Oppanna.com

ಜೂನ್ ತಿಂಗಳ ಮಳೆಗಾಲದ ಪಟಂಗೊ

ಬರದೋರು :   ಶುದ್ದಿಕ್ಕಾರ°    on   11/07/2010    11 ಒಪ್ಪಂಗೊ

ನಮಸ್ಕಾರ!
ಯೇವತ್ತಿನ ಹಾಂಗೆಯೇ ಈ ಸರ್ತಿಯೂ ಕಳುದ ತಿಂಗಳಿನ ಒಟ್ಟುಮಾಡಿ ಪಟದಪುಟಲ್ಲಿ ಹಾಕಿದ್ದು!
ಜೂನ್ (ವೃಷಭ – ಮಿಥುನ) ತಿಂಗಳಿಲಿ ವಿಶೇಷ ಎಂತರ? – ಮಳೆಯೇ ಅಲ್ಲದೋ!
ಹಾಂಗೆ ಈ ಸರ್ತಿಯಾಣ ಪಟದ ಪುಟಲ್ಲಿ ಮಳೆಯೇ ದೊಡ್ಡ ಗವುಜಿ!
ಎಲ್ಲೊರುದೇ ಅವರವರ ಕೆಮರವ ಒಳ ಮಡಗಿತ್ತಿದ್ದವು, ಆದರುದೇ ಹೇಂಗಾರು ಒಪ್ಪುಸಿ ಅವರತ್ರೆ ಪಟ ತೆಗೆಶಿ ಬಪ್ಪಗ ರಜ ತಡವಾತು!
ಇದಾ, ಪಟಂಗೊ ನೋಡಿ. ಹೇಂಗಿದ್ದು ತಿಳಿಶಿ:

June 2010 (ವೃಷಭ - ಮಿಥುನ) - ಜೂನಿಲಿ ಸಿಕ್ಕಿದ ಮಳೆಗಾಲದ ಪಟಂಗೊ

ಸಂಕೊಲೆ: https://oppanna.com/gallery?album=June2010
ಸೂ: ನಿಂಗಳ ಊರಿನ ಪಟಂಗಳ ಇಲ್ಲಿ, ಬೈಲಿಲಿ ಹಾಕುಲಕ್ಕಾರೆ ಕೂಡ್ಳೇ ಒಪ್ಪಣ್ಣಂಗೆ (oppanna@oppanna.com) ಕಳುಸಿಕೊಡಿ.
ನಿಂಗಳ
~
ಶುದ್ದಿಕ್ಕಾರ°

11 thoughts on “ಜೂನ್ ತಿಂಗಳ ಮಳೆಗಾಲದ ಪಟಂಗೊ

  1. @ ವಾರಗಟ್ಳೆ ಮಳೆ, ಪಕ್ಕನೆ ಬೆಶಿಲು. ಮದ್ದುಬಿಡ್ಳೆ ಒಳ್ಳೆ ಸಮೆಯ..
    ಎಂತಾರು ಸಮಾಕೆ ಮದ್ದು ಬಿಡ್ಲೆ ಬಿಡ ಮಳೆ
    @ಪೆರ್ಲದಣ್ಣ ಪಟತೆಗವಗ ಕರೆಂಟೋತು..!
    ಕರೆಂಟು ಇಲ್ಲದ್ದೆ ತೆಗೆದ ಪಟವೋ?
    @ ಮುತ್ತಿಗೆಭಾವ ಕಣ್ಣುಪರೀಕ್ಷೆಗೆ ಕಾನಾವುಡಾಗುಟ್ರಲ್ಲಿಗೆ ಬಂದದು..
    ಡಾಗುಟ್ರ ನೋಡಿ ಮುತ್ತಿಗೆ ಬಾವ ಹದರಿದ್ದೋ
    @ಕಳಾಯಿ ಗೀತತ್ತೆಯ ಕೆಮರದ ಕವರಿನ ಪಟ..
    ಕೆಮರ ಎಲ್ಲಿ ಹೋತೊ! ತೋಡಿಲಿ ಬೆಳ್ಳ ಹೋತೊ ಕಾಣ್ತು…
    @ ಮರುವಾರಿ ಸಮ್ಮಾನ ಮಾಡ್ಳೆ!!
    ಮರುವಾರಿ ಸಮ್ಮಾನ ಒಳ್ಳೆತ ಅಕ್ಕೋ ಕಾಣ್ತು…

