Oppanna.com

ಹಾಲುಮಜಲು ಒಪ್ಪಣ್ಣಂದಿರು ಮನೆಗೆ ಬಂದದು ಹಾಲು ಕುಡುದ ಹಾಂಗೆ ಆತು!

ಬರದೋರು :   ನೀರ್ಕಜೆ ಮಹೇಶ    on   05/01/2011    7 ಒಪ್ಪಂಗೊ

ನೀರ್ಕಜೆ ಮಹೇಶ

ಎಲ್ಲ ಒಪ್ಪಣ್ಣನ ಬೈಲಿನ ಮಹಿಮೆ. ಬೈಲಿನ ಮೂಲಕ ಪರಿಚಯ ಆದ ಹಾಲುಮಜಲು ರಾಜಾರಾಮಣ್ಣ ಮತ್ತೆ ಪುಟ್ಟುಭಾವ (ಗಣೇಶ ಭಟ್) ಮನ್ನೆ ಆದಿತ್ಯವಾರ ಮನೆಗೆ ಭೇಟಿ ಕೊಟ್ಟಿತ್ತಿದವು. ಹೊಸ ಪರಿಚಯಲ್ಲಿ ಭೇಟಿ ಆದ್ದು ಎಂಗಳ ಮನೆಲಿ ಎಲ್ಲರಿಂಗೂ ಭಾರಿ ಕುಶಿ!

ಮಾತಿನ ಮಧ್ಯೆ ಬೈಲಿನ ಎಲ್ಲೊರುದೆ ನೆನೆಸಿಗೊಂಡೆಯಾ.. ಮತ್ತೆ ಚೂರು ಲೋಕಾಭಿರಾಮದ ಪಟ್ಟಾಂಗವೂ ಆತು ಹೇಳುವ.. ರಾಜಾರಾಮಣ್ಣ ಕೆಲಸದ ಮೇಲೆ ಕರ್ನಾಟಕದ ಎಲ್ಲಾ ಕಡೆಯೂ ಸುತ್ತಿಗೊಂಡಿರ್ತವು. ಅಂಥಾದ್ದರಲ್ಲಿ ಒಂದು ಗಳಿಗೆ ಎಂಗಳ ಮನೆಗೆ ಬಪ್ಪಲೆ ಮನಸು ಮಾಡಿದವು. ಮತ್ತೆ ಪುಟ್ಟಭಾವ ಕೆಲಸದ ಜೊತೆಜೊತೆಲಿ ಇಂಜಿನಿಯರಿಂಗ್ ಕೂಡ ಕಲ್ತುಕೊಂಡಿಪ್ಪ ಮಾಣಿ. ಆದರೂ ಬಿಡುವು ಮಾಡಿಕೊಂಡು ಬಂದದು ಎಂಗೊಗೆ ಭಾರಿ ಖುಷಿ!

ಕಂಪೀಟರ್ ಬೈಲಿಲಿ ಭೇಟಿಯಪ್ಪದಕ್ಕಿಂತ ಮುಖತಾ ಭೇಟಿ ಅಪ್ಪದೇ ಹೆಚ್ಚು ಖುಷಿ. ಆದರೆ ಬೈಲಿಲಿ ಭೇಟಿ ಅಪ್ಪದು ಹೆಚ್ಚು ಅನುಕೂಲ. ಎರಡಕ್ಕೂ ಒಂದೊಂದು ಮಹತ್ವ. ಎರಡೂ ಇರೆಕ್ಕು. ಎಂತ ಹೇಳ್ತಿ?

7 thoughts on “ಹಾಲುಮಜಲು ಒಪ್ಪಣ್ಣಂದಿರು ಮನೆಗೆ ಬಂದದು ಹಾಲು ಕುಡುದ ಹಾಂಗೆ ಆತು!

  1. ಶುದ್ದಿಯ ತಲೆಬರಹ ಕಂಡು ಭಾರೀ ಕೊಶಿ ಆತು ಅಪ್ಪಚ್ಚೀ..

