್ರದ್ಧಾಭಕ್ತಿಲಿ ನಂಬಿಗೊಂಡಿದವು ಹೇಳ್ತದು ಇನ್ನೊಂದು ವಿಷಯ. ಅದೇ ನಂಬಿಕೆಲೇ ದೊಡ್ಡಭಾವನೂ ಅಲ್ಲಿಗೆ ಹೋದ್ಸು ಇದಾ! ಅದಿರಳಿ.
ವಾರಣಾಸಿ ಹೇಳುವಾಗ, ಆ ಊರು ಭಾರತಕ್ಕೆ ಕೊಟ್ಟ ಕೊಡುಗೆಗೊ ಎಂತೆಲ್ಲ ಹೇದು ಗ್ರೇಶಿ ಹೆಮ್ಮೆ ಅನುಸುತ್ತು. ಆ ಊರು ಭಾರತಕ್ಕೆ ಕೊಟ್ಟ ಅಮೂಲ್ಯ ಸೊತ್ತುಗಳಲ್ಲಿ – ಇಂದು ನಾವು ನೆಂಪು ಮಾಡಿಗೊಳೇಕಾದ ಮಹನೀಯರೂ ಒಬ್ಬರು. ಅವ್ವೇ- ಶಾಸ್ತ್ರೀಜಿ.

~
ಬೈಲಿಲಿ ಎಲ್ಲ ಶಾಸ್ತ್ರಿ ಹೇದರೇ ಈಗ ಉರುದು ಬೀಳ್ತವು; ಅಂಥಾದ್ದರ್ಲಿ ಇವು ಒಬ್ಬರು ಅಭಿಮಾನದ ಶಾಸ್ತ್ರಿಗೊ. ಅವ್ವೇ, ನಮ್ಮ ಸ್ವತಂತ್ರ ಭಾರತದ ಎರಡ್ಣೇ ಪ್ರಧಾನಿ – ಲಾಲ್ ಬಹದೂರು ಶಾಸ್ತ್ರಿ.
ವಾರಣಾಸಿಯ ರಾಮನಗರ ಹೇಳ್ತಲ್ಲಿ ಶಾರದಾ ಪ್ರಸಾದ್ ಶ್ರೀವಾಸ್ತವ, ರಾಮ್ ದುಲ್ಹಾರಿ ದೇವಿ – ಹೇಳ್ತ ಕಾಯಸ್ಥ ಬ್ರಾಹ್ಮಣ ದಂಪತಿಗೆ ಮೂರು ಜೆನ ಮಕ್ಕೊ – ಇಬ್ರು ಕೂಸುಗೊ, ಒಬ್ಬ ಮಾಣಿ. ಮಾಣಿಯ ಹೆಸರೇ ಲಾಲ್ ಬಹದ್ದೂರ್. ಮಕ್ಕೊ ಸಣ್ಣ ಇಪ್ಪಾಗಳೇ ಶಾರದಾ ಪ್ರಸಾದರು ತೀರಿಗೊಂಡವು. ಮತ್ತೆಂತ ಮಾಡುಸ್ಸು –  ಅಪ್ಪನ ಮನೆಗೆ ಬಂದು, ಮಕ್ಕೊಗೆ ಓದುಸುವ ಜೆಬಾದಾರಿಕೆ ತೆಕ್ಕೊಂಡವು ಆ ಅಮ್ಮ. ಮಾಣಿ ಅಸಾಧಾರಣ ಪಾಂಡಿತ್ಯವ ಹೊಂದಿ ಕಾಶೀ ವಿದ್ಯಾಪೀಠಲ್ಲಿ ಪದವಿ ಪಡಕ್ಕೊಂಡ, ಆ ಪದವಿ – ಅಂಬಗಾಣ “ಶಾಸ್ತ್ರೀ” ಪದವಿ. ಹಾಂಗೆ, ಮುಂದೆ ಆ ಮಾಣಿಯ ಹೆಸರು “ಲಾಲ್ ಬಹದೂರ್” ಒಟ್ಟಿಂಗೆ “ಶಾಸ್ತ್ರಿ” ಸದಾಕಾಲ ಒಟ್ಟಿಂಗೇ ಇಪ್ಪ ಹಾಂಗಾತು.

