Oppanna.com

ಸಾವಿರ ಸಾವಿರ ವೀರರ ಕರ್ತೃ ಸಾವರ್ಕರ್..

ಬರದೋರು :   ಒಪ್ಪಣ್ಣ    on   30/05/2014    6 ಒಪ್ಪಂಗೊ

ಹಾಲುಮಜಲು ಪುಟ್ಟಬಾವಂಗೆ ಮೊನ್ನೆ ಸೋಮವಾರ ಮಾತೇ ಹೆರಡ. ಆ ದಿನದ ಖುಷಿ ಎಂತರ ಹೇದು ಗೊಂತಿದ್ದನ್ನೇ? ಅದೇ – ನರರ ಇಂದ್ರ ನರೇಂದ್ರ ಪ್ರಧಾನಿ ಆಗಿ ಎತ್ತರಲ್ಲಿ ಕೂದ್ದೇ ಖುಷಿಗೆ ಕಾರಣ.
ಸಿದ್ದಮೂಲೆಂದ ಹಾಲುಮಜಲು ಒರೆಂಗೆ ಒಟ್ಟಿಂಗೇ ನೆಡದರೂ, ಮಾತಾಡಿದ್ದು ಕಳಾಯಿಂದ ಮತ್ತೆಯೇ.  ಅಷ್ಟೊತ್ತೂ ಬರೇ ನೆಗೆಯ ಹೂಂಕುಟ್ಟಾಣ ಮಾಂತ್ರ!  🙂
ಅದಿರಳಿ.

~
ಪುಟ್ಟಭಾವಂಗೆ ಈಗಾಣ ಶುದ್ದಿಗೊ, ಪ್ರಸಕ್ತ ರಾಜಕೀಯಂಗೊ ಚೆಂದಕೆ ಅರಡಿಗು. ಅದರೊಟ್ಟಿಂಗೇ – ಹಳೆಕತೆಗೊ ಸುಮಾರು ಅರಡಿಗು. ಹಳತ್ತು ಹೇದರೆ ಯೇವದು? ಚೆನ್ನೈಭಾವ° ಸಣ್ಣ ಇಪ್ಪಗಾಣದ್ದಲ್ಲ, ಮಾಷ್ಟ್ರುಮಾವ° ಕಲಿತ್ತ ಕಾಲದ್ದಲ್ಲ, ಅದರಿಂದಲೂ ಮದಲು – ಶಂಭಜ್ಜನ ಕಾಲದ ಶುದ್ದಿಗೊ – ಪುಸ್ತಕಲ್ಲಿ ಓದಿ ಓದಿ ಅರಡಿಗು.
ಮೊನ್ನೆ ನೆಡಕ್ಕೊಂಡು ಬಪ್ಪಗ ಹಲವು ಶುದ್ದಿಗೊ ಮಾತಾಡಿದವು ಪುಟ್ಟಭಾವ°. ಕೇಳಿಗೊಂಡು ಹೋದ ಹಾಂಗೇ – ಇತಿಹಾಸದ ಹಲವು ಸಂಗತಿಗೊ ನಮ್ಮ ಕೆಮಿಗೆ ಬಿದ್ದತ್ತು. ಧೀಶಕ್ತಿಲಿಯೂ-ದೇಹಶಕ್ತಿಲಿಯೂ ಸಾಮರ್ಥ್ಯವಂತ ಒಬ್ಬ ನಮ್ಮ ದೇಶಲ್ಲಿ ಬಾಳಿ ಬೆಳಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹಾರಾಡಿ – ಕೊನೆಗೆ ದುರಂತ ನಾಯಕನ ಹಾಂಗೆ ಚಿತ್ರಿತ ಆಗಿ ಹೋಯಿದವು – ಹೇಳ್ತದು ಗೊಂತಾವುತ್ತು.

