- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಹೋಯ್!
ಆಕಾಶವಾಣಿ ವಾರ್ತೆಗಳು, ಓದುತ್ತಿರುವವರು ಜೇ ಬಾಲಚಂದ್ರಾ..
ಆಕಾಶವಾಣಿ, ಪ್ರದೇಶ ಸಮಾಚಾರ. ಓದುತ್ತಿರುವವರು ಮಧ್ವರಾಜ್..
ಇಯಂ ಆಕಾಶವಾಣಿ, ಸಂಪ್ರತಿ ವಾರ್ತಾಃ ಶ್ರೂಯಂತಾಂ. ಪ್ರವಾಚಕಃ ಬಲದೇವಾನಂದ ಸಾಗರಃ
ಈಗೀಗ ರಜ ರೇಡ್ಯ ಕೇಳ್ತದು ಕಮ್ಮಿ ಆದರೂ, ಮದಲಿಂಗೆ ಹೆಚ್ಚಿನೋರುದೇ ವಾರ್ತೆ- ಪ್ರದೇಶಸಮಾಚಾರ ಕೇಳಿಯೇ ದೊಡ್ಡ ಆದ್ದು. ಅಲ್ಲದಾ?
ಈಗಳೂ ರೇಡ್ಯ ಕೇಳೆಕ್ಕು ಹೇಳಿ ಆವುತ್ತಾ?
ಇದಾ, ಇಂಟರ್ನಟ್ಟಿಲೇ ಸಿಕ್ಕುತ್ತು:
ವಾರ್ತೆ:
ವಾರ್ತೆ -ಹೇಳಿರೆ ದೆಹಲಿಯ ಕೇಂದ್ರಸ್ಥಾನಂದ ರಚನೆ ಆಗಿ ಮೂಡಿ ಬಪ್ಪ ಕಾರ್ಯಕ್ರಮ.
ಎಲ್ಲಾ ಭಾಶೆಗಳಲ್ಲಿಯೂ ಈ ವಾರ್ತೆ ಪ್ರಸಾರ ಆವುತ್ತು.
ಏಳೂ-ಮೂವತ್ತೈದರ ವಾರ್ತೆ ತಪ್ಪುಸಿರೆ ಆ ದಿನ ಎಂತದೋ ಕಳಕ್ಕೊಂಡ ಭಾವನೆ ಬಕ್ಕು ಮದಲಾಣೋರಿಂಗೆ.
ವಾರ್ತೆ – ಧ್ವನಿ ರೂಪ:
ಇದಾ, ಎಲ್ಲಾ ವಾರ್ತೆಗಳನ್ನೂ ಇಲ್ಲಿ ನೇಲುಸುತ್ತವಿದಾ:
ಬೇಕಾದ್ದರ ಕಂಪ್ಯೂಟರಿಂಗೆ ಇಳುಸಿಗೊಂಡು, ಬೇಕಪ್ಪಗ ಕೇಳುಲಕ್ಕು.
ವಾರ್ತೆ – ಬರಹ ರೂಪ:
ನಮ್ಮ ಹತ್ತರೆ ಕೇಳುಲೆ ಸಮಗಟ್ಟು ವ್ಯವಸ್ಥೆ ಇಲ್ಲೆಯೋ, ಚಿಂತೆ ಇಲ್ಲೆ.
ಇದೇ ವಾರ್ತೆ ಬರಹರೂಪಲ್ಲಿಯೂ ಸಿಕ್ಕುತ್ತು. ಪೀಡೀಯಪ್ಪಿನ ಓದುತ್ತ ಸೋಪ್ಟುವೇರು ಹಾಕಿಂಡ್ರೆ ಮುಗಾತು.
ಪ್ರದೇಶ ಸಮಾಚಾರ:
ವಾರ್ತೆ ಆತು, ಇನ್ನು ಸ್ಥಳೀಯ ಶುದ್ದಿಗೊ ಇಪ್ಪ ಪ್ರದೇಶಸಮಾಚಾರ ಆಗೆಡದೋ.
ಅದುದೇ ಇದ್ದು.
