Oppanna.com

21-ಎಪ್ರಿಲ್-2013: ಹೃನ್ಮನ ತಣಿಸಿದ ಸಾಹಿತ್ಯದೂಟ : “ಅಷ್ಟಾವಧಾನ”

ಬರದೋರು :   ಶುದ್ದಿಕ್ಕಾರ°    on   23/04/2013    7 ಒಪ್ಪಂಗೊ

21-04-2013: ಪುತ್ತೂರಿನ ಜೈನ ಭವನಲ್ಲಿ, ಶತಾವಧಾನಿ ಡಾ.ಆರ್.ಗಣೇಶ್ ನೇತೃತ್ವಲ್ಲಿ ನಡದ ಅಷ್ಟಾವಧಾನ ಕಾರ್ಯಕ್ರಮ ಭರ್ಜರಿ ಯಶಸ್ವಿಯಾಗಿ ನಡದತ್ತು.
ಇಡಿಯ ಸಭಾಂಗಣಲ್ಲಿ ಪೂರ್ತಿ ಜನ. ಎಲ್ಲಿ ನೋಡಿರೂ ಕಾಲಿ ಕುರ್ಚಿಗಳೇ ಇಲ್ಲದ್ದ ನಮುನೆಲಿ ಕಿಕ್ಕಿರಿದು ತುಂಬಿದ್ದತ್ತು.
ಸುಮಾರು ಮೂರೂವರೆ ಘಂಟೆ ನಡದ ಅಷ್ಟಾವಧಾನ ಕಾರ್ಯಕ್ರಮಲ್ಲಿ ಅವಧಾನಿಗಳ ಮಾತಿನ ಓಘಕ್ಕೆ ಎಲ್ಲರುದೇ ತಲೆದೂಗಿದೋರೇ.
ಪುತ್ತೂರಿನ ಹಿರಿತಲೆಗೊ, ಗೌರವಾನ್ವಿತರು ಮಾಂತ್ರ ಅಲ್ಲದ್ದೆ ವಿಟ್ಳ, ಉಪ್ಪಿನಂಗಡಿ, ಬೆಳ್ಳಾರೆ, ಸುಳ್ಯ, ಮಂಗಳೂರು, ಬೆಂಗಳೂರು, ಅಷ್ಟೇ ಅಲ್ಲದ್ದೆ ದೂರದ ಚೆನ್ನೈಂದಲೂ ಬಂದು ಕಾರ್ಯಕ್ರಮವ ಅನುಭವಿಸಿದ ಹಲವಾರು ಸಾಹಿತ್ಯಪ್ರೇಮಿಗೊ ಕಾರ್ಯಕ್ರಮವ ಚೆಂದಕಾಣುಸಿತ್ತಿದ್ದವು.
ಉದಿಯಪ್ಪಗ ಮಿತ್ತೂರು ಸಂಪ್ರತಿಷ್ಠಾನದ ಪ್ರವಚನ ಮಾಲಿಕೆ ಉದ್ಘಾಟನಾ ಕಾರ್ಯಕ್ರಮ ಇದ್ದತ್ತು.
ಅದಾಗಿ ಮಧ್ಯಾಹ್ನದ ಊಟ. ಊಟದ ಅನಂತರ ಸಭಾಕಾರ್ಯಕ್ರಮ ಸುರು.

