Oppanna.com

ಹಳೆಮನೆ ಅಣ್ಣಂಗೆ ಅಭಿನಂದನೆಗೊ

ಬರದೋರು :   ಶುದ್ದಿಕ್ಕಾರ°    on   15/02/2011    33 ಒಪ್ಪಂಗೊ

ಇಂಗ್ಳೇಂಡಿನ ಕಂಪೆನಿ Imaging Resource ಏರ್ಪಡುಸಿದ ‘ಪಟದ ಸ್ಪರ್ಧೆ’ ಲಿ ನಮ್ಮ ಬೈಲಿನ ಹೆಮ್ಮಯ ಹಳೆಮನೆ ಅಣ್ಣಂಗೆ ದ್ವಿತೀಯ ಸ್ಥಾನ ಬಯಿಂದಡ.
ಬೈಲಿನ ಪರವಾಗಿ ಅವಕ್ಕೆ ಅಭಿನಂದನೆಗಳ ಹೇಳುವೊ°, ಅಲ್ಲದೋ?
ಹಳೆಮನೆ ಅಣ್ಣನ ದೃಶ್ಯಪಟಂಗೊ ಇನ್ನೂ ಮೇಗೆ ಹೋಗಲಿ.
ಮುಂದಕ್ಕೆ ಪ್ರಥಮಸ್ಥಾನಂಗ ಸಿಕ್ಕಲಿ, ಹೇಳ್ತದು ಬೈಲಿನೋರ ಆಶಯ.

ನಿನ್ನೇಣ ಪೇಪರಿಲಿ ಇದ್ದು ಮೊದಲಾಣ ಪುಟಲ್ಲೇ ಬಯಿಂದಡ, ಗುಣಾಜೆಮಾಣಿ ಪೇಪರಿನ ಪಟ ತೆಗದು ಕಳುಸಿದ°:

14-02-2011; ಉದಯವಾಣಿ; ಪುಟ - 01

33 thoughts on “ಹಳೆಮನೆ ಅಣ್ಣಂಗೆ ಅಭಿನಂದನೆಗೊ

  1. ಹರೀಶ್,
    ಫೊಟೊ ಚಲೊ ಇದ್ದೊ.
    Good candid shot.
    ಅಭಿನಂದನೆಗೊ!
    ಪ್ರೀತಿಯಿಂದ,
    ನಾಗೇಂದ್ರ

  2. ಹರೀಶಣ್ಣ,
    ಹಳ್ಳಿಯ ಸಹಜತೆಯ ತುಂಬ ಚೆಂದಕೆ ಹಿಡುದುಮಡಗಿದ್ದಿ ಕೆಮರಲ್ಲಿ.
    ಇನ್ನೂ ಇದೇ ನಮುನೆ ಹೆಸರು ಬರಳಿ, ಎಂಗಳ ಎಲ್ಲೋರ ಹಾರಯಿಕೆ ನಿಂಗಳೊಟ್ಟಿಂಗೆ ಇರ್ತು.

    ಬೈಲಿನೋರ ಗಮನಕ್ಕೆ:
    ಇದಾ, ಅಂದೇ ಹಳೆಮನೆ ಅಣ್ಣ ಈ ಪಟ ಬೈಲಿಂಗೆ ತೋರುಸಿತ್ತಿದ್ದವು:
    ಇಲ್ಲಿದ್ದು – https://oppanna.com/lekhana/hosa-drishya/%E0%B2%9C%E0%B2%A8%E0%B2%82%E0%B2%97%E0%B2%B3-%E0%B2%AA%E0%B2%9F%E0%B2%82%E0%B2%97%E0%B3%8A-01

  3. ಅಭಿನ೦ದನೆಗೊ, ಇನ್ನೂ ಹೀಂಗೆ ಫೋಟೋ ತೆಗೆತ್ತಾ ಇರಿ ,ಪ್ರಶಸ್ತಿ ಬತ್ತಾ ಇರಲಿ.

