Oppanna.com

ಬದಲಾಗದ್ದದು ಬದಲಾವಣೆ ಮಾಂತ್ರ !

ಬರದೋರು :   ಸುವರ್ಣಿನೀ ಕೊಣಲೆ    on   12/09/2012    17 ಒಪ್ಪಂಗೊ

ಸುವರ್ಣಿನೀ ಕೊಣಲೆ

ಬದಲಾವಣೆಯೇ ಕಾಣದ್ದ ಬದುಕಿಂಗೆ ಈ ಊರಿನ ಋಣ ಮುಗುತ್ತು. ನಾಳೆಂದ ಕೆಲವು ದಿನಂಗಳ ಪ್ರಯಾಣ…ಹೊಸ ಜಾಗೆ, ಹೊಸ ಜೀವನ ಅಲ್ಲಿ ಬಡತನ ಇಲ್ಲೆ, ಸಮೃದ್ಧತೆಯೇ ಎಲ್ಲ…ಆದರೂ ಹಲವು ತಲೆಮಾರುಗಳಿಂದ ನೆಲೆಸಿದ್ದ ಹುಟ್ಟೂರಿನ ಬಿಡುವಗ ಹೊಟ್ಟೆ ಒಳದಿಕ್ಕೆ ಸಂಕಟ ಆತು. ದೂರದ ಬೆಟ್ಟ ನಿರಾಶೆಗೊಳ್ಸ ಹೇಳ್ತ ಆಶೆಂದ ಒಂದು ಬದಲಾವಣೆಯ ದಿಕ್ಕಿಲ್ಲಿ ನಡದ್ದದು ಫಲ ಕೊಟ್ಟತ್ತು. ಈ ಹೊಸ ಊರು ಹಸಿರು ತುಂಬಿದ ಊರು, ಹಸಿವು ನೀಗ್ಸುವ ಊರು…ಎಂಗಳನ್ನೂ ಪ್ರೀತಿಲಿ ಅಪ್ಪಿಗೊಂಡತ್ತು. ಹಳತ್ತೆಲ್ಲ ಮರತ್ತು ಹೋಪಾಂಗೆ. ಹಳೆ ಜನ ಇಲ್ಲೆ, ಹಳೆ ಜೀವನ ಇಲ್ಲೆ, ಹಳೆ ಕಷ್ಟ ಇಲ್ಲೆ.. ಹಳೆ ನೆಂಟ್ರಿಲ್ಲೆ…ಎಲ್ಲವೂ ಹೊಸತ್ತು. ಬದಲಾವಣೆಗಳ ಅಳವಡಿಸಿಗೊಂಡು ಇಲ್ಲಿಯಾಣವ್ವೇ ಆಗಿ ಈಗ ಕೆಲವು ವರ್ಷಂಗಳೇ ಕಳುತ್ತು ಈಗ. ಕಣ್ಣಿಂಗೆ ಕಾಂಬಷ್ಟೂ ದೂರಕ್ಕೆ ನಮ್ಮದೇ ಗೆದ್ದೆ-ಗುಡ್ಡೆ. ಆರ ಹಂಗೂ ಇಲ್ಲೆ. ಆ ಪಚ್ಚೆ ಸಮುದ್ರದ ನಡೂಕೆ ಒಂದು ಮನೆ. ಅಲ್ಲಿ ನೆಮ್ಮದಿಯ ಸಮೃದ್ಧಿಯ ಸಂಸಾರ.
ಒಂದು ದಿನ ಎಳ್ಳಮಾಸೆಯ ಸಮುದ್ರಸ್ನಾನಕ್ಕೆ ಬೇಕಾಗಿ ಹೋದಪ್ಪಗ ಅಲ್ಲಿ ಕೈಗೆ ಸಿಕ್ಕಿದ ಒಂದು ಚೆಂಬು , ಅದರೊಳ ಬಂಧಿ ಆಗಿದ್ದ ದೈವ. ಬಹುಶಃ ಆ ದೈವವ ಬಂಧಮುಕ್ತಗೊಳ್ಸುಲೆ ಬೇಕಾಗಿಯೇ ಆ ಊರಿಂದ ಈ ಊರಿಂಗೆ ಬರ್ಸಿದ್ದು ಕಾಣ್ತು. ಒಂದು ಮಹತ್ತರ ಬದಲಾವಣೆಗೆ ಒಂದು ನಿಮಿತ್ತ ಅಷ್ಟೇ. ಎಂತ ಮಾಡೆಕು ಮಾಡ್ಲಾಗ ಹೇಳುವ ಅರಿವಿಲ್ಲೆ..