Oppanna.com

ಬಂತದ ವಿಷು ಕಣಿ!

ಬರದೋರು :   ಗೋಪಾಲಣ್ಣ    on   13/04/2011    11 ಒಪ್ಪಂಗೊ

ಗೋಪಾಲಣ್ಣ

ಗೋಪಾಲಣ್ಣನ ವಿಷುಕಣಿಯ ಆಶಯ, ಭಾಮಿನಿಲಿ.

ಮೂಡಿಬಂದಾ ಬೆಶಿಲ ಬೇಗೆಗೆ
ಬಾಡಿದಂತಾ ಮೋರೆಯೆಂತಗೆ
ಆಡಿ ಕೊಣಿವಾ ಮಕ್ಕಳೆಲ್ಲರು ಬನ್ನಿ ಈ ಕಡೆಗೆ ॥
ನೋಡಿ ವಿಷುವಿನ ಹಬ್ಬ ಬಂತದ
ಓಡಿ ತನ್ನಿರಿ ಗೋವುಸಂಪಗೆ
ಕಾಡು ಮಾವಿನ ಹಣ್ಣು,ಬೀಜದ ಹಣ್ಣು,ಹಲಸುಗಳ॥೧॥

ದೇವರೊಳ ಮಣೆಯೊಂದ ಮಡಗಿರಿ
ಧಾವಿಸುತ ಕೆಂಬಟ್ಟೆ ಹಾಸಿರಿ
ದೇವ ಮೂಡಿದರಾಗಸದಿ ತಡವಕ್ಕು ಸನ್ನಾಹ।।
ಪಾವಲಿಯ ಸರ,ಬಳೆಯ ಹರಗಿರಿ
ಬಾವಿನೀರಿನ ಎಳೆದು ಚೆಂಬಿಲಿ
ಈವಗಳೆ ತುಂಬಿಸಿರಿ, ಹಾನದ ಗಿಣ್ಣಲಿನ ಮಡಗಿ॥೨॥

ಬಾಲಕೃಷ್ಣನ,ಗಣಪದೇವರ
ಮಾಲೆ ಹಾಕಿ ಅಲಂಕರಿಸಿ ಹಿ-
ತ್ತಾಳೆ ಕಲಶವ,ದೀಪ,ಕನ್ನಾಟಿಗಳ ಇರಿಸೆಕ್ಕು॥
ಏಳುವಾಗಳೆ ಕಣಿಯ ನೋಡೆಕು,
ಕಾಲು ಕೈ ಮೋರೆಯನು ತೊಳೆಯೆಕು
ಕಾಲು ಹಿಡಿಯೆಕು ಹಿರಿಯರೆಲ್ಲರ,ದೇವರಿಗೆ ನಮಿಸಿ॥೩॥

ಕಟ್ಟಿ ಕಡೆಕೊಡಿ ಅಕ್ಕಿಯುದ್ದಿನ
ಹಿಟ್ಟು ತುಂಬಿದ ಬಾಳೆಯೆಲೆಗಳ
ಅಟ್ಟಿನಳಗೆಲಿ ಬೇಶಿದರೆ ಕೊಟ್ಟಿಗೆಯು ಆತಣ್ಣ॥
ಪುಟ್ಟಮಕ್ಕಳು,ದೊಡ್ಡವರು ಇ-
ಲ್ಲೊಟ್ಟು ಸೇರುತ ಕಾಯಿಹಾಲಿನ
ಚಟ್ಟಣಿಯ ಕೂಡ್ಯೊಂಡು ಸಂತೋಷಲ್ಲಿ ಸವಿಯೆಕ್ಕು॥೪॥

ಬಂದವಕೆ ಪಾಯಸವು,ಕೊಟ್ಟಿಗೆ
ಯಿಂದ ಸಮ್ಮಾನಿಸೆಕು ವಿಷು ದಿನ
ದಂದು ಆರೂ ಕೋಪಮಾಡಲೆ ಆಗ, ಮಾಡಿದರೆ॥
ಎಂದಿಗೂ ಇಕ್ಕಾಮನೆಲಿ ರಣ!
ಚೆಂದವೋ ಇದು ನಮ್ಮ ಧರ್ಮಕೆ
ಕುಂದು ಬಾರದ ಹಾಂಗೆ ನಡೆಯೆಕು ವರ್ಷವಿಡಿ ನಾವು!॥೫॥

11 thoughts on “ಬಂತದ ವಿಷು ಕಣಿ!

  1. ಊರಿಂಗೆ ಹೋಗಿ ಬಂದ ಮೇಲೆ ನೋಡುತ್ತಾ ಇದ್ದೆ-ನಿಂಗಳ ಎಲ್ಲರ ಅಭಿಪ್ರಾಯಕ್ಕ್ದೆ ತುಂಬಾ ಧನ್ಯವಾದ.
    ರಘು ಅಣ್ಣ ಬೆಶಿ ಕೊಟ್ತಿಗೆ ತಿಂದದು ಹೇಂಗೆ ಹೇಳಿ ಗೊಂತಾತು-ರಸಾಯನ ಹಾಕಿ ಅಪ್ಪಾಗ ತಣಿದತ್ತು ಅಲ್ಲದೊ?

  2. ಗೋಪಾಲಣ್ಣನ ಭಾಮಿನಿ ಬೈಲಿಲಿ ಹಬ್ಬವ ಇನ್ನೂ ಚೆ೦ದ ಮಾಡಿತ್ತು.ರಜಾ ತಡವಾದರೂ ಬೈಲಿನ ಎಲ್ಲಾ ಹಿರಿಯೋರ ಕಾಲು ಮುಟ್ಟಿ ನಮಸ್ಕಾರ ಮಾಡುತ್ತೆ.ನಮ್ಮ ಕ್ರಮವ ವಿಸ್ತಾರವಾಗಿ ಬರದ್ದು ನೋಡಿ ಮನಸ್ಸು ತು೦ಬಿತ್ತು, ಗೋಪಾಲಣ್ಣ.

    ವಿಷು ಕಣಿಯ ಆಚರಣೆ ಮಾಡುವ
    ವಿಷಯ ಗೋಪಾಲಣ್ಣ ಬರದು ವ
    ರುಷದ ಹಬ್ಬವ ಚೆ೦ದಮಾಡಿದವಿ೦ದು ಬೈಲಿಲಿಯೆ
    ಹಶುವು ಹೆಚ್ಚೊದರಿ೦ದ ಮದಲೇ
    ಬೆಶಿಬೆಶಿಯ ಕೊಟ್ಟಿಗೆಯ ಊರಿಲಿ
    ಕೊಶಿಲಿ ಗ೦ಸಿದೆ ಅಟ್ತಿನಳಗೆಯ ಇಳುಗುವದರೊಳವೇ !!

  3. mooDibaMdA / ಮೂಡಿಬಂದಾ…ಹೀಂಗೇಕಪ್ಪದು? ಮುದ್ರಾರಾಕ್ಷಸನೋ…

  4. ಗೋಪಾಲಣ್ಣಾ ಭಾರಿ ಚೆಂದ ಆಯಿದು ಈ ಪದ್ಯ…ರಾಗ ಬದ್ಧವಾಗಿಯೂ ಇದ್ದು…
    ಓದಿ ಖುಷಿ ಆತು..ಬೈಲಿನ ಎಲ್ಲೋರಿಂಗೂ ಶುಭಾಶಯಂಗ

  5. ಗೋಪಾಲಣ್ಣಾ..
    ಸುದ್ದಿ ಇಲ್ಲದ್ದೆ ಭಾಮಿನಿಲಿ ವಿಷುವಿನ ಶುದ್ದಿ ಹೇಳಿದ್ದು ಬಾರೀ ಕೊಶಿ ಆತು.

    ಮನೆಲಿ ಆಚರಣೆಮಾಡ್ತ ವಿವರಣೆಗೊ ಮಾತ್ರಾಬದ್ಧವಾಗಿ ಬಂದದು, ಅದರಲ್ಲಿಪ್ಪ ನೆಗೆಗೊ, ಲಯಂಗೊ -ಎಲ್ಲವೂ ಅಚ್ಚುಕಟ್ಟಾಗಿ ಜೋಡಣೆ ಆದ್ದು ಕಂಡು ಮನಸ್ಸು ತುಂಬಿ ಬಂತು.

    ಭಾಮಿನಿಯ ಚೆಂಙಾಯಿ ಮುಂದುವರಿಯಲಿ.
    ಹರೇರಾಮ

  6. ವಿಷುಕಣಿಯ ಸವಿವರವಾಗಿ ಭಾಮಿನಿಲಿ ವರ್ಣನೆ ಮಾಡಿದ ಗೋಪಾಲಣ್ಣಂಗೆ ಧನ್ಯವಾದಂಗೊ.
    ತುಂಬಾ ಚೆಂದಕೆ ಬಯಿಂದು ಕಣಿ ಕಾವ್ಯ. ಉದೀಯಪ್ಪಗ ಕಣಿ ಮಡಗಿದ್ದರ ನೋಡ್ಳೇ ಚೆಂದ. ಮನೆಯವರಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚಪ್ಪಲೆ ಒಳ್ಳೆ ಸಮಯ ವಿಷುಕಣಿ.

  7. ಧನ್ಯವಾದ.. ವಿಶು ಕಣಿ ನೋಡಿಯಾತು.. ಹಿರಿಯೋರಿಂಗೆ ಅಡ್ಡ ಬಿದ್ದೆ..ಕಿರಿಯೋರಿಂಗೆ ಆಶೀರ್ವಾದಂಗೊ.

  8. ವಿಷು ಕಣಿಯ ಹೇಂಗೆ ಮಡುಗೆಕ್ಕು, ಹಬ್ಬವ ಹೇಂಗೆ ಆಚರಿಸೆಕ್ಕು ಹೇಳ್ತದು ತುಂಬಾ ಚೆಂದಕೆ ಭಾಮಿನಿಲಿ ಒದಗಿ ಬಂತು.
    ಬೈಲಿಲ್ಲಿ ಕಾವ್ಯ ಧಾರೆ ನೋಡುವಾಗ ತುಂಬಾ ತುಂಬಾ ಕೊಶೀ ಆವ್ತು.

  9. ವಿಷು ಕಣಿ ಬೈಲಿ ಕಾಂಬಲೆ ಸಿಕ್ಕಿದ್ದು ಒಳ್ಳೆದಾತಿದು. ಈಗ ಒಂದರಿ ಓದಿದ್ದು ಮಾಂತ್ರ. ಉದಿಯಪ್ಪಗ್ಗ ಎದ್ದಾಂಗೆ ಒಂದರಿ ಕಣಿ ಲೆಕ್ಕಲ್ಲಿ ವಿವರವಾಗಿ ನೋಡೆಕ್ಕಿನ್ನು. ಒಪ್ಪ.

    ಬೈಲು ಸಮಸ್ತರಿಂಗು ವಿಷು ಶುಭಾಶಯಂಗಳು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×