ಬಬ್ಬು ಹೇದರೆ ಮದ್ದು.
ಮದ್ದು ಕೊಡ್ತ ಮಾವ° ಆರೋ ಅವ್ವೇ ಬಬ್ಬುಮಾವ° – ಹೇದು ಸಂಧಿಯೋ-ಸಮಾಸವೋ ಬಿಡುಸುಲಕ್ಕು.
ಬೈಲಕರೆ ಬಬ್ಬುಮಾವ° ಹೇದರೆ ಒಪ್ಪಣ್ಣಂಗೆ ಈಗಲ್ಲ, ಅಂದೇ ಹೆದರಿಕೆ.
ಬೆಳಿ ಅಂಗಿ, ಕರಿ ಪೇಂಟು ಹಾಕಿಂಡು ಚಿನ್ನದ ಕನ್ನಡ್ಕ ಸಿಕ್ಕುಸೆಂಡು ಬೈಕ್ಕಿಲಿ ಬಕ್ಕು – ಅಜ್ಜಂಗೆ ಉಶಾರಿಲ್ಲದ್ದೆ ಇಪ್ಪಾಗ – ಒಪ್ಪಣ್ಣಂಗೆ ಬಬ್ಬುಮಾವನ ಅಂಬಗಳೇ ಕಂಡು ಗೊಂತಿದ್ದು.
ಬೆರಳು ಚೀಪೆಂಡು ಇರ್ತ ಒಪ್ಪಣ್ಣನ ಹಿಡುದು “ಒಂದು ಸೂಜಿ ಕುತ್ತುವೊ° ಇವಂಗೆ” – ಹೇಳಿರೆ ಒಪ್ಪಣ್ಣ ಅಮ್ಮನ ಬೆನ್ನಿಂಗೆ ಅಂಟಿ ಆತು!
ಮುಂದೆ, ಒಪ್ಪಣ್ಣಂಗೇ ಜೊರವೋ, ಶೀತವೋ ಮತ್ತೊ ಹಿಡುದಿಪ್ಪಾಗ ಒಂದೊಂದರಿ ಅವರ ಅಂಗುಡಿಗೆ ಹೋಗಿಯೂ ಗೊಂತಿತ್ತು.
ಅಪ್ಪನೊಟ್ಟಿಂಗೋ, ಅಣ್ಣನೊಟ್ಟಿಂಗೋ ಹೋವುತ್ತ ಕಾರಣ ಅಷ್ಟೆಂತ ಹೆದರಿಕೆ ಆಗದ್ರೂ – ಸೂಜಿ ಕುತ್ತಿರೇ – ಹೇದು ಪರೀಕ್ಷೆ ಅಪ್ಪನ್ನಾರವೂ ಪುಕುಪುಕು ಆಗಿ.
ಎದೆಬಡಿತ ನೋಡ್ಳಪ್ಪಗ ಕೆಮಿಗೆ ಮಡಗುತ್ತದು ಇಲ್ಲದ್ದರೂ ಕೇಳ್ತಷ್ಟು ಜೋರು ಅಕ್ಕು!
ಎಲ್ಲ ಆಗಿ ಮದ್ದು ಬರದು ಕೊಟ್ಟು ಬಿರಿವಾಗ ಒಪ್ಪಣ್ಣನ ಜೀವ ವೈತರಣಿಯ ಒಂದರಿ ದಾಂಟಿ ಒಪಾಸು ಬಂದ ನಮುನೆ.
ಮುಂದೆ ಶಾಲಗೆ ಹೋದರೆ ಅಲ್ಲಿಯೂ – ಒರಿಶಕ್ಕೊಂದರಿ ಬಕ್ಕು; ಪರೀಕ್ಷೆ ಮಾಡ್ಳೆ.
ಒಂದರಿಯೂ ಸೂಜಿ ಕುತ್ತದ್ದ ಕಾರಣವೇ ಬಬ್ಬುಮಾವನ ಮೇಗೆ ಅಷ್ಟು ಹೆದರಿಕೆ ಇದ್ದದೋ – ಹೇದು ಈಗ ಅನುಸುತ್ತು.
~
ಅದೇನೇ ಇರಳಿ. ಈಗ ಬಬ್ಬುಮಾವನ ಎದುರೇ ಹೋಗಿ ನಿಂಬಲೂ ಏನೂ ಹೆದರಿಕೆ ಆವುತ್ತಿಲ್ಲೆ ನವಗೆ!