ವಿಷು ವಿಶೇಷ ಸ್ಪರ್ಧೆ 2013 – ಬಹುಮಾನ ವಿತರಣೆ:
ಮೊದಲಿಂಗೆ “ವಿಷು ವಿಶೇಷ ಸ್ಪರ್ಧೆ 2013”ರ ಬಹುಮಾನ ವಿತರಣಾ ಕಾರ್ಯಕ್ರಮ.
ದಾಸನ ಗೆಡುಗಳ ಅಲಂಕಾರಲ್ಲಿ ಮಾಡಿದ ಸರಳ ಸುಂದರ ವೇದಿಕೆಲಿ ಕಾರ್ಯಕ್ರಮ ನೆಡದತ್ತು. ವೇ.ಮೂ.ಪರಕ್ಕಜೆ ಅನಂತಣ್ಣನ ವೈದಿಕ ಪ್ರಾರ್ಥನೆಲಿ ಕಾರ್ಯಕ್ರಮಾರಂಭ.
ನಿವೃತ್ತ ಪ್ರಾಧ್ಯಾಪಕರಾದ ವಿ.ಬಿ.ಅರ್ತಿಕಜೆ ಅಜ್ಜ° ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿತ್ತಿದ್ದವು.
ಬೈಲಿನ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಈಶ್ವರ ಭಟ್ ಎಳ್ಯಡ್ಕ (ಮಾಷ್ಟ್ರುಮಾವ°), ಅಧ್ಯಕ್ಷರಾದ ಶ್ರೀಕೃಷ್ಣ ಶರ್ಮ ಹಳೆಮನೆ (ಶರ್ಮಪ್ಪಚ್ಚಿ) – ವೇದಿಕೆ ಅಲಂಕರುಸಿತ್ತಿದ್ದವು.
ನಿವೃತ್ತ ಪ್ರಾಧ್ಯಾಪಕರಾದ ಹರಿನಾರಾಯಣ ಮಾಡಾವು – ಇವು ವಿಶೇಷ ಅತಿಥಿಯಾಗಿ ಬಂದು, ಪ್ರಶಸ್ತಿ ಪ್ರದಾನ ಮಾಡಿದವು.
ಕಥೆ, ಕವನ, ಪ್ರಬಂಧ, ನೆಗೆಬರಹ, ಫೋಟೋ – ಐದು ಸ್ಪರ್ಧೆಯ ಪ್ರಥಮ, ದ್ವಿತೀಯ ಪ್ರಶಸ್ತಿ ಪ್ರದಾನ ಮಾಡಿತ್ತು.
ಬಹುಮಾನ ವಿಜೇತರ ಪರವಾಗಿ ಬಾಲಮಧುರಕಾನನ (ಬಾಲಣ್ಣ ಮಾವ°) ನಾಲ್ಕು ಮಾತಾಡಿದವು.
ನಮ್ಮ ಬೈಲು ಹವ್ಯಕ ಭಾಷಾ ಸಾಹಿತ್ಯ ಬೆಳವಣಿಗೆಗೆ ಪ್ರೋತ್ಸಾಹ ಕೊಡ್ತಾ ಇಪ್ಪ ಬಗ್ಗೆ ಮೆಚ್ಚಿಗೆ ವಹಿಸಿದವು.

ಸ್ಪರ್ಧಿಗೊಕ್ಕೆ ಸಂತೋಷ ಆತು. ಅದರ ಕಂಡು ಬೈಲಿನೋರಿಂಗೆ ಎಲ್ಲೋರಿಂಗೂ ಕೊಶಿ ಆತು.
ಪ್ರಶಸ್ತಿ ಸಿಕ್ಕಿದೋರಿಂಗೆ ಪ್ರಶಸ್ತಿ ಪತ್ರ ಅಲ್ಲೇ ಸಿಕ್ಕಿದ್ದು; ಮೆಚ್ಚಿಗೆ ಪಡೆದ ಲೇಖನಂಗೊಕ್ಕೆ ಪ್ರಶಂಸಾಪತ್ರವ ಕಳುಸುವ ವ್ಯವಸ್ಥೆ ಮಾಡ್ತು – ಹೇಳಿ ಸಂಚಾಲಕರಾದ ರವಿಶಂಕರ ದೊಡ್ಡಮಾಣಿ (ದೊಡ್ಡಭಾವ°) ಹೇಳಿದವು.
~