ಮನೆಗೆ ತಂದು ದೈವವ ಸ್ಥಾಪಿಸಿ ಆತು. ದೈವವ ಸ್ಥಾಪಿಸಿದ ಮೇಲೆ ಆ ಮನೆಲಿ ಇಪ್ಪಲಾವ್ತೋ? ಇಡೀ ಮನೆ ದೈವಕ್ಕೆ ಬಿಟ್ಟು ಹತ್ತರೆಯೇ ಇನ್ನೊಂದು ಮನೆಕಟ್ಟಿ ಕೂದಾತು. ಪಂಚಾಂಗ ಮಡುಗ್ಸಿ ನೋಡಿ ದೈವಕ್ಕೆ ಬೇಕು ಬೇಕಾದ ಸೇವೆ ಮಾಡಿ ಆತು. ದೇವರ-ದೈವದ ಅನುಗ್ರಹಂದ ಸಂಪತ್ತಿಗೆ, ಆರೋಗ್ಯಕ್ಕೆ ಯಾವುದೇ ಕೊರತೆ ಇಲ್ಲದ್ದೆ, ಊರಿಂಗೆ ಪ್ರಿಯರಾಗಿ ಸಾಗಿತ್ತು ಕುಟುಂಬದ ರಥ. ತಲೆಮಾರುಗೊ ಕಳುತ್ತು. ಆದರೆ ಬದಲಾವಣೆಗೊ ಒಟ್ಟಿಂಗೇ ಇದ್ದತ್ತು.
ಆದರೊಂದರಿ ಮಾನವ ಸಹಜ ಅಚಾತುರ್ಯ ನಡದು ಹೋತು. ದೈವದ ಕೋಲ ನಡವಗ ಮನೆಗೆ ಬಂದು ಹರಸುದು ಪದ್ಧತಿ. ಚೆಂಬಿನೊಳ ಬಂಧಿ ಆಗಿದ್ದ ದೈವಕ್ಕೆ ಚೆಂಬು ಕಂಡರಾಗ. ಮನೆ ಜಗಿಲಿಲಿ ಚೆಂಬಿನಳಗೆ ಮಡುಗಿದ್ದತ್ತು…ಮೆಟ್ಲಿಲ್ಲಿಯೇ ಅದರ ಕಂಡು ಒಂದು ಆರ್ಭಟ ಕೊಟ್ಟು ದೈವ ಕವುಂಚಿ ಬಿದ್ದತ್ತು… ಅಲ್ಲಿಂದ ಕೋಲವೂ ಇಲ್ಲೆ ಮನೆಲಿ ಮನಸ್ಸಿಲ್ಲಿ ನೆಮ್ಮದಿ ಸುಖವೂ ಇಲ್ಲೆ. ಅದೊಂದು ನೆಪ ಆತೋ ಅಥವಾ ಕಾರಣವೇ ಆತೋ… ಅಂತೂ ಮತ್ತೊಂದು ದೊಡ್ಡ ಬದಲಾವಣೆಗೆ ಕಾರಣ ಆತು.
ಹಲವು ವರ್ಷ, ಮತ್ತೆರಡು ತಲೆಮಾರು ಕಳುತ್ತು. ಮತ್ತೆ ಬದಲಾವಣೆಯ ಘಟ್ಟ. ಒಂದಾನೊಂದು ಕಾಲಲ್ಲಿ ಅದಾವುದೋ ಕಾಣದ್ದ ಊರಿಂದ ಇಲ್ಲಿ ಬಂದು ನೆಲೆಸಿದ ಕುಟುಂಬದ ಜನ ಇಲ್ಲಿಂದ ಮತ್ತೆ ಬೇರೆ ಬೇರೆ ದಿಕ್ಕಿಲ್ಲಿ ಪಯಣಿಸಿದವ್ವು…ಮತ್ತೊಂದು ಬದಲಾವಣೆಯ ಬಯಸಿ. ಇನ್ನುಳುದವ್ವು ಅಲ್ಲಿಯೇ ಇದ್ದು ಅಷ್ಟೂ ವರ್ಷಂದ ನಡಯದ್ದ ದೈವದ ಕೋಲವ ಮತ್ತೆ ಶುರುಮಾಡುವ ಪ್ರಯತ್ನ ನಡಶಿದವ್ವು. ಬಹುಶಃ ಇದರಿಂದಾಗಿ ಎಲ್ಲ ಸಮಸ್ಯೆಗಳಿಂಗೂ ಪರಿಹಾರ ಸಿಕ್ಕುಗು ಹೇಳುವ ಒಂದು ಆಶೆಂದಾಗಿ, ಹಿಂದೆ ನಡದ ಅಚಾತುರ್ಯದ ಪ್ರಾಯಶ್ಚಿತಕ್ಕಾಗಿ.
