ನೀರ್ಕಜೆ ಅಪ್ಪಚ್ಚಿಯ ಗುರ್ತ ಆತಾ?ಆಗಿರ ನಿಂಗೊಗೆ, ಎಂತಕೇಳಿರೆ – ಅವು ಈಗ ನೀರ್ಕಜೆಲಿ ಇಪ್ಪದಲ್ಲ, ಬೆಂಗುಳೂರಿಲಿ. ಊರಿಲಿ ಚೆಂಬರ್ಪು ಮಾಷ್ಟ್ರಣ್ಣನ ನೆರೆಕರೆ, ಬೆಂಗುಳೂರಿಲಿ ಪೆರ್ಲದಣ್ಣನ ನೆರೆಕರೆ!ರಾಮಜ್ಜನ ಕೋಲೇಜಿಲಿ ಕಲ್ತು, ಕೊಡೆಯಾಲದ ದೊಡ್ಡಕೋಲೇಜಿಲಿ ದೊಡ್ಡದರ ಕಲ್ತು, ಬೆಂಗುಳೂರಿಲಿ ಇಂಜಿನಿಯರು ಆಗಿ ಸೇರಿದ್ದವಡ ಮದಲಿಂಗೇ! ಅಂದೇ ಬೆಂಗುಳೂರಿಲಿ ಕೆಲಸ ಮಾಡ್ತರೂ, ಎಲ್ಲೋರ ಹಾಂಗೆ ಸೊಂತದ್ದು ಹೇಳಿಗೊಂಡು ಜಾಗೆ – ಮನೆ ಇನ್ನೂ ಮಾಡಿದ್ದವಿಲ್ಲೆ. ಮಾಡ್ತವೂ ಇಲ್ಲೆಡ – ಎಂತಕೇಳಿರೆ, ಅವಕ್ಕೆ ಪೇಟೆ ಜೀವನ ಇಷ್ಟವೇ ಇಲ್ಲೆ!ಹಳ್ಳಿಗೆ ಹೋಯೇಕು, ದೊಡ್ಡ ಕೃಷಿಭೂಮಿ ಮಾಡೇಕು, ತೋಟ ಮಾಡಿ ನೆಮ್ಮದಿಯ ಅಶನ ಉಣ್ಣೇಕು, ದನ, ಕಂಜಿ, ಶುದ್ಧ ಹಾಲು, ಶುದ್ಧ ನೀರು, ಶುದ್ಧ ಅಳತ್ತೊಂಡೆ, ಚೆಕ್ಕರ್ಪೆ – ತರಕಾರಿಗೊ ಎಲ್ಲ ತಿಂದುಗೊಂಡು ಮನೆ-ಮಕ್ಕಳ ಬೆಳೆಶೇಕು ಹೇಳಿಯೇ ಅವರ ಯೋಜನೆ! ಕೊಶೀ ಆತು ಒಪ್ಪಣ್ಣಂಗೆ ಅದರ ಕೇಳಿ! ಈಗ ಆಪೀಸಿಲಿ ಕೂದಂಡು ಕೆಲಸ ಮಾಡುವಗ ಹಳ್ಳಿ ಜೀವನವೇ ನೆಂಪಪ್ಪದು. ಆಪೀಸಿನ ಮೆಟ್ಳು ಹತ್ತುವಗ ಉಪ್ಪರಿಗೆ ಮೇಲಾಣ ಪತ್ತಾಯಕ್ಕೆ ಹತ್ತಿದ ಹಾಂಗೆ ಆವುತ್ತು! ಆಣು ಬಂದು ಕಾಪಿ ಕೊಡುವಗ ಅಕ್ಕಚ್ಚು ಕೊಟ್ಟಹಾಂಗೆ ಆವುತ್ತು. ಕಂಪ್ಯೂಟರು ಕುಟ್ಟುವಗ ಬತ್ತ ಮೆರುದ ಹಾಂಗೆ ಆವುತ್ತು. ಬೋಸು (Boss) ದಿನಿಗೆಳಿರೆ ಗೋಣ ಕೆಲದ ಹಾಂಗೆ ಆವುತ್ತು! ಒಟ್ಟಿಲಿ ಈ ಪೇಟೆ ಜೀವನ ಬೇಡ್ಳೇ-ಬೇಡ ಹೇಳಿ ಅನುಸುತ್ತು!!