ಹೊಸನಗರಲ್ಲಿ ನೆಡವ ಶಪಥಪರ್ವಕ್ಕೆ ಹೇಳಿಕೆ ಬೈಲಿಂಗೆತ್ತಿದ್ದೇ ಎತ್ತಿದ್ದು, ಎಲ್ಲಾ ಮನೆಂದ ಎಲ್ಲೋರು ಹೆರಟವು!!
ಎಲ್ಲೊರೂ ಹೆರಡುವ ಪರಿಸ್ಥಿತಿ ಬಂದಿತ್ತು ಅಲ್ಲದಾ? ನಮ್ಮ ನಮ್ಮ ಮನೆಗೆ ಆಪತ್ತು ಬಯಿಂದು ಹೇಳಿ ಶ್ರೀಮಠದ ಶಿಷ್ಯರು ಮಠದ ರಕ್ಷಣೆ ನಮ್ಮ ಹೊಣೆ ಹೇಳಿ ಜವಾಬ್ದಾರಿಲಿ ಹೆರಟದು.
~
ಉದೆಕಾಲಕ್ಕೆ ನಾವು ಬಸ್ಸಿನ ಕರೆ ಸೀಟು ಹಿಡುದು ಕೂದತ್ತು. ಹೇಳಿದ ಹೊತ್ತಿಂಗೆ ಸರೀ ಹೊಸನಗರ ಎತ್ತಿತ್ತು.
ದೂರಂದ ಬಂದವಕ್ಕೆ ಹೇದು ತಿಂಡಿ ಇತ್ತಿದಾ! ಮತ್ತೆ ಇಡೀ ದಿನ ಉಪವಾಸ ಆದ ಕಾರಣ ಹೊಟ್ಟೆ ತುಂಬುಸಿ, ಎದುರು ಕಂಡವರ ಹತ್ರೆ ಹರೇರಾಮ ಹೇದು ಕುಶಲ ಮಾತಾಡಿ ಅಪ್ಪಗ ಎದುರಾಣ ಬಾಗಿಲು ಮುಟ್ಟಿತ್ತು.
ಬಾಗಿಲಿಲಿ ಎಂತ ಆಶ್ಚರ್ಯ!!
ಸಾಕ್ಷಾತ್ ಶ್ರೀ ಗುರುಗೊ ಬಾಗಿಲಿಲಿ ಪೀಠಲ್ಲಿ ಕೂಯಿದವು!!
ಆ ದೃಶ್ಯ ನೋಡಿದ ಎಂತವಂಗೇ ಆದರೂ ಒಂದರಿ ಕರುಳು ಹಿಂಡುಗು!!
ಗುರುಗೊ ಮಠದ ಮೇಲೆ ಬಂದ ಆಪತ್ತಿನ ವಿವರುಸಿ, ಗುರುಗಳೇ ಮಠದ ಬಾಗಿಲಿಲಿ ಕೂದು ಮಠವ ಕಾವ ಪರಿಸ್ಥಿತಿ ಈಗಾಣ ಆಡಳಿತ ತಂದು ಕೊಟ್ಟಿದು.
ಈ ಯುದ್ಧದ ಸಮೆಯ ಎಲ್ಲೋರೂ ಸೇರಿ ಶಪಥ ಮಾಡೆಕ್ಕು. ಎಂತದೇ ಆದರೂ ನಮ್ಮ ಅಸ್ತಿತ್ವದ ಸಾಕ್ಷಿ ಆಗಿಪ್ಪ ಮಠವ ಅನ್ಯಾಕ್ರಮಣ ಮಾಡ್ಲೆ ಬಿಡ್ಲೆ ಇಲ್ಲೆ.
ನಮ್ಮ ಪ್ರಾಣ ಕೊಟ್ಟಾದರೂ ನಾವು ಮಠ ರಕ್ಷಣೆ ಮಾಡುದು ಹೇಳಿ ಶಪಥ ಬೋಧಿಸಿದವು!
ಶಪಥ ಆದ ಮೇಲೆ ಮೂರು ಗಂಟೆ ವರೆಗೂ ಮವುನ!