ಅಂದು ಒಪ್ಪಣ್ಣನ ಕೈಗೆ ಕತ್ತಿ ತಾಗಿದ್ದತ್ತಲ್ಲದೋ – ಅಷ್ಟಪ್ಪಗ ಅವು ಮದ್ದು ಮಾಡಿದ ರೀತಿಲಿ ಎಲ್ಲಾ ಹೆದರಿಕೆ, ಭಯ, ಅಂಜಿಕೆ, ಅಪನಂಬಿಕೆ – ಪೂರಾ ಸಾರಡಿತೋಡಿಲಿ ಬೆಳ್ಳಹೋಯಿದು.
ಮತ್ತೆ ಏನಿದ್ದರೂ – ಬಬ್ಬು“ಮಾವ°” ಹೇಳ್ತ ಆತ್ಮೀಯತೆ ಮಾಂತ್ರಾ ಒಳುದ್ದು.
ಅದಿರಳಿ.
~
ಬಬ್ಬುಮಾವನ ಮಕ್ಕೊಗೆ ಒಪ್ಪಣ್ಣನಿಂದ ಕಮ್ಮಿ ಪ್ರಾಯ.
ಹಾಂಗಾಗಿ, ಒಪ್ಪಣ್ಣ ಬೆಳವು ಮಾಡುದು ಬಿಟ್ಟು ರಜ್ಜ ಸಮೆಯ ಆದರೂ, ಬಬ್ಬುಮಾವನ ಮಕ್ಕೊಗೆ ಬೆಳವು ಮೂಡುವ ಪ್ರಾಯ ಅಷ್ಟೇ ಇದಾ. ಹಾಂಗಾಗಿ, ಅವರ ಬೆಳವು ನೋಡಿಂಡೇ ನಾವು ಬೆಳದ್ದು.
ಈಗ ಆ ಮಕ್ಕಳೂ ಬೆಳವು ನಿಲ್ಲುಸಿದ್ದವು. ಎಲ್ಲಿಯೋ ದೂರಲ್ಲಿ ಎಂತದೋ ಇಂಜಿನಿಯರು ಕಲಿತ್ತಾ ಇದ್ದವು.
ಆಗಲಿ, ಉಶಾರಿ ಆಗಲಿ.
ಬಬ್ಬುಮಾವನ ಈಗ ಕಾಣದ್ದೆ ಬಹುಸಮೆಯ ಆತು.
ಅವರ ಕಾಣೇಕಾಗಿ ಬಯಿಂದಿಲ್ಲೆ – ಹೇಳ್ತದೇ ಆರೋಗ್ಯದ ಲಕ್ಷಣ ಅಲ್ಲದೋ!? 😉
~
ಓ ಮೊನ್ನೆ ಮಾಣಿಮಠಕ್ಕೆ ಹೋಗಿತ್ತಿದ್ದೆ ಅಲ್ಲದೋ – ಕನ್ಯಾಸಮಾವೇಶದ ಮರದಿನ, ಆ ದಿನ ಬಬ್ಬುಮಾವ° ಸಿಕ್ಕಿದವು.
ಈಗ ಮದಲಾಣ ಹಾಂಗೆ ಕರಿತಲೆಕಸವಲ್ಲ, ಪೂರ ಬೆಳಿ ಆಯಿದು! ಅವರ ಅಂಗಿಯ ಬಣ್ಣಲ್ಲಿ.
ಕನ್ನಡ್ಕ ಮಾಂತ್ರ ಅದೇ ಚಿನ್ನದಬಣ್ಣ ಆದ ಕಾರಣ ಗುರ್ತ ಹಿಡಿಯಲೆ ಏನೂ ಸಮಸ್ಯೆ ಆಯಿದಿಲ್ಲೆ!
ಮದಲಾಣ ಹಾಂಗೇ. ಒಪ್ಪಣ್ಣಂಗೆ ತಲೆಕಸವು ಬೆಳಿ ಆಗದ್ದ ಕಾರಣ ಅವಕ್ಕೆ ಇತ್ಲಾಗಿಯೂ ಗುರ್ತ ಸಿಕ್ಕಲೆ ಕಷ್ಟ ಆಯಿದಿಲ್ಲೆ! ಹುಹು!!
ಎಂತ ಒಪ್ಪಣ್ಣಾ – ಹೇದು ಬೆನ್ನಿಂಗೊಂದು ಗುದ್ದಿದವು, “ಬಬ್ಬುಮಾವಾ°..” – ಹೇಳಿದೆ.
~
ಹೀಂಗೇ ಮಾತಾಡಿಗೊಂಡು ಹೋಪಾಗ ಮಕ್ಕಳ ಶುದ್ದಿ ಬಂತು.
