ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು.
ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು.
( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat )
ಹ್ಮ್, ಅಪ್ಪು.
ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು.
ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ.
ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು.
ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ.
ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು!
ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ.
ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ?
ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ.
ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು!
ಅವರ ಶುದ್ದಿಗಳ ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°.
ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?
ಸರಸ್ವತಿಅಕ್ಕನ ಸಂತೋಷಂದ ಅಭಿನಂದಿಸುತ್ತೆ. ದೇವಿ ಸರಸ್ವತಿಯ ಕಟಾಕ್ಷಂದ ಇನ್ನಷ್ಟು ಮತ್ತಷ್ಟು ಪ್ರಶಸ್ತಿಗೊ ಹುಡುಕಿಗೊಂಡು ಬಪ್ಪ ಹಾಂಗಾಗಲಿ ಹೇಳಿ ಹಾರೈಸುತ್ತೆ.
ಸ೦ತೋಷದ ಶುದ್ದಿ. ಅಭಿನ೦ದನೆಗೊ.
ಹರೇರಾಮ. ಗೋಪಾಲ, ನೀನು ಬರದ್ದು ಒೞೆದಾತು. ಈ ಸುದ್ದಿ ಅಂದು ಪೇಪರಿಲ್ಲಿ ನೋಡಿದ ದಿನವೇ ಬಯಲಿಂಗೆ ಬರೆಕಾತು ಗ್ರೇಶಿತ್ತಿದ್ದೆ . ಸರಸ್ವತಿಗೆ ಗೌರಮ್ಮ ಪ್ರಶಸ್ತಿ ಸಹಿತ ಇನ್ನೂ ಕೆಲವಾರು ಪ್ರಶಸ್ತಿಗೊ ಬಯಿಂದು ಹೇಳ್ಲೆ ಸಂತೋಷ ಆವುತ್ತು
ಹರೇರಾಮ. ಗೋಪಾಲ, ಈ ಸುದ್ದಿ ಅಂದು ಪೇಪರಿಲ್ಲಿ ನೋಡಿದ ದಿನವೇ ಬಯಲಿಂಗೆ ಬರೆಕಾತು ಗ್ರೇಶಿತ್ತಿದ್ದೆ . ಸರಸ್ವತಿಗೆ ಗೌರಮ್ಮ ಪ್ರಶಸ್ತಿ ಸಹಿತ ಇನ್ನೂ ಕೆಲವಾರು ಪ್ರಶಸ್ತಿಗೊ ಬಯಿಂದು ಹೇಳ್ಲೆ ಸಂತೋಷ ಆವುತ್ತು
ಸರಸ್ವತಿ ಅಕ್ಕಂಗೆ ಅಭಿನಂದನೆಗೊ.
ಅಭಿನಂದನೆಗೊ ಸರಸ್ವತಿ ಅಕ್ಕಂಗೆ
ಭಾರೀ ಸ೦ತೋಷದ ಶುದ್ದಿ. ಸರಸ್ವತಿ ಅತ್ತೆಗೆ ಅಭಿನ೦ದನೆಗೊ.
ಸಂತೋಷ ಸುದ್ದಿ. ಕೀರ್ತಿ ಬೆಳೆಯಲಿ. ಹರೇ ರಾಮ.