ಬೈಲಿನ ಮನೆಗಳಲ್ಲಿ ಈಗ ಸ್ಟೀಲು ಬಳಕ್ಕೆ ತುಂಬ ಜಾಸ್ತಿ ಆಯಿದು ಅಪ್ಪೋ.
ಪಾತ್ರ, ಸೌಟು, ಬಟ್ಳು, ಗ್ಲಾಸು – ಎಲ್ಲವುದೇ ಸ್ಟೀಲಿಂದು. ಕೆಲವು ದಿಕ್ಕೆ ಕೌಳಿಗೆ ಸಕ್ಕಣವುದೇ ಷ್ಟೀಲಿಂದು.
ಬಟ್ಟಮಾವಂಗೆ ಅದು ಶುದ್ಧಕ್ಕೆ ಸಾಲದ್ರೂ, ಬೆಂಗ್ಳೂರಿಲಿಪ್ಪ ಶುಭತ್ತೆಗೆ ಸಾಕಾವುತ್ತು.
ಅದಿರಳಿ.
~
ಷ್ಟೀಲು ಹೇಳುವಾಗ ನೆಂಪಾತು – ಬೆಂಗುಳೂರಿಲಿ ಕಳುದ ಹನಿಯಾ ಸಮೆಯಂದ ನೆಡೆತ್ತ ಗೌಜಿ ಗಲಾಟೆ.
ಮೊನ್ನೆ ಪೆರ್ಲದಣ್ಣ ಊರಿಂಗೆ ಬಂದಿಪ್ಪಾಗ ಕೇಳಿದೆ- ಆ ಕತೆ ಎಂತರ ಹೇದು.
ಅವ ವಿವರ್ಸಿ ಅಪ್ಪದ್ದೇ ನವಗೆ ಗೊಂತಾದ್ಸು ಅದು ಸಂಗತಿ ಎಂತ್ಸು – ಹೇಳ್ತ ವಿಚಾರ.
~
ಬೆಂಗ್ಳೂರಿಲಿ ವಿಧಾನ ಸೌಧ ಇಪ್ಪದು, ಗೊಂತಿದ್ದನ್ನೇ.
ದೊಡ್ಡ ದೊಡ್ಡ ಕುಳಂಗೊ, ಅತಿ ಪ್ರಾಮುಖ್ಯತೆ ಇಪ್ಪ ಜೆನಂಗೊ ಎಲ್ಲೋರುದೇ ಅಲ್ಲಿ ಇಪ್ಪದುದೇ ನವಗೆ ಅರಡಿಗು.
ಅವಕ್ಕೆಲ್ಲ ಅಂಬಗಂಬಗ ಡೆಲ್ಲಿಗೆ ಹೋಯೆಕ್ಕಾವುತ್ತು ಇದಾ; ಹಾಂಗೆ ಹೋಯೇಕಾರೆ ವಿಮಾನ ಹಿಡಿಯೆಕ್ಕಲ್ಲದೋ.
ವಿಮಾನ ಗಾಳಿಲಿಯೇ ಹಾರುದಾದರೂ, ವಿಮಾನ ನಿಲ್ದಾಣಕ್ಕೆ ಹೋಯೇಕಾರೆ ಮಾರ್ಗಲ್ಲೇ ಹೋಯೇಕಷ್ಟೆ ಇದಾ.
ಬೆಂಗ್ಳೂರು ಮಾರ್ಗ ಹೇದರೆ ಸಾಸಮೆ ಕಾಳು ಇಡ್ಕಿರೂ ಕೆಳ ಬೀಳ ಅಡ – ಪೆರ್ಲದಣ್ಣನ ಉಪಮೆ.
~
ಸಾಸಮೆ ಹೇಳುವಾಗ ನೆಂಪಾತು – ನೀಂಗಳ ಊರಿಲಿ ಉಪ್ಪಿನಾಯಿ ಹಾಕಲೆ ಮೆಡಿ ಇದ್ದೋ?
ಇದ್ದರೆ ತಿಳುಶಿಕ್ಕಿ ಆತೋ.
ಅದಿರಳಿ.
~
ಹಾಂಗೆ, ಬೆಂಗುಳೂರು ಮಾರ್ಗ ಹೇದರೆ ವಿಪರೀತ ರಶ್ಶು.
ಪೆರ್ಲದಣ್ಣಂಗೆ, ಎನಗೆ ನಿಂಗೊಗೆಲ್ಲ ರಶ್ಶುಇದ್ದರೂ ಸಮಸ್ಯೆ ಇಲ್ಲೆ. ಪುರುಸೊತ್ತು ಮಾಡಿಗೊಂಡು ಹೋಪಲಾವುತ್ತು.
