- ಹವ್ಯಕ ಪುಸ್ತಕಂಗಳ ಲೋಕಾರ್ಪಣೆಯ ವಿಡಿಯೋ - August 28, 2012
- ಬೆದುರು ಅಕ್ಕಿಯ ಪಟಂಗೊ - June 15, 2012
- ತಂಜಾವೂರಿನ ಬೃಹದೀಶ್ವರ ದೇವಸ್ಥಾನ – ಕೆಮರಾ ಕಣ್ಣಿಲ್ಲಿ… - February 20, 2012
ಕಳುದ ಜನವರಿ ತಿಂಗಳಿಲ್ಲಿ ತಮಿಳುನಾಡಿನ ಕೆಲವು ಪ್ರವಾಸೀ ಸ್ಥಳಂಗೊಕ್ಕೆ ಹೋಗಿ ಬಂದೆಯೊ°. ಎಲ್ಲ ಒಟ್ಟಿಂಗೆ ಸೇರುಸಿ ಬರದು ಕಲಸು ಮೇಲೋಗರ ಮಾಡುವದು ಬೇಡ ಹೇಳಿ ಪ್ರತ್ಯೇಕವಾಗಿ ಒಂದೊಂದು ಸ್ಥಳಂಗಳ ಬಗ್ಗೆ ಬರೆತ್ತೆ. ಯಾವುದೇ ಪ್ರವಾಸೀ ಸಂಸ್ಥೆಯ ’ಅರೇಂಜ್ಡ್ ಟೂರ್’ ಮೂಲಕ ಹೋಪಲೆ ದಿನಂಗೊ ಹೊಂದಿಕೆಯಾಗದ್ದ ಕಾರಣ ಎಂಗೊ ರೈಲು, ಬಸ್ಸುಗಳ ನಿತ್ಯಸೇವೆಯ ಉಪಯೋಗಿಸಿಕೊಂಡೆಯೊ°. ಇಂದು ಮಹಾಶಿವರಾತ್ರಿಯ ಶುಭಸಂದರ್ಭಲ್ಲಿ ಶಿವನ ಪ್ರಸಿದ್ಧ ದೇವಸ್ಥಾನ ಒಂದರ ಪರಿಚಯ ಮಾಡ್ಸುತ್ತೆ.
ತಂಜಾವೂರು ಕಲೆ, ಚಿತ್ರಕಲೆ, ಸಂಗೀತಕ್ಕೆ ಮೊದಲಿಂದಲೂ ಹೆಸರುವಾಸಿ. ನಮ್ಮ ಅಜ್ಜಂದ್ರ ಕಾಲಲ್ಲಿ ಸಂಗೀತ ಕಲಿವಲೆ ತಂಜಾವೂರಿಂಗೆ ಹೋಪ ಕ್ರಮ ಇತ್ತು. ಇದು ತಮಿಳುನಾಡಿನ ಕೇಂದ್ರಭಾಗಲ್ಲಿಪ್ಪ ಜಿಲ್ಲೆ, ಭತ್ತದ ಕಣಜ ಹೇಳಿ ಪ್ರಸಿದ್ಧ. ಅದಕ್ಕೆ ತಕ್ಕ ಹಾಂಗೆ ರೈಲಿಲ್ಲಿ ಹೋಪಗ ಉದ್ದಕ್ಕೂ ಕಾಂಬಲೆ ಸಿಕ್ಕಿದ್ದು ಭತ್ತ ಬೆಳದು ನಿಂದ ವಿಶಾಲವಾದ ಗೆದ್ದೆಗೊ. (ಈ ಕಾಲಲ್ಲಿ ಕೇರಳಲ್ಲಿ ರೈಲಿಲ್ಲಿ ಹೋಪಗ ಕಾಣ್ತದು ಹಡಿಲು ಬಿದ್ದ ಗೆದ್ದೆಗೊ. ಜೆನಂಗೊ ಎಲ್ಲ ಕೆಂಪುಕೊಡಿ ಹಿಡ್ಕೊಂಡು ಮೆರವಣಿಗೆ ಹೋಪಲಾತು, ಕೆಲಸಕ್ಕೆ ಬರೆಕಾದ ಹೆಣ್ಣುಗೊ ’ಪಂಚಾಯಿತಿಕೆ ಕೆಲಸಕ್ಕೆ’ ಹೋಪಲಾತು! ಮತ್ತೆಲ್ಲಿ ಗೆದ್ದೆ ಕೆಲಸ?)