~

ಶಂಭಜ್ಜನ ಅಪ್ಪ° ವೆಂಕಪ್ಪಜ್ಜನ ಕಾಲಲ್ಲಿ –  ಭಾರತದ ನಾಸಿಕ – ನಾಸಿಕ್ ಹೇಳ್ತ ಊರಿಲಿ ವಿನಾಯಕ ಹೇಳ್ತ ಮಾಣಿ ಹುಟ್ಟುತ್ತ°. ವೇದ-ಶಾಸ್ತ್ರ-ಸಂಸ್ಕೃತದ ಕುಟುಂಬಲ್ಲಿ ಹುಟ್ಟಿದ ಮಾಣಿ ಸಣ್ಣ ಇಪ್ಪಗಳೇ ಸು-ಸಂಸ್ಕಾರಂಗೊ ಸಿಕ್ಕುತ್ತು. ದಾಮೋದರ ಸಾವರ್ಕರ್ ಹೇದು ಅಪ್ಪನ ಹೆಸರು. ಅಪ್ಪನ ಶಿಸ್ತಿನ ದಾರಿಲಿ ಬೆಳದ ಮಾಣಿ ಹೆಸರಾಂತ ಶಾಲೆ ಒಂದರ್ಲಿ ಕಲಿಯಲೆ ಸೇರ್ತ°. ಸಣ್ಣ ಪ್ರಾಯಲ್ಲೇ ಮದುವೆಯೂ ಆವುತ್ತು. ಇಷ್ಟೇ ಆಗಿದ್ದರೆ ದೇಶಕ್ಕೆ ಆ ಮಾಣಿಯ ಗುರ್ತ ಸಿಕ್ಕುತಿತೋ? ಅಲ್ಲ. ಇಷ್ಟೇ ಅಲ್ಲ.

ಕಲ್ತುಗೊಂಡಿಪ್ಪ ಕಾಲಲ್ಲೇ ದೇಶದ ಅಂಬಗಾಣ ಸ್ಥಿತಿ-ದುಃಸ್ಥಿತಿಗೊ ಚಿತ್ರಣ ಆವುತ್ತು. ಕಣ್ಣೆದುರು ಬತ್ತು. ಬ್ರಿಟಿಷರ ಅಧೀನಂದ  ಸ್ವರಾಜ್ಯವೇ ಇದಕ್ಕೆ ಪರಿಹಾರ ಹೇಳ್ತದು ಗೊಂತಾವುತ್ತು. ಅಂಬಗಾಣ ರಾಜಕೀಯ ವೆಗ್ತಿ ಆದ ಬಾಳಗಂಗಾಧರ ತಿಳಕರ ಪ್ರಭಾವ ಸಿಕ್ಕಿ, ಅವರ ಸ್ವರಾಜ್ಯ ಚಳುವಳಿಯ ಗಾಳಿ ಬೀಸುತ್ತು. ಕಲಿಯಲೆ ತುಂಬಾ ಉಶಾರಿ ಆದ ಕಾರಣ ವಿದ್ಯಾನಿಧಿ ಸಕಾಯಂದಾಗಿ ದೂರದ ಇಂಗ್ಲೇಂಡಿಲಿ ಕಲಿವ ಅವಕಾಶವೂ ಸಿಕ್ಕುತ್ತು. ದೇಹ ಇಂಗ್ಳೇಂಡಿಂಗೆ ಹೋದರೂ, ಮನಸ್ಸು ಭಾರತಲ್ಲೇ ಇಲ್ಲೆಯೋ – ಸ್ವತಂತ್ರ ಭಾರತ – ಹೇದು ಒಂದು ಬೈಲಿನ ಕಟ್ಟಿ ಬೆಳೆಶುತ್ತವಾಡ ಅಲ್ಲಿ. ಆ ಬೈಲಿನೋರೆಲ್ಲ ಸೇರಿಗೊಂಡು ಭಾರತಲ್ಲಿ ಎಂತ ಆವುತ್ತಾ ಇದ್ದು, ಯೇವ ಸಂಗ್ರಾಮಂಗೊ ಹೇಂಗೆ ಬೆಳೆತ್ತಾ ಇದ್ದು, ಬ್ರಿಟಿಷರ ದಮನಕ್ಕೆ ಎಂತ ಆಯೇಕು – ಹೇದು ವಿವರವಾಗಿ ವಿಮರ್ಶೆಮಾಡಿಗೊಂಡು ಇದ್ದಿದ್ದವಾಡ.

