Oppanna.com

ಹೊಸ ವರ್ಷದ ಹೊಸ ಚಿಗುರು…

ಬರದೋರು :   ಹಳೆಮನೆ ಅಣ್ಣ    on   01/01/2011    16 ಒಪ್ಪಂಗೊ

ಹಳೆಮನೆ ಅಣ್ಣ

ಎಲ್ಲೋರಿಂಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಂಗೊ. ಸಮೋಸ ಕಳುಸುವ° ಹೇಳಿರೆ ಮೊಬೈಲ್ ಕಂಪೆನಿಗೊ ಒಂದೊಂದು ರೂಪಾಯಿ ಪೀಂಕುಸುತ್ತವು. ಹಾಂಗಾಗಿ ಬೈಲಿನವಕ್ಕೆಲ್ಲ ಒಟ್ಟಿಂಗೆ ಶುಭಾಶಯ ಕಳುಸುತ್ತಾ ಇದ್ದೆ. ಈ ಚಿಗುರಿನ ಪಟ ಇದಕ್ಕೆ ಒಳ್ಳೆದು ಹೇಳಿ ಕಂಡತ್ತು.

ಹೊಸ ಕ್ಯಾಲೆಂಡರ್ ವರ್ಷ ಎಲ್ಲೋರಿಂಗೂ ಒಳ್ಳೆಯದನ್ನೇ ಉಂಟುಮಾಡಲಿ.

16 thoughts on “ಹೊಸ ವರ್ಷದ ಹೊಸ ಚಿಗುರು…

  1. ವಸಂತ ರಾಜ್,
    ನೀವು ವೆಬ್ ಉದ್ದೇಶಕ್ಕೆ ಬಳಸೋ ಫೋಟೋಗಳ ರೆಸೋಲುಶನ್ ಕಮ್ಮಿ ಮಾಡಿ, ಚಿಕ್ಕ ಅಳತೆಯ ಫೋಟೋ ಹಾಕಿದರೂ ಸಾಕಲ್ಲವೇ? ಕನ್ನಡಪ್ರಭ ಚೌರ್ಯದ ಸಮರ್ಥನೆ ಇದಲ್ಲ. ಆದರೆ ಮುಂದಿನ ದಿನಗಳಲ್ಲಿ ನಾವೂ ಸಾಕಷ್ಟು ಎಚ್ಚರವಾಗಿರೋದು ಒಳಿತಲ್ಲವೇ..?
    – ಮೀನಾ ಸಾವಂತ್

  2. ಫೋಟೋ ಕದಿವದು ಸರಿ ಹೇಳುವ ದ್ರುಷ್ಟಿಂದಾಗಲೀ… ವೈಯುಕ್ತಿಕವಾಗಿ ಆರನ್ನೂ ಉದ್ದೇಶಿಸಿ ಆಗಲೀ ಈ ಪ್ರತಿಕ್ರಿಯೆ ನೀಡುತ್ತಾ ಇಪ್ಪದು ಅಲ್ಲ… ಇಂತಹ ಸಂದರ್ಭಂಗಳಲ್ಲಿ ನಮ್ಮ ದೃಷ್ಟಿಯ ಚೂರು ಬದಲುಸಿದರೆ ನಾವು ಯಾವ ತರ ಸುಖವಾಗಿಪ್ಪಲಕ್ಕು ಹೇಳುದರ ಬೈಲಿಂಗೆ ವಿವರುಸುವ ದ್ರುಷ್ಟಿಂದ ಮಾಂತ್ರ ಈ ಪ್ರತಿಕ್ರಿಯೆ ನೀಡುತ್ತಾ ಇಪ್ಪದು…

    ನಾವು ಬೈಲಿಲ್ಲಿ ಅಥವಾ ಯಾವುದೇ ಬ್ಲಾಗ್ ಲ್ಲಿ ಫೋಟೋ ವ ಹಾಕುವ ಉದ್ದೇಶ “ಅದರ ನೋಡಿ ಇತರರು ಆನಂದ ಮತ್ತು ಜ್ಹಾನವ ಪಡೆಯಲಿ” ಹೇಳಿ. ಇತರರು ಆ ಫೋಟೋವ ಬೇರೆ ಕಡೇಲಿ ಉಪಯೋಗಿಸುತ್ತವು ಹೇಳಿ ಆದರೆ ಆ ಫೋಟೋವ ಇನ್ನೂ ಹಲವು ಜೆನಕ್ಕೆ ತೋರುಸಿ ಅವು ನಮಗೆ ನಿಜವಾಗಿಯೂ ಸಹಾಯ ಮಾಡಿದ ಹಾಂಗೆ ಆತು… ಅವು ನಮಗೆ ಕೃತಜ್ಹ್ನತೆ ಹೇಳಿದ್ದವಿಲ್ಲೇ ಹೇಳುವ ಒಂದೇ ಕಾರಣಕ್ಕೆ, ಅವು ಮಾಡಿದ ತಪ್ಪಿಂಗೆ ನಾವು ಕಷ್ಟ ಅನುಭವಿಸುವುದು ಎಂತಕೆ?