ಕಲಿವ ಕಾಲಲ್ಲೇ ಈ ಶಾಸ್ತ್ರಿಗೊಕ್ಕೆ ದೇಶದ ಸ್ವಾತಂತ್ರ್ಯದ ಬಗ್ಗೆ ವಿಶೇಷ ಒಲವು. ಬಾಲ ಗಂಗಾಧರ ತಿಳಕರ ಸ್ವರಾಜ್ಯ ಚಳುವಳಿ, ಗಾಂಧೀಜಿಯ ಅಸಹಕಾರ ಚಳುವಳಿ ಎಲ್ಲವುದೇ ಸೇರಿ ಶಾಸ್ತ್ರಿಗೊಕ್ಕೆ ಸ್ವಾತಂತ್ರ ಹೋರಾಟಲ್ಲಿ ಭಾಗವಹಿಸುವ ಮಹದಾಶೆ ಬಂತು. ಆ ಲೆಕ್ಕಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹಾರಿ, ಹಲವಾರು ಸರ್ತಿ ಜೈಲಿಂಗುದೇ ಹೋಯಿದವಾಡ.

ಸುರೂವಿಂಗೆ, ಇನ್ನೂ ಬಾಲಕ ಆಗಿಪ್ಪಾಗ ಗಾಂಧಿಯ “ಅಸಹಕಾರ ಚಳುವಳಿ”ಗೆ ಸೇರಿ ಜೈಲಿಂಗೆ ಹೋದವಾಡ. ಪ್ರಾಯ ಸಣ್ಣ ಆದ ಕಾರಣ ಬೇಗ ಬಿಟ್ಟವು ಜೈಲಿಂದ. ಅಲ್ಲಿಂದ ಮತ್ತೆ ಗಾಂಧೀಜಿಯ ಉಪ್ಪಿನ ಸತ್ಯಾಗ್ರಹಲ್ಲಿ ಸೇರಿ ಹೋರಾಡಿದ್ದಕ್ಕೆ ಎರಡೂವರೆ ವರ್ಷ ಜೈಲಿಂಗೆ ಹೋಯೇಕಾಗಿ ಬಂತಡ. ಹಾಂಗೆ ಜೈಲಿಂದ ಬಂದಪ್ಪದ್ದೇ, ಸ್ವಾತಂತ್ರ್ಯ ಹೋರಾಟದ ಆಯೋಜನೆಲಿ ಧುಮುಕಿ, ಸಿಕ್ಕಿಬಿದ್ದದಕ್ಕೆ ಮತ್ತೆ ಪುನಾ ಜೈಲಿಂಗೆ ಹೋದವಾಡ. ಅಂತೂ ಇಂತೂ ದೇಶಸೇವೆಗೆ ಬೇಕಾಗಿ ಒಟ್ಟು ಒಂಭತ್ತೊರಿಶ ಜೈಲುವಾಸ ಅನುಭವಿಸಿದ ಮಹನೀಯ ಈ ಶಾಸ್ತ್ರೀಜಿ ಆಗಿದ್ದವಾಡ. ಈ ಒಂಭತ್ತೊರಿಶ ಅಂತೇ ಗುಡಿಹೆಟ್ಟಿ ಒರಗಿದ್ದಲ್ಲ, ಆಳವಾದ ಅಧ್ಯಯನ, ಚಿಂತನೆ ಎಲ್ಲವುದೇ ಮಾಡಿಗೊಂಡವಾಡ.

ಸ್ವಾತಂತ್ರ್ಯ ಸಿಕ್ಕಿದ ಮತ್ತೆ ಈ ಶಾಸ್ತ್ರಿಗೊ ಉತ್ತರ ಪ್ರದೇಶದ ರಾಜ್ಯರಾಜಕಾರಣಲ್ಲಿ ಸಕ್ರಿಯವಾಗಿ ಇದ್ದಿದ್ದವಾಡ. ರೈಲ್ವೇ ಖಾತೆ, ಸಾರಿಗೆ ಖಾತೆ ಇತ್ಯಾದಿಗಳಲ್ಲಿ ಜೆಬಾದಾರಿಕೆಯ ತೊಡಗುಸಿಗೊಂಡು, ಶುದ್ಧಹಸ್ತರಾಗಿ ಆಳಿಕೆ ನೆಡೆಶಿದ ಹಿರಿಮೆ ಶಾಸ್ತ್ರಿಗಳದ್ದು.