ತಂಜಾವೂರು ಬಸ್ಟೇಂಡಿಂದ ಸಾಧಾರಣ 1 ಕಿ.ಮೀ. ದೂರಲ್ಲಿ ಜಗತ್ಪ್ರಸಿದ್ಧ ಶ್ರೀ ಬೃಹದೀಶ್ವರ ದೇವಸ್ಥಾನ ಇದ್ದು. ಸುಮಾರು 1000 ವರ್ಷ ಹಿಂದೆ ರಾಜರಾಜ ಚೋಳ° ಕಟ್ಟುಸಿದ ಈ ದೇವಸ್ಥಾನದ ಶಿಖರ ಅತಿ ದೂರದವರೆಗೂ ಕಾಂಬಲೆ ಸಿಕ್ಕುತ್ತು. 2010 ನೇ ಇಸವಿಲಿ ಈ ದೇವಸ್ಥಾನಕ್ಕೆ 1000 ಒರಿಷ ಆದ ಲೆಕ್ಕಲ್ಲಿ ತಮಿಳುನಾಡು ಸರಕಾರ ಅದ್ದೂರಿಯ ಆಚರಣೆ ಮಾಡಿದ್ದಡ. ಕ್ರಿ.ಶ. 1002ರಲ್ಲಿ ರಾಜರಾಜ ಶ್ರೀಲಂಕಾದೇಶಕ್ಕೆ ಹೋಗಿಪ್ಪಗ ಅವಂಗೆ ಕನಸಿಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಪ್ರೇರಣೆ ಆವುತ್ತಡ. ದೈವಪ್ರೇರಣೆ ಆದ ಕಾರಣ ಮಾಡಿಯೇ ಆಯೆಕ್ಕು ಹೇಳಿ ಅದೇ ಭಾಗಲ್ಲಿ ಧಾರಾಳವಾಗಿ ಸಿಕ್ಕುತ್ತ ಅರಸಿನ ಬಣ್ಣದ ಗ್ರಾನೈಟ್ ಶಿಲೆ ಉಪಯೋಗಿಸಿ ಈ ಬೃಹತ್ ದೇವಾಲಯವ ಕಟ್ಟಲೆ ಸುರುಮಾಡ್ತವು. ಈಗ ಈ ಮಂದಿರವ ಯುನೆಸ್ಕೋ ಹೆರಿಟೇಜ್ ಪಟ್ಟಿಲಿ ಸೇರಿಸಿದ್ದವು.
ಈ ದೇವಸ್ಥಾನದ ಗೋಪುರ 216 ಫೀಟ್ ಎತ್ತರ ಇದ್ದು. ಎತ್ತರದ ಹೊಯಿಗೆ ರಾಶಿ ಹಾಕಿ ಆನೆಗಳ ಮೂಲಕ ಕಲ್ಲುಗಳ ಎಳೆಶಿ ಈ ಎತ್ತರದ ಗೋಪುರವ ಕಟ್ಟುಸಿದವು ಹೇಳ್ತವು. ಅದು ಸರಿಯಾಗಿ ಗೊಂತಿಲ್ಲೆ. ಆ ಕಾಲಕ್ಕೆ ಬೇರೆ ಯಾವುದೇ ಇಂಜಿನಿಯರಿಂಗ್ ಕೌಶಲ ಇದ್ದಿರ ಹೇಳ್ತದು ಇದಕ್ಕೆ ಕಾರಣ. ಈ ಗೋಪುರದ ಶಿಖರದ ನೆರಳು ಯಾವತ್ತೂ ನೆಲದ ಮೇಲಂಗೆ ಬೀಳ್ತಿಲ್ಲೆ ಹೇಳಿದರೆ ನಮ್ಮ ಹಿಂದಾಣವರ ಕೌಶಲ್ಯದ ಅಂದಾಜು ಮಾಡ್ಲೆಡಿಗು.
