Oppanna.com

ಮಾಣಿಪ್ಪಾಡಿಯ ‘ಮಾಣಿ’ಯಂಗಳೂ, ಒಪ್ಪಣ್ಣನ ಮನೆ ಜೆರಳೆಗಳೂ

ಬರದೋರು :   ಒಪ್ಪಣ್ಣ    on   24/04/2009    12 ಒಪ್ಪಂಗೊ

ಮಾಣಿಪ್ಪಾಡಿ ಗೊಂತಿದ್ದಲ್ದ? ನೆರೆಕರೆ ಎಲ್ಲ ಪರಿಚಯ ಇದ್ದರೆ ಗೊಂತಿಕ್ಕು. ಕೆಳಾಣ ಬೈಲು ಸಾರಡಿಯ ತೋಡಿಂಗೆ ಇಳುದು ಕೆಳಂತಾಗಿ ನೆಡದರೆ ಎಡಪ್ಪಾಡಿ, ಮೇಗೆ ನೆಡದರೆ ಮಾಣಿಪ್ಪಾಡಿ. ಎಂಗಳ ಊರಿಲಿ ಎಲ್ಲ ಪಾಡಿ-ಗಳೇ ಇಪ್ಪದು. ಪಾಡಿ, ಎಡಪ್ಪಾಡಿ, ಕನ್ನೆಪ್ಪಾಡಿ, ಮಾಯಿಪ್ಪಾಡಿ – ಹಾಂಗೆ ಇದೊಂದು ಮಾಣಿಪ್ಪಾಡಿ. 🙂

ಈಗಾಣ ಕಥೆ ಹೇಂಗೇ ಇರಲಿ, ಮೊದಲಾಣದ್ದು ರಜ್ಜ ಹೇಳ್ತೆ. ಮಾಣಿಪ್ಪಾಡಿಯವು ಮದಲಿಂಗೇ ದೊಡ್ಡೋರು. ಮಾಣಿಪ್ಪಾಡಿ ಸುಬ್ರಾಯಜ್ಜ° ಹೇಳಿರೆ ಇಡೀ ಊರಿಂಗೆ ಹೆರಿ ತಲೆ. ಇಬ್ರು ಮಕ್ಕೊ ಅವಕ್ಕೆ. ಶಂಕರ° ಮತ್ತೆ ಮಾಲಿಂಗ° ಹೇಳಿ. ಕೊಡೆಯಾಲಲ್ಲಿ ಇಪ್ಪ ಸ್ವಂತ ಮನೇಲಿ ಇದ್ದೊಂಡು ಕಲ್ತದು ಅವು, ಸುಬ್ಬಿ ಅಜ್ಜಿಯ ಕೈ ಅಡಿಗೆ ಉಂಡುಗೊಂಡು. ‘ಸುಬ್ಬಿ ಅಜ್ಜಿ ಕೊಡೆಯಾಲಕ್ಕೆ ಹೋದ ಹಾಂಗೆ’ ಹೇಳಿ ಗಾದೆ ಆದ್ದು ಅಂಬಗಳೇ. ಕೊಡೆಯಾಲ ಹೇಂಗಿದ್ದಜ್ಜಿ – ಕೇಳಿರೆ ‘ಅಗಾಲ ಇದ್ದು’ ಹೇಳುಗಡ. ಬಲ್ಮಟದ ಮಾರ್ಗ ಮಾಂತ್ರ ಕಂಡದು ಆ ಅಜ್ಜಿ ಹಾಂಗೆ. ಅದಿರಳಿ. ದೊಡ್ಡ ವಿದ್ಯಾಭಾಸ ಆದ ಮತ್ತೆ ಶಂಕರ (ಮಾವ°) ಡಾಕ್ಟ್ರ ಆದವು, ಮಾಲಿಂಗ ಮಾವಂಗೆ ಒಕಾಲ್ತಿಗೆ.

