Oppanna.com

ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!

ಬರದೋರು :   ಈಚ ಭಾವ    on   17/05/2012    6 ಒಪ್ಪಂಗೊ

ಓಯ್ ಇಂದು ಎಸ್ಎಸ್ಎಲ್ಸಿ ಮಕ್ಕಳ ರಿಸಲ್ಟಡ..
ನಿಂಗಳ ಮನೇಲಿ ಬಾಯಿ ಚೀಪೆ ಮಾಡ್ಲೆ ಆರಾದರೂ ಇದ್ದವೋ..?

ಹೇಳಿ ಕೇಳಿಗೊಂಡು ಕೆಪ್ಪಣ್ಣ ಬಂದಪ್ಪಗಳೇ ನವಗೆ ರಿಸಲ್ಟಿನ ವಿಷಯಲ್ಲಿ ಎಚ್ಚರಿಕೆ ಆದ್ದದು. ಅಷ್ಟರವರೆಗೆ ವಿಷಯವೇ ಮರದು ಹೋಯ್ದು.
ಕಾರಣ ಆನು ಎಸ್ಎಸ್ಎಲ್ಸಿ ಪಾಸಾಗಿ 10 ವರ್ಷವೇ ಕಳುದತ್ತು ಮತ್ತೆ. ಇದ್ದ ಅಪ್ಪಚ್ಚಿ ಮಗಳು ಪಾಸಾಗಿ ಅದು ಕೋಲೇಜು ಮೆಟ್ಲು ಹತ್ತಿ ಇಳುದು, ಮದುವೆಯುದೇ ಆತು..
ಇನ್ನು ಬಾಯಿ ಚೀಪೆ ಮಾಡ್ಲೆ ಆರೂ ಇಲ್ಲೆ ಇದಾ. ಮತ್ತೆ ಈ ವಿಷಯ ನೆಂಪಪ್ಪದೇ ಕಷ್ಟಲ್ಲಿ. ಅದೇನೇ ಇರಲಿ, ಕೆಪ್ಪಣ್ಣ ರಿಸಲ್ಟ್ ಹೇಳಿ ಹೇಳುವಗ ಮನಸ್ಸು 10 ವರ್ಷ ಹಿಂದಂಗೆ ಓಡಿತ್ತು.
ಅಂಬಗ ನಾವು ಕಲಿವದಲ್ಲಿ ಸಾಮಾನ್ಯ. ಎಲ್ಲಾ ಮನೇಲಿ ಅಪ್ಪ-ಅಮ್ಮಂಗೆ ಇಪ್ಪ ಕುತೂಹಲದಾಂಗೆ ಎಂಗಳಲ್ಲಿಯೂ ಇತ್ತು. ಮಗ ಎಷ್ಟು ಮಾರ್ಕ್ಸ್ ತೆಗಗು ಹೇಳಿ ಅಲ್ಲ…!
ಇವ ಪಾಸಕ್ಕೋ ಆಗದೋ ಹೇಳಿ. (ಈಗ ನಿಂಗೊಗೆ ನಾವು ಜನ ಹೇಂಗೆ ಹೇಳಿ ಅಂದಾಜಿ ಆದಿಕ್ಕು 😉 )
ಅದೇಂಗೋ ಪಾಸು ಆತು.. ಕೋಲೇಜು ಮೆಟ್ಲುದೇ ಹತ್ತಿತ್ತು…! ಕಿತಾಪತಿ ಮಾಡಿಗೊಂಡೇ.
ಬೆಂಗಳೂರಿಲಿ ಕಂಪ್ಯೂಟರ್ ಕುಟ್ಟಿದ್ದಕ್ಕೆ ಪೈಸೆ ತೆಕ್ಕೊಂಬ ಹಾಂಗೆದೇ ಆತು.!