ಅವರ ಯೆಜಮಾಂತಿ – ನೀರ್ಕಜೆ ಚಿಕ್ಕಮ್ಮಂದೇ ಅದೇ ಮನಸ್ಸಿನವು ಅಡ. ಗಣಿತ ಕಲ್ತು ಕೋಲೇಜು ಮುಗುಶಿದ್ದವು, ಈ ಪೇಟೆ ಹರಟೆಲಿ ಗಣಿತದ ಸಮಸ್ಯೆ ಬಿಡುಸುಲೇ ಎಡೆತ್ತಿಲ್ಲೆ – ಹೇಳಿ ಚಿಕ್ಕಮ್ಮಂಗೆ ಬೇಜಾರು! ಎಲ್ಲೊರು ಪೇಟೆ ಪೇಟೆ ಹೇಳಿ ಹಾರುವಗ, ಹಳ್ಳಿಜೀವನವೇ ಒಳ್ಳೆದು ಹೇಳಿ ‘ಮರಳಿ ಮಣ್ಣಿಂಗೆ’ ಹೋವುತ್ತ ಈ ಮನಸ್ಸುಗಳ ತುಂಬ ಕೊಶಿ ಆವುತ್ತು. ಅಲ್ಲದೋ?! ಬರಳಿ – ಬೇಗ ನಮ್ಮ ನೆರೆಕರೆಗೆ ಬರಳಿ!ಅದೇನೇ ಇರಳಿ,ಅವರ ರಂಗಪ್ರವೇಶ ಆದ್ದದೇ ಒಪ್ಪಣ್ಣನ ‘ಇಂಗ್ರೋಜಿಯ’ ಶುದ್ದಿಗೆ ಒಪ್ಪಕೊಟ್ಟೊಂಡು, ಒಂದು ತಾತ್ವಿಕ ಪೋಯಿಂಟಿನ ಹಿಡ್ಕೊಂಡು! ಚಿಂತನೆ ಅವರ ನೆತ್ತರಿನ ಗುಣ. ಚಿಂತನಾ ಲೇಖನ ಬರವದು ಅವರ ಹವ್ಯಾಸಂಗಳಲ್ಲಿ ಒಂದು.ಮೊನ್ನೆ ಊರಿಂಗೆ ಬಂದಿಪ್ಪವು ಸಿಕ್ಕಿದವು, ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತಿರಾ ಕೇಳಿದೆ. ಈಗ ರಜಾ ಅಂಬೆರ್ಪು.. ನಿದಾನಕ್ಕೆ ಹೇಳ್ತೆ. ಹೊಸ ಕೆಮರ ತೆಗದ್ದೆ, ಪಟತೆಗವಲಿದ್ದು – ಹೇಳಿಕ್ಕಿ ಮೆಲ್ಲಂಗೆ ಬೇಗು ಹಿಡ್ಕೊಂಡವು. ‘ಇದಾ, ಈ ಪಟಂಗಳ ನೋಡುಸು ನೀನು, ಎಲ್ಲೊರಿಂಗುದೇ’ ಹೇಳಿದವು.ಪಟ ಕೊಟ್ಟು ಕಳುಸಿದ್ದವು. ಕೊಶಿ ಆದರೆಪಟಂಗೊಕ್ಕೆಒಪ್ಪ ಕೊಡಿ. ಶುದ್ದಿ ಬೇಗಲ್ಲೇ ಬರೆತ್ತವಡ, ಕಾದೊಂಡಿಪ್ಪ..ಆತೋ?