ಹತ್ತು-ಇಪ್ಪತ್ತು ವರ್ಷ ಹಿಂದೆಯೇ ಕೊಡೆಯಾಲಲ್ಲಿ ಎಂ.ಮಹಾಲಿಂಗ ಭಟ್ ಹೇಳಿರೆ ದೊಡ್ಡ ವಕೀಲ. ಅದು ಅಯೋಧ್ಯೆ ಗಲಾಟೆ ಆತಲ್ದ, ಅಂಬಗ ಎಂತದೋ ದಸ್ಕತ್ತು ಹಾಕಿ ಕಳ್ಸಿದ್ದವಡ ನಮ್ಮ ಊರಿಂದ. ಅಷ್ಟು ಸಾಮರ್ಥಿಕೆ. ಬೆಂಗ್ಳೂರು ಹಾಯ್ಕೋರ್ಟು ಎಲ್ಲ ಹೋಕು ಅಂಬಗಂಬಗ. ತುಂಬ ಹೆಸರು ಹೋದ ಒಕೀಲ. ಆದರೆ ಊರು ಮಾಂತ್ರ ಅಂದೇ ಬಿಟ್ಟಿದವು. ಅಣ್ಣ ಶಂಕರ ಭಟ್ರು ಬದಿಯಡ್ಕಲ್ಲೇ ದೊಡ್ಡ ಡಾಕ್ಟ್ರ. ಒಳ್ಳೆ ಕೈ ಅವರದ್ದು ಹೇಳಿ ಎಲ್ಲೋರು ಹೇಳುಗು. ಏಳುಲೇ ಎಡಿಯದ್ದ ಜೆನವುದೇ ಇವರ ಮದ್ದಿಲಿ ಮದುಮ್ಮಾಯನ ಹಾಂಗೆ ಎದ್ದು ಕೂರುಗಡ. ಮನೆಂದಲೇ ಹೋಗಿ ಬಕ್ಕು. ಕಪಿಲೆ ಬಣ್ಣದ ಚವರ್ಲೇಟು ಕಾರು ಇಕ್ಕು ಅವಕ್ಕೆ, ಪೆಟ್ರೋಲು ಹಾಕುತ್ತದು. ಮೇಗಣ ಪೇಟೇಲಿ ಸ್ವಂತ ಮಾಳಿಗೆಲಿ ಇಪ್ಪದು.

ಮುಂದೆ ಪಾಲಾತು ಅಣ್ಣ ತಮ್ಮಂಗೆ. ಜಾಗೆಲೇ ಪಾಲು ಮಾಡಿಗೊಂಡವು, 20 ಎಕರೆ ದೊಡ್ಡ ಬೈಲಿನ. ತೋಡ ಕರೆ ಆದ ಕಾರಣ ಇಬ್ರಿಂಗೂ ತೋಡು ಸಿಕ್ಕುತ್ತ ಹಾಂಗೆ. ಹಳೆ ಮನೆ, ದೇವರು ಎಲ್ಲ ಅಣ್ಣಂಗೆ ಬಂತು. ಅಣ್ಣನ ಜಾಗೆ ಚೆಂದ ಆತು. ತಮ್ಮನದ್ದು ಹಡಿಲು ಬಿದ್ದತ್ತು. ಒರಿಶಾವದಿ ಪೂಜೆಗೆ ಬಂದು ಸೇರುಗು, ಅಷ್ಟೇ.

