Oppanna.com

ಮತ್ತೊಂದರಿ ಬರೆಕಕ್ಕಾ ‘ಬಾಲ್ಯವಿವಾಹ’?

ಬರದೋರು :   ಒಪ್ಪಣ್ಣ    on   11/12/2009    22 ಒಪ್ಪಂಗೊ

ಒಪ್ಪಣ್ಣ ಯೇವತ್ತುದೇ ಕುಶಾಲೇ ಮಾತಾಡುದು ಹೇಳಿ ಏನೂ ಇಲ್ಲೆ.
ಕೆಲಾವು ಸರ್ತಿ ಗಾತಿ(ಗಂಭೀರ) ಮಾತಾಡುದೂ ಇದ್ದು. ಈ ಶುದ್ದಿ ಇದ್ದಲ್ದಾ, ಇದರ ಓದುತ್ತಾ ಹೋಗಿ, ಅಷ್ಟಪ್ಪಗ ಇದರ ಗಂಭೀರತೆ, ಅನಿವಾರ್ಯತೆ ಅರ್ತ ಅಕ್ಕು ನಿಂಗೊಗೇ!

ಓ ಮೊನ್ನೆ ಎಂಗೊ- ಕೆಲವೆಲ್ಲ ಚೆಂಙಾಯಿಗೊ ಸೇರಿ ಚೆರಪ್ಪುವಗ, ಆಚಕರೆಮಾಣಿ ಅವನ ನೆಂಟ್ರ ಪೈಕಿ ಒಂದು ಕೂಸಿನ ಶುದ್ದಿ ಹೇಳಿದ°. ರಜರಜ ಗೊಂತಿದ್ದರೂ, ಕೆಲವೆಲ್ಲ ಹೊಸವಿಷಯ ಬಂತು. ಕೇಳಿ ಬೇಜಾರಾತು. ನಿಂಗೊಗೂ ಬೇಜಾರಾವುತ್ತೋ ಏನೋ!

ಅದರ ಮನೆ ವಿಟ್ಳ ಸೀಮೆಲಿ ಎಲ್ಲಿಯೋ ಆಡ. ಬಾರೀ ಉಶಾರಿ ಅಡ, ಚೆಂದವುದೇ ಅಡ. ಸಣ್ಣ ಇಪ್ಪಗಳೇ!
ಸಂಗೀತವೋ, ಬರತನಾಟ್ಯವೋ, ಬಾಷಣ- ಪ್ರಬಂದವೋ, ಹೀಂಗೆ ಎಲ್ಲದಕ್ಕೂ ಸೇರುಗು. ಮಾತಾಡ್ಳೆ ಬಾರೀ ಚುರ್ಕಡ!
ಅಂದು ನೋಡಿ ಗೊಂತಿದ್ದು, ಈಗ ಕೊಡೆಯಾಲಕ್ಕೋ, ಪುತ್ತೂರಿಂಗೋ – ಸರೀ ಗೊಂತಿಲ್ಲೆ ಇವಂಗೆ, ಕೋಲೇಜಿಂಗೆ ಹೋಯ್ಕೊಂಡಿತ್ತಡ. ಈ ಒರಿಷಕ್ಕೆ ಕೋಲೇಜು ಮುಗಿತ್ತಡ.

ಧಾರೆ...

ಹೇಂಗೂ ಇದು ಅಕೇರಿ ಒರಿಷ ಅಲ್ದಾ, ಹಾಂಗೆ ಕೂಸಿಂಗೆ ಮನೆ ನೋಡ್ಳೆ(ಮದುವೆ ಸಂಬಂದ) ಸುರುಮಾಡಿದವಡ.
’ಒಳ್ಳೆ ಮನೆ ಬಂದರೆ ದಾರೆ ಎರದು ಕೊಡುದು’ ಹೇಳಿ ಯೇರ್ಪಾಡು ಮಾಡಿಗೊಂಡು ಇತ್ತಿದ್ದವು ಮಾವ°. (ಕೂಸಿನ ಅಪ್ಪ ಅಲ್ದಾ, ಬೇರೆ ಸಂಬಂದ ಹೊಳೆತ್ತಿಲ್ಲೆ, ಪಕ್ಕನೆ ಮಾವ° ಹೇಳಿ ಬಪ್ಪದಿದಾ!!!) ಸುಮಾರು ಬಂದದರ ಎಲ್ಲ ಬಿಟ್ಟವಡ, “ನಮ್ಮ ಮನೆತನಕ್ಕೆ ಸರಿ ಸೇರಿ ಬತ್ತಿಲ್ಲೆ” ಹೇಳಿಗೊಂಡು. ಸಾದಾರ್ಣದ್ದೆಲ್ಲ ಬಂದರೆ ‘ಕೂಸಿಂಗೆ ಹಿತ ಆವುತ್ತಿಲ್ಲೆ’, ‘ಕೂಸು ಒಪ್ಪಿತ್ತಿಲ್ಲೆ’, ‘ಬೆಂಗ್ಳೂರೇ ಆಯೆಕ್ಕಡ’, ‘ಕಂಪ್ಯೂಟರು (ಇಂಜಿನಿಯರು) ಆಯೆಕ್ಕಡ’, ‘ಮಾಣಿಗೆ ಅಪ್ಪಮ್ಮ(ಒಟ್ಟಿಂಗೆ) ಇಪ್ಪಲಾಗಡ’ – ಹೇಳುಗಡ ಕೂಸಿನ ಅಮ್ಮ. ತಾನು ಬಂದ ಕಷ್ಟಂಗೊ ತನ್ನ ಮಗಳಿಂಗೂ ಬೇಡ – ಹೇಳಿ ಕಂಡತ್ತೋ ಏನೋ ಆ ಅತ್ತೆಗೆ (ಕೂಸಿನ ಅಮ್ಮಂಗೆ!). ಬಂದ ಮಾತುಕತೆಗಳಲ್ಲಿ ಕೂಸಿನ ಒರೆಂಗೆ ಹೆಚ್ಚಿಂದುದೇ ಬಯಿಂದೇ ಇಲ್ಲೆ. ಅಮ್ಮಂಗೆ ಹಿಡುಸದ್ರೆ ಅಲ್ಲಿಂದಲೇ ಒಪಾಸು!
ಕೂಸು ಮಾಂತ್ರ ಯೇವ ವಿಷಯಲ್ಲಿದೇ ಇಲ್ಲೆ!!!

ಜಾತಕ ನೋಡಿ ಮದುವೆ ಅಪ್ಪದು ಹೇಳಿರೆ, ಬರೇ ಕೂಸಿಂಗೆ- ಮಾಣಿಗೆ ಮಾಂತ್ರ ಸಮಾದಾನ ಆದರೆ ಸಾಲ. ಹತ್ತರಾಣ ನೆಂಟ್ರುಗೊಕ್ಕೂ ಸಮಾದಾನ ಆಯೆಕ್ಕು. ಆ ಮಾಣಿಯ ನೆಂಟ್ರ ನೆಂಟ್ರ ನೆಂಟ್ರ ನೆಂಟ್ರಿಂಗೆ ಕುಡಿತ್ತ ಅಬ್ಯಾಸ ಇದ್ದೋ – ಹಾಂಗಾರೆ ಬೇಡ. ಆ ಕೂಸಿನ ಅಜ್ಜನ ಮನೆಯ ಅಜ್ಜನ ಮನೆಯ ಅಜ್ಜನ ಮನೆಯ ಹತ್ತರೆ ಒಂದು ಗಡಂಗು ಇದ್ದೋ? ಹಾಂಗಾರೆ ಬೇಡ!! ಹೀಂಗೆಲ್ಲ ಕೆಲವೆಲ್ಲ ಕೊಂಕುಗೊ ಇರ್ತು. ಅದೆಲ್ಲ ಇಲ್ಲಿಯುದೇ ಇದ್ದೇ ಇತ್ತು!

ಅಂತೂ ಅಕೇರಿಗೆ ಒಂದು ತಾಂಟಿತ್ತು – ಪಡ್ಳಾಗಿಯಾಣ ಮಾಣಿ – ಬೆಂಗ್ಳೂರಿಲಿ ಇಪ್ಪದಡ, ಒಬ್ಬನೇ ಮಗ, ಒಳ್ಳೆ ಸಂಬಳದ ಕೆಲಸ. ಒಳ್ಳೆ ಮನೆತನ. ಕೂಸಿನ ಅಮ್ಮಂಗೆ, ಕೂಸಿನ ಅಪ್ಪಂಗೆ, ಹತ್ತರಾಣ ನೆಂಟ್ರಿಂಗೆ – ಎಲ್ಲೊರಿಂಗೂ ಹಿತ ಅಪ್ಪ ಹಾಂಗಿಪ್ಪ ಒಂದು ಮನೆ.
ಕೂಸು ಮಾಂತ್ರ ಯೇವ ವಿಷಯಲ್ಲಿದೇ ಇಲ್ಲೆ!!!
ಜಾತಕ ಅತ್ತಿತ್ತೆ ಆತು, ಬೈಲಕರೆ ಜೋಯಿಷಪ್ಪಚ್ಚಿ ಮೂಗಿನ ಕೊಡಿಲಿ ಕನ್ನಡ್ಕ ಮಡಗಿ “ಪಾಸ್” ಮಾಡಿದವು. ಅವಂಗೆ ಕೊಡುದು ಹೇಳಿ ನಿಘಂಟು ಆತು. ಆ ಮಾಣಿ ಹೇದರೆ ನಮ್ಮ ಬೇಂಕಿನ ಪ್ರಸಾದನ ಗುರ್ತದವ ಅಡ. ಹಾಂಗಾಗಿ ಮಾಣಿಕಡೆಂದಲೂ ರಜ ಶುದ್ದಿ ಗೊಂತಾತು.

ಮಾಣಿಗೆ ಗೌಜಿಯೇ ಗೌಜಿ. ಇಷ್ಟರ ಒರೆಂಗೆ ಒಂದು ಕೂಸು ಅವನ ಬಾಳಿನ ಒಳಂಗೆ ಬಯಿಂದಿಲ್ಲೆ, ಈಗ ಬತ್ತಾ ಇದ್ದು. ದಿನ ಹೋವುತ್ತೇ ಇಲ್ಲೆ. ಮದಲಿಂಗೆ ಅವಂಗೆ ತಿಂಗಳುಗೊ ಮಾಂತ್ರ ನೆಂಪಾಯ್ಕೊಂಡು ಇದ್ದದು – ಸಂಬಳ ಬಪ್ಪಲೆ ಬೇಕಾಗಿ. ಈಗ ದಿನ ದಿನವೂ ಅಲ್ಲದ್ದೆ ಕ್ಷಣ ಕ್ಷಣವೂ ಲೆಕ್ಕ ಮಾಡ್ಳೆ ಸುರು ಮಾಡಿದ. ಇಷ್ಟ್ರಒರೆಂಗೆ ಎಲ್ಲ ’ಒಬ್ಬೊಬ್ಬಂಗೆ’ ಯೋಚನೆ ಮಾಡುದರ ಇವ ಇಬ್ರಿಂಗೆ ಅಪ್ಪ ಹಾಂಗೆ ಯೋಚನೆ ಮಾಡ್ಳೆ ಸುರು ಮಾಡಿದ. ಬಾಳಿಲಿ ಮಳೆಗಾಲದ ಚಿಗುರು!

ಕೂಸು ನೋಡಿ ಬಪ್ಪ ಶಾಸ್ತ್ರ ಮಾಡಿ ಆತು, ಜಾಸ್ತಿ ಎಂತ ಮಾತಾಡಿದ್ದವಿಲ್ಲೆ ಇಬ್ರುದೇ. ಕೂಸಿಂಗೆ ಹೊಸತ್ತರಲ್ಲಿ ಹೆದರಿಕೆ ಇರ್ತಾಯಿಕ್ಕು ಹೇಳಿ ಗ್ರೇಶಿದ ಮಾಣಿ.
ಕೂಸು ಮಾಂತ್ರ ಯೇವ ವಿಷಯಲ್ಲಿದೇ ಇಲ್ಲೆ!!!

