ಸೈನಿಕರು ಹೇದರೆ, ತನ್ನ ಜೀವಮಾನ ಇಡೀ ದೇಶರಕ್ಷಣೆಲಿ ಕಳವ ಅಮೂಲ್ಯ ವೆಗ್ತಿಗೊ.
ಅವು ಗಡಿಗಳಲ್ಲಿ ಹಶು-ಛಳಿಗೆ ನಿಂದಿಪ್ಪ ಕಾರಣ ನಾವು ಆರಾಮಲ್ಲಿ ಬೈಲಿಲಿ ಒರಗಲೆಡಿತ್ತು, ಅಪ್ಪೋ.
ಅವರ ಕರ್ತವ್ಯ ಸಮೆಯಲ್ಲಿ ಹೇಂಗಾರೂ ಸುಖ ಇಲ್ಲೆ, ಅವರ ನಿವೃತ್ತಿ ಅನಂತರ ಆದರೂ ಕೊಶಿ ಇರಳಿ – ಹೇಳ್ತ ಲೆಕ್ಕಲ್ಲಿ ಯಥೇಷ್ಟ ಪಿಂಚಣಿ ಇತ್ಯಾದಿ ಸೌಕರ್ಯಂಗಳ ಸರಕಾರ ಕೊಡ್ತು.
~
ಸುಮಾರು ಸಮೆಯಂದ ಕೇಳ್ತಾ ಇದ್ದು – ಸೈನಿಕರ ಪಿಂಚಣಿಯ ಬಗ್ಗೆ.
ಒಂದು ಶ್ರೇಣಿ – ಒಂದು ವೇತನ (ಓರೊಪ್) – ಹೇಳುವ ಒಂದು ಕಲ್ಪನೆ ಮದಲಿಂದಲೇ ಇದ್ದತ್ತು. ಒಂದು ಕಾಲಘಟ್ಟಲ್ಲಿ ನಿವೃತ್ತರಾದ ಒಂದೇ ಹಂತದ ಎಲ್ಲ ಅಧಿಕಾರಿಗೊಕ್ಕೂ ಒಂದೇ ಶ್ರೇಣಿಯ ವೇತನ – ಹೇಳ್ತದು ಇದರ ಸಾರಾಂಶ. ಸಾವಿರದ ಒಂಭೈನೂರ ಎಪ್ಪತ್ತರಲ್ಲಿ ಇಂದಿರಾಗಾಂಧಿ ಇದರ ರದ್ದು ಮಾಡಿತ್ತು. ಅದಕ್ಕೆ ಬೇಕಾದ ಹಾಂಗಿಪ್ಪ ಲೆಕ್ಕಾಚಾರವ ಹಾಕಿತ್ತು.
ಆರದ್ದೂ ಸುದ್ದಿ ಇಲ್ಲೆ, ಗೌಜಿ ಗಲಾಟೆ ಇತ್ತಿಲ್ಲೆ.
~
ಮುಂದೆ – ಅದರ ಸರಕಾರ ಉರುಳಿದ ಮತ್ತೆ ಕ್ರಮೇಣ – ಅಂದಿದ್ದ ಆ ಓರೊಪ್ ಪುನಾ ಬೇಕು – ಹೇಳುವ ಕೋರಿಕೆ ಕೇಳುಲೆ ಸುರು ಆತು. ಅಷ್ಟಪ್ಪಗ ಹಲವು ಸರಕಾರಂಗೊ ಇದ್ದತ್ತು, ಅವು ಮೂಸಿಯೂ ನೋಡಿದ್ದವಿಲ್ಲೆ ಈ ಬೇಡಿಕೆಯ.
ಅಂಬಗಳೂ, ಆರದ್ದೂ ಸುದ್ದಿ ಇಲ್ಲೆ. ಯೇವ ಬುದ್ಧಿ ಜೀವಿಗಳೂ ಬಯಿಂದವಿಲ್ಲೆ.
~
ಮೊನ್ನೆ ಮೊನ್ನೆ, ಸೋಣೆ ಗಾಂಧಿಯ ಸರಕಾರ ಇದ್ದತ್ತು. ಅಷ್ಟಪ್ಪನ್ನಾರವೂ ಆರುದೇ ಈ ಓರೊಪ್ ಗೆ ತಲೆ ಹಾಕಿದ್ದವಿಲ್ಲೆ, ಅದರ ಅನ್ವಯಿಸುಲೆ ಆಸಕ್ತಿ ಮುತುವರ್ಜಿ ತೆಕ್ಕೊಂಡಿದವಿಲ್ಲೆ.