  2. ಪಟಂಗ ಲಾಯ್ಕ ಬೈಂದು.. ಇದಾರು ಬೈಲಿಲಿ ಹೊಸ ಜೆನಾ..? ಕುಮುಟದಕ್ಕ ಹೇಳಿರೆ…

  3. ಮಳೆಗಾಲದ ಪಟಂಗೊ ಚೆಂದಕೆ ಬಯಿಂದು. ಪುಟ್ಟು ಉಂಬೆ ನೋಡುವಾಗ ಮುದ್ದು ಮಾಡುವಷ್ಟು ಕೊಶಿ ಆತು.
    ಪಟಂಗೊಕ್ಕೆ ಹಾಕಿದ ಅಡಿ ಬರಹ ಸೂಪರ್….
    ಮಳೆಗಾಲದ ಪಟಂಗೊ ಬಂದಪ್ಪಗ ಮಳೆ ನಿಂದತ್ತನ್ನೆ 🙂

  4. ಜೂನ್ ತಿಂಗಳ ಮಳೆಗಾಲದ ಪಟದ ಪುಟ ಲಾಯಕ ಬಯಿಂದು ಶುದ್ದಿಕ್ಕಾರ° ಅಣ್ಣ… ಪಟಬರಹದೆ ಲಾಯಕ ಆಯಿದು…
    * ಡಾಕುಟ್ರಕ್ಕ° ಮಾತ್ರ ಅಲ್ಲ ಆರು ಎಲ್ಲೇ ಹೋದರು ಬೇರ್ತಿಗಳೂ ಅವರ ಪಡೆಗಳೂ ತಪ್ಪ mad
    * ಅಂಬಗ ಗೀತತ್ತೆಯ ಕೆಮರವೋ…??? ಅದಿನ್ನೂ ಸಿಕ್ಕಿದ್ದಿಲ್ಲೆಯೋ?
    *ಬೆಂಗಳೂರಿನ ದೊಡ್ದಾಸ್ಪತ್ರೆಯ ಎದುರಾಣ ಮಾರ್ಗದ ಪಟ ಫ್ರೇಮು ಹಾಕಿ ಮಡುಗುಲಕ್ಕು.. ಬೆಂಗ್ಳೂರಿಲಿ ಹೀಂಗೆ ಮಾರ್ಗ ಖಾಲಿ ಆಗಿ ಕಾಂಬಲೆ ಸಿಕ್ಕ ಇದಾ….
    *ಮಾಷ್ಟ್ರುಮಾವಂಗೆ ಸಣ್ಣ ಸೊಸೆ ಬಪ್ಪ ಗೌಜಿ ಅಲ್ಲದಾ? ಹಾಂಗೆ ಕೊಶಿಲಿ ಒಂದು ಎಲೆಅಡಕ್ಕೆ ಬಾಯಿಗೆ ಹಾಕಿದ್ದಾಯಿಕ್ಕು…
    *ಬೀಸ್ರೋಡು ಮಾಣಿಗೆ ಮೂಗು ತೋರುಸಿದ್ದಾ…. ಅಲ್ಲಾ…. ಅವನ ಹತ್ತರೆ ಇದ್ದೋರು ಅಪರೂಪಲ್ಲಿ ಹಾಕಿದ ಉಂಗುರಲ್ಲಿ ಗುರುಟುವದರ ನೋಡಿ ನೆಗೆ ಬಂದದಾ? 😉
    ಚೂರಿಬೈಲು ಮಾಣಿಗೆ ನೋಡಿ ನೋಡಿ ಸಾಕಾತಡಾ ಹೀಂಗುದೆ ಉಂಗುರ ಹಾಕಿದ್ದೆ ಹೇಳಿ ಆರಾರು ಗೊಂತುಪಡುಸುತ್ತವಾ ಹೇಳಿ …
    * ದೊಡ್ಡಜ್ಜನ ಮನೆಯವು ಒಳ್ಳೆ ಜಾಗ್ರತೆಯವ್ವೋ ಹೇಳಿ ತುಂಬಾ ಮುಂದಾಲೋಚನೆ ಇದ್ದಪ್ಪಾ… ಲಾಯ್ಕಲ್ಲಿ ಸಮ್ಮಾನ ಮಾಡ್ತವೋ ಎಂತೋ?
    *ಚೆನ್ನಬೆಟ್ಟಣ್ಣನ್ಗೆ ಗುಲಾಬಿ ಕೊಡ್ಲೆ ಮರದ್ದೋ ತೋರ್ತು….;-) ದಿಬ್ಬಣ ಹೆರಡುವ ಗೌಜಿಗೆ ಹೂಗು ಅಲ್ಲಿಯೇ ಬಾಕಿ ಅಡ್ಡ…
    * ಟ್ರಯಲ್ ಫ್ರೇಮು ಮಡಿಗಿ ಅಪ್ಪಗಳೇ ಮುತ್ತಿಗೆ ಭಾವಂಗೆ ಹೆದರಿಕೆ ಆತೋ?

