ಚೆನ್ನಬೆಟ್ಟಣ್ಣನ ಗುರ್ತ ಇದ್ದನ್ನೇ? ಆಟದ ಶುದ್ದಿ ಮಾತಾಡುವಗ ಅವರ ಬಗ್ಗೆ ಸುಮಾರು ಸರ್ತಿ ಮಾತಾಡಿದ್ದು.
ನೆಗೆನೆಗೆ ಮೋರೆಲಿ ಯೇವತ್ತೂ ಉಲ್ಲಾಸಲ್ಲಿ ಇದ್ದೊಂಡಿಕ್ಕು! ಅವರ ಮೂಲ ಚೆನ್ನಬೆಟ್ಟು ಆದರೂ, ಈಗ ಬೆಂಗುಳೂರಿಲಿ ಇಪ್ಪದು.ಎಲ್ಲೇ ಇದ್ದರೂ, ಅವರ ಊರಿನ ಸೆಳೆತ ಇಳುದ್ದಿಲ್ಲೆ. ನವರಾತ್ರಿ ಆಚರಣೆಗೆ ಚೆನ್ನಬೆಟ್ಟು ಮಟಕ್ಕೆ ಒರಿಶಂಪ್ರತಿ ಬಂದೇ ಬಕ್ಕು!
ಹತ್ತರೆ ಎಲ್ಲೇ ಸಂಗೀತ ಕಛೇರಿ, ಡೇನ್ಸು, ಬರತನಾಟ್ಯ ಆವುತ್ತರೂ, ಸೌಕರ್ಯ ಇದ್ದರೆ ಹೋಗಿಯೇ ಹೋಕು! ಯಕ್ಷಗಾನ ಅಂತೂ ಬಿಡ್ತ ಪ್ರಶ್ನೆಯೇ ಇಲ್ಲೆ!ಬೆಂಗುಳೂರಿಲಿಪ್ಪ ಕೆಲವು ಜವ್ವನಿಗರ ಯಕ್ಷಗಾನದ ಗುಂಪಿನ ಸಕ್ರಿಯ ಸದಸ್ಯ° ಅಡ ಇವು..ಅವರ ಬ್ಲಡ್ಡು ಗ್ರೂಪು ಯಕ್ಷಗಾನ ಪ್ಲಸ್ ಅಡ, – ಲಾನಣ್ಣ ನೆಗೆಮಾಡ್ತ° ಕೆಲವು ಸರ್ತಿ!
ಅವರತ್ರೊಂದು ಸಣ್ಣ ಸೂಟುಕೇಸಿನಷ್ಟಕೆ ಇಪ್ಪ ಕೆಮರ ಇದ್ದು. ಎಲ್ಲಿಗೆ ಹೋವುತ್ತರೂ ತೆಕ್ಕೊಂಡು ಬಕ್ಕು.ಚೆಂದಚೆಂದದ ಪಟ ತೆಗಗು. ತುಂಬಾ ಚೆಂದದ ಪಟಂಗೊ! ನಮುನೆನಮುನೆದು. ಪರಿಸರವೋ – ಡೇನ್ಸುಕಾರ್ಯಕ್ರಮವೋ – ಹೂಗಿಂದೋ, ಮಾವಿನಮೆಡಿಯೋ – ಹೀಂಗೆಂತಾರು..!ಅವು ತೆಗದ ಒಂದು ಚಂದ್ರನ ಪಟವ ಗುರುಗೊ ಅವರ ವೆಬುಸೈಟಿಲಿ (ಹರೇರಾಮ.ಇನ್) ಲಿ ಹಾಕಿದ್ದವಡ, ಅವಕ್ಕೆ ಕೊಶಿ ಆಗಿ!!
ಓ ಮೊನ್ನೆ ಉಪ್ರಂಗಡಿಯ ಆದಿತ್ಯಹೋಟ್ಳಿನ ಚಳಿಕೋಣೆಯ ಒಳದಿಕೆ ಆಚಕರೆಮಾಣಿಯ ಒಟ್ಟಿಂಗೆ ಕೂದುಗೊಂಡು ಬೆಶಿಚಾಯ ಕುಡ್ಕೊಂಡಿತ್ತಿದ್ದವು.ಒಪ್ಪಣ್ಣನ ಕೈಲಿ ಚೆಂದಕೆ ಮಾತಾಡಿದವು. ಅವು ಪಟತೆಗೆತ್ತ ಶುದ್ದಿ ಎಲ್ಲ ಬಂತು - ಬೈಲಿಂಗೆ ತೋರುಸುವನಾ – ಕೇಳಿದ್ದಕ್ಕೆ ಸಂತೋಷಲ್ಲಿ ಕೊಟ್ಟು ಕಳುಸಿದವು.ಒಂದು ಸರ್ತಿಂಗೆ ಕೊಟ್ಟದರ್ಲಿ ಒಪ್ಪಣ್ಣಂಗೆ ನಾಕುಸರ್ತಿ ಹಾಕುವಷ್ಟಕೆ ಆತು!!