ಅಂಬಗಳೂ, ಯೇವ ಓರಾಟಗಾರನೂ ಅವರವರ ಏಸಿ ಕೋಣೆಂದ ಎದ್ದಿದಯಿಲ್ಲೆ.
~
ಎರಡು ಒರಿಶ ಹಿಂದೆ ಮೋದಿ ಅಜ್ಜ ಬಂತಲ್ಲದೋ – ಬಂದಪ್ಪದ್ದೇ, ಸೈನಿಕರಿಂಗೆ ಅನ್ಯಾಯ ಆವುತ್ತಾ ಇಪ್ಪದರ ಸರಿ ಮಾಡೇಕು ಹೇದು ಈ ಓರೊಪ್ ನ ಆದೇಶ ಮಾಡಿತ್ತಾಡ.
ಎಷ್ಟೋ ಲಕ್ಷ ಸೈನಿಕರಿಂಗೆ ಎಷ್ಟೋ ಸಾವಿರಕೋಟಿ ಮೊತ್ತ ಕೊಡೆಕ್ಕಾಗಿ ಬತ್ತು.
ಆದರೂ – ಅದು ಆಯೆಕ್ಕಾದ ಕಾರ್ಯ ಇದಾ, ಅಪ್ಪಲೇ ಬೇಕು – ಹೇದು ಆದೇಶ ಮಾಡಿತ್ತಾಡ.
~
ಸರಿ, ಓರೊಪ್ ಅನ್ವಯ ಆತು.
ನಿವೃತ್ತ ಸೈನಿಕರಿಂಗೆ ನೆಮ್ಮದಿಯ ನೆಗೆ ಮೂಡಿತ್ತು.
ನಲುವತ್ತು ಒರಿಶಂದ ಬಾಕಿ ಒಳುದ ಒಂದು ಕಾರ್ಯ ಕೈಗೂಡಿತ್ತು.
ಇಷ್ಟನ್ನಾರ ಯೇವ ಸರಕಾರಕ್ಕೂ ಈ ಬಗ್ಗೆ ಕಾಳಜಿ ಇಲ್ಲದ್ದದು, ಇಂದು ಮೋದಿ ಅಜ್ಜನ ಆಡಳ್ತೆಲಿ ಸೇರಿಬಂತು.
~
ಮೊನ್ನೆ ಮೊನ್ನೆ ಕಾಶ್ಮೀರಲ್ಲಿ ಗಡಿಂದ ಆಚ ಹೊಡೆಲಿ ಇಪ್ಪ ಉಗ್ರಗಾಮಿಗಳ ಹೊಡದು ಬಂದವಪ್ಪೋ ನಮ್ಮ ಸೈನಿಕರು – ಅದಕ್ಕೆ ಭಾರತ ರಾಜಕೀಯದ ರಾಹು, ಕೇತುಗೊ ಅಪಶಕುನ ಮಾತಾಡಿತ್ತಿದ್ದವು. ಸೈನಿಕರ ಆತ್ಮಾಭಿಮಾನವನ್ನೇ ಗಾಳಿಗೆ ಹಿಡಿತ್ತ ಮಾತುಗೊ ಅದು.
ಅವರ ಯೋಗ್ಯತಿಗೆಯೇ ಅಷ್ಟೆ – ಹೇದು ಜೆನಂಗೊ ಬಿಟ್ಟಿತ್ತಿದ್ದವು.
~
ಸರಿ, ಇಂದು?
ನಿನ್ನೆಲ್ಲ ಮೊನ್ನೆ, ಒಂದು ಪ್ರತಿಭಟನೆಲಿ, ನಿವೃತ್ತ ಸೈನಿಕ – ಪ್ರಸಕ್ತ ಕೋಂಗ್ರೇಸು ಪಂಚಾತು ಮೆಂಬರು – ಸ್ವಹತ್ಯೆ ಮಾಡಿಗೊಂಡತ್ತಾಡ. ಕಾರಣ – ಅದರ ಎಕೌಂಟಿಲಿ ಓರೊಪ್ ಲೆಕ್ಕಾಚಾರಲ್ಲಿ ವಿತ್ಯಾಸ ಆಯಿದು- ಹೇಳ್ತದು.
ಓರೊಪ್ ಪಿಂಚಣಿ ಬತ್ತಾ ಇದ್ದು, ಆದರೆ ಅದರ ಲೆಕ್ಕಾಚಾರಲ್ಲಿ ವಿತ್ಯಾಸ ಆಯಿದು – ಹೇಳ್ತ ಕಾರಣಕ್ಕೆ ಜೀವ ತೆಕ್ಕೊಳೆಕ್ಕೋ?!