    ಫೋಟೋಗ್ರಫಿಯ ವೃತ್ತಿಯಾಗಿ ಮಾಡುವವಕ್ಕೆ ಇತರರು ಹೀಂಗೆ ಬಳಸುದರಿಂದ ತೊಂದರೆ ಆವುತ್ತು ಹೇಳಿ ಆದರೆ ಹೋರಾಡಲೇ ಬೇಕಾವುತ್ತು… ಇದು ವೈಯುಕ್ತಿಕವಾಗಿ ಆರನ್ನೂ ಉದ್ದೇಶಿಸಿ ನೀಡುತ್ತಾ ಇಪ್ಪ ಪ್ರತಿಕ್ರಿಯೆ ಅಲ್ಲ…

  3. ನಾವು ಕಷ್ಟಪಟ್ಟು ತೆಗೆದ ಫೊಟೊ ಕದ್ದು ಉಪಯೋಗ ಮಾಡೊದು ಫಟಿಂಗ ಬುದ್ಧಿ.

  4. ಬೇಜಾರದ ಸಂಗತಿ ಎಂತರ ಹೇಳಿರೆ ಇದೇ ಪಟವ ಇಂದ್ರಾಣ ಕನ್ನಡಪ್ರಭ ಪೇಪರಿಲ್ಲಿ ಯಾವುದೇ ಹೆಸರು ಹಾಕದ್ದೆ ಅವರದ್ದೇ ಚಿತ್ರ ಹೇಳ್ತ ಹಾಂಗೆ ’ಭವಿಷ್ಯ’ ವಿಭಾಗಕ್ಕೆ ಉಪಯೋಗಿಸಿಕೊಂಡಿದವು. ಕನ್ನಡಪ್ರಭಲ್ಲಿ ನಮ್ಮವು ಬೇಕಾದಷ್ಟು ಜನ ಇದ್ದವು. ಪೇಪರಿನವರ ಈ ಚಾಳಿಯ ಆರಿಂಗಾದರೂ ಬಿಡುಸಲೆ ಎಡಿಗೋ? ಫೋನ್ ಮಾಡಿಯೋ, ಮಿಂಚಂಚೆ ಹಾಕಿಯೋ ಅವಕ್ಕೆ ಈ ವಿಷಯ ಮನದಟ್ಟು ಮಾಡಿ ಕೊಡೆಕಾಗಿ ವಿನಂತಿ. ಕನ್ನಡಪ್ರಭದ ಕೊಂಡಿಯ ಇಲ್ಲಿ ನೇಲ್ಸುತ್ತೆ.

    http://www.kannadaprabha.com/pdf/epaper.asp?pdfdate=3/20/2012

    1. ನಿಜವಾಗಿಯೂ ಬೇಜಾರದ ಸಂಗತಿ. ಹೀಂಗಿಪ್ಪ ಅನುಭವ ಎನಗೂ ಆಯಿದು. ಎನ್ನ ಬ್ಲಾಗಿಂದ ಪಟವ ತೆಗದು “ತರಂಗ” ಲ್ಲಿ ಹಾಕಿತ್ತಿದ್ದವು.
      ಪೇಪರಿನವರ ಈ ಚಾಳಿಯ ಆರಿಂಗಾದರು ಬಿಡುಸುಲೆ ಎಡಿಗಾದರೆ ಒಳ್ಳೆದಿತ್ತು.

  5. ಆಹ.. ಭಾರಿ ಲಾಯಿಕ ಆಯಿದು ಪಟ.. ಸೂಪರ್

  6. ಹಳೆಮನೆ ಅಣ್ಣ,
    ಸರಿಯಾಗಿ ಹೊಸ ಒರಿಶ ಸುರು ಆದ ಹೊತ್ತಿಂಗೆ ಹಾಕಿದ್ದು ಕಂಡು ತುಂಬಾ ಕೊಶಿ ಆತು. 🙂
    ಒಳ್ಳೆ ಚೆಂದದ ಪಟ.

  7. ಹಳೆಮನೆ ಅಣ್ಣ, ಈ ಚಿಗುರೆಲೆ ಪಟ glass paintingನ ಹಾಂಗೆ ಕಾಣುತ್ತನ್ನೆ !!!!!!!!‌ ಭಾರೀ ಲಾಯಿಕದ ಶುಭಾಶಯ ಪತ್ರ! ನಿಂಗೊಗುದೇ ಹೊಸ ವರುಶದ ಶುಭ ಹಾರೈಕೆಗೊ..