ರಾಮಜ್ಜನ ಕೋಲೇಜಿಲಿ ಕಲಿಸ್ಸರ ಒಟ್ಟಿಂಗೇ ಸಂಗೀತ ಲಲಿತಕಲೆಗಳಲ್ಲಿ ಮಗಳು ಉಶಾರಿ ಆಗಿಂಡು ಹೋಪಾಗ, ಮದಲಿಂಗೇ ಕಾರುಬೆಟ್ರಿ ರಿಪೆರಿಲಿ ಆಸಕ್ತಿ ಇದ್ದಿದ್ದ ಮಗ ಈಗ ಇಂಜಿನಿಯರು ಕಲ್ತಾಗಿ ಬೇರೆಂತದೋ ದೊಡ್ಡದರ ಕಲಿಯಲೆ ಸುರುಮಾಡಿದ್ದನಾಡ.
“ಅಂಬಗ ಬಬ್ಬುಮಾವಂಗೆ ಬಚ್ಚಿದ ಮತ್ತೆ ಬೂಬಿಂಗೆ ಬಬ್ಬು ಕೊಡ್ಳೆ ಆರು ಬೈಲಕರೆಲಿ?” – ಕೇಟೆ, ನೆಗೆಮಾಡಿಂಡು.
ಬಬ್ಬುಮಾವಂದೇ ನೆಗೆಮಾಡಿದವು!
ಅಂದೂ ಇದೇ ನಮುನೆ ನೆಗೆಮಾಡಿಕ್ಕಿ, ಒಪ್ಪಣ್ಣನ ಬುಗ್ಗೆಯ ನಮುನೆ ಉಬ್ಬುಸಿ – ಸೂಜಿ ಕುತ್ತುವನೋ? – ಕೇಳಿಂಡು ಇದ್ದದು ನೆಂಪಾತು!
ಗುರುಗೊ ಪೀಠಕ್ಕೆ ಬಂದವು. ಆಶೀರ್ವಚನ ನೆರವೇರಿತ್ತು, ಮಂತ್ರಾಕ್ಷತೆ ಆತು, ಮಾಣಿಮಠಲ್ಲಿ ಉಂಡಾತು. ಹೆರಟೂ ಆತು.
~
ಅಂಬೆರ್ಪಿನ ದನಂಗೊ ಹುಲ್ಲು ಒಂದರಿ ತಿಂದು, ಪುರುಸೋತಿಲಿ ಕಡೆತ್ತವಲ್ಲದೋ – ಅದೇ ನಮುನೆ – ಎದುರಾ ಎದುರು ಮಾತಾಡುವಾಗ ಅಂಬೆರ್ಪಿಲಿ ಮಾತಾಡಿ ಮುಗುಶಿರೂ, ಮತ್ತೆ ಮನಾಸಿಲೇ ಅದರ ಮತ್ತೆ ಮತ್ತೆ ನೆಂಪುಮಾಡ್ತದು ಮನುಷ್ಯರ ಕ್ರಮ.
ಹಾಂಗೇ ಬೈಲಿಂಗೆತ್ತುವಗ ಬಬ್ಬುಮಾವನ ಅಂಗುಡಿ ನೋಡುವಾಗ ಆಗ ಅಲ್ಲಿ – ಮಠಲ್ಲಿ – ಸಿಕ್ಕಿ ಮಾತಾಡಿದ್ದು ಮತ್ತೆ ನೆಂಪಾತು.
ಹಳೇ ಕಾಲಲ್ಲೇ ಡಾಗುಟ್ರತ್ತಿಕೆ ಕಲ್ತು, ಊರಿಂಗೆ ಬಂದು – ಊರಿಲೇ ನಿಂದು, ಊರ ಎಲ್ಲೋರಿಂಗೂ ಸಿಕ್ಕುತ್ತ ನಮುನೆಲಿ ಮದ್ದುಗಳನ್ನೂ ತಂದು, ಮನೆಗೊಕ್ಕೆ ಹೋಪಲೂ ಸಮಗಟ್ಟು ಸವುಕರಿಯ ಇಲ್ಲದ್ದ ಸಮೆಯ ಇದಾ – ಆ ಸಮೆಯಲ್ಲಿ ಬಪ್ಪಲೆ ಹೇಳಿದ ಎಲ್ಲೋರ ಮನಗೂ ಬಂದುಗೊಂಡು – ಅದೊಂದು ಕಾಲವೇ ಬೇರೆ ಇದ್ದತ್ತು.
ಬೈಲಕರೆಲಿ ಎಷ್ಟೋ ಜೆನಕ್ಕೆ ಆರೋಗ್ಯ ಬಾಗ್ಯ ಸಿಕ್ಕುತ್ತ ಹಾಂಗೆ ನೋಡಿಗೊಂಡವು.