ಕೂದು ಮಾತಾಡಿದ್ದರೆ ಸರಿ ಆವುತ್ತಿತ್ತು.
ಇರಳಿ.
~
ಈಗ ಎಂತಾಯಿದು ಹೇದರೆ – ಮೊನ್ನೆ ಮೊನ್ನೆ ಸೈನಿಕರ ಆತ್ಮಾಭಿಮಾನವನ್ನೇ ಗಾಳಿಗೆ ಹಿಡುದ ರಾಹು-ಕೇತುಗೊ ಈ ಸೈನಿಕನ ಬಗ್ಗೆ ಭಾರೀ ಭಾರೀ ಕಾಳಜಿ ತೋರ್ಸುತ್ತಾ ಇದ್ದವು.
ಅವರ ಮನೆಗೆ ಹೋಪದೇನೋ, ಅವಕ್ಕೆ ಒಂದು ಕೋಟಿ ಪರಿಹಾರಧನ ಕೊಡ್ಸು ಏನೋ, ಎರೆಷ್ಟು ಅಪ್ಪದೇನೋ – ಹೋ ಹೋ ಹೋ!
ಹಾಂಗಾರೆ, ಇಷ್ಟು ಸಮೆಯ ಎಲ್ಲಿತ್ತು ಆ ಸೈನಿಕ ಪ್ರೀತಿ?
ರಾಹು – ಗೆ ಇಟೆಲಿಯೂ, ಕೇತು – ಗೆ ಪಾತಕಿಸ್ತಾನವೂ ಇಷ್ಟದ ದೇಶ. ಅಷ್ಟ್ರಲ್ಲಿ ಅವಕ್ಕೆ ಭಾರತದ ಸೈನಿಕರ ಬಗ್ಗೆ ಕಾಳಜಿ, ಅಭಿಮಾನ ಬಂದದಾದರೂ ಹೇಂಗೆ!
ಎಲ್ಲವೂ ರಾಜಕೀಯವೇ.
~
ಒಟ್ಟಾರೆ, ಸೈನಿಕ ಒಬ್ಬರ ಗೋರಿ ಇವಕ್ಕೆ ರಾಜಕೀಯ ಸೌಧ ಕಟ್ಳೆ ಕಾರಣ ಆದ್ಸು ಭಾರೀ ಬೇಜಾರದ ಸಂಗತಿ.
~
ಒಂದೊಪ್ಪ: ವೃತ್ತಿ ಜೀವನ ಕಷ್ಟ ಆದಷ್ಟೂ ನಿವೃತ್ತ ಜೀವನ ನೆಮ್ಮದಿಲಿ ಇರಳಿ.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಒಳ್ಳೆದಾಯಿದು
ಮನೆ ಹೊತ್ತುವಗ ಆನೊಂದು ಬೀಡಿ ಹೊತ್ತುಸಿಗೊತ್ತೆ ಹೇಳುವವು ಈ ರಾಹು ಕೇತು ರೂಪದ ರಾಜಕಾರಣಿಗೋ
ಸಾಲಾಗಿ ನಿಲ್ಸಿ ಸಾರ್ವಜನಿಕರು ಕಲ್ಲು ಇಡ್ಕೆಕ್ಕು ಗಲ್ಫ್ ದೇಶಂಗಳ ಹಾಂಗೆ
ದಿನ ಪತ್ರಿಕೆಯ ಕೈಲಿ ಹಿಡಿವಾಗಳೇ `ವ್ಯಾಕ್ ‘ ಹೇಳುವ ಹಾಂಗಾವ್ತತಪ್ಪೋ …? ರಾಜಕೀಯ ನಾಟಕ ಪಾತ್ರಧಾರಿಗಳ ಹಗಲುವೇಷನ್ಗಳ ಕಳಚಿ ಮರುಭೂಮಿಲಿ ಸಾಲಾಗಿ ನಿಲ್ಸಿ ತಲೆಯ ಮಟಾಷ್ ಮಾಡಿ ಇಡ್ಕಿರೂ ಪಾಪ ತಟ್ಟ ಹೇಳಿ ಅನ್ಸುತ್ತಾ ಇದ್ದು.
ಒಳ್ಳೆ ಶುದ್ದಿ, ಸೈನಿಕರ ಬವಣೆ, ಅವರ ನಂಬಿಗೊಂಡಿಪ್ಪ, ಅವರ ಮನೆಯವರ…!, ಗ್ರೇಶುವಾಗ ಬೇಜಾರಾವುತ್ತು,