Oppanna.com

ಜುಳುಜುಳು ಮಳೆಯ ಎಡಕ್ಕಿಲಿ ಜುಲೈ ಪಟಂಗೊ..

ಬರದೋರು :   ಶುದ್ದಿಕ್ಕಾರ°    on   16/08/2010    6 ಒಪ್ಪಂಗೊ

ನಮಸ್ಕಾರ!
ಜುಲೈ ತಿಂಗಳಿನ ಪಟಂಗೊ ಬಯಿಂದಿಲ್ಲೇ – ಹೇಳಿ ನಮ್ಮ ಶ್ರೀ ಅಕ್ಕ° ಮೊನ್ನೆಂದ ಜೋರುಮಾಡ್ಳೆ ಸುರುಮಾಡಿದ್ದವು!
ಜೋರು ಮಳೆ, ಎಲ್ಲಾ ಪಟಂಗಳನ್ನೂ ಜಾಗ್ರತೆಗೆತಂದು ನೇಲುಸೆಡದೋ!
ಪಾಪ – ಎಲ್ಲ ಪಟಂಗೊ ಸಂಪಾಲುಸುವಗ ತಡವಾತು.
ಅಂತೂ, ಇಂತೂ ಇಂದಿಂಗೆ ದೇವರು ಒದಗುಸಿದವು.
ಇದಾ, ಜುಲೈ ತಿಂಗಳಿನ ಪಟದಪುಟಕ್ಕೆ ಸಂಕೊಲೆ ಇಲ್ಲಿದ್ದು.
(https://oppanna.com/gallery?album=July2010)

ಆಟಿ ತಿಂಗಳಿನ ಕೆಲವು ಪಟಂಗೊ...

ಆಟಿ ತಿಂಗಳಿನ ಹೊಡಾಡಿಗೆ ಗವುಜಿ ಬೈಲಿಲಿ ಜೋರಿತ್ತು. ಕರ್ಕಟಕ ಮಾಸವೇ ಆದರೂ ರಂಗಮಾವನ ನೆಟ್ಟಿಗೆಡುವಿಲಿ ಕರ್ಕಟಿ(ಚೆಕ್ಕರ್ಪೆ) ಇಲ್ಲದ್ದದು ವಿದ್ಯಕ್ಕಂಗೆ ಭಾರೀ ಬೇಜಾರಿಂಗೆ ಕಾರಣ ಆಯಿದು.
ಎಲ್ಲೊರುದೇ ನೋಡಿಕ್ಕಿ, ಬಿಟ್ಟುಹೋದ್ದದು ಇದ್ದರೆ ತಿಳಿಶಿಕೊಡಿ.
ನಿಂಗಳತ್ರೆ ಒಳ್ಳೊಳ್ಳೆ ಪಟಂಗೊ ಇದ್ದರೆ ನಿಂಗಳೂ ಕಳುಸಿಕೊಡಿ (pata@oppanna.com ಗೆ).
ಎಲ್ಲ ಪಟಂಗಳನ್ನೂ ಸೇರುಸಿ ಎಲ್ಲೊರಿಂಗೂ ತೋರುಸುವೊ°.
ಆಗದೋ? ಏ°?
ನಮಸ್ಕಾರ

ಶುದ್ದಿಕ್ಕಾರ°

6 thoughts on “ಜುಳುಜುಳು ಮಳೆಯ ಎಡಕ್ಕಿಲಿ ಜುಲೈ ಪಟಂಗೊ..

  1. ಸಾರಡಿ ಪುಳ್ಳಿ ಲೆಕ್ಕ ಬರದು ಶ್ಚೇತ ಪತ್ರ ಹೊರಡುಸುತ್ತ ಹಾಂಗೆ ಕಾಣುತ್ತು

  2. ಅಂಬ್ರೇಪು ಮಾಡಿದ ಶ್ರೀ ಅಕ್ಕನ ಪತ್ತೆಯೇ ಇಲ್ಲೆ..
    ಒಪ್ಪಣ್ಣ ಬಾವ ಕಾನಾವು ಹೊಡೆಂಗೆ ಹೋಪಗ ಮೊದಲೇ ಹೇಳಿಕ್ಕು.. ಹೆರಡುವಾಗ್ಲೆ ಹಾಳೆ ಕಟ್ಟಿಕೊಳ್ತೆ..

