Oppanna.com

ಏಕಾದಶಿ ದಿನ ಗಿರಿಗದ್ದೆ ಮಾಲಿಂಗಣ್ಣನ ಮನೆಲಿ ಊಟ. . . . !

ಬರದೋರು :   ಪುಚ್ಚಪ್ಪಾಡಿ ಮಹೇಶ    on   11/02/2012    19 ಒಪ್ಪಂಗೊ

ಎಲ್ರಿಗೂ ನಮಸ್ಕಾರ.
ಸುಮಾರು ದಿನ ಆತು ಕತೆ ಹೇಳಿದ್ದೇ ಇಲ್ಲೆ. ಆದ್ರೆ ನಮ್ಮ ಬೈಲಿಗೆ ಬತ್ತಾ ಇತ್ತಿದ್ದೆ. ಕತೆ ಮಾತ್ರಾ ಬರ್ದಿಲ್ಲೆ.
ಇಂದೊಂದು ಕತೆ ಇದ್ದು , ಇದ ಹೇಳ್ತೆ ಕೇಳಿ . .
ಮೊನ್ನೆ ಸುಬ್ರಹ್ಮಣ್ಯಲ್ಲಿ ಕೃಷ್ಣಣ್ಣನ ಮನೆ ಒಕ್ಲು ಇತ್ತು. ಹಾಂಗಾಗಿ ರಾತ್ರಿಯ ಭೋಜನ ಕಾರ್ಯಕ್ರಮಕ್ಕೆ ಹೋಗಿತ್ತಿದ್ದೆ.
ಅಲ್ಲಿ ನಮ್ಮ ಸುಬ್ರಹ್ಮಣ್ಯದ ವೆಂಕಟೇಶಣ್ಣ ಸಿಕ್ಕಿದ. ಹೀಂಗೆ ಎಲ್ಲಾ ಕತೆ ಮಾತಾಡಿದ ಮೇಲೆ ಹೇಳಿದ , ನಾವು ಗಿರಿಗದ್ದೆಗೆ ಹೋಪನಾ ?, ನಾಡ್ದು ಶುಕ್ರವಾರ ಆದ್ರೆ ಎನಿಗೆ ಫ್ರೀ ಇದ್ದು , ಏಕಾದಶಿ ಅಲ್ದಾ ?, ಸುಬ್ರಹ್ಮಣ್ಯಲ್ಲಿ ಜನವೂ ಇರ್ತಿಲ್ಲೆ , ಹೋಪುದಾದ್ರೆ ಹೋಪ ಹೇಳಿದ.
ಎಂತಕ್ಕೂ ಶುಕ್ರವಾರ ಬೆಳಿಗ್ಗೆ ನಿಘಂಟು ಮಾಡುವ , ಯಾಕೆ ಹೇಳಿರೆ , ಅಲ್ಲಿ ಪರ್ವತಕ್ಕೆ ಬೆಂಕಿ ಹಾಕಿದ್ದವು , ಬೆಂಕಿ ಇದ್ರೆ ಇಡೀ ಗುಡ್ಡೆ ಬಿಸಿ ಇರ್ತು, ಹಾಂಗಾಗಿ ನಡಿಲೆ ಕಷ್ಟ ಹೇಳಿದ. ಹೀಂಗೆ ಮಾತುಕತೆ ಮುಗ್ಸಿ ಮನೆಗೆ ಬಂತು.
ಮರುದಿನ ಆನು ಮಂಗಳ್ಳೂರಿಗೆ ಹೋದೆ.