ಬ್ರಿಟಿಷರ ನೆಲಕ್ಕಲ್ಲೇ ಕೂದುಗೊಂಡು ಬ್ರಿಟಿಷರ ಎದುರೆ ಪಿತೂರಿ ಮಾಡಿರೆ ಅವಕ್ಕೆ ಗೊಂತಾಗದೋ? ಗೊಂತಾಗದ್ದೆ ಇಪ್ಪಲೆ ಅವೆಂತ ಬೋಚಬಾವಂದ್ರೋ? ಗೊಂತಾತು.  ಇನ್ನು ಇಲ್ಲಿದ್ದರೆ ಕಷ್ಟ ಹೇಳ್ತದು ಅವಕ್ಕೆ ಮನವರಿಕೆ ಆದ ಕಾರಣ ದೂರದ – ಅಂಡಮಾನಲ್ಲಿ – ನಿಜವಾದ ಅಂಡಮಾನಲ್ಲಿ ಕೊಂಡೋಗಿ ಮಡಗಲೆ ಏರ್ಪಾಡು ಮಾಡ್ತವಾಡ.

ಆ ಸಂದರ್ಭವ ಪುಟ್ಟಭಾವ° ವಿವರ್ಸಿದ್ದು ಅಂತೂ ಹೇಂಗಿತ್ತು ಹೇಳಿರೆ ಕೇಳಿ ಒಪ್ಪಣ್ಣನ ರೋಮ ಕುತ್ತ ಆತು.

ಹಾಂಗೆ, ಶಿಕ್ಷೆ ವಿಧಿಸಿದ ನಮುನೆಲಿ ಅಂಡಮಾನಕ್ಕೆ ಹಡಗಿಲಿ ಹೋಪದು. ಒಂದರಿ ಅಂಡಮಾನಕ್ಕೆ ಎತ್ತಿದ ಮತ್ತೆ ಜೀವಮಾನವೇ ಕಳದು ಹೋದ ಹಾಂಗೆ ಹೇಳ್ತ ಸಂಗತಿ – ಸ್ವತಃ ಸಾವರ್ಕರಿಂಗೂ ಅರಡಿಗು. ಹಾಂಗಾಗಿ, ಗಟ್ಟಿ ಪೋಲೀಸುಗೊ ಅವರ ಕಾವಲಿಂಗೆ ಇದ್ದರೂ, ಅವರ ಕಣ್ಣುತಪ್ಪುಸಿ ಓಡೇಕಾದ ಅನಿವಾರ್ಯತೆ ಇದ್ದತ್ತು. ಎಲ್ಲಿಯೂ ಅದಕ್ಕೆ ಅವಕಾಶ ಇಲ್ಲೆ. ಎಂತ ಮಾಡುದು?
ಹಡಗಿಂಗೆ ಹತ್ತಿ, ವಿಪರೀತ ಚಳಿಯ ಉಪ್ಪುನೀರಿನ ಸಮುದ್ರದ ಮೇಗೆ ಹಡಗು ಹೋವುತ್ತಾ ಇಪ್ಪಗಳೇ – ಪಾಯ್ಖಾನೆಗೆ ಹೋಪ ಹೆಳೆಲಿ ಈ ಸಾವರ್ಕರ್ ಕೋಣೆಯೊಳ ಹೋದ್ದದಡ – ಪಾಯ್ಕಾನೆಗೆ ಇದ್ದದು ಒಂದೇ ಒಂದು ಸಣ್ಣ ಕಿಟ್ಕಿ – ಆ ಕಿಂಡಿಲಿ ಆಗಿ ಮೈ ಹೊಗ್ಗುಸಿ ತೆಗದ್ದು ಹಾರಿದ್ದು ಸಮುದ್ರಕ್ಕೆ. ಮೈಗೆ ಆದ ಗೀರು ಬೇರೆ, ಸಮುದ್ರದ ಖಾರ ಉಪ್ಪುನೀರು ಬೇರೆ, ಪ್ರಕಾಂಡ ಚಳಿನೀರು ಬೇರೆ – ಎಲ್ಲಾ ವೈರುಧ್ಯಂಗಳ ಎದುರುಸಿಗೊಂಡು ಈಜಿ ಈಜಿ ಈಜಿ – ಸುಮಾರು ಹೊತ್ತಪ್ಪಗ ದಡ ಸೇರಿದವು. ಅಲ್ಲಿ ಇದ್ದದು ಪ್ರೆಂಚರ ಸೈನಿಕರು. ಉಶಾರಿ ಅಪ್ಪಲೆ ಪುನಾ ಹಿಡುದು ಕೊಟ್ಟವು – ಬ್ರಿಟಿಷರ ಕೈಗೆ. ಛೇ!
ಇರುವಾರ ಶತ್ರುಗಳ ಕೈಗೇ ಸಿಕ್ಕಿದರೂ ಸ್ವತಂತ್ರ ಅಪ್ಪಲೆ ಅವು ಮಾಡಿದ ಪ್ರಯತ್ನ ಎಲ್ಲೋರಿಂಗೂ ಮಾದರಿ.
ಮೊದಲೇ ಕೆಂಪುಗಣ್ಣ ಬ್ರಿಟಿಷರಿಂಗೆ ಈಗ ಕೋಪ ನೆತ್ತಿಗೇ ಏರಿತ್ತಾಡ. ಹಾಂಗಾಗಿ, ಇನ್ನೂ ಉಗ್ರ ಶಿಕ್ಷೆ ಹಾಕಿ ಅಂಡಮಾನಿಂಗೆ ಎತ್ತುಸಿದವಾಡ. ದಿನಾ ಗಾಣ ತಿಗುರುಸೇಕು. ಗೆದ್ದೆ ಗರ್ಪೇಕು. ಕಲ್ಲತುಂಡು ಎತ್ತಿಂಡು ನಿಲ್ಲೇಕು – ಕೈ,ಕಾಲು, ಪಾದ, ಮೀನಖಂಡ ಎಲ್ಲವೂ ತಳದು ತಳದು – ಜೀವವೇ ಅರ್ಧ ಆಗಿ ಹೋತು. ಸಮಗಟ್ಟು ಅನ್ನಾಹಾರ ಇಲ್ಲದ್ದ ಕಾರಣ ರೋಗ ರುಜಿನಂಗಳೂ ಮೈಗೆ ಅಂಟಿ ಹೋತು. ಇಷ್ಟೆಲ್ಲ ಅಪ್ಪಗ ಅವರ ಪ್ರಾಯ? ಮೂವತ್ತಾವುತ್ತಷ್ಟೆ!!