ಮುಂದೆ ಕೇಂದ್ರ ಸರ್ಕಾರದ ಆಡಳ್ತೆಲಿ ಇವರ ಭಾಗೀದಾರಿಕೆ ಬೆಳದತ್ತು. ಅವರ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಇದ್ದಿದ್ದ ಇವಕ್ಕೆ ರೈಲ್ವೇ ಖಾತೆ ಕೊಟ್ಟು ಬೆನ್ನು ತಟ್ಟಿದವು ಅಂಬಗಾಣ ಹೆರಿಯವು. ಎಲ್ಯೋ ಒಂದಿಕ್ಕೆ ರೈಲು ಅಪಘಾತ ಆದ್ದಕ್ಕೆ ನೈತಿಹ ಹೊಣೆ ಹೊತ್ತು ಅವು ರಾಜಿಪತ್ರ ಕೊಟ್ಟೇ ಬಿಟ್ಟವಾಡ. ಮಂತ್ರಿಸ್ಥಾನ ಹೇದರೆ ಏನೇನೂ ಮೋಹ ಇದ್ದತ್ತಿಲ್ಲೆ ಅವಕ್ಕೆ – ಹೇದು ಆಚಮನೆ ದೊಡ್ಡಪ್ಪ ಒಂದೊಂದರಿ ಹೇಳಿಗೊಂಡಿತ್ತಿದ್ದವು.

ಅವು ರೈಲ್ವೇ ಮಂತ್ರಿಯಾಗಿ ಇದ್ದಿದ್ದದು ನೆಹರುವಿನ ಆಡಳ್ತೆಲಿ. ನಲುವತ್ತೇಳರಿಂದ ಅರುವತ್ತ ನಾಲ್ಕರ ವರೆಗೂ ಪ್ರಧಾನಿಯಾಗಿದ್ದ ನೆಹರು, ಅರುವತ್ತ ನಾಲ್ಕರ ಮೇಷಾ ತಿಂಗಳಿಲಿ ತೀರಿದ ಮತ್ತೆ ಖಾಲಿ ಆದ ಪ್ರಧಾನ ಪಟ್ಟವ ಅಲಂಕರುಸುವ ಮಹತ್ತರ ಜೆಬಾದಾರಿಕೆ ಶಾಸ್ತ್ರೀಜಿಗೆ ಬಂತು.ಅಷ್ಟನ್ನಾರ ನೆಹರುವಿನ ಹತ್ತರೆ ಇದ್ದಿದ್ದ ಕೀಲಿಕೈ ಏಕಾಏಕಿ ಶಾಸ್ತ್ರಿಗಳ ಕೈಗೆ ಬಂತು. ಒಟ್ಟಿಂಗೆ, ನೆಹರುವೇ ಉಂಟುಮಾಡಿದ್ದ ಕಾಶ್ಮೀರ ಸಮಸ್ಯೆ. ಅದಲ್ಲದ್ದೇ ದೇಶಲ್ಲಿ ಇದ್ದಿದ್ದ ಬಡತನವೂ ಇದ್ದನ್ನೆ ಹೇಂಗಾರು!