ಸಂಜೆ ಫೋನು ಮಾಡಿ ಅಪ್ಪಗ , ನಾಳೆ ನಿಂಘಟು ಮಾಡುವ ಹೇಳಿ ಮತ್ತೆ ಹೇಳಿದ , ಅಂತೂ ಶುಕ್ರವಾರ ಬೆಳಿಗ್ಗೆ ವೆಂಕಟೇಶಣ್ಣಂದು ಫೋನು ಬಂತು. ಹೋಪನಾ ? ಓಕೆ, ಮನೆಂದ ಹೊರಟು ಸರೀ 11 ಗಂಟೆಗೆ ಆನು ಸುಬ್ರಹ್ಮಣ್ಯಕ್ಕೆ ತಲುಪಿದೆ.
ವೆಂಕಟೇಶಣ್ಣ ಅದೆಂತದೋ ಕ್ರೀಂ ತಪ್ಲೆ ಹೋಗಿತ್ತಿದ್ದ , ಮೋರೆಗೆ ಉದ್ಲೆಡ , ಎಂತಕೆ ಗೊತ್ತಿಲ್ಲೆ. ಹಿಮಾಲಯಕ್ಕೆ ಹೋಪುದು ಹೇಳಿ ಗ್ರೇಸಿದ್ದನೋ ಎಂತದೋ ಗೊತ್ತಿಲ್ಲೆ , ಆನು ಅಷ್ಟಪ್ಪಗ ಒಂದ್ಸತ್ತಿ ಫೇಸುಬುಕ್ಕು ನೋಡಿದೆ, ಅಂತೂ 11.20 ಕ್ಕೆ ಸುಬ್ರಹ್ಮಣ್ಯಂದ ಬಿಟ್ಟಾತು.
ಅಷ್ಟೊತ್ತಿಗೆ ಇನ್ನೂ ಒಂದೆರಡು ಜನ ಸಿಕ್ಕಿದವು , ರಾಘವೇಂದ್ರ ಮತ್ತು ಶಿವರಾಮ.ಬೈಕಿನ ಕುಮಾರಪರ್ವತ ಹತ್ಲೆ ಸುರು ಮಾಡುವಲ್ಲಿ ಇರ್ಸಿ , ಎಲ್ಲವೂ ಒಟ್ಟಿಗೆ ನಡಿಲೆ ಸುರು ಆತು . .
ನಡುದೂ ನಡುದೂ ಮಧ್ಯದಲ್ಲಿ ಒಂದು ಬಂಡೆ ಸಿಕ್ಕಿತ್ತು , ಅಲ್ಲಿ ಕೂತು ಬಾಳೆಹಣ್ಣು , ನೀರು, ಚಾಕ್ಲೇಟ್ ತಿಂದು , ನೀರು ಕುಡುದು ಎಂಗೋ ಹೊರ್ಟಿಯಾ .
ಅದ . . ., ಮತ್ತೆ ಸುರುವಾತು ಬಿಸಿಲು , ಎಂತಾ ಬಿಸಿಲು. . . ರಾಮ ರಾಮ .. .ವೆಂಕಟೇಶಣ್ಣ ಮತ್ತು ಅವಿಬ್ರು, ಶಾಲಿನ ತಲೆಗೆ ಹಾಕಿಕೊಂಡವು. ಅಂತೂ ನಡುದೂ ನಡುದೂ ಗಿರಿಗದ್ದೆ ಎತ್ತಿತ್ತು.
ಆಗ ಗಂಟೆ 1.30 .ಊಟದ ಸಮಯ ಬೇರೆ.