~

ಅಲ್ಲೂ ಇದರೆಡಕ್ಕಿಲಿ ಪುರುಸೊತ್ತು ಸಿಕ್ಕಿ ಅಪ್ಪಗ ಆಂತರ್ಯಕ್ಕೆ ಇಳುದು ಧರ್ಮ-ಹಿಂದುತ್ವ-ಸನಾತನತೆ-ಸಮಾಜ ಇತ್ಯಾದಿಗಳ ಚಿಂತನೆ ಮಾಡಿಗೊಂಡವು. ಹಗಲಿಡೀ ದುಡಿಮೆ, ಇರುಳಿಡೀ ಚಿಂತನೆ!
ಒಂದೊಂದು ಚಿಂತನೆಗಳೂ ಒಂದೊಂದು ಪುಸ್ತಕ ಆಗಿ ಹರುದು ಬಂತು. ಮುಂದಾಣ ಸಮಾಜಕ್ಕೆ ಅದೆಲ್ಲವೂ ಒಂದೊಂದು ಆಸ್ತಿ ಆಗಿ ಹೋತು.

ಅದರಿಂದ ಮದಲು ನೆಡದ ಮಹಾ ಸ್ವಾತಂತ್ರ್ಯ ಸಂಗ್ರಾಮದ ಎಳೆ ಎಳೆಯ ಬಿಡುಸಿ ಪುಸ್ತಕ ರೂಪಲ್ಲಿ ತಂದ ಮಹನೀಯ ಕಾರ್ಯ ಅವು ಮಾಡಿದ್ದದು ಜೈಲಿಲಿ ಕೂದುಗೊಂಡೇ ಅಡ.

~

ಅವರ ರೋಗ ಅತಿರೇಕಕ್ಕೆ ಹೋಗಿ, ದೇಹ ಜೀರ್ಣ ಆವುತ್ತಾ ಇಪ್ಪ ಸಂದರ್ಭಲ್ಲೇ – ಅವಕ್ಕೆ ಬ್ರಿಟಿಷರು ಹತ್ತಾರು ಷರತ್ತಿನ ಮೇಗೆ ಹೆರ ಬಿಟ್ಟದಾಡ. ಎಲ್ಲಿಗೂ ಹೋಪಲೆಡಿಯ, ಎಂತದೂ ಮಾತಾಡ್ಳೆಡಿಯ, ಆರನ್ನೂ ಕಾಂಬಲೆಡಿಯ – ಹೀಂಗೊಂದು ಗೃಹಬಂಧನದ ನಮುನೆಲಿ ಜೀವನ ನೆಡೆಶಿಗೊಂಡು ಇತ್ತಿದ್ದವಡ. ಆದರೂ – ಕಣ್ಣು ಕಟ್ಟಿ, ಗುಟ್ಟುಗುಟ್ಟಾಗಿಯೇ ಸಂಘಟನೆ ಕಟ್ಟಿ ಬೆಳೆಶಿದ ರೀತಿ ಮಾಂತ್ರ ಅದ್ಭುತ ಅಡ.