ಅದೆಲ್ಲದರ ಒಟ್ಟಿಂಗೇ, ಇನ್ನೊಂದು ಪೆಡಂಬೂತ –  ಪಾತಕಿಸ್ಥಾನ.
~
ಶಾಸ್ತ್ರಿಯ ಬಗ್ಗೆ ಹೇಳ್ತರೆ, ಈ ಒಂದು ಸಂಗತಿಯ ಬಿಟ್ಟಿಕ್ಕಲೇ ಎಡಿಯ. ನೆಹರು ಇಪ್ಪನ್ನಾರವೂ ಕಾಲುಕೆರದು ಜಗಳಕ್ಕೆ ಬಂದುಗೊಂಡಿದ್ದ ಪಾತಕಿ, ಭಾರತದ ಪ್ರಧಾನಿ ಬದಲಾದ ತಕ್ಷಣ ಸಿಕ್ಕಿದ್ದೇ ಅವಕಾಶ ಹೇದು ಜಗಳಕ್ಕೆ ಬಂತು. ಕಾಶ್ಮೀರಕ್ಕೆ ಸೇನೆ ನುಗ್ಗುಸಿ ಆಕ್ರಮಣ ಮಾಡ್ಳೆ ನೋಡಿತ್ತು. ಆದರೆ, ಇದು ನೆಹರುವಿನ ಹಾಂಗಿಪ್ಪ ’ಮಾತುಗಾರ’ ಪ್ರಧಾನಿ ಅಲ್ಲ, ’ಕೃತಿಗಾರ’ ಪ್ರಧಾನಿ. ಕಾಶ್ಮೀರಲ್ಲಿ ಪಾತಕಿ ಸೇನೆ ನುಗ್ಗಿತ್ತು ಹೇದು ಗೊಂತಾತು ಶಾಸ್ತ್ರಿಗೊಕ್ಕೆ, ಎಂತ ಮಾಡುದು? ವಿಶ್ವಸಂಸ್ಥೆಗೆ ದೂರು ಕೊಡುದೋ? ಕಾಶ್ಮೀರಕ್ಕೆ ಸೇನೆ ಕಳುಸುದೋ? ಎಂತ ಮಾಡಿರೂ – ಇನ್ನೊಂದು ರಜ ಸಮಯ ಹಿಡಿತ್ತು, ಅಷ್ಟಪ್ಪಗ ಅದಾಗಲೇ ತಡವಾತು, ಇನ್ನು ಕಾದರೆ ಕಾಶ್ಮೀರ ಇಡೀ ಹೋಕು.

ಕುಂಞಿಬಾಬೆ ಮದ್ದು ಕುಡಿಯಲೆ ಬಾಯಿ ಒಡೆಯದ್ದರೆ ಮಾಷ್ಟ್ರುಮನೆ ಅತ್ತೆ ಎಂತ ಮಾಡುಸ್ಸು ಗೊಂತಿದ್ದೋ?ಮೂಗು ಒತ್ತಿ ಹಿಡಿವದು. ಅಷ್ಟಪ್ಪಗ ಬಾಯಿ ಒಡೆಯದ್ದೆ ಒಳಿತ್ತವೇ ಇಲ್ಲೆ. ಹಾಂಗೇ, ಕಾಶ್ಮೀರಲ್ಲಿ ಉಪದ್ರ ಕೊಡ್ತರ ನಿಲ್ಲುಸೇಕಾರೆ – ಪಂಜಾಬಿನ ಹತ್ತರೆ ಸೈನ್ಯ ನುಗ್ಗುಸಿದ್ದು. ಹೋಗಿ, ನಿಂಗೊಗೆ ಎಡಿಗಾಷ್ಟು ಹಿಡೀರಿ – ಹೇದು ಸಂಪೂರ್ಣ ಅಭಯ ಸೈನ್ಯಕ್ಕೆ ಕೊಟ್ಟವು. ಪ್ರಧಾನಿಗಳ ಆದೇಶ ಕಂಡು ಸೈನ್ಯಕ್ಕೆ ಅತ್ಯುತ್ಸಾಹ, ಅತಿ ಆನಂದವೂ ಆತು. ಇಷ್ಟು ದಿನ ಕೂಗಿಂಡೇ ಕೂದ್ಸು, ಈಗ ಒಪಾಸು ಬಡಿವ ಸೌಭಾಗ್ಯ. ಹಾಂಗೆ,ಪಾಕಿಸ್ಥಾನದ ಒಳಂಗೆ ನುಗ್ಗಿತ್ತು ಭಾರತ ಸೇನೆ. ಹೋದವು, ಹೋದವು – ಲಾಹೋರಿನ ಒರೆಂಗೆ ಎತ್ತಿತ್ತು ಭಾರತ ಸೈನ್ಯ.
ಕಾಶ್ಮೀರಲ್ಲಿ ಯೇವದೇ ಪ್ರತಿರೋಧ ಇಲ್ಲದ್ದ ಭಾರತದ ಬಗ್ಗೆ ಹೆಮ್ಮೆಲಿ ಇದ್ದಿದ್ದ ಪಾಕಿಸ್ಥಾನಕ್ಕೆ ಅಂಬಗ ಆದ್ದದು ಗಾಬೆರಿ.
ಚೆಲಾ, ಇದು ನೆಹರುವಿನ ಹಾಂಗಲ್ಲ. ಈಗ ಬಡಿವಲೆ ಹೆರಟ್ರೆ ನವಗೂ ಬೀಳ್ತು  – ಹೇಳ್ತ ಸತ್ಯ ಅವಕ್ಕೆ ಅರಡಿಗಾತು.
ಲಾಹೋರಿನ ಭಾರತ ಗೆದ್ದತ್ತು, ಬಿಟ್ರೆ ಇಡೀ ಪಾಕಿಸ್ಥಾನ ನಿರ್ನಾಮ ಆವುತ್ತು ಹೇದು ಅನುಸಿದ ಪಾತಕಿ ಅವ್ವಾಗಿ ಬಂದು ಕಾಶ್ಮೀರವ ಕೊಟ್ಟು ಕೈಮುಗುದು ಹೋದವು.