  8. ಚೋಕ್ಲೇಟು ಐಸುಕ್ರೀಮು ಎಲ್ಲ ತಿ೦ದರೆ ಹಲ್ಲು ಹಾಳಕ್ಕು ಆತೊ ಹಾ೦ಗಾಗಿ ಎಡೆ ಎಡೇಲಿ ಒ೦ದೊ೦ದು ಚೋಕ್ಲೇಟೂದೆ ಐಸುಕ್ರೀಮು ಸಿಕ್ಕಿರೆ ಸಾಕಾತೊ.ಪಟ ಹಾಕಿದ್ದಕ್ಕೆ ಹಳೆಮನೆ ಅಣ್ಣ೦ಗೆ ಒ೦ದು ಶುಭಾಶಯ ಹೇಳುವೊ೦.ಇನ್ನು ಬೋಸ ಭಾವ೦ ಹೇಳಿದ೦ ಹೇಳಿ ನೀನು ಅಮ್ಮನತ್ರೆ ಹಟ ಹಿಡುದು ಪೈಸೆ ಮತ್ತು ಕೊ೦ಡೋಗೇಡ ಆತೊ ಅವ೦ ರಜ ಭೋಸ೦ ಅಲ್ಲದೊ ನಿನ್ನ ಬಾಯಿ ಹೇಳಿ ಅವನ ಬಾಯೀಗೇ ಹಾಕಲೂ ಸಾಕು ಜಾಗ್ರತೆ ಮಾಡಾತೊ.ಒಪ್ಪ೦ಗಳೊಟ್ಟಿ೦ಗೆ.

  9. ಪಟ ಚೆಂದ ಬೈಂದು…
    ಎಲ್ಲೋರಿಂಗೂ ಹೊಸ ವರ್ಷದ ಶುಭಾಶಯಂಗೊ…

  10. ಪಟ ತುಂಬ ಚೆಂದ ಬಯಿಂದು ಅಣ್ಣೋ! ಹೊಸ ವರ್ಶ ಎಲ್ಲರಿಂಗೂ ಒಳ್ಳೇದು ಮಾಡಲ್ಲಿ, ಎನಗೆ ಸುಮಾರು ಐಸುಕ್ರೀಮು, ಚಾಕ್ಲೇಟು ಸಿಕ್ಕುವಾಂಗೆ ಆಗಲ್ಲಿ.. ಅಲ್ಲದಾ,,, 🙂

    1. {..ಐಸುಕ್ರೀಮು, ಚಾಕ್ಲೇಟು ಸಿಕ್ಕುವಾಂಗೆ}

      ಇದಾ, ನೀನು ಪೈಸೆ ತೊಕ್ಕೊ೦ಡು ಬಾ.. ಆನು ಎಲ್ಲವನ್ನು ಕೋಡುಶುತ್ತೆ… ಆತೊ??

  11. ಹೊಸ ಕ್ಯಾಲೆಂಡರ್ ವರ್ಷ ಎಲ್ಲೋರಿಂಗು ಶುಭವ ತರಳಿ. ಯುಗಾದಿ ಸಮಯಲ್ಲಿ ಇನ್ನೊಂದು ಚೆಂದದ ಪಟವ ಹಾಕಲೆ ಮರದಿಕ್ಕೆಡ ಅಳಿಯ. ಹಾರ್ದಿಕ ಶುಭಾಶಯಂಗಳ ಒಟ್ಟಿಂಗೆ, ಒಪ್ಪಂಗೊ.

  12. ಒಂದು ಚೂರ್ಣಿಕೆಯೇ ಆಗದೋ..

    ಹಳೆಮನೆಯಣ್ಣನೊ ಇರುಳೆ ಬೈಲಿಗಿಳಿದು
    ಚಿಗುರೆಲೆಯ ಪಟ ಹಾಕಿದಾ°
    ಕಳೆಕೂಡಿತ್ತದ ಮನಕೆ ಹರುಷ ನೋಡಿ
    ಬಗೆಬಗೆಯ ಹೊಸ ನೋಟವಾ..

  13. ಹಳೆಮನೆ ಅಣ್ಣಾ, ನಿಂಗೊಗುದೆ ಹೊಸ ಕ್ಯಾಲೆಂಡರ್ ವರ್ಶದ ಶಭಾಶಯಂಗೊ! ಹಾಂಗೆಯೆ ಬೈಲಿನವಕ್ಕೆಲ್ಲ ಶುಭಾಶಯಂಗೋ!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×