~

ಹಿಂದೂ ಮಹಾ ಸಭಾ – ಹೇದು ಒಂದು ಪಕ್ಷ ಸ್ಥಾಪನೆ ಮಾಡಿ, ಭಾರತದ ಹಿಂದುಗೊ ಎಲ್ಲೋರುದೇ ಒಟ್ಟಾಯೇಕು – ಹೇಳ್ತ ವಿನೂತನ ಯೋಜನೆಯ ಅಳವಡುಸಿಗೊಂಡವಾಡ. ಮುಸ್ಲಿಂ ಲೀಗ್ ಗೆ ವಿರುದ್ಧವಾಗಿ ಹಿಂದುಗಳ ಗುಂಪಿನ ಕಟ್ಟಿ ಬೆಳೆಶುತ್ತ ಎದೆಗಾರಿಕೆ ತೋರ್ಸಿದ ಮಹಾನುಭಾವ ಅಡ.

~

ಮುಂದೆ ಬ್ರಿಟಿಷರು ಹೆರಟು ಹೋದವು. ಆದರೆ, ಅವು ಹೋದ ಮತ್ತೂ ಸಾವರ್ಕರಿಂಗೆ ಮರ್ಯಾದಿ ಸಿಕ್ಕಿದ್ದಿಲ್ಲೇಡ. ಸುರುವಾಣ ಸರ್ಕಾರ ಅಂತೂ, ಬ್ರಿಟಿಷರ ಸರ್ಕಾರದಷ್ಟೇ ಕ್ರೂರವಾಗಿ ನೆಡೆಶಿಗೊಂಡತ್ತಡ. ನಾಥೂರಾಮ ಗೋಡ್ಸೆ ಹೇಳ್ತೋನು ಒಬ್ಬ ಗಾಂಧಿಅಜ್ಜಂಗೆ ಬೆಡಿಮಡಗಿದ್ದರ್ಲಿ, ವಿನಾಕಾರಣ ಈ ಸಾವರ್ಕರನ ತಂದು ಸಿಕ್ಕುಸಿ ಹಾಕಿದ್ದಡ. ಲೊಟ್ಟೆಕೇಸಿಲಿ ಸಿಕ್ಕುಸಿ ಹಾಕಿದ್ದದು ಬೇರೆ ಆರೂ ಅಲ್ಲ, ಸ್ವತಃ ಸರಕಾರವೇ!

ಪಾಪ, ಅಷ್ಟನ್ನಾರ ದೇಶಭಕ್ತ, ಪರಮವೀರ, ಪ್ರಕಾಂಡ ಪಂಡಿತ – ಹೇದು ವ್ಯಕ್ತಿತ್ವ ಬೆಳೆಶಿಂಡ ಸಾವರ್ಕರಂಗೆ ಅಂತೇ ಗಾಂಧೀಹಂತಕರ ಬಿರುದು ಕೊಟ್ಟವಡ.

ಸ್ವಾತಂತ್ರಕ್ಕೆ ಜೀವದ್ರವವ ಹರಿಶಿ ಹೋರಾಡಿದ್ದಕ್ಕೆ ಸಣ್ಣ ಭೇಷ್ ದೇ ಇಲ್ಲೆ, ಅದರ ಮೇಗಂದ ಹೀಂಗೊಂದು ಅಪವಾದ ಬೇರೆ!

ಚೇ – ಹೇದು ಪುಟ್ಟಬಾವ° ಬೇಜಾರು ಮಾಡಿಗೊಂಡ°.

ವಿನಾಯಕ ಸ್ತುತಿ.. ಬೇರಿಂಗೆ ಚಿಗುರಿನ ನಮನ..
ವಿನಾಯಕ ಸ್ತುತಿ.. ಬೇರಿಂಗೆ ಚಿಗುರಿನ ನಮನ..