“ಸಾವಿರದ ಗಾದೆಗಳು” ಪುಸ್ತಕ ಬಿಡುಗಡೆ:
ಇದೇ ಸಂದರ್ಭಲ್ಲಿ, ಅರ್ತಿಜಕೆ ಅಜ್ಜ° ಬರದ “ಸಾವಿರದ ಗಾದೆಗಳು” ಹೇಳ್ತ ಪುಸ್ತಕವ ಹರಿನಾರಾಯಣ ಮಾಡಾವು ಇವು ಬಿಡುಗಡೆ ಮಾಡಿ ಶುಭ ಹಾರೈಸಿದವು.
ಕನ್ನಡ ಭಾಶೆಲಿಪ್ಪ ಸಾವಿರ ಗಾದೆಗಳ ಸವಿವರ ಪಟ್ಟಿ ಮಾಡಿ ಆದಿಕ್ಷಾಂತ ರೀತಿಲಿ ಜೋಡುಸಿ ಮಡಗಿದ ಪುಸ್ತಕ.
ಮನೆಮಕ್ಕೊಗೆಲ್ಲರಿಂಗೂ ಓದುಸೇಕಾದ ಚೆಂದದ ಮಾಹಿತಿಪೂರ್ಣ ಪುಸ್ತಕ. ಪುಸ್ತಕದ ಪ್ರತಿಗಾಗಿ ಕೊಡೆಂಕಿರಿ ಪ್ರಕಾಶಣ್ಣನ ಸಂಪರ್ಕಿಸುಲೆ ಅಕ್ಕು.
~

ಅಷ್ಟಾವಧಾನ:
ಬೈಲಿನ ಸಭಾಕಾರ್ಯಕ್ರಮ ಮುಗುದಪ್ಪದ್ದೇ, ಸರಿಯಾಗಿ ಮೂರುಗಂಟೆಗೆ ಅಷ್ಟಾವಧಾನ ಕಾರ್ಯಕ್ರಮ ಸುರು ಆತು.
ಶತಾವಧಾನಿಗೊ, ಎಂಟು ಜೆನ ಪೃಚ್ಛಕರ ಒಟ್ಟಿಂಗೆ ವೇದಿಕೆ ಅಲಂಕರುಸಿದವು. ಪೃಚ್ಛಕರ ಪರಿಚಯವನ್ನೂ ಮಾಡಿ ಅವಧಾನಾರಂಭ ಮಾಡಿದವು.
ವಿದ್ವಾಂಸರುಗಳಾದ ಪಾದೆಕಲ್ಲು ವಿಷ್ಣುಭಟ್, ಅಂಬಾತನಯ ಮುದ್ರಾಡಿ, ಚಂದ್ರಶೇಖರ ಕೆದಿಲಾಯ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಡಾ.ಚಂದ್ರಶೇಖರ ದಾಮ್ಲೆ, ಬೆಂಗ್ಳೂರಿನ ರಾಮಚಂದ್ರ ಕೆಕ್ಕಾರು, ಸೋಮಶೇಖರ ಶರ್ಮ, ಡಾ.ಆರ್.ಶಂಕರ್ – ಇವು ಪೃಚ್ಛಕರಾಗಿ ಸಹಕರುಸಿದವು.

ಅವಧಾನಾರಂಭಲ್ಲೇ ಸಭೆ ತುಂಬುಲೆ ಸುರು ಆತು. ರಜವೇ ಹೊತ್ತಿಲಿ ಜಾಗೆ ಸಾಕಾಗದ್ದೆ ಕರೆ ಕರೆಲಿ ಭಾವಯ್ಯಂದ್ರು ನಿಂದುಗೊಂಡು ನೋಡ್ಳೆ ಸುರುಮಾಡಿದವು.
ಒಂದು ಸಾವಿರ ಕುರ್ಚಿಗೊ ಪೂರ್ತಿ ಆಗಿ, ಇನ್ನೂ ಕಾಲಿ ಜಾಗೆ ಇದ್ದ ಕಾರಣ ಮತ್ತೆ ನೂರು ಕುರ್ಚಿಗಳ ತರುಸಿತ್ತು. ನೋಡಿಂಡಿದ್ದ ಹಾಂಗೇ ಅದುದೇ ಪೂರ್ತಿ ಆತು.
ಇದರೆಡಕ್ಕಿಲಿ ಅಂಬೆರ್ಪಿನ ಹಲವು ಜೆನ ಹೋಗಿಂಡಿತ್ತಿದ್ದವು, ತಡವಾದ ಕೆಲವು ಜೆನ ಬಂದುಗೊಂಡಿತ್ತಿದ್ದವು.