ಇಂದಿಂಗೂ ಹಲವು ಜೆನ ಹೆರಿಯೋರು ಆ ಬಬ್ಬುಮಾವನ ಮೇಗೆ ಅದೆಷ್ಟು ಅಭಿಮಾನ ಮಡಿಕ್ಕೊಂಡಿದವು ಹೇದರೆ, ಅವಕ್ಕೆ ಮರುಜೆಲ್ಮ ಕೊಟ್ಟದೇ ಈ ಬಬ್ಬುಮಾವ ಹೇಳ್ತ ನಮುನೆಲಿ. ಆ ದಾರಿಲೆ ನೆಡಕ್ಕೊಂಡು ಹೋವುತ್ತರೆ ಅಂತೇ ಒಂದರಿ ಅವರ ಕಂಡು ಮಾತಾಡಿಕ್ಕಿ ಹೋಪ ಪ್ರೀತ್ಯಭಿಮಾನ.
ಅಭಿಮಾನವೂ ಪ್ರೀತಿಯೂ ಒಂದೇ ಪಾವೆಲಿಯ ಎರಡು ಮೋರೆಗೊ ಇದಾ- ಊರೋರಿಂಗೆ ಬಬ್ಬುಮಾವನ ಮೇಗೆ ಎಷ್ಟು ಅಭಿಮಾನ ಇದ್ದೋ, ಬೈಲಿನೋರ ಮೇಗೆ ಬಬ್ಬುಮಾವಂಗೂ ಅಷ್ಟೇ ಪ್ರೀತಿ ಇದ್ದು.
ಅದಿರಳಿ.
~
ಬಬ್ಬುಮಾವನ ಮದ್ದು ಹೇದರೆ ಆಯುರ್ವೇದವೇ ಇದಾ.
ಒಂದು ಕುಪ್ಪಿಲಿ ಕುಡಿಯಲೆ ಕೆಂಪು ಮದ್ದು, ಮತ್ತೊಂದು ಕಾಗತದ ಕಟ್ಟಲ್ಲಿ ನುಂಗಲೆ ಮಾತ್ರೆ – ಮೂಜಿ ದಿನೊಕ್ಕು!
ಸುರುವಾಣದ್ದು ಪಾಪದ ಡೋಸು.
ಅದರ್ಲಿ ಕಮ್ಮಿ ಆಗದ್ದರೆ ಮಾಂತ್ರ ಮತ್ತಾಣ ನಮುನೆದು.
ಈ ಸರ್ತಿ ಕಾಗತಲ್ಲಿ ಕಟ್ಟಿ ಕೊಡ್ತ ನಮುನೆ ಅಲ್ಲ, ಬೇಗಡೆಲಿ ಬಂದ ನಮುನೆದು. ಮತ್ತೆ ಮೂರು ದಿನಕ್ಕೆ.
ಅದರ್ಲಿಯೂ ಗುಣ ಆಗದ್ದರೆ ಕೆಂಪು-ಬೆಳಿ ಎರಡೆರಡು ಬಣ್ಣದ ಕೇಪ್ಸುಲು.
ಇದರ್ಲಿ ಏನಿದ್ದರೂ ಕಮ್ಮಿ ಆಯೇಕೇ.
ಅದರ್ಲಿಯೂ ಆಗದ್ದರೆ ಮತ್ತೆ ಪೇಟಗೆ ಹೋಗಿ ಟೆಷ್ಟು ಮಾಡುಸಲೆ ಬರದು ಕೊಡುಗು.
ಏನೋ ಗಂಭೀರದ್ದು ಇದ್ದು ಹೇಳಿಯೇ ಲೆಕ್ಕ.
ಬೈಲಿನ ಹೆಚ್ಚಿನೋರಿಂಗೂ ಸುರೂವಾಣದ್ದೇ ಸಾಕಾವುತ್ತು. ಎರಡ್ಣೇ ಹಂತಕ್ಕೆ ಬಪ್ಪದು ಬಾರೀ ವಿರಳ.
~
ಬಬ್ಬುಮಾವನ ಮದ್ದಿನ ರೀತಿಗೊ ಹಾಂಗೇ ಇಪ್ಪ ಕಾರಣ ಊರೋರಿಂಗೂ ಗೊಂತಿದ್ದು.
ಮೂರು ದಿನದ ಮದ್ದಿಂಗೆ ಹತ್ತು ರುಪಾಯಿ. ಕುಪ್ಪಿ ಕೊಂಡೋದರೆ ಮಾಂತ್ರ ಕುಡಿಯಲೆ ಮದ್ದು– ಮತ್ತೆ ಹತ್ರುಪಾಯಿದು.
ಬಬ್ಬುಮಾವನ ಮನೆಲಿ ಪೂಜೆಯೋ ಗ್ರಾಶಾಂತಿಯೋ ಮಣ್ಣ ಇದ್ದ ದಿನ ಅಲ್ಯಾಣ ಕಾಂಪೌಂಡ್ರನೇ ಕೊಡ್ಳೆಡಿಗು.