    ನಿಮ್ಮವನೇ ,

    ಗಣಪತಿ.ಭಟ್.ಬಿ

  4. ಹಳೆಮನೆ ಅಣ್ಣಂಗೆ ಶುಭ ಹಾರೈಕೆಗೋ,ಅಭಿನಂದನೆಗೋ

  5. ಅಭಿಪ್ರಾಯ ವೆತ್ಯಾಸ ಬಪ್ಪದು ಸಹಜ. ಆನುದೇ ಆ ಪಟವ ಸ್ಪರ್ಧೆಗೆ ಕಳ್ಸುವಗ ಹಾಂಗೆ ಒಂದಾರಿ ಅಂದಾಜಿ ಮಾಡಿತ್ತಿದ್ದೆ.
    ಭಿಕ್ಷುಕರ ಬೆಳಶುದು ನಾವೇ ಅಲ್ಲದೊ? ಈಗ ಹೆಚ್ಚಿನ ಹೆಸರುವಾಸಿ ದೇವಸ್ಥಾನಂಗಳ ಹತ್ರೆಯೂ ಅವ್ವೇ ಇಪ್ಪದು. ಬೇಕಾದರೆ ನೋಡಿ. ನಾವೆಲ್ಲ ಭಿಕ್ಷೆ ಹಾಕದ್ದರೆ ಅವ್ವು ಅಲ್ಲಿ ಕೂರೆಕ್ಕಾದ ಅಗತ್ಯ ಇದ್ದೋ? ಸುಬ್ರಹ್ಮಣ್ಯಂದ ಆದಿ ಸುಬ್ರಹ್ಮಣ್ಯಕ್ಕೆ ಹೋಪ ದಾರಿಲಿ ಭಿಕ್ಷುಕರು ಭಿಕ್ಷೆ ಹಾಕದ್ದರೆ ಹೇಂಗೆ ಕೆಕ್ಕರಿಸಿ ನೋಡ್ತವು ಹೇಳುದು ಎಲ್ಲೋರಿಂಗೂ ಗೊಂತಿಪ್ಪದೇ. ಈ ಪಟ ಆನು ಕೊಲ್ಲೂರು ದೇವಸ್ಥಾನದ ಹತ್ರೆ ಅಂದು ತೆಗದ್ಸು. ಅವಕ್ಕೆ ದುಡುದು ತಿಂಬಲೆ ಎಂತ ಸಂಕಟ? ಭಾರತದ ಮರ್ಯಾದೆ ಇದರಲ್ಲೇ ಹೋಪದಾ ಅಂಬಗ? ಬೇರೆ ವಿಷಯ ಎಂತದೂ ಇಲ್ಲೆಯಾ? ಈಗ ಬಾಯಮ್ಮನ ಸರಕಾರ ಭಾರೀ ಒಳ್ಳೆ ಹೆಸರು ತಂದು ಕೊಟ್ಟಿದಾ ಭಾರತಕ್ಕೆ? ‘ಸ್ಲಮ್‍ಡಾಗ್ ಮಿಲಿಯನೇರ್’ ಹೇಳ್ತ ಸಿನೆಮಕ್ಕೆ ಆಸ್ಕರ್ ಪ್ರಶಸ್ತಿ ಬಂದಿಪ್ಪಗಳೂ ಹೀಂಗಿಪ್ಪ ಅಭಿಪ್ರಾಯಂಗೊ ಬಂದಿತ್ತು. ಇದರ ನಾವು ಒಳ್ಳೆ ರೀತಿಲಿ ನೋಡೆಕ್ಕೇ ಹೊರತು ‘ನೆಗೆಟಿವ್’ ಆಗಿ ಎಂತಕ್ಕೆ ಚಿಂತಿಸುತ್ತದು ಹೇಳಿ ಎನಗೆ ಅರ್ಥ ಆವುತ್ತಿಲ್ಲೆ. ನಿಜವಾಗಿ ಈ ಆಸ್ಕರ್ ಪ್ರಶಸ್ತಿ ಎಲ್ಲ ನಮ್ಮ ಭಾರತೀಯ ಸಿನೆಮಂಗೊಕ್ಕೆ ಇಪ್ಪದಲ್ಲ.
    ಮತ್ತೊಂದು ಕುಶಾಲಿನ ಉತ್ತರ:
    ದಾರಿಲಿ ಕೆಮರ ಹಿಡ್ಕೊಂಡು ಹೋಪಗ ಬೇಡ್ತವರ ಪಟ ಸಿಕ್ಕದ್ದೆ ಅಂಬಾನಿದೋ, ಐಶ್ವರ್ಯಾ ರೈದೋ ಪಟ ಸಿಕ್ಕುಗಾ? ನಿಂಗಳೇ ಹೇಳಿ.