ಯಕ್ಷಗಾನದ ಕರ್ಣನ ನೆಂಪಾತೋ ಏನೋ! ಆಗಲಿ, ಎಲ್ಲವುದೇ ಚೆಂದಚೆಂದದ ಪಟಂಗೊ. ದೊಡ್ಡದೊಡ್ಡದು.
ದೊಡ್ಡಕೆಮರಲ್ಲಿ ತೆಗದ್ದು ದೊಡ್ಡದೊಡ್ಡದೇ ಬರೆಕ್ಕಲ್ಲದೋ! ನೋಡಿ, ಹೇಂಗಿದ್ದು ಹೇಳಿ. ಆತೋ? (ಅವರತ್ರೆ ಇನ್ನುದೇ ತುಂಬ ಪಟಂಗೊ ಇದ್ದಡ!, ಎಲ್ಲ ನಿದಾನಕ್ಕೆ ಕಳುಸುಗು!)ಪಟ ನೋಡಿ, ಕೊಶಿ ಆದರೆ ಒಪ್ಪಕೊಡಿ!
ನಿಂಗಳ ನಾಯಿಗೊ ಚೆಂದ ಇದ್ದು.
ಇದೆಲ್ಲಾ ನಾಯಿಗಳಾ???????? ಇಲ್ಲಾ ಗೊಂಬೆಗಳಾ?????????? ನಮಗಿಂತ ಚಂದ ಇದ್ದವಲ್ದ!!!!!!!!!!!
ಐಯ್ಯಬ್ಬೋ !.. ನಾಯಿಗಳ ಕಾಲವೇ .. ಎಂಗಳ ಎಪಾರ್ತುಮೆಂತಟಿಲ್ಲಿ, ಎರಡು ನಾಯಿಮನೆ-ಗೊ ಇದ್ದು. ಮನೆಗೊಕ್ಕೆ, ಅದೇ ಹೆಸರು ! ನಾಯೀಮನೆ-೧, ೨ ಹೇಳಿ. ಅಲ್ಲಿರ್ತವತರನ್ನೂ, ನಾಯಿಮನೆ ಅಂಕಲ್, ಆಂಟಿ, ಬೇಬಿ..ನಯಿಮನೆ ಕಾರು, ಸೈಕಲ್ಲು.. ! !
ಬೆಟ್ಟಣ್ಣ,ಪಟ ಚೆ೦ದ ಬೈ೦ದು.
Good Collections.Probebly from B’lore.
Yes
ಚೆನ್ನಬೆಟ್ಟಣ್ನ,
ಪಟ ನೋಡಿ ಕೊಶಿ ಆತು.
ನಾಯಿಗಳಲ್ಲಿ ಎ೦ತಾ ವೈವಿಧ್ಯ !
ಆ ಸೈಬೀರಿಯನ್ ಹಸ್ಕಿ ಎ೦ಗಳ ಮನೆ ಹತ್ತರಾಣದ್ದು.ಅಮೆರಿಕ೦ದ ತಿರುಗಿ ಬಪ್ಪಗ ತ೦ದದಡ.ಅದರ ಜತೆ ಇರೆಕ್ಕಾತನ್ನೆ?
ಬೆಟ್ಟಣ್ಣ, ಪಟ೦ಗ ಲಾಯ್ಕ ಬಯಿ೦ದು. ಒ೦ದೊಪ್ಪ ಅದಕ್ಕೆ …
ಎ೦ತಾದರೂ ಊರ ನಾಯಿಯೆ ಒಳ್ಲೆದಪ್ಪ, ಅನ್ನ್ನ ಹಾಕಿ ಕತ್ತಿ ಹಾಕಿದರೆ ಆತು, ಜಾಸ್ತಿ ಪೊಚುಗಾನ ಮಾಡುವ ಅವಶ್ಯಕತೆ ಇಲ್ಲೆ.
ಯಾರಾದರು ಅಪರಿಚಿತರು ಬ೦ದರೆ ಹೊಪಲ್ಲಿಯವರೆಗೆ ಬೊಗಳಿಕೊ೦ಡೆ ಇಕ್ಕು ಮಾತಾಡ್ಲು ಬಿಡವು….ಆದರೂ ಊರ ನಾಯಿಯೆ ಒಳ್ಳೇದು .
navage namma oora naayiye akkappa.
ee jaati naayiya saankekkare yaavagalu adara dr and adara medicine ottinge beku,
oora naayi ella vishayangalalliyu olledu.