ಮಧ್ಯಾಹ್ನ ಮೂರು ಗಂಟೆಂದ ಹೊತ್ತೋಪಗ ಆರೂಮುಕ್ಕಾಲರ ವರೆಗೂ ಸಭಾಂಗಣ ಪೂರ್ತಿಯಾಗಿತ್ತು.
ಎಲ್ಲರೂ ಒಂದೇ ಗಮನಂದ ಅವಧಾನಿಗೊ ತಯಾರುಮಾಡಿದ ಸಾಹಿತ್ಯದೂಟವ ಉಂಡುಗೊಂಡಿತ್ತಿದ್ದವು.
ಬೈಲಿನ ಹಲವರ ಮನೆಂದ ತಂದ ಬೀಸಾಳೆಯ ಸಭೆಗೆ ಹಂಚಿತ್ತು. ಸೆಖೆಗೆ ಗಾಳಿಹಾಕುವ ಚಿತ್ರಣ ತುಂಬ ಚೆಂದಕೆ ಕಂಡುಗೊಂಡಿತ್ತು.

ಇಡಿಯ ಕಾರ್ಯಕ್ರಮ ಬೈಲಿನೋರದ್ದೇ ಆದ ಕಾರಣ ಎಲ್ಲಿ ನೋಡಿರೂ ಬೈಲಿನವರದ್ದೇ ಕೆಲಸಂಗೊ. ಕುಂಟಾಂಗಿಲ ಭಾವ°, ಕೊಂಗೊಟ್ಟು ಸತೀಶಭಾವ°, ಅಭಾವ° – ಇತ್ಯಾದಿ ಸಮಗ್ರ ಉಸ್ತುವಾರಿ ತೆಕ್ಕೊಂಡರೆ, ಬೆಟ್ಟುಕಜೆ ಅನಂತ°, ಕಲ್ಮಡ್ಕನಂತ° – ಇವೆಲ್ಲ ಶಾಕಪಾಕಂಗಳ ನೋಡಿಗೊಂಡವು. ವಿಟ್ಳ ಕಿಟ್ಟಣ್ಣ ಅಂತೂ ಯಾವದಕ್ಕೂ ಸೈ, ಎಲ್ಲದಕ್ಕೂ ಜೈ. ಡೈಮಂಡು ಭಾವಂದೇ ಯೇನಂಕೂಡ್ಳಣ್ಣಂದೇ ಬೈಲಿನ ಕೌಂಟರಿನ ವ್ಯವಸ್ಥೆ ಅಚ್ಚುಕಟ್ಟಾಗಿ ನೆಡೆಶಿಕೊಟ್ಟವು. ಗಣೇಶಮಾವ°, ದೊಡ್ಡಭಾವ°, ಸುಭಗಣ್ಣ, ಟೀಕೆಮಾವ°, ಮುಳಿಯಭಾವ, ಶ್ರೀಅಕ್ಕ, ಕುಕ್ಕಿಲ ಜಯತ್ತೆ, ಕುಕ್ಕಿಲ ಮಾಣಿ, ಒಪ್ಪಕ್ಕ, ತೆಕ್ಕುಂಜತ್ತೆ – ಎಲ್ಲರೂ ವೇದಿಕೆಯ ಹಿಂದೆ ನಿಂದುಗೊಂಡು ಬೇಕುಬೇಕಾದ ಹಾಂಗೆ ನೆಡೆಶಿಕೊಟ್ಟವು.
ಹಳೆಮನೆ ಅಣ್ಣನ ಉಸ್ತುವಾರಿಲಿ ಕೆಮರ, ವೀಡಿಯೊ ರೆಕಾರ್ಡು ಆಗಿಂಡಿದ್ದತ್ತು. ಚುಬ್ಬಣ್ಣನ ನೇತೃತ್ವಲ್ಲಿ ಅಷ್ಟಾವಧಾನ ಕಾರ್ಯಕ್ರಮ ನೇರಪ್ರಸಾರ LIVE ಮುಂದುವರುದತ್ತು.
ಆದಿಶಕ್ತಿ ಭಜನಾ ಮಂಡಳಿಯ ಯುವಕರ ಉಸ್ತುವಾರಿಲಿ ಆಸರಿಂಗೆ ಕೂದಲ್ಲಿಂಗೇ ಎತ್ತುಸುವ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.
ಒಟ್ಟಿಲಿ ಇದೊಂದು ಉತ್ಸಾಹಿ ಬೈಲಿನ ಕಾರ್ಯಕ್ರಮ ಆಗಿದ್ದತ್ತು, ನೆರೆಕರೆ ಗೆದ್ದತ್ತು!
~