    1. (ಐಶ್ವರ್ಯಾ ರೈದೋ ಪಟ ಸಿಕ್ಕುಗಾ)
      ಅದರದ್ದು ಅಲ್ಲದ್ರೂ ಅದರ ಹಾಂಗೆ ಸೇಲೆ ಮಾಡುವೋರು ಬೇಕಾಷ್ಟು ಸಿಕ್ಕುಗು…;)

    2. ಪೋಸ್ತರ್ಲಿ ಸಿಕ್ಕುಗು ಆ ಜೆನನ್ಗಳದ್ದು!
      ಬೋಸೆಶ್ವರನ್ದಾದರೆ ಸಿಕ್ಕುಗು ಬೈಲಿಲಿ. ಯೇವ ದೇವಸ್ತಾನದ ಯೆದುರೂ ಕೂಪಲೆ ಬಿಡದ್ದಕ್ಕೆ ಇಲ್ಲಿ ಬೈಲಿನ್ಗೆ ಬೈನ್ದ! 😉

  6. ನಮ್ಮ ಅಭಿನಂದನೆಗೊ,ಇನ್ನೂ ಹೆಚ್ಚಿನ ಕೀರ್ತಿ,ಯಶಸ್ಸು,ಪೈಸ ಎಲ್ಲಾ ಬರಳಿ.

    1. ಹರೀಶಣ್ಣಾ, ಅಭಿನಂದನೆಗೊ..

      {ಕೀರ್ತಿ,ಯಶಸ್ಸು,ಪೈಸ}
      ಸುರುವಾಣ ಎರಡು ನಿಂಗೊಗೇ ಆತು. ಮೂರ್ನೇದು ಬೇಕಾರೆ ಆನು ಮಡಿಕ್ಕೊಂಬೆ.
      ನಿಂಗೊಗೆ ಕೆಮರವೂ, ಅದನ್ನೂ ಒಟ್ಟಿಂಗೇ ಹಿಡ್ಕೊಂಬಲೆ ಕಷ್ಟ ಆವುತ್ತರೆ ಹೇಳಿದ್ದಷ್ಟೆ, ಬೇಡದ್ರೆ ಬೇಡ! 😉

  7. ಹಳೆಮನೆ ಅಣ್ಣಂಗೆ ಶುಭ ಹಾರೈಕೆಗೋ, ಬಹುಮಾನ ಬಂದದಕ್ಕೆ ಸಂತೋಷ ಆತು, ಆದರೆ ಒಂದು ಸಣ್ಣ ಅಭಿಪ್ರಾಯ ತಿಳುಶುವ ಆಶೆ ಇದ್ದು..ಎಂತರ ಹೇಳಿರೆ, ಎಲ್ಲೋರೂ ಭಾರತ ದೇಶಲ್ಲಿ ಬಿಕ್ಷುಕರ ಚಿತ್ರವನ್ನೇ ತೆಗೆತ್ತಾ ಹೋದರೆ ಅಂತರ ರಾಷ್ಟ್ರೀಯ ಮಟ್ಟಲ್ಲಿ ನಮ್ಮ ಭಾರತ ದೇಶದ ಚಿತ್ರಣ ಹೆಂಗಿಕ್ಕು..??