ರೂಪತ್ತೆಯ ನಾಯಿ ಇದರಲ್ಲಿ ಯಾವುದು?
ಆ ಲಾಸ್ಟಿನ ಲ್ಯೆನಿಲಿ ಮೊದಲನೆ ನಾಯಿಯ ಮುಸುಡಿಂಗೆ ಆರೋ ಗುದ್ದಿದ್ದವು:D 😀 😀 😀
ಪಟಂಗ ತುಂಬಾ ಒಪ್ಪ ಇದ್ದು.
ಈ ಉಕ್ಯೋ…!! ಹೇಳ್ತ ಬೊಗ್ಗ೦ಗಳ ಪಟ ಸಾಕನ್ನೆ…!
“Afghan hound” ಲಾಯಕಲಿ ಎಣ್ಣೆ ಹಾಕಿ ತಿಕ್ಕಿ ಲಾಯ ಬಾಚಿ ನಿಲ್ಲು ಸಿದ್ದವು… 🙂
“Chow Chow” ತಿ೦ದು ಹಾ೦ಗಾದ್ದೊ ಆ ನಾಯಿ?? ಏ? 😉
“Neapolitan mastif” ಅದರ ಮುಸುಡಿ೦ಗೆ ಆರೋ ಬೈರಾಕು ಹಾಕಿ ಕಟ್ಟಿದವು.. ಕಚ್ಚುತೊ ಏನೊ.. ಉಮ್ಮಪ್ಪ..! 😛
“Siberian husky” ಇದು ಎ೦ತಾ ನಾಯಿಗಳ ಎಡಕ್ಕಿಲ್ಲಿ ಒ೦ದು ತೋಳ?? 😀
“Neapolitan mastif” ನ ನೋಡುವಗಳೇ ಬರೀ ಭೋಸನ (ಭೋಸ ಭಾವ ಅಲ್ಲ) ಹಾಂಗೆ ಕಾಂಬದು
ಅದು ಬೋಸ ನಾಯಿ ಅಲ್ಲ.. ಬೊದ್ದುಸು ನಾಯಿ.. 😉
ಕೊರಪ್ಪಲೂ ತ್ರಾಣ ಇಲ್ಲದ್ದಾ೦ಗೆ ಬಿದ್ದೊ೦ಡಿದ್ದು.. ಅಲ್ಲದೋ??
ಹ್ಮ್ಮ್ ಹಾಂಗೂ ಹೇಳಲಕ್ಕು
‘ಹಿಡ್ಡ್ಯೋ..ಹಿಡ್ಡಿಡ್ಡ್ಯೋ..’ ಹೇಳಿ ನಾವು ಬಾಯಿಮಾಡಿಯಪ್ಪಗ ರಪಕ್ಕನೆ ಗುಡ್ಡೆ ಹತ್ತಿ ಮಂಗಂಗಳ ಅಟ್ಲೆ ಇವರಿಂದ ಎಡಿಗೊ ಭಾವ..? ಅದಕ್ಕೆ ನಮ್ಮ ‘ಆಲ್ ಸೀಸನ್’ ನಾಯಿಯೇ ಆಯೆಕ್ಕಟ್ಟೆ!!
ನಾಇಗೊ ಪಷ್ಟಿದ್ದವು ಚೆನ್ನಬೆಟ್ಟಣ್ಣ.
ಪಟತೆಗವಗ ಗುರೂನೆ ಹೇಳಿದ್ದವಿಲ್ಲೆನ್ನೇ?
ಇವು ನಾಯಿಗಳ ಗೂಡಿಲಿ ಕಟ್ಟುದೋ ಅಟ್ಟುಂಬೊಳ ಕಟ್ಟುದೋ?
ಸಪಾಯಿ ಆಗಿ ಚೆಂದಕೆ ಇದ್ದವಿದ, ಅದಕ್ಕೆ ಕೇಳಿದ್ದಷ್ಟೆ. 😉
ಏ ನೆಗೆ ಮಾಣಿ,
ರೂಪತ್ತೆಯ ಮನೆಲಿ ಹೀಂಗಿಪ್ಪದರ ಎಲ್ಲಿ ಮನುಗಿಸಿದ್ದವು ನೋಡಿದ್ದಿಲ್ಲೆಯಾ?
ಪಟಂಗೊ ಒಪ್ಪಕ್ಕೆ ಬಯಿಂದು.ಇನ್ನೂ ಬತ್ತಾ ಇರಳಿ.