~
ಅದೇನೇ ಇರಳಿ, ಅಂಬಗಾಣ ಹಿಂದೂ ಮಹಾಸಭಾ ದ ಚಿಂತನೆಯೇ ಮುಂದೆ ಜನಸಂಘ ಆಗಿ, ಜನತಾ ಪಕ್ಷ ಆಗಿ, ಭಾರತೀಯ ಜನತಾ ಪಕ್ಷ ಆಗಿ ಬೆಳದು ಬಪ್ಪಲೆ ಕಾರಣ ಆತು – ಹೇಳ್ತದು ಪುಟ್ಟಭಾವನ ಧೃಡ ನಂಬಿಕೆ. ಅಂದು ಸಾವರ್ಕರ್ ಹಾಕಿದ ಬಿತ್ತು ಹುಟ್ಟಿ, ಬೆಳದು ಹೆಮ್ಮರವಾಗಿ ಸುಧೃಡ ಸರ್ಕಾರ ರಚನೆ ಅಪ್ಪ ಹಂತಕ್ಕೆ ಬಂದು ನಿಂದಿದು.

ಸಾವರ್ಕರನ ಗಾಂಧೀಹಂತಕರಾಗಿ ಕಂಡೋರಿಂಗೆ ನಾಲ್ಕು-ಮತ್ತೊಂದುನಾಲ್ಕು ಸೀಟುಗೊ ಮಾಂತ್ರ ಸಿಕ್ಕಿದ್ದಾಡ – ಹೇದು ನೆಗೆಮಾಡಿದ°.

ಎಲ್ಲವನ್ನೂ ದೇವರು ನೋಡಿಗೊಳ್ತ°. ದೇಶಭಕ್ತ, ವೀರ ಸಾವರ್ಕರನ ಆತ್ಮ ಈ ಭಾರತವ ಕಾವದಪ್ಪು ಹೇಳಿ ನಿಜ ಆದರೆ, ಅದೇ ಆತ್ಮವೇ ಇಂದು ಇಂಥಾ ಸರ್ಕಾರದ ರಚನೆಗೆ ಕಾರಣ ಆದ್ಸು – ಹೇಳಿ ಘಟ್ಟಿಗೆ ಹೇಳಿದ° ಪುಟ್ಟಭಾವ°.

ಕಳಾಯಿಂದ ಹಾಳುಮಜಲಿಂಗೆ ದೂರ ಇಲ್ಲೆನ್ನೆ – ಇಷ್ಟು ಮಾತಾಡಿ ಅಪ್ಪಗ ಹಾಲುಮಜಲಿನ ಕವಲು ಎತ್ತಿತ್ತು.
ಅವ° ಅತ್ಲಾಗಿ ತಿರುಗಿದ°, ನಾವು ಬೈಲಿಲೇ ಮುಂದುವರುಸಿತ್ತು.

~~
ನರೇಂದ್ರ ಇಂದು ಇಂದ್ರಪದವಿಗೆ ಏರೇಕಾರೆ – ಅದರ ಹಿಂದೆ ಎಷ್ಟೆಲ್ಲ ಸಂಗತಿಗೊ ಕಾರಣ ಆಯಿದು – ಹೇಳ್ತದು ಮನವರಿಕೆ ಆತು. ತೂಷ್ಣಿಗೆ ವಿವರ್ಸಿದ ಪುಟ್ಟಭಾವನ ಗ್ರೇಶಿ ಕೊಶಿ ಆತು. ನಿನ್ನೆಲ್ಲ ಮೊನ್ನೆ, ಆ ಸಾವರ್ಕರಿನ ನೂರಾ ಮೂವತ್ತೆರಡ್ಣೇ ವರ್ಧಂತಿ ಅಡ. ಒಂದರಿ ಬೈಲಿಂಗೂ ನೆಂಪು ಮಾಡಿಕ್ಕುವೊ° ಹೇದು ಈ ಶುದ್ದಿ ಹೇಳಿದ್ದದು.
ಸಾವರ್ಕರರ ಜೀವನ, ಅವರ ಬರವಣಿಗೆಗೊ ಸಾವಿರ ಸಾವಿರ ವೀರರ ಈ ಭೂಮಿಗೆ ತೆಯಾರು ಮಾಡಿ ಕೊಟ್ಟಿದು. ಹಾಂಗಾಗಿಯೇ ವೀರ ಸಾವರ್ಕರರ ಜೀವನ ಇನ್ನಾಣ ಮಕ್ಕೊ ಓದೇಕು – ಹೇದು ಎಲ್ಲರೂ ಬಯಸುದು.