ಎಂತಗೆ- ಬಟ್ಯನ ಹಾಂಗಿರ್ತ ಅನುಭವಿಗೊ ಅವ್ವೇ ಕಟ್ಟಿಗೊಂಡು ಬಕ್ಕು. ಅಷ್ಟೂ ನಿಘಂಟೇ ಅದು.
ಇಡೀ ಊರಿಂಗೇ ಆ ಮದ್ದಿನ ಪವರು ಅಭ್ಯಾಸ ಆಯಿದು.
~
ಅಭ್ಯಾಸ ಆಯಿದು ಅಲ್ಲ – ಆಗಿತ್ತು.
ಈಗ ಎಂತಾತು? ಅದೇ ಇಂದ್ರಾಣ ಶುದ್ದಿ.
~
ಈಗ ಬೈಲಿಲಿ ಡಾಗುಟ್ರುಗೊ ಮದಲಾಣಷ್ಟು ಅಪುರೂಪ ಅಲ್ಲ.
ಡಾಗುಟ್ರ ಕೋಳೇಜುಗೊ ಬೆಳದ ಹಾಂಗೇ ಡಾಗುಟ್ರುಗಳ ಸಂಕೆಯೂ ಧಾರಾಳ ಬೆಳೆತ್ತವು.
ಅದರ್ಲಿ ನಿಜಕ್ಕೂ ಊರಿಂಗೆ ಸೊತ್ತು ಆಗಿ ಉಪಕಾರಕ್ಕೆ ಸಿಕ್ಕುತ್ತೋರು ಮದಲಾಣಷ್ಟೇ ಆದರೂ, ಒಳುದ ಹಲವೂ ಜೆನಂಗೊ ತನ್ನ ಕಿಸೆಯನ್ನೋ, ಹೊಟ್ಟೆಯನ್ನೋ ತುಂಬುಸಲೆ ಒಂದು ಉದ್ಯೋಗ ಆಗಿ ಮಾಡಿಗೊಳ್ತವು.
ಎಲ್ಲೋರುದೇ ಅಲ್ಲ – ಕೆಲವು ಜೆನ!! (ಒಳ್ಳೆದರ್ಲಿ ಜೆನಸೇವೆ ಮಾಡ್ತ ಎಷ್ಟೋ ಡಾಗುಟ್ರಕ್ಕಳ ಬಗ್ಗೆ ಒಪ್ಪಣ್ಣಂಗೆ ಅತೀವ ಅಭಿಮಾನ ಇದ್ದು)
ಹಾಂಗೇ ಕಿಸೆತುಂಬುಸುತ್ತ ಉದ್ಯೋಗ ಮಾಡ್ಳೆ ಬೈಲಕರೆಗೆ ಬಂದ ಇನ್ನೊಂದು ಯುವ ಡಾಗುಟ್ರನ ಶುದ್ದಿ ಇದು.
~
ಹೊಸ ಡಾಗುಟ್ರದ್ದು ಸಣ್ಣ ಪ್ರಾಯ, ಇಂಗ್ಳೀಶು ಮಾತುಗೊ, ಇಂಗ್ಳೀಶು ಮದ್ದುಗೊ.
ಇಬ್ರಿಬ್ರು ಡಾಗುಟ್ರು ಬಂದದು ಬೇಜಾರದ ಶುದ್ದಿ ಅಂತೂ ಅಲ್ಲಲೇ ಅಲ್ಲ. ಆರಿಂಗೆ ಬೇಜಾರಾದರೂ ಬಬ್ಬುಮಾವಂಗೆ ಬೇಜಾರಾಗಿರ; ಅಷ್ಟು ದೊಡ್ಡ ಹೃದಯ ಅವರದ್ದು.
ಅಂತೂ ಆ ಡಾಗುಟ್ರು ಬಂತು, ಬೈಲಿನ ಈಚಕರೆಲಿ ಅಲ್ಲ – ಓ ಆಚ ಕರೆಲಿ ಆಸುಪತ್ರೆ ಮಡಗಿತ್ತು.
ಆ ಹೊಡೆಲಿ ಅನುಕೂಲ ಆವುತ್ತೋರು ಕೆಲವು ಜೆನ ಅಲ್ಲಿಗೆ ಹೋಪಲೆ ಸುರುಮಾಡಿದವು.
~
ಒಂದರಿ ಹೋದೋರಿಂಗೇ ಮದ್ದಿನ ಪವರು ಗೊಂತಪ್ಪಲೆ ಸುರು ಆತು!!
ಬಬ್ಬುಮಾವನ ಮನೆಲಿ ಅವರ ಅಣ್ಣನ ಮಗಳ ಮದುವೆ ಕಳಾತಲ್ಲದೋ – ಒಂದು ವಾರದಂದಾಜಿ ಅವಕ್ಕೆ ರಜೆ.
