ಚೆನ್ನಬೆಟ್ಟಣ್ಣನ ಗುರ್ತ ಇದ್ದನ್ನೇ? ಆಟದ ಶುದ್ದಿ ಮಾತಾಡುವಗ ಅವರ ಬಗ್ಗೆ ಸುಮಾರು ಸರ್ತಿ ಮಾತಾಡಿದ್ದು.
ನೆಗೆನೆಗೆ ಮೋರೆಲಿ ಯೇವತ್ತೂ ಉಲ್ಲಾಸಲ್ಲಿ ಇದ್ದೊಂಡಿಕ್ಕು! ಅವರ ಮೂಲ ಚೆನ್ನಬೆಟ್ಟು ಆದರೂ, ಈಗ ಬೆಂಗುಳೂರಿಲಿ ಇಪ್ಪದು.ಎಲ್ಲೇ ಇದ್ದರೂ, ಅವರ ಊರಿನ ಸೆಳೆತ ಇಳುದ್ದಿಲ್ಲೆ. ನವರಾತ್ರಿ ಆಚರಣೆಗೆ ಚೆನ್ನಬೆಟ್ಟು ಮಟಕ್ಕೆ ಒರಿಶಂಪ್ರತಿ ಬಂದೇ ಬಕ್ಕು!
ಹತ್ತರೆ ಎಲ್ಲೇ ಸಂಗೀತ ಕಛೇರಿ, ಡೇನ್ಸು, ಬರತನಾಟ್ಯ ಆವುತ್ತರೂ, ಸೌಕರ್ಯ ಇದ್ದರೆ ಹೋಗಿಯೇ ಹೋಕು! ಯಕ್ಷಗಾನ ಅಂತೂ ಬಿಡ್ತ ಪ್ರಶ್ನೆಯೇ ಇಲ್ಲೆ!ಬೆಂಗುಳೂರಿಲಿಪ್ಪ ಕೆಲವು ಜವ್ವನಿಗರ ಯಕ್ಷಗಾನದ ಗುಂಪಿನ ಸಕ್ರಿಯ ಸದಸ್ಯ° ಅಡ ಇವು..ಅವರ ಬ್ಲಡ್ಡು ಗ್ರೂಪು ಯಕ್ಷಗಾನ ಪ್ಲಸ್ ಅಡ, – ಲಾನಣ್ಣ ನೆಗೆಮಾಡ್ತ° ಕೆಲವು ಸರ್ತಿ!
ಅವರತ್ರೊಂದು ಸಣ್ಣ ಸೂಟುಕೇಸಿನಷ್ಟಕೆ ಇಪ್ಪ ಕೆಮರ ಇದ್ದು. ಎಲ್ಲಿಗೆ ಹೋವುತ್ತರೂ ತೆಕ್ಕೊಂಡು ಬಕ್ಕು.ಚೆಂದಚೆಂದದ ಪಟ ತೆಗಗು. ತುಂಬಾ ಚೆಂದದ ಪಟಂಗೊ! ನಮುನೆನಮುನೆದು. ಪರಿಸರವೋ – ಡೇನ್ಸುಕಾರ್ಯಕ್ರಮವೋ – ಹೂಗಿಂದೋ, ಮಾವಿನಮೆಡಿಯೋ – ಹೀಂಗೆಂತಾರು..!ಅವು ತೆಗದ ಒಂದು ಚಂದ್ರನ ಪಟವ ಗುರುಗೊ ಅವರ ವೆಬುಸೈಟಿಲಿ (ಹರೇರಾಮ.ಇನ್) ಲಿ ಹಾಕಿದ್ದವಡ, ಅವಕ್ಕೆ ಕೊಶಿ ಆಗಿ!!
ಓ ಮೊನ್ನೆ ಉಪ್ರಂಗಡಿಯ ಆದಿತ್ಯಹೋಟ್ಳಿನ ಚಳಿಕೋಣೆಯ ಒಳದಿಕೆ ಆಚಕರೆಮಾಣಿಯ ಒಟ್ಟಿಂಗೆ ಕೂದುಗೊಂಡು ಬೆಶಿಚಾಯ ಕುಡ್ಕೊಂಡಿತ್ತಿದ್ದವು.ಒಪ್ಪಣ್ಣನ ಕೈಲಿ ಚೆಂದಕೆ ಮಾತಾಡಿದವು. ಅವು ಪಟತೆಗೆತ್ತ ಶುದ್ದಿ ಎಲ್ಲ ಬಂತು - ಬೈಲಿಂಗೆ ತೋರುಸುವನಾ – ಕೇಳಿದ್ದಕ್ಕೆ ಸಂತೋಷಲ್ಲಿ ಕೊಟ್ಟು ಕಳುಸಿದವು.ಒಂದು ಸರ್ತಿಂಗೆ ಕೊಟ್ಟದರ್ಲಿ ಒಪ್ಪಣ್ಣಂಗೆ ನಾಕುಸರ್ತಿ ಹಾಕುವಷ್ಟಕೆ ಆತು!!
