Latest posts by ಅಡ್ಕತ್ತಿಮಾರುಮಾವ° (see all)
- ಜೇನು..ಜೇನು..ಜೇನು.. - November 17, 2011
- ಹಲಸಿನ ಹಣ್ಣಿನ ಮೇಳ.. - August 24, 2011
- ಭೂತವ ಕಂಡಿದಿರಾ.??? - June 22, 2011
ರೆಜ ಸಮಯ ಹಿಂದಂದಲೇ ಊರುಗಳಲ್ಲಿ “ಬೊಂಡಮೇಳ” ಮಾಡುದು ಸುರು ಆಯಿದು.
ಈಗೀಗ ನಮ್ಮ ಬೈಲಿಲಿ “ಹಲಸಿನ ಹಣ್ಣಿನ” ಮೇಳವೂ ನೆಡದ್ದು.
ಇದಾ, ಎಂಗಳ ಊರಿಲಿ ನಡದ ಹಲಸಿನ ಹಣ್ಣಿನ ಮೇಳದ ಪಟ ಕೊಡ್ತಾ ಇದ್ದೆ.
ಹಲಸಿನ ವಿವಿಧ ಬಗೆಗಳ ಬಗ್ಗೆ ಅಂದೊಂದರಿ ಒಪ್ಪಣ್ಣ ಶುದ್ದಿ ಹೇಳಿದ್ದ ಅಲ್ಲದಾ, ಅದೇ ರೀತಿ ಕೊಟ್ಟಿಗೆ, ಪಾಯಸ ಇತ್ಯಾದಿ ಎಲ್ಲ ಮಾಡಿ ಹಲಸಿನ ಮೇಳ ಮಾಡಿದ್ದು.
ರುಚಿ ಹೇಂಗಿದ್ದು ನೋಡಿ – ತಿಳುಶಿ.
ಆತಾ?
~
ಹಲಸಿನ ಹಣ್ಣಿನ ಮೇಳದ ಸುಂದರ ಚಿತ್ರಣ ಕೊಟ್ಟ ಮಾವಂಗೆ ಧನ್ಯವಾದಂಗೊ. ಪಟಂಗೊ ಲಾಯಕಿತ್ತು. ಓಹ್, ಬಗೆ ಬಗೆಯ ರುಚಿಯ ಹಣ್ಣುಗೊ ಅಲ್ಲಿ ಇತ್ತಾಯ್ಕ್ಲು. ಪೇಟೆಲಿಪ್ಪವಕ್ಕೆ, ತುಳುವನ ಹಣ್ಣಿನದ್ದುದೆ ಕೊಟ್ಟಿಗೆ, ಸುಟ್ಟವು ಮಾಡೆಕಾದ ಪರಿಸ್ಥಿತಿ !
ಫಟಂಗೊ ಎಲ್ಲಾ ಚೆಂದ ಇದ್ದು. ನೋಡಿ ಖುಶಿ ಆತು ಮಾವ.
ಫಟಂಗೊ ಲಾಯಕಿದ್ದು ಮಾವ…
ಧನ್ಯವಾದ..
ಮೆಚ್ಚೆಕ್ಕಾದ ವಿಷಯ ಮಾವಾ.
ಪೈಸೆ ಕೊಟ್ಟು ಹಲಸಿನಕಾಯಿ ತೆಕ್ಕೊ೦ಡೆ ಹೇಳಿರೆ ಊರಿಲಿ ನೆಗೆ ಮಾಡುವ ವಿಷಯ.ಆದರೆ ಅದರ ಬೆಲೆ ಪರ ಊರಿ೦ಗೆ ಬ೦ದು ಸೊಳೆಗೆ ಎರಡು ರುಪಾಯಿ ಕೊಟ್ಟಪ್ಪಗ ಗೊ೦ತಪ್ಪದು !
ಒ೦ದು ವಿಷಯ ನೆ೦ಪಾತು,ಎರಡು ತಿ೦ಗಳು ಮದಲು ಕೇಜಿ ಮಾವನ ಸಹಕಾರಲ್ಲಿ ಊರಿ೦ದ ಬ೦ದ ಹಲಸಿನ ಹಪ್ಪಳ ಎನ್ನ ಆಫೀಸಿಲಿ ಎರಡು ನಿಮಿಶಲ್ಲಿ ಖಾಲಿ ಆಗಿ,ಬಪ್ಪ ವರುಷವೂ ಬೇಕು ಹೇಳುವ ಬೇಡಿಕೆ ಸಿಕ್ಕಿದ್ದು.
ಹಲಸು,ಮಾವು ಇತ್ಯಾದಿ ಉತ್ಪನ್ನ೦ಗಳ ಬೆಳೆಶುಲೆ ಈ ರೀತಿಯ ಮೇಳ೦ಗೊ ಸಹಕಾರಿಯಾಗಲಿ ಹೇಳಿ ಹಾರೈಕೆ.
ಇದು ಡಿ.ಕೆ.ಚೌಟರ ಸ೦ಘಟನೆಯೊ?
ಕೊದಿ ಹರಿಶಿತ್ತು ಪೋ..!
ಬಹು ಅಪರೂಪದ ವಿಶೇಷ ಕಾರ್ಯ ಇದು ಬಹು ಶ್ಲಾಘನೀಯ. ಇದೇ ರೀತಿ ಪ್ರತಿಯೊಂದು ಫಲ , ತರಕಾರಿ ಉತ್ಪನ್ನಂಗಳ ನಾವು ಮನ ಮೆಚ್ಚಿ ಮಾಡಿರೆ ಖಂಡಿತಾ ಹೆಮ್ಮೆ. ಸಾವಯವ ಕೃಷಿಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕುಗು ಕೂಡ.
ಆ ಗ್ಲಾಸಿಲ್ಲಿಪ್ಪದು ಪಾಚ ಆಯ್ಕಲ್ಲದೋ. ಎಂತಾರು, ಹಲಸಿನ ಹಣ್ಣು ಕೊಟ್ಟಿಗೆ ಅದೇ ಎಲೇಲಿ ಮಾಡೆಕ್ಕಪ್ಪ. ಬಾಳೆ ಎಲೆಂದಲೂ ಪಷ್ಟು ಆವ್ತು. ಮಾಮಾಸಮ ಬಂದಿದ್ದರೆ ಸೊಳೆ ಹೊರುದ್ದದು ಎಲ್ಲಿ ಇದ್ದು ಹೇದು ಹುಡುಕ್ಕುತ್ತಿತ್ತವು ಅಪ್ಪೋ!!.
ಕೃಷಿಕರಿಂಗೆ ಕೃಷಿಲಿ ಶ್ರದ್ಧೆ ಪ್ರೀತಿ ಜವಾಬ್ದಾರಿ ಉತ್ಸಾಹ ಸಿಕ್ಕುವಲ್ಲಿ ಇಂತಹ ಕಾರ್ಯ ಖಂಡಿತಾ ಉಪಯೋಗ. ಜೈ ಕೃಷಿಕ.