ಯೇನಂಕೂಡ್ಳಣ್ಣನ ಸಣ್ಣಕೆ ಗುರ್ತ ಮಾಡೆಡದೋ?!ಗುರ್ತ ಮಾಡ್ಳೆಂತರ ಇದ್ದು, ಎಲ್ಲೋರಿಂಗೂ ಗೊಂತಿಪ್ಪೋರೇ!ಹೆಗಲಿಲಿ ಒಂದು ಕೆಮರವ ಬ್ರಹ್ಮವಸ್ತ್ರದ ಹಾಂಗೆ ಹಾಕಿಯೊಂಡು, ತಟುಪುಟು ಅತ್ತಿತ್ತೆ ಓಡಿಗೊಂಡು ಇದ್ದರೆ ‘ಈ ಜೆನ ಎಂತಾ ಚುರುಕ್ಕು!’ ಹೇಳಿ ಮಾತಾಡಿಗೊಂಬ ಅತ್ತೆಕ್ಕಳೇ ಜಾಸ್ತಿ!!
ಕೆಮರ ಕೈಗೆ ಎತ್ತಿರೆ ಅವು ಚುರುಕ್ಕೇ ಇದಾ!ಚೆಂದ ಪಟ ತೆಗೆತ್ತವು! ರಾಮಜ್ಜನ ಕೋಲೇಜಿಲಿ ಕಲಿವಗಳೇ ಅವಕ್ಕೆ ಕೆಮರದ ಮರುಳು ಸುರು ಆದ್ದಡ, ಹಳೆಮನೆ ಅಣ್ಣನ ಹಾಂಗೆ!ಹಳೆಮನೆ ಅಣ್ಣ ನೈಸರ್ಗಿಕ ಪರಿಸರದ್ದು ಹೆಚ್ಚು ತೆಗದರೆ, ಯೇನಂಕೂಡ್ಳಣ್ಣ ಮಾನವ ಪರಿಸರದ್ದು ಹೆಚ್ಚು ತೆಗವದು..!ಇವರದ್ದೆಲ್ಲ ಕಣ್ಣಿಂಗೆ ಹಿಡಿತ್ತ ಹಾಂಗಿರ್ತ ಪಟಂಗ! ಆದರೆ, ಅಂದಿಂದಲೇ ಕೆಮರವ ಕಣ್ಣಿಂಗೆ ಹಿಡುದು ಹಿಡುದು – ಕಣ್ಣು ಬಚ್ಚಿದ್ದೋ ಏನೋ – ಈಗ ಕೊಡೆಯಾಲಲ್ಲಿ ಕಣ್ಣಿನ ಠೆಷ್ಟು ಮಾಡ್ತಲ್ಲಿ ಒಂದು ಷ್ಟೂಲು ಮಡಿಕ್ಕೊಂಡು ಕೂಯಿದವು!
ಓ ಮೊನ್ನೆ ಕೊಡೆಯಾಲಕ್ಕೆ ಹೋಗಿಪ್ಪಗ ಚಾಯ ಕುಡಿವಗ ಸಿಕ್ಕಿ ಬಿಲ್ಲು ಕೊಟ್ಟವು, ಸಂತೋಷ ಆತೊಂದರಿ!! ;-)ಪಟ ಕೊಟ್ಟು ಕಳುಸಿ, ಬೈಲಿಂಗೆ ತೋರುಸುವನಾ? – ಹೇಳಿದೆ.ಸಂತೋಷಲ್ಲಿ ಒಪ್ಪಿದವು.ಇನ್ನೊಂದು ವಿಶ್ಯ ಇದ್ದು, ಅವು ಬೈಲಿಂಗೆ ಬಂದು ಮಾತಾಡ್ಳೆ ಸುರು ಮಾಡಿರೆ ಶೇಡಿಗುಮ್ಮೆ ಬಾವನ ಬಗ್ಗೆ ಬಂದೇ ಬಕ್ಕು. “ಇಂದಿರತ್ತೆ ಎಂತ ಮಾಡ್ತವು ಒಪ್ಪಣ್ಣಾ…” ಹೇಳಿ! ‘ಎನಗೆಂತ ಗೊಂತು, ಕೆಮರ ಇಪ್ಪದು ನಿನ್ನತ್ರೆ’ ಹೇಳುದಾನು ಯೇವಗಳುದೇ.!!ನಮ್ಮ ಬೈಲಿಂಗೆ ಬಂದು ಅವು ತೆಗದ ಪಟಂಗಳ ನೋಡುಸುತ್ತವಡ.ಚೆಂದಲ್ಲಿ ನೋಡುವ, ಕೊಶಿ ಆದರೆ ಪಟಂಗೊಕ್ಕೆ ಒಪ್ಪ ಕೊಡುವ.. ಆತೋ?