ಬಪ್ಪ ವಾರ ಬದ್ದ!
ಹಾಂಗೆ ಬೆಂಗ್ಳೂರಿಂದ ಒಂದು ವಾರದ ಮದಲೇ ಊರಿಂಗೆ ಬಂದ.
ಊರಿಲಿ ಆದರೂ ದಿನ ಬೇಗ ಹೋವುತ್ತಾ ನೋಡ್ಳೆ! ಇನ್ನು ಬದ್ದ ಕಳುಶಿಕ್ಕಿ ಹೋಪದು ಹೇಳಿಗೊಂಡು. ಬಪ್ಪಗ ಕೂಸಿಂಗೆ ಕೊಡ್ಳೆ ಹೇಳಿಗೊಂಡು ಒಂದು ಮೋಬೈಲು ತೆಗದು ತಂದನಡ, ಸುಣ್ಣದಂಡೆಯ ಹಾಂಗೆ ಇರ್ತದು, ರಜ್ಜ ದೊಡ್ಡ ಇಕ್ಕೋ ಏನೊ! ಹೇಂಗೂ ಇವಂಗೇ ಬಪ್ಪದು ತಾನೇ, ಮದುವೆ ಆದ ಮತ್ತೆ – ಹಾಂಗೆ ಕುರೆ ಕಟ್ಟಿದ್ದಯಿಲ್ಲೆ – ಒಳ್ಳೆ ನಂಬ್ರದ್ದು, ಒಳ್ಳೆ ಕ್ರಯದ್ದು. ಈಗ ಆ ಕೂಸಿಂಗೆ ಪೋನು ಹೇಳಿ ಬೇರೆ ಇಲ್ಲೆ. ಆ ಮನೆಗೆ ಮಾಡೆಕ್ಕು. ಮಾವ ತೆಗವದು, ಅಲ್ಲದ್ರೆ ಅತ್ತೆ. ಅವರತ್ರೆ ಮಾತಾಡೆಕ್ಕು, ಮತ್ತೆ ಕೂಸಿಂಗೆ ಸಿಕ್ಕುತ್ತದು, ಮತ್ತುದೇ ಹಾಂಗೆ, ಕೂಸಿನತ್ರೆ ಮಾತಾಡುದು ಲೆಕ್ಕದ್ದೇ. ಅದಕ್ಕುದೇ ಹಾಂಗೆ ಆಯಿಕ್ಕು ಮಾತಾಡ್ಳೆಡಿಯದ್ದು ಹೇಳಿ ಗ್ರೇಶಿಗೊಂಡ. ಮೊಬೈಲು ಬಂದರೆ ಯೇವ ತೊಂದರೆಯೂ ಇಲ್ಲೆನ್ನೆ! ಬದ್ದದ್ದಿನ ಕೊಟ್ರಾತು, ಚೆಂದಲ್ಲಿ ತೆಕ್ಕೊಂಡೋಕು, ಪೈಸೆ ಬೆಂಗ್ಳೂರಿಂದ ಹಾಕುವೊ° ಹೇಳಿ ಯೋಚನೆ ಮಾಡಿಗೊಂಡು ಇತ್ತಿದ್ದ°. ಮೊಬೈಲು ತಂದ ಶುದ್ದಿ ಈಗಳೇ ಮನೆಲಿ ಹೇಳಿದ್ದ°ಯಿಲ್ಲೆ. ಮನೆಲಿ ನೆಗೆ ಮಾಡ್ಳೆ ಸುರು ಮಾಡುಗು ಹೇಳಿಗೊಂಡು. ಪಾಪ!
ಮನಸ್ಸು ಅಂತೂ ಹಿಡಿವೋರಿಲ್ಲದ್ದ ಕಂಬ್ಳದ ಗೋಣನ ಹಾಂಗೆ – ತಾರಾಮಾರಾ ಓಡುಲೆ ಸುರು ಆತು.
ಕೂಸು ಮಾಂತ್ರ ಯೇವ ವಿಷಯಲ್ಲಿದೇ ಇಲ್ಲೆ!!!

ಬದ್ದಕ್ಕೆ ಬರೇ ಆರು ದಿನ ಇಪ್ಪಗ, ಮಾಣಿಯ ಮನೆಗೆ ಪೋನು ಬಂತಡ.!
… ಹೀಂಗೀಂಗೆ..” ಹೇಳಿ ವಿಷಯ ಹೇಳುಲೆ ಕೂಸಿನ ಸೋದರಮಾವ° ಮಾಡಿದ್ದು.
’ಮದಿಮ್ಮಾಳು ಕೂಸು ೨ ದಿನಂದ ಮನೆಲಿಲ್ಲೆ. ಎಲ್ಲಿ ಹೋಯಿದು ಗೊಂತಿಲ್ಲೆ, ನೆಂಟ್ರಮನೆಲಿ ಹುಡ್ಕಿದೆಯೊ, ಚೆಂಙಾಯಿಗಳತ್ರೆ ಕೇಳಿದೆಯೊ – ಎಂತು ಗುಣ ಆತಿಲ್ಲೆ. ಕಾಣೆ ಆಯಿದು ಹೇಳಿ ಪೋಲೀಸು ಕಂಪ್ಲೇಂಟು (ಕಾಣೆಅರ್ಜಿ) ಕೊಟ್ಟಿದೆಯೊ, ನಿಂಗೊಗೂ ವಿಷಯ ತಿಳಿಸಿಗೊಂಬ ಹೇಳಿ ಮಾಡಿದ್ದು, ಏನು ಗಡಿಬಿಡಿ ಇಲ್ಲೆ, ಎಲ್ಲ ಸರಿಅಕ್ಕು. ಏ?’ – ಹೇಳಿಗೊಂಡು!!!

ಕಂಬ್ಳದ ಗೋಣಂಗೆ ಮೂಗಿನ ಬಳ್ಳಿ ಹಿಡುದ ಹಾಂಗಾತು!!!
ಮಾಣಿಗೆ ಸುಮಾರು ಆಲೋಚನೆಗೊ ಹೊಕ್ಕು ಹೆರಟತ್ತು..
ಸಂಬಂದ ಇಷ್ಟ ಇತ್ತಿಲ್ಲೆಯೋ ಆ ಕೂಸಿಂಗೆ? ಚೆ, ಹೇಳುಲಾವುತಿತಲ್ದೋ? ಒತ್ತಾಯ ಎಂತದೂ ಮಾಡಿದ್ದಿಲ್ಲೆ.
ಮೊನ್ನೆ, ಕೂಸು ನೋಡ್ಳೆ ಹೋದ ದಿನವೇ ಹಾಂಗೆ, ಮೋರೆಲಿ ಉತ್ಸಾಹ ಇತ್ತಿಲ್ಲೆ, ಅದು ನಾಚಿಗೆಯೋ ಹೇಳಿ ಗ್ರೇಶಿದ, ಪಾಪ!
ಪೋನು ಮಾಡಿಪ್ಪಗಳೂ ಹಾಂಗೆ, ಆರೋ ಮೂರ್ನೇಯವರ ಹತ್ರೆ ಮಾತಾಡಿದ ಹಾಂಗೆ ಮಾಡಿಗೊಂಡಿತ್ತು, ಅದರಿಂದ ಜಾಸ್ತಿ ಅದರ ಅಪ್ಪಮ್ಮ ಕೊಂಗಾಟಲ್ಲಿ ಮಾತಾಡಿಗೊಂಡಿತ್ತಿದ್ದವು. ಅದೇ ಆಗಿ ಪೋನು ಮಾಡ್ಳೆ ಉತ್ಸಾಹವೇ ತೋರ್ಸಿಗೊಂಡಿತ್ತಿಲ್ಲೆ!!!
ಎಂತಾದಿಕ್ಕಪ್ಪಾ?!!
“ಹೊಲಿವಲೆ ಕೊಟ್ಟದರ ತತ್ತೆ ಅಮ್ಮಾ..” ಹೇಳಿಗೊಂಡು ಮನೆಂದ ಹೆರಟದಡ. ಮತ್ತೆ ಕಾಂಬಲೆ ಸಿಕ್ಕಿದ್ದಿಲ್ಲೆ ಅಡ. ಯೇವತ್ತೂ ಹೋವುತಲ್ದ, ಹಾಂಗೆ ಆರುದೇ ದೊಡ್ಡ ಗುಮನ ಮಾಡಿದ್ದಿಲ್ಲೆ.

ಮರದಿನವೇ ನಮ್ಮೋರ ಬಾಯಿಲಿ ಅದೊಂದು ದೊಡ್ಡ ಶುದ್ದಿ ಆಗಿ ಹರಡಿತ್ತು.

ನೆರೆಕರೆ ಜೆಂಬ್ರಲ್ಲಿ, ವಿಟ್ಳಪೇಟೆಲಿ, ಬದಿಯಡ್ಕಲ್ಲಿ, ಕೆಮ್ಕಲ್ಲಿ, ಬೇಂಕಿಲಿ, ಕೋಲೇಜಿಲಿ, ಶ್ಟೋರಿಲಿ, ಅಶ್ವತ್ತ ಕಟ್ಟೆಲಿ (ಲೋಕಾಭಿರಾಮ ಮಾತಾಡುವಗ) – ಎಲ್ಲ ದಿಕ್ಕುದೇ ಇದೇ ಶುದ್ದಿ. ಗರಿಗರಿ ರೆಕ್ಕೆಗೊ ಆ ಕತೆಗೆ.
ವಿಟ್ಳ ಕೋಲೇಜಿಂಗೆ ತಿರುಗುತ್ತ ಮಾರ್ಗ ಇದ್ದಲ್ದ, ಅಲ್ಲಿ ಒಂದು ಕಪ್ಪು ಬಣ್ಣದ ದೊಡ್ಡ ಕಾರು ನಿಂದುಗೊಂಡು ಇತ್ತಡ, ಒಳ ಮೂರು ಜೆನವುದೇ. ಕೇರಳದ ನಂಬ್ರ (KL) ಅಡ ಕಾರಿಂಗೆ. ಈ ಕೂಸಿಂಗೆ ಕಾದುಗೊಂಡು ಇದ್ದದಡ. ಇದು ಬಂದು ಹತ್ತಿದ ಕೂಡ್ಳೆ ಕಾರು ಹೆರಟತ್ತು, ಪಡ್ಳಾಗಿಯಂಗೆ. ಎಲ್ಲಿಗೋ?! ಉಮ್ಮಪ್ಪ!!!
ಕೆಲವು ಜೆನ ಕಾಸ್ರೋಡಿಂಗೆ ಹೇಳ್ತವು, ಕೆಲವು ಜೆನ ಕಾಂಞಂಗಾಡಿಂಗೆ ಹೇಳ್ತವು, ಕೆಲವು ಜೆನ ಮಲಪ್ಪುರಂಗೆ ಹೇಳ್ತವು, ಕೆಲವು ಜೆನ ದುಬಾಯಿಗೆ ಹೇಳ್ತವು. ಎಲ್ಲಿಗೆ ಹೇಳ್ತದು ಚಿದಂಬರ ರಹಸ್ಯ.

ನಿತ್ಯವೂ ಗೆಜ್ಜೆ ಹಾಕಿ ಗಲಗಲ ಮಾತಾಡಿಗೊಂಡು, ನಿತ್ಯ ಇರುಳುಹೊತ್ತು ಲಲಿತಾಸಹಸ್ರನಾಮವುದೇ, ಶಾಮಲದಂಡಕವುದೇ ಓದಿಗೊಂಡು, ಮಿಂದು ಶುಚಿಯಾಗಿ ಮೋರೆಗೆ ಚೆಂದದ ಬೊಟ್ಟು ಹಾಕಿಯೋಂಡು, ತಲಗೆ ಚೆಂದಚೆಂದದ ಹೂಗು ಸೂಡಿಗೊಂಡು ನೆಗೆನೆಗೆ ಮಾಡಿ ಮಾತಾಡಿಗೊಂಡು, ಪುರುಸೊತ್ತಪ್ಪಗ ಶಾಸ್ತ್ರೀಯ ಸಂಗೀತ ಹೇಳಿಗೊಂಡು, ಬರತನಾಟ್ಯವನ್ನುದೇ ಅಬ್ಯಾಸಮಾಡಿಗೊಂಡು, ಶಾಲೆಲಿದೇ ಒಳ್ಳೆ ಮಾರ್ಕು ತೆಕ್ಕೊಂಡು ಇದ್ದ ಆ ಕೂಸು… !!
ಕೆಲವು ಸಮಯಂದ ರಜ್ಜ ಮೌನಿ ಆಗಿದ್ದರೂ, ಮನೆಮಗಳಾಗಿ ಇತ್ತು.

ಆ ಕೂಸು ಮೊನ್ನೆಂದ ಇಲ್ಲೆ, ಕೂಸಿನ ಅಪ್ಪಮ್ಮಂಗೆ ಮಾತೇ ನಿಂದಿದು, ಮನೆ ಸಂಪೂರ್ಣ ನಿಃಶಬ್ದ!
ಒಂದು ಮಗಳು ಮಾಂತ್ರ ಇದಾ, ಹಾಂಗಾಗಿ ಹೆಚ್ಚು ಭಾವನೆಗೊ.
~~

ನಿಂಗಳ ಕ್ಲಾಸಿಲಿ ಹಿಂದಾಣ ಬೆಂಚಿಲಿ ಚೆಕ್ಕಂಗೊ ಧಾರಾಳ ಇದ್ದಿಕ್ಕು / ಇಕ್ಕು.
ಕಲಿವಲೆ ನಿಂಗಳಷ್ಟೆಲ್ಲ ಉಶಾರಿ ಎಂತ ಆಗಿರ.
ಶಾಲೆ ಬಿಟ್ಟ ಕೂಡ್ಳೆ ಓ ಅಲ್ಲಿ ಮಾರ್ಗದ ಕರೆಲಿಪ್ಪ ಒಂದು ಅಂಗುಡಿಲಿ ಮೀನು ಕಟ್ಟಿಕೊಡ್ಳೆ ಸೇರಿಗೊಂಗು. ಅದರ ಮನೆಲಿ ಕನಿಷ್ಟ ೧೪ ಮಕ್ಕೊ. ಅಪ್ಪಮ್ಮಂಗೆ ಈ ಕುಟ್ಟ ಮನೆಗೆ ಬಂದರೂ ಗೊಂತಾಗ, ಬಾರದ್ರೂ ಗೊಂತಾಗ. ಮನೆಲೇ ಗೊಂತಾಗ ಹೇಳಿರೆ ಮತ್ತೆ ಇನ್ನು ಶಾಲಗೆ ಹೋಗದ್ರೆ ಗೊಂತಕ್ಕೋ?