ರಿಸಲ್ಟ್ ಹೇಳಿರೆ ಹಾಂಗೆಯೇ. ಈಗ ಎಸ್ಸೆಸ್ಸೆಲ್ಸಿ/ಪಿಯುಸಿ ರಿಸಲ್ಟ್ ಸಮಯ. ಅದು ಬದುಕಿನ ದಾರಿಯ ನಿರ್ಧರಿಸುವ ಫಲಿತಾಂಶ, ನಮ್ಮ ಶ್ರಮಕ್ಕೆ ಕೈಗನ್ನಡಿ. ಮುಂದಾಣ ಜೀವನಕ್ಕೆ ರಹದಾರಿ. ಹಾಂಗೇಳಿ ಪರೀಕ್ಷೆಯ ಫಲಿತಾಂಶಗಂಗಳಲ್ಲಿ ಮಾತ್ರವೇ ಒಬ್ಬ ಮನುಷ್ಯನ ವ್ಯಕ್ತಿತ್ವವ, ಅವನ ಪ್ರತಿಭೆಯ ನಿರ್ಧರಿಸುಲೆ ಎಡಿಯ.
ಇಂದ್ರಾಣ ಎಜುಕೇಶನ್ ಹೇಳ್ತ ವ್ಯವಸ್ಥೆಲಿ. ಪರೀಕ್ಷೆ ಬರವದು, ರಿಸಲ್ಟ್ ನೋಡುವ ಕ್ರಮ ಅನಿವಾರ್ಯ. ಅಬ್ಬೆ-ಅಪ್ಪನ ಚೆಂದಕ್ಕೆ ನೋಡಿಗೊಳ್ಳೆಕು ಹೇಳುವ ಮನಸ್ಥಿತಿಗೆ ಬೆಂಬಲವಾಗಿಪ್ಪ ವಿಷಯವೂ ಅಪ್ಪು.
ನಮ್ಮ ಬೈಲಿಲಿ ತುಂಬ ಜನ ಮಕ್ಕ ಎಸ್ಸೆಸ್ಸೆಲ್ಸಿ, ಪಿಯುಸಿ, ರಿಸಲ್ಟ್ ಎದುರು ನೋಡಿಗೊಂಡಿದ್ದವು. ಅವಕ್ಕೆ ಗ್ರೇಶಿದಷ್ಟೇ ಮಾರ್ಕ್ಸ್  ಬರಲಿ ಹೇಳಿ ಆಶಯ ನಮ್ಮದು. ಹಾಂಗೆ ಮಾರ್ಕ್ಸ್ ಕಮ್ಮಿ ಆತು..
ಪಾಸಾಯ್ದಿಲೆ ಹೇಳಿಯೂ ಆರೂ ತಲೆಬೆಶಿ ಮಾಡಿಗೊಂಡು ಮೂಲೆಲಿ ಕೂರೆಕ್ಕಾದ ಅವಶ್ಯಕತೆಯೂ ಇಲ್ಲ. ಬಂದ ಸವಾಲಿನ ಧೈರ್ಯಲ್ಲಿ ಎದುರಿಸಿಗೊಂಡು ಹೋದರೇ ಯಶಸ್ಸು ಸಿಕ್ಕುಗಷ್ಟೇ.