[ಸೂ: ನಿಂಗೊ ನೋಡ್ತ ಒಪ್ಪಣ್ಣನ ಪಟ ತೆಗದ್ದು ಇದೇ ಯೇನಂಕೂಡ್ಳಣ್ಣ ಇದಾ..! ಪಟ ಚೆಂದ ಬಂದರೆ ಅವರತ್ರೆ ಹೋಗಿ ನಿಂಗಳದ್ದೂ ತೆಗೆಶಿ..!!]
ಚಂದದ ಪಟಂಗೊ
ವಾವ್ ಚೆಂದದ ಪಟಂಗೊ.
ಪಟ೦ಗ ಲಾಯ್ಕ ಆಯಿದು
Khoshili Oppa kotta ellaringu Dhanyavadango… Ashirvada, Protsaha sada irali..
ಒಂದೊಪ್ಪ..
ಸುಂದರ ಪ್ರಕೃತಿಯ ಅಂದವಾಗಿ ಸೆರೆ ಹಿಡುದು ಎಂಗೊಗೆಲ್ಲ ಆನಂದ ಉಣುಸಿದ ಯೇನಂಕೂಡ್ಳು ಅಣ್ಣ೦ಗೆ ಹರೇ ರಾಮ…
ಒ೦ದರಿ೦ದ ಒ೦ದು ಚೆ೦ದ ಆಯಿದು ಯೇನ೦ಕೂಡ್ಳಣ್ಣಾ.ಯಕ್ಷಗಾನದ್ದು ವಿಭಿನ್ನ ಪ್ರಯತ್ನ,ಶಹಬ್ಬಾಸ್.
ತು೦ಬಾ ಚ೦ದ ಬೈ೦ದು…
ಕಿಶೋರನ ಫೋಟೊ ಶೋ ಕಂಡು ಕೊಶಿ ಆತು. 6, 1, 13, 14, 20 ರೈಸಿದ್ದು. ಎಲ್ಲವುದೆ ಲಾಯಕು ಬಯಿಂದು. ಅಭಿನಂದನೆಗೊ.
ಅಣ್ಣಾ….ನಿ೦ಗಳ ಕ್ಯಾಮರ ಕಣ್ಣು ಬಾರೀ ಸೂಕ್ಶ್ಮ ಇದ್ದು……..
Thanks Puttakka
ಏನಂಕೋಡ್ಳಣ್ಣ., ಪಟಂಗೊ ಲಾಯಕ ಲಾಯಕ ಬೈಂದು. ಆದರೂ ಎಂತ ಗೊಂತಿದ್ದೋ … ನಿಂಗೊಗೆ ಒಂದು ಎರಡು ಮೂರು ನಾಕು…. ಸರೀ ಬತ್ತಿಲ್ಲೆ.!!
ಪಟಕ್ಕೆ ಅಭಿನಂದನೆ ಬೈಲಿಲಿ ಅಂಬಗಂಬಗ ಕಂಡೊಂಡಿರೆಕು ಬೋಚಬಾವನ ಹಾಂಗಪ್ಪಲಾಗ ಹೇಳಿತ್ತು – ‘ಚೆನ್ನೈವಾಣಿ’
ಸುಂದರ ಪಟಂಗೊ