ಗಿರಿಗದ್ದೆ ಮನೆಗೆ ಹೋಗ್ಯಪ್ಪಗ , ಹೋ. . ನಮಸ್ಕಾರ ಹೇಳಿದವು ಅಲ್ಲಿಯ ನಮ್ಮ ಮಾಲಿಂಗಣ್ಣ ,
ನೀರು ಬೇಕೋ , ಮಜ್ಜಿಗೆ ಬೇಕೋ ಕೇಳಿದವು , ಎಂಗೋ ಮಜ್ಜಿಗೆಯ ಸವಿ ಸವಿದೆಯಾ. ಎಂತಾ ಮಜ್ಜಿಗೆ ಭಾರೀ ಒಳ್ಳೆದಿತ್ತು. ಕೈಕಾಲು ತೊಳ್ದು ಬಂತು ಒಳ ಕೂತಿಯ.
ವೆಂಕಟೇಶಣ್ಣ ಚಾಪೆ ತಂದು ಹಾಕಿದ , ಸ್ವಲ್ಪ ಮನಿಕ್ಕೊಂಡ್ಯ. ಸ್ವಲ್ಪ ಹೊತ್ತಪ್ಪಗ, ಊಟ ಮಾಡುವನ ಹೇಳಿ ಆತು ಮಾಲಿಂಗಣ್ಣಂದು.
ಊಟಕ್ಕೆ ಗಮ್ಮತ್ತೋ ಗಮ್ಮತ್ತು. . ,ರುಚಿಯಾದ ಸಾಂಬಾರು , ಪಾಯಸ , ಮಜ್ಜಿಗೆ, ಉಪ್ಪಿನಕಾಯಿ ಇತ್ತು. ಎಲ್ರಿಗೂ ಹಶುವಾಗಿತ್ತು ಸರಿ ಊಟ ಮಾಡಿದ್ಯಾ. ಮತ್ತೆ ಹಾಂಗೇ ಮನಿಕ್ಕೊಂಡು , ಮತ್ತೆ ಅಲ್ಲೇ ಇಪ್ಪ ಸಿಂಹಾಸನ ಗುಡ್ಡೆಗೆ ಹೊರಟ್ಯ.
ಇದು ಮಾತ್ರಾ ಸೂಪರ್. ಭಾರೀ ಒಳ್ಳೆದಿದ್ದು ಈ ಗುಡ್ಡೆ.
ಸಿಂಹಾಸಬನ ಗುಡ್ಡೆ ಹೇಳಿ ಹೆಸ್ರಲ್ಲಾ, ವೆಂಕಟೇಶಣ್ಣ ಗ್ರೇಸಿದ ಸಿಂಹಾಸನಲ್ಲಿ ಕೂರಲೆ ಅಕ್ಕು ಹೇಳಿ. ಅಂತೂ ಗಿರಿಗದ್ದೆ ಮನೆಂದ ಸುಮಾರು 20 ನಿಮಿಷ ನಡುದಪ್ಪಗ ಸೂಪರ್ ಸೀನ್ ಕಾಣ್ತು , ತುಂಬಾ ಹೊಂಡ ಇಪ್ಪ ಗುಡ್ಡೆ ಇದ್ದು , ಅದರ ಕರೆಲಿ ಎಂಗೋ ನಡುದ್ಯ , ಪೋಟೋ ತೆಕ್ಕೊಂಡು ಹಾಂಗೇ ಹೋಪಗ ಗಾಳಿಯ ರಭಸಕ್ಕೆ ತಂಪೂ ಆತು , ಸುಮಾರು 20 ನಿಮಿಷ ಅಲ್ಲಿ ಕೂತು , ಲಾಗ ಹಾಕಿ ಅಲ್ಲಿಂದ ಮತ್ತೆ ಮಾಲಿಂಗಣ್ಣನ ಮನೆಗೆ ಹೊರಟ್ಯ.
ಬಪ್ಪಗ ವೆಂಕಟೇಶಣ್ಣಂದು ಹೊಸ ಸಂಶೋಧನೆ ಆತು , ಇದ. . ಇದ ಮಹೇಶಣ್ಣ ಇಲ್ಲಿ ಒಂದು ಹೂಗು ಇದ್ದು ನೋಡಿ , ಇದರ ಫೋಟೋ ತೆಗಿರಿ ಹೇಳಿದ , ಅದೆಂತದೋ ಕಾಟು ಹೂಗು , ಬಂದಳಿಣೆ ಹೂಗು ಹೇಳ್ತವಲ್ಲ ಅದು.
ಅದ್ರದ್ದೂ ಫೋಟೋ ತೆಕ್ಕೊಂಡು ಗಿರಿಗದ್ದೆಗೆ ವಾಪಾಸ್ ಬಂದ್ಯಾ.

ಬನ್ನಿ ಕಾಫಿ ಕುಡಿವಾ ಹೇಳಿ ಮಾಲಿಂಗಣ್ಣ ಕರ್ದವು, ಕೂಡ್ಲೆ ಹೋಗಿ ಎರಡೆರಡು ಗ್ಲಾಸ್ ಕಾಫಿಯೂ ಕುಡುದು ಆತು. ಮತ್ತೆ ಹೀಂಗೆ ಮಾಲಿಂಗಣ್ಣನತ್ರ ಮಾತಾಡ್ಸಿದ್ಯಾ. ಆವಾಗ ಒಳ್ಳೊಳ್ಳೆ ಸುದ್ದಿ ಹೇಳಿದವು ಮಾಲಿಂಗಣ್ಣ.