ಅಷ್ಟಾವಧಾನದ ಅಕೇರಿಲಿ ಹಿರಿಯರಾದ ಅರ್ತಿಕಜೆ ಅಜ್ಜ, ಬಲ್ನಾಡು ಸುಬ್ಬಣ್ಣಮಾವ, ಪ್ರೊ.ಮಾಧವ ಭಟ್, ಪ್ರೊ.ವೇದವ್ಯಾಸ, ಪ್ರೊ.ಎ.ವಿ.ನಾರಾಯಣ, ಶ್ರೀ ತಾಳ್ತಜೆ ವಸಂತಕುಮಾರ್, ವೇ.ಮೂ.ಪರಕ್ಕಜೆ ಅನಂತನಾರಾಯಣ ಭಟ್, ಬರೆಪ್ಪಾಡಿ ಮಹೇಶ್ವರ ಭಟ್, ಪುರಂದರ ಭಟ್ – ಈ ಹಿರಿಯರು ವೇದಿಕೆಗೆ ಬಂದು ಪೃಚ್ಛಕರಿಂಗೆ, ಅವಧಾನಿಗೊಕ್ಕೆ ಶಾಲು ಹಾಕಿ ಧನ್ಯವಾದ ಸೂಚಿಸಿದವು. ಅವಧಾನಿಗೊಕ್ಕೆ ಇಷ್ಟೆತ್ತರದ ಯಕ್ಷಗಾನದ ಗೊಂಬೆಯ ಉಡುಗೊರೆಯಾಗಿ ಕೊಟ್ಟಿದು. ನಮ್ಮ ಊರಿನ ಕಲೆಯ ಪ್ರತೀಕವಾದ ನೆಂಪಿಂಗೆ ಆ ಸ್ಮರಣಿಕೆ – ಹೇಳಿ ಶ್ರೀಅಕ್ಕ ಹೇಳಿಗೊಂಡಿತ್ತಿದ್ದವು. ಪುಚ್ಚಪ್ಪಾಡಿ ಮಹೇಶಣ್ಣ ಇಡೀ ಕಾರ್ಯಕ್ರಮದ ಆದಿಂದ ಅಂತ್ಯದ ವರಗೆ ಇದ್ದುಗೊಂಡು ಎಲ್ಲವನ್ನೂ ವರದಿ ಅವುದೇ ಬರದು, ಮಾಧ್ಯಮ ಮಿತ್ರರಿಂಗೂ ತಲ್ಪಿಸಿ, ಪ್ರಚಾರ ಪರಿಪೂರ್ಣ ಅಪ್ಪ ಹಾಂಗೆ ಮಾಡಿದವು.

ನಮ್ಮ ಕಾರ್ಯಕ್ರಮಕ್ಕೆ ಧನ ಸಹಾಯ ಕೊಟ್ಟು  ಕೈ ಜೋಡಿಸಿದವ್ವು ಹಲವು ಜನ. ಆ ದಿನ ಮಡಿಗಿದ ಪ್ರತಿಷ್ಠಾನದ ಹುಂಡಿಗೆ ಸಭೆಲಿ ಸೇರಿದ ಜನಂಗ ಅವರವರ ದೇಣಿಗೆಯ ಹಾಕಿ, ನಮ್ಮೊಟ್ಟಿಂಗೆ ಸೇರಿಗೊಂಡವು. ಕಾರ್ಯಕ್ರಮ ಮುಗುದ ಮೇಲುದೇ ಸಹಾಯ ಮಾಡುಲೆ ಬಂದ ನಮ್ಮ ಬಂಧುಗಳ ಉದಾರ ಮನಸ್ಸಿನ ಬೈಲು ಪ್ರೀತಿಲಿ ನೆನೆಸಿಗೋಳ್ತು.
~