ನೋಡ್ಲೆ ಕಷ್ಟ ಆವುತ್ತು ಹೇಳಿ ಗೇಣಿಗೆ ಮಡಗಿದ°. ಡಿಕ್ಲರೇಷನು ಬಂದ ಸಮಯಲ್ಲಿ ಗೇಣಿಯವರ ಹತ್ತರೆ ಜಗಳ ಮಾಡಿ ಬಿಡುಸಿಗೊಂಡ°. ಹೀಂಗೆ ಇದ್ದರೆ ಕಷ್ಟ ಹೇಳಿ ಮಾರ್ತ ಏರ್ಪಾಡು ಮಾಡಿದ°. ಇವ° ಹೇಳ್ತ ಕ್ರಯಕ್ಕೆ ಅಣ್ಣ ದೊಡ್ಡ ಆಸಕ್ತಿ ತೋರ್ಸಿದ್ದ°ಯಿಲ್ಲೆ. ಹೆರಾಣೋರು ಕೆಲವು ಬಂದರೂ ಇವಂಗೆ ಹೊಂದಿಕೆ ಆಯಿದಿಲ್ಲೆ.
ಅದೇ ಸಮಯಕ್ಕೆ ಸರೀ ಆಗಿ ಗಾಡಿ ಉಸ್ಮಾನೆಯ ದೊಡ್ಡ ಮಗ° ಮಮ್ಮದೆ, ದುಬೈಗೆ ಹೋಗಿ ವಾಪಾಸು ಬಂತು. ಆರದ್ದೋ ತಲೆ ಒಡದು ಬಂದದು ಹೇಳಿ ಹೇಳುಗು, ಜೆನಂಗೊ. ಎಂತ ಹೇಳಿ ನವಗರಡಿಯ ಇದಾ! ಅಂತೂ ಇವರ ಕೊಡ್ಲಿಪ್ಪ ಜಾಗೆಗೆ ಮೆಲ್ಲಂಗೆ ಕೊಕ್ಕೆ ಹಾಕಿತ್ತು. ಪೈಸೆಯ ಬಗ್ಗೆ ಮಾಂತ್ರ ಒಲವಿದ್ದ ಕಾರಣ ಈ ಮಣ್ಣಗುಡ್ದೆಲಿ ದೊಡ್ಡ ಪೊನ್ನಂಬ್ರ ಎಂತ ಇಲ್ಲೆ ಹೇಳಿಗೊಂಡು ಸಾಮಾನ್ಯ ಕ್ರಯದ ಒಂದೂವರೆ ಪಾಲು ಪೈಸಕ್ಕೆ ಕೊಟ್ಟುಬಿಟ್ಟ°, ಉಷಾರಿ ಮಾಣಿ.

ಜೆನ ಕೂಬಗಳೇ ನಮ್ಮೋರಿಂಗೆ ವಾಸನೆ ಬೈಂದು, ಲಗಾಡಿ ತೆಗೆತ್ತು ಜಾಗೆಯ ಹೇಳಿ. ಕೂದ ವರ್ಷವೇ ಅಲ್ಲಿ ಇದ್ದ ಸಾಗುವಾನಿ, ಹಲಸು ಮರಂಗಳ ಪೂರ ಅದರ ಬಾವ, ಸೂರಂಬೈಲಿನ ಇಬ್ರಾಯಿಗೆ ಕೊಟ್ಟತ್ತು. ಮರದ ಮಿಲ್ಲು ಇದ್ದಿದಾ, ಗುಣಾಜೆ ಮಾಷ್ಟ್ರಲ್ಲಿಗೆ ತಿರುಗುತ್ತಲ್ಲಿ, ಅದಕ್ಕೆ. ಜಾಗೆ ಎಲ್ಲ ಕಾಲಿ ಆಗಿ ರಜ್ಜ ಬಿಡುಸಾಡಿ ಆದ ಮತ್ತೆ, ಅದರ ತಮ್ಮಂಗೆ ಒಂದು ಮನೆ ಕಟ್ಟಿ ಕೊಟ್ಟತ್ತು. ಕರೇಲಿ. ಮತ್ತೆ ತಂಗೆ-ಬಾವಂಗೆ ಒಂದು ಮನೆ. ಮತ್ತೆ ಅದರ ಅಪ್ಪನ ೨ನೆ ಬ್ಯಾರ್ತಿಗೆ. ಮತ್ತೆ ಅದರ ಕಚ್ಚೋಡದ ಕೆಲಸದ್ದವಕ್ಕೆ, ಒಂದೊಂದು ಹಿತ್ತಿಲು. ಅಂತೂ ಇಂತೂ ಆ 10 ಎಕ್ರೆಲಿ ಒಟ್ಟಾರೆ ಈಗ 28 ಮನೆ ಇದ್ದಡ! 30 ಆದ ಕೂಡ್ಲೇ ಒಂದು ಪಳ್ಳಿ ಆಯೆಕ್ಕಡ ಅವಕ್ಕೆ. ಮೊನ್ನೆ ಕೇರಳ ಗೊರ್ಮೆಂಟಿನ ಜೆನಂಗೊ ಬಯಿಂದವಡ. ಪಳ್ಳಿಗೆ ಜಾಗೆ ನೋಡ್ಲೆ. ಸದ್ಯಲ್ಲೇ ಒಂದು ಪಳ್ಳಿ ಕಟ್ಟೋಣ ಆವುತ್ತು, ಒಂದು ಮದ್ರಸ, ಒಂದು ಮುಕ್ರಿಯುದೆ. ಊರಿಲಿ ಆ ಬೈಲಿಂಗೆ ಮಿನಿ ಪಾಕಿಸ್ತಾನ ಹೇಳಿ ಹೆಸರು. ನಮ್ಮ ಮಾಣಿಯಂಗ ಇದ್ದ ‘ಮಾಣಿ’ಪ್ಪಾಡಿ ಈಗ ಚೆಕ್ಕಂಗಳೇ ತುಂಬಿದ್ದವು.