ಇದಾ, ಈ ಪುಟಲ್ಲಿ ಎಲ್ಲಾ ಊರಿನ ಪ್ರದೇಶ ಸಮಾಚಾರಂಗಳೂ ಸಿಕ್ಕುತ್ತು:
http://newsonair.com/Regional-Audio-Bulletins-News-schedule.asp
ನಿಂಗಳ ಪೈಕಿಯೋರಿಂಗೆ ಈ ಸಂಕೊಲೆ ಕೊಟ್ಟು, ಅವಕ್ಕುದೇ ಒಂದರಿ ಬಾಲ್ಯ ನೆಂಪು ಮಾಡುಸಿಕೊಡಿ ಆತೋ?! 🙂
~*~*~
”ಸವಿನೆನಪುಗಳು ಬೇಕು ಸವಿಯಲೀ ಬದುಕು” ಹೇಳೊದು ನೆ೦ಪಾತು.
ಕಸ್ತಲೆಗೆ ೬;೪೦ರ ಪ್ರದೇಶಸಮಾಚಾರ ಕಳುದು ಕೃಷಿರ೦ಗಲ್ಲಿ ಬ೦ದುಗೊ೦ಡಿದ್ದ “ತ್ಯಾ೦ಪನ ಮಾಹಿತಿ”ಯ ಕೆ.ಆರ್.ರೈಯ ಸ್ವರ ಮನಸ್ಸಿನ ಒಳ ಅಲೆಅಲೆಯಾಗಿ ಬಪ್ಪಲೆ ಶುರು ಆತು!!
ಕಸ್ತಲೆಗೆ ಏಳೂವರೆ ಹೊಡವಗ ಪೇಟೆಧಾರಣೆ,ಅದು ಕಳುದು ಕನ್ನಡ ವಾರ್ತೆ ಇದು ದಿನನಿತ್ಯ ತಪ್ಪದ್ದೆ ಕೇಳಿಗೊ೦ಡಿದ್ದದು ಎಲ್ಲಾ ಒ೦ದರಿ ಕಣ್ಣ ಮು೦ದೆ ಆ೦ಜಿತ್ತಿದಾ.
೧೯೮೩ ರ ವಿಶ್ವಕಪ್ ಕ್ರಿಕೆಟಿಲಿ ರಿಚರ್ಡನ ಕ್ಯಾಚ್ ಹಿಡುದು ಔಟ್ ಮಾಡಿದ ಕಪಿಲದೇವನ ಅದ್ಭುತ ಆಟ,ಅ೦ದು ಭಾರತ ಗೆದ್ದದರ ಇರುಳು ಕೇಳಿ ಕೊಶಿಪಟ್ಟದೂ ನೆ೦ಪಾವುತ್ತ್ತು.
ಧನ್ಯವಾದ ಈ ಚೊಕ್ಕದ ಶುದ್ದಿಗೆ.
ಒಳ್ಳೆಯ ಶುದ್ದಿ. ರೇಡ್ಯದ ಸಂಕೊಲೆ ಕೊಟ್ಟದ್ದಕ್ಕೆ ಶುದ್ದಿಕಾರಂಗೆ ಧನ್ಯವಾದಂಗೊ 🙂
ಮತ್ತೆ ಬೈಲಿನವಕ್ಕೆ ಎಲ್ಲಾ ದೇಶದ ಎಲ್ಲಾ ರೀತಿಯ ಸಾವಿರಕ್ಕಿಂತಲೂ ಹೆಚ್ಚಿನ ರೇಡ್ಯಂಗಳ ಕೇಳಕ್ಕಾರೆ “RadioZilla” ಹೇಳುವ ಸೋಫ್ಟುವೇಯರು ಇದ್ದು. ಅದರ ಡೌನ್ ಲೋಡು ಮಾಡುಲೆ ಇಪ್ಪ ಸಂಕೊಲೆ ಇಲ್ಲಿದ್ದು.
http://www.theradiozilla.com/download.html
ಅಪ್ಪಪ್ಪು..
