Oppanna.com

ಆತಿರಪಿಳ್ಳಿ ಜಲಪಾತದ ದೃಶ್ಯಂಗೊ

ಬರದೋರು :   ಹಳೆಮನೆ ಅಣ್ಣ    on   19/10/2010    15 ಒಪ್ಪಂಗೊ

ಹಳೆಮನೆ ಅಣ್ಣ

ಕೇರಳದ ತ್ರಿಶೂರಿಂದ 60 ಕಿ.ಮೀ. ದೂರಲ್ಲಿಪ್ಪ ಆತಿರಪಿಳ್ಳಿ ಜಲಪಾತದ ನೋಟಂಗೊ. ಇಲ್ಲಿ ಈಗ ಬೇಕಾದಷ್ಟು ಸಿನೆಮಾ ಶೂಟಿಂಗ್ ಆವುತ್ತಾ ಇರ್ತು. ತಮಿಳಿನ ಮಣಿರತ್ನಂಗೆ ಅಂತೂ ಇಲ್ಲಿಗೆ ಒಂದು ಸರ್ತಿ ಬಾರದ್ರೆ ಒರಕ್ಕು ಬತ್ತಿಲ್ಲೆಡ. ಕೇರಳದ ಪ್ರವಾಸೋದ್ಯಮದ ಬೆಳವಣಿಗೆಗೆ ಈ ಆತಿರಪಿಳ್ಳಿ ಹೇಳ್ತ ಕುಳ್ಳಿ ಜಲಪಾತ ಕೂಡ ಗಮನಾರ್ಹವಾದ ಕೊಡುಗೆ ಕೊಟ್ಟಿದು. ಚಾಲಕ್ಕುಡಿ ಹೊಳೆ ಇಲ್ಲಿ 80 ಫೀಟ್ ಎತ್ತರಂದ ಬೀಳ್ತು. ಇದರ ನೀರು ಬೀಳ್ತಲ್ಲಿಗೆ ಹತ್ತರಂಗೆ ಹೋಗಿ ನೋಡ್ಳೆ ಆವುತ್ತು ಹೇಳುದು ವಿಶೇಷ.

ಹೆಚ್ಚಿನ ಮಾಹಿತಿ ಬೇಕಾರೆ ಈ ಸಂಕೋಲೆಯ ಒತ್ತಿ ನೋಡಿ:

http://en.wikipedia.org/wiki/Athirappilly

ಚಿತ್ರಂಗೊ: ವಸಂತರಾಜ್ ಹಳೆಮನೆ

vasantharaj.h@gmail.com

15 thoughts on “ಆತಿರಪಿಳ್ಳಿ ಜಲಪಾತದ ದೃಶ್ಯಂಗೊ

  1. ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದಂಗೊ.

  2. ತು೦ಬಾ ಹಳೆ ಕಾಲಲ್ಲಿ ಹೋಗಿತ್ತಿದ್ದೆ.ಅ೦ದಿ೦ಗೂ ಇ೦ದಿ೦ಗೂ ಅಜ ಗಜಾ೦ತರ.ಅ೦ತು ನೋಡೆಕಾದ ಜಾಗೆಯೆ.ಒಳ್ಳೆ ಪಟವೂ ವಿವರವೂ ಕೊಟ್ಟದಕ್ಕೆ ಧನ್ಯವಾದ.ಒಪ್ಪ೦ಗಳೊಟ್ಟಿ೦ಗೆ.

  3. ಪಟಂಗೊ ಸೂಪರ್.
    ಒಂದರಿ ಹೋಗಿ ಅನುಭವಿಸೆಕ್ಕು ಆ ಸೌಂದರ್ಯವ ಹೇಳಿ ಅವ್ತು
    “ಮುಂಗಾರು ಮಳೆ” ನೆಂಪಾತು

  4. ವಸಂತಣ್ಣೋ ಪಟಂಗ ತುಂಬಾ ಲಾಯ್ಕ ಬಯಿಂದು..
    ಕೊಶಿ ಆತು ನೋಡಿ…

  5. ಪಟಂಗ ತುಂಬಾ ಸೂಪರ್,ಇದರ ನೋಡಿ ಅಲ್ಲಿಗೆ ಒಂದರಿ ಹೊಯೇಕ್ಕು ಹೇಳಿ ಮನಸು ಆಯಿದು.ಪ್ರೇಕ್ಷಣೀಯ ಜಾಗೆ ತೋರ್ಸಿಕೊಟ್ಟ ಹಳೆಮನೆ ಅಣ್ಣಂಗೆ ಧನ್ಯವಾದಂಗ…

  6. ಆ ಜಲಪಾತದ ಮೇಲಾಣ ಹೊಡೆ ಮಾ೦ತ್ರ ಅಲ್ಲ, ಅದರ ಕೆಳ ನೀರು ಬೀಳ್ತಲ್ಲಿಗೂ ಹೋಪಲೆ ಆವ್ತು. ಕೆಳ ಹೋಪಲೆ ಭಾರೀ ಸುಲಭ, ಮೇಲೆ ಹತ್ತಿ ಬಪ್ಪಲೆ ಮಾ೦ತ್ರ ಚೂರು ಬನ್ಗ ಆವ್ತು 🙂

    1. ಲೇಖನದ ಸಂಕೊಲೆಲಿಪ್ಪ ವಿವರಂಗಳ ನೋಡಿ ಮಹೇಶಣ್ಣ. ಹೋಪಲೆ ದಾರಿಗಳನ್ನೂ ಕೊಟ್ಟಿದವು.

  7. ಜೀವನಲ್ಲಿ ಒಂದರಿ ಆದರೂ ಹೊಯೇಕ್ಕಾದ ಜಾಗೆ. ರಮ್ಯಾದ್ಭುತ !…

    1. (ಜೀವನಲ್ಲಿ ಒಂದರಿ ಆದರೂ ಹೊಯೇಕ್ಕಾದ ಜಾಗೆ)

      ಬೆಳ್ಳಕ್ಕೋ?ತಿರುಗಿ ಬಪ್ಪಲಿದ್ದನ್ನೇ?

    2. ಖಂಡಿತವಾಗಿಯೂ ಕಣ್ಣಾರೆ ನೋಡೆಕ್ಕಾದ ಜಾಗೆ. ಮಳೆ ಜೋರು ಬಂದೊಂಡಿಪ್ಪಗ ಹೋದರೆ ಮಾಂತ್ರ ಕಷ್ಟ ಅಕ್ಕು.

  8. ಧನ್ಯವಾದ,ಹಳೆಮನೆ ಅಣ್ಣ.
    ಜಲಪಾತಕ್ಕೆ ಹೋಪ ದಾರಿ ಮತ್ತೆ ಜಲಪಾತದ ಪಟ ಅತಿ ಸುಂದರ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×