ಹತ್ತುನೇ ಕ್ಲಾಸಿನ ಒರೆಂಗೆ ಬಕ್ಕು, ಮಾಷ್ಟ್ರನ ಒತ್ತಾಯಕ್ಕೆ. ಮತ್ತೆ ಅದರ ಊರಿಲೇ ಕಾಂಬಲೆ ಸಿಕ್ಕ.
ಕಾಸ್ರೋಡಿಲಿಯೋ, ಕೊಡೆಯಾಲಲ್ಲಿಯೋ, ಪುತ್ತೂರಿಲಿಯೋ ಎಂತಾರು ಕಚ್ಚೋಡಕ್ಕೆ ಸೇರಿಗೊಂಗು.
ಅವರ ಕಾಕ° ಯೇವದಾರು ಇರ್ತು ಇದಾ, ದೊಡ್ಡ ಒಯಿವಾಟು ಮಾಡಿಗೊಂಡು. ಅದರ್ಲಿ ತಿಂಗಳಿಂಗೆ ಇಂತಿಷ್ಟು ಹೇಳ್ತ ಕೆಲಸಕ್ಕೆ ಸೇರಿಗೊಂಗು. ಕೈಲಿ ರಜಾ ಪೈಸೆ ಮಾಡುಗು.

ಅಷ್ಟಪ್ಪಗ ಒಂದು ಬೈಕ್ಕು ಬತ್ತು – ಮಾಡಿದ ಪೈಸೆ ಪೂರ ಕಳವಲೆ.
ಎಲ್ಲ ಕಳದಾದ ಮತ್ತೆ ಸಾಲಗೀಲ ಮಾಡಿ ಸ್ವಂತದ ಒಂದು ಕಚ್ಚೋಡ ಹಾಕುಗು. ಮೈ ಮುರಿಯದ್ದ ಹಾಂಗಿರ್ತ ಕೆಲಸ ಇಪ್ಪದು.
ಬಳೆ ಅಂಗುಡಿಯೋ, ಒಸ್ತ್ರದ ಅಂಗುಡಿಯೋ, ಚೆರ್ಪಿನ (Footwear) ಅಂಗುಡಿಯೋ – ಹೀಂಗೆಂತಾರು.
ನಮ್ಮೋರ ಕೂಸುಗೊಕ್ಕೆ ಅತೀ ಅಗತ್ಯದ ಸಾಮಾನುಗೊ.
ಅಂಗುಡಿಲಿ ಮೂರು ಹೊಡೆಯುದೇ ಕನ್ನಾಟಿ. ಮೂರು ಹೊತ್ತುದೇ ಚೆಂದ ನೋಡುದು, ತಲೆ ಬಾಚುದು. ಒಂದು ಪೇನು ತಿರುಗಿಸಿಗೊಂಡು ಕೂಬದು. ಹಾಂಗಾಗಿ ಒಳ್ಳೆ ಚೆಂದ ಇರ್ತವುದೇ.
ಒಂದು ಪೇಂಟಂಗಿಯ ಇಪ್ಪತ್ತೈದು ದಿನ ಹಾಕುದು, ಇಪ್ಪತ್ತಾರ್ನೇ ದಿನ ತೊಳವದು. ( ಆ ದಿನ ಮುಂಡು ಸುತ್ತುಗು ).
ಉಂಬಲೆ ದಕ್ಕಿತ ಪೈಸೆ ಆವುತ್ತು. ಹಾಂಗೆ ಬೇಕಾರೆ ದುಬಾಯಿಗೆ ಹೋದ ಅದರ ದೊಡ್ಡಣ್ಣ (ಅದರ ಅಪ್ಪನ ಸುರೂವಾಣ ಹೆಂಡತ್ತಿಯ ದೊಡ್ಡಮಗ ಇತ್ಯಾದಿ...) ಇದ್ದಲ್ದ, ಅದರತ್ರೆ ಪೈಸೆ ಕೇಳುದು.
ಅಂತೂ, ಕಷ್ಟ- ತಲೆಬೇನೆ ಇಲ್ಲದ್ದ ಆರಾಮ ಜೀವನ!

ನಮ್ಮೋರ ಕೂಸುಗೊ ಇದೇ ಅಂಗುಡಿಗೆ ಹೋಪದು.
ಒಳ್ಳೆ ಮಾಲುಗೊ, ಒಳ್ಳೆ ಸಂಗ್ರಹಂಗೊ ಇರ್ತು, ಚೆಂದ ಮಾಡಿಗೊಂಬಲೆ ಬೇಕಾದ್ದೆಲ್ಲ ಅಲ್ಲಿ ಸಿಕ್ಕುತ್ತು ಹೇಳಿಗೊಂಡು.
ಇವಕ್ಕೆ ವಸ್ತುಗೊ ಸಿಕ್ಕಿದ ಕುಶಿ, ಅವಕ್ಕೆ ಗಿರಾಕಿ ಸಿಕ್ಕಿದ ಕುಶಿ.
~~

ಅಂತೂ ಈ ಕೂಸು ಕಾಣೆ ಆದ ವಿಶಯ ಜೋರಾದಷ್ಟು, ಹೊಸ ಹೊಸ ಶುದ್ದಿಗೊ ಗೊಂತಾತಡ, ಅದರ ಕ್ಲಾಸಿನವರ ಬಾಯಿಂದಲೋ, ನೆರೆಕರೆಯವರ ಬಾಯಿಂದಲೋ, ಕಂಡವರ ಬಾಯಿಂದಲೋ ಎಲ್ಲ:

ನಮ್ಮ ಆ ಕೂಸುದೇ ಕೋಲೇಜಿಂಗೆ ಹೋಪಗ ಇದೇ ನಮುನೆ ಒಂದು ಅಂಗುಡಿಗೆ ಹೋಗಿತ್ತಡ, ಬಳೆಯೋ, ಕೆಮಿಗೆ – ನೇಲ್ತದೋ ಎಲ್ಲ ಸಿಕ್ಕುವ ಅಂಗುಡಿ. ಅಲ್ಯಾಣ ಚೆಕ್ಕ° ಚೆಂದಲ್ಲಿ ಮಾತಾಡಿ ಮಾತಾಡಿ, ತುಂಬ ಆತ್ಮೀಯ ಆತಡ. ಪಾಪ, ಅದರ ನಂಬಿತ್ತು ಈ ಕೂಸು. ನಮ್ಮೋರು ನಂಬುದು ಬೇಗ ಇದಾ. ಯೇವತ್ತೂ ಕೋಲೇಜು ಮುಗುಶಿ ಅದರ ಅಂಗುಡಿಗೆ ಹೋಪಲೆ ಸುರು ಮಾಡಿತ್ತಡ. ಅಲ್ಲಿ ಅದರತ್ರೆ ಹತ್ತು ನಿಮಿಶ ಮಾತಾಡಿ ಮನೆಗೆ ಹೆರಡುದು ಕ್ರಮ ಆತು ಆ ಕೂಸಿಂದು.
ಒಂದು ದಿನ ಅಂತೂ ’ಅಮ್ಮ, ಎನ್ನ ಕ್ಲಾಸು(ಮೇಟು)ಗಳ ಒಟ್ಟಿಂಗೆ ಮಂಗ್ಳೂರಿಂಗೆ ಹೋವುತ್ತೆ’ ಹೇಳಿ ಮನೆಂದ ಹೋಯಿದಡ. ಆ ದಿನ ಆ ಚೆಕ್ಕನ ಅಂಗುಡಿಗೆ ರಜೆ ಅಡ!

ಕೊಡೆಯಾಲಲ್ಲಿ ಎಲ್ಲಿಗೆ ಹೋಯಿದವೋ, ಆ ಮರುಳ ಇದರ ಯೇವ ರೀತಿಲಿ ನೋಡಿಗೊಂಡಿದೋ, ಎಂತ ಉಪದ್ರ ಕೊಟ್ಟಿದೋ – ಒಂದೂ ಅರಡಿಯ- ಆರಿಂಗುದೇ! ಇದರ ಕೆಲವು ಪಟವುದೇ ತೆಗದು ಅದು ಮಡಿಕ್ಕೊಂಡಿದು ಹೇಳಿ ಒಂದು ಶುದ್ದಿ. ಕೂಸಿನ ಹೆಗಲಿಂಗೆ ಆ ಕುಟ್ಟ ಕೈ ಹಾಕಿ ನಿಂದಿಪ್ಪಗ ತೆಗದ ಪಟ ಅಡ. ಕೊಡೆಯಾಲಲ್ಲಿ ದೊಡ್ಡ ಅಂಗುಡಿ ಇದ್ದಲ್ದ, ಅದರ ಎದುರು ತೆಗದ್ದಡ. ತೆಗವಗ ಪ್ರೀತಿ ಇತ್ತೋ ಗೊಂತಿಲ್ಲೆ, ಮತ್ತೆ ಅಂತೂ ಅದರ ಉಪಯೋಗವೇ ಬೇರೆ ಆತು.
ನಿತ್ಯವೂ ’ಮನೆಂದ ಪೈಸೆ ತಾ, ಇಲ್ಲದ್ರೆ ಈ ಪಟ ಅಪ್ಪಂಗೆ ತೋರುಸುತ್ತೆ’ ಹೇಳಿ ಹೆದರುಸಿಗೊಂಡು ಇತ್ತಡ. ಮಾನಕ್ಕೆ ಹೆದರಿ ಅಪ್ಪನತ್ರೆ ’ಪೀಸಿಂಗೆ’, ಪುಸ್ತಕಕ್ಕೆ, ಬೇಗಿಂಗೆ(Bag),ಕಾಜಿ(ಬಳೆ)ಗೆ ಅದಕ್ಕೆ-ಇದಕ್ಕೆ ಹೇಳಿ ಪೈಸೆ ಕೇಳಿ ತಂದುಕೊಟ್ಟೋಂಡಿತ್ತಡ ಪಾಪ.! (’ಬ್ಲೇಕುಮೇಲು’ ಹೇಳುದಡ ಅದರ)!
ನಮ್ಮೋರಿಂಗೆ ಹೆಚ್ಚಿನವಕ್ಕುದೇ ಪೈಸೆಂದ ಮಾನ ದೊಡ್ಡದಲ್ದಾ? ಹಾಂಗೆ.!

ಎಲ್ಲದಕ್ಕುದೇ ಕಾರಣ ಆ ಒಂದು ’ಪಟ’. ಅದರ ಮಡಿಕ್ಕೊಂಡು ಎಂತ ಬೇಕಾರು ತರುಸಿಗೊಳ್ತು, ಎಂತ ಬೇಕಾರು ಮಾಡುಸಿಗೊಳ್ತು. ಅಂದು ಒಂದು ದಿನ ಮನೆಲಿ ಹೇಳದ್ದೆ ಅದರೊಟ್ಟಿಂಗೆ ಕೊಡೆಯಾಲಕ್ಕೆ ಹೋದ್ದಕ್ಕೆ ಜೀವನ ಪೂರ್ತಿ ಅನುಬವಿಸುವ ಹಾಂಗಾತು.
~~

ತೀರಾ ಇತ್ತೀಚೆಗೆ, ಆ ಕೂಸಿನ ಮದುವೆ ನಿಗಂಟಪ್ಪಗ ಅದರ ಉಪದ್ರ ಇನ್ನೂ ಜೋರಾತಡ.
’ನೀನು ಅಲ್ಲಿ ಮದುವೆ ಅಪ್ಪಲಾಗ, ಎನ್ನ ಆಯೆಕ್ಕು’ ಹೇಳಿತ್ತಡ ಆ ಮಂಗ.

