Oppanna.com

ವಿಷುವಿಂಗೆ ಬೈಲಿಲಿ ವಿಶೇಷ – ಈ ಸರ್ತಿ ಕೊಡೆಯಾಲಲ್ಲಿ…!

ಬರದೋರು :   ಒಪ್ಪಣ್ಣ    on   07/04/2017    3 ಒಪ್ಪಂಗೊ

ಹೇಳಿಕೆ ಕಾಗತ
ಹೇಳಿಕೆ ಕಾಗತ

ಭಾರತದ ಹೆಚ್ಚಿನ ಹೊಡೆಲಿಯೂ ಚಾಂದ್ರ ಯುಗಾದಿಯ ಆಚರಣೆ ಮಾಡ್ತರೆ, ದಕ್ಷಿಣದ ಭಾಗಲ್ಲಿ ವಿಷು ಆಗಿ ಆಚರಣೆ ಮಾಡ್ತು.
ನಮ್ಮ ಬೈಲು ಭಾರತದ ದಕ್ಷಿಣಲ್ಲೇ ಇಪ್ಪ ಕಾರಣ ನಾವುದೇ ಸೌರ ಯುಗಾದಿ – ವಿಷುವನ್ನೇ ಆಚರಣೆ ಮಾಡ್ತು.
~
ವಿಷು ಬಂದರೆ ಬೈಲಿಲಿ ಯೇವತ್ತೂ ಗಮ್ಮತ್ತೇ. ವಿಷುಕಣಿ ಮಡುಗಿ ಗಮ್ಮತ್ತು ಮಾಡುದರಿಂದಲೂ, ಬೈಲಿಲಿ ಸಾಹಿತ್ಯರೂಪೀ ಗಮ್ಮತ್ತುಗೊ ಹಲವಾವುತ್ತು. ಕಳುದ ಐದಾರು ಒರಿಶಂದ ನಮ್ಮ ಬೈಲಿಲಿ ಹವ್ಯಕ ಸಾಹಿತ್ಯ ಸರಸ್ವತೀ ಸೇವೆಗಾಗಿ ವಿಶೇಷ ಸ್ಪರ್ಧೆಗೊ ನೆಡೆತ್ತಾ ಇದ್ದು, ಗೊಂತಿದ್ದನ್ನೇ.
ಹಳ್ಳಿಗರ ಕಥೆಗೊ, ಪ್ರಾಸಬದ್ಧ ಕವನಂಗೊ, ನೆಗೆ ತಪ್ಪ ನೆಗೆಬರಹಂಗೊ, ಗಂಭೀರ ಪ್ರಬಂಧಂಗೊ – ಹೀಂಗಿರ್ಸ ಹಲವು ವಿಷಯಲ್ಲಿ ಸ್ಪರ್ಧೆಗೊ ನೆಡದು ಬತ್ತು. ಪ್ರತಿ ವಿಭಾಗಕ್ಕೂ ಅದರದ್ದೇ ಆದ ನಿಯಮ ನಡಾವಳಿಗಳ ರೂಪಿಸಿರ್ತು. ಆಯಾ ನಿಯಮಕ್ಕೆ ಅನುಸರುಸಿ ಹೆರ್ಕಿದ ಆಯ್ಕೆಗಳ ತೀರ್ಪುಗಾರರು ಓದಿ, ಅವಕ್ಕೆ ಕೊಶಿಕಂಡದರ ಅಭಿನಂದಿಸುತ್ತವು.
ಎಲ್ಲವೂ ಲಾಯ್ಕಿದ್ದರೂ ಅದರ್ಲಿ ಎರಡರ ಹೆರ್ಕಿ ಪ್ರಥಮ – ದ್ವಿತೀಯ – ಹೇದು ಪ್ರೈಸು ಕೊಡ್ಸು ಅನಿವಾರ್ಯ.
ಹಾಂಗಾಗಿ, ಅದೆರಡು ಅಲ್ಲದ್ದೆ ಕೊಶಿಕಂಡ ಹಲವಾರು ಆಯ್ಕೆಗಳ ಪ್ರಶಂಸಾ ಪತ್ರವ ಕಳುಸುದರ ಮೂಲಕ ಅಭಿನಂದನೆ ಮಾಡ್ತು ನಮ್ಮ ಬೈಲು.
ಇದರಿಂದ ಒಟ್ಟಾಗಿ, ಹವ್ಯಕ ಭಾಷೆಲಿಯೂ ಸಾಹಿತ್ಯ ರಚನೆ ಮಾಡ್ಳೆ ಎಡಿತ್ತು – ಹೇಳ್ತದರ ಸಮಾಜ ಅರ್ತತ್ತು.
ಕೇವಲ ಕನ್ನಟಿಯ ಒಳಾಣ ಗೆಂಟು ಮಾಂತ್ರ ಅಲ್ಲ, ಇದು ಎಲ್ಲೋರಿಂಗೂ ಎಡಿವ ವಸ್ತು – ಹೇಳ್ತದರ ನಮ್ಮ ಬೈಲು ಇಡೀ ಬೈಲಿಂಗೇ ತೋರ್ಸಿ ಕೊಟ್ಟತ್ತು.
~
ಈ ಸರ್ತಿಯೂ ವಿಶು ಸ್ಪರ್ಧೆ ನೆಡದ್ದು. ಅನೇಕಾನೇಕ ಜೆನಂಗೊ ಒಳ್ಳೆ ರೀತಿಲಿ ಪ್ರತಿಸ್ಪಂದನೆ ಕೊಟ್ಟಿದವು. ಮತ್ತೊಂದರಿ ಯಶಸ್ವಿ ಆಯಿದು- ಹೇಳುಲೆ ಬೈಲು ಕೊಶಿಪಡ್ತು.
ತೀರ್ಪುಗಾರರ ತೀರ್ಪು ನೆಡೆತ್ತಾ ಇದ್ದು. ವಿಶುವಿನ ದಿನ ಇದರ ಅಂತಿಮ ಫಲಿತಾಂಶ ಹೆರ ಬತ್ತು. ಎಲ್ಲೋರ ಕುತೂಹಲ ಆ ದಿನ ತಣಿಗು.
~
ವಿಶು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮಾಂತ್ರ ಅಲ್ಲದ್ದೆ, ಆ ದಿನ ಬೇರೆ ಹಲವೆಲ್ಲ ಕಾರ್ಯಕ್ರಮ ನೆಡವಲಿದ್ದು. ಅದೊಂದು ನಮುನೆ ಬೈಲಿನ ವಾರ್ಷಿಕೋತ್ಸವ.
ಹಳೆಕಾಲಲ್ಲಿ ಹವ್ಯಕ ಸಾಹಿತ್ಯ ಕೊಡುಗೆಯ ಗೌರವಿಸಿ ಪಡಾರು ಮಾಬಲ ಮಾವಂಗೆ ಈ ಒರಿಶದ ಬಾಳಿಲ ಪ್ರಶಸ್ತಿ ಕೊಡುದು ಹೇದು ಬೈಲಿನ ಹತ್ತು ಸಮಸ್ತರು ಸೇರಿ ನಿಘಂಟು ಮಾಡಿದ್ದು.
ಅಗತ್ಯಲ್ಲಿಪ್ಪ ವೇದಪಾಠಶಾಲೆಗೆ ವೇದವಿದ್ಯಾ ನಿಧಿಸಮರ್ಪಣೆಯ ಕಾರ್ಯವೂ ನಿಘಂಟು ಮಾಡಿದ್ದು.
ಅದಾಗಿ, ಹೊತ್ತೋಪಗ ಶ್ರೀರಾಮ ಪಟ್ಟಾಭಿಷೇಕ ಹೇಳ್ತ ಹವ್ಯಕ ತಾಳಮದ್ದಳೆಯನ್ನೂ ಆಡಿತೋರ್ಸಲಿದ್ದು.
ಇದೆಲ್ಲ ಒಟ್ಟಾಗಿ ಆ ದಿನ ಒಂದು ಗೌಜಿ ಅಪ್ಪಲಿದ್ದು. ಎಲ್ಲೋರುದೇ ಬನ್ನಿ.
~
ಬಪ್ಪದು ಉದಿಯಪ್ಪಗಳೇ ಬನ್ನಿ, ನಾವೆಲ್ಲ ಕಾಲುನೀಡಿ ಕೂದು ಮಾತಾಡುವೊ°, ಆಗದೋ?
ಬೈಲ ಮಿಲನ – ಹೇಳ್ತ ಕಾರ್ಯಕ್ರಮ ಅಂದು ಯೇನಂಕೂಡ್ಳಿಲಿ ಆಯಿದು. ಅದೇ ಕಾರ್ಯಕ್ರಮದ ಪುನರವತರಣ ನಾಡ್ದು ಆಗಲಿ.
ಎಲ್ಲೋರುದೇ ಒಂದರಿ ನೇರಾನೇರ ಮಾತಾಡಿಗೊಂಬೊ°. ಗುರ್ತ ಮತ್ತೊಂದರಿ ಗಟ್ಟಿ ಆಗಲಿ.

ಎಲ್ಲೋರು ಬನ್ನೀ ಬೈಲಿಂಗೆ.
~

ಒಂದೊಪ್ಪ: ವಿಷು ವಿಶೇಷ ಕಳುದರೂ, ವಿಷು ಮರಳಿ ಬತ್ತು! ಬೈಲು ಬೆಳೆತ್ತಾ ಇರ್ತು.

3 thoughts on “ವಿಷುವಿಂಗೆ ಬೈಲಿಲಿ ವಿಶೇಷ – ಈ ಸರ್ತಿ ಕೊಡೆಯಾಲಲ್ಲಿ…!

  1. ೧೬ನೇ ತಾರೀಕಿನ ಕಾರ್ಯಕ್ರಮಕ್ಕೆ ಶುಭಾಶಯಂಗ. ಅಂದಿನ ಎಲ್ಲ ಕಾರ್ಯಕ್ರಮಗಳೂ ಸಫಲವಾಗಿ ನೆರವೇರಲಿ ಹೇಳಿ ಹಾರೈಸುತ್ತೆ.

  2. ಕಾರ್ಯಕ್ರಮ ಸಾಂಗವಾಗಿ ಚೆಂದಕೆ ಕಳಿಯಲಿ ಹೇಳಿ ಹಾರೈಕೆ. ಮಾಣಿಮಠಲ್ಲಿ ಆದಿತ್ಯಹೃದಯ ಪಾರಾಯಣಕ್ಕೆಸೇರ್ಲೆ ಮಾತೃವಿಭಾಗಂದ ಕರೆ ಬಯಿಂದು.ಇದು ಅದೇ ದಿನವಾದ ಕಾರಣ ಹೇಂಗೆ ಬಪ್ಪದೂಳಿ ಯೋಚನೆ?

  3. ಎಲ್ಲೋರುದೆ ಬನ್ನಿ, ಮಂಗಳೂರಿಂಗೆ. ಎಪ್ರಿಲ್ ೧೬ಕ್ಕೆ. ಆತ್ಮೀಯ ಸ್ವಾಗತ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×