ಹಳೆಮನೆ ಅಣ್ಣ ಒಳ್ಳೆ ಪಟ ತೆಗೆತ್ತ° ಹೇಳಿ ಗೊಂತಿದ್ದು, ಯೇವದಾರು ಜೆಂಬ್ರದ್ದಾದರೆ - ಎಲ್ಲವುದೇ ಹೆಚ್ಚುಕಮ್ಮಿ ಒಂದೇ ನಮುನೆ ಇರ್ತು. ಬಟ್ಟಮಾವ, ಮದುಮ್ಮಾಯ, ಉಪ್ನಯನದ ಮಾಣಿ, ಅದು ಇದು.ಆದರೆ ನಮ್ಮದೇ ಪರಿಸರದ ಪಟಂಗ ಹೇಂಗಿಕ್ಕು?!ಪ್ರತಿ ಪಟಲ್ಲಿದೇ ಅದರದ್ದೇ ಆದ ಶಕ್ತಿ ಇತ್ತು. ಅಲ್ಲಿ ಇದ್ದದೆಲ್ಲ, ಕೊಕ್ಕರೆಯೋ, ಜೇಡನಬಲೆಯೋ, ತೊಳಶಿ ಹೂಗೋ - ಸಾಮಾನ್ಯ ನಿತ್ಯಜೀವನಲ್ಲಿ ಕಾಣ್ತದೃಶ್ಯಂಗಳೇ ಆದರೂ, ಪಟ ಹಳೆಮನೆ ಅಣ್ಣ ತೆಗದ್ದಾದರೆ ಅದರ್ಲಿ ಏನೋ ಒಂದು ಬೇರೇ ನಮುನೆ ಕಾಂಬದು.ನಿನ್ನೆ ಹೋಗಿ ಕೇಳಿದೆ, ಹಳೆಮನೆ ಅಣ್ಣ, ಇದರ ಒಪ್ಪಣ್ಣನ ಬೈಲಿಂಗೆ ತೋರುಸುವನಾ? ಹೇಳಿ...ಕುಶೀಲಿ ಅಕ್ಕು ಹೇಳಿದ, ಪೆಟ್ಟಿಂಗೆಂದ ಹುಡ್ಕಿ ಕೆಲವರ ತೆಗದು ಕೊಟ್ಟ!ಇದಾ, ಆ ಕೆಲವು ಪಟಂಗೊ!ನೋಡಿ,ಕುಶಿ ಆದರೆ ಒಪ್ಪ ಕೊಡಿ. ಆತೋ?
ಹಳೆಮನೆ ಅಣ್ಣ,
ಪಟಲ್ಲಿ ಇಪ್ಪ ಹುಳು ಯೇವದೇ ಇರಳಿ, ಭಾರೀ ಚೆಂದ ಇದ್ದು ಮಾಂತ್ರ!!
ಹುಳುವಿನ ಮೈಲಿಯೂ, ಎಲೆಯ ಮೇಲೆಯೂ ಇಪ್ಪ ಪ್ರತಿ ಗೆರೆ – ಸೂಕ್ಷ್ಮಂಗಳನ್ನು ಚೆಂದಲ್ಲಿ ಹಿಡುದ್ದಿ.
ಒಳ್ಳೆ ಪಟ! ತುಂಬಾ ಚೆಂದದ ಪಟ!!
ಎನಗೆ ಸುರುವಿಂಗೇ ಸರಿ ಉತ್ತರ ಸಿಕ್ಕಿದ್ದು. ಹೊಸಬೆಟ್ಟಿಲ್ಲಿಪ್ಪ ನಮ್ಮ ಶ್ರೀಶಣ್ಣ ಬರದ್ಸು. ಅಪ್ಪು, ಅದು ಚಿಟ್ಟೆಯ ಕ್ಯಾಟರ್ಪಿಲ್ಲರ್ ಅಥವಾ ಶಲಭಕೀಟ. ಮೊನ್ನೆ ಒಂದ್ಸರ್ತಿ ಮನೆ ಹತ್ರೆ ತಿರುಗುವಾಗ ಅಂಡೆಪಾಜೆ ಗಿಡದ ಮೇಲೆ ಕಂಡದು. ಹಿಂದಾಣ ಹೊಡೆಲಿ ಕಾಂಬದು ಅದರ ಕೊಂಬು. ಜೀವಶಾಸ್ತ್ರಲ್ಲಿ ಈ ಕೊಂಬಿಂಗೆ ಎಂತ ಹೇಳ್ತವು ಗೊಂತಿಲ್ಲೆ. ಗೋಪಾಲಮಾವ° ಎಂತ ಹೇಳ್ತವು ನೋಡಾ°. ಹೇಳಿದ ಹಾಂಗೆ ಈ ಹುಳು ಸೆಸಿಲಿ ತಲೆಕೆಳಾ ಆಗಿ ಹೋವುತ್ತಾ ಇಪ್ಪದು. ಹಾಂಗಾಗಿ ಚಿತ್ರಲ್ಲಿ ಹಾಂಗೇ ಇದ್ದು.