ಇಂದು ಅಲ್ಲಿ ಇಪ್ಪೋರು ಕೆಲವು ಜನ ಮಾಂತ್ರ. ಉಳುದೋರು ದೂರ ದೂರದ ಪೇಟೆಗಳಲ್ಲಿ ಎಷ್ಟೋ ರೀತಿಲಿ ಬದಲಾವಣೆ ಹೊಂದಿದ ಜೀವನ ನಡಶುತ್ತಾ ಇದ್ದವು. ಒಬ್ಬನೊಬ್ಬನ ಗುರ್ತವೇ ಇಲ್ಲದ್ದೆ ಹಂಚಿ ಹೋದ ಕುಟುಂಬದ ಮಕ್ಕಳ ಒಂದು ಮಾಡುವವ್ವು ಆರೂ ಉಳುದ್ದವಿಲ್ಲೆ. ದೈವವ ಮರತ್ತು ಜೀವನ ನಡಶುವಗ ದೈವಕ್ಕೆ ಅವರ ಮರತ್ತಿದಿಲ್ಲೆ. ಮತ್ತೆ ಪಂಚಾಂಗ ನೋಡ್ಸುವ ಮನಸ್ಸಾತು ಅಲ್ಲಿಯಾಣ ಕುಟುಂಬಸ್ಥರಿಂಗೆ. ಮತ್ತೆ ದೈವದ ಕೋಲ ನಡಶುವ ಸಂಕಲ್ಪ ಆತು. ಊರು ಪರವೂರಿಲ್ಲಿದ್ದ ಕುಟುಂಬಸ್ಥರು ಆ ಸಂದರ್ಭಲ್ಲಿ ಬಂದು ಸೇರಿದವು. ಎಷ್ಟೋ ತಲೆಮಾರು ಕಳುದ ಮತ್ತೆ ಈ ಒಂದು ಬದಲಾವಣೆಗೆ ಕಾರಣ …ಬಹುಶಃ ಅಲ್ಲಿಯೇ ಇಪ್ಪೋರು ಎಷ್ಟೇ ತಲೆಮಾರು ಕಳುದರೂ ಭಕ್ತಿಂದ ದೈವಕ್ಕೆ ದೀಪ ಹೊತ್ತುಸಿ ಬೊಂಡ ಕೊಡುವ ಶ್ರದ್ಧೆಯೇ.
ಈ ಕುಟುಂಬದ ತಲೆಮಾರುಗಳಿಂದ ನಡದ ಬದಲಾವಣೆಗಳ ಬಗ್ಗೆ ಇಷ್ಟೊಂದು ತಿಳುದ ಆನು ಆರು ಹೇಳ್ತ ಪ್ರಶ್ನೆಯೋ ನಿಂಗಳದ್ದು? ಪ್ರತಿಯೊಂದರಲ್ಲಿಯೂ ಪ್ರತಿಯೊಬ್ಬನಲ್ಲಿಯೂ ಬದಲಾವಣೆ ಮೂಡ್ಸುದೇ ಆನು. ಆನು ಮಾಡಿದ ನಿಯಮವೇ ಎಲ್ಲರ ಜೀವನಲ್ಲಿ ಕಾಂಬ, ಕಾಣಲೇ ಬೇಕಾದ ಬದಲಾವಣೆ. ಆನು ಪ್ರಕೃತಿ. ಈ ನಿರಂತರ ಬದಲಾವಣೆಯ ಜವಾಬ್ದಾರಿಯ ಎನಗೆ ವಹಿಸಿದ್ದು ಆ ಪರಮಾತ್ಮ. ಅದಕ್ಕೆ ಕಾರಣವೂ ಇದ್ದು. ಪರಮಾತ್ಮ ಬದಲಾವಣೆಯೇ ಇಲ್ಲದ್ದ ನಿತ್ಯಸತ್ಯ. ಅಲ್ಲಿಯಾಣ ಸತ್ಯವ ಅರಿಯಕಾದರೆ ಈ ಬದಲಾವಣೆಯ ಮಿಥ್ಯೆಯ ಅರಿವಾಯಕಾದ್ದು ಮುಖ್ಯ. ಪ್ರಕೃತಿಯ ಮಾಯೆಗಳ ಅರಿತರಷ್ಟೇ ಅಲ್ಲದೋ ಪರಮಪುರುಷನ ಅರಿವಲೆ ಸಾಧ್ಯ??”