ನರೇಂದ್ರಂದೇ ಶ್ರದ್ಧೆಲಿ ಹೋಗಿ ವಿನಾಯಕ ಸಾವರ್ಕರನ ನೆಂಪುಮಾಡಿ, ಹೂಗು ಹಾಕಿ ಹೊಡಾಡಿಕ್ಕಿ ಬಯಿಂದಾಡ.

~
ಒಂದೊಪ್ಪ: ನರೇಂದ್ರನೇ ಆದರೂ ಕಾರ್ಯಾರಂಭಲ್ಲಿ ವಿನಾಯಕ ಸ್ಮರಣೆ ಮಾಡಿಗೊಳ್ಳೆಕ್ಕು. ಅಪ್ಪೋ?
ಸೂ: ಪಟಇಂಟರುನೆಟ್ಟಿಂದ

6 thoughts on “ಸಾವಿರ ಸಾವಿರ ವೀರರ ಕರ್ತೃ ಸಾವರ್ಕರ್..

  1. ಒಪ್ಪಣ್ಣ, ಒಳ್ಳೆ ಶುದ್ದಿ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾಮಹಿಮರ ನೆಂಪು ಮಾಡುದು ನಮ್ಮ ಕರ್ತವ್ಯ ಅಲ್ಲದೋ?
    ಬಂದ ದಾರಿಯ ಮರವದು ಕೂಡಾ ನಮ್ಮ ಒಂದು ಕ್ರಮವೇ ಆಗಿ ಹೋಯಿದು. 🙁 ಹಾಂಗಾಗಿ ಸಾವರ್ಕರನಂತ ವೀರಪುರುಷನ ಎಲ್ಲೊರೂ ನಿತ್ಯ ಸ್ಮರಣೆ ಮಾಡ್ಲೆ ಮರದವು.
    ಇದು ನಮ್ಮ ದೇಶದ ದೌರ್ಭಾಗ್ಯವೇ ಅಲ್ಲದಾ?
    ಏನೇ ಇದ್ದರೂ ಈಗ ಎಲ್ಲೊರಿಂಗೂ ಪ್ರಾತಃ ಸ್ಮರಣೆ ಮಾಡ್ತ ಹಾಂಗೆ ಇಪ್ಪ ಅವಕಾಶ ಒದಗಿ ಬಯಿಂದನ್ನೆ? ಅದೇ ಒಂದು ಸಂತೋಷದ ವಿಚಾರ.
    ಹೀಂಗಿಪ್ಪ ಸಾವಿರ ಸಾವಿರ ಸಾವರ್ಕರನಂತ ಸ್ವಾತಂತ್ರ್ಯ ಯೋಧರ ನೆಂಪು ಮಾಡಿ ಅವಕ್ಕೆ ಗೌರವ ಕೊಡುವ ಹಾಂಗೆ ಆಗಲಿ..

  2. ಎಲ್ಲೋರು ಎಲ್ಲ ಕಾಲಲ್ಲಿ ಸ್ಮರಸೆಕ್ಕಾದ ವೆಗ್ತಿ ವೀರ ಸಾವರ್ಕರ್. ಸಕಾಲಿಕ ಬರಹ ಒಪ್ಪಣ್ಣ.

  3. ಹರೇರಾಮ, ಪ್ರಾತಃಸ್ಮರಣೀಯ ಜೆನ ಸಾವರ್ಕರರಿಂಗೆ ಕೋಟಿ-ಕೋಟಿ ನಮನ.ನಮ್ಮ ಗಡಿ ಕಾಯ್ತ ವೀರ ಅಮರ ಯೋಧರ ಹಾಂಗೆ ಅತ್ಯುನ್ನತ ಶಿಖರಲ್ಲಿ ನಿಲ್ಲೇಕ್ಕಾದ ಜೆನ, ಶ್ರೀ ಅಕ್ಕ ಹೇಳಿದ ಹಾಂಗೆ ಒಳ್ಳೆ ಜೆನಕ್ಕೆ ಒಳ್ಳೆ ಕಾಲ ಬಂದಪ್ಪಗ ಅಂತವರ ಬೆಂಬಲಿಗರಿಂಗೆ ಬಹು ಸಂತೋಷಾವುತ್ತಿದ. ಒಳ್ಳೇ ಶುದ್ದಿ ಒಪ್ಪಣ್ಣ.

