Latest posts by ಅಡ್ಕತ್ತಿಮಾರುಮಾವ° (see all)
- ಜೇನು..ಜೇನು..ಜೇನು.. - November 17, 2011
- ಹಲಸಿನ ಹಣ್ಣಿನ ಮೇಳ.. - August 24, 2011
- ಭೂತವ ಕಂಡಿದಿರಾ.??? - June 22, 2011
ಜೇನು ಹೇಳಿರೆ ನೈಸರ್ಗಿಕವಾಗಿ ಸಿಕ್ಕುವ ಅಮೃತ. ಅನೇಕ ಜೀವಸತ್ವಂಗೊ ತುಂಬಿಪ್ಪ ಮಹಾ ಆಗರ.
ಪ್ರತಿ ಮನೆಗಳಲ್ಲಿಯೂ ಜೇನು ಕೃಷಿ ಮಾಡುದು ತುಂಬಾ ಉತ್ತಮ.
ಮನೆಯ ಜೇನುಕೃಷಿಯ ಕೆಲಸ ಸಮಯಲ್ಲಿ ಕೆಲವು ಪಟಂಗಳ ತೆಗದ್ದೆ.
ಒಂದರಿ ನೋಡಿ, ನಿಂಗಳ ಅಭಿಪ್ರಾಯ ಹೇಳಿಕ್ಕಿ.
~
ಅಡ್ಕತ್ತಿಮಾರು ಮಾವ°
ನಂಗೆ ಈ ಹವ್ಯಕ ಭಾಶೆಲಿರೊ ಬ್ಲಾಗು ತುಂಬಾ ಇಸ್ಟಾಆತು. ಹಂಗೆಯ ಪೊಟೊಂಗೊ ನೊಡಿ ಬಾಯಲ್ಲಿ ನೀರು ಬಂತು.
ನಮಗೆ ಶುದ್ದ ಜೇನು ಮಕ್ಕಳಿಗೆ ಬೇಕು. ನಿಮ್ಮ ಹತ್ತಿರ ಸಿಗುತ್ತದೆ ತಿಳಿಸಿ
jenu krishi nnge tumba ista aadare illi(gulbargadalli)jenu siguvde illa. nimma photo tumba cennagive mama
ಜೇನು ಅಂದರೆ ನನಗೆ ತುಂಬ ಇಷ್ಟ ಆದರೆ ಇಲ್ಲಿ ( ಗುಲಬರ್ಗಾದಲ್ಲಿ ) ಜೇನು ಸಿಗುವುದೆ ಇಲ್ಲ. ಆದ್ದರಿಂದ ನನಗೆ ಜೇನು ಮಾಡಲಿಕ್ಕೆ ತಮ್ಮಿಂದ ನನಗೆ ಪೂರ್ಣ ಮಾರ್ಗದರ್ಶನ ಮಾಡಿದರೆ ತುಂಬಾ ಸಹಾಯವಾಗುತ್ತದೆ. ನಿವುತೆಗೆದ ಚಿತ್ರ ಗಳನ್ನು ನೊಡಿ ಅತಿ ಸಂತೊಷವಾಯಿತು
ಫೊಟೊ೦ಗ ಎಲ್ಲವೂ ಲಾಯ್ಕಿದ್ದು ಮಾವ..ನೋಡುವಗ ಆಸೆ ಆವ್ತು..
ಹಾ ಹಾ ಜೇನು ಕಂಡು ಬಾಯಿಲಿ ನೀರು ಬಂತು ಮಾವ. ತುಂಬಾ ಚೆಂದದ ಲೇಖನ. ಧನ್ಯವಾದಂಗೊ ಮಾವಂಗೆ.
ಜೇನು ಕೃಷಿಯ ಬಗ್ಗೆ ಶಬ್ಧಲ್ಲಿ ಹೇಳ್ತದರ ‘ಫಟಂಗಳಲ್ಲಿ’ ತೋರ್ಸಿದ್ದು ಜೇನು ಸವಿಯ ಹಾಂಗೆ ಆಯಿದು.
