Oppanna.com

ಆದಿಯೂ ಇಲ್ಲದ್ದ, ಅಂತ್ಯವೂ ಇಲ್ಲದ್ದ ಜಗತ್ತಿಂಗೆ ಯುಗಾದಿಯ ಗೌಜಿ…!

ಬರದೋರು :   ಒಪ್ಪಣ್ಣ    on   08/04/2016    3 ಒಪ್ಪಂಗೊ

ನಿತ್ಯವೂ ಸೂರ್ಯೋದಯ ಆವುಸ್ಸು ಸತ್ಯ.
ಇಂದು ಪಡು ಕಡಲಿಲಿ ಕಂತಿದ ಸೂರ್ಯ ನಾಳೆ ಮೂಡ ಕಡಲಿಂದ ಎದ್ದು ಬಪ್ಪದು ವಿಧಿ ನಿಯಮ.
ಸೂರ್ಯ ಭೂಮಿಗೆ ಸುತ್ತ ಬಪ್ಪದೋ, ಭೂಮಿ ಸೂರ್ಯನ ಸುತ್ತುದೋ – ಎರಡ್ರಲ್ಲಿ ಯೇವದೋ ಒಂದು ಸುತ್ತುತ್ತು.
ಒಪ್ಪಣ್ಣಂಗರಡಿಯ.

ಬಟ್ಯ ಒಂದು ನಮುನೆ ಹೇಳುಗು, ಆರ್ಯಭಟ ಒಂದು ನಮುನೆ ಹೇಳುಗು.
ಅಂತೂ ಸುತ್ತುದೇ ಜೀವನ ಚಕ್ರ.
ಅದಿರಳಿ.

~

ವೃತ್ತ ಹೇದ ಮತ್ತೆ ಮೇಗೆಯೂ ಇಲ್ಲೆ, ಕೆಳವೂ ಇಲ್ಲೆ. ಆದಿಯೂ ಇಲ್ಲೆ, ಅಂತ್ಯವೂ ಇಲ್ಲೆ.
ಬೆಲ್ಲಲ್ಲಿ ಕಡೆಕೊಡಿ ಇಲ್ಲೆ ಹೇಳಿದ ಹಾಂಗೆ, ಚಕ್ರಲ್ಲಿ ಆರಂಭ-ಅಂತ್ಯ ಇಲ್ಲೆ.
ಒಂದರಿ ಸುರು ಆತು ಹೇದು ಕಂಡ್ರೂ, ಅದರಿಂದ ಹಿಂದೆ ಎಂತದೋ ಇರ್ತು, ಅದು ಮುಂದುವರುದು ಇಪ್ಪದಷ್ಟೇ.
ನಮ್ಮ ಕಣ್ಣಿಂಗೆ ಆರಂಭದ ಹಾಂಗೆ ಕಾಂಬದು, ಅದೊಂದು ಮಿಥ್ಯ.

~

ಚಕ್ರ ಎಷ್ಟೇ ಒಂದೇ ನಮುನೆ ಹೇದರೂ ನವಗೆ ಗುರ್ತಕ್ಕೆ ಅದರ್ಲಿ ಗುರ್ತ ಮಾಡಿಗೊಳ್ತು ಅಪ್ಪೋ.
ಸೈಕ್ಕಾಲು ಚಕ್ರಲ್ಲಿ ಕಡ್ಡಿಗೊ ಗುರ್ತಕ್ಕೆ ಇಪ್ಪ ಹಾಂಗೆ,
ರಾಶಿ ಚಕ್ರಲ್ಲಿ ರಾಶಿಗೊ ಇರ್ತ ಹಾಂಗೆ,
ಪ್ರತಿ ಚಕ್ರಲ್ಲಿಯೂ ಗುರ್ತಕ್ಕೆ ಒಂದು ಮಡಿಕ್ಕೊಳ್ತು.
ಹಾಂಗೇ – ಭೂಮಿಯ ಪರಿಭ್ರಮಣೆಲಿ ಬಪ್ಪ ಸಂವತ್ಸರದ ಚಕ್ರಲ್ಲಿಯೂ – ನಾವು ಒಂದು ನಿರ್ದಿಷ್ಟ ನಿರ್ದಿಷ್ಟ ದಿನವ ಗುರ್ತ ಹಿಡಿತ್ತು.