    1. ಹರೀಶಣ್ಣಾ ನಿಂಗಳ ಸಾಧನೆಗೆ ‘ಮಝರೇ..! ಮಝಬೂತುರೇ..!’ ಹೇಳ್ತೆ. ಅಂತರರಾಷ್ಟ್ರೀಯ ಮಟ್ಟಲ್ಲಿ ನಿಂಗೊ ಮಿಂಚುತ್ತಾ ಇಪ್ಪದು ಬೈಲಿನವಕ್ಕೂ ಅಭಿಮಾನದ ವಿಷಯ.
      ಆದರೆ ನಿಂಗೊ ಆಯ್ಕೆ ಮಾಡಿದ ವಸ್ತುವಿನ ಬಗ್ಗೆ ಹೇಳ್ತರೆ ಎನ್ನದೂ ಪ್ರಶಾಂತಣ್ಣನದ್ದೇ ಅಭಿಪ್ರಾಯ. ಮೇಲಾಗಿ ಆ ಭಿಕ್ಷುಕರು ಸುತ್ತಿಯೊಂಡು ಇಪ್ಪದು ಯತಿಶ್ರೇಷ್ಠರು ಧರಿಸುವ; ಸಂನ್ಯಾಸದ ಸಂಕೇತ ಆಗಿಪ್ಪ ಕಾಷಾಯ ವಸ್ತ್ರವ.
      ಭಾರತದ ಸಂನ್ಯಾಸಿಗೊ= ಈ ಫೊಟೋಲ್ಲಿ ಇಪ್ಪ ರೀತಿಯವು ಹೇಳ್ತ ಸಮೀಕರಣಕ್ಕೆ ಅವಕಾಶ ಆಗಿಹೋಕೋ ಹೇಳುವ ಸಂಶಯ ಬತ್ತು

  8. ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದಂಗೊ.

    ಸಮೋಸ ಕಳುಸಿದವಕ್ಕೂ, ಫೋನ್ ಮಾಡಿ ಹೇಳಿದವಕ್ಕೂ ಇದರೊಟ್ಟಿಂಗೇ ಧನ್ಯವಾದ ಹೇಳ್ತೆ.

    1. “ಸಮೋಸ ” 😛
      ಸಮೋಸವೋ???? ಇದು ಆರು ಕಳುಸಿದ್ದು??? 😀
      ಎನ ಒ೦ದು ಎರಾಡು ಕಳುಸಿಕ್ಕಿ.. ಏ??? 😉

      1. ಆನು ಕಳುಸಿದ “ಸಮೋಸ”ಸಿಕ್ಕಿದ ವಿಶಯ ಹೇಳಿದ್ದು ಮೋಸ ಆತು ಆಣ್ಣ೦ಗೆ, ಈ ಬೊಸನ್ಗೆ ತಿಮ್ಬಲೆ ಎನ್ತೆಲ್ಲ ಬೇಕೋ! ಎನ್ನತ್ರೆ ಇಲ್ಲೆ. ಈಗಳೆ ಹೇಳಿದ್ದೆ 😉

        1. ನಿನ್ನ ಹತ್ತರೆ ಇಲ್ಯೊ???
          ಎ೦ತ್ತಾ…. ನೀನೇ ಗುಳುಮ್ಮಾ ಮಾಡಿದ್ಯೋ??? ಏ??

          1. ಹರೀಶ ಭಾವಂಗೆ ಕಳುಸಿದ್ದೆ ಹೇಳಿ ಆಗ್ಲೇ ಹೇಳಿದ್ದೆ ಅಲ್ದೋ! ಏ!:)

            ನಿನಗೆ ಸಮೊಸವ ಹಾಂಗೆಲ್ಲ ಗುಳುಮ್ಮ ಮಾಡುಲೆಡಿತ್ತ! ಅದು ಎನಗೆ ಗೊಂತಿತ್ತಿಲ್ಲೇ ಭಾವ 🙂

  9. ಸಂತೋಷ. ಅಭಿನಂದನೆಗಳು.