ಧನ್ಯವಾದ.
ವಾಹ್! ಜೇನದ ಪೋಳೆಯ ಕಾಣದ್ದೆ ವರ್ಷ ಎಷ್ಟಾತು. ಭಾರೀ ಅಪರೂಪದ ಪಟಂಗಳ ತೋರುಸಿದ್ದಕ್ಕೆ ಮಾವಂಗೆ ಧನ್ಯವಾದಂಗೊ.
ಎಲ್ಲೋರು ಹೇಳ್ತ ಹಾಂಗೆ, ಜೇನು ಕೃಷಿ ಬಗೆಲಿ ಒಂದು ಲೇಖನ ಬಪ್ಪಲೇ ಬೇಕು.
ಅಡ್ಕತ್ತಿಮಾರು ಮಾವ°,
ನಮ್ಮ ಮನೆಲಿಯೇ ಸಿಕ್ಕುತ್ತ ಅಮೃತ ಜೇನು ಮತ್ತೆ ಇಡೀ ಪ್ರಕ್ರಿಯೆಯ ಪಟ ಕ್ರಮಪ್ರಕಾರಲ್ಲಿಯೇ ತೆಗದು ಬೈಲಿಂಗೆ ಹಾಕಿದ್ದದು ಲಾಯ್ಕಾಯಿದು. ಕೊಶೀ ಆತು ಜೇನಿನ ಪಟ ನೋಡಿ. ಎಂಗಳಲ್ಲಿ ಕಳುದ ವರ್ಷದ ರೋಗಲ್ಲಿ ಹುಳುಗೊ ಸತ್ತಿದವು. 🙁 🙁 ಈಗ ಎರಡು ಪೆಟ್ಟಿಗೆಲಿ ಇದ್ದು.
ಬೈಲಿಲಿ ಬೇಕಾದೋರಿಂಗೆ ಜೇನು ಕೊಡುವಿರೋ ಮಾವ° ನಿಂಗಳಲ್ಲಿಗೆ ಬಂದರೆ? ಜೇನಿನ ಪೂರ್ಣ ಮಾಹಿತಿ ನಿಂಗೋ ಬರವದರ ಕಾಯ್ತಾ ಇದ್ದೆ. 🙂
ಬೈಲಿಲಿ ಆರಿಂಗಾರೂ ಜೇನು ಬೇಕಾರೆ ಕೊಡುಲಕ್ಕು..
@ರಘು ಮುಳಿಯ..ಜೇನು ವ್ಯವಸಾಯದ ಬಗ್ಗೆ ಮಾಹಿತಿ ಕೊಡೆಕ್ಕರೆ ಒಂದು ದೊಡ್ಡ ಲೇಖನ ವನ್ನೆ ಬರೆಯೆಕ್ಕಕ್ಕು..ಪುರುಸೊತ್ತು ಸಿಕ್ಕಿಪ್ಪಗ ಬರೆತ್ತೆ ಆಗದಾ ?ಆನು ಸಾದರಣ ೩೦ ವರ್ಶಂದ ಜೇನು ಕ್ರಿಶಿ ಮಾಡುತ್ತಾ ಇದ್ದೆ.ದೊಡ್ಡ ಮಟ್ಟಿಂಗೆ ಅಲ್ಲದ್ದರೂ ೫-೬ ಪೆಟ್ಟಿಗೆಲಿ ಒಕ್ಕಲುಗಳ ಸಾಂಕುತ್ತೆ….ಇದು ತೊಡ್ವೆ ಜೇನು ..ಇದರಿಂದ ಬೇರೆ ನಮೂನೆದು ಮೊಜಂಟಿ ಕೂಡಾ ಎನ್ನ ಹತ್ತರೆ ಇದ್ದು ಅದರದ್ದು ಕೂಡಾ ಪಟ ತೆಗದು (ಪಟ ತೆಗವಲೆ ಕಚ್ಹದ್ದೆ ಬಿಟ್ಟರೆ)ಹಾಕುಲೆ ಪ್ರಯತ್ನ ಮಾಡುತ್ತೆ..