ಕೂಸು ತುಂಬ ಚೆಂದ ಇತ್ತು, ಚುರುಕ್ಕುದೇ ಇತ್ತು. ಮಂಗನ ಕೈಲಿ ಮಾಣಿಕ್ಯ ಹೇಳಿದ ಹಾಂಗೆ ಆ ಜನ ಇದರ ಆಟ ಆಡುಸುಲೆ ಸುರು ಮಾಡಿತ್ತು. ಒಳ್ಳೆ ಮಾಣಿ ಬಂದು ಎನ್ನ ದೂರಕ್ಕೆ ಕರಕ್ಕೊಂಡು ಹೋಕು ಹೇಳಿ ನಿತ್ಯವೂ ಆ ಕೂಸು ಯೋಚನೆ ಮಾಡಿಗೊಂಡಿತ್ತೋ ಏನೋ, ಇದು ಬಿಡೆಕ್ಕೇ. ಗೌಜಿಲಿ ಮನೆಪೂರ ಓಡಾಡಿಗೊಂಡು ಇದ್ದ ಆ ಕೂಸು ಕ್ರಮೇಣ ಜೀವನಲ್ಲಿ ಉತ್ಸಾಹವನ್ನೇ ಕಳಕ್ಕೊಂಡತ್ತು.

ಕೆರಗೆ ಇಳಿವನ್ನಾರ ಛಳಿ. ಇಳುದ ಮತ್ತೆ ಅದೇ ಒಂದು ಹಿತ ಆವುತ್ತಡ, ಹಾಂಗೆ ಆತು ಈ ಕೂಸಿನ ಒಯಿವಾಟುದೇ.

ಹೇಂಗೂ ಈ ಕುಟ್ಟ° ಇಂದಿನ ಒರೆಂಗೆ ಚೆಂದಕೆ ನೋಡಿಗೊಂಡಿದು. ಇನ್ನು ಬೇರೆ ಒಬ್ಬನ ಮದುವೆ ಆದರೂ ಮತ್ತೆ ಅಪನಂಬಿಕೆ, ಅಪವಾದ ಏನಾರು ಬಂದರೆ ಜೀವನಲ್ಲಿ ಕಷ್ಟ. ಬಿಟ್ಟಿಕ್ಕಿ ಹೋಪಲೂ ಸಾಕು. ಮತ್ತೆ ಒಬ್ಬಂಟಿಯಾಗಿ ಜೀವಮಾನ ಇಡೀ ಬದುಕ್ಕುದು ಸುಲಬ ಏನೂ ಅಲ್ಲ. ’ಎಂತದೋ ಒಂದು, ಹೇಂಗಾದರೆ ಹಾಂಗೆ’ ಹೇಳಿ ನಿರ್ದಾರ ಮಾಡಿತ್ತೋ ಏನೋ! ಛೆ!

ಕೆಲವು ಸಂದಾನಂಗೊ ಬಪ್ಪಲೆ ಸುರು ಆತು. ಒಂದೊಂದು ಸಂದಾನಕ್ಕೂ ಮನೆಲಿ ಅದರ ಅಮ್ಮಂದು ಕೊರತ್ತೆಗೊ. ಅದು ಇಲ್ಲೆ, ಇದು ಇಲ್ಲೆ ಹೇಳಿ. ಕೂಸಿಂಗೆ ಮೊದಲೇ ಆಸಕ್ತಿ ಇತ್ತಿಲ್ಲೆ! ಪ್ರತಿಯೊಂದು ಸಂದಾನ ಮುರುದಪ್ಪಗಳೂ ’ಅಬ್ಬ, ಸದ್ಯಕ್ಕೆ ಬದುಕ್ಕಿದೆ’ ಹೇಳಿ ಗ್ರೇಶಿಗೊಂಡಿತ್ತೋ ಏನೋ.
ಈ ಒಂದು ಸಂಬಂದ ಕೂಡಿ ಬಂತು. ಎಲ್ಲೊರುದೇ ಕುಶೀಲಿ ಇತ್ತಿದ್ದವು. ಅಪ್ಪ, ಅಮ್ಮ, ನೆಂಟ್ರು – ಆಪ್ತೇಷ್ಟರು.
ಕೂಸುದೇ, ಅದರ ಆ ಪ್ರೆಂಡುದೇ ಬಿಟ್ಟು.
ಯಬಾ, ಅದರ ಮನಸ್ಸಿಲಿ ಎಂತಾ ಜ್ವಾಲಾಮುಖಿ ಇದ್ದಿಕ್ಕು? ಯೋಚನೆ ಮಾಡಿ- ಹೇಳಿದ° ಆಚಕರೆ ಮಾಣಿ!
~~

ಒಯಿವಾಟಿಲಿ ಎಲ್ಲ ಸೋತ ಕುಟ್ಟಂಗೊಕ್ಕೆ ಹೇಳಿಯೇ ಒಂದು ಸ್ಕೀಮು ಬಯಿಂದಡ ಅವರದ್ದರ್ಲಿ, ಕನಿಷ್ಟ ಒಂದು ಕೂಸಿನ ಬ್ಯಾರ್ತಿ ಮಾಡೆಕ್ಕು – ಹೇಳಿ.
ಮದುವೆ ಆಯೆಕ್ಕು ಹೇಳಿ ಏನಿಲ್ಲೆ, ಸಂಸಾರ ಮಾಡೆಕ್ಕು ಹೇಳಿ ಏನು ಇಲ್ಲೆ, ಪ್ರೀತಿ ಕೊಡೆಕ್ಕು ಹೇಳಿ ಏನಿಲ್ಲೆ, ಬ್ಯಾರ್ತಿ ಮಾಡೆಕ್ಕು. ಮಕ್ಕೊ ಹುಟ್ಟುಸೆಕ್ಕು – ಅಷ್ಟೆ. ಆ ಸ್ಕೀಮಿಂಗೆ ಒಪ್ಪಿರೆ ಕೇಳಿದಾಂಗೆ ಪೈಸೆ ಕೊಡ್ತವಡ. ದುಬಾಯಿಂದ ಪೈಸೆ ಬತ್ತಡ ಅದಕ್ಕೆಲ್ಲ. ಸ್ಕೀಮಿನ ಎಲ್ಲಿ ಬೇಕಾರುದೇ ಮಾಡ್ಲಕ್ಕಡ. ಊರಿಲಿಯೋ, ಕೊಡೆಯಾಲಲ್ಲಿಯೋ, ಬೆಂಗುಳೂರಿಲಿಯೋ – ಎಲ್ಲಿ ಬೇಕೋ ಅಲ್ಲಿ. ಬೆಂಗುಳೂರಿಲಿಯೋ ಮತ್ತೊ ಒಪ್ಪಿಯೊಂಡ್ರೆ ಸುರುವಿಂಗೇ ಇಂತಿಷ್ಟು ಹೇಳಿ ಕೊಡ್ತವಡ. ಉಳ್ಕೊಂಬಲೆ ಅಲ್ಲೇ ಪಳ್ಳಿಗಳಲ್ಲಿ ವಸತಿ ವೆವಸ್ತೆ ಮಾಡ್ತವಡ. ತಿರುಗುಲೆ ಬೈಕ್ಕು ಕೊಡ್ತವಡ, ಮಾತಾಡ್ಳೆ ಮೊಬೈಲು ಕೊಡ್ತವಡ. ಹಾಕುಲೆ ಚೆಂದ ಚೆಂದದ ಅಂಗಿ ಪೇಂಟು ಕೊಡ್ತವಡ. ತಿಂಗಳುಗಟ್ಳೆ ದರ್ಮಕ್ಕೇ ಸಾಂಕುತ್ತವಡ. ಅವರ ಕೆಲಸ ತುಂಬ ಸರಳ, ಆರಾರು ಸಿಕ್ಕಿರೆ ಪ್ರೀತಿಯ ನಾಟಕ ಮಾಡಿ ಮರುಳು ಮಾಡಿ ಮದುವೆಗೆ ಒಪ್ಪುಸುದು. ಅಷ್ಟೆ.

ಆ ಪೇನ್ಸಿ ಮಡಿಕ್ಕೊಂಡಿದ್ದ ಕುಟ್ಟಂಗುದೇ ಈ ಸ್ಕೀಮು ತುಂಬ ಇಷ್ಟ ಆತು.
ಈ ಕೂಸಿನ ಮದುವೆ ಆದರೆ ಒಂದರಿಂಗೇ ಗೆಂಟು ಸಿಕ್ಕುತ್ತನ್ನೇ ಹೇಳಿ ಗ್ರೇಶಿತ್ತು. ಕೂಸು ಇದರೊಟ್ಟಿಂಗೆ ಇರ್ತ ಪಟವ ಹಿಡುದು ಆಡುಸಿತ್ತಡ. ಸುರುಸುರುವಿಂಗೆ ಕೂಸು ಹೆದರಿರೂ, ಆ ಕುಟ್ಟ ಧೈರ್ಯ ತುಂಬಿದ ಮತ್ತೆ ’ಸರಿ ಅಂಬಗ’ ಹೇಳಿ ಒಪ್ಪಿತ್ತಡ. ’ಎನ್ನ ಬೇಟೆ ಬಲಗೆ ಬಿದ್ದತ್ತು’ ಹೇಳಿ ಒಂದು ಸೂಚನೆಯ ಈ ಕುಟ್ಟ ಮೇಗಂಗೆ ಕೊಟ್ರೆ ಆತಡ. ಮತ್ತೆ ವೆವಸ್ತೆ ಅವ್ವೇ ಮಾಡ್ತವಡ, ಬಂದು.

ಮಲಪ್ಪುರಂ ನ ಹತ್ತರೆ ಒಂದು ಪಳ್ಳಿ ಇದ್ದಡ. ಅಲ್ಲಿ ’ಯುವ ಜೋಡಿ’ಗೊಕ್ಕೆ ಮದುವೆ ಮಾಡುಸಿ, ಕುರಾನಿನ ಧರ್ಮದೀಕ್ಷೆ ಕೊಟ್ಟು, ಬೆಲಿಯ ಕಿತಾಬಿನ ಬಾಯಿಪಾಟ ಮಾಡುಸಿ, ಮಂಡೆ ತಿರುಗುಸಿ ಕಳುಸುತ್ತವಡ. ಉಂಬಲೆ ತಿಂಬಲೆ ಎಲ್ಲ ಏನು ತೊಂದರೆ ಇಲ್ಲೆ. ದುಬಾಯಿ ಪೈಸೆ, ದರ್ಮದ್ದು. ಈ ಕೂಸುಗೊ ಕುರಾನು ಓದೆಕ್ಕು, ಕಲಿಯೆಕ್ಕು, ಜಾಸ್ತಿ ಏನಲ್ಲ – ಮಕ್ಕೊಗೆ ಕಲಿಶುವಷ್ಟಾದರೂ!
ಎರಡು ಒರಿಷ ಸಾಂಕುತ್ತವು, ಕುಟ್ಟ 2 ಮಕ್ಕಳ ಕೊಡೆಕ್ಕು. ಅಲ್ಲಿಗೆ ಆ ಸ್ಕೀಮು ಮುಗಾತು.

ಬೇರೆ ಕರ್ಚಿಂಗೆ ಪೈಸೆ ಇಲ್ಲದ್ರೆ ಎಂತರ ಮಾಡುದು? ಕೂಸಿನ ಅಪ್ಪಮ್ಮ ಪ್ರೀತಿಲಿ ಮಾಡುಸಿ ಹಾಕಿದ ಬಳೆ, ಗೆಜ್ಜೆ, ನೇವಳ, ಚೈನು – ಎಲ್ಲ ಒಂದೊಂದನ್ನೇ ಮಾರಿತ್ತು. ಇನ್ನೆಂತಕೆ ಬೇಕೇ ಅದು? ಮೋರೆಲಿ ಒಂದು ಬೊಟ್ಟುದೇ ಇಪ್ಪಲಾಗ ಹೇಳಿದ ಮತ್ತೆ ಇದೆಲ್ಲ ಆಭರಣಂಗೊ ಎಂತಕೆ!
ಮತ್ತೆ ಪುನಾ ಕುಟ್ಟನ ಕೈ ಕಾಲಿ ಆದರೆ?
ಇನ್ನೊಂದು ಸ್ಕೀಮು ಸುರು ಮಾಡೆಕ್ಕು. ಹೇಂಗೂ ಒಂದೇ ಹೆಂಡತ್ತಿ ಹೇಳ್ತ ಕಟ್ಟುಪಾಡು ಇಲ್ಲೆ, ದಾಂಪತ್ಯದ ಪ್ರೀತಿಯ ಬಂಧ ಮೊದಲೇ ಇಲ್ಲೆ.
ಎಡಿಗಾದಷ್ಟು ಸ್ಕೀಮು ಮಾಡಿ ಮಾಡಿ ಅಕೆರಿಗೆ ಒಂದು ವರ್ಜಿನಲ್ಲು ಬ್ಯಾರ್ತಿಯ ಮದುವೆ ಆಗಿ ಆರಾಮಲ್ಲಿ ಇರ್ತು ಆ ಜೆನ.
~~