——————————————*************************————————————–

’The only constant thing in the world is change’ ಹೇಳಿ ಒಂದು ಮಾತಿದ್ದು. ಪ್ರಪಂಚಲ್ಲಿ ಒಂದೇ ಹಾಂಗೆ ನಡೆತ್ತಾ ಇಪ್ಪದು ಒಂದೇ ಒಂದು – ಅದು ಬದಲಾವಣೆ ಅಡ !! ಎಷ್ಟು ವಿಚಿತ್ರ ಕಾಣ್ತು ಈ ವಾಕ್ಯ. ಒಂದಕ್ಕೊಂದು ವಿರುದ್ಧ ಅರ್ಥ ಕೊಡುವ ಎರಡು ಪದಂಗೊ ಇಲ್ಲಿ ಒಂದಕ್ಕೊಂದು ಪೂರಕವಾಗಿ ಕಾಣ್ತು. ಆದರೆ ಈ ಮಾತಿನ ಅರ್ಥವ ನಾವು ಒಪ್ಪಲೇ ಬೇಕು. ನಾವು ಬಯಸಿರೂ ಬಯಸದ್ದರೂ ಬದಲಾವಣೆ ಆವ್ತಾ ಇರ್ತು. ಅದುವೇ ನಿತ್ಯ ಸತ್ಯ. ಈ ಕ್ಷಣ ಇದ್ದ ಹಾಂಗೆ ಇನ್ನೊಂದು ಕ್ಷಣ ಇಲ್ಲೆ. ಈ ಬದಲಾವಣೆಗಳ ಅಳವಡಿಸಿಗೊಂಡು, ಅದರೊಟ್ಟಿಂಗೆ ಹೋರಾಡಿಗೊಂಡು, ಬದಲಾವಣೆಗಳಿಂಗೆ ಅನುಗುಣವಾಗಿ ಬದುಕುವ ನಿರಂತರ ಪ್ರಯತ್ನ ನಮ್ಮ ಬದುಕು. ಹುಟ್ಟಿಂದ ಸಾವಿನ ವರೆಗೆ ಬದಲಾವಣೆಗೊ ಆವ್ತಾ ಇರ್ತು. ನಮ್ಮೊಟ್ಟಿಂಗೆ ಬದಲಾವಣೆ, ನಮ್ಮೊಳದಿಕ್ಕೂ ಬದಲಾವಣೆ ! ನಮ್ಮ ಬೈಲೂ ಕಳೆದ ನಾಲ್ಕು ವರ್ಷಲ್ಲಿ ಎಷ್ಟು ಬದಲಾಯ್ದು ಅಲ್ಲದೋ? ಆದರೆ ಒಂದೇ ಹಾಂಗಿಪ್ಪದು ನಮ್ಮೊಳಾಣ ಪ್ರೀತಿ ಮತ್ತೆ ಗುರುಗಳ ಆಶೀರ್ವಾದಂಗೊ- ಅದುವೇ ಸತ್ಯ.