ಈಚ 10 ಎಕ್ರೆಲಿ ಇದ್ದ ಶಂಕರ ಮಾವಂಗೆ 5 ಜೆನ ಮಕ್ಕೊ. ದೊಡ್ದವಂದೆ, ಮೂರ್ನೆಯವಂದೆ ಬೆಂಗ್ಲೂರಡ. ಎರಡನೆಯವ ನೀರ್ಚಾಲಿಲಿ ಮಾಷ್ಟ್ರ°,ಮತ್ತೆ 2 ಕೂಸುಗೊ. ಒಂದರ ಸುಬ್ರಮಣ್ಯದ ಅತ್ಲಾಗಿ ಕೊಟ್ಟದು. ಇನ್ನೊಂದರ ಮಂಗ್ಲೂರಿಂಗೆ. ಇಡೀ 10 ಎಕರೆ ಜಾಗೆ ನೋಡಿಗೊಂಬದು ಈ ಮಾಷ್ಟ್ರಣ್ಣ ಇದಾ. ಅವಕ್ಕೂ ಈಗ ಪುರೇಸುತ್ತಿಲ್ಲೆ. ಶಾಲೆ ಕೆಲಸ, ಅದು ಇದು ಹೇಳುದರ ಎಡಕ್ಕಿಲಿ ಬಾರಿ ಕಷ್ಟ ಆವುತ್ತಾ ಇದ್ದು. ಒಂದೊಂದರಿ ಜಾಗೆ ಕೊಟ್ಟು ಪೇಟೆ ಕರೆಲಿ ಕೂಪ ಹೇಳಿ ಕಾಣುತ್ತು. ಕೊಡ್ತಾರೆ ಆ ಮಮ್ಮದೆಯೇ ತೆಕ್ಕೊಂಗು ಈಗ. ಪೈಸೆ ಎಲ್ಲಿಂದ ಹೇಳಿ ಅದಕ್ಕೆ – ಇಷ್ಟುದೆ.

ಅದಿರಳಿ,
ಒಪ್ಪಣ್ಣನ ಮನೆಲಿ ತುಂಬಾ ಜೆರಳೆಗೊ ಬಾವ°. ಹೊಸ ಮನೆ, ಮದಲಾಣ ಹಾಂಗೆ ಮುಳಿ ಅಲ್ಲ. ಬಂದವಸ್ತು ಇಪ್ಪ ಗಟ್ಟಿ ಮನೆ. ಒಕ್ಕಲಾಗಿ 2 ವರ್ಷ ಆತಷ್ಟೇ. ಜಾಸ್ತಿ ವಸ್ತುಗಳೂ ತುಂಬಿದ್ದಿಲ್ಲೆ. ಆದರೂ, ಸಿಕ್ಕಾಪಟ್ಟೆ ಜೆರಳೆಗೊ. ತಿಂಬ ವಸ್ತು ಒಂದೂ ಬಿಡ್ಸಿ ಮಡಗಲೇ ಗೊಂತಿಲ್ಲೇ, ಬಂದಾತು. ಅಟ್ಟುಂಬೊಳ ಮೇಗೆ ಮಡಗಿದ ಸಕ್ಕರೆ ಕರಡಿಗೆ Replique Montres Pas Cher ತೆಗದರೆ ಮೋರಗೆ ಒಂದು ಮುಷ್ಟಿ ಉದುರುಗು. ಬಟ್ಟಮಾವ° ಅಕ್ಷತೆಕಾಳು ಹಾಕಿದ ಹಾಂಗೆ. 🙂