ಸ್ವಾಮಿ ಸಮರ್ಥ ರಾಮದಾಸರಿಂಗೆ ಎದುರು ಸಿಕ್ಕಿದ ಮಾಣಿ ಒಂದು ಪ್ರಶ್ನೆ ಕೇಳಿದಡ – “ಯಶಸ್ಸು ಹೇಳಿರೆ ಎಂತರ?” ಹೇಳಿ…
ಸಮರ್ಥ ರಾಮದಾಸರು ಹಿಂದೆ ಮುಂದೆ ನೋಡಿದ್ದವಿಲ್ಲೆ, ಸೀದ ಅವನ ಹೊಳೆ ಕರೆಂಗೆ ಕರ್ಕೊಂಡು ಹೋಗಿ ಕೊರಳು ಹಿಡುದು ಮುಳುಗಿಸಿದ್ದೇ.. ಮಾಣಿ ಎಂತ ಮಾಡುಗು..? ತಪ್ಪುಸುಲೆ ನೋಡಿದ, ನೀರಿಂದ ಏಳ್ಳೆ ನೋಡಿದ, ರಾಮದಾಸರ ಕೈ ಪಟ್ಟು ಮತ್ತಷ್ಟು ಗಟ್ಟಿ ಆಗಿಗೊಂಡಿತ್ತಡ.
ಬಿಟ್ಟಿದವೇ ಇಲ್ಲೆ. ಇವ ಎಷ್ಟು ಪ್ರಯತ್ನ ಪಟ್ಟರೂ ಎಡಿತ್ತೇ ಇಲ್ಲೆ. ಉಸಿರು ಜೋರು ಕಟ್ಟುಲೆ ಸುರು ಆತು. ಇದ್ದ ಶಕ್ತಿ ಪೂರ ಹಾಕಿ ಹೇಂಗಾರು ಮಾಡಿಗೊಂಡು ನೀರಿಂದ ಎದ್ದಡ. ಎದ್ದಿಕ್ಕಿ ಜವ್ವನಿಗಂಗೆ ಪಿಸುರು.. ಎಂತ ಗುರುಗಳೇ ಯಶಸ್ವಿನ ಬಗ್ಗೆ ಕೇಳಿರೆ ಕೊಲ್ಲುಲೆ ನೋಡ್ತಿ ಅಲ್ಲದಾ.. ಹೀಂಗಾ ಮಾಡುದು..?
ಸಮರ್ಥ ರಾಮದಾಸರು ನೆಗೆ ಮಾಡಿಗೊಂಡು ಹೇಳಿದವಡ. ನಿನ್ನ ಕೊಲ್ಲುವ ಉದ್ದೇಶ ಇಲ್ಲೆ. ನಿನ್ನ ಪ್ರಶ್ನೆಗೆ ಉತ್ತರ ಸಿಕ್ಕುಲೆ ಬೇಕಾಗಿ ಮಾಡಿದೆ.
ಆನೆಷ್ಟು ಗಟ್ಟಿಯಾಗಿ ನಿನ್ನ ನೀರಿನೊಳಾಂಗೆ ನೂಕುಲೆ ನೋಡಿರೂ, ನೀನು ಮೇಲೆ ಬಪ್ಪ ಪ್ರಯತ್ನ ಮಾಡಿಗೊಂಡಿತ್ತಿದೆ. ಕೊನಗೆ, ಸರ್ವ ಪ್ರಯತ್ನ ಮಾಡಿದ ಕಾರಣ ಮೇಲಂಗೆ ಬಂದೆ.
ಯಶಸ್ಸು ಹೇಳಿರೆ ಹಾಂಗೆ. ಶ್ರಮ ಪಟ್ಟಷ್ಟು ಫಲ, ಅನುಭವಕ್ಕೆ ಬಪ್ಪಾಂಥದ್ದು ಹೇಳಿದವಡ. ಆ ಮಾಣಿಗೆ ಜ್ಞಾನೋದಯ ಆಗಿ ಗುರುಗಳ ಕಾಲು ಹಿಡುದಡ.