ಇಲ್ಲಿ ತಂಜಾವೂರು ಬೃಹದೀಶ್ವರ ದೇವಸ್ಥಾನದ ಕೆಲಾವು ಪಟಂಗಳ ನೇಲುಸಿದ್ದೆ. ನೋಡಿ, ಒಪ್ಪ ಕೊಡಿ.
ತುಂಬಾ ಉಪಕಾರಿ ಬರಹ. ಮುಂದೆ ಅಲ್ಲಿಗೆ ಹೋಪಲಿಪ್ಪವಕ್ಕೂ ಉಪಯೊಗ ಅಕ್ಕು.
ಪರಿಚಯದೊಟ್ಟಿಂಗೆ ಪಟಂಗೊ ಬಾರಿ ರೈಸಿದ್ದು..
ಸಚಿತ್ರ ಲೇಖನ ಸೂಪರ್ ಆಯ್ದು ಹಳೆಮನೆ ಅಣ್ಣ. ಫಟಂಗೊ ಎಲ್ಲ ಒಂದರಿಂದ ಒಂದು ಲಾಯ್ಕ ಬಯಿಂದು.
ತುಂಬ ಖುಶಿಯಾತು ಹೇಳಿ ಒಂದೊಪ್ಪ 🙂
ಬೃಹದೀಶ್ವರ ದೇವಸ್ಥಾನದ ಬಗೆಲಿ ಉತ್ತಮ ಸಚಿತ್ರ ಲೇಖನ. ನೆರಳು ಬೆಳಕಿಲ್ಲಿ ಶಿವಲಿಂಗಂಗಳ ಸಮೂಹ ತುಂಬಾ ಆಕರ್ಷಕವಾಗಿದ್ದು. ಎಲ್ಲ ಫೊಟೋಂಗಳುದೆ ನಯನ ಮನೋಹರ. ಹರೀಶನ ಲೇಖನ ಸರಣಿ ಬತ್ತಾ ಇರಳಿ, ನಮ್ಮ ಕಣ್ಣುಗಳ, ಮನಸ್ಸಿನ ತಣುಸುತ್ತಾ ಇರಳಿ.
ಸ್ಥಳ ಪರಿಚಯದೊಟ್ಟಿಂಗೆ ಪಟಂಗೊ. ಲಾಯಿಕ ಆಯಿದು. ಧನ್ಯವಾದಂಗೊ….
ತಂಜಾವೂರಿನ ಬೃಹದೀಶ್ವರ ದೇವಸ್ಥಾನ – ಕೆಮರಾ ಕಣ್ಣಿಲ್ಲಿ… ಹಳೆಮನೆ ಅಣ್ಣನ ಬರವಣಿಗೆಲ್ಲಿ… ತುಂಬಾ ಖುಷಿ ಆತು… ನೆರಳು-ಬೆಳಕಿನಾಟ,ಇಸ್ಕಾನ್ ವಿದೇಶಿಗಳು… ಎಲ್ಲ ಫೋಟೋ ಒಂದಕ್ಕಿಂತ ಒಂದು ಅದ್ಭುತ ಇದ್ದು…
ಆ ಸಾಲು ಸಾಲು ಶಿವಲಿಂಗಂಗೊ ಎಂತಕೆ ಇದ್ದಿಕ್ಕು?
ಸ್ಥಳ ಪರಿಚಯದೊಟ್ಟಿಂಗೆ ಪಟಂಗೊ. ಲಾಯಿಕ ಆಯಿದು.
ಮೊದಲೊಂದರಿ ಹೋದ್ದರ ನೆಂಪು ಮಾಡಿದ ಹಾಂಗೆ ಆತು
ವ್ಹಾ ಅದ್ಭುತ !
ತಂಜಾವೂರು ಶ್ರೀ ಬೃಹದೀಶ್ವರ ದೇವಸ್ತಾನದ ಬಗ್ಗೆ, ಅಲ್ಲಿಯ ಅಪರೂಪದ ಚಿತ್ರ ಕಲೆ ಯ ಬಗ್ಗೆ ತಿಳಿಸಿದ, ಹರೀಶಂಗೆ ಒಂದೊಪ್ಪ.
ಲಾಯಕ ಆಯ್ದೀ ಕಾರ್ಯ. ಅಭಿನಂದನೆಗೊ.