~

ಅದರಿಂದ ಒಂದೊರಿಶ ಮದಲು ನೆಹರು ಇಪ್ಪಾಗ ನೆಡದ ಭಾರತ-ಚೀನಾ ಯುದ್ಧಲ್ಲಿ ಭಾರತ ಹೇಳಹೆಸರಿಲ್ಲದ್ದೆ ಸೋತಿತ್ತು. ಇದರಿಂದಾಗಿ ಪಾತಾಳಕ್ಕಿಳುದ ಆತ್ಮಶೆಗ್ತಿ ಈಗ ರಜಾ ಮೇಲೆ ಹೋಪ ಹಾಂಗಾತು.
ಅಷ್ಟನ್ನಾರ ಜೈ ಹಿಂದ್  – ಹೇದು ಮಾಂತ್ರ ಕೇಳಿಗೊಂತಿತ್ತಷ್ಟೆ. ಈಗ ಮತ್ತೆರಡು ಸೇರ್ಸಿದವು ಶಾಸ್ತ್ರಿಗೊ: “ಜೈ ಜವಾನ್, ಜೈ ಕಿಸಾನ್”  – ಹೇದು.
ಸೈನಿಕರಿಂಗೂ, ಕೃಷಿಕರಿಂಗೂ ನಮಸ್ಕಾರಂಗೊ – ಹೇಳ್ತ ಅರ್ಥಲ್ಲಿ.  ದೇಶ ಕಾವ ಸೈನ್ಯವೂ, ಊಟ ಕೊಡುವ ರೈತರೂ – ಈ ದೇಶದ ಅವಿಭಾಜ್ಯ ಅಂಗ ಹೇದು ಅಂಬಗಳೆ ಮನವರಿಕೆ ಆಗಿದ್ದತ್ತು ಶಾಸ್ತ್ರಿಗೊಕ್ಕೆ.

~

ನಮ್ಮದೇ ಆದ ಕಾಶ್ಮೀರ ನವಗೇ ಸಿಕ್ಕಿತ್ತು ಸರಿ.