ಹೀಂಗೆ ನಾವುದೇ ಜೀವನಲ್ಲಿ ಪ್ರಯತ್ನ ಪಟ್ಟಷ್ಟು ಫಲ ಹೆಚ್ಚು. ಒಂದು ವೇಳೆ ಮೇಲಂಗೆ ಬಪ್ಪಲೆಡಿತ್ತಿಲೆ ಹೇಳಿರೆ ಮತ್ತಷ್ಟು ಬಲ ಹಾಕೆಕ್ಕು. ಅಂಬಗಳೇ ಒಂದು ಹಂತಕ್ಕೆ ಬಪ್ಪಲೆ ಸಾಧ್ಯ.
ಪರೀಕ್ಷೆಲಿ ಮಾರ್ಕ್ಸ್ ತೆಕ್ಕೊಂಡ ಮಾತ್ರಕ್ಕೆ ಜೀವನಲ್ಲಿ ಜೈಶಿತ್ತು ಹೇಳಿ ಇಲ್ಲೆ. ಮಾರ್ಕ್ಸ್ ಬಾರದ್ದ ಮಾತ್ರಕ್ಕೆ ಎಲ್ಲಾ ಮುಗುದತ್ತು ಹೇಳಿ ಆಯೆಕ್ಕು ಹೇಳಿಯೂ ಇಲ್ಲೆ.
ಬಂದರ ಎದುರುಸುವ ಕಲೆ ನಮ್ಮಲ್ಲಿರೇಕು. ಇದರಲ್ಲಿ ಅಬ್ಬೆ-ಅಪ್ಪನ ಪಾತ್ರವುದೇ ಬಹುಮುಖ್ಯ. ನೀನು ಒಳ್ಳೆ ಮಾರ್ಕ್ಸ್ ತೆಗೆತ್ತೆ ಹೇಳಿ ಗ್ರೇಶಿದ್ದೆ..
ಆದರೆ ಹೀಂಗಾ ಮಾಡುದು ಹೇಳುವುದಾಗಲಿ, ನಿನ್ನ ಯೋಗ್ಯತೆಗೆ ಇಷ್ಟು ಬಂದದೇ ದೊಡ್ಡದು ಹೇಳುವುದಾಗಲಿ, ಆಚ ಕರೆ ಕೂಸಿನ ನೋಡು ಎಷ್ಟು ಉಷಾರಿ ಅದು ಹೇಳಿ ಹಂಗಿಸುವುದಾಗಲಿ ಮಾಡ್ಲಾಗ.

ಆವಾಗ ಮಕ್ಕಳ ಮನಸ್ಸಿನ ಮೇಲೆ ಅಪ್ಪ ಭಾವನೆಗ ಅವರ ಅಧೀರನ್ನಾಗಿ ಮಾಡ್ತು. ಅದುವೇ ಕೆಲ ಕೆಟ್ಟ ಕೆಲಸಂಗವಕ್ಕೆ, ಜೀವನವನ್ನೇ ಮುಗಿಶುವ ಕೆಲಸ ಹಿಡಿವಲೆ ಕಾರಣ ಆವ್ತು. ಮಕ್ಕೊಗೆ ಎಷ್ಟು ಮಾರ್ಕ್ಸ್ ಬಂದರೂ, ಅವರ ಸಂಭ್ರಮಲ್ಲಿ ಭಾಗಿ ಆಗಿ.
ಅಥವಾ ಅವಕ್ಕೆ ಸಮಾಧಾನ ಮಾಡಿ. ಮುಂದಾಣ ಕ್ರಮದ ಬಗ್ಗೆ ಮಾತನಾಡಿ. ಮಾರ್ಕ್ಸ್ ಕಮ್ಮಿ ಬಂದರೆ, ಮರುಮೌಲ್ಯಮಾಪನ ಇದ್ದು, ನಪಾಸಾದರೆ, ಮತ್ತೊಂದರಿ ಚೆಂದಕ್ಕೆ ಬರದು ಮಾರ್ಕ್ಸ್ ಪಡವ ಅವಕಾಶವೂ ಇದ್ದು.
ನಿಂಗಳ ತಲೆಲಿಪ್ಪದರೆಲ್ಲ ಅವರ ತಲೆಗೆ ಹಾಕೆಡಿ. ಡಾಕ್ಟ್ರು, ಎಂಜಿನಿಯರ್ ಮಾಡೆಕ್ಕು ಹೇಳುವ ಹಠವೂ ಬೇಡ. ಪಾಸಾದ ಮಕ್ಕೊಗೆ ಮುಂದೆ ಎಂತ ಕೋರ್ಸು ತೆಕ್ಕೋಳೆಕ್ಕೂ ಹೇಳಿಯೂ ಹೆಚ್ಚಿನವಕ್ಕೆ ಗೊಂತಿರ್ತಿಲೆ.
ಅಷ್ಟಪ್ಪಗ ಅವರ ಇಷ್ಟದ ಬಗ್ಗೆ ತಿಳ್ಕೊಂಡು, ಮುಂದೆ ಇದು ಸುಲಭ ಅಕ್ಕು, ಜೀವನ ರೂಪಿಸುವ ಬಗ್ಗೆ ತಿಳಿ ಹೇಳಿ. ಅದು ಹೊರತು, ಜೆಗಿಲ್ಲಿ ಮಕ್ಕಳ ಕೂರ್ಸಿ ರಂಪ ತೆಗೆದು ಬೈಯ್ಯೆಡಿ. ಮಕ್ಕಳ ಹೂಗಿನಂತ ಮನಸಿನ ನೀರು ಹಾಕಿ ಚೆಂದಕೆ ನೋಡಿಗೊಂಬದೂ, ಅದರ ಹೊಸಕಿ ಹಾಕುವುದೂ ಎರಡೂ ನಮ್ಮ ಕೈಲೇ ಇದ್ದು.