~
ಪ್ರಾಕಿಲಿ ಪರಶುರಾಮ ಕ್ಷತ್ರಿಯ ನಾಶಕ್ಕೆ ಇಪ್ಪತ್ತೊಂದು ಸರ್ತಿ ಭೂಮಿಯ ಸುತ್ತಿ ದುಷ್ಟರಾಜರುಗಳ ನಾಶ ಮಾಡಿದ್ದನಡ್ಡ!
ಅದೇ ಸಂಕಲ್ಪಲ್ಲಿ ಶ್ರೀಮಠದ ಸುತ್ತ ಶ್ರೀಗುರುಗೋ ಮತ್ತೆ ಬಾಕಿ ಮಠಾಧೀಶರ ಒಟ್ಟಿಂಗೆ ಸೇರಿದ ಸಾವಿರ ಸಾವಿರ ಸಂಖ್ಯೆಯ ಶಿಷ್ಯಭಕ್ತರು ಆದಿತ್ಯ ಹೃದಯ ಪಾರಾಯಣದ ಒಟ್ಟಿಂಗೆ ಇಪ್ಪತ್ತೊಂದು ಪ್ರದಕ್ಷಿಣೆ ಬಂದವು.
ಎಡಿಗಾದೋರು ಮತ್ತೂ ಹೆಚ್ಚಿಗೆ ಬಂದವು. ಲೆಕ್ಕ ಇತ್ತಿಲ್ಲೆ ಅಲ್ಲಿ! ಭಾವ ಮಾತ್ರ ಇದ್ದದು.
ದಂಟೆ ಊರಿಗೊಂಡು ಇದ್ದ ಅಜ್ಜಂದ್ರನ್ನೂ ಕಾಂಬಗ ಶ್ರೀಮಠದ ಮೇಲೆ ಇಪ್ಪ ಅವರ ವಿಶ್ವಾಸ ನವಗೆ ಮತ್ತೂ ಊಕು ಕೊಡ್ತಿದಾ. ಹೆರಿಯ ತಲೆಮಾರು ಅವರ ಬೆಗರಿಲಿ ಕಟ್ಟಿದ ಮಠ, ಈಗ ಆರೋ ಒಬ್ಬ ಬಂದು ನೋಡಿಗೊಂಡು ವೆವಸ್ತೆ ಹಾಳು ಮಾಡುವಾಗ ಅವರ ಇಳಿಪ್ರಾಯಲ್ಲಿಯೂ ನೆತ್ತರು ಕೊದುದಿಕ್ಕು!!
ಜನ ಮೂವತ್ತು ಸಾವಿರದ ಮೇಗೆ ಸೇರಿದರೂ ಇಡೀ ಪ್ರಧಾನ ಮಠದ ವಾತಾವರಣಲ್ಲಿ ಮವುನವೇ ಮಾತಾಗಿತ್ತು!
ಅಂತಿಂತಾ ಮವುನ ಅದಲ್ಲ! ಬಿರುಗಾಳಿಯ ಮದಲಾಣ ಶಾಂತತೆ ಹೇಳಿ ಹೇಳಿದರೂ ತಪ್ಪಾಗ.
ಮಠದ ಮಕ್ಕೊ ಯೇವಾಗಳೂ ಮಠಲ್ಲಿ ಆಟ ಆಡಿಗೊಂಡು ಬೊಬ್ಬೆ ಹೊಡಕ್ಕೊಂಡು ಇಪ್ಪ ಮಕ್ಕಳೂ ಕೂಡ ಹೆರಿಯೋರ ಒಟ್ಟಿಂಗೆ ಮೌನ ಮಾಡಿದ್ದವು ಹೇಳಿದರೆ ಪರಿಸ್ಥಿತಿಯ ಗಂಭೀರತೆ ಅವಕ್ಕೂ ಅರಡಿಗಾಯಿದು.
~
ಮೌನಶಕ್ತಿ ಪ್ರದರ್ಶನದ ಮತ್ತೆ ನೆಡದ ಸಭೆಲಿ ವಜ್ರಕಾಯದ ವಜ್ರದೇಹಿ ಮಠಾಧೀಶರು ಮಾತಾಡಿ ಇಡೀ ಸಂತ ಸಮುದಾಯದ ಒಟ್ಟಿಂಗೆ ಹಿಂದೂ ಸಮಾಜ ಎದ್ದು ನಿಂಬ ಬಗ್ಗೆ ಮಾತಾಡಿದವು.
