ಚೆನ್ನಬೆಟ್ಟಣ್ಣನ ಗುರ್ತ ಇದ್ದನ್ನೇ? ಆಟದ ಶುದ್ದಿ ಮಾತಾಡುವಗ ಅವರ ಬಗ್ಗೆ ಸುಮಾರು ಸರ್ತಿ ಮಾತಾಡಿದ್ದು.
ನೆಗೆನೆಗೆ ಮೋರೆಲಿ ಯೇವತ್ತೂ ಉಲ್ಲಾಸಲ್ಲಿ ಇದ್ದೊಂಡಿಕ್ಕು! ಅವರ ಮೂಲ ಚೆನ್ನಬೆಟ್ಟು ಆದರೂ, ಈಗ ಬೆಂಗುಳೂರಿಲಿ ಇಪ್ಪದು.ಎಲ್ಲೇ ಇದ್ದರೂ, ಅವರ ಊರಿನ ಸೆಳೆತ ಇಳುದ್ದಿಲ್ಲೆ. ನವರಾತ್ರಿ ಆಚರಣೆಗೆ ಚೆನ್ನಬೆಟ್ಟು ಮಟಕ್ಕೆ ಒರಿಶಂಪ್ರತಿ ಬಂದೇ ಬಕ್ಕು!
ಹತ್ತರೆ ಎಲ್ಲೇ ಸಂಗೀತ ಕಛೇರಿ, ಡೇನ್ಸು, ಬರತನಾಟ್ಯ ಆವುತ್ತರೂ, ಸೌಕರ್ಯ ಇದ್ದರೆ ಹೋಗಿಯೇ ಹೋಕು! ಯಕ್ಷಗಾನ ಅಂತೂ ಬಿಡ್ತ ಪ್ರಶ್ನೆಯೇ ಇಲ್ಲೆ!ಬೆಂಗುಳೂರಿಲಿಪ್ಪ ಕೆಲವು ಜವ್ವನಿಗರ ಯಕ್ಷಗಾನದ ಗುಂಪಿನ ಸಕ್ರಿಯ ಸದಸ್ಯ° ಅಡ ಇವು..ಅವರ ಬ್ಲಡ್ಡು ಗ್ರೂಪು ಯಕ್ಷಗಾನ ಪ್ಲಸ್ ಅಡ, – ಲಾನಣ್ಣ ನೆಗೆಮಾಡ್ತ° ಕೆಲವು ಸರ್ತಿ!
ಅವರತ್ರೊಂದು ಸಣ್ಣ ಸೂಟುಕೇಸಿನಷ್ಟಕೆ ಇಪ್ಪ ಕೆಮರ ಇದ್ದು. ಎಲ್ಲಿಗೆ ಹೋವುತ್ತರೂ ತೆಕ್ಕೊಂಡು ಬಕ್ಕು.ಚೆಂದಚೆಂದದ ಪಟ ತೆಗಗು. ತುಂಬಾ ಚೆಂದದ ಪಟಂಗೊ! ನಮುನೆನಮುನೆದು. ಪರಿಸರವೋ – ಡೇನ್ಸುಕಾರ್ಯಕ್ರಮವೋ – ಹೂಗಿಂದೋ, ಮಾವಿನಮೆಡಿಯೋ – ಹೀಂಗೆಂತಾರು..!ಅವು ತೆಗದ ಒಂದು ಚಂದ್ರನ ಪಟವ ಗುರುಗೊ ಅವರ ವೆಬುಸೈಟಿಲಿ (ಹರೇರಾಮ.ಇನ್) ಲಿ ಹಾಕಿದ್ದವಡ, ಅವಕ್ಕೆ ಕೊಶಿ ಆಗಿ!!