ಇನ್ನೂ ಒಂದು ಕಥೆ ಇದ್ದು, ಅವೊಬ್ಬ ಮಾಣಿ; ಅವ ಡಾಕ್ಟ್ರೇ ಆಯೆಕ್ಕು ಹೇಳಿ ಮನೆಯವರ ಆಶೆ. ಆ ಆಶೆಯ ಅವನ ತಲೆಗೆ ಕಟ್ಟಿದವು. ಎಸ್ಸೆಸ್ಸೆಲ್ಸಿಲಿ ಒಳ್ಳೆತ ಮಾರ್ಕ್ಸ್ ಇತ್ತು. ಆದರೆ ಅವಂಗೆ ಡಾಕ್ಟ್ರು ಆಯೆಕ್ಕು ಹೇಳುದು ಇಷ್ಟವೇ ಇಲ್ಲೆ.
ಆದರೂ ಮನೆಯವರ ಒತ್ತಾಯಕ್ಕೆ ರಾಮಜ್ಜನ ಕೋಲೇಜಿಲಿ ಸೈನ್ಸು ತೆಕ್ಕೊಂಡತ್ತು. ಮೊದಲೇ ಸೈನ್ಸು ಅವಂಗೆ ಬೇಡ.
ಪರಿಣಾಮ ಮೊದಲ ವರ್ಷ ಪಾಸಪ್ಪಲೆ ಕಷ್ಟ ಆತು. ಅವಂಗೆ ಲೆಕ್ಕ, ಕೆಮೆಸ್ಟ್ರಿ ತಲೆಗೇ ಹೋವ್ತಿಲೆಡಾ ಹೇಳಿ ಕಾಲೆಳವಲೆ ಸುರು ಮಾಡಿದವು. ಮೊದಲಾಣ ವರ್ಷ ಹೀಂಗಾದರೆ ಇವ ಅಡಕ್ಕೆ ಹೆರ್ಕುದು ಗ್ಯಾರಂಟಿ ಹೇಳಿ ತಮಾಷೆ ಮಾಡಿಗೊಂಡು ಬಂದವು.
ಅಷ್ಟಪ್ಪಗಲೇ ಮಾಣಿ ಕಂಗಾಲು. ಆನು ಕೋಲೇಜಿಂಗೇ ಹೋವ್ತಿಲೆ ಹೇಳಿದ. ಕೊನೆಗೂ ಆರಾರ ಒತ್ತಾಯಕ್ಕೆ ಹೋಗಿ ಪರೀಕ್ಷೆಗೆ ಬರದ. ರಿಸಲ್ಟ್ ಬಂತು.
ಇಷ್ಟ ಇಲ್ಲದ್ದರ ಪರಿಣಾಮ ಮನೆಯವರ ಒತ್ತಾಯ ಎಲ್ಲ ಫಲಿತಾಂಶಲ್ಲಿ ಕಂಡತ್ತು. ಸಂಸ್ಕೃತ ಕನ್ನಡ ಬಿಟ್ಟು ಬಾಕಿ ಎಲ್ಲದಲ್ಲೂ ಮಾಣಿ ನಪಾಸು. ಪುಣ್ಯಕ್ಕೆ ಮನೆಯವರ ಡಾಕ್ಟ್ರು ಕಲಿತ್ತ ವಿಷಯ ಅಲ್ಲಿಗೇ ನಿಂದತ್ತು.
ನೀನಗೆ ಎಂಗ ಹೇಳ್ತಿಲೆಯ ಎಂತ ಬೇಕಾರೂ ಮಾಡು ಹೇಳಿ ಹೇಳಿದವು. ಅವನಷ್ಟಕ್ಕೇ ಬಿಟ್ಟವು. ಅವಂಗೆ ಮೊದಲಿಂಗೇ ಗುರುಟುದಲ್ಲಿ ರಜಾ ಆಸಕ್ತಿ ಹೆಚ್ಚು.
ಈಗ ಹೇಂಗಾರೂ ಬೇಕಾದಾಂಗೆ ಮಾಡು ಹೇಳಿದವಲ್ಲದಾ, ಸೀದ ಹೋಗಿ ಪಾಲಿಟೆಕ್ನಿಕ್ ಕೋಲೇಜು ಸೇರಿದ. ಕಲಿವಲೆ ಆಸಕ್ತಿ ಇಪ್ಪ ವಿಷಯ. ಮೊದಲ ವರ್ಷಂದಲೇ ಕ್ಲಾಸಿಲಿ ಮಾಣಿ ಫಸ್ಟು.
ಎರಡನೇ ವರ್ಷಲ್ಲಿಯೂ ಮುಂದುವರುದತ್ತು. ಮೂರನೇ ವರ್ಷಕ್ಕೆ ಮಾಣಿ ಡಿಸ್ಟಿಂಕ್ಷನ್ಲಿ ಪಾಸಾದ. ಆವಾಗ ಅವಂಗೇ ಕಂಡತ್ತು. ಇಲ್ಲಿಗೇ ಕಲಿವದು ನಿಲ್ಸಿರಾಗ, ಎಂಜಿನಿಯರ್ ಆಯೆಕ್ಕು ಹೇಳಿ.
ಅದನ್ನೂ ಕಲ್ತ. ಕಲಿವದು ಮುಗಿವ ಮೊದಲೇ ಯಾವುದೋ ಕಂಪೆನಿಯವ್ವು ಕೆಲಸವೂ ಕೊಟ್ಟವು. ಈಗ ಅವನ ಸಂಬಳದ ಅಂಕಿ ಕೇಳ್ಳೆಡಿಯ, ಸ್ವಂತ ಸಂಶೋಧನೆಯೂ ಮಾಡಿಗೊಂಡು ದೊಡ್ಡ ಹೆಸರೂ ಇದ್ದು, ಹೇಳಿ ಬೇರೆ ಹೇಳೆಕ್ಕಾದ್ದಿಲ್ಲೆ.

