ಹಳೆಮನೆ ಅಣ್ಣ ಒಳ್ಳೆ ಪಟ ತೆಗೆತ್ತ° ಹೇಳಿ ಗೊಂತಿದ್ದು, ಯೇವದಾರು ಜೆಂಬ್ರದ್ದಾದರೆ - ಎಲ್ಲವುದೇ ಹೆಚ್ಚುಕಮ್ಮಿ ಒಂದೇ ನಮುನೆ ಇರ್ತು. ಬಟ್ಟಮಾವ, ಮದುಮ್ಮಾಯ, ಉಪ್ನಯನದ ಮಾಣಿ, ಅದು ಇದು.ಆದರೆ ನಮ್ಮದೇ ಪರಿಸರದ ಪಟಂಗ ಹೇಂಗಿಕ್ಕು?!ಪ್ರತಿ ಪಟಲ್ಲಿದೇ ಅದರದ್ದೇ ಆದ ಶಕ್ತಿ ಇತ್ತು. ಅಲ್ಲಿ ಇದ್ದದೆಲ್ಲ, ಕೊಕ್ಕರೆಯೋ, ಜೇಡನಬಲೆಯೋ, ತೊಳಶಿ ಹೂಗೋ - ಸಾಮಾನ್ಯ ನಿತ್ಯಜೀವನಲ್ಲಿ ಕಾಣ್ತದೃಶ್ಯಂಗಳೇ ಆದರೂ, ಪಟ ಹಳೆಮನೆ ಅಣ್ಣ ತೆಗದ್ದಾದರೆ ಅದರ್ಲಿ ಏನೋ ಒಂದು ಬೇರೇ ನಮುನೆ ಕಾಂಬದು.ನಿನ್ನೆ ಹೋಗಿ ಕೇಳಿದೆ, ಹಳೆಮನೆ ಅಣ್ಣ, ಇದರ ಒಪ್ಪಣ್ಣನ ಬೈಲಿಂಗೆ ತೋರುಸುವನಾ? ಹೇಳಿ...ಕುಶೀಲಿ ಅಕ್ಕು ಹೇಳಿದ, ಪೆಟ್ಟಿಂಗೆಂದ ಹುಡ್ಕಿ ಕೆಲವರ ತೆಗದು ಕೊಟ್ಟ!ಇದಾ, ಆ ಕೆಲವು ಪಟಂಗೊ!ನೋಡಿ,ಕುಶಿ ಆದರೆ ಒಪ್ಪ ಕೊಡಿ. ಆತೋ?
ಹಳೆಮನೆ ಅಣ್ಣ,
ದೀಪಾಲ೦ಕಾರ,ಸಾಲ೦ಕೃತ ದೇವರ ಪಟ ಲಾಯಿಕ ಆಯಿದು.
ಒಪ್ಪಇದ್ದು ಮಿನಿಯ
ಭಾರೀ ಲಾಯಕ ಆಯ್ದು ಪಟನ್ಗೋ. ದೇವರ ಅಟ್ಟೆ, ಹೂಗಿನ ಆಯತ ನೋಡಿದಷ್ಟು ಸಾಕಾವ್ತಿಲ್ಲೇ.
ನೋಡಿ ಸಂತೋಷ ಆತು.ಒಂದು ಪಟಲ್ಲಿ ಎಂಗೊಗೆ ರುದ್ರ ಕಲಿಸಿದ ಗುರುಗೊ ಮುಕುಂದ ಶರ್ಮರು ಇದ್ದವು.
ವೇದಸುತ್ತಿನ ಪಟಲ್ಲಿ ಬಲತ್ತಿಂದ ಎರಡನೆಯವು.ಧನ್ಯವಾದ.
ಶ್ರೀ ಅಕ್ಕ°, ಇದು ಹೊಸ ಮದುಮಕ್ಕೊಗೆ (ಎನ್ನನ್ನೂ ಸೇರುಸಿ) ಮದುವೆ ಅಪ್ಪದಕ್ಕಿಂತ ಮದಲಾಣ ಪಟಂಗೊ. ಎನಗೆ ಈ ವರ್ಷ ಶೀತ, ದೊಂಡೆಬೇನೆಂದಾಗ ಇರುಳಾಣ ಆಯನಕ್ಕೆ ಹೋಪಲಾಯಿದಿಲ್ಲೆ. ಅಪ್ಪು. ಒಂದು ಪಟಲ್ಲಿ ಕೆದೂರು ಡಾಕ್ಟ್ರು ಕಾಣ್ತವು. ಅವಕ್ಕೂ ಅಂಬಗ ಮದುವೆ ಆಗಿತ್ತಿದಿಲ್ಲೆ…! ಈ ಸರ್ತಿ ದೊಡ್ಡಭಾವ° ಕೆಲಾವು ಆಯನಂಗೊಕ್ಕೆ ಹೋಯಿದ°. ಅವನತ್ರೆ ಹೊಸಾ ಪಟ ಮಣ್ಣ ಇದ್ದೋ ಎಂತ್ಸೋ?
ಹಳೆಮನೆ ಅಣ್ಣೋ.., ಪಟಂಗ ತುಂಬಾ ಚೆಂದ ಬಯಿಂದು ಆತೋ.. ಒಪ್ಪಣ್ಣನ ಶುದ್ದಿಗೆ ಪೂರಕ ಪಟ ಕಂಡದು ಕೊಶೀ ಆತು. ಧನ್ಯವಾದಂಗೊ…
ಒಂದು ಪಟಲ್ಲಿ ಕಿದೂರು ದಾಗುಟ್ರ ಕಂಡ ಹಾಂಗೆ ಆವುತ್ತು ಅಲ್ಲದೋ?
ಬೈಲಿಂದ ಕೆಲವು ಜೆನಂಗ ಬೇರೆ ಬೇರೆ ಹೊತ್ತಿಲಿ ಹೋಯಿದವಡ್ಡ…
ಬೈಲಿನ ಹೊಸ ಮದುಮಕ್ಕೋ ಹೋಯಿದವಡ್ಡ ಜಾತ್ರೆಗೆ.. ಅವರ ಪಟ ಕಾಣ್ತಿಲ್ಲೆನ್ನೆ ;-)!!!!