ಇದಾದ ಮತ್ತೆ ಲಘು ಉಪಾಹಾರ, ಸಣ್ಣ ಮಾತುಕತೆ.
ಕಾರ್ಯಕ್ರಮದ ಯಶಸ್ಸಿಂಗೆ ದುಡುದ ಎಲ್ಲ ಕಾರ್ಯಕರ್ತರಿಂಗೂ, ಬಂದ ಎಲ್ಲ ಗೌರವಾನ್ವಿತರಿಂಗೂ ಬೈಲಿನ ಲೆಕ್ಕಲ್ಲಿ “ಅರುಶಿನ ಕಟ್ಟ” ಕೊಟ್ಟುಗೊಂಡಿದ್ದದು ಕಂಡುಬಂತು.
ದೊಡ್ಡಭಾವ°, ಕುಕ್ಕಿಲಮಾವ°, ಶರ್ಮಪ್ಪಚ್ಚಿ ಇವೆಲ್ಲ ವಿಶೇಷ ಮುತುವರ್ಜಿಲಿ ಹಿರಿಯರ ಬೀಳ್ಕೊಟ್ಟುಗೊಂಡಿತ್ತಿದ್ದವು.
ಕಾರ್ಯಕ್ರಮಲ್ಲಿ ಎಲ್ಲಿಯೂ ಲೋಪ ಬಾರದ್ದ ಹಾಂಗೆ ಎಲ್ಲರೂ ಗಮನ ಹರುಸಿದ ಕಾರಣ ತುಂಬ ಚೆಂದಕೆ ನಡದತ್ತು.
ಅಷ್ಟಾವಧಾನದ ಯಶಸ್ಸಿನ ಗುಂಗು ಇಡೀ ಬೈಲಿನೋರಿಂಗೆ ಇದ್ದತ್ತು.

~

ಸೂ:

  • ಅಷ್ಟಾವಧಾನದ ಸಂಕ್ಷಿಪ್ತ ವಿವರ ಸದ್ಯಲ್ಲೇ ಬೈಲಿಂಗೆ ಬತ್ತು.
  • ಹಳೆಮನೆ ಅಣ್ಣ ತೆಗದ ಕೆಲವು ಪಟಂಗೊ ಇಲ್ಲಿದ್ದು, ಉಳುದ್ದದು ಸದ್ಯಲ್ಲೇ ಬತ್ತು.

ಪಟಂಗೊ:

 

7 thoughts on “21-ಎಪ್ರಿಲ್-2013: ಹೃನ್ಮನ ತಣಿಸಿದ ಸಾಹಿತ್ಯದೂಟ : “ಅಷ್ಟಾವಧಾನ”

  1. ಅತ್ಯಪೂರ್ವ, ಅತ್ಯುತ್ತಮ, ಅಮೋಘ, , ಅಚ್ಹುಕಟ್ಟಾದ, ಅಷ್ಟ್ಟಾವಧಾನ , ಅಪ್ರಥಿಮರಿಂದ. ಆಗಿ ಅತ್ಯಾನಂದಲ್ಲಿ ಸಂಪ್ನ್ನಗೊಂಡತ್ತು ಪುತ್ತೂರಿಲ್ಲಿ

  2. ಅತಿ ಸುಂದರ, ಅಚ್ಚುಕಟ್ಟಾದ ಕಾರ್ಯಕ್ರಮ.