ಮಕ್ಕಳೂ ಹಾಂಗೆ, ನಿಂಗಳ ಶ್ರಮ ರಿಸಲ್ಟಿಲಿ ಕಂಡಿದು ಹೇಳಿ ತಿಳ್ಕೊಳೆಕು. ಹೊರತು, ಇನ್ನು ಹೇಂಗೆ ಮೋರೆ ತೋರ್ಸುದು ಹೇಳಿ ಗ್ರೇಶುಲಾಗ. ಎರಡು/ಒಂದು ಮಾರ್ಕಿಲಿ ಪ್ರಪಂಚ ಅಲ್ಲೋಲ ಕಲ್ಲೋಲ ಆವ್ತಿಲೆ.
ಏನೂ ಕಲಿಯದ್ದ, ಪೆಟ್ರೋಲು ಹಾಕಿಗೊಂಡಿದ್ದ ಧೀರೂಬಾಯಿ ಅಂಬಾನಿ, ಬಾಲ್ಯಲ್ಲಿ ಪೇಪರು ಹಾಕಿ ಶಾಲೆಗೆ ಹೋಗಿ ಸಾಧನೆ ಮಾಡಿದ ಕಲಾಂ, 6ನೇ ಕ್ಲಾಸಿಂಗೇ ಶಾಲೆಗೆ ಟಾಟಾ ಹೇಳಿ ದೊಡ್ಡ ನಟಿಯಾದ ಕರೀಷ್ಮಾ ಕಪೂರ್ ಎಲ್ಲೋರೂ ಕಣ್ಣೆದುರಿಂಗೇ ಇದ್ದವು.
ಒಂದರಿ ಸೋತರೆ ಮತ್ತೆ ಪ್ರಯತ್ನ. ಓಡಿಹೋಪ ಪ್ರಶ್ನೆಯೇ ಇಲ್ಲೆ. ನಮ್ಮ ಬದುಕು ನಾವೇ ರೂಪಿಸಿಗೊಳ್ಳೆಕು. ಆರೂ ಅದರ ತಯಾರು ಮಾಡಿ ಕೊಡ್ತವಿಲ್ಲೆ.
ಅಮ್ಮ ಮಾಡಿದ ಮೈಸೂರು ಪಾಕು ಲಾಯ್ಕಿದ್ದು ಹೇಳಿ ಆಯೆಕ್ಕಾರೆ ಒಲೆ ಮುಂದೆ ಅದು ಗಂಟೆಗಟ್ಲೆ ಕೂದು ಸೆರಗಿಲಿ ಬೆಗರು ಉದ್ದಿದ್ದು ಹೇಳಿಯೂ ನಾವು ಆಲೋಚನೆ ಮಾಡೆಕ್ಕಲ್ಲದಾ?