ಯೇವ ರೀತಿ ಇಂಗ್ಳೀಶರ ಕೆಲೆಂಡರಿಲಿ ಜೆನವರಿ ಇದ್ದೋ, ಹಾಂಗೇ ನಮ್ಮ ಜೋಯಿಶಪ್ಪಚ್ಚಿ ಪಂಚಾಂಗಲ್ಲಿ ಯುಗಾದಿ ಲೆಕ್ಕ ಇದ್ದು.
~
ನಮ್ಮ ಚಾಂದ್ರಮಾನ ಲೆಕ್ಕಾಚಾರಲ್ಲಿ ಒರಿಶಾರಂಭದ ದಿನವೇ ಯುಗಾದಿ.
ಚಾಂದ್ರಮಾನದ ಚೈತ್ರ ಮಾಸದ ಶುಕ್ಲಪಕ್ಷದ ಪ್ರಥಮಿ ತಿಥಿಯ ದಿನಕ್ಕೆ ಯುಗಾದಿ ಹೇಳ್ತವು.
ಅಲ್ಲಿಂದ ಮತ್ತೆ ಹೊಸ ಸಂವತ್ಸರ ಸುರು.
ಸಂವತ್ಸರದ ಲೆಕ್ಕ ಹಿಡಿತ್ತೋರಿಂಗೆ – ನಿನ್ನೆ ಒರೆಂಗೆ ಮನ್ಮಥ ಸಂವತ್ಸರ, ನಾಳೆಂದ ದುರ್ಮುಖಿ.
ನಮ್ಮಲ್ಲಿ ಪಂಚಾಂಗಲ್ಲಿ ಮಾಂತ್ರ ಹೊಸತ್ತು, ಒರಿಶ ಹೊಸತ್ತು ಅಪ್ಪದು ವಿಷುವಿಂಗೇ ಇದಾ!
ವಿಷು ಹೇದರೆ – ಸೌರಮಾನ ಯುಗಾದಿ. ಸೂರ್ಯ ಪುನಾ ಮೇಶ ರಾಶಿಗೆ ಬಂದು ಅಲ್ಲಿಂದ ಒಂದನೇ ಹೊದ್ದು ಸುರು ಮಾಡ್ತ°.
~
ಹೊಸ ಒರಿಶವ ನಾವು ಮಾಂತ್ರ ಆರಂಭ ಮಾಡುದಲ್ಲ, ಒಟ್ಟಿಂಗೆ ಪಶು ಪಕ್ಷಿ, ಕಾಡು ಮರಂಗಳೂ ಮಾಡ್ತವು.
ಮರಂಗೊ ಈ ಸಮಯಲ್ಲಿ ಚಿಗುರು ಬಿಟ್ಟು ಹೊಸ ಎಲೆಯ ಜೀವನ ಆರಂಭ ಮಾಡ್ತವು.
ಹಣ್ಣು ಹಂಪಲುಗೊ ಕೊಡ್ತ ಮರಂಗೊ ಅವರ ಹೊಸ ಫಲವ ಎದುರು ನೋಡ್ತಾ ಇರ್ತವು.
ಅಲಫಲಂಗೊ ಧಾರಾಳವಾಗಿ ಜೀವರಾಶಿಗೆ ಸಿಕ್ಕುವ ಹಾಂಗಾವುತ್ತು.
ಇದೆಲ್ಲವೂ ಹೊಸ ಒರಿಶದ ಸಂಕೇತವೇ ಅಲ್ಲದೋ?
~
ಹೊಸ ಒರಿಶದ ದಿನ ಗಟ್ಟದ ಮೇಗೆ “ಬೇವು ಬೆಲ್ಲ” – ಹೇದು ಗೌಜಿ ಮಾಡ್ತ ಕ್ರಮ ಇದ್ದು.
ಕಹಿಬೇವಿನ ಪಚ್ಚೆಯೂ, ಬೆಲ್ಲದ ಉಂಡೆಯೂ – ಒಟ್ಟಿಂಗೇ ತಿನ್ನೇಕಡ.
ಇದು ಆರೋಗ್ಯಕ್ಕೆ ಒಳ್ಳೆದು ಹೇದು ಬಳ್ಳಮೂಲೆ ಮಾವ° ಹೇಳುಗು; ಇದು “ನೋವು-ನಲಿವಿನ” ಸಂಕೇತ ಹೇಳುಗು ಚಂಪಕಣ್ಣ.
ಸೂಕ್ತ-ಸಂಕೇತ ಏನೇ ಇರಲಿ, ಜೀವನಲ್ಲಿ ಕೈಕ್ಕೆಯೂ ಇರ್ತು, ಚೀಪೆಯೂ ಇರ್ತು – ಹೇದು ಸುರುವಾಣ ದಿನ ನೆಂಪು ಮಾಡುದು ಒಳ್ಳೆ ಕ್ರಮವೇ.
~

ಆಗಲೇ ಹೇಯಿದ ಹಾಂಗೆ, ವೃತ್ತಲ್ಲಿ ಆದಿಯೂ ಇಲ್ಲೆ, ಅಂತ್ಯವೂ ಇಲ್ಲೆ.
ಆದರೂ ಯುಗ ಆದಿ ಆತು – ಒರಿಶ ಆರಂಭ ಆತು ಹೇದು ನಾವು ಆಚರಣೆ ಮಾಡ್ತು.
ಆ ದಿನ ಇಂದು ಬಂತು.

ಹೊಸ ಯುಗ ನಮ್ಮದಾಗಲಿ. ಬೈಲಿನ ಎಲ್ಲೋರಿಂಗೂ ಒಳ್ಳೆದಾಗಲಿ.
ಗುರು ದೇವರ ಅನುಗ್ರಹ ನವಗೆ ಎಲ್ಲೋರಿಂಗೂ ಇರಲಿ.

~

ಒಂದೊಪ್ಪ: ಮನ್ಮಥ ಸಂವತ್ಸರಲ್ಲಿ ಉಪದ್ರ ಮಾಡಿದ ದುರ್ಮುಖಿಗೊ, ದುರ್ಮುಖಿಲಿ ನಿರ್ನಾಮ ಆಗಲಿ.

3 thoughts on “ಆದಿಯೂ ಇಲ್ಲದ್ದ, ಅಂತ್ಯವೂ ಇಲ್ಲದ್ದ ಜಗತ್ತಿಂಗೆ ಯುಗಾದಿಯ ಗೌಜಿ…!

  1. ಎಲ್ಲೋರಿಂಗೂ ಒಳ್ಳೆದಾಗಲಿ.

  2. ಹರೇ ರಾಮ, ಎಲ್ಲೋರಿಂಗೂ ಆ ಶ್ರೀ ರಾಮ ದೇವರು ಒಳ್ಳೆಬುದ್ಧಿ ಕೊಡಲಿ. ಶ್ರೀ ಗುರು ಕಾರುಣ್ಯ ಲಭಿಸಿ ಹವ್ಯಕ ಮಹಾಮಂಡಲದ ಸರ್ವತೋಮುಖ ಅಭ್ಯುದಯವಾಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×