ಮಾವಾ°,
ಅಪರೂಪದ ಚಿತ್ರ ಇದು. ಎದಿ೦ದಲೇ ಜೇನು ಕುಡುದ ದಿನ೦ಗಳ ನೆ೦ಪು ಮಾಡಿತ್ತು. ಕಳುದ ಕೆಲವು ವರುಷ೦ದ ಜೇನು ವ್ಯವಸಾಯ ರೋಗ೦ಗಳಿ೦ದಾಗಿ ಕಡಮ್ಮೆ ಆಯಿದು ಹೇಳಿ ಕೇಳಿತ್ತಿದ್ದೆ.
ಜೇನು ವ್ಯವಸಾಯದ ಬಗ್ಗೆ ರಜ ಮಾಹಿತಿ ಬೈಲಿಲಿ ಹ೦ಚುವಿರಾ?
ಆಹಾ… ಮಧು ಮಧು ಮಧು , ಸಂಪನ್ನಂ , ಸುಸಂಪನ್ನಂ ||
8 , 9 ನೇ ಪಟ ನೋಡುವಾಗ ತೆಳ್ಳವು ನೆಂಪು ಆವ್ತಿದಾ . ಬಹಳ ವಿಷಯಲ್ಲಿ ಅತ್ಯುಪಕಾರಿ ಆಗಿಪ್ಪ, ಉಪಕೃಷಿ ಉತ್ಪನ್ನವೂ , ಉಪವೃತ್ತಿಯೂ , ಉಪಆದಾಯವೂ ಆಗಿಪ್ಪ ಈ ಅದ್ಭುತ ಸೃಷ್ಟಿಲಿ ಜೇನು ಕೂಡ ಒಂದು. ಜೇನು ಹುಳು ಕಚ್ಚಿತ್ತುಕಂಡ್ರೆ , ರೋಗಾದಿ ಉಪದ್ರ ಸುರುವಾದರೆ ಆರಿಂಗೆ ಬೇಕು ಹೇಳಿ ಬೊಡ್ಚಪ್ಪ ಆಪ ಸಂಗತಿ ಅಡ್ಕತ್ತಿಮಾರು ಮಾವನ ಕೈಂಕರ್ಯಲ್ಲಿ ಇನ್ನೂ ಅಭಿವೃದ್ಧಿ ಆವ್ತಾ ಇರಲಿ. ಮಾವನ ಅನುಭವದ ನಾಕು ಮಾತು ಕೂಡ ಇಲ್ಲಿ ಬೇಕಿತ್ತು ಹೇಳಿ ಕೇಳಿಕೊಂಬದು – ‘ಚೆನ್ನೈವಾಣಿ’.
ಜೇನು ಹುಳುಗಳ ಅವಕ್ಕೆ ಬೇನೆ ಆಗದ್ದ ಹಾಂಗೆ ಅವಕ್ಕೂರಜ್ಜ ಒಳಿಶಿ ತೆಗದರೆ ಕಚ್ಹುತ್ತವಿಲ್ಲೆ..ಜೇನು ಕ್ರಿಶಿ ಬಗ್ಗೆ ಎಡಿಗಾರೆ ಒಂದು ಶುದ್ದಿ ಬರವ ಪ್ರಯತ್ನ ಮಾಡುತ್ತೆ ಚೆನ್ನೆಯ್ ಬಾವಾ..
{..ತೆಳ್ಳವು ನೆಂಪು ಆವ್ತಿದಾ}
ರಜ್ಜ ತುಪ್ಪವೂ-ಜೇನವು ಇದ್ದರೆ ಬಟ್ಳು ಕಾಲಿ.. 😉
ತುಪ್ಪವನ್ನೂ ಜೇನವನ್ನೂ ಒಟ್ಟಿಂಗೆ ಸೇರುಸಿ ತಿಂಬಲಾಗಡ ಭಾವ. ಆರೋಗ್ಯಕ್ಕೆ ಒಳ್ಳೆದಲ್ಲಡಾ!