ಬದ್ದ ಮುರುತ್ತು. ಮೊಬೈಲು ಮಾಣಿಯ ಕೈಲೇ ಒಳುತ್ತು. ಪಾಪ!
ಕೂಸು ಕಾಣೆ ಆಗಿ ಒಂದು ವಾರ ಆತು. ಚೆ! ಈಗ ಎಲ್ಲಿಕ್ಕೋ? ಎಂತ ಮಾಡ್ತಾ ಇಕ್ಕೋ? ಅದರ ಅಪ್ಪಮ್ಮಂಗೆ ಬಪ್ಪ ಯೋಚನೆ ಒಪ್ಪಣ್ಣಂಗೆ ಬತ್ತಾ ಇದ್ದು.
ಕರಕ್ಕೊಂಡು ಹೋಗಿ ಒಂದು ವಾರಲ್ಲಿ ದನದ ಮಾಂಸ ತಿನುಸುತ್ತವಡ. ಹುಳಿಮಜ್ಜಿಗೆಯೇ ರಜ ಮೂರಿಬಂದರೆ ಆಗಡ ಈ ಕೂಸಿಂಗೆ, ಇನ್ನು ಅದೆಲ್ಲ ಹೇಂಗೆ ತಿಂತೋ- ಅಮ್ಮಂಗೆ ಗ್ರೇಶಿರೇ ಬೇಜಾರಾವುತ್ತು!
ಏನೋ ಒಂದು ತೆವಲಿಲಿ ಹೋದರೂ, ಇತ್ಲಾಗಿ ಬತ್ತೆ ಹೇಳಿ ಗ್ರೇಶಿರೆ ಸುಮಾರು ಕಷ್ಟಂಗೊ ಆ ಕೂಸಿಂಗೆ:

  • ತಾನು ಎಲ್ಲಿ ಇದ್ದೆ ಹೇಳಿ ಗೊಂತಿಲ್ಲೆ, ಬಪ್ಪಲೆ ಪೈಶೆ ಇಲ್ಲೆ.
  • ಸುತ್ತುದೇ ಅವರ ಸರ್ಪಗಾವಲು
  • ಬಂದರೆ ಮನೆಯ ಹೆದರಿಕೆ – ಅಪ್ಪಮ್ಮ ಎಂತ ಮಾಡುಗೋ ಹೇಳಿ.
  • ಸಮಾಜದ ಹೆದರಿಕೆ, ನಿತ್ಯವೂ ನೋಡಿ ನೆಗೆಮಾಡಿ ಮರಿಯಾದಿ ತೆಗಗೋ ಹೇಳಿ.
  • ಭವಿಷ್ಯ? ಇನ್ನಾರು ಮದುವೆ ಆವುತ್ತ°? ಹೇಳ್ತ ಯೋಚನೆ.

ಇದಕ್ಕೆಲ್ಲ ಹೆದರಿ ಅದೇ ಅಕ್ಕು ಹೇಳಿ ಕರಿಒಸ್ತ್ರದ ಹಿಂದೆ ಇದ್ದುಗೊಳ್ತವು, ಜೀವಮಾನ ಪೂರ್ತಿ!!! ಚೆ!

ಸಣ್ಣ ಇಪ್ಪಗ ಅಮ್ಮನ ಕೈಲಿ ಬೈಗಳು ತಿಂದೋಂಡು ಕಲ್ತ ಎಷ್ಟೋ ಶ್ಳೋಕಂಗೊ, ದೇವರ ಪದ್ಯಂಗೊ, ಅದರಿಂದ ಮತ್ತೆ ಕಲ್ತ ಸಂಗೀತ, ಅದರಿಂದ ಮತ್ತೆ ಕಲ್ತ ಭರತನಾಟ್ಯ –  ಯೇವದುದೇ ಜೀವಮಾನ ಪೂರ್ತಿ ಉಪಯೋಗಕ್ಕೆ ಬತ್ತಿಲ್ಲೆ. ಶಾಮಲದಂಡಕದ ಲಯಕ್ಕೆ ತಲೆತೂಗುವ ಅವಕಾಶವೇ ಇಲ್ಲೆ. ಇನ್ನು ಎಂತ ಇದ್ದರೂ ಯೇವದೋ ಜೀವನ ಪದ್ದತಿಗೆ  ಸೇರಿದ ಕೆಲವು ಕಟ್ಟುಪಾಡುಗೊ – ನಮ್ಮ ಊರಿಂಗೆ ಹಿಡುಸದ್ದು.
~~

ಇಷ್ಟರ ಹೇಳಿ ಆಚಕರೆ ಮಾಣಿ ಒಂದರಿ ಉದ್ದ ಉಸುಲು ತೆಕ್ಕೊಂಡ. ಇದರ ಕೇಳಿಗೊಂಡಿದ್ದ ಗುಣಾಜೆಮಾಣಿ ಪಿಸುರಿಲಿ ಅವನ ಕೋಲರಿನ ಕಚ್ಚಿ – ಅವ ಪಿಸುರು ಬಂದರೆ ಹಾಂಗೇಡ! ’ಎಂತಾರು ಮಾಡೆಕ್ಕು ನಾವು’ ಹೇಳಿಕ್ಕಿ ಬರಬರನೆ ಹೆರಟಿಕ್ಕಿ ಹೋದ°. ಮನೆಗೆ ಹೋಗಿ ಅವನ ಓರುಕುಟ್ಟಿಲಿ ಈ ಶುದ್ದಿಯ ಪಟ ನಾಕು ಹಾಕಿದನಡ – ಅದರ ನೋಡಿದ ಪೆರ್ಲದಣ್ಣ ಬೆಂಗ್ಳೂರಿಂದ ಇರುಳು ಪೋನುಮಾಡಿಪ್ಪಗ ಹೇಳಿದ°. “ಕುಂಞಿ ಅಪುರೂಪಲ್ಲಿ ಒಳ್ಳೆಕೆಲಸ ಮಾಡಿದ°” – ಹೇಳಿ ಅಜ್ಜಕಾನ ಬಾವಂದು ನೆಗೆ.

ನಿಂಗೊ ಮದುವೆ ಪ್ರಾಯಕ್ಕೆ ಬಂದ ಒಪ್ಪಣ್ಣ / ಒಪ್ಪಕ್ಕ ಆಗಿದ್ದರೆ ಖಂಡಿತಾ ಈ ಶುದ್ದಿ ಗೊಂತಿರೆಕು.
ಹಾಂಗೇ, ಆತ್ಮೀಯ ನೆಂಟ್ರುಗಳ ಪೈಕಿ ಮದುವೆ ಹತ್ತರೆ ಆದ ಕೂಸುಗೊ / ಮಾಣಿಯಂಗೊ ಇಪ್ಪವು, ಮನೆಲಿ ಅಕ್ಕ ತಂಗೆ ಇಪ್ಪವು – ಎಲ್ಲರಿಂಗೂ ಇದು ಖಂಡಿತವಾಗಿಯೂ ಗೊಂತಿಪ್ಪಲೇ ಬೇಕು.
ಒಟ್ಟಿಲಿ ನಮ್ಮ ಸಮಾಜಲ್ಲಿ ಎಲ್ಲೊರುದೇ ಈ ಶುದ್ದಿ ಗೊಂತಿಪ್ಪೋರೇ ಆಯೆಕ್ಕು. ಗೊಂತಿಪ್ಪೋರು ಗೊಂತಾಗದ್ದವಕ್ಕೆ ಪಸರುಸಲೇ ಬೇಕು ಹೇಳಿ ಒಪ್ಪಣ್ಣನ ಆಶಯ.
~~

ಅಜ್ಜಂದ್ರ ಕಾಲಲ್ಲಿ ಬಾಲ್ಯ ವಿವಾಹ ಹೇಳಿ ಇತ್ತು. ಮನೆಲಿ ಅಜ್ಜಿ ಇದ್ದರೆ ಕೇಳಿ, ’ಎಷ್ಟೊರಿಷಲ್ಲಿ ಮದುವೆ ಆಯಿದಜ್ಜೀ ನಿಂಗೊಗೇ?’ ಹೇಳಿ. ಒಂಬತ್ತು – ಹೇಳುಗು, ಅದೇ ಕಾಲದ ನಾಚಿಗೆ ಮಾಡಿಗೊಂಡು. 🙂 ಸಣ್ಣ ಇಪ್ಪಗಳೇ ಮದುವೆ ಮಾಡಿಬಿಡುದು. ಅಣ್ಣ-ತಮ್ಮ-ತಂಗೆ-ಅಪ್ಪ-ಅಮ್ಮ- ಹೇಳಿದ ಹಾಂಗೆ ಗೆಂಡ-ಹೆಂಡತ್ತಿ ಹೇಳ್ತ ಸಂಬಂಧವೂ ಬೆಳದಿರ್ತು. ಒಂದು ಕೂಸಿನ ರಕ್ಷಣೆಯ ಜವಾಬ್ದಾರಿ ಒಬ್ಬ ಮಾಣಿಗೆ ಸಿಕ್ಕಿರ್ತು – ಯೇವದೇ ಅಗತ್ಯತೆ ಬಂದರೂ ಅವನೇ ನೀಗುಸಿ ಬಿಡೆಕ್ಕು. ಕೂಸಿಂಗೆ ಎಂತ ಆದರೂ ಆ ಮಾಣಿ ನೋಡಿಗೊಳೆಕ್ಕು. ಮಾಣಿಗೆ ಎಂತ ಆರೈಕೆ ಬೇಕಾರೂ ಆ ಕೂಸು ನೋಡಿಗೊಳೆಕ್ಕು. ಪರಸ್ಪರ ಅವರ ಒಳವೇ ಪ್ರೇಮ ಬರೆಕ್ಕು, ಪ್ರೀತಿ ಬರೆಕ್ಕು, ಸರಸ-ವಿರಸ, ಕೋಪ, ಕ್ರೋಧ – ಎಲ್ಲವುದೇ.
ಪರಸ್ಪರ ಅವರದ್ದೇ ಅನುಭಾವ.

ಮದುವೆ ಮಾಡ್ಳೆ ಕಾನೂನು ಅಡ್ಡ ಬತ್ತರೂ, ಮಾಣಿ-ಕೂಸು ನಿಗಂಟಾದರೂ ಮಾಡ್ಳಕ್ಕನ್ನೇ?
ಭವಿಷ್ಯವೇ ರೂಪಿತ ಆಯೆಕ್ಕಷ್ಟೆ ಹೇಳಿ ಆದ ಮತ್ತೆ ಯೇವ ಮಾಣಿ ಆದರೆ ಎಂತಾತು?
ಎರಡೂ ಮಾವನ ಮನೆ ಸೇರಿ ಮಕ್ಕಳ ಬೆಳೆಶಿರೆ ಆತು.
ಸೋಪ್ಟುವೇರೂ ಅಕ್ಕು, ಪುರೋಹಿತರೂ ಅಕ್ಕು. ಬಾಲ್ಯ ಎರಡೂ ಒಂದೇ ತಾನೇ!!?
’ಕೂಸು ಒಪ್ಪುತ್ತಿಲ್ಲೆ’ ಹೇಳಿ ಅಂತೇ ಹೇಳಿಗೊಂಡು ಬಪ್ಪ ಅತ್ತೆಕ್ಕೊಗೆ, ಮಾವಂದ್ರಿಂಗೆ ಎಲ್ಲ ಯೋಚನೆ ಮಾಡೆಕ್ಕಾದ ಕಾಲ.
ಕೂಸು ಒಪ್ಪುತ್ತು. ಏನೂ ಇಲ್ಲದ್ದ ಬಳೆ ಅಂಗುಡಿಯ ಚೆಕ್ಕನ ಒಪ್ಪಿದ್ದಡ, ಇನ್ನು ಕೃಷಿನೋಡಿಗೊಂಡು ನೆಮ್ಮದಿಲಿ ಇಪ್ಪ ಶುದ್ಧ ಮಾಣಿಯ ಒಪ್ಪದಾ?
ಕೂಸಿನ ಒಪ್ಪುಸುದು ದೊಡ್ಡ ಕಷ್ಟ ಅಲ್ಲ, ದೊಡ್ಡವರ ಒಪ್ಪುಸುದೇ ಕಷ್ಟ. ಎಂತ ಹೇಳ್ತಿ?

ಒಂದೊಪ್ಪ: ಬೇಲಿ ಗಟ್ಟಿ ಇಲ್ಲದ್ರೆ ಮತ್ತೆ ಕಂಡುದನಗಳ ಬೈವಲಾಗ ಅಡ, ಅಲ್ದಾ?

ಸೂ: ಸಮಾಜದ ಒಳಿತಿಂಗಾಗಿ ನಮ್ಮ ಗುರುಗೊ ಈ ವಿಚಾರದ ಬಗ್ಗೆ ಎಷ್ಟು ಕಾಳಜಿ ತೆಕ್ಕೊಂಡಿದವು ಹೇಳಿರೆ, ಒಂದು ಲೇಖನವೇ ಬರದು ಇಂಟರ್ನೆಟ್ಟಿಲಿ ಹಾಕಿದ್ದವಡ. ನಮ್ಮ ಮಕ್ಕೊ ಓದಲಿ ಹೇಳಿಗೊಂಡು. ಸುಮಾರು ಜೆನ ಓದಿ ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದವಡ. ನಿಂಗಳೂ ಕೊಟ್ಟಿರಾ?