ಬರೆವಾಗ ಎಂತಾರು ಹೆಚ್ಚು ಕಮ್ಮಿ ಆದ್ದೋ ಹೇಂಗೆ ಕೇಳಿದ್ದು
ಅದೆಂತರ ಉಬುಂಟು ಹೇಳಿರೆ. ಎನಗೆ ಉಂಬುಳ ಮಾಂತ್ರ ಗೊಂತಿಪ್ಪದು.. ಈಗ ಮಳೆ ಜೋರನ್ನೆ.. ನೀರು ಗುರ್ತ ಹಾಕುವಾಗ ಅಕ್ಷರ ಅಡಿ ಮೊಗ್ಚಿದ್ದಾ ಹೇಂಗೆ ಅಪ್ಪ್ಪಚ್ಚಿ…? ಸ್ಪ್ರಿಂಕ್ಲರ್ ಈಗ ಬೇಡ.. ಮಳೆ ನೀರೆ ಸಾಕು ಗುರ್ತಕ್ಕೆ..
ಅಕ್ಷರ ಅಡಿ ಮೊಗಚ್ಚಿದ್ದು?? ಹೇಳ್ರೆ??
ಪ್ರತಿಕ್ರಿಯೆ ಬರದ ಎಲ್ಲರಿಂಗೂ ಧನ್ಯವಾದಂಗೋ!
ಯೇ ಅಪ್ಪಚ್ಚಿ.
ಮೊನ್ನೆಯೇ ಒಂದು ವಿಶಯ ಕೇಳೆಕ್ಕು ಗ್ರೇಶಿತ್ತದು, ಕೈಗೇ ಸಿಕ್ಕಿದ್ದಿಲ್ಲಿ..
ಇದೂ – ಬೆಂಗುಳೂರಿಲಿ ಮಂಗಂಗಳ ಮೋರೆಲಿ ಹೆಸರು ಬರದಿರ್ತವೋ? ಏ°?
ಅಜ್ಜಕಾನ ಬಾವ ಈ ಪಟಂಗಳ ತೋರುಸಿ ಎನ್ನ ನಂಬುಸಿದ್ದ°… 🙁
ಹೆ ಹೆ .. ಅದು ಮಂಗನ ಮೋರೆಲಿಪ್ಪ ಹೆಸರಲ್ಲ.. ಈ ಮಂಗ (ಆನು!) ಹಾಕಿದ ಹೆಸರು ಅದು.. ಹಾಂಗೆ ಹೆಸರು ಹಾಕದ್ದೆ ಇಂಟರ್ನೆಟ್ಟಿಲಿ ಪಟಂಗಳ ಹಾಕುಲಾಗ ಹೇಳಿ ಮಾಷ್ಟ್ರ ಮಾವ ಹೇಳಿಯೊಂಡಿತ್ತಿದವು 🙂 (ಯಾವ ಮಾಷ್ಟ್ರ ಹೇಳಿ ಕೇಳೆಡಿ ಇನ್ನು 🙂 )
ಮಂಗನ ಮೋರೆ, ಗೋಣನ ಬೆನ್ನು ಹೇಳಿ ನೋಡಿಂಡು ಕೂದರೆ ಕಳ್ಳಂಗೊಕ್ಕೆ ಕೆಲಸ ಸುಲಾಭ ಆವುತ್ತು. ಕೆಲಾವು ಕಳ್ಳಂಗೊ ಪಟ ಕಳ್ಳುತ್ತವು. ಎನಗೆ ಅದರ ಅನುಭವ ಆಯಿದು. ಕದ್ದದು ಬೇರೆ ಆರೂ ಅಲ್ಲ, ನಮ್ಮ ‘ಸಮಸ್ತ ಕರ್ನಾಟಕದ ಎಮ್ಮೆ’ ಪೇಪರಿನವ್ವೇ… ಅವರತ್ರೆ ಮತ್ತೆ ಆ ವಿಷಯಲ್ಲಿ ಮಾತಾಡ್ಲೆ ಹೋದರೆ ದೊಡ್ಡ ಜನ ಮಾಡ್ತವು. ಐದು ಪೈಸೆ ಕೊಡುದು ಬಿಡಿ, ಪಟ ತೆಗದವನ ಹೆಸರು ಹಾಕಲೂ ಸಂಕಟ ಅವಕ್ಕೆ… ಹಾಂಗಾಗಿ ನೀರ್ಕಜೆ ಅಪ್ಪಚ್ಚಿ ಮಾಡಿದ್ದು ಸರಿ ಇದ್ದು……. ಆನು ಈಗ ಅಂತರ್ಜಾಲಕ್ಕೆ ಯಾವ ಪಟ ಹಾಕುತ್ತರೂ ಮದಾಲು ನೀರು ಗುರುತ (ವಾಟರ್ ಮಾರ್ಕ್) ಹಾಕಿಯೇ ಹಾಕುದು… ಮಂಗನ ಮೋರೆ, ಗೋಣನ ಬೆನ್ನು, ನಾಯಿಯ ಮೈಲಿ ಬೇಕಾದರೂ ನಾವು ಹೆಸರು ಹಾಕೆಕ್ಕೇ…
ಅಪ್ಪು! ನೀರು ಗುರ್ತ ಹಾಕದ್ದೆ ಗೊಂತಿಲ್ಲೆ. ಹಾಕುಲೆ ಕಷ್ಟ. ಸುಮಾರು ಪಟ ತೆಗದರೆ ಅದಕ್ಕೆ ನೀರು ಗುರ್ತ ಹಾಕ್ಯೊಂಡು ಕೂಪ ಕೆಲಸ ಕಷ್ಟವೇ. ಅದಕ್ಕೇ ಆನು ಎನ್ನ ಉಬುಂಟು ಲಿ ಒಂದು ಸ್ಕ್ರಿಪ್ಟ್ ಬರದು ಹಾಕಿದ್ದೆ. ಈಗ ಆ ತಲೆಬೆಶಿ ಇಲ್ಲೆ. ಎಷ್ಟು ಪಟ ತೆಗದರೂ ಎಲ್ಲ ಒಂದು ಫೋಲ್ಡರಿಲಿ ಹಾಕಿ ಸ್ಕ್ರಿಪ್ಟ್ ರನ್ ಮಾಡಿರೆ ಅದೇ ಪಟಂಗಳ ರೆಸೈಜ಼್ ಮಾಡಿ, ನೀರು ಗುರ್ತ ಹಾಕಿ, ಸಾಲದ್ದಕ್ಕೆ ಬಾರ್ಡರ್ ಹಾಕಿ ಕೊಡ್ತು! ಆದರೆ ಸಮಸ್ಯೆ ಎಂತ ಹೇಳ್ರೆ ಅದು ಎಲ್ಲಾ ಪಟಂಗಳಲ್ಲಿ ಒಂದೇ ಕಡೆ ನೀರು ಗುರ್ತ ಹಾಕುತ್ತ. ಹಾಂಗಾಗಿ ಮಂಗನ ಮೋರೆ ಕುಂಡೆ ಎಲ್ಲೆಂದರಲ್ಲಿ ನೀರು ಗುರ್ತವೇ! 🙂
nIrkaje puLLiyO. lalubhoginge obbanE hoddO.
ನಮ್ಮ ಪೂರ್ವಜರ ಬಗ್ಗೆ ಅರಿಂಗುದೆ ಕಾಳಜಿಯೇ ಇಲ್ಲೆನ್ನಪ್ಪ. ಎನ್ನ ಜೋಸ್ತಿಯ ಪಟ ಬರಿ ಲಯಿಕ ಬಯಿಂದು.
ಚಿಟ್ಟೆಗಳ ಫೋಟೋ ಅಂತೂ ಸೂ….ಪರ್
ಬೆಂಗ್ಳೂರಿಲ್ಲಿ ಇಪ್ಪ ನಮ್ಮ ಒಪ್ಪಣ್ಣಂದ್ರು ಎಲ್ಲ ಲಾಲುಬಾಗಿನ ಪಟಂಗ ತೆಗವಲಕ್ಕು. ಅಲ್ಲಿ ಪಟ ತೆಗದಷ್ಟು ಮುಗಿಯ. ಬೇರೆ ಬೇರೆ ವಿಷಯಂಗೊ ಸಿಕ್ಕುತ್ತು ಪಟ ತೆಗವಲೆ.