ತುಪ್ಪವನ್ನೂ ಜೇನನ್ನೂ ಸೇರಿಸಿ ಗಾಯಕ್ಕೆ ಕಿಟ್ಟುತ್ತವು ಭಾವಯ್ಯ.
ಒಂದು ದೋಸೆಗೆ ತುಪ್ಪ,ಮತ್ತೊಂದು ದೋಸೆಗೆ ಜೇನು ಹಾಕಿ ತಿಂದರೆ ಆತು,ಚಿಂತೆ ಬೇಡ ಭಾವಯ್ಯ.
ಮಾವ ಲಾಯ್ಕ ಇದ್ದು ಫೊಟೊಂಗ…
ಬಾಯಿಲಿ ನೀರು ಬತ್ತಾ ಇದ್ದು, ಹಲಸಿನ ಕಾಯಿ ದೋಸೆ/ ಗೋದಿ ದೋಸೆಗೆ ಜೇನು ಕೂಡಿಸಿ ತಿನ್ನೆಕ್ಕು ಹಾ…ಮಧುರಾನಂದ…
ಹೇಳಿದಾಂಗೆ.. ಜೇನು ತೆಗವಗ ಎಷ್ಟು ಜೇನು ಹುಳು ಕುಟ್ಟಿತ್ತು?…ಮಾವ
ಧನ್ಯವಾದಂಗ…ರಜ ರಜ ಹುಳು ಕುಟ್ಟಿದರೂ ಜೇನಿನ ಚೀಪೆ ಎಡೆಲಿ ಗೊಂತಾಗ ಅಲ್ಲದಾ ಅಳಿಯೋ ?
ನಾಲಗೆಲಿ ನೀರಿಳಿತ್ತಾ ಇದ್ದು ಮಾವ 🙂 ಲಾಯಕ್ಕಿದ್ದು ಫೋಟೋಸ್
ನೋಡಿ ಖುಷಿ ಆತು. ಜೇನು ಕ್ರಿಷಿಯ ಬಗ್ಗೆ ಮಾಹಿತಿ ಕೊಡುವಿರಾ?
ಎ೦ಗಳಲ್ಲಿಯೂ ಜೇನು ಪೆಟ್ಟಿಗೆ ಇದ್ದು. ಜೇನು ಮಿಷನ್ ಇಲ್ಲೆ.
ಖಂಡಿತ ಮಾಹಿತಿ ಕೊಡುಲಕ್ಕು ಎಂತ ಎಲ್ಲಾ ಮಾಹಿತಿ ಬೇಕು ಹೇಳಿ ಎನಗೆ ಮೈಲ್ ಮಾಡಿದರೆ ಆತು..
ಇಂದು ಜೇನು ಕೃಷಿ ಕಾಮ್ಬಲೆ ಸಿಕ್ಕುದೆ ಅಪರೂಪ… ಇದಕ್ಕೆ ನೈಸರ್ಗಿಕವಾಗಿ ಸಿಕ್ಕುವ ಅಮೃತಂಗಳ ಕಡೆಗೆ ಜನರ ಒಲವು ಕಡಮ್ಮೆ ಆದ್ದದೂ ಒಂದು ಕಾರಣವೋ ಏನೋ… ಬೈಲಿಲ್ಲಿ ಜೇನು ಕೃಷಿ ಮಾಡುಲೆ ಆಸಕ್ತಿ ಇಪ್ಪವಕ್ಕೆ ಉಪಯೋಗ ಅಪ್ಪ ಹಾಂಗೆ ನಿಂಗಳ ಅನುಭವವ ಹಂಚಿಗೊಳ್ಳುತ್ತಿರ? ಫೋಟೋ ನೋಡಿ ಎನಗೆ ಬಾಯಿಲ್ಲಿ ನೀರು ಬತ್ತಾ ಇದ್ದು…