ಅಜ್ಜಿಮನೆ ಪುಳ್ಳಿಗೂ, ಕೊರಗ್ಗಂಗೂ ಅದು ಸರಿ ಗೊಂತಾಯಿದಿಲ್ಲೆ. ಚೆನ್ನಬೆಟ್ಟಣ್ಣ ಬುದ್ಧಿವಂತಿಕೆ ಮಾಡಿದ್ದ°. ಹ ಹ ಹಾ…..
ಭಾವ ಅನು ಹೇಳಿದ್ದು ಕೂಡ ಸರಿ ಏ….. 😛 ಅದರ ಸರಿ ಆದ ಉಪ ಜಾತಿ – ” Tomato/Tobacco Hornworm Larvae” 😛 😛
ಕೇಟರ್ ಪಿಲ್ಲರು ಹೇಳುತ್ತ ಸರಿ ಉತ್ತರ ಎನಗೆ ಸುರೂವಿಂಗೇ ಗೊಂತಿತ್ತು. ಸುಮ್ಮನೇ ಆನು ಅದರ ಮದಾಲು ಹೇಳಿ, ತಪ್ಪು ಉತ್ತರ ಹೇಳುತ್ತವರನ್ನೂ ಎಂತಕೆ ತಡೆಕು. ಎಂತ ಎಂತ ತಮಾಷೆ ಉತ್ತರ ಬತ್ತೂ ಹೇಳಿ ನೋಡುವೋ ಹೇಳೀ ಮಾತಾಡದ್ದೆ ಸುಮ್ಮನೆ ಒಂದು ಕರೇಲಿ ಕೂದ್ದದು. ಇರಳೀ. ಅದರ ಹಿಂದಾಣ ಕೊಂಬಿನ ಹೆಸರು ಎಲ್ಲ ಎನಗರಡಿಯ. ಹೇಳಿರೆ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಆನು ಬಿಟ್ಟು ಇಪ್ಪತ್ತು ವರ್ಷ ಆತದ. ಪಟ ಅಂತೂ ಲಾಯಕಾಯಿದು. ಆ ದೇವರ ಸೃಷ್ಟಿ ವೈಚಿತ್ರ್ಯ ನಿಜವಾಗಿಯೂ ಅದ್ಭುತ. ಹಿನ್ನೆಲೆಗೆ ಹೊಂದಿಕೊಂಡು ವೈರಿಗಳಿಂದ ದೂರ ಇಪ್ಪಲೆ ಇದ್ದ ಕೆಲವು ಪ್ರಾಣಿಗಳ ಈ ಸುವ್ಯವಸ್ಥೆಯ ನಿಜವಾಗಿಯೂ ಮೆಚ್ಚೆಕು.
ಇದು ಹಳೆಮನೆ ಅಣ್ಣ ತೆಗದ ಪಟ !
ಆದಾ ಈಗ ನೆಗೆ ಬಾವಂಗೂ ನೆಗೆ ಬಂತಡ
ಯೆಬೇ…. ಯೇರ್ಲಾ ಸರೀ ಪಂಡ್ತಿಜ್ಜೇರ್…. ಅವು ಆನೆಪ್ಪುರಿ ಅತ್ತ ಬಾಣಾರೆ…. ಮುಟ್ಟ್ಂಡ ಕಿರ್ಂಬುಂಡು
chee.. ಹಿಸ್ಕು…
ಹಿಸ್ಕು ಅಲ್ಲ ಮಾರಾಯ ಅದು.. 😛
ಇದು ಒಂದು ರೀತಿಯ larval form ಅತವ caterpiller ,Hummingbird Moths ಅತವ ಚಿಟ್ಟೆ, ಅದರ life cycle stage ನ ಒಂದು ಪಟ. 😛
ರೇಶ್ಮೆ ಹುಳು ಕೂಡಾ ಹಿ೦ಗೇ ಇರ್ತು…
ಪಟ ತೆಗದ್ದು ಲಾಯ್ಕ ಆಯಿದು
ಏಕದ೦ತ ಭಾರಿ ಚೆ೦ದ ಕಾಣ್ತು
ಇದು ಚಿಟ್ಟೆಯ caterpiller. ರೂಪಾಂತರ ಹೊಂದಿ ಚಿಟ್ಟೆ ಅಪ್ಪದು