ಆದರೆ ಒಂದು ಯುದ್ಧ ಆತಿಲ್ಯೋ? ಅನಗತ್ಯ ಖರ್ಚುಗೊ ಬಂತಿಲ್ಯೋ? ಅಷ್ಟೆಲ್ಲ  ಸೌಕರ್ಯ ಭಾರತಕ್ಕೂ ಇದ್ದತ್ತಿಲ್ಲೆ. ಖಜಾನೆ ತುಂಬುಲೆ ಎಂತ ಉಪಾಯ? ಹೆರ ಹೋಗಿ ಸಾಲಕೇಳುಲಕ್ಕು, ಆದರೆ ಹಾಂಗೆ ಮಾಡಿರೆ ನಮ್ಮ ಸ್ವಾತಂತ್ರಕ್ಕೆ ಧಕ್ಕೆ ಬತ್ತು. ಅದಕ್ಕಾಗಿ ’ಭಾರತೀಯರೆಲ್ಲರೂ ಸೋಮವಾರ ಇರುಳಾಣ ಊಟ ಬಿಡಿ’ – ಹೇದು ಒಂದು ವಿಶೇಷ ಕರೆ ಕೊಟ್ಟವಾಡ. ಆಬಾಲವೃದ್ಧಾತುರರಿಂಗೆ ಕಷ್ಟ ಆದರೂ, ದೇಶಭಕ್ತ ಎಷ್ಟೋ ಜೆನ ಊಟಬಿಟ್ಟವಡ. ಇದರಿಂದಾಗಿ ಹೆಚ್ಚಲ್ಲದ್ದರೂ – ರಜ್ಜ ಉಪಕಾರ ಆತು. ಅಷ್ಟು ಮಾಂತ್ರ ಅಲ್ಲ, ಉಪವಾಸಲ್ಲಿ ಒರಗುವಾಗ ಚಿಂತನೆಗೊ ಜೋರಾವುತ್ತಾಡ; ಮಾಷ್ಟ್ರುಮಾವ ಹೇಳುಗು. ಹಾಂಗೆ ಭಾರತದ ಬಗ್ಗೆ ಚಿಂತನೆಯೂ ಬೆಳದತ್ತಾಯಿಕ್ಕು. ಅಲ್ಲದೋ?

~

ಅರುವತ್ತೈದರಲ್ಲಿ ಭಾರತ ಗೆದ್ದು ಭಾರತವಾಸಿಗಳ ಆತ್ಮಶೆಗ್ತಿ ಏಳುಸಿದ ಮಹನೀಯರ ಬಗ್ಗೆ ಒಂದೇ ಒಂದು ಭ್ರಷ್ಟಚಾರ, ದುರುಪಯೋಗ ಆರೋಪ ಇಲ್ಲೆ. ಸದಾ ಶುದ್ಧ ಹಸ್ತರು, ಪ್ರಾಮಾಣಿಕರು ಆಗಿ ಇದ್ದ ಹೆರಿಮೆ ಶಾಸ್ತ್ರಿಗಳದ್ದು. ಭಾರತಕ್ಕೆ ಅತೀ ಬೇಕಾದ ಹಾಂಗಿಪ್ಪ ಕಾರ್ಯವೈಖರಿ ಶಾಸ್ತ್ರಿಗಳದ್ದು. ಹೀಂಗಿಪ್ಪ ಶಾಸ್ತ್ರಿಗಳ ಒಂದರಿ “ಪಾಕಿಸ್ಥಾನದ ಒಟ್ಟಿಂಗೆ ನಿಂಗಳ ಜಗಳದ ಬಗ್ಗೆ ಮಾತಾಡುವೊ, ಬನ್ನಿ” – ಹೇದು ದಿನಿಗೆಳ್ತವು ತಾಷ್ಕೆಂಟಿಂಗೆ. ಮೂರ್ನೇ ದೇಶಲ್ಲಿ ಮಾತಾಡುದು ಅಲ್ದೋ – ಧೈರ್ಯಲ್ಲಿ ಹೆರಟವು. ಆದರೆ? ಶಾಸ್ತ್ರಿಗೊ ಹೋದವು ಬೈಂದವೇ ಇಲ್ಲೆ. ಇರುಳು ಉಂಡಿಕ್ಕಿ ಒರಗಿದವು ಎದ್ದಿದವೇ ಇಲ್ಲೆ. ಒರಗುವಾಗ ಸಂಪೂರ್ಣ ಆರೋಗ್ಯವಂತರಾಗಿ ಇದ್ದಿದ್ದವು, ಮರದಿನ ಏಳುವಾಗ ಮೈಚರ್ಮ ಎಲ್ಲ ಕಪ್ಪುಗಟ್ಟಿತ್ತಾಡ – ವಿಷಪ್ರಾಶನದ ಹಾಂಗೆ. ಆದರೆ “ಶಾಸ್ತ್ರೀಜಿ ಹೃದಯಾಘಾತದಲ್ಲಿ ಮೃತಪಟ್ಟಿದವು” – ಹೇದು ಅಧಿಕೃತ ಶುದ್ದಿ ಮಾಡಿದವಾಡ. ಅದರ ಹಿಂದೆ ಎಂತ ಇದ್ದೋ – ಆರಿಂಗೂ ಅರಡಿಯ. ಭಾರತದ ಸರ್ಕಾರವೂ ಅದರ ಬಗ್ಗೆ ಹೆಚ್ಚಿನ ತಲೆಖರ್ಚು ಮಾಡಿಗೊಂಡಿದಿಲ್ಲೆ ಅಡ.