    1. ಶ್ರೀ ಅಕ್ಕೋ ನಿಂಗ ಹೇಳಿದ್ದು ಸರಿ ಇದ್ದು.. ಮಾಷ್ಟ್ರು ಮಾವ ಎರಡೆರಡು ಎಲೆ ಹಾಕಿಯೊಂಡ ಹಾಂಗಿದ್ದು ಕೊಶಿಲಿ..

  5. ಎಲ್ಲಾ ಪಟಂಗಳೂ ಲಾಯ್ಪ ಇದ್ದು.. ಮನೆಯೊಳಂದ ನಿಂದ ತೆಗೆದ ಮಳೆಯ ಪಟ ಚೆಂದ ಇದ್ದು.. ಸೀತಾ ನದಿಯಂತು.. ಅದ್ಭುತ.. ಅದೆಷ್ಟು ಪ್ರಶಾಂತವಾಗಿದ್ದು…ಅಲ್ಲಿಯ ನೀರು…

    1. ಸೀತಾ ನದಿ ಬೆಳಿ ಬೆಳಿ ಇದ್ದು ನೀರ್ಕಜೆ ಅಪ್ಪಚ್ಚಿ ಯ ಲೇಪುತೋಪಿಲ್ಲಿ…. ಅದೇಂಗೆ?

      1. ಅಪ್ಪಚ್ಚಿ ಪಟದಂಗಡಿಲಿ[photoshop] ಬದಲಾಯಿಸಿಕ್ಕು…ನಿಂಗೊಗೆ ಗೊಂತಾಗದ್ದ ಹಾಂಗೆ.. ಪೆರ್ಲದಣ್ಣಂಗೆ ತೋರ್ಸಿ ಅವ° ಎಂತ ಹೇಳಿ ಹೇಳುಗು, ಗಣಕ ಡಾಗುಟ್ರು ಅಲ್ಲದೋ ಅವ°

        1. ಎಂತದೋ ಸುಮಾರು ಪಟಂಗೋ ಬೆಳಿ ಬೆಳಿ ಇದ್ದಪ್ಪಾ……… ಎನ್ನ ಡಾಕುಟ್ರು ಎಂತ ಹೇಳ್ತವು ಹೇಳಿ ನೋಡಿಗೊಳ್ತೆ ಮದಲು……… ಹಿತ್ತಲ ಗೆಡು ಮದ್ದಲ್ಲದ ಕೇಳಿರೆ ಮತ್ತೆ ಕಟ್ಟಕ್ಕು……….!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×