ಓ ಮೊನ್ನೆ ಉಪ್ರಂಗಡಿಯ ಆದಿತ್ಯಹೋಟ್ಳಿನ ಚಳಿಕೋಣೆಯ ಒಳದಿಕೆ ಆಚಕರೆಮಾಣಿಯ ಒಟ್ಟಿಂಗೆ ಕೂದುಗೊಂಡು ಬೆಶಿಚಾಯ ಕುಡ್ಕೊಂಡಿತ್ತಿದ್ದವು.ಒಪ್ಪಣ್ಣನ ಕೈಲಿ ಚೆಂದಕೆ ಮಾತಾಡಿದವು. ಅವು ಪಟತೆಗೆತ್ತ ಶುದ್ದಿ ಎಲ್ಲ ಬಂತು - ಬೈಲಿಂಗೆ ತೋರುಸುವನಾ – ಕೇಳಿದ್ದಕ್ಕೆ ಸಂತೋಷಲ್ಲಿ ಕೊಟ್ಟು ಕಳುಸಿದವು.ಒಂದು ಸರ್ತಿಂಗೆ ಕೊಟ್ಟದರ್ಲಿ ಒಪ್ಪಣ್ಣಂಗೆ ನಾಕುಸರ್ತಿ ಹಾಕುವಷ್ಟಕೆ ಆತು!!
ಯಕ್ಷಗಾನದ ಕರ್ಣನ ನೆಂಪಾತೋ ಏನೋ! ಆಗಲಿ, ಎಲ್ಲವುದೇ ಚೆಂದಚೆಂದದ ಪಟಂಗೊ. ದೊಡ್ಡದೊಡ್ಡದು.
ದೊಡ್ಡಕೆಮರಲ್ಲಿ ತೆಗದ್ದು ದೊಡ್ಡದೊಡ್ಡದೇ ಬರೆಕ್ಕಲ್ಲದೋ! ನೋಡಿ, ಹೇಂಗಿದ್ದು ಹೇಳಿ. ಆತೋ? (ಅವರತ್ರೆ ಇನ್ನುದೇ ತುಂಬ ಪಟಂಗೊ ಇದ್ದಡ!, ಎಲ್ಲ ನಿದಾನಕ್ಕೆ ಕಳುಸುಗು!)ಪಟ ನೋಡಿ, ಕೊಶಿ ಆದರೆ ಒಪ್ಪಕೊಡಿ!
ಎಲ್ಲ ಫೊಟ ಗಳೂ ನೋಡಿ ಖುಶಿ ಅತು
ಭಾರೀ ಲಾಯ್ಕದು ಪಟಂಗ ಉಲ್ಲಾಸಣ್ಣ.. ಒಂದರಿಂದ ಒಂದು ರೈಸಿದ್ದು….
ಧನ್ಯವಾದಂಗೊ ಮಾಣಿ…..
ಒಂದರಿಂದ ಒಂದು ಲಾಯಕಿದ್ದು ಫಟಂಗೊ…
ಖುಶಿ ಆತು ಅಣ್ಣಾ…
ಸುಮಾರು ದಿನ ತೆರೆ ಕುಣಿತ ಆಗಿ ಚೆನ್ನಬೆಟ್ಟು ಬೈಲಿಂಗೆ ಪ್ರವೇಶ ಆದ° ಅದಾ!!!
ಮಾಣಿ ಬಪ್ಪಗ ಲಾಯ್ಕ ಲಾಯ್ಕ ಪಟಂಗಳನ್ನೇ ತೆಕ್ಕೊಂಡು ಬತ್ತ°.
ವೇಷದ ಹೆಸರು-ಪಾತ್ರಧಾರಿಯ ಹೆಸರು ಬರದು ಪರಿಚಯ ಅಪ್ಪ ಹಾಂಗೆ ಮಾಡಿದ್ದದು ಒಳ್ಳೆದಾತು. 🙂
ಬತ್ತಾ ಇರಲಿ ಇನ್ನುದೇ ಪಟಂಗ…
ಸುಮಾರು ದಿನ ತೆರೆ ಕುಣಿತ ಮಾಡ್ತಿಲ್ಲೆ ಇನ್ನು ಶ್ರೀ ಅಕ್ಕ. ಚುರ್ಕಿಲಿ ತೆಕ್ಕೊಂಡು ಬತ್ತಾ ಇರ್ತೆ.