ಎಂಗೋ ಗಿರಿಗದ್ದೆ ಬಂದು ಸುಮಾರು 40 ವರ್ಷ ಆತು. ಇದ ಈ ಕುರ್ಚಿ ಮೊನ್ನೆ ಬಂತು ಹೇಳಿ ಫೈಬರ್ ಖುರ್ಚಿಗಳ ತೋರಿಸಿದವು.
ಇಲ್ಲಿಗೆ ವರ್ಷಕ್ಕೆ ಈಗ ಸುಮಾರು 1o ಸಾವಿರ ಚಾರಣಿಗರು ಬತ್ತವು , ಆನು ಅವ್ಕೆ ದಿನಕ್ಕೆ 250 ರೂಪಾಯಿ ದಿನಕ್ಕೆ ಊಟದ ಬಾಬ್ತು ಚಾರ್ಜು ಮಾಡ್ತೆ ಹೇಳಿ ಕತೆ ಹೇಳ್ತಾ ಹೋದವು.
ಆವಾಗ ಅಲ್ಲಿ ಇಪ್ಪ ಪರಮೇಶ್ವರಿ ಅಜ್ಜಿ ಬಂದವು. ಅವ್ಕೆ ಸುಮಾರು 76 ವರ್ಷ ಆತಡ. ಸೊಂಟ ಬಗ್ಗಿದ್ದು , ಆದ್ರೂ ಕೆಲ್ಸ ಮಾಡ್ತವು.
ಸುಬ್ರಹ್ಮಣ್ಯಕ್ಕೆ ಬಾರದ್ದೆ 8 ವರ್ಷ ಆತಡ. ಹುಳಿ , ಖಾರ ಎಂತದೂ ತಿಂತವಿಲ್ಲೆಡೆ. ಅವ್ಕೆ ಗಂಡು ಮಕ್ಕೋ ಯಾರೂ ಇಲ್ಲದ್ದ ಕಾರಣ ಅವು ಅಳಿಯನೊಟ್ಟಿಗೆ ಹೇಳಿರೆ ಮಾಲಿಂಗಣ್ಣನೊಟ್ಟಿಗೆ ಇದ್ದವು.
ಇನ್ನು ಸುಬ್ರಹ್ಮಣ್ಯಕ್ಕೆ ನಡಿಲೆ ಎಡಿಲೇ ಎಡಿಯ ಅವ್ಕೆ. ಯಾಕೆ ಹೇಳಿರೆ ಸುಮಾರು 4 ಕಿಲೋ ಮೀಟರ್ ನಡಿಯೆಕ್ಕು ಹಾಂಗಾಗಿ ಅದು ಸಾಧ್ಯವೇ ಇಲ್ಲೆ.
ಆದ್ರೆ ಮಾಲಿಂಗಣ್ಣ ತಿಂಗ್ಳಿಗೆ ಒಂದೆರಡು ಸರ್ತಿ ಸುಬ್ರಹ್ಮಣ್ಯಕ್ಕೆ ಬತ್ತವಡ.