ವಾರುತೆ ರೇಡ್ಯಲ್ಲಿ ಆನುದೆ ಕೇಳಿಯೊ೦ಡು ಇತ್ತೆ…
” ಸ೦ಪತಿ ವಾರ್ಥಾ ಶೂಯ೦ತಾ೦, ಮಮ…” ಹೇಳಿ
ರೇಡಿಯೊ ವಾರ್ತೆ ಎನಗೆ ಈಗಲೂ ಇಷ್ಟ. ದಿನಾ ಕೇಳುತ್ತೆ.ಮೊದಲು ರಂಗ ರಾವ್ [ಕನ್ನಡ],ರಾಮಚಂದ್ರನ್[ಮಲಯಾಳ], ಸ್ಫೂರ್ತಿ ಸಿನ್ಹಾ[ಆಂಗ್ಲ],ಕೃಷ್ಣ ಕುಮಾರ್ ಭಾರ್ಗವ್[ಹಿಂದಿ],ಮಂಗಲಾ ಕೌಠೇಕರ[ಸಂಸ್ಕೃತ] ಓದುವ ವಾರ್ತೆ ಕೇಳುದೇ ಒಂದು ಕುಷಿ.ಚುನಾವಣಾ ವಾರ್ತೆ ನಾಗಮಣಿ ಎಸ್.ರಾವ್,ರಾಮಚಂದ್ರನ್ ಓದಿರೆ ಎಂತವಂಗೂ ಅರ್ಥ ಅಕ್ಕು.
ಭಾರೀ ಲಾಯ್ಕದ ಶುದ್ದಿ.
ವಾರ್ತೆಗಾಪ್ಪಗ ಎಲ್ಲಿದ್ದರೂ ಓಡಿಗೊಂಡು ಬಂದುಗೊಂಡಿದ್ದದು ನೆನಪಾತು.
ವಾರ್ತೆ ಓದುವವರೊಟ್ಟಿಂಗೆ ನವಗೂ ಓದಲೇ ಖುಶೀ ಆವ್ತು.
ಧನ್ಯವಾದ೦ಗೊ..
ಹಳೇ ಕಾಲಲ್ಲಿ ರೇಡಿಯೋ-ಕ್ಕೆ ಒಳ್ಳೇ ಪ್ರಾಧಾನ್ಯ ಇದ್ದತ್ತು. ಆನು ಸಣ್ಣಾಗಿಪ್ಪಗ ಶಾಲೆಗೆ ಹೋಪಲೆ ಸಮಯ ಕೂಡ ಲೆಕ್ಕ ಹಾಕಿ೦ಡಿತ್ತಿದ್ದು ರೇಡಿಯೋ ಕೇಳಿಯೇ. ಉದಿಯಪ್ಪಗ ೬-೪೫ ರ ಪ್ರಾದೇಶಿಕ ವಾರ್ತೆಗೊ, ೬-೫೫ ರ ಸ೦ಸ್ಕೃತ ವಾರ್ತೆಗೊ, ೮ ಗ೦ಟೆಗೆ ಡೆಲ್ಲಿ ಸ್ಟೇಶನಿನ ಸಹಪ್ರಸಾರಲ್ಲಿ ಬತ್ತ ಇ೦ಗ್ಲೀಷು ಮತ್ತು ಹಿ೦ದಿ ವಾರ್ತೆಗೊ, ಕಸ್ತಲೆಪ್ಪಗ ೮ ಘ೦ಟೆಯ ಯುವವಾಣಿ, ೮-೪೫ರ ಹಿ೦ದಿ ವಾರ್ತೆಗೊ, ೯ ಘ೦ಟೆಯ ಇ೦ಗ್ಲೀಷು ವಾರ್ತೆಗೊ, ೯-೩೦ಕ್ಕೆ ಬುಧವಾರ ಮ೦ಗ್ಳೂರೊ ಆಕಾಶವಾಣಿ೦ದ ಬ೦ದ೦ಡಿತ್ತಿದ್ದ ಯಕ್ಶಗಾನ ತಾಳಮದ್ದಳೆ, ಧಾರವಾಡ ನಿಲಯದ ನಾಟಕ೦ಗೊ, ಡೆಲ್ಲಿ / ತಮಿಳು ಸ್ಟೇಷನುಗಳಿ೦ದ ಬ೦ದ೦ಡಿತ್ತಿದ್ದ ಶಾಸ್ತ್ರೀಯ ಸ೦ಗೀತ ಕಾರ್ಯಕ್ರಮ೦ಗೊ.. ರೇಡಿಯೋ ಸಿಲೋನ್ (ಶ್ರೀಲ೦ಕಾ) ಪ್ರಸಾರ ಮಾಡಿ೦ಡಿತ್ತಿದ್ದ ದಕ್ಷಿಣ ಭಾರತೀಯ ಭಾಷಾ ಕಾರ್ಯಕ್ರಮ೦ಗೊ.. ಬಿ ಬಿ ಸಿ ವಾರ್ತೆಗೊ.. ಎಲ್ಲ ನೆ೦ಪಾತು..