ಯಕ್ಷಗಾನದ ಕರ್ಣನ ನೆಂಪಾತೋ ಏನೋ! ಆಗಲಿ, ಎಲ್ಲವುದೇ ಚೆಂದಚೆಂದದ ಪಟಂಗೊ. ದೊಡ್ಡದೊಡ್ಡದು.
ದೊಡ್ಡಕೆಮರಲ್ಲಿ ತೆಗದ್ದು ದೊಡ್ಡದೊಡ್ಡದೇ ಬರೆಕ್ಕಲ್ಲದೋ! ನೋಡಿ, ಹೇಂಗಿದ್ದು ಹೇಳಿ. ಆತೋ? (ಅವರತ್ರೆ ಇನ್ನುದೇ ತುಂಬ ಪಟಂಗೊ ಇದ್ದಡ!, ಎಲ್ಲ ನಿದಾನಕ್ಕೆ ಕಳುಸುಗು!)ಪಟ ನೋಡಿ, ಕೊಶಿ ಆದರೆ ಒಪ್ಪಕೊಡಿ!
ಯೆನಗೂ ಪಟ ತೆಗವ ಹುಚ್ಹಿದ್ದು, ಪಟಂಗ ಯೆಲ್ಲ ಚೆಂದ ಇದ್ದು
ಅಭಿನಂದನೆಗ ಚೆನ್ನಬೆಟ್ಟಅ್ಣ್ಣ… ನಿಂಗೊಗೆ ಯಶಸ್ಸು ಸಿಕ್ಕಲಿ… ಇನ್ನು ಮುಂದೆಯೂ ಹೀಂಗೆ ಹೆಚ್ಚು ಹೆಚ್ಚು ಅವಕಾಶಂಗೊ ಸಿಕ್ಕಲಿ…. 🙂
ಪಟ ೭ – “ರುದ್ರ ಭೀಮ” ಎನ್ನ ಆಪೀಸಿಲಿ ಛಾಯಾಚಿತ್ರ ಪ್ರದರ್ಶನಕ್ಕೆ ಆಯ್ಕೆ ಆಯ್ದು ಹೇಳಿ ತಿಳಿಶುಲೆ ಖುಷಿ ಆವ್ತಾ ಇದ್ದು.
ಚೆನ್ನಬೆಟ್ಟಣ್ಣ ಅಬಿನಂದನೆಗೊ..
ಭಾರೀ ಲಾಯ್ಕಾತು.. ಇಂಥಾ ಅವಕಾಶಂಗ ತುಂಬಾ ಸಿಕ್ಕಲಿ… ಚೆನ್ನಬೆಟ್ಟಣ್ಣ…
ಪಟ ೧ – ಕೃಷ್ಣ ಸಂಧಾನ ದ ಕೃಷ್ಣ
ಪಟ ೨ – ಶ್ರೀ ಕೃಷ್ಣ
ಪಟ ೩ – ಕೃಷ್ಣ
ಪಟ ೪ – ದುರ್ಯೋದನ
ಪಟ ೫ – ವಿಶ್ವ ರೂಪ ದರ್ಶನ
ಪಟ ೬ – ಭೀಮ
ಪಟ ೭ – ರುದ್ರ ಭೀಮ
ಧನ್ಯವಾದಂಗ ಚೆನ್ನಬೆಟ್ಟಣ್ಣ… ಹೆಸರು ಕೊಟ್ಟಪ್ಪಗ ವೇಷನ್ಗಳ ಗೊಂತಾತದಾ..
ಕಥಕ್ಕಳಿ ವೇಶಂಗಳ ಪಟಂಗೊ ಲಾಯ್ಕ ಆಯಿದು. ಈ ವೇಶಂಗೊ ಕಣ್ಣು ಕೆಂಪು ಮಾಡುದು ಹೇಂಗೆ ಗೊಂತಿದ್ದಾ? ಒಂದು ಸಣ್ಣ ಹುಲ್ಲಕಾಯಿಯ ಹಾಂಗಿಪ್ಪದರ ಕಣ್ಣಿಂಗೆ ಹಾಕಿ ಗಸಗಸ ತಿಕ್ಕುದಡ. ಅಷ್ಟಪ್ಪಗ ಕಣ್ಣು ಕೆಂಪು ಬಣ್ಣ ಆವುತ್ತಡ. ಯಕ್ಷಗಾನದವರ ಕಣ್ಣು ಕೆಂಪು ಅಪ್ಪಲೆ ಬೇರೆ ಕಾರಣ ಇದ್ದು… 😛
ಕಥಕ್ಕಳಿ ಪಟಂಗ ಚೆಂದ ಬಯಿಂದು ಚೆನ್ನ ಬೆಟ್ಟ ಣ್ಣ… ವೇಷಂಗಳ ಹೆಸರುದೆ ಕೊಟ್ಟಿದ್ದರೆ ಒಳ್ಳೇದಿತ್ತು ಯಾವ ವೇಷ ಹೇಂಗೆ ಹೇಳಿ ಎಂಗೊಗೂ ಗೊಂತಾವುತ್ತಿತ್ತು.. ಇನ್ನುದೆ ಪಟಂಗ ಬರಲಿ…
ಒಳ್ಳೆದಿದ್ದು ಚೆ.ಬೆ. ಬಾವ… ಇನ್ನು ಬರಲಿ…