ಆದರೆ ಲಾಯ್ಕದ ಆಟ ಸಿಕ್ಕೆಕ್ಕಾರೆ ಈಗ ರಜ್ಜ ಕಷ್ಟ ಆಯ್ದು ಮಾತ್ರ.
ಪ್ರೋತ್ಸಾಹಕ್ಕೆ ಧನ್ಯವಾದಂಗೊ
ಭಾರಿ ಲಾಯ್ಕಿದ್ದು ಎಲ್ಲಾ ಪಟ೦ಗ..ಆ ದೊಡ್ಡ ಕಿರೀಟ ಹಾಕ್ಯೊ೦ಡು ಏಳು ಜೆನ೦ಗೊ ಒಟ್ಟಿ೦ಗೇ ಇಪ್ಪ ಪಟವ ನೋಡಿ ತು೦ಬಾ ಖುಶಿ ಆತು..ಎಲ್ಲವೂ ಒ೦ದರಿ೦ದೊ೦ದು ಚೆ೦ದ ಇದ್ದು..
ಧನ್ಯವಾದಂಗೊ ದೀಪಿಕಾ
ಒ೦ದರಿ೦ದ ಒ೦ದು ಚೆ೦ದ ಆಯಿದು.ಮೋರೆಯ ಭಾವನೆಗಳ ಸೆರೆ ಹಿಡಿವದು ಹವ್ಯಾಸಿಗೊಕ್ಕೆ ಅಷ್ಟು ಸುಲಭ ಇಲ್ಲೆ. ತ್ರಿಶಿರನ ಅಪರೂಪದ ಕಿರೀಟವೂ, ಒಳುದ ಪಾತ್ರ೦ಗಳ ಪಟ೦ಗಳೂ ಕೊಶಿ ಕೊಟ್ತತ್ತು.
‘ಸ೦ಶಪ್ತಕರ ಕಾಳಗ’ ಅಪ್ರೂಪದ ಪ್ರಸ೦ಗ. ನಿಜಕ್ಕೆ ಇಬ್ರೇ ಇರೇಕು,ಆದರೆ ಆಟ ರೈಸುಲೆ “ಸಮ ಸಪ್ತಕರು”ಹೇಳಿ ಏಳು ಬಣ್ಣದ ವೇಷ೦ಗಳ ಅಬ್ಬರೆ ಮಾಡ್ತವು. ಆ ವಿಡಿಯೋ ನೋಡಿದ್ದೆ,ಪಟವೂ ನೋಡಿದ ಹಾ೦ಗಾತು.
ಧನ್ಯವಾದ ಚೆನ್ನಬೆಟ್ಟಣ್ಣ.ಕೆಮರ ಬದಲ್ಸಿದ್ದೆಯೋ ಹೇ೦ಗೆ?
ರಂಗಸ್ಥಳಲ್ಲಿ ಪಟ ತೆಗವಲೆ ರಜ್ಜ ಕಷ್ಟವೇ ಭಾವ.
ಆಟಲ್ಲಿ ಗೌಜಿ ಮಾಡ್ಲೆ ಬೇಕಾಗಿ ಹೀಂಗೆ ಏಳು ತಡ್ಪೆವೇಷ ಮಾಡ್ಸುದು ಹೇಳಿ ಬಲಿಪ್ಪಜ್ಜ ಹೇಳುಗು.
ಭಾರಿಲಾಯಕೆಲಿ ಬೈ೦ದು ಪಟ೦ಗೊ ಭಾವ..
ಧನ್ಯವಾದಂಗೊ ಚುಬ್ಬಣ್ಣ
ವಾಹ್! ಒಪ್ಪ೦ಗೊ
ಧನ್ಯವಾದಂಗೊ ಗಣೇಶಣ್ಣ
ಇಷ್ಟೂ ಜೆನ ಒಟ್ಟಿಂಗೆ ಎಲ್ಲಿ ಸಿಕ್ಕಿದವು…?
ಒಂದೇ ದಿನ ನೆಡದ ಆಟಂಗಳೋ..? ಬೇರೆ ಬೇರೆಯೋ…?