ನೀರ್ಕಜೆ ಅಪ್ಪಚ್ಚಿ.., ಕೆಮರ ಹೆರ ಬಂದದು ಒಳ್ಳೇದಾತು… ಫೋಟೋ ಎಲ್ಲವೂ ಲಾಯಕ ಆಯಿದು.. ಒಳ್ಳೊಳ್ಳೆ ವಿಷಯಂಗ.. ನಿಂಗೊಗೆ ರಜ್ಜ ಗಿಡ ಮರಂಗಳ ಗುರ್ತ ಇದ್ದ ಹಾಂಗಿದ್ದು.. ಪಟ ತೆಗದ್ದದರ ಒಟ್ಟಿನ್ಗೆ ವಿವರಣೆ ರಜ್ಜ ಇದ್ದರೆ ಬೈಲಿನವಕ್ಕೆ ಗೊಂತಕ್ಕಿದಾ.. ಮತ್ತೆ ದಾರಿಲಿ ಹೋಪಗ ಎಂಗೊಗೂ ಗುರ್ತ ಸಿಕ್ಕಿ ಮಾತಾಡ್ಳಕ್ಕಲ್ಲದಾ.. ಮರ ಗಿಡದ ಹತ್ತರೆ…. ನಿಂಗಳ ಗುರ್ತ ಹೇಳಿ !!! ಹಲಸಿನಕಾಯಿಯ ಪಟ ಅಂತೂ ನಾವು ಅಮ್ಮನ ಹೊಟ್ಟೆಲಿ ಇಪ್ಪಗ ಇದ್ದ ಹಾಂಗೆ ಕಾಣ್ತು ಅಲ್ಲದಾ?
ನೀರ್ಕಜೆ ಅಪ್ಪಚ್ಚಿ
ಪಟಂಗ ಲಾಯ್ಕಿದ್ದು.. ಚಿಕ್ಕಮ್ಮನ ಬಿಟ್ಟು ಹೋವುತ್ತಿರಡ.. ಅಸಕ್ಕ ಮಾಡಿಯೊಂಡು ಇದ್ದು…
ಎಲ್ಲರಿಂಗೂ ಧನ್ಯವಾದ!
ಅಪ್ಪಚ್ಚಿ. 🙂 ಕೆಂಪುತೋಟಲ್ಲಿ ತೆಗದ ಪಟಂಗ ಚೆಂದ ಬಯಿಂದು,, 🙂 ಒಂದಕ್ಕಿಂತ ಒಂದು ಸೂಪರು !! 🙂
ಕುಂಡೆಚ್ಚ ಜೇನು ಕುಡಿವದರ ನೋಡಿದ್ದು ಆನು ಸುರು…. , ಮುರಳಿ ಅಣ್ಣ ಹೇಳಿದ ಹಾಂಗೆ ಚಿಟ್ಟೆದೇ ಸೂಪರ್!
ಅದಾ ಶುರು ಆತು.. ಲಾಲುಬೊಗಿಲಿ ನಿಂಗಳ ಪಟ ತೆಗದ್ದವಿಲ್ಲೆಯೋ ಕಾಣ್ತು…
ಅಜಕ್ಕಾನ ಭಾವ, ಒಂಟಿ ಒಂಟಿಯಾಗಿ ಹೋದ್ದು ನಮ್ಮ ನೀರ್ಕಜೆ ಅಪ್ಪಚ್ಚಿ…. ಇನ್ನೊಂದರಿ ಜಂಟಿಯಾಗಿ ಹೋಪದಡ್ಡ!
ಅಪ್ಪೋ.. ನವಗರಡಿಯಾ…
ಹೆ ಹೆಹೆ……
ಫೋಟೊಂಗ ಭಾರಿ ಲಾಯ್ಕ ಬೈಂದು. ಚಿಟ್ಟೆದು ಅಂತು ಸೂಪರ್ …!!
patango bhaari laaika baindu 🙂