ಅಮ್ಮಂಗೆ ಅಂತೂ ಬೊಡುದತ್ತು. ಒಪ್ಪಕ್ಕಂಗೆ ಜೆರಳೆ ಕಂಡರೇ ಆಗ. ಸಣ್ಣ ಇಪ್ಪಗ ಒಂದು ಜೆರಳೆ ಪಿಚಿಕ್ಕ್ ಮಾಡಿ ಬಾಯಿಗೆ ಹಾಕಿದಡ್ಡ. ಅದಕ್ಕೆ ಅಮ್ಮ ಜೆರಳೆ ಹೇಸಿಗೆ- ಜೆರಳೆ ಹೇಸಿಗೆ ಹೇಳಿ ಅಭ್ಯಾಸ ಮಾಡ್ಸಿದಡ್ಡ. ಮುಂದೆ ದೊಡ್ಡ ಆದ ಮತ್ತುದೇ ಹಾಂಗೆ ಅಭ್ಯಾಸ. ಮೀವಲೆ ಹೋದಲ್ಲಿ ಜೆರಳೆ ಕಂಡರೆ ನಾಗರ ಹಾವು ಕಂಡ ಹಾಂಗೆ ಕಿರ್ಚುಗು. ಹಾಂಗೆ, ಈಗ ತುಂಬಿದ ಜೆರಲೆಗಳ ಎಂತಾರು ಮಾಡಿ ಮುಗುಷೆಕ್ಕು ಹೇಳಿ, ಆಚಕರೆ ಮಾಣಿಯ ಹತ್ತರೆ ಹೇಳಿದೆ. ಒಂದು ಕುಪ್ಪಿ ಬದಿಯಡ್ಕ ಮೆಡಿಕಲ್ಲಿಂದ ತಂದು ಕೊಟ್ಟ°, ಒಳ ಗೇಸು ಇಪ್ಪದು. ಮದುವೆ ಮನೆ ಸೆಂಟಿನ ಹಾಂಗೆ. ಪುಸುಲ್ಲನೆ ಬಪ್ಪದು. ಅವಂಗೆ ಈ ಲೋಟನೆಗೊ ಎಲ್ಲ ಗೊಂತಿದ್ದಿದ. ಬಿಡ್ಲೆ ಹೇಳಿದ° ಬಿಟ್ಟೆ. ಮರದಿನ ಎದ್ದು ನೋಡಿರೆ ಪೂರಾ ಜೆರಳೆ ಸತ್ತು ಬಿದ್ದೊಂಡು ಇತ್ತು.

ಎಲ್ಲ ಉಡುಗಿ ಕರೆಲಿ ಕೂಡಿತ್ತಿದ್ದೆ. ಸೂರಂಬೈಲಿಂಗೆ ನೆಡಕ್ಕೊಂಡು ಹೆರಟ ಅಜ್ಜಕಾನ ಬಾವ° ಜೆಗಿಲಿಲಿ ಈ ರಾಶಿ ನೋಡಿ ಕೇಳಿದ°, ಇದರ್ಲಿ ಸುರುವಿಂಗೆ ಬಂದ ಮಮ್ಮದೆ ಯಾವದು ಬಾವ°? ಹೇಳಿ.
ಅಪ್ಪನ್ನೇ ಹೇಳಿ ಕಂಡತ್ತು ಎನಗೆ. ಸುರುವಿಂಗೆ ಕಮ್ಮಿ ಇದ್ದ ಜೆರಳೆಯ ಮುಗುಶಿದ್ದರೆ ಈಗ ಮಾಣಿಪ್ಪಾಡಿಲಿ ಆದ ಹಾಂಗೆ ಒಂದು ರಾಶಿ ಇಲ್ಲಿ ಸೇರ್ತಿತಿಲ್ಲೆ. ಅಲ್ದಾ?