ಆ ಸಮೆಯಲ್ಲಿ ಅಂಬೆರ್ಪಿನೋರೆಲ್ಲೋರುದೇ ಹೊಸ ದಾಕುದಾರನ ಮದ್ದಿನ ರುಚಿ ಹಿಡುದೋರೇ.
ಜೊರವೋ, ಕೈಬೇನೆಯೋ, ತಲೆಬೇನೆಯೋ – ಎಂತದೇ ಬರಳಿ, ಒಂದೇ ಸರ್ತಿ ಮದ್ದಿಲಿ ಗುಣ ಅಪ್ಪ ಹಾಂಗಿದ್ದಾಡ ಅದರ ಕೈಗುಣ!
ಎರಡು ಮಾತ್ರೆ ನುಂಗುವಗಳೇ ಬೇನೆ ಪೂರ ಹಾರಿತ್ತತ್ತೆ – ಮತ್ತೂ ನಾಕು ಮಾತ್ರೆ ಒಳುದಿಪ್ಪಗಳೇ!
ಹೊಸ ಡಾಗುಟ್ರ ಮದ್ದು ಭಾರೀ ಒಳ್ಳೆದಾವುತ್ತು – ಹೇಳ್ತ ಹಾಂಗೆ ಮಾಡಿದ್ದಾಡ ಬಂದು ರೆಜ ಸಮೆಯಲ್ಲೇ!
ಬಬ್ಬುಮಾವ° ಕೊಟ್ಟದಾದರೆ ಮೂರು ದಿನ ಪೂರ್ತ ನುಂಗದ್ದರೆ ಕಮ್ಮಿ ಆಗ!
ಅಂತಾದ್ದರಲ್ಲಿ ಈ ಹೊಸ ದಾಕುದಾರ ಕೊಟ್ಟ ಮಾತ್ರೆ ಎರಡೇ ನುಂಗಿದ್ದರಲ್ಲಿ!!
ವಿಷಯ ಎಂತರ ಕೇಳಿರೆ, ಬಬ್ಬುಮಾವ ಕೊಡ್ತ ಕೇಪ್ಸೂಲಿಂದಲೂ ಖಾರದ ಮಾತ್ರೆಯ ಎರಡು ದಿನಕ್ಕೆ ಬರದು ಐವತ್ತು ರುಪಾಯಿ ಮಡಗಲೆ ಹೇಳುದಾಡ ಈ ಡಾಗುಟ್ರು.
ಈಗಾಣೋರಿಂಗೆ ಪೈಶೆಯ ದರಿದ್ರವೋ?
ಮತ್ತೆ ಒಂದು ವಾರ ಬಿಟ್ಟು ಪುನಾ ಬೇನೆಗೊ ಬತ್ತು ಹೇಳ್ತದು ಅಂಬಗ ನೆಂಪಿರ್ತಿಲ್ಲೆ.
ಪುನಾ ಬಪ್ಪಗ ಪುನಾ ಹೋದರಾತಿಲ್ಲೆಯೋ – ಮತ್ತೆ ಐವತ್ತು ರುಪಾಯಿ ಮಾಂತ್ರ!!
~
ಬಬ್ಬುಮಾವ ಒರಿಶಾನುಗಟ್ಳೆಂದ “ಹದಾ” ಪವರಿನ ಮಾತ್ರೆ-ಮದ್ದುಗಳಲ್ಲಿ ಬೈಲಿನೋರ ಹಿಡುದು ಮಡಗಿತ್ತಿದ್ದವು.
ಈಗ ಒಂದರಿಯೇ ಎಲ್ಲಿಂದಲೋ ಹರುದು ಬಿದ್ದ ಹಾಂಗೆ ಬಂದ ಈ ಹೊಸ ದಾಕುದಾರ ಹೆಚ್ಚಿನ ಪವರಿನ ಮಾತ್ರೆಗಳ ತಿನ್ನುಸಿ ತಿನ್ನುಸಿ – ಕಣ್ಣು ಕಟ್ಟು ಮಾಡಿಗೊಂಡಿದ್ದಲ್ಲದೋ?
– ಈ ಪವರುದೇ ಊರಿನ ಜೆನಂಗಳ ದೇಹಕ್ಕೆ ಅಭ್ಯಾಸ ಆಗಿ, ಮುಂದೆ ಅದುದೇ ನಾಟದ್ದರೆ – ಅಷ್ಟಪ್ಪಗ ಆ ದಾಕುದಾರನೂ ಊರಿಲಿಲ್ಲದ್ದರೆ – ಬಬ್ಬುಮಾವ ಎಂತ ಮಾಡುದಪ್ಪಾ!