    ನಮ್ಮವು ಇನ್ನೂ ಹೆಚ್ಚು ಹೆಚ್ಚು ಹಲವು ಕ್ಷೆತ್ರಲ್ಲಿ ಪ್ರಜ್ವಲಿಸಿ ಕೀರ್ತಿ ಪಡೆಕು , ನಮ್ಮ ಒಟ್ಟಿನ್ಗೆ ಸೇರಿಕೊಳ್ಲೆಕು ಹೇಳಿ ಒಪ್ಪಣ್ಣ ಬಳಗ ಹಾರೈಸೋಣ.

  10. ಆನು ಒಂದಾರಿ ನಿನ್ನೆಯೇ ಮೋರೆಪುಟಲ್ಲಿ ಅಭಿನಂದನೆ ಹೇಳಿ ಆತು, ಈಗ ಇದಾ ಮತ್ತೊಂದಾರಿ ಅಭಿನಂದನಗೊ ಹರೀಶಣ್ಣಾ!
    ಮತ್ತೆ ನಿಂಗೊ ಸ್ವಚ್ಛ ಕನ್ನಡಲ್ಲಿ ಬರದ್ದಕ್ಕೆ ಎಂತ ಇಂಗ್ಲೀಷಿಲಿ ಥೇಂಕ್ಸು ಹೇಳ್ತಿ ಹೇಳಿ ಗೊಂತಾಯಿದಿಲ್ಲೆ. 😉

    1. ಇದು ನಮ್ಮ ಹೊಸ ಬರಹದ ಕರಾಮತ್ತು…! ಅವಕ್ಕೆ ನಾವು ತುಂಬ ಬರವದು ಇಷ್ಟ ಇಲ್ಲೆಡ. ಹಾಂಗೆ ಬರಹ IME ತಂತ್ರಾಂಶ (ಹೊಸ ಆವೃತ್ತಿ) ಬರೇ ಹತ್ತು ನಿಮಿಷ ಮಾಂತ್ರ ಕೆಲಸ ಮಾಡ್ತಷ್ಟೆ. ಮತ್ತೆಯೂ ಬರೆಕಾದರೆ ಪೈಸೆ ಕೊಡೆಕಡ. ಹೀಂಗೆಲ್ಲ ಅಪ್ಪಗ English ಲ್ಲಿ ಒಪ್ಪ ಕೊಡುವಾ° ಹೇಳಿ ಕಂಡತ್ತು.

      Thanks ಹೇಳ್ತದು ನಾವೆಲ್ಲ ಈಗ ದಿನನಿತ್ಯ ಉಪಯೋಗಿಸುತ್ತ ಒಂದು ಶಬ್ದ ಆಗಿ ಹೋಯಿದಲ್ದಾ?

        1. ಬರಹ ೭.೦ ಉಪಯೋಗುಸಿ, ಹೀಂಗಿಪ್ಪ ಯಾವದೇ ತೊಂದರೆ ಇಲ್ಲೆ.

  11. ಅಭಿನಂದನೆಗೊ ಹರೀಶಣ್ಣಾ. ನಿಂಗಳ ಕ್ರಿಯಾತ್ಮಕತೆಗೆ ಇನ್ನಷ್ಟು ಪ್ರಶಸ್ತಿಗೊ ಬರಳಿ.

  12. ಅಳಿಯಂಗೆ ಮನಪೂರ್ವಕ ಅಭಿನಂದನೆಗೊ. ನಿನ್ನೆ ಉದಯವಾಣಿ ನೋಡಿದ್ದಿಲ್ಲೆ. ಪಟ ಲಾಯಕಾಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×