ಆದರೆ, ದೊಡ್ಡೋರಿಂಗೆ ಪುರುಸೊತ್ತು ಇಲ್ಲೆನ್ನೇ!?
ಹಾಂಗಾಗಿ ಮೇಗಂದಲೇ ಹಾರಿಗೊಂಡು ಹೋಪ ಹಾಂಗೆ ಒಂದು ಆಕಾಶಮಾರ್ಗ ಮಾಡುವನೋ – ಹೇದು ಕಂಡತ್ತು.
~
ವಿಧಾನ ಸೌಧಂದ ಹೆರಟು ಸರಿಸುಮಾರು ಆರೇಳು ಕಿಲೋಮೀಟ್ರು ಉದಾಕೆ ಒಂದು ಫ಼್ಲೈ ಓವರು ಅಡ.
ಅದು ಯೇವ ನಮುನೆ?
ಕಬ್ಬಿಣದ ಕಂಬದ ಮೇಗೆ ನಿಂಬ ಫ಼್ಲೈ ಓವರು.
ಇದು ಹೋಪ ದಾರಿಲಿ ಇಡೀ ಇಪ್ಪ ಸಾವಿರಕ್ಕೆ ಹತ್ತರೆ ಮರವ ಕಡುದು ನಿರ್ನಾಮ ಮಾಡುದಾಡ.
ಇದಕ್ಕೆ ಹೆಚ್ಚುಕಮ್ಮಿ ಎರಡು ಸಾವಿರ ಕೋಟಿ ಖರ್ಚು ಅಡ.
ಬೇಕೋ ಈ ಒಯಿವಾಟು!?
ಮರಕಚ್ಚೋಡಲ್ಲಿ ಪಳಗಿದೋರದ್ದೇ ಅಂದಾಜು ಆದಿಪ್ಪಲೂ ಸಾಕು ಅಲ್ಲದೋ? ಅಲ್ಲದ್ದರೆ ಸಾಮಾನ್ಯ ಮನಿಷ್ಯಂಗೆ ಮರಕಡಿವ ಮನಸ್ಸು ಬಕ್ಕೋ?
~
ಇದಕ್ಕೆ ಊರಿಡೀ ವಿರೋಧ ಬಂದ ಲೆಕ್ಕಲ್ಲಿ, ಕರ್ನಾಟಕ ಸರ್ಕಾರ ಈ ಏರ್ಪಾಡಿನ ಪುನಾ ಹಿಂದೆ ತೆಕ್ಕೊಂಡತ್ತು – ಹೇಳ್ತದು ಒಂದು ಹೊಸಾ ಶುದ್ದಿ.
ಇದರ ಕೇಳಿ ಪೆರ್ಲದಣ್ಣಂಗೂ, ಒಪ್ಪಣ್ಣಂಗೂ ಹಾಲು ಕುಡುದಷ್ಟೇ ಸಂತೋಷ ಆತು.
ಅದಿರಳಿ.
~
ಪೇಟೆ ಅಭಿವೃದ್ಧಿ ಆಯೇಕಾರೆ ಮರ ಕಡಿಯೇಕಾವುತ್ತೋ?
ಮರ ಒಳಿಶಿಗೊಂಡೇ ಅಭಿವೄದ್ಧಿ ಮಾಡ್ಳೆ ಎಡಿತ್ತಿಲ್ಲೆಯೋ?
ಈಗಳೇ ಸೆಕೆಲಿ ಕೂಪಲೆಡಿತ್ತಿಲ್ಲೆ, ಇನ್ನು ಮರ ಪೂರ ಕಡುದು ನಾವೆಂತ ಹೊತ್ತಿ ಹೋಯೆಕ್ಕಪ್ಪದೋ – ಹೇದು ಪೆರ್ಲದಣ್ಣನ ಪ್ರಶ್ನೆ.
ವಿಶಯ ಅಪ್ಪದ್ದೇ.
ಎಂತ ಹೇಳ್ತಿ?!
~
ಒಂದೊಪ್ಪ: ಅಭಿವೃದ್ಧಿಗಾಗಿ ಮರ ಕಡೂದು ಕಾಲಿ ಆದರೆ ವಿಧಾನ ಸೌಧಲ್ಲಿಯೂ ಸೌದಿ ಇರ.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಉಕ್ಕಿನ ಸಂಕ ಮಾಡ್ಳೆ ಇಲ್ಲೆ ಹೇಳಿ ಒಂದು ಶುದ್ದಿ ಕೇಳಿದ ಹಾಂಗಾತು ಪೇಪರಿಲ್ಲಿ. ಮರ ಕಡುದು ಕಡುದು ಸೆಕೆ ಏರಿದ್ದು, ಮಳೆ ಬತ್ತಿಲ್ಲೆ. ಈ ಸರ್ತಿ ಇನ್ನು ಹೇಂಗೊ ?