ಒಂದೊಪ್ಪ: ಒಪ್ಪಣ್ಣನ ಮನೆಲಿಪ್ಪ ಮದ್ದಿಲಿ ಜೆರಳೆ ಕಮ್ಮಿ ಅಕ್ಕು, ಎಷ್ಟೋ ಮಾಣಿಪ್ಪಾಡಿಗಳಲ್ಲಿ ತುಂಬಿದ್ದರ ಹೇಂಗೆ ಬಾವ° ಕಮ್ಮಿ ಮಾಡುದು? ಛೆ.

12 thoughts on “ಮಾಣಿಪ್ಪಾಡಿಯ ‘ಮಾಣಿ’ಯಂಗಳೂ, ಒಪ್ಪಣ್ಣನ ಮನೆ ಜೆರಳೆಗಳೂ

  1. ಒಪ್ಪಣ್ಣ ಹೇಳಿದ್ದು ಮಾತ್ರ ಸಥ್ಯ ಮಾರಾಯಾ….ವಿಪರ್ಯಾಸದ ವಿಷಯ ಹೇಳಿರೆ ಮೊದಲಾದರೆ ಜೆರಳೆ ಹಿಡಿವ ಕ೦ಟ ಪುಚ್ಚೆಗಾದರೂ ಇತ್ತಿದ್ದವು.ಈಗ ಹಾ೦ಗಿಪ್ಪ ಪುಚ್ಚೆಗಳೆ ಕಾ೦ಬಲೆ ಇಲ್ಲೆ.ಇದ್ದರೂ ಅವಕ್ಕೆ ಜೆರಳೆಗ ಬೇಡ…

  2. Waaaaaav very nice, very good, super article.
    Nijavaagi aavuttha ippadara ashtu chendakke thamashe beresi thumba layika baradde mahesha.
    keep it up and keep coming more. Good Luck

  3. ಅಂಥಾ ಸ್ಪ್ರೇ ಈಗ ಬತ್ತಿಲ್ಲೆ ಭಾವ… ಹಾಂಗೊಂದು ಸ್ಪ್ರೇ ಅಲ್ಲಲ್ಲಿ ಟ್ರೈ ಮಾಡಿರೂ ಉಪಯೋಗ ಕಂಡಿದಿಲ್ಲೆ…. ಮತ್ತೆ ಇನ್ನೊಂದು ವಿಷಯ ಹೇಳಿರೆ ನಮ್ಮವುದೇ ಅಸಹಾಯಕರು ಭಾವ, ಜಾಗೆಯ ನೋಡಿಗೊಂಬಲೆ ಎಡಿಯದ್ದರೆ ಎಂಥ ಮಾಡುದು. ಆರಿಂಗಾದರು ಕೊಡೆಕ್ಕಷ್ಟೇ. ಅವರತ್ತರೆ ಪೈಸೆ ಇದ್ದು ಹೆಂಗೋ ಸಂಪಾದನೆ ಮಾಡಿದ್ದು, ತೆಕ್ಕೊಳ್ಥವು, ನಾವು ಮೈ ಹರುಂಕಿಗೊಂಬದು ಬಿಟ್ಟರೆ ಬೇರೆ ದಾರಿ ಕಾಣ್ತಿಲ್ಲೆ…. ಕಂಜಿಯ ಏಳಕ್ಕೊಂಡು ಹೋಪಗ ಅಬ್ಬೆ ದನ ನೋಡಿದ ಹಾಂಗೆ ನೋಡುದು ಬಿಟ್ಟರೆ ಬೇರೆ ದಾರಿ ಇಲ್ಲೇ.
    ಬೇಜಾರವ್ತು ಭಾವ…..
    ಒಪ್ಪಣ್ಣನ ತಿಳಿಹಾಸ್ಯದ ಬರಹಂಗೊಕ್ಕೆ ಒಂದು ಸಡನ್ ಬ್ರೇಕ್….