ಈ ಸರ್ತಿ ಏಕರೂಪ ಶಿಕ್ಷಣ ವ್ಯವಸ್ಥೆಗಾಗಿ ಕೇಂದ್ರ ಸರ್ಕಾರ ನಿರ್ದೇಶನ ಮಾಡಿದ ಹಾಂಗೆ ನಮ್ಮಲ್ಲಿಯೂ ಪಿಯುಸಿಗೆ ಸಿಬಿಎಸ್ಇ (ಸೆಂಟ್ರಲ್ ಸಿಲೆಬಸ್) ಬತ್ತು.
ಮೊದಲು ವಿಜ್ಞಾನ ವಿಷಯ, ಇನ್ನೆರಡು ವರ್ಷಂಗಳಲ್ಲಿ ವಾಣಿಜ್ಯ, ಕಲಾ ವಿಷಯಕ್ಕೂ ಬತ್ತು. ಇದರಿಂದಾಗಿ ಸಿಇಟಿ ಪರೀಕ್ಷೆ ಹೇಳಿ ಇರ್ತಿಲ್ಲೆ. ಅದಕ್ಕಾಗಿ ವಿಜ್ಞಾನ ತೆಕ್ಕೊಂಬ ಮಕ್ಕ ಎಲ್ಲದಕ್ಕೂ ತಯಾರಾಗಿರೇಕು.
ಬದಲಾವಣೆಗೆ ಒಗ್ಗಿಕೊಳ್ಳೇಕು. ಎನ್ನಂದೆಡಿಯ ಹೇಳಿ ಕಂಡರೆ, ಕಲಾ, ವಾಣಿಜ್ಯ ವಿಭಾಗಂಗ ಮುಕ್ತವಾಗಿದ್ದು, ನಿಂಗಳ ಜೀವನಲ್ಲಿ ಕಂಡ ಕನಸಿನ ನೆರವೇರುಸಲಕ್ಕು.
ಕಲಿವಲೆ ಎಡಿವದಲ್ಲಿ ಬಹುಮುಖ್ಯ ಸ್ಥಾನ ವಿದ್ಯೆಗೆ. ಅದರ ಎಂದಿಂಗೂ, ಆರಿಂಗೂ, ಕದಿವಲೆಡಿಯ. ತಳಿಯದ್ದೇ ಕೂರೆಡಿ, ಆಲೋಚನೆ ಮಾಡಿ, ನಮ್ಮ ಯಶಸ್ಸು ನಮ್ಮ ಕೈಲೇ ಇದ್ದು..
ಹೇಳುದು ನೆಂಪಿರ್ಲಿ.