ಈ ಬದಲಾವಣೆಗಳ ಮೇಲೆ ಎನಗಿಂದು ಇಷ್ಟು ಒಲವು ಬಪ್ಪಲೆ ಕಾರಣ ಇಲ್ಲದ್ದಿಲ್ಲೆ. ಇಂದು ಹೊತ್ತೋಪಗ ಪುರ್ಸೊತ್ತಿಲ್ಲಿ ಕೂದೊಂಡು ಅಪ್ಪ ಅಮ್ಮನೊಟ್ಟಿಂಗೆ ಮಾತಾಡುವಗ ಅವರ ಬಾಲ್ಯದ ಶುದ್ದಿ ಎಲ್ಲ ಬಂತು. ಎನ್ನ ಪೂರ್ವಜರ ಬಗ್ಗೆ ತಿಳ್ಕೊಂಬ ಬಗ್ಗೆ ಎನಗೂ ಆಸಕ್ತಿ ಹುಟ್ಟಿತ್ತು. ಹಾಂಗೆ ಅಮ್ಮನ ನೆನಪಿನ ಅಜ್ಜಿಮೂಟೆಂದ ಒಂದೊಂದೇ ವಿಷಯ ಸಿಕ್ಕುಲೆ ಶುರುವಾತು, ಕೆಲವು ಶುದ್ದಿಗೊ ಅಜ್ಜಿಯ ಹಳೆ ಅರಿವೆಯ ಹಾಂಗೆ ಕುಂಬಾಗಿದ್ದತ್ತು. ಆದರೂ ಆ ಎಲ್ಲ ಕುಂಬಾದ, ಕುಂಬಾಗದ್ದ ಶುದ್ದಿಗಳ ಕೇಳಿ ಎನ್ನ ಅಜ್ಜನ ಅಜ್ಜನ ಅಜ್ಜನ.. ಎಲ್ಲರನ್ನೂ ಕಂಡಷ್ಟು ಸಂತೋಷ ಆತು. ಅದರೊಟ್ಟಿಂಗೇ ಜೀವನದ ಬದಲಾವಣೆಗಳ ಸತ್ಯವ ಸ್ಪಷ್ಟವಾಗಿ ತೋರ್ಸುಲೆ ಸುರುಮಾಡಿತ್ತು ಆ ನೆನಪುಗೊ. ಬದಲಾವಣೆ ಒಂದೇ ನಿರಂತರ ಹೇಳುವ ಮಾತು ಮತ್ತೆ ಮತ್ತೆ ಮನಸ್ಸಿಂಗೆ ಕಾಂಬಲೆ ಶುರು ಆತು. ಇದರ ಅಲ್ಲಿಗೇ ಬಿಡುವ ಮನಸ್ಸಾಯ್ದಿಲ್ಲೆ. ಆ ಅರ್ಧಂಬರ್ಧ ಶುದ್ದಿಗಳನ್ನೇ ತೆಕ್ಕೊಂಡು ಒಂದು ಕಥೆ ಹೆಣೆವ ಪ್ರಯತ್ನ ಮಾಡಿದೆ… ಈಗ ಅದರ ನಿಂಗಳೊಟ್ಟಿಂಗೆ ಹಂಚಿಗೊಂಬ ಪ್ರಯತ್ನ ಮಾಡಿದೆ. 
ಹವ್ಯಕರಿಂದ ಬೇರೆ ಉದಾಹರಣೆ ಬೇಕಾ ಬದಲಾವಣೆಗೆ? ಉತ್ತರ ಭಾರತದ ಅದಾವುದೋ ಊರಿಂದ ಕರ್ನಾಟಕದ ಬನವಾಸಿಗೆ ಬಂದು ಇಲ್ಲಿಯಾಣ ಭಾಷೆಯ ಕಲ್ತು ಮತ್ತೆ ಅಲ್ಲಿಂದ ಬೇರೆ ಬೇರೆ ಊರಿಂಗೆ ಹೋಗಿ ನೆಲೆಸಿ ಇಂದು ತನ್ನದೇ ಆದ ಭಾಷೆ ಮತ್ತೆ ಜೀವನಶೈಲಿಯೊಟ್ಟಿಂಗೆ ಹಾಲಿನೊಳ ಸಕ್ಕರೆಯ ಹಾಂಗೆ ಸಮಾಜಲ್ಲಿ ಬದುಕ್ಕುತ್ತಾ ಇಪ್ಪ ಸಮಸ್ತ ಹವ್ಯಕರಿಂಗೆ ಈ ಶುದ್ಧಿ ಸಮರ್ಪಿತ.