  4. ಒಪ್ಪಣ್ಣೋ,
    ಶುದ್ದಿ ಭಾರೀ ಲಾಯ್ಕಾಯಿದು.

    ಅಬ್ಬೆ ಮಣ್ಣಿಂಗೆ ಬಂದ ಕಷ್ಟವ ನಿವಾರುಸುಲೆ ಅಬ್ಬೆ ಮಣ್ಣಿಂದ ದೂರಲ್ಲಿದ್ದೂ ಸರ್ವ ಪ್ರಯತ್ನ ಮಾಡ್ಲೆ ಆವುತ್ತು ಹೇಳುದಕ್ಕೆ ಸಾವರ್ಕರ ಸಾಕ್ಷಿ ಅಲ್ಲದೋ? ತನ್ನ ಜೀವ ಸರ್ವಸ್ವವನ್ನೂ ಅಬ್ಬೆಗೆ ಸಮರ್ಪಣೆ ಮಾಡಿ, ಸಾವಿರ ಸಾವಿರದ ಜವ್ವನಿಗರಿಂಗೆ ಸಾಧನೆಗೆ ದಾರಿ ಮಾಡಿ ಕೊಟ್ಟ ಸಾವರ್ಕರ್ ನ ಮೇಲೆ ಅಪವಾದ ಹಾಕಿದರೂ ಕೂಡ ಅವರ ನಿಸ್ವಾರ್ಥ ಸೇವೆಯ ವ್ಯರ್ಥ ಅಪ್ಪಲೆ ಅವು ನಂಬಿದ ದೇಶಭಕ್ತಿ ಬಿಟ್ಟಿದಿಲ್ಲೆ. ಅವರ ಸಾರ್ಥಕ ಜೀವನದ ಸಾರವ ಒಪ್ಪಿದ ಹಲವು ಮನಸ್ಸಿಲಿ ಅದು ಬೆಚ್ಚಂಗೆ ಇದ್ದತ್ತು. ತಲೆಮಾರುಗೊಕ್ಕೆ ಹರುದತ್ತು. ಇಂದಿಂಗೆ ಅವಕ್ಕೊಂದು ಸ್ಥಾನಮಾನ ಕೊಟ್ಟು ಗವುರವಿಸುವ ಹಾಂಗೆ ಇಪ್ಪ ಸಂದರ್ಭ ಬಂತು.

    ಒಪ್ಪಣ್ಣ,
    ಕಾಲ ಎಲ್ಲವನ್ನೂ ನೋಡ್ತು, ಒಳ್ಳೆದು ಕೆಟ್ಟದರ ಮಾಪನ ಮಾಡ್ತು. ಕೆಟ್ಟಕಾಲ ಬಹು ಸಮಯ ಇದ್ದ ಹಾಂಗೆ ನವಗೆ ಅನಿಸಿದರೂ ಒಳ್ಳೆ ಕಾಲಕ್ಕೆ ಸಮಯ ಬಂದೇ ಬತ್ತು. ಒಳ್ಳೆ ಕೆಲಸಂಗೊಕ್ಕೆ ಮಾನ್ಯತೆ ಸಿಕ್ಕುತ್ತು.
    ಸಾವರ್ಕರ್ ನ ದೇಶಪ್ರೇಮ ಮುಂದಿನ ಪೀಳಿಗೆಗೂ ಆದರ್ಶ ಆಗಲಿ..
    ಹಲವಾರು ಕುಟುಂಬಲ್ಲಿ ಹೀಂಗಿಪ್ಪ ಚೇತನಂಗೊ ಹರುದು ಬರಲಿ..
    ಅಬ್ಬೆಮಣ್ಣು ಎಲ್ಲಾ ರೀತಿಂದಲೂ ರಕ್ಷೆಲಿರಲಿ..
    ಒಂದೊಪ್ಪ ಲಾಯ್ಕಾಯಿದು ಒಪ್ಪಣ್ಣ.

  5. ಹಿಂದು ಮಹಾ ಸಭೆ ಬೆಳವಲೆ ಒಳ್ಳೆ ವರ್ಕು ಮಾಡಿದ ಸಾವರ್ಕರನ ನೆಂಪು ಮಾಡಿದ ಶುದ್ದಿ ನೋಡಿ ಸಂತೋಷ ಆತು.

  6. ಶುದ್ದಿ ಓದಿ ಕೊಶಿಯಾತಿದಾ ಹೇದೊಂದು ಚೆನ್ನೈವಾಣಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×