ಮಂಗಳೂರಿನ ಪುರಭವನಲ್ಲಿ ಕೆಲವು ವರ್ಷ ಹಿಂದೆ.
ಇದಲ್ಲಿ ಸುರುವಾಣ ಐದು ಪಟ ಒಂದೇ ದಿನದ್ದು.
ಆಹಾ… ಅದ್ಭುತ ಫೊಟೊಂಗೊ!! ಯಕ್ಷಗಾನದ ಫೊಟೊಂಗೊ ನೋಡಿ ಎನ್ನ ಮಗಂಗೂ ಖುಷಿ ಆತು… ಚೆನ್ನಬೆಟ್ಟಣ್ಣಂಗೆ ಧನ್ಯವಾದಂಗೊ…
ಯಕ್ಷಗಾನ ನಮ್ಮ ರಕ್ತಲ್ಲೇ ಹರಿವ ಕಾರಣ ಮಕ್ಕೊಗೂ ಖುಷಿ ಅಪ್ಪದು.
ಧನ್ಯವಾದಂಗೊ ಅಕ್ಕ.
ವಾಹ್ ! ಯಕ್ಷಲೋಕದ ವರ್ಣಮಯ ಫೊಟೊಂಗೊ ಅದ್ಭುತ. ಬೈಲಿಂಗೆ ಒದಗುಸಿ ಕೊಟ್ಟ ಚೆನ್ನಬೆಟ್ಟಣ್ಣಂಗೆ ಧನ್ಯವಾದಂಗೊ. ಏಳು ಬಟ್ಳುಗೊ ಒಟ್ಟು ಸೇರಿದ್ದು ಮತ್ತೂ ಲಾಯಕಾತದ. ಎನಗೆ ಇದು ಹೊಸತ್ತು. ಒಳ್ಳೆ ಕಲಾತ್ಮಕವಾಗಿ ಬಯಿಂದು.
ಬೊಳುಂಬು ಮಾವ, ಏಳು ಬಟ್ಳುಗೊ ಅಪರೂಪ ಆದ ಕಾರಣ ಬೈಲಿಂಗೆ ತೋರ್ಸುವ ಹೇಳಿ ಕಂಡತ್ತು.
ಧನ್ಯವಾದಂಗೊ
ಯಕ್ಷ-ಗಾನವೋ ಅಲ್ಲಾ ಸಿ ಭಾವನ-ಗಾನವೋ(ಪದವೋ) ಉಮ್ಮಪ್ಪ ನವಗರಡಿಯ ಎರಡೂ ರೈಸಿತ್ತು, ಪಟಂಗೊ ಭಾರೀ ಲಾಯಿಕಾಯಿದು.
ಧನ್ಯವಾದಂಗೊ ಪುಳ್ಳಿ
ಈ ಫಟಂಗಳೂ, ಭಾವನ ಪದವೂ ರೈಸಿತ್ತು.
ಧನ್ಯವಾದಂಗೊ ಮಾವ°
ಬಲುತೋಷವಾತೆನಗೆ ನಿಂಗೊ ಗೈದ ಕಾರ್ಯವ ನೋಡಿ
ಸಮರ್ಥ ನಿಂಗೊ ಅಪ್ಪು ಇವಿಷ್ಟು ಸಂಗ್ರಹ ಮಾಡಿ ।
ಇನ್ನಷ್ಟು ಪಟಂಗೊ ನಿಂಗಳತ್ರೆದ್ರೆ ಇಲ್ಲಿಗೆ ಬರಲಿ
ಮುಂದಂಗೆ ನೋಡ್ಳಾತು ನವಗೆ ಬೈಲಿಲಿ ಇರಲಿ ॥
ಬಲುತ್ಸಾಹ ಬರುತಿಹೆ ನನಗೆ ನಿಮ್ಮೀ ಪ್ರೋತ್ಸಾಹವ ನೋಡಿ.
ಧನ್ಯವಾದಂಗೊ ಭಾವ
ಯಕ್ಷಗಾನಂ ಗೆಲ್ಗೆ
ಧನ್ಯವಾದಂಗೊ