22 thoughts on “ಮತ್ತೊಂದರಿ ಬರೆಕಕ್ಕಾ ‘ಬಾಲ್ಯವಿವಾಹ’?

  1. ಅದೂ ಅಲ್ಲದ್ದೆ ಇ-ಮೈಲ್, ಒರ್ಕುಟ್, ಫೇಸ್ ಬುಕ್, ಮೊಬೈಲ್ – chat & message. ಮತ್ತೆ ಕೇಳೆಕ್ಕೊ?
    ಎನ್ನ ಮಗಳಿ೦ಗೆ ಆ ಹುಡುಗನತ್ತರೆ, ಹಾ೦ಗಿಪ್ಪ ಭಾವನೆ ಇಲ್ಲೆ. ಅವು ಸ್ನೇಹಿತರಷ್ಟೆ. ಕ೦ಬೈನ್ ಸ್ಟಡಿ ಮಾಡುಲೆ ಲೈಬ್ರೆರಿಗೆ ಹೋದ್ದು!

  2. ಸತೀಶ, ಗಣೇಶ ಪೆರ್ವ ಸರಿಯಾಗಿ ಹೇಳಿದ್ದವು. ಇದಕ್ಕೆಲ್ಲ ನಾವು ಮನೆಯವೇ ಕಾರಣ. ನಮ್ಮ ಸ೦ಸ್ಕ್ರಿತಿಯ ರಜ ರಜವೇ ಬಿಟ್ಟು, ಯುರೋಪಿಯನ್ ಗಳ ಅನುಕರಣೆ ಇದರೆಲ್ಲದರ ಹಿ೦ದೆ ಅಡಗಿದ್ದು! ಬರೇ ಚೆಕ್ಕ೦ಗೊ ಹೇಳಿ ಅಲ್ಲ, ಈಗೀಗ ನಮ್ಮ ಕೂಸುಗೊ, ನಮ್ಮವರ ಬಿಟ್ಟು ಹೆರಾಣೋರ ಒಟ್ಟಿ೦ಗೆ ಅತಿರೇಕದ ಗೆಳೆತನ ಬೆಳೆಸಿ, ಹೀ೦ಗೆಲ್ಲ ಆವುತ್ತಾ ಇಪ್ಪ ವಾರ್ತೆಗಳ ಕೇಳುತ್ತಾ ಇದ್ದು.
    ಒ೦ದೊ, ಎರಡೊ ಮಕ್ಕೊ ನಮಗೆ ಇಪ್ಪಗ, ನಾವು ಕಷ್ಟ ಬ೦ದಾ೦ಗೆ ಅವು ಬಪ್ಪದು ಬೇಡ ಹೇಳುವ ನಮ್ಮ ಭಾವನೆ೦ದ, ಅವು ಹೇಳಿದಾ೦ಗೆ ನಾವು ಕುಣುದತ್ತು. ಮತ್ತೆ ಅವು ನಮ್ಮ ಕುಣಿಸದ್ದೆ ಇರುತ್ತವೋ?

  3. ನಿಂಗಳ ವಿಮರ್ಶಾತ್ಮಕ ಒಪ್ಪ ಲಾಯಿಕ ಆಯಿದು.

  4. ಅಯ್ಯೋ! ಇದು ಹಳೇ ಲೇಖನ ಅಲ್ದಾ, ಆನು ಡೇಟ್ ನೋಡಿದ್ದಿಲ್ಲೆ ಇದಾ, ಹೊಸಾ ಲೇಖನ ಹೇಳಿ ಗ್ರೇಶಿದೆ. ಆದ ಕಾರಣ ಕಾಲಿಕ ಲೇಖನ ಹೇಳಿದ್ದದು. ಕ್ಷಮಿಸಿ..

  5. ಕಾಲಿಕ ಲೇಖನಕ್ಕೆ ಒಪ್ಪಣ್ಣ೦ಗೆ ಧನ್ಯವಾದ೦ಗೊ. ಕೂಸುಗಳೂ, ಮಾಣಿಯ೦ಗಳೂ ಹೆದರಿಕೆ ಹುಟ್ಟಿಸುವಷ್ಟು ಪ್ರಮಾಣಲ್ಲಿ ದಾರಿ ತಪ್ಪುತ್ತಾ ಇಪ್ಪದು, ವಿಷಾದನೀಯವಾದರೂ ಹಗಲಿನಷ್ಟೇ ಸತ್ಯ. ಇದಕ್ಕೆ ನಿಜವಾಗಿ ಕಾರಣ ಎ೦ತರ? ಅಬ್ಬೆ ಅಪ್ಪನ ಪಾತ್ರ ಎಷ್ಟು? ಎಷ್ಟು ಜನ ಹೆತ್ತವಕ್ಕೆ ಈಗಳಾದರೂ ಇದರ ಬಗ್ಗೆ awareness ಇದ್ದು? ಮಕ್ಕೊ ಆದಮತ್ತೆ ಅವರ ಪ್ರೀತಿಸುವದು, ಅವರ ಅಗತ್ಯ೦ಗಳ ನೋಡಿಯೊ೦ಬದು, ಸಣ್ಣ ಪ್ರಾಯಲ್ಲಿ ಅಬ್ಬೆ ಅಪ್ಪ ಪಟ್ಟ ಕಷ್ಟ೦ಗೊ ಮಕ್ಕೊ ಅನುಭವಿಸದ್ದ ಹಾ೦ಗೆ ನೋಡಿಯೊ೦ಬದು, ಇಷ್ಟು ಮಾಡಿಯೊ೦ಡರೆ successfull parenting ಆತಾ?

    ಎನ್ನ ಅಭಿಪ್ರಾಯಲ್ಲಿ, ಸ೦ಸ್ಕಾರ ಹೇಳುವದು ಸುಲಭಲ್ಲಿ ಸಿಕ್ಕುವದು ಅಲ್ಲ, ಅದಕ್ಕೆ ಹಿರಿಯವು ನಾವು ತಿಳ್ಕೊ೦ಡಿಪ್ಪದಕ್ಕಿ೦ತಲೂ ಎಷ್ಟೋ ಹೆಚ್ಚು ಕಷ್ಟ ಪಡ್ಲೇ ಬೇಕು. (especially ಇ೦ದಿನ ಸಾಮಾಜಿಕ ಸಾಹಚರ್ಯ೦ಗಳಲ್ಲಿ) ನಮ್ಮ ಸ೦ಸ್ಕೃತಿ ಹೇಳಿದರೆ, ಧಾರ್ಮಿಕ ಕಾರ್ಯ೦ಗೊ, ಭರತನಾಟ್ಯ, ಶಾಸ್ತ್ರೀಯ ಸ೦ಗೀತ ಮಾ೦ತ್ರ ಅಲ್ಲ, ಒಳ್ಳೆ ನಡವಳಿಕೆ ಕೂಡ ಅಲ್ಲದೊ? ಇ೦ದು ಮಕ್ಕೊಗೆ, ಹಿರಿಯವಕ್ಕೆ ಎಲ್ಲರಿ೦ಗುದೆ ಇ೦ಟರ್ ನೆಟ್, ಟಿ ವಿ ಸರ್ವ ಸಾಧಾರಣ. ಇದರಲ್ಲಿ ಅವು ಯಾವ ಯಾವ ವಿಷಯ೦ಗಳ ಬೇಕಾದರು ನೋಡ್ಳೆ ಆವ್ತು. ಇದೂ ಅಲ್ಲದ್ದೆ ಮನೆ೦ದ ಹೆರ ಹೋದ ಮತ್ತೆ ಅವರ friendship ಆರ ಒಟ್ಟಿ೦ಗೆ ಹೇಳಿ ಎಷ್ಟು ಜನ ಹೆತ್ತವರಿ೦ಗೆ ಗೊ೦ತಿದ್ದು? ಗೊ೦ತಿದ್ದರೂ ಕೂಡ ಮಕ್ಕಳ ಎಲ್ಲಾ friendಗಳನ್ನೂ ಗೊ೦ತಿಪ್ಪ ಹೆತ್ತವು ಎಷ್ಟು ಜನ?

    ಒ೦ದು ಹಳೇ ಶ್ಲೋಕದ ನಾಲ್ಕನೇ ಪಾದ ಹೀ೦ಗೆ ಹೇಳ್ತು –
    ಪ್ರಾಯೇಣಾಧಮ ಮಧ್ಯಮೋತ್ತಮಗುಣಃ ಸ೦ಸರ್ಗತೋ ಜಾಯತೇ – ಹೇಳಿ. ಯಾವುದೇ ಮನುಷ್ಯನ ಸ್ವಭಾವ ನಿರ್ಧರಿಸುವದರಲ್ಲಿ ಅವನ ಒಟ್ಟಿ೦ಗೆ ಇಪ್ಪವರ ಪಾತ್ರ ಬಹಳ ದೊಡ್ಡದು. ಹುಟ್ಟಿ ಬೀಳುವಗ ಎಲ್ಲಾ ಮಕ್ಕಳೂ ದೇವರಿ೦ಗೆ ಸಮಾನ. ಅವರ ಸ್ವಭಾವ ಡೆವಲಪ್ ಅಪ್ಪ ಸ೦ದರ್ಭಲ್ಲಿ ಅವಕ್ಕೆ ಯಾವ input ಸಿಕ್ಕುತ್ತೋ ಆ ರೀತಿಲಿ ಅವು ಬದಲಾವ್ತವು. ಹೆಚ್ಚಿನ ಹೆತ್ತವಕ್ಕುದೆ ಕೊನೆಯ ಕ್ಷಣದ ವರೇ೦ಗೆಯುದೆ ಮಕ್ಕೊ ದಾರಿ ತಪ್ಪಿದ್ದದು ಗೊ೦ತಾಗಿರ್ತಿಲ್ಲೆ, ಗೊ೦ತಾದರುದೆ ಅದರ ಒಪ್ಪಿಗೊ೦ಬಲೆ ಮನಸ್ಸು ತಯಾರಿರ್ತಿಲ್ಲೆ. ಈಗಾಣ ಕಾಲ ಮೊದಲಿನ ಹಾ೦ಗಲ್ಲ. ಮಕ್ಕಳ ದಾರಿ ತಪ್ಪುಸಲೆ ಬೇಕಾದ ಹಲವು ದಾರಿಗೊ ಎಲ್ಲಿ ಬೇಕಾದರೂ ಸುಲಭ ಲಭ್ಯ. ಮಕ್ಕೊ ಎಲ್ಲಿ ಹೋವ್ತವು, ಎ೦ತ ಮಾಡ್ತವು? ಎ೦ತ ನೋಡ್ತವು, ಆರೊಟ್ಟಿ೦ಗೆ ಅವರ ಗೆಳೆತನ, ಗೆಳೆತನದ ಆಳ ಎಷ್ಟು? ಹೇಳ್ತ ಎಲ್ಲಾ ವಿಷಯಲ್ಲಿಯುದೆ ಹೆತ್ತವರ ಗಮನ ೧೦೦% ಇರೆಕಾದ್ದದು ಆರು ಒಪ್ಪಿಗೊ೦ಡರೂ ಒಪ್ಪಿಗೋಳದ್ರೂ ಸತ್ಯವಾದ ವಿಷ್ಯ. ಮಕ್ಕಳ character ರೂಪೀಕರಣ ಅಪ್ಪದು ಸಾಮನ್ಯವಾಗಿ ೧೨ ವರ್ಷದ ವರೇ೦ಗೆ ೬೦%, ೧೨ರಿ೦ದ ೨೧-೨೨ ವರ್ಷದ ವರೇ೦ಗೆ ೩೦%, ಮತ್ತಿಪ್ಪದು ಕಾಲಕ್ರಮೇಣ ಅನುಭವ೦ಗಳಿ೦ದ ಪಕ್ವ ಆಯೆಕಾದ್ದದು. ಇದರಲ್ಲಿ ೧೨-೨೨ ವರ್ಷದ ಅವಧಿ most dangerous. ಹಾರ್ಮೋನುಗಳ ಪ್ರಭಾವವೋ ಏನೋ! ಈ ವಯಸ್ಸಿಲ್ಲಿ ದಾರಿ ತಪ್ಪಲೆ ಇಪ್ಪ ಸಾಧ್ಯತೆಗೊ ಮತ್ತೆ ಎಲ್ಲಾ ಪ್ರಾಯಕ್ಕಿ೦ತಲೂ ಜಾಸ್ತಿ. ಈ ಪ್ರಾಯಲ್ಲಿ ದಾರಿ ತಪ್ಪದ್ದ ಮಾಣಿ / ಕೂಸು ಮತ್ತೆ ಜೀವನಲ್ಲಿ ದಾರಿ ತಪ್ಪಲೆ ಇಪ್ಪ ಸಾಧ್ಯತೆ ತು೦ಬಾ ತು೦ಬಾ ಕಮ್ಮಿ. ಆದ ಕಾರಣವೇ ಈ ಪ್ರಾಯಲ್ಲಿ ಹೆತ್ತವು ವಹಿಸೆಕಾದ ಜಾಗ್ರತೆ ಅತ್ಯ೦ತ ಜಾಸ್ತಿ. ಮಕ್ಕಳ ನ೦ಬಲಾಗ ಹೇಳುವದಲ್ಲ, ಆದರೆ ಇ೦ದ್ರಾಣ lifestyle-ಲ್ಲಿ ಕಣ್ಣುಮುಚ್ಚಿ ಎಲ್ಲವನ್ನೂ ನ೦ಬಲೆ ಎಡಿವಲೇ ಎಡಿಯ ಹೇಳುವದು ವೇದನಾಜನಕವಾದ ಸತ್ಯ. ಆದರೆ ಮಕ್ಕಳ ಮನಸ್ಸಿ೦ಗೆ ಬೇನೆ, ವಿಶ್ವಾಸಕ್ಕೆ ಹಾನಿ ಉ೦ಟಾಗದ್ದೆ ನೋಡಿಯೋಳೆಕಾದ್ದದೂ ಅಷ್ಟೇ ಅಗತ್ಯ.