– ಹೇದು ಬೈಲಿನ ಕೆಲವು ಜೆನಕ್ಕೆ ತಲೆಬೆಶಿ ಸುರು ಆಯಿದಾಡ!
ಎಲ್ಲ ದಾಕುದಾರರ ನಮುನೆಲಿ ಬುದ್ಧಿವಂತಿಗೆ ಇದ್ದಿದ್ದರೆ ಇದೂ ಊರುಬಿಟ್ಟು ದೊಡ್ಡಾಸ್ಪತ್ರೆಗೆ ಹೋವುತಿತಿಲ್ಲೆಯೋ!?
ವೈದ್ಯರ ಸೇವೆ ಹೇದರೆ ಒಂದು ಇಡೀ ಊರಿನ ಆರೋಗ್ಯದ ಪ್ರಶ್ನೆ.
ಆರಿಂಗೆ ಯೇವ ಹಾಳಿತಲ್ಲಿ ಮದ್ದುಗಳ ಕೊಡೇಕು ಹೇಳ್ತದು ವೈದ್ಯರಿಂಗೆ ಅರಡಿಯೇಕು.
ಮದ್ದಿಂಗೆ ಪವರು ಇದ್ದು ಹೇಳಿಗೊಂಡು ನುಂಗಲೆ ಕೊಟ್ರೆ, ಮುಂದಕ್ಕೆ ಆ ವೆಗ್ತಿಯ ದೇಹ ಬೇರೆ ಮದ್ದುಗೊಕ್ಕೆ ಕೆಲಸ ಮಾಡದ್ದ ಹಾಂಗಕ್ಕು.
ಅಲ್ಲದೋ?
ಅಂತೂ – ಅದು ಮಾತ್ರೆ ಕೊಡ್ತು, ಕೊಡ್ತಷ್ಟು ಸಮೆಯವೂ ತಿಂಬಲೆ ಜೆನಂಗೊ ಹೋಕು.
ಆದರೆ, ಆ ಪವರುದೇ ಒಂದರಿ ಅವಕ್ಕೆ ಅಭ್ಯಾಸ ಆದ ಮತ್ತೆ ಎಲ್ಲಿಗೆ ಹೋಪದಾಡ!?
ಹೊಸ ದಾಕುದಾರ ಬಂದರೆ, ಅದರ ಸ್ವಂತ ಲಾಭಂದಾಗಿ ಇಡೀ ಊರಿನ ಆರೋಗ್ಯದ ದಾರಿಯೇ ತಪ್ಪುವ ಹೆದರಿಕೆ ಇಲ್ಲದ್ದಲ್ಲ!!
~
ರೋಗ ಗುಣ ಅಪ್ಪಲೆ ಅರೆವಾಶಿ ಮದ್ದು ಕಾರಣ ಆದರೆ, ರೋಗಿಗಳ ಆತ್ಮ ಶೆಗ್ತಿ ಇನ್ನರ್ಧ ಕಾರಣ ಆಡ.
ಬಬ್ಬುಮಾವನಂತೋರು ಮದ್ದುಕೊಟ್ರೆ ಇದೆರಡುದೇ ಕೆಲಸ ಮಾಡುವ ನಮುನೆ ಕೊಡುಗು.
ಆದರೆ ಈಗಾಣೋರು?
~
ಒಂದೊಪ್ಪ: ಮದ್ದು ಕೊಡ್ತೋರಿಂಗೇ ರೋಗ ಬಂದರೆ ಆರು ಗುಣಮಾಡುದು!?
ಪಟಃಇಂಟರುನೆಟ್ಟಿಂದ
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಒಳ್ಳೆ ಶುದ್ದಿ. ಮದಲಾಣ ಕಾಲಲ್ಲಾದರೆ, ಒಬ್ಬ ವೈದ್ಯನ ಕಂಡ್ರೆ ಸಾಕಾಗೆಂಡಿತ್ತು. ಈಗ, ಹೊಟ್ಟಗೆ ಬೇರೆ, ಚರ್ಮಕ್ಕೆ ಬೇರೆ, ಎಲುಬಿಂಗೆ ಬೇರೆ, ಕಣ್ಣಿಂಗೆ ಬೇರೆ ಡಾಕಟ್ರುಗಳ ಕಾಣೆಕು. . . . . . ರೋಗಂಗಳೂ ವಿವಿಧ ನಮುನೆದು ಶುರುವಾಯಿದೊ ಹೇಳಿ.
ಲೇಖನ ತುಂಬಾ ಒಪ್ಪ ಆಯಿದು.
ಸಣ್ಣಾದಿಪ್ಪಗ ಆಸ್ಪತ್ರೆಯ ಬೋರ್ಡು ಕಂಡರೆ ಸಾಕು, ತನ್ನಷ್ಟಕ್ಕೇ ಕಣ್ಣಿಲಿ ನೀರು ಬಂದು ಕೂಗುಲೆ ಸುರು ಆಗ್ಯೊಂಡಿರ್ತು. ಈಗಲೂ ಅಷ್ಟೆ…., ಆಸ್ಪತ್ರೆ ಹೇಳಿರೆ ಒಂದು ರೀತಿಯ ಹೆದರಿಕೆ ಆವ್ತು.
ಮತ್ತೆ ಬಬ್ಬು ಮಾವನ ಹಾಂಗಿಪ್ಪವು ಈಗ ಕಾಂಬಲೇ ಕಷ್ಟ ಆಯಿದು. ಎಲ್ಲರುದೇ ಪೈಶೆಯ ಲೆಕ್ಕ ಹಾಕುವುದೆ ಹೊರತು ಗುಣ ಅಪ್ಪದೂ ಬಿಡುದೂ ಲೆಕ್ಕ ಹಾಕುತ್ತವಿಲ್ಲೆ ಇದಾ…
ಒಪ್ಪಂಗಳೊಟ್ಟಿಂಗೆ…,
ಇಂದ್ರಾಣ ವಾಸ್ತವ ಸ್ಥಿತಿಯ ಚಿತ್ರಣ ಲಾಯಿಕ ಆಯಿದು.
ಎಲ್ಲವೂ ಬೇಗ ಬೇಗ ಆಯೆಕ್ಕು, ರೋಗ ಗುಣ ಅಪ್ಪದು ಕೂಡಾ. ನಿಧಾನಕೆ ಗುಣ ಆವ್ತ ಮದ್ದುಗಳ ಆಯ್ಕೆ ಮಾಡುವವು ಬಹಳ ಕಮ್ಮಿ ಜೆನಂಗೊ.
ಪವರ್ ಜಾಸ್ತಿ ಮಾಡಿಂಡು ಹೋದರೆ, ಒಂದು ದಿನ ಯಾವದೇ ಮದ್ದು ಹಿಡಿತ್ತಿಲ್ಲೆ ಹೇಳ್ತ ಪರಿಸ್ಥಿತಿ ಬಕ್ಕು ಹೇಳುವ ಯೋಚನೆ ಜೆನಂಗಳಲ್ಲಿ ಮೂಡೆಕ್ಕು. ಇದಕ್ಕೆ ನಿದರ್ಶನ ಹೇಳಿರೆ , ಈಗ ಕೊಡ್ತಾ ಇಪ್ಪ ಆಂಟಿಬಯೊಟಿಕ್ಸ ಗೊ ಮತ್ತೆ ಸ್ಟೆರೋಯಿಡ್ಸ್.
ಕಲಿವಲೆ ಮಾಡಿದ ಖರ್ಚು ಆದಷ್ಟು ಬೇಗ ಕೈಗೆ ವಾಪಾಸ್ ಬರೆಕು ಹೇಳ್ತ ಯೋಚನೆಲಿ, ಜೆನಂಗಳ ವಿಶ್ವಾಸಕ್ಕೆ ತೆಕ್ಕೊಂಬಲೆ ಬೇಕಾಗಿ ಬೇಗ ಗುಣ ಅಪ್ಪ ಮದ್ದು ಕೊಡುವದು, ಲ್ಯಾಬ್ ಟೆಸ್ಟ್, ಸ್ಕಾನ್ನಿಂಗ್ ಮಾಡ್ಸುವದು ಇದೆಲ್ಲಾ ನಡೆತ್ತಾ ಇದ್ದು.
ಜನಂಗಳಲ್ಲಿ ಜಾಗೃತಿ ಉಂಟಾಗಿ, ಬೇರೆ ತರದ ವೈದ್ಯಕೀಯ ಪದ್ಧತಿಯಾದ ಹೋಮಿಯೋಪತಿ, ಆಯುರ್ವೇದಕ್ಕೆ ಹೋವ್ತವರ ಸಂಖ್ಯೆಯೂ ಜಾಸ್ತಿ ಆವ್ತಾ ಇದ್ದು ಹೇಳುವದೂ ಒಂದು ಸಮಾಧಾನದ ಸಂಗತಿ.
ಬಬ್ಬುಮಾವನ ಮಾತ್ರೆ ಪವರಿನಾಂಗೇ ಇದ್ದು ಈ ಶುದ್ದಿಯ ಪವರು. ಚಿಂತನೀಯ ಶುದ್ದಿಗೊಂದು ಒಪ್ಪ ಹೇದು ಹೇದತ್ತಿತ್ಲಾಗಿಂದ.