ಹೀಂಗೆ ಮಾತಾಡ್ತಾ ಹೋದಾಂಗೆ ಸಮಯ ಹೊದ್ದೆ ಗೊಂತಾಯಿದಿಲ್ಲೆ , ಗಂಟೆ ನೋಡಿದ್ರೆ 4 .
ಸರಿ ಇನ್ನು ಹೋಪ ಹೇಳಿ ಎಂಗ್ಳ ಟೀಂ ಹೇಳಿತ್ತು. ಅಂತೂ ಇಂತೂ ಹೊರಡುವಾಗ 4.30. ಮತ್ತೆ ನಡಿಲೆ ಸುರು.
ನಡುಕೊಂಡು ಬಂದ್ಯಾ. ಅದಾ ಸುರುವಾತದ ಕಾಲು ಸೆಳಿಲೆ , ಮೊಣಕಾಲಿಂದ ಕೆಳ ಬೇನೆಯೋ ಬೇನೆ. ಅಂತೂ ಇಂತೂ ಬಂಡೆ ಕಲ್ಲಿನ ಹತ್ರ ಬಂದ್ಯಾ. ಅಲ್ಲಿ ಸ್ವಲ್ಪ ಹೊತ್ತು ಕೂತು ಮತ್ತೆ ನಡೆದ್ಯಾ. ಅಲ್ಲೊಂದು ಕೋಲು ಸಿಕ್ಕಿತು , ಅದರ ಊರುಗೋಲು ಮಾಡಿಕೊಂಡು ಮತ್ತೆ ಸುರು ನಡಿಲೆ.
ಅಂತೂ ಇಂತೂ ಎಂಗೋ ಬೈಕ್ ಇರಿಸಿದಲ್ಲಿಗೆ 6.15 ಕ್ಕೆ ಎತ್ತಿತ್ತು.

ಅಬ್ಬಾ ಹೇಳಿ ಒಂದು ಉಸುರು ತೆಗುದು ಬೈಕ್ ಹತ್ತಿ ಬಪ್ಪಗಾ , ಒಂದು ಕಾಫಿ ಕುಡಿಯೆಕ್ಕು , ಎಲ್ಲಿಗೆ ಹೋಪಾ ಹೇಳಿಯಪ್ಪಗೆ ವೆಂಕಟೇಶಣ್ಣ ಮನೆಗೆ ಫೋನು ಮಾಡಿ , ಇದಾ ಮಹೇಶಣ್ಣಂಗೆ ಕಾಫಿ ಕುಡಿಯೆಕ್ಕಡ , ದೋಸೆ ಹಿಟ್ಟು ಇದ್ದಾ ಹೇಳಿ ಮನೆಗೆ ಕೇಳಿ , ದೋಸೆ ಹನ್ಸು ಈಗ ಬತ್ಯಾ ಹೇಳಿದ.
ಅಂತೂ ಅವರ ಮನೆಗೆ ಹೋಗಿ ಭರ್ಜರಿ ದೋಸೆ ತಿಂದು ತೇಗಿ , ಗಿರಿಗದ್ದೆ ಮಾಲಿಂಗಣ್ಣನ ಮನೆಗೆ ಹೋದ್ದರ ನೆನಪು ಮಾಡಿಕೊಂಡು ಬಂದ್ಯಾ.

ಏಕಾದಶಿ ದಿನ ಊಟ ಕೊಟ್ಟ ಮಾಲಿಂಗಣ್ಣಂಗೆ ಒಂದು ಥ್ಯಾಂಕ್ಸ್ ಹೇಳೆಕ್ಕಲ್ಲ..!

19 thoughts on “ಏಕಾದಶಿ ದಿನ ಗಿರಿಗದ್ದೆ ಮಾಲಿಂಗಣ್ಣನ ಮನೆಲಿ ಊಟ. . . . !

  1. ಈ ಲೇಖನ ಓದಿ ಚಾರಣದ ಸವಿಯನ್ನೂ ಕಂಡ ಹಾಂಗಾತು.

  2. ಬೆಟ್ಟದ ಜೀವ೦ಗಳ ಪರಿಚಯವೂ ಆತು,ಚಾರಣದ ಸವಿಯನ್ನೂ ಉ೦ಡತ್ತು.
    ಧನ್ಯವಾದ ಅಣ್ಣಾ.

  3. ಫೋಟೋ ಜೊತೆಗೆ ಚಾರಣದ ಅನುಭವ ಓದಿ ಖುಷಿ ಆತು…

  4. ಕುಮಾರ ಪರ್ವತಕ್ಕೆ ಕೊಡಗಿನ ಹೊಡೆನ್ದಾಗಿ ಕೆಲವು ವರ್ಷ೦ಗಳ ಹಿ೦ದೆ ಪೂಜ್ಯ್ಸಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳು ಕೆಲವು ಶಿಷ್ಯರ ಒಟ್ಟಿ೦ಗೆ ಹತ್ತಿಗೊನ್ಡು ಹೋಗಿತ್ತಿದ್ದವು. ಅವರ ಒಟ್ಟಿ೦ಗೆ ಆನುದೇ ಹೋಗಿತ್ತಿದ್ದೆ. ಚಾರಣದ ಅನುಭವ ಅದ್ಭುತ. ಆ ದಾರಿಲಿ ಗಿರಿಗದ್ದೆ ಸಿಕ್ಕುತ್ತಿಲ್ಲೆ.