    ನಾವು ಮಾಡ್ತ ಕೆಲಸ೦ಗೊ ಬೇರೆ ಆರಿ೦ಗುದೆ (ಅಥವಾ ನಮ್ಮ ಗೊ೦ತಿಪ್ಪ ಬೇರೆ ಆರಿ೦ಗುದೆ) ಗೊ೦ತಾವುತ್ತಿಲ್ಲೆ ಹೇಳಿ ಒಬ್ಬ ಮಾಣಿ / ಕೂಸಿ೦ಗೆ ಮನಸ್ಸಿಲ್ಲಿ ತೋರಿತ್ತು ಹೇಳಿ ಆದರೆ ಅವರ ಸುಪ್ತ ಮನಸ್ಸಿಲ್ಲಿ ಇಪ್ಪ ಎಲ್ಲಾ ಕುತೂಹಲ೦ಗೊ / ಅವು ಮಾಡೆಕು ಹೇಳಿ ಗ್ರೇಶುತ್ತ ಸಮಾಜ ಅ೦ಗೀಕರಿಸದ್ದ ಎಲ್ಲಾ ವಿಶಯ೦ಗೊ ಹೆರಬಪ್ಪಲೆ ಸುರು ಆವ್ತು. ಅದಕ್ಕೆ ಈಗಾಣ ಇ೦ಟರ್ ನೆಟ್, ಚಾಟಿ೦ಗ್, ಮೊಬೈಲ್ ಫೋನ್ ಇತ್ಯಾದಿಗಳ ಕೊಡುಗೆ ಅಪಾರ. (ದುರುಪಯೋಗದ ವಿಷಯಲ್ಲಿ ಪ್ರಥಮ ಸ್ಥಾನ ಮೊಬೈಲ್ ಫೋನಿ೦ಗೆ ಕೊಡೆಕು) ನಾವು ಇ೦ದು ಯುವಜನರಲ್ಲಿ ನೋಡ್ತ ಹಲವು ಸಮಸ್ಯೆಗಳಲ್ಲಿ,ಆನು ಮೇಲೆ ಪ್ರತಿಪಾದಿಸಿದ ವಿಷಯ೦ಗಳ ಪ್ರಭಾವ ಎಷ್ಟು ಹೇಳಿ ಆಲೋಚನೆ ಮಾಡಿ ನೋಡಿ.

    ಆನು ಈ ಬರದ್ದದರಲ್ಲಿ ಯಾವುದೇ ಹೆತ್ತವಕ್ಕೆ ಬೇಜಾರು ಆಗಿದ್ದರೆ ಕ್ಷಮೆ ಇರಲಿ. ಆರಿ೦ಗಾದರುದೆ ಜವಾಬ್ದಾರಿಯ ಬಗ್ಗೆ ಅರಿವು ಮೂಡಿದರೆ ಎನ್ನ ಶ್ರಮ ಧನ್ಯ. ಆನು ಹೇಳಲೆ ಗ್ರೇಶಿದ ವಿಷಯ೦ಗೊ ಎಷ್ಟು ಪರಿಣಾಮಕಾರಿಯಾಗಿ ಅರ್ಥ ಅಪ್ಪ ಹಾ೦ಗೆ ಹೇಳಲೆ ಎಡಿಗಾಯಿದು ಹೇಳುವದರಲ್ಲಿ ಎನಗೆ ಸ೦ಶಯ ಇದ್ದು (ಸಮಯ ಮತ್ತು ಸ್ಥಳಾಭಾವ 🙁 ..)

  6. ಪ್ರೀತಿಯ ಬಾಂಧವರೆ

    ಇತ್ತೀಚಿನ ದಿನಗಳಲ್ಲಿ ನಮ್ಮ ಬ್ರಾಹ್ಮ್ಹನ ಹುಡ್ಗೀರಿಗೆ ತುಂಬಾ ಕೆಟ್ಟ ಚಾಳಿ ಬಂದಿದೆ ದಯವಿಟ್ಟು ಕ್ಷಮಿಸಿ ಬಳಕೆಯ ಶಬ್ದ ತುಂಬಾ ಕೆಟ್ಟದಾಗಿದೆ
    ಇದಕ್ಕೆಲ್ಲ ಎಲ್ಲ ಅಪ್ಪ ಅಮ್ಮಂದಿರೆ ಕಾರಣ ಅಂತ ಹೇಳೋಕೆ ವಿಷಾಧವಾಗ್ತಿದೆ
    ನನ್ನ ತಿಳುವಳಿಕೆ ಪ್ರಕಾರ ಮಕ್ಕಳಿಗೆ ಸರಿಯಾದ ಸಂಸ್ಕಾರ ಹಾಗು ಇವತ್ತಿನ ಜೀವನದ ಬಗ್ಗೆ ಸರಿಯಾಗಿ ತಿಳುವಳಿಕೆ ನೀಡದಿರುವ ಕಾರಣ ನಮ್ಮ ಸಮಾಜದ ಹೆಣ್ಮಕ್ಕಳು ಬೇರೆ ಧರ್ಮೀಯರನ್ನು ವರಿಸುತ್ತಿದ್ದಾರೆ
    ತುಂಬಾ ವಿಷಾದದ ಸಂಗತಿ. ಇತ್ತೀಚಿನ ಕೆಲವು ಸಂಗತಿಗಳು ತುಂಬಾ ಚಿಂತನಾಕಾರಿ ಆಗಿವೆ
    ಎಲ್ಲರಿಗೂ ತಿಳಿದಿರುವಹಾಗೆ ನಮ್ಮ ಬ್ರಾಹ್ಮಣ ಸಮಾಜದಲ್ಲಿ ಹುಡ್ಗೀರು ಇಲ್ಲ ಅಂತ ಹೇಳ್ತಿದಾರೆ ಆದ್ರೆ ಇರೋ ಹುಡ್ಗೀರು ಬೇರೆ ಸಮಾಜದವರನ್ನು ಕಟ್ಟಿಕೊಂಡು ತಮ್ಮ ಜೀವನ ಹಾಳ್ ಮಾಡಿಕೊತಿದ್ದಾರೆ
    ಹೀಗೆ ಮುಂದುವರೆದ್ರೆ ಬ್ರಾಹ್ಮ್ಹನ ಹುಡುಗರು ನಮ್ಮ ಸಮಾಜದ ಹುಡ್ಗೀರನ್ನ ಮಾಡುವೆ ಆಗೋದಿಲ್ಲ ಅಂತಾನೆ ಬಹಿಷ್ಕಾರ ಹಾಕೋ ಪರಿಸ್ತಿತಿ ಬಂದೊದಗಿದ್ರೆ ವಿಶಾಧವಿಲ್ಲ (ಒಳ್ಳೆ ಹುಡ್ಗೀರು ಸಿಕ್ಕೋದೇ ಅಪರೂಪವಾಗಿದೆ)
    ಇನ್ನೊಂದು ಸೋಜಿಗದ ಸಂಗತಿ ಎಂದರೆ ಬ್ರಾಹ್ಮ್ಹನ ಹುಡ್ಗೀರಿಗೆ ತಮ್ಮ ಬಾಳ ಸಂಗತಿ ಎಲ್ಲ ವಿದ್ಯೆಯಲ್ಲೂ ಪಾರಂಗತನಗಿರ್ಬೇಕು ಅನ್ನೋ ಕೆಟ್ಟ ಚಾಳಿ ಬಂದಿದೆ.(ಹೆಚ್ಚಾಗಿ ಕೆಟ್ಟವಿದ್ಯೆಯಲ್ಲೇ ).
    ನಾನು ನೋಡಿರೋ, ಮಾತದಿರೋ ಹುದ್ಗೀರಲ್ಲಿ ೯೦% ಹುಡ್ಗೀರು ತಮ್ಮ ಸಂಗಾತಿ ಯೆಲ್ಲಾರಿಗಿನ್ತಾನು ಮುಂದೆ ಇರ್ಬೇಕ್ಕು(ಕುಡಿತ ಧೂಮಪಾನ ಮಾಡೋ ಕಲೆ ) ಅನ್ನೋ ಹುಂಬತನದಿಂದ ಅವ್ನು ಸೋಸಿಅಲ್ ಆಗಿರಬೇಕು ಅನ್ನೋ ಕಾರಣಕ್ಕೆ ಅವ್ನು ಮದ್ಯಪಾನ, ಧೂಮಪಾನ ಮಾಡ್ಬೇಕು ಅನ್ನೋ ಕೆಟ್ಟ ಆಸೆ ಹೊಂದಿದ್ದಾರೆ. ಆದ್ರೆ ಬ್ರಾಹ್ಮಣ ಹುಡುಗರು ಒಳ್ಳೆ ಸಂಸ್ಕಾರ (ಕೆಲವೊಂದು ಅಪಕ್ಯಾತಿ ಬಿಟ್ಟರೆ) ಹೊಂದಿ ಒಳ್ಳೆಬಾಳ ಸಂಗಾತಿ ಕನಸಲ್ಲಿರೋವಾಗ ಇಂಥ ಕೆಟ್ಟ ಇಚ್ಛೆ ಉಳ್ಳ ಹೆಣ್ಮಕ್ಕಳು ಅವರನ್ನ ದಾರಿ ತಪ್ಪಿಸಿ ಕೆಟ್ಟ ದಾರಿಲಿ ಹೊಗೊತರ ಮಾಡ್ತಿದಾರೆ. ಇಂತಕ್ಕೆತ ಚಾಳಿ ಇರೋ ಹುದ್ಗೀರಿನ್ದನೆ ಇವತ್ತಿನ ಈಯೆಲ್ಲ ಕೆಟ್ಟ ವಿಚಾರಗಳನ್ನು ನೋಡುವ ಹಾಗೆ ಆಗಿದೆ.
    ಪ್ರೀತಿಯ ಬಂದವರಲ್ಲಿ ಒಂದು ವಿನಂತಿ ದಯವಿಟ್ಟು ನಮ್ಮ ಮುಂದಿನ generation (ಜನಾಂಗ) ಒಳ್ಳೆರೀತಿ ಇಂದ ಬಾಳೋ ಹಾಗೆ ತಮ್ಮ ಮಕ್ಕಳಿಗೆ ಒಳ್ಳೇ ಸಂಸ್ಕಾರವನ್ನು ಅವ್ರಿಗೆ ಕಲಿಸಿ ಅಂತ ನಮ್ಮೆಲ್ಲ ಬಂದವರಲ್ಲಿ ನನ್ನ ನಲ್ಮೆಯ ವಿನಂತಿ.
    ಬರೀ ಒಂದು ಕೈ ಇಂದಾ ಚಪ್ಪಾಳೆ ಸಾದ್ಯವಿಲ್ಲ ನಾವು ಬೇರೆಯವರಿಗೆ ಹೇಳೋ ಬದಲು ನಮ್ಮ ಜನರಿಗೆ ಒಳ್ಳೆ ರೀತಿಂದ ಇರಲು ಹೇಳೋ ಮುಕಂತರ ಈ ಒಂದು ದುರ್ಗತಿಯನ್ನ ಸರಿ ಮಾಡಬಹುದು ಅನ್ನೋ ಒಂದು ಸಣ್ಣ ಪ್ರಯತ್ನ ನನ್ನದು

    ಇಂತಿ ನಿಮ್ಮ
    ಸತೀಶ್

  7. Ganeshanna Entha helthavu helire!!!!!!!??

    Idu nijavaagiyoo aalochane madekkada vishaya……

    Namma samskruthi li maduve helire, bare Deha sambandha alla…. Adu Januma janumada Anubandha……
    Enga haangare innu Koosu nodudu Olledu……Avara, bereyavvu haarsigondu Hoikkare Modalu!!!!

  8. ಹಿಂದಾಣ ಕಾಲಲ್ಲಿ ಬಾಲ್ಯ ವಿವಾಹ, ಸತೀ ಸಹಗಮನ ಪದ್ದತಿ ಮೊದಲಾದ ಪದ್ದತಿಗಕ್ಕೆ ಬಲಿಪಶುವಾಗಿಗೊಂಡಿದ್ದ ಭಾರತೀಯ ನಾರಿ ಇಂದು ಸಮಾನತೆಗೆ ಹೋರಾಟ ನಡೆಸಿಗೊಂಡು ಪುರುಷ ಸಮಾಜಲ್ಲಿ ಭುಜಕ್ಕೆ ಭುಜ ಕೊಟ್ಟು ನಿಂಬ ತಾಕತ್ತು ಲಭ್ಯ ಇದ್ದ್ದರೂ , ಸಂಸ್ಕೃತಿಯ ನೆಪಲ್ಲಿ, ಅದರ್ಲೀ ಕೂಡ ನಮ್ಮ ಹವ್ಯಕ ಸ್ತ್ರೀ ಮೇಲೆ ದಬ್ಬಾಳಿಕೆ ನಡವದು ವಾಸ್ತವ ಸಂಗತಿ.

    ಸನಾತನ ಸಂಸ್ಕೃತಿಯ ತವರೂರು ಹೇಳಿ ಹೇಳುವ ನಮ್ಮ ದೇಶಲ್ಲಿ ಹೆಣ್ಣಿನ ಮೇಲಿನ ಶೋಷಣೆಗೂ ಕೂಡಾ ಸಂಸ್ಕೃತಿಯಷ್ಟೇ ಪುರಾತನವಾದ ಇತಿಹಾಸ ಇದ್ದು . 'ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ !'ಹೇಳಿ ಹೇಳಿದ ಮನುವಿನ ಮಾತೇ ಇಂದು ಸಮಾಜಲ್ಲಿ ದೌರ್ಜನ್ಯ ಆಯಿದು.ಇದು ಅಂದ್ರಾಣ ದೌರ್ಜನ್ಯ .ಸ್ತ್ರೀಗೆ ಯಾವಾಗಲೂ ಪುರುಷ ಹೇಳಿ ಇಪ್ಪವ ಅಪ್ಪನ ಸಹೋದರನ, ಗಂಡನ ಹಾಗೂ ಮಗನ ರೂಪಲ್ಲಿ ರಕ್ಷಣೆ ನೀಡಕ್ಕೆ ಹೊರತು ಅದು ಹೆಣ್ಣೆಂಬ ಕಾರಣಕ್ಕೆ ಅದರ ಮೇಲೆ ದಬ್ಬಾಳಿಕೆ ನಡೆಸುವುದು ಯಾವ ನ್ಯಾಯ?ಇಂದ್ರಾಣ ಯಾಂತ್ರಿಕ ಯುಗಲ್ಲಿ ಸ್ತ್ರೀ ಪುರುಷರಿಬ್ಬರೂ ಒಂದೇ ನಾಣ್ಯದ ಎರಡು ಮುಖ ಅಪ್ಪಗ ಇವರಿಬ್ಬರ ನಡುಗೆ ತಾರತಮ್ಯ ಅಪ್ಪದು ಸರಿಯಲ್ಲ.ಈ ಯಾಂತ್ರಿಕತೆಯ ಅಗತ್ಯತೆ ಹಾಂಗೆ ನಮ್ಮ ಸಂಸ್ಕೃತಿಯ ಪರಿಣಾಮ ಭವಿಷ್ಯಲ್ಲಿ ಹೇಂಗೆ ಅಕ್ಕು?ಹೇಳುವ ಬಗ್ಗೆ ನಮ್ಮ ಕೂಸುಗ ತಿಳುದರೆ ಏನೂ ತೊಂದರೆ ಆಗ. ಈ ಬಗ್ಗೆ ಮುಖ್ಯವಾಗಿ ನಮ್ಮ ಹವ್ಯಕರಲ್ಲಿ ಸಂಘಟನೆ ಅಗತ್ಯ.ಮತ್ತೆ ಇದರ ಇಂದ್ರಾಣ ಕೂಸುಗ ಸರಿಯಾಗಿ ಅರ್ಥ ಮಾಡಿಗೊಮ್ಬದು ಅಗತ್ಯ ಹೇಳಿ ಎನ್ನ ಅಭಿಪ್ರಾಯ . ಸದಾಚಾರಕ್ಕೆ ನಮ್ಮ ಜೀವನ ಮುಡಿಪಾಗಲಿ ಅಲ್ದಾ ಒಪ್ಪಣ್ಣ? ಹರೇ ರಾಮ!!!!!

  9. @ Sri

    ಆತ್ಮ ಭುವಿಯ ಅಂತರಾತ್ಮದೊಳಿಪ್ಪ ದಿವ್ಯಚೇತನ ಒಪ್ಪಣ್ಣನ ಬೈಲಿಂಗೆ ಬಂದು
    ಕೃಪೆತೋರಿದ್ದಕ್ಕೆ ಸುರುವಿಂಗೆ ಅವಕ್ಕೆ ಪ್ರಣಾಮಂಗೊ.

    @ ಒಪ್ಪಣ್ಣ ಭಾವ
    ಕಾಳಸರ್ಪದ ಅಂಕುಶಕ್ಕೆ ಬಾಳದರ್ಪವ ಒಡ್ಡಿ ಕ್ಷಣಕ್ಷಣವೂ ವಿಷವ ಹೀರುವ ಪಿಡುಗಿನ
    ವಿವರ್ಸುತ್ತ ಒಪ್ಪ "ಕಾಲೋಚಿತ".
    ಒಪ್ಪಣ್ಣ ಹೇಳಿದ ಹಾಂಗೆ ಎಲ್ಲ ಅತ್ತೆ ಮಾವಂದ್ರು ಸರಿಯಾಗಿ ಯೊಚಿಸಿದ್ರೆ ಎಲ್ಲವೂ
    ಸರಿಯಕ್ಕದಲ್ಲದಾ? ಹಾಂಗೆ ಗುರುಗ ಹೇಳಿದ ಹಾಂಗೆ ಜೀವನ-ಸಂಗಾತಿ ಹೇಂಗಿರೆಕ್ಕು ಹೇಳುದ್ರ, ಆ ಬಗ್ಗೆ ಮಕ್ಕ ಯೋಚಿಸುವ ಕಾಲಲ್ಲೆ ತಿಳಿ ಹೇಳೆಕ್ಕು ಅಲ್ಲದಾ?

    ಗುರುಗ ಹರೇರಾಮ ಬ್ಲೊಗಿಲಿ ಬರೆದ ಒಂದು ಸಾಲು ಇಲ್ಲಿಯು ಪ್ರಸ್ತುತ ಅಕ್ಕು ಹೇಳಿ ಸೇರಿಸಿದ್ದೆ
    ಅದು ಏವದು ಹೇಳಿದ್ರೆ : –
    " ಶ್ರೀರಾಮನಂಥವರ ಸಹಧರ್ಮಚಾರಿಣಿಯರಾಗಿ ಮೈಥಿಲಿಯಂತೆ ನೀವು ಶೋಭಿಸುವುದನ್ನು ನೋಡಬಯಸುವೆವು..
    ರಾವಣನ ಕೈ ವಶವಾಗಿ ಲಂಕೆಯನ್ನು ಸೇರಿ ಲಂಕಿಣಿಯರಾಗುವುದನ್ನು ನೋಡಲಾರೆವು.. "

  10. laayaka baradde aatha!!!! prastutha namma samaajalliippa samasye idu…idarli aaraddu tappu aaraddu sari helule ediya….preethige jaathi matha kula gothra praaya ille helthavu(enage gonthille)…aada kaarana heenge appadu aagikku…

  11. @ Sri,
    <<
    ಹಾಳೆ ಬಿಳಿ ಇಪ್ಪಗ ಚಿತ್ರ ಬಿಡ್ಸೆಕ್ಕು..
    >>
    ಸತ್ಯವಾದ ಮಾತು ಗುರುಗಳೇ.
    ಇದಕ್ಕೇ ಅಲ್ಲದೋ ಅಜ್ಜನಕಾಲಲ್ಲಿ ಸಣ್ಣ ಇಪ್ಪಗಳೇ ಮದುವೆ ಮಾಡಿಗೊಂಡಿದ್ದದು. ಈ ಕೂಸು ಕುಟ್ಟನ ಪ್ರೀತಿಸುವ ಪ್ರಾಯಲ್ಲಿ ಅಜ್ಜಿಯಕ್ಕೊ ಮಕ್ಕಳ ಪ್ರೀತಿಮಾಡಿಗೊಂಡಿತ್ತಿದ್ದವು.

    ಬಿಳಿ ಹಾಳೆಯ ನಿಷ್ಕಲ್ಮಷತೆ. . .

    | ಹರೇ ರಾಮ |

  12. ವರ್ಶಗಟ್ಳೆ ಅಪ್ಪ ಹಣ್ಣಡಕ್ಕೆ ಹೆರ್ಕಿ ಕೊಲೆಜಿ೦ಗೆ ಕಳುಸಿದ್ದು, ಅಮ್ಮ ಕಪಿಲೆಯ ಹಾಲು ಕರದು ಕೊಟ್ಟು ಪರೀಕ್ಷೆಗೆ ಓದುಸಿದ್ದು ಎಲ್ಲ ಒ೦ದು ’ಕುಟ್ಟ’ ನ ಕ೦ಡಪ್ಪಗ ಮರತ್ತು ಹೋವುತ್ತು ಹೇಳಿ ಆದರೆ ಅದು ಕಲಿಯುಗದ ಮಹಿಮೆ ಅಲ್ಲದಾ ಒಪ್ಪಣ್ಣಾ??

  13. vaaranda vaarakke bharee laiku baravadu kanuttu.
    hrudayavanta mavandru attekko innadaru jagrataragali.jeevanda kasta gontille maja madle appa paise kodtavu.kaili ondu mobile sikkire ellavu aatu eegana makkoge.dari tappadde innadaru koosugu care tekkolali.jeevanakke end iduve alla.
    eegana koosugale munde olleya ammandragi balali.
    hare ramalli gurugala blog iddu.avakasha ippaga odi nodire entavara manasu olle daarili munnadeyuva hange iddu.good luck oppanno.
    hare raama

  14. Aanu yenna aasupassili enta 1 gataneya kandide ,hangagi makkoge mantra alla, avara appaammadiringekuda thiliyekku mattadaru yechettukongu heluva ondu ashaya……………….

  15. ಒಳ್ಳೆ ಪ್ರಸ್ತುತ ಶುದ್ದಿ. ಆ ಕೂಸಿನ ಕತೆ ಓದಿ ತುಂಬ ಬೇಜಾರಾತು.
    ಸಣ್ಣಂದಿಂದ ಪ್ರೀತಿಲಿ ನೋಡಿಗೊಂಡು, ಬೇಕಾದ್ದರ ಎಲ್ಲ ಕೊಡ್ಸಿ ಬೆಳಶಿದ ಅಪ್ಪಾಮ್ಮನ ಹೀಂಗೆ ಬಿಟ್ಟು ಹೋಪಲೆ ಮನಸ್ಸಾದರೂ ಹೇಂಗೆ ಬಕ್ಕು? ಎಲ್ಲವೂ ಕ್ಷಣಿಕದ ಮೋಡಿಗೆ ಬಲಿಯಾಗಿ ಹೋತನ್ನೇ…..ಛೆ ವಿಪರ್ಯಾಸ.
    ಒಪ್ಪಣ್ಣನ ಶುದ್ದಿಯ ಎಲ್ಲೊರೂ ಓದಿ ಎಲ್ಲೊರಿಂಗೂ ಹೇಳುವ. ನಮ್ಮ ಸಂಸ್ಕೃತಿ ಎಲ್ಲೆ ಮೀರಿ ಹೋಗದ್ದಾಂಗೆ ನೋಡಿಗೊಂಬದು ನಮ್ಮ ಕೈಲೇ ಇಪ್ಪದು ಅಪ್ಪು, ಒಂದೊಪ್ಪಲ್ಲಿ ಹೇಳಿದಾಂಗೆ.

    ಗುರುಗಳ ಮಾತು ನೂರಕ್ಕೆ ನೂರು ಸತ್ಯ.

  16. ಹಾಳೆ ಬಿಳಿ ಇಪ್ಪಗ ಚಿತ್ರ ಬಿಡ್ಸೆಕ್ಕು..
    ಮನಸು ತಿಳಿ ಇಪ್ಪಗ (ಹಲವು ಚಿತ್ರಂಗ,ಚಿತ್ತು-ಕಾಟುಗ ಬಪ್ಪ ಮೊದಲೇ) ಜೀವನ-ಸಂಗಾತಿಯ ಚಿತ್ರ ಮೂಡ್ಸೆಕ್ಕು..
    ಒಂದರಿಂದ ಹೆಚ್ಚು ಚಿತ್ರ ಒಂದರ ಮೇಲೆ ಇನ್ನೊಂದು ಹೇಳುವ ಹಾಂಗೆ ಬಂದರೆ ಏನೇನೂ ಚೆಂದ ಕಾಣ..ಅಲ್ಲದಾ..?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×