    1. ಅಪ್ಪು,ಆನು ಶ್ರೀ ಅಕ್ಕನ ಶುದ್ದಿ ಸುಮಾರು ಸರ್ತಿ ಮಾತಾಡಿದೆ.ಪತ್ತೆಯೇ ಇಲ್ಲೆ.ಬಹುಶ್ಶ ಗೋಕರ್ಣಕ್ಕೆ ಹೋಗಿರೆಕ್ಕು.

      1. ಗಣೇಶ ಮಾವ°, ಎಲ್ಲೋರು ಸೇರಿ ಪರಂಚುದು ಕೇಳಿತ್ತು ಶ್ರೀ ಅಕ್ಕನ.. ನಿಂಗೊ ಹೇಳಿದ ಹಾಂಗೆ ಗೋಕರ್ಣಕ್ಕೆ ಹೋಗಿತ್ತಿದ್ದೆ ಮಾತೃಶಾಖೆ ಸಮಾವೇಶಕ್ಕೆ. ತುಂಬಾ ಚೆಂದಲ್ಲಿ, ಹೆಚ್ಚಿನ ಸಂಖ್ಯೆಲಿ ಮಾತೆಯರು ಸೇರಿತ್ತಿದ್ದವು ಅಲ್ಲಿ ಅವರವರ ಮನೆ ಕೆಲಸವ ಕರೆಂಗೆ ಮಡಿಗಿ.. ಗುರುಗಳ ಅನುಗ್ರಹ ಮಂತ್ರಾಕ್ಷತೆ ತೆಕ್ಕೊಂಡು ಬಂದೆಯಾ°.
        ಈಗ ಇನ್ನು ಸೋಣೆ ಸುರು ಆದ್ದದಲ್ಲದಾ ಗಣೇಶ ಮಾವಾ°.., ಆಳುಗೊಕ್ಕೆ ಕೆಲಸ ಹಿಡಿಶೆಡದಾ? ಹಾಂಗೆ ತೋಟಲ್ಲಿ ರಜ್ಜ ಕೆಲಸ ಇತ್ತಿದಾ. ನಿಂಗಳ ಹಾಂಗೆ ಜಾಲ ಕರೆಲಿ ತೋಟ ಅಲ್ಲನ್ನೇ ಎಂಗೊಗೆ!!!
        ಹೋಯೆಕ್ಕಿದಾ… ಒಂದು ಗುಡ್ಡೆ ಹತ್ತಿ ಆಚ ಹೊಡೆನ್ಗೆ ಇಳುದು, ಎರಡು ಬೈಲು ದಾಂಟಿ ಹೊಳೆ ಕರೆಂಗೆ ಎತ್ತೆಕ್ಕದಾ. ಒಪ್ಪಣ್ಣನ ಕಟ್ಟಪ್ಪುಣಿಲೇ ಹೋದದ್ದು. ಬೈಲಿಂಗೆ ಇಳುದು ಮಾತಾಡಿದರೆ ಆನು ತೋಟಕ್ಕೆತ್ತುವಾಗ ಆಳುಗ ಅವರ ಶುದ್ದಿ ಪಟ್ಟಾಂಗ ಮಾತಾಡಿಗೊಂಡಿಕ್ಕಿದಾ. ಹಾಂಗೆ ಸೀದಾ ಹೋದ್ದದು. ಇಂದು ರಜ್ಜ ಪುರುಸೊತ್ತು ಮಾಡಿಗೊಂಡದು. ನಿಂಗಳ ಮಾತಾಡ್ಸುವಾ° ಹೇಳಿ ಆಗದಾ?
        @ಅಜ್ಜಕಾನ ಭಾವ, ಆನು ಒಪ್ಪಣ್ಣನ ಅಂಬ್ರೆಪು ಮಾಡಿದ್ದದಲ್ಲ. ಪಟ ಬೈಲಿಲಿ ನೇಲ್ಸಿದ್ದಾ° ಇಲ್ಲೆ ಹೇಳಿ ನೆಂಪು ಮಾಡಿದ್ದು. ಆನು ಹೋಪಗ ಅವ° ಆಚ ಹೊಡೆಲಿ ಇತ್ತಿದ್ದ° ಹಾಂಗೆ ದಿನಿಗೆಳಿ ಹೇಳಿದ್ದು ಅವಂಗೆ ಜೋರು ಮಾಡಿದ ಹಾಂಗೆ ಆದ್ದದಡ್ಡ.. 😉

  3. enniga sone bantaane.sankramana somavara baindu hemmakko hostilinge hodadle suru maadiddavo enta?oppannanatre helire saaku elladre oppannane tilisiru akku.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×