    ಕುಮಾರ ಪರ್ವತದ ಕೊಡಿಯ೦ದ ಬೇರೆಲ್ಲ ಸಣ್ಣ ಸಣ್ಣ ಪರ್ವತ೦ಗಳ ನೋಡುಲೆ ಭಾರೀ ಚೆ೦ದ. ಎರಡು ವರ್ಶದ ಹಿ೦ದೆ ಕೈಲಾಸ ಪರ್ವತಕ್ಕೆ ಹೋಗಿ ಪರಿಕ್ರಮ ಮಾಡಿಬ೦ದ ಅನುಭವವೂ ಮರವಲೆ ಎಡಿಯದ್ದದು.

    ಗಿರಿಗದ್ದೆ ಕತೆ ಓದಿ ಇದೆಲ್ಲ ಣೆ೦ಪಾತು.

  5. ಚಾರಣದ ಅನುಭವಂಗಳೊಟ್ಟಿಂಗೆ ಗಿರಿಗದ್ದೆ ಮಾಲಿಂಗಣ್ಣನ ಪರಿಚಯ ಹೇಳಿದ್ದು ಚಲೊ ಆಯ್ದು. ಅವ್ರ ಸಾಹಸವ ಮೆಚ್ಚೆಕ್ಕು.

  6. ಭಾವ,
    ಅದಾ ನಿಂಗಳ ಬೈಲಿಲ್ಲಿ ಕಾಣದ್ದೆ ಅಸಕ್ಕಾಗಿಯೊಂಡಿತ್ತು..
    ಒಳ್ಳೆ ಶುದ್ದಿ..
    ಖುಶಿ ಆತು 🙂
    ಮಂಗ್ಳೂರಿಂಗೆ ಹೇಂಗೂ ಬಂದಿತ್ತಿದ್ದಿ ಅನ್ನೆ, ಒಂದು ಕೂಕುಳು ಹಾಕಿದ್ದರೆ ಆನೂ ಬತ್ತಿದ್ದೆ 🙂

  7. ಒಹೊ..ಗಿರಿಗದ್ದೆ ವರೆಗೆ ಹೋಗಿದ್ದಾ?ಅಲ್ಲಿ೦ದ ಮು೦ದೆ ಕುಮಾರ ಪರ್ವತ ಲೈಕಿದ್ದಡ..ನನ್ನ ಮಗ್ಳು ಹೋಗಿತ್ತು..ಮಾಲಿ೦ಗ ಭಟ್ರ ಮನೆ ಊಟ ಅಮೃತ ಇದ್ದಾ೦ಗೆ …. ದಿವ್ಸದ ಎರಡು ಪಟ್ಟು ಉ೦ಬಷ್ಟು ರುಚಿ ಇರ್ತು ಹೇಳ್ತಿತ್ತು…ಫೋಟೊ ಎಲ್ಲಾ ಚೊಲೊ ಬ೦ದು….ಪುಚ್ಚಪ್ಪಾಡಿ ಅಣ್ಣ…

  8. ಶುದ್ದಿ ಲಾಯಿಕಾಯಿದು ಒಪ್ಪಂಗೊ,
    ಎರಡುವರ್ಷದ ಹಿಂದೆ ನಾವುದೇ ಒಂದುಸರ್ತಿ ಹೋಗಿತ್ತು ಕುಮಾರ ಪರ್ವತಕ್ಕೆ ,ಗಿರಿಗದ್ದೆ ಮಾವನಲ್ಲಿಯ ಊಟ ನಿಜಕ್ಕೂ ಅಮೃತ, ಪುಚ್ಚೆಪ್ಪಾಡಿ ಅಣ್ಣಂಗೆ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×