  3. ಅತ್ಯದ್ಭುತ ಕಾರ್ಯಕ್ರಮ. ಬಹಳ ಕೊಶಿ ಆತು,

  4. ಅಚ್ಚುಕಟ್ಟಾದ ಉತ್ತಮ ಕಾರ್ಯಕ್ರಮಲ್ಲಿ ಭಾಗವಹಿಸಿದ ಅನುಭವ-(ಬಹುಮಾನ ವಿತರಣಾ ಕಾರ್ಯಕ್ರಮ, ಅಷ್ತಾವಧಾನ),ತುಂಬಿದ ವಿದ್ವಾಂಸರ ಸಭೆ… ವಾಹ್! ಮರವಲೆಡಿಯ. ಮುಂದೆ ನೆರೆಕರೆ ಪ್ರತಿಷ್ತಾನದ ಆಶ್ರಯಲ್ಲಿ ಹವ್ಯಕ ಭಾಷಾ ಸಾಹಿತ್ಯಕ ಕಾರ್ಯಕ್ರಮಂಗೊ ಕೂಡಾ ನೆಡೆಯಲಿ ಹೇಳ್ತ ಆಶಯ .ಸಂಘಟಕರಿಂಗೆ ಧನ್ಯವಾದಂಗೊ .

  5. ವಾವ್, ಒಳ್ಳೆಯ ಕಾರ್ಯಕ್ರಮ, ಕಾರ್ಯಕ್ರಮವ ಸಂಪೂರ್ಣ ಎದುರ ಕೂದು ಆಸ್ವಾದಿಸಿದವರಲ್ಲಿ ಆನೂ ಒಬ್ಬ. ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದವರಿಂದ ನೆಡದ ಕಾರ್ಯವ ಎಷ್ಟು ಹೊಗಳಿರೂ ಸಾಲ.

  6. ನಿರೀಕ್ಷೆಗೂ ಮೀರಿ ಯಶಸ್ವಿ ಆಯಿದು ಅಷ್ಟಾವಧಾನ ಕಾರ್ಯಕ್ರಮ. ಮಧ್ಯಾಹ್ನ ಭೋಜನವೂ, ಕಸ್ತಲೆಗೆ ಚಿತ್ರಾನ್ನ, ಮಾಲ್ಟ್ ಕೂಡ ಅಚ್ಚುಕಟ್ಟು, ರುಚಿಕಟ್ಟು…
    ಎಲ್ಲೋರ ಸಹಕಾರ ನೋಡಿ ಭಾರೀ ಕೊಷಿ ಆತು. ಗಡಿಬಿಡಿಲಿ ಆರತ್ರೂ ಹೆಚ್ಚು ಮಾತಾಡ್ಲೆ ಆಯಿದಿಲ್ಲೆ ಹೇಳಿ ಒಂದು ಬೇಜಾರಿದ್ದು. ಮನ್ನಿಸೆಕ್ಕು… ಮತ್ತೊಂದಾರಿ ಧನ್ಯವಾದಂಗೊ…

  7. ಹರೇ ರಾಮ

    ಅಪ್ಪಪ್ಪು… ಆನು ಬಂದು ನೋಡಿಯಪ್ಪಗ ಒಂದು ಕಾಲಿ ಕುರ್ಚಿಯೂ ಕಂಡತ್ತಿಲ್ಲೆ. ಹಾಂಗಾಗಿ ಅಂತರ್ಜಾಲಲ್ಲಿ ಲೈವ್ ನೋಡಿಗೊಂಬ ಸೌಕರ್ಯವೂ ಇತ್ತಿದ್ದ ಕಾರಣ ಇಲ್ಲಿಂದಲೇ ನೋಡಿ ಆನಂದಪಟ್ಟುಗೊಂಡೆ.

    ಕಾರ್ಯಕ್ರಮ ಎಲ್ಲೋರಿಂಗೂ ಕೊಶಿ ಆತು ಹೇಳ್ತದರ್ಲಿ ನವಗೂ ಹೆಮ್ಮೆ ಆತು. ಇನ್ನಷ್ಟು ಪಟ-ವರದಿಗಳ ಬೈಲಿಲ್ಲಿ ನಿರೀಕ್ಷಿಸುತ್ತು. ಬೈಲ ಅಕ್ಕ ಭಾವಂದ್ರ ಸುಧಾರಿಕೆ, ನೆರೆದ ಜೆನರ ಪ್ರೀತಿಯ ಸಹಕಾರ ಕಾರ್ಯಕ್ರಮವ ಯಶಸ್ವಿಗೊಳಿಸಿತ್ತು .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×