~

ಅಂತಾ ಧೀಮಂತ ವೆಗ್ತಿ ಹದ್ನೇಳು ತಿಂಗಳು ಭಾರತವ ಆಳ್ವಿಕೆ ಮಾಡಿದ್ದವು; ನೆಹರು ಹದ್ನೇಳು ಒರಿಶ ಆಳ್ವಿಕೆ ಮಾಡಿ ಗಳುಸಿಗೊಂಡ ಹೆಸರಿಂದ ಹೆಚ್ಚಿನ ಹೆಸರು ಭಾರತೀಯರ ಮನಮನೆಲಿ ಪಡಕ್ಕೊಂಡವು. ಕಷ್ಟದ ಮನೆಂದ ಬಂದು ಸ್ವಂತ ಇಚ್ಛಾಶೆಗ್ತಿಲಿ ಆ ಮಟ್ಟಕ್ಕೆ ಏರಿ, ಕುಟುಂಬರಾಜಕಾರಣ, ಅನಾಚಾರಂಗಳ ಮಾಡದ್ದೆ – ಒಳ್ಳೆ ಹೆಸರು ಸಂಪಾದನೆ ಮಾಡಿಗೊಂಡ ಹಿರಿಮೆ ಈ ಶಾಸ್ತ್ರಿಗಳದ್ದು.
ಅಕ್ಟೋಬರ್ ಎರಡು – ಶಾಸ್ತ್ರಿಗೊ ಹುಟ್ಟಿದ ದಿನ.

~

ಹುಟ್ಟಿದ ದಿನ ಹೇದು ಎಂತ ವಿಶೇಷ ಕೇಳುಗು ಕೆಲವು ಜೆನ. ಆದರೆ, ಅದೊಂದು ದಿನ ನೆಂಪುಮಾಡಿಗೊಂಡ್ರೆ ತಪ್ಪಿಲ್ಲೆನ್ನೇ’ದು ಅನುಸಿ ಹೋಪದು ಒಪ್ಪಣ್ಣಂಗೆ.
ಹಾಂಗೆ, ಭಾರತದ ಆತ್ಮಶೆಗ್ತಿ ಮತ್ತೊಂದರಿ ಜಾಗೃತ ಆವುತ್ತಾ ಇಪ್ಪ ಈ ಮೋದಿಯ ಕಾಲಲ್ಲಿ ನಾವೆಲ್ಲೋರುದೇ ನೆಂಪು ಮಾಡೇಕಾದ್ಸು ಆ ಶಾಸ್ತ್ರೀಜಿಯ.

ಅವರ ಹುಟ್ಟಿದ ದಿನ ನಾವೆಲ್ಲರೂ ಅವರ ಶಕ್ತಿಯ ನೆಂಪುಮಾಡಿಗೊಂಬ. ಆಕ್ರಮಣಕ್ಕೆ ಬಂದರೆ ಶಸ್ತ್ರದ ಮೂಲಕವೇ ಶಾಸ್ತಿ ಮಾಡ್ತೆಯೊ – ಹೇಳ್ತ ಎದೆಗಾರಿಕೆ ನಮ್ಮೆಲ್ಲರಿಂಗೂ ಇರಳಿ. ಅಲ್ಲದೋ?