    1. ನೋಡಿಗೊಂಬಲೆ ಎಡಿಯದ್ದರೆ ಹೇಳುದು ನೆಪ ಅಷ್ಟೇ. ನವಗೆ ಪೈಸೆ ಅಸೆ ಹೆಚ್ಚಾಗಿ ಹೋಯ್ದು ಆನು ಹೇಳ್ತಾರೆ. ಭೂಮಿ ಯಾವುದೇ ಕಾಲಕ್ಕೂ ನಿಜವಾದ ಅಸ್ತಿ. ಅದರ ಮರವಲಾಗ. ಸಾಫ್ಟ್ವೇರ್ ಕೆಲಸ ಇಂದು ಇಕ್ಕು ನಾಳೆ ಹಾಕು ಆದರೆ ಭೂಮಿ ಯಾವ ಕಾಲಕ್ಕೂ ಇಪ್ಪ ಅಸ್ತಿ. ಅದರ ಮಾರಿ ಬೇರೆ ಕೆಲಸ ನೋಡಿದ್ದಕ್ಕೆ ನವಗೆ ಈ ಶಿಕ್ಷೆ ಈಗ. ಇಗಲಾದರು ನಾವು ಕೆಲವು ಜನ ಪ್ಲಾನ್ ಮಾಡಿ ಇನ್ನು ಕೆಲವು ವರ್ಷ ಇಲ್ಲಿ ಕೆಲಸ ಮಾಡಿ ಆಮೇಲೆ ಊರಿಲಿ ಜಾಗೆ ತೆಗದು (ಅಥವಾ ಉಳಿಶಿಕೊಂಡು) seTTle ಅಪ್ಪ ಪ್ಲಾನು ಮಾಡೆಕ್ಕು. ಇಲ್ಲಾರೆ ಉಳಿಗಾಲ ಇಲ್ಲೆನವಗೆ.

  4. ಏ ಒಪ್ಪಣ್ಣ ಭಾವಾ.. ಲಾಯ್ಕ ಬರೆದ್ದೆ.. ಮಾಪ್ಳೆ ಕತೆ ಒಂದೆರಡು ಕಡೆ ಅಲ್ಲಾ ಎಲ್ಲಾ ಕಡೆ ಅವುತ್ತಾ ಇದ್ದು ನಾವು ಎಚ್ಚೆತ್ತುಕೊಳ್ಳದಿದ್ರೆ ಭಾರೀ ಕಷ್ಟ. ಎಲ್ಲರೂ ಯೊಚ್ನೆ ಮಾಡೆಕ್ಕು ಅಲ್ದಾ.

  5. ಭಾರೀ ಲಾಯ್ಕ ಆಯಿದು ಬರದ್ದದು….ಎಲ್ಲಿಂದ ಎಲ್ಲಿಗೆ ಲಿಂಕು….!!!!
    ಒಳ್ಳೆ ಹೋಲಿಕೆ ಮಾತ್ರ…. ಜೆರಳೆಗಳ ಹಾಂಗೆಯೇ ಆ ಜನಂಗಳುದೇ… ಅಸಹ್ಯ…. ಒಂದು ಒಳ ಸೇರಿದರೆ ಮತ್ತೆ ಅವರ ದೊಡ್ಡ ಸಾಮ್ರಾಜ್ಯವೇ ಸ್ಥಾಪನೆ ಆವುತ್ತು….
    [ ಅದಕ್ಕೇ ಅಲ್ದೋ ನಮ್ಮ ಎಲ್ಲಾ ಒಪ್ಪಕ್ಕಂದ್ರಿಂಗೂ ಜೆರಳೆ ಕಂಡ್ರೆ ಆಗದ್ದದು… :-D]
    ಹ್ಮ್….. ‘ಮಾಣಿಪ್ಪಾಡಿ’, ‘ಮಾಪ್ಳೆಪ್ಪಾಡಿ’ ಆದ ಕಥೆ ಕೇಳಿ ಬೇಜಾರಾತು….
    ಹೀಂಗಾದ್ದದು ಇನ್ನೂ ಸುಮಾರಿಕ್ಕು ಅಲ್ದೊ…. 🙁

  6. ada..bere hesarugaloo iddu..ಶಿರಾಡಿ, ಬೈರಮ್ಬಾಡಿ, ಉಪ್ಪಿನಂಗಡಿ, ಬೆಳ್ತಂಗಡಿ, ..hehehe.bacchittaa?