~

ಈಚ ಭಾವ

6 thoughts on “ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!

  1. ಲಾಯಿಕ ಆಯ್ದು ಬರದ್ದು, ವಿಚಾರ ಎಲ್ಲವುದೇ…

  2. ಏ ಡೈಮಂಡು ಭಾವ.. ನಾವು ಬೈಲಿಂಗೆ ಬಂದುಗೊಂಡೇ ಇದ್ದು.. ಆದರೆ ರಜ ಕೆಲಸದ ಗಡಿಬಿಡಿ ಇದಾ.. ಹಾಂಗೆ ರಜಾ ಅಪರೂಪ ಆಗಿ ಹೋತು.. 😉

  3. ಓ ಈಚ ಭಾವ ಲಾಯ್ಕ ಆಯಿದು ಆತೋ ಬರದ್ದು.. ಬೈಲಿಲ್ಲಿ ಭಾರಿ ಅಪರೂಪ ಆಗಿ ಹೋತನ್ನೆ…

  4. ಸಕಾಲಿಕ ಲೇಖನ…ದನ್ಯವಾದ೦ಗೊ..

  5. ಒಂದು ಮಟ್ಟಿನ ವರೇಂಗೆ ಓದು ಓದು ಹೇಳಿ ಹೆದರ್ಸಿಗೊಂಡು ಇತ್ತಿದ್ದ ಕಾಲ ಒಂದು, ಹೇಂಗೆ ಬೇಕಾರು ಕಲಿಯಲಿ ಪೈಲಾದರೆ ತೋಟಕ್ಕಾತು ಹೇಳ್ವ ಕಾಲವೂ ಪರೀಕ್ಷೆ ರಿಸಲ್ಟ್ ಬಂದಪ್ಪಗ ಹೇಂಗಾತೊ° ಹೇಳಿ ವ್ಯಂಗ್ಯಲ್ಲಿ ಕೇಳುವ ಕಾಲವೂ ಇತ್ತಿದ್ದು. ಮತ್ತೆ ಅದು ಬದಲಿ ಮಾರ್ಕು ಮಾರ್ಕು ಹೇಳಿ ಒತ್ತಾಯದ ಕಾಲ ಮತ್ತು ಪೇಟೆ ಮಕ್ಕಗೊ ಪ್ರತ್ಯೇಕ ಟ್ಯೂಶನ್ ಹೊರೆ ಇತ್ಯಾದಿ ಇತ್ಯಾದಿ . ಅದರೆ ವಿದ್ಯಾರ್ಥಿಯ ಮನಸ್ಸಿಂಗೆ ಯೇವ್ದಾರು ನಾಟುತ್ತೋ ಹೇಳ್ವ ಗೊಡವಗೆ ಹೋದವು ಕಮ್ಮಿಯೇ. ಅಬ್ಬೆ ಅಪ್ಪಂಗೆ ಕಲಿ ಕಲಿ ಹೇಳಿ ಬೊಡುಶುದೇ ಕೆಲಸ ಆಗಿಹೋತು.

    ವಿದ್ಯಾರ್ಥಿಯ ಮನದಾಳವ ಅರ್ಥಮಾಡಿಗೊಂಡು ಅವನ ಇಚ್ಛೆಗೆ ಪ್ರೋತ್ಸಾಹಿಸಿ ಹೊಂತಾಗಾರಿಕೆಂದ ಭವಿಷ್ಯ ರೂಪಿಸುವ ಹಾಂಗೆ ಆಯೇಕು ಹೇಳ್ವ ಈಚ ಭಾವನ ಶುದ್ದಿ ಸಕಾಲಿಕವೂ ಸಮರ್ಪಕವೂ ಆಯ್ದು ಹೇಳಿ ಹೇಳ್ವದೀಗ – ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×