ಇದು ಮಾ೦ತ್ರ ಅಲ್ಲದ್ದೆ ಮೊದಲು ಈಗಾಣಷ್ಟು ಟಿ ವಿ ಎಲ್ಲ ಇಲ್ಲದ್ದೆ ಇಪ್ಪ ಸಮಯಲ್ಲಿ ಕೇಳಿ೦ಡಿತ್ತಿದ್ದ ಕ್ರಿಕೆಟ್ ಆಟ, ಮೈಸೂರು ದಸರಾ, ಶಬರಿಮಲೆಯ ಮಕರಜ್ಯೋತಿ ಉತ್ಸವದ ವೀಕ್ಷಕ ವಿವರಣೆ ಎಲ್ಲ ಮನಸ್ಸಿಲ್ಲಿ ಹಾದು ಹೋತು.
ಒಪ್ಪ೦ಗೊ..
ಬೇಡ ಬೇಡ ಹೇಳಿ ಒಂದೊಂದರಿ ಕಂಡತ್ತು ಕಂಡ್ರೂ , ಕೆಲವು… ಅಲ್ಲಾ , ಹಲವು ಸರ್ತಿ ಆ ಹಳೆ ಸಂಗತಿಗಳೇ ಸ್ವಾರಸ್ಯ, ಹಿತ , ಲಾಯಕ ಅಪ್ಪದು ಅಪ್ಪೋ. (ಆರೋ ಹೇಳಿದ್ದವಡಾ ಹೊಸ ಪ್ರಿಯತಮೆಗಿಂತ ಹಳೆ ಹೆಂಡತೀನೇ ವಾಸಿ!!)
ಎಂತಾರು, ಎಲ್ಲಿಂದಲೋ ಹುಡ್ಕಿ ಕೂದು ಸಂಗ್ರಹಿಸಿ ಶುದ್ದಿ ಮಾಡಿ ಬೈಲಿಲಿ ಹಂಚಿದ್ದಕ್ಕೆ ‘ಧನ್ಯವಾದ’ ಹೇಳಿ ಹೇಳದ್ದೆ ಕಳಿಯ ಹೇಳಿತ್ತು ‘ಚೆನ್ನೈವಾಣಿ’
ಇದು ಒಳ್ಳೆ ಉಪಯೋಗ ಅಪ್ಪಲೇಖನ (ಕಾಟಂಕೋಟಿ?) ಹಳೇದರ ನೆಂಪು ಮಾಡಿ ಕೊಟ್ಟಂಗಾತು. ಹಾಂಗೇ reference ಸಿಕ್ಕಿದಾಂಗಾತು. ಧನ್ಯವಾದಂಗೊ. ಸೀಎಚ್ಚೆಸ್ಸ್.
Aagina kaalada radio keluva majaane bere……..
Eega koti rupaayi kottaroo aa anubhava sikkuttille……..:-)
ಒಳ್ಳೆ ಮಾಹಿತಿ.
ಪೇಟೆಲಿಪ್ಪವು, ರೇಡಿಯೋಲ್ಲಿ ವಾರ್ತೆ ಕೇಳುವವು ತುಂಬಾ ಕಮ್ಮಿ ಜೆನಂಗೊ ಇಕ್ಕಷ್ಟೆ.
ಹಳ್ಳಿಲಿ ಈಗಳೂ ರೇಡಿಯೋಲ್ಲಿ ಕೇಳುವವು ಇದ್ದವು.
ಎಫ್.ಎಂ ಬಂದ ನಂತ್ರ ರೇಡಿಯೋ ಕೇಳುವವು ಇದ್ದವು, ಆದರೆ ವಾರ್ತೆಗೆ ಬೇಕಾಗಿ ಅಲ್ಲ.