  7. hedareda annoo..Puttakkane oppakka atha..!! neenu tension madikkada miniya…hehehe..

    andhange manippadiya hange ಪಾರೆಪ್ಪಾಡಿ, ಬರೆಪ್ಪಾಡಿ, ಮೊಡಪ್ಪಾಡಿ,ಪುಚ್ಚಪ್ಪಾಡಿ, ಅನಂತಾಡಿ, ಕುಮ್ಜತ್ತೋಡಿ, ನೆಲ್ಯಾಡಿ,ನೈತ್ತಾಡಿ , ಕುರಿಯಾಡಿ , ಕಂದ್ರಪಾಡಿ , ಇಚ್ಚಳಮ್ಪ್ಪಾಡಿ, ಬೆಟ್ಟಂಪಾಡಿ, ಕಳಯತ್ತೋಡಿ, ಕನ್ಯಾಡಿ, ಚಂದ್ರೋಡಿ, ಕೂಜೋಡಿ, ಕುಮ್ದೆಪ್ಪಾಡಿ,ಸರಪ್ಪಾಡಿ,ತೊತ್ತೆತ್ತೋಡಿ ,ಚತ್ರಪಾಡಿ ,ಪ್ಪಾಡಿ, ಸಂಪ್ಯಾಡಿ , ಮುಕ್ರಮ್ಪಾಡಿ, ತಮ್ಬಿಳಕೂಡಿ, ಕನ್ನೆಪ್ಪಾಡಿ,ಗೊರಗೋಡಿ, ಕಕ್ಕೆಪ್ಪಾಡಿ , ಬಾಲಾಡಿ, ಬಾಯಾಡಿ, ಕಾವಡಿ,ಚೊಕ್ಕಾಡಿ, ಬಮ್ದಾಡಿ, ಕೊಡಿಪ್ಪಾಡಿ,ಚಂದಪ್ಪಾಡಿ,ನೆಕ್ಕಿಲಾಡಿ, ಮಮ್ದ್ರಪ್ಪಾಡಿ , ಕೆದಂಬಾಡಿ, ಉಳೆಪ್ಪಾಡಿ, ಚಿಂದೋಡಿ,ಹೊಂನಾಡಿ,ಬದೆಕ್ಕೊಡಿ,ಕಜಮ್ಪಾಡಿ ಮಲ್ಲಿಪಾಡಿ,ಕರೋಪ್ಪಾಡಿ,ಬರೆಮ್ಪಾಡಿ, ಚಕ್ರಕೊಡಿ .. heli sumaru ಪ್ಪಾಡಿ iddu..adra budallu jirelego ikku..(adaralu ommomme aa ಪ್ಪಾಡಿ gaLa olnge nammave ಬಾಯಾಡಿ, ಬಿರುಸಾಡಿ, ಉಂಡಾಡಿ, ಬಿಡಾಡಿ jeralegala hange vartane torsuttav..)
    kelavondari ಹಿಡಿಸೂಡಿli hodadaroo saithaville.hego kalu,kai seari madigondu pusukkane tapsikoltavada.. hangappaga heengippa spraygale ayekkada.
    andhange neenu namma matha parampare,(mele bareda hange) manethanagala hesaru colect madule enthage try madlaga?adraddoo ondu series barali miniya…

  8. engala mane hodeliyoo ekkasakka jeraLego iddu bhava… maddu maaDuva jenangLe ille 🙁

  9. Superb anna..Very very good..olleya comparison..Olleolleya kathe barava capacity, jotege jagruti tappa mentality eradu ninagiddu..Good..Please continue..
    Olleya kathe..anna…adakke santhosha…Jotege nammavu madikomba moorkhatanakke ada vishadaneeya edavattugala noddare bejaravtu..
    Enatha helekko gontavtille..But Ninna maneya jirale samharaku, byarigala nadavalikegu, nammavara bejavabdarigu olle tale hakidde.. idara modale artha madikoltiddare namma bharatha indu heenge abbaparigala avasa sthana avtittille..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×