ನಿಂಗಳ,
ಸುವರ್ಣಿನೀ ಕೊಣಲೆ.

17 thoughts on “ಬದಲಾಗದ್ದದು ಬದಲಾವಣೆ ಮಾಂತ್ರ !

  1. ಡಾಗುಟ್ರಕ್ಕಾ,

    ಕಾಡಿಲಿ ನೆಡವ ಸಿ೦ಹವೂ ಓ ಅಷ್ಟು ದೂರ ನೆಡದಿಕ್ಕಿ ಒ೦ದರಿ ಬ೦ದ ದಾರಿಯ ತಿರುಗಿ ನೋಡ್ತಡಾ.ಸಿ೦ಹಾವಲೋಕನ ಹೇಳಿ ಅದಕ್ಕೆ ಹೆಸರಾತು.ಹಾ೦ಗೆಯೇ ನಾವು,ನಮ್ಮ ಹೆರಿಯೋರು ಸಾಗಿ ಬ೦ದ ದಾರಿಯ,ಅವ್ವು ಎದುರ್ಸಿದ ಕಷ್ಟ ಸಮಸ್ಯೆಗಳ ತಿಳುದು ಅರ್ಥ ಮಾಡಿಗೊ೦ಬದು ನಿಜಕ್ಕೂ ಅಗತ್ಯ.
    ಬರಹದ ಶೈಲಿ ವಿಭಿನ್ನವಾಗಿ ಆಸಗ್ತಿ ಹುಟ್ಟಿಸಿತ್ತು.
    {ಪ್ರಪಂಚಲ್ಲಿ ಒಂದೇ ಹಾಂಗೆ ನಡೆತ್ತಾ ಇಪ್ಪದು ಒಂದೇ ಒಂದು – ಅದು ಬದಲಾವಣೆ ಅಡ}ಈ ಮಾತು ಕೊಶಿ ಕೊಟ್ಟತ್ತು.

    ಒಳ್ಳೆ ಶುದ್ದಿ ಅಕ್ಕಾ.

  2. ಸ್ಥಾವರಕ್ಕಳಿವುಂಟು;ಜಂಗಮಕ್ಕಳಿವಿಲ್ಲ-ಹೇಳಿ ಬಸವಣ್ಣ ಹೇಳಿದ ಹಾಂಗೆ! ಅದರ ಇಂಗ್ಲಿಷಿಲಿ -Things standing will fall,things moving will stand-ಹೇಳಿ ಅನುವಾದ ಮಾಡಿದ್ದವು!
    ಚರ ಗುಣವೇ ಬದಲಾವಣೆಯ ಸ್ವಭಾವ.ಹಾಂಗಾಗಿ ಅದು ಸ್ಥಿರ ವಾಗಿ ಇರುತ್ತು.
    ಲಾಯ್ಕ ಚಿಂತನೆ.

  3. ಒಳ್ಳೆ ವಿಷಯ.. ಡಾರ್ವಿನ್ನನ ” ಸರ್ವೈವಲ್ ಆಫ್ ದಿ ಫಿಟೆಸ್ಟ್” ಹೇಳಿರೆ ಇದಕ್ಕೆ ಪೂರಕವೋ ಹೇಳಿ…ಕಾಣುತ್ತು..

  4. “ಬದಲಾವಣೆಯ ಮಿಥ್ಯೆ..”
    ಇದರ ಅರಿವಾದರೆ ಸಿಕ್ಕುವ ನೆಮ್ಮದಿ.ಆದ್ಭುತ.
    ಆದರೆ,
    ಅದಕ್ಕೂ…. ಬದಲಾವಣೆ ಒಳಂದಲೇ ಆಯೆಕ್ಕೂ ಹೇಳುವದೂ ಅಷ್ಟೇ ಸತ್ಯ..!