    ಬೈಲಿನ ಲೆಕ್ಕಲ್ಲಿ ಒಂದರಿ ಕೂದು ಮಾತಾಡಿದ್ದು ಒಳ್ಳೆದಾತು.
    ಎನ್ನ ಸುದ್ದಿ ಬಂತೋ? 8)

    {ಹಾಲು ಕುಡುದ ಹಾಂಗೆ ಆತು!}
    ಒಂದೊಂದರಿ ಬೋಸ ಬಾವ° ಮನಗೆ ಬಂದು ಕೂದೊಂಡ್ರೆ ಎಷ್ಟೊತ್ತಾದರೂ ಹೋವುತ್ತನಿಲ್ಲೆ..
    ಮಾತು ಎಳಕ್ಕೋಂಡು ಕೂರ್ತ°, ಟೀವೀನೈನಿನ ವಾರ್ತೆಯ ಹಾಂಗೆ!
    ಎನಗೆ ರಬ್ಬರುಹಾಲುಕುಡುದ ಹಾಂಗೆ ಆವುತ್ತು 😉

    1. ಎಂಗಳಲ್ಲಿ ಒಬ್ಬ ಇದ್ದ. ಅವ ಸುದ್ದಿ ಹೇಳಿರೆ 70mm, 3D, stereophonic sound ಎಲ್ಲಾ effect ಇರ್ತು.

  2. ನೀರ್ಕಜೆ ಅಪ್ಪಚ್ಚಿ, ನಿಂಗಳ ಮಾತು ನಿಜ,, ಬೈಲಿಂದಾಗಿ ಮನಸ್ಸಿಂಗೆ-ಮನೆಗೆ ಹತ್ತರೆ ಆದೋರೂ ಎಷ್ಟೋ ಜೆನ, ಲೆಕ್ಕ ಮಡುಗುದು ಕಷ್ಟವೇ.. ಕಂಪ್ಯೂಟರು ಬೈಲಾದರೂ ನಿಜವಾದ ನೆರೆಕರೆಲಿಯೂ ಕಷ್ಟಲ್ಲ್ಲಿ ಸಿಕ್ಕುವ ಪ್ರೀತಿ, ನೆಂಟಸ್ತಿಕೆ ನಮ್ಮ ಬೈಲಿನ ನೆರೆಕರೆಲಿ ಬತ್ತಾ ಇಪ್ಪದು ತುಂಬಾ ಕೊಶಿ ಕೊಡ್ತು.. ನಿಂಗಳ ಕುಶಿಯ ಹಂಚಿಗೊಂಡದಕ್ಕೆ ಧನ್ಯವಾದಂಗೋ! 🙂

  3. ಪೇಕೇಟು ಹಾಲು 1 ಲೀಟರಿ೦ಗೆ ಕ್ರಯ ಹೇಚ್ಚು ತಡ.. 😛
    ಅ೦ಬಗ, ಹಾಲುಮಜಲು ಒಪ್ಪಣ್ಣಂದಿರು ಬೈಲಿನ ಎಲ್ಲರಲ್ಲಿಗು ಹೋಗಿಯೊ೦ಡು ಇದ್ದರಿ ಒಳ್ಳೆದೋ ಹೇಳಿ… 😉

    ಮತ್ತೆ ಹಾಲು ಕರೆತ್ತೆವಕ್ಕೆ , ಕರೆತ್ತ ಕೇಲಸವು ಇರಾ… !! 🙂

    1. ಬೋಸ ನೀನು ಬರೆಡ ಆತ ಮನೆಗೆ.. ನಿನ್ನ ನೋಡಿರೆ ಮನೆಯವೆಲ್ಲ ಹೆದರಿ ಎನ್ನ ಬಿಟ್ಟು ಓಡಿ ಹೋಕು! ಹಹಾ…

      1. ಆನು ಪಾಪ ಅಲ್ಲದೋ?? ಆನು ಬಪ್ಪದು ಬೇಡದೊ???
        ಉಉ ಉಉಉಉಉಉ….. 🙁

        1. ಕುಚ್ಚಿ, ಗಡ್ಡ ತೆಗೆಶಿದರೆ ಮಾತ್ರ ಬಪ್ಪಲಕ್ಕು. ತಲೆ ಬೋಳು ಮಾಡ್ಸಿದರೂ ಅಡ್ಡಿಲ್ಲೆ 😀

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×