ಗುರುಗೊ ಆಶೀರ್ವಚನಲ್ಲಿ ಸರಕಾರ ಆಡಳಿತಾಧಿಕಾರಿ ನೇಮುಸುವ ಬದಲು ನಮ್ಮ ಶಾಸನತಂತ್ರವ ಕಲಿವಲೆ ಮಠಕ್ಕೆ ಬಪ್ಪಲೆ ಹೇಳಿಕೆ ಕೊಟ್ಟವು. ಶಪಥ ತೆಕ್ಕೊಂಡು ಮಠ ಮತ್ತೆ ಗುರು ರಕ್ಷಣೆಗೆ ಬದ್ಧ ಹೇಳಿ ಗಟ್ಟಿ ಸೊರಲ್ಲಿ ಎಲ್ಲೋರೂ ಹೇಳಿದವು.
ಉದಿಯಂದ ಹೊತ್ತಪ್ಪಗ ವರೆಗೆ ಮೌನಲ್ಲಿದ್ದರೂ ಆರಿಂಗೂ ಹಶು ಆಸರು ಲೆಕ್ಕ ಆಯಿದಿಲ್ಲೆ. ಪುಟ್ಟು ಮಕ್ಕಳೂ ಕೂಡ ಉಪವಾಸ ಮಾಡಿದವು.
ಸೇರಿದ ಸಂತರ ಒಟ್ಟಿಂಗೆ ಇಪ್ಪದೇ ಒಂದು ಉಪವಾಸ! ಅದರ ಒಟ್ಟಿಂಗೆ ಅಶನ ದೂರ ಮಾಡಿ ಉಪವಾಸ.
ಎರಡೂ ಸೇರಿ ಬಂದೋರಿಂಗೆ ಭಾಗ್ಯಸಿಕ್ಕಿದ ಹಾಂಗೆ ಆತು.
ಸರಕಾರಕ್ಕೆ ಎಲ್ಲೋರ ದಸ್ಕತ್ತು ಹಾಕಿದ ಅರ್ಜಿ ಸಮರ್ಪಣೆ ಮಾಡಿತ್ತು.
ಮಠದ ಸಿಂಧುವಿಲಿ ಬಿಂದು ಆದ ತೃಪ್ತಿಲಿ ವಾಪಾಸು ಮನಗೆ ಎತ್ತಿತ್ತು.
ಅಲ್ಲಿಗೆ ಬಾರದ್ದೆಯೂ ಸಾವಿರಂದ ಮೇಗೆ ಜನಂಗೊ ಮನೆಲಿಯೇ ಕೂದು ಉಪವಾಸ ಮಾಡಿದ್ದದರ ಕೇಳುವಾಗ ಅವರ ಶ್ರದ್ಧೆಯ ಗ್ರೇಶಿ ಒಪ್ಪಣ್ಣಂಗೆ ಮನಸ್ಸು ತುಂಬಿತ್ತು.
~
ಒಂದೊಪ್ಪ: ಬೇಲಿ ಕರೆಂಗೆ ಬಪ್ಪ ಕಂಡು ದನಂಗಳ ದೂರಂದಲೇ ಎಬ್ಬದ್ರೆ ನಮ್ಮ ಬೆಳೆ ನಾಶ ನಾಳೆ ಅಕ್ಕುcheap gucci uk sale
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಹರೇ ರಾಮ. ಕಡೇಣ ಒಂದೊಪ್ಪಕ್ಕೆ ಒಂದೊಪ್ಪ.
ಗುರು ಪೀಠದ ಬೇಲಿ ಒಳಂಗೇ ಹಾರುವವರ ಹಂದಿಗೆ ಹೋಲ್ಸಿರೆ ಒಳ್ಳೇದು ಒಪ್ಪಣ್ಣ.!!.ದನಗೊ ಬಂದರೆ ಸರ್ವ ನಾಶ ಆಗ . ಹಂದಿ ಬಂದರೆ ಮತ್ತೆ ಅಲ್ಲಿ ಎಂತದು ಒಳಿಯ ಅಲ್ಲೋ!!!