    ಒಳ್ಳೆಯ ಬರಹ..ಓದಿದವು ತಿಳ್ಕೊಂಬ ಪ್ರಯತ್ನ ಮಾಡಿದರೂ ಸಾಕು ಬರದ್ದು ಸಾರ್ಥಕ ಸುವರ್ಣಿನೀ..

  5. ಒಳ್ಲೆ ಚೊಕ್ಕವಾದ ಲೇಖನ.

    ಹಳೆಯದರ ಪಾಲಿಸುವುದು ಒಳ್ಲೆದೇ, ಆದರೆ ವಿವೇಚನಯುಕ್ತವಾಗಿ ಪಾಲಿಸೆಕ್ಕು ಹೇಳಿ ಎನ್ನ ಅನಿಸಿಕೆ.ಆನು ಕೆಲವರ ನೋಡಿದ್ದೆ,ಅವು ನಾಗ ದೋಶ ಪರಿಹಾರಕ್ಕೆ ಪೂಜೆ ಪುನಸ್ಕಾರ ಎಲ್ಲಾ ಮಾದುತ್ತವು.ಆದರೆ ಇತ್ತಲಾಗಿ೦ದ ಸೈಟು ಮಾಡ್ಳೆ ಹೇಳಿ ನಾಗ ಬನ೦ಗಳ ತೆಗೆಶುತ್ತವು.ಯಾವ ಪುರುಶಾರ್ತಕ್ಕೆ ಮಾಡೆಕ್ಕು ಪೂಜೆ ಪುನಸ್ಕಾರ೦ಗಳ?

  6. ಬದಲಾವಣೆ ನಿರ೦ತರ ಮತ್ತೆ ಸಹಜ.ಆದರೆ ಮನುಶ್ಯನ ಬದಲಾವಣೆಯ ಬಯಕೆಗೆ ಕಡಿವಾಣ ಬೇಕು ಹೇಳಿ ಎನ್ನ ಅಭಿಪ್ರಾಯ.ನಾವು ಬದಲಾವಣೆ ಬೇಕು ಹೇಳಿ ಪ್ರಕ್ರುತಿಯ ಮೇಲೆ ಮಾಡ್ತಾ ಇಪ್ಪ ನಿರ೦ತರ ಆಕ್ರಮಣ೦ದಾಗಿ ಪ್ರಕ್ರುತಿ ನಮ್ಮ ಮೇಲೆ ಮುನಿಸುಗು ಹೇಳಿ ಕಾಣುತ್ತು.
    ನಮ್ಮ ಬದಲಾದ ಜೀವಾನ ಕ್ರಮಗಳ೦ದಾಗಿ ನಮ್ಮ ಆರೋಗ್ಯ ಮತ್ತೆ ನೆಮ್ಮದಿ ಎರದೂ ಹಾಳಾಯಿದು.ನಮ್ಮ ಅತಿಯಾದ ವ್ಯಾಮೋಹಗಳುದೇ ಈ ವೇಗವಾದ ಬದಲಾವಣೆಗಳ೦ದಲೇ ಹೇಳಿ ಎನ್ನ ಅಭಿಪ್ರಾಯ.

    1. ಬದಲಾವಣೆ ಸಹಜ ಹೇಳಿ ನಿಂಗಳೇ ಹೇಳಿದ್ದಿ. ಅದರ ಬಯಕೆಯೂ ಸಹಜವೇ. ಆದರೆ ಆ ಬದಲಾವಣೆಗೊ ಧನಾತ್ಮಕವಾಗಿ ಇರೆಕಾದ್ದು ಮುಖ್ಯ ಅಷ್ಟೇ.
      ಒಪ್ಪಕ್ಕೆ ಧನ್ಯವಾದ.

  7. ತನ್ನ ಬೇರಿನ ತುಂಡರಿಸಿ ಬೇರೆಯೇ ಆಗಿ ಉಳಿತ್ತೆ ಹೇಳಿ ಹೆರಟರೆ ಏಳಿಗೆ ಇಲ್ಲೆ ಹೇಳ್ವ ಆಶಯವ ಹೊತ್ತ ಶುದ್ದಿ ಲಾಯಕ ಆಯ್ದು ಹೇಳಿ ಹೇಳಿತ್ತೀಗ -‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×