~
ಒಂದೊಪ್ಪ: ಶಾಸ್ತ್ರ ಹೇಳಿಂಡು ಕೂದ ಪ್ರಧಾನಿಂದ ಶಸ್ತ್ರ ಹಿಡುದ ಪ್ರಧಾನಿಯ ಬಗ್ಗೆ ಹೆಚ್ಚು ಅಭಿಮಾನ ಬತ್ತು. ಅಲ್ದೋ?

3 thoughts on “ಶಸ್ತ್ರ ಮೂಲಕ ಶಾಸ್ತಿ ಮಾಡಿದ ಶಾಸ್ತ್ರೀಜೀ..

  1. ಶಾಸ್ತ್ರೀ ಪದವಿಯ ಸ್ವಪ್ರಯತ್ನ೦ದ ಪಡದು,ಅದರ ಸಾರ್ಥಕ ಮಾಡಿದ ಮಹಾತ್ಮ ನಮ್ಮ ಲಾಲ್ ಬಹುದೂರ್ ಶಾಸ್ತ್ರೀಜಿ.ಅದು ಅವರ ಸ್ವಾರ್ಜಿತ ಆಸ್ತಿ.ಮನೆತನ೦ದಲೋ ಪಿತ್ರಾರ್ಜಿತವೋ ಅಥವಾ ವಶೀಲಿ೦ದಲೋ ಬ೦ದದಾದರೆ ಅದರ ಮಹತ್ವವ ಒಳಿಶಿಗೊ೦ಬಲಾಗದ್ದೆ ಆ ಪದವಿಗೆ ಅಗೌರವ ತಪ್ಪ ಜೆನರ ನಮ್ಮ ಸಮಾಜಲ್ಲಿ ಕಾ೦ಬ೦ಗ ಆ ಹೆಸರಿನ ಬಗ್ಗೆ ವೈರಾಗ್ಯ ಬತ್ತಿದ.ಆದರೆ ನಮ್ಮ ಲಾಲ್ ಬಹದ್ದೂರ್ ಶಾಸ್ತ್ರೀಜಿ ಆ ಪದವಿಗೆ ಬಹು ಅರ್ಥವ ತು೦ಬಿದ ಮಹಾತ್ಮ.ಇ೦ಥ ಅಪೂರ್ವ ವೆಕ್ತಿತ್ವವ ಸದಾ ನೆ೦ಪು ಮಾಡುವ ಹಾ೦ಗೆ ಬರದ ಒಪ್ಪಣ್ಣನ ಸಕಾಲಿಕ ಶುದ್ಧಿಗೆ ಹೃತ್ಪೂರ್ವಕ ಅಭಿನ೦ದನಗೊ.

  2. ಶಾಸ್ತ್ರೀಜಿ ಬಗ್ಗೆ ಬರೆದ್ದು ಲಾಯಕ ಆಯಿದು. ಶಾಸ್ತ್ರಿ ಹೇಳುವ ಹೆಸರಿಪ್ಪ ಜನಂಗೋ ಎಲ್ಲಾ ಆ ಲಾಲ್ ಬಹಾದುರ್ ಶಾಸ್ತ್ರಿಯ ಹಾಂಗೆ ಇದ್ದರೆ ಬೈಲಿನವಕ್ಕೆ ಕೋಪ ಬತ್ತಿತ್ತಿಲ್ಲೇ. ಹಾಂಗಾಗಿ ಅದರ ನೆಂಪು ಮಾಡೆಕ್ಕಾದ ಅಗತ್ಯ , ಈ ಲೇಖನದ ಸಂದರ್ಭಲ್ಲಿ ಅಗತ್ಯ ಇತ್ತಿಲ್ಲೇ.

  3. ಅಂದು ಆ ಶಾಸ್ತ್ರಿ ಶಸ್ತ್ರ ಮೂಲಕವೇ ಪಾತಕಿಗೊಕ್ಕೆ ಶಾಸ್ತಿ ಮಾಡಿಸಿದವಡ….

    ಆದರೆ, ಇಂದು “ಶಾಸ್ತ್ರಿ” ಗಳ ವಿರುದ್ದವೇ ಶಸ್ತ್ರ ಹಿಡಿಯೆಕ್ಕಪ್ಪದು ನಮ್ಮ ದುರ್ದೈವ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×