ಓ-ಹೋಯ್ ಭಾವಯ್ಯ…
ಮಧೂರು ಗೆಣಪ್ಪಣ್ಣಂಗೆ ನಮಸ್ಕಾರ ಮಾಡಿಗೊಂಡು, ಹವ್ಯಕ ಭಾಷೆಲೇ ಬರೆತ್ತ ಆಲೋಚನೆಲಿ ಈ ಬ್ಲೋಗು ಸುರು ಮಾಡ್ತೆ.
ಹವ್ಯಕ ಭಾಷೆಲಿ ಸುಮಾರು ನಮೂನೆ ಇದ್ದು- ಮಂಗ್ಳೂರು, ಶಿರ್ಸಿ, ಸಾಗರ ಇತ್ಯಾದಿ ಊರಿಲಿ ಬೇರೆ ಬೇರೆ ಭಾಶೆಗೊ.
ನಮ್ಮ ಮಂಗಳೂರು ಹೋಬಳಿಲೇ ಬೇಕಾದಷ್ಟು ಇದ್ದು. ಕುಂಬ್ಳೆ ಸೀಮೆ ಭಾಷೆ, ವಿಟ್ಲ ಸೀಮೆ ಭಾಷೆ, ಪಂಜ ಸೀಮೆ ಭಾಷೆ, ಚೊಕ್ಕಾಡಿ ಭಾಷೆ, ಮಡಿಕೇರಿಯ ಹೊಡೆಲಿ ಶುದ್ಧ ಕನ್ನಡ ಮಾತಾಡ್ತವು.
ಅದರ ಎಲ್ಲವನ್ನುದೇ ಬಪ್ಪ ಹಾಂಗೆ ಈ ಬ್ಲಾಗಿನ ಕೊಂಡು ಹೋವುತ್ತೆ ಹೇಳಿ ಎನ್ನ ನಂಬಿಕೆ..
ನಿಂಗಳುದೆ ಬರೆಯಿ ಒಪ್ಪಣ್ಣಂದ್ರೇ ..
ಆತೋ?
~~
ಒಪ್ಪಣ್ಣ
Latest posts by ಒಪ್ಪಣ್ಣ (see all)
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಎನಗೆ ಈ ಸೈಟಿನ ಬಗ್ಗೆ ಗೊಂತಾದ್ದೆ ತಿಂಗಳ ಹಿಂದೆ,ಹಾಂಗಾಗಿ ಒಪ್ಪ ಕೊಟ್ಟಿದಿಲ್ಲೆ.ಅಳಿಯೋ,ನಿನ್ನ ಕೆಲಸ ಮಾಂತ್ರ ಒಳ್ಳೆ ಐಡಿಯಾ,ಎಂತಕೆ ಹೇಳ್ರೆ,ಎನ್ನ ಹಾಂಗೆ ಕನ್ನಡ ಮಾತಾಡುವಲ್ಲಿಂದ ಮದುವೆ ಆಗಿ ಮನೆಲಿಯೂ ಕನ್ನಡ ಮಾತಾಡಲೆ ಅಭ್ಯಾಸ ಆಗಿಪ್ಪಗ ಹೀಂಗೆ ನಮ್ಮ ಭಾಷೇಲಿ ಬರವಲೆ ಕೊಶೀ ಆವುತ್ತು.
ಅದೆಂತ ಹಾಂಗೆ ಆದು ಕೆ. ಜಿ. ಮಾವ.. ನಿಂಗೊ ನಮ್ಮ ಭಾಷೆಯ ಕಲ್ಸೆಕ್ಕಿತ್ತು…
ನಮ್ಮ ಭಾಷೆ ಬತ್ತು,ಆದರೆ ಮಕ್ಕೊಗೆ ಶಾಳಗೆ ಹೊಪಗ ಸುಲಭ ಅಕ್ಕು ಹೇಳಿ ಸುರು ಮಾಡಿ ಅದೇ ಅಭ್ಯಾಸ ಆಯಿದು.ಎನ್ನ ಹೆಂಡತ್ತಿ ಮಗಂಗೂ ಹವ್ಯಕ ಬತ್